ವಿರಹ ಗೀತೆ

To prevent automated spam submissions leave this field empty.

ನಂಬಿದ್ದೆ ನಾನೊಂದು ಹುಡುಗೀನ ಅಕ್ಕ
ಇರುತ್ತಿದ್ಲು ಯಾವಾಗ್ಲು ನಿನ್ನಯ ಪಕ್ಕ
ಏನೆಂದು ಹೇಳಾಲಿ ನನ್ನಯ ದುಃಖ
ಏನೂ ಹೇಳದೆ ನನ್ನ ನೋವಲ್ಲಿ ನೂಕಿದಳಕ್ಕ ||ಪ||

ಕಪ್ ಗಿದ್ರು ಕೊಟ್ಟಿದ್ದೆ ನನ್ನ್ ಹೃದಯಾ ಅಕ್ಕ
ತುಪ್ಪ ಸುರ್ ದಂಗ್ ಮಾತಾಡ್ ತಿದ್ಲು ಎಲ್ಲರತ್ರ ಅಕ್ಕ
"ಚಿಪ್ಪಕೈಗೆ" ತೆಂಗಿನ ಚಿಪ್ಪಕೈಗೆ ಕೊಟ್ಟು ಬಿಟ್ಟಳಕ್ಕ

ಮೌನದಲ್ಲೇ ಮನವ ಗೆದ್ದಿದ್ದಳಕ್ಕ
ಮನಬಿಚ್ಚಿ ಮಾತಾಡ್ ದಾಗ
ಮದ್ವೆ ಆಗಲಾರೆ,ಮಕ್ಕಳಹೆರಲಾರೆ ಎಂದು ಹೇಳಿದಳಕ್ಕ

ವಾರ ನಾನು ಕಾಣದಿದ್ರೆ ದೂರವಾಗಿ ಬಿಟ್ಟೆ ಎಂದು
ಶೂರನೀನು ಅಲ್ಲವೆಂದು ಬಾರವಾಗಿ ಹೋದೆಯೆಂದು
ಬಾರಿ ಬಾರಿ ಹೇಳಿನಂಗೆ ಗೋಳನೀಡಿ ಹೋದಳಕ್ಕ

ಸಿನಿಮಾಕ್ ಹೊಗಾನ್ ಬಾ ಎಂದಾಗ ಸುಮ್ಮನಿರಿ ಎಂದುಬಿಟ್ಟೆ
ಲಾಡ್ಜಿಗ್ ಹೊಗಾನ್ ಎಂದಾಗ ಲೈಸೆನ್ಸ್ ಇಲ್ಲ ಎಂದುಬಿಟ್ಟೆ
ಮುತ್ತು ಕೊಡು ಎಂದಾಗ ಮದ್ವೆ ಆದ್ಮೇಲೆ ಎಂದು ಬಿಟ್ಟೆ

ಏನು ತಪ್ಪ ಮಾಡದ ನನ್ನ ನೋವಲ್ಲಿ ನೂಕಿಬಿಟ್ಟಳಕ್ಕ
ಏನೊಂದು ಹೇಳದೆ ಎಲ್ಲಿಗೋದ್ಲೊ ಗೊತ್ತಿಲ್ಲವಕ್ಕ
ನೋವುತುಂಬಿ ಅಳುತಿರಲು ನೋಡಿಕೊಳ್ಳಲಾರಿಲ್ಲ ಅಕ್ಕ.

- ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಲೇಖನ ವರ್ಗ (Category):