ಸರ್ವಶಕ್ತ

To prevent automated spam submissions leave this field empty.

ರವಿಯು ಏನೇ
ಉದಿಸುವೇನೆ
ಕೆಂಪುಕಿರಣ ನಿನದೇನೇ?
ಅಂಧಕಾರದ ಜನಕ
ನೀನು ಬೆಳಕು ನೀಡಿ
ಜಗಕೆ ಹೆಗಲು ನೀಡಿದೆ
ಎಲೆಯ ಮೇಲೆ ಮುತ್ತಿನಂತ ಇಬ್ಬನಿ
ಕೆಂಪುಕಿರಣ ಬೆಳ್ಳಿ ಬೆಳಕಾಯಿತೇ?
ನಿನ್ನ ಮನೆಯ
ಬೆಂಕಿ ಬೆಳಕು
ನಮಗೆ ಇಲ್ಲಿ ಹಗಲು ಸುಗ್ಗಿಯಾಯಿತು
ಯಾರ ಅಣತಿ ಇಲ್ಲದೆ
ಜಗಕೆ ಪ್ರಣತಿ ಹಚ್ಚುವೆ
ಜಗದ ಜನರು ನೋಡಿ ಕಲಿಯಬಾರದೇನು?
ನಾನು ಎಂಬುದು ಅಂಧಕಾರ
ನೀನು ಎಂಬುದು ಮಮಕಾರ
ವಿಶ್ವವೇ ವಂದಿಸಿ ಪಟಿಸುವುದು ಜಯಕಾರ
ವಿಶ್ವದ ಸಹಾಯವಾಣಿ
ಪ್ರಗತಿಗೆ ನಿನ್ನ ಏಣಿ
ನಾನು ನೀನು ಎನ್ನದೆ ತಾರತಮ್ಯವೆಣಿಸೆನೀ
ಜಗವ ನಿನ್ನ ಸೃಷ್ಟಿ
ನಮ್ಮ ಮೇಲೆ ಇರಲಿ ದೃಷ್ಟಿ
ಮೌನಗಾನ ನಿನ್ನ ತಾಣವೇನೋ?
ನೀ ಮುನಿದರೊಮ್ಮೆ
ಮೋಡಮುಸುಕು
ವರ್ಷಧಾರೆ ಹರ್ಷವಾಗಿ ಸುರಿವುದು!
ನೀ ನಕ್ಕರೊಮ್ಮೆ
ಕೆಂಪು ಕಿರಣ ಬೆಳ್ಳಿ ಕಿರಣ
ಜಗಕೆ ಜೀವದ ಬೆಳಕು ಹೂರಣ

ಲೇಖನ ವರ್ಗ (Category):