ಸದಸ್ಯರ ಗಮನಕ್ಕೆ: ತಾಂತ್ರಿಕ ತೊಂದರೆಗಳ ಬಗ್ಗೆ ಮಾಹಿತಿ

To prevent automated spam submissions leave this field empty.

ಟ್ರಾಫಿಕ್ ಹೆಚ್ಚಿರುವ ಕಾರಣ 'ಸಂಪದ'ದಲ್ಲಿ ಶನಿವಾರ ಸಾಯಂಕಾಲದಿಂದ ಕೆಲವು ಅಷ್ಟೇನೂ ಗಂಭೀರವಲ್ಲದ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟಗಳನ್ನು ಲೋಡ್ ಮಾಡುವಾಗ ತೊಂದರೆಗಳು ಕಂಡುಬಂದಲ್ಲಿ ದಯವಿಟ್ಟು moderation@sampada.net ವಿಳಾಸಕ್ಕೆ ಒಂದು ಇ-ಮೇಯ್ಲ್ ಕಳುಹಿಸಿ. ನಿಮಗೆ ಕಾಣಿಸುತ್ತಿರುವ ಎರರ್ ಮೆಸೇಜ್ ಕೂಡ ಸಾಧ್ಯವಾದಲ್ಲಿ ಕಳುಹಿಸಿಕೊಡಿ.
ಈ ತಾಂತ್ರಿಕ ತೊಂದರೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿವೆ ಎನ್ನುವುದನ್ನು ಬಿಟ್ಟರೆ ಮತ್ತೇನೂ ಭಯವಿಲ್ಲ. ಸಂಪದದ ಸಂಪೂರ್ಣ data ಬ್ಯಾಕಪ್ ಮೂಲಕ ಸುರಕ್ಷಿತವಾಗಿದೆ. ಆದರೆ ಇಂದು ಭಾನುವಾರದಂದು ಕೂಡ ಮತ್ತೆ ಟ್ರಾಫಿಕ್ ಹೆಚ್ಚಾದಲ್ಲಿ ಈ ರೀತಿಯ ತೊಂದರೆಗಳು ಮತ್ತೆ ಕಾಣಿಸಿಕೊಳ್ಳಬಹುದು. ಹಾಗೆ ಆದಲ್ಲಿ ಅದನ್ನು ಸರಿಪಡಿಸಲಾಗುವುದು. 'ಸಂಪದ' ಬಳಸುವಲ್ಲಿ ಓದುಗರಿಗೆ ಇದರಿಂದಾಗುತ್ತಿರುವ ತೊಂದರೆಗಾಗಿ ಕ್ಷಮೆಯಿರಲಿ.

ಲೇಖನ ವರ್ಗ (Category):