ಕೃಷ್ಣಯ್ಯ ಶೆಟ್ಟರ ಕಥೆ!

To prevent automated spam submissions leave this field empty.

ರಾಜ್ಯ ಸರ್ಕಾರದ ಮುಜರಾಯಿ ಖಾತೆ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟರಿಂದ ರಾಜೀನಾಮೆ ಪಡೆದು ’ಆಪರೇಷನ್ ಕಮಲಾಗತ’ ಸೋಮಣ್ಣನಿಗೆ ಸಚಿವ ಸಾನ ನೀಡಿ ಕೃಷ್ಣಯ್ಯ ಶೆಟ್ಟರನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬೆಳವಣಿಗೆಯಲ್ಲಿ ನಾವು ಗಮನಿಸಬಹುದಾದ ಮೋಜಿನ ಅಂಶಗಳು ಇಂತಿವೆ:
* ಕೃಷ್ಣಯ್ಯ ಶೆಟ್ಟರು ದೇವಸ್ಥಾನದಿಂದ ಸೀದಾ ಒಳಚರಂಡಿಗೆ!
* ಹಿಂದೊಮ್ಮೆ ಗಂಗಾಜಲ ಸರಬರಾಜು ಮಾಡಿದ್ದ ಶೆಟ್ಟರಿಂದ ಇನ್ನುಮುಂದೆ ಬರಿ ನೀರು ಸರಬರಾಜು.
* ’ಆಪರೇಷನ್ ಕಮಲ’ದಲ್ಲಿ ಕಮಲ ಒಲಿದದ್ದು ಸೋಮಣ್ಣನಿಗೆ; ಆಪರೇಷನ್ ಆಗಿದ್ದು ಕೃಷ್ಣಯ್ಯ ಶೆಟ್ಟರಿಗೆ!
* ಕೃಷ್ಣಯ್ಯ ಶೆಟ್ಟರ ಮಂತ್ರಿಪದವಿ ಕೃಷ್ಣಾರ್ಪಣ!
* ಶೆಟ್ಟರು ಹಂಚಿದ್ದು ಲಡ್ಡು; ಅವರಿಗೆ ಸಿಕ್ಕಿದ್ದು ಚಿಪ್ಪು!
* ಶೆಟ್ಟರದು ರಾಜೀನಾಮೆ ಅಲ್ಲ, ರಾಜಿ ಮತ್ತು ನಾಮ!!!
* ಸಿಎಂ ಹೆಸರಲ್ಲಿ ಪೂಜೆ ಮಾಡಿಸಿದರೂ ಶೆಟ್ಟರಿಗೆ ಸಿಎಮ್ಮಿಂದ ಪೂಜೆ ತಪ್ಪಲಿಲ್ಲ!
* ’ಭೂಕೈಲಾಸ’ ಚಿತ್ರದ ಹಾಡು: ’ರಾಮನ ಅವತಾರಾ, ರಘುಕುಲ ಸೋಮನ ಅವತಾರ’.
’ಬೂಸಿಯ ಕೈವಾಡ’ (ವಿ)ಚಿತ್ರದ ಹಾಡು: ’ಸೋಮನ ಅವತಾರಾ, ವೈಶ್ಯಕುಲ ಕೃಷ್ಣಗೆ ಗ್ರಹಚಾರ’!
* ಉಡುಪಿಯಲ್ಲಿ ’ಕೃಷ್ಣಪೂಜೆ ವಿವಾದ’ ಆಯಿತು; ದೆಹಲಿಯಲ್ಲಿ ಎಸ್ಸೆಂ ಕೃಷ್ಣಗೆ ಅನಿರೀಕ್ಷಿತವಾಗಿ ಮಂತ್ರಿಪದವಿ ದೊರಕಿತು; ಬೆಂಗಳೂರಲ್ಲಿ ಕೃಷ್ಣಯ್ಯ ಶೆಟ್ಟರಿಗೆ ಮಂತ್ರಿಪದವಿ ಕೈತಪ್ಪಿಹೋಯಿತು.
ಎಲ್ಲ ಕೃಷ್ಣಲೀಲೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸೂಪರ್ ಸಾರ್ ನೀವು!
ನಿಮ್ ಬರಹಗಳನ್ನು ಓದ್ತಾ ಓದ್ತಾ, ನಿಮ್ ಬೀಸಣಿಗೆ ಆಗೋಣ ಅಂತ ಇದ್ದೆ.
ನಿಮ್ ಚಿತ್ರ ನೋಡಿದ್ರೆ ತುಂಬಾನೇ ಸಣ್ಣಗಿದ್ದೀರ...ಬೀಸಣಿಗೆ ಗಾಳಿಗೆ ಹಾರಿ ಹೋಗಿ ಬಿಟ್ರೆ, ನಮ್ಮನ್ನ ನಗಿಸೋವ್ರು ಯಾರು :)