ಮೂರು ಹನಿ ಕವನಗಳು

To prevent automated spam submissions leave this field empty.

*ಪ್ರಾರ್ಥನೆ
ದೇವರೇ
ಜನ್ಮಾಂತರ ಎಂಬುದಿದ್ದರೆ
ನನ್ನ
ಪ್ರತಿಜನ್ಮದಲ್ಲೂ
ಭರತ ಭೂಮಿಯಲ್ಲಿ
ಜನಿಸುವಂತೆ ಮಾಡು
ಭಾರತಾಂಬೆಗಾವ ಬಾದೆ ತರದಂತೆ
ನಾ ಕಾಪಾಡುವಂತೆ ನನಗೆ
ಶಕ್ತಿನೀಡು
ನನ್ನಂತರಂಗದಾಸೆ
ನೀ ಮನದಲ್ಲಿಡು
ನನಗಿದೊಂದು ವರವ ನೀಡು.
* ಮನದಾಸೆ
ಹೃದಯ ಕಲ್ಲಾಗದಿರಲಿ
ಮನಸು ಮುಳ್ಳಾಗದಿರಲಿ
ಪ್ರೀತಿ ಅತಿಯಾಗದಿರಲಿ
ಮಾತು ಮಿತವಾಗಿರಲಿ
ಸ್ನೇಹ ಚಿರವಾಗಿರಲಿ........

*ಅವಳು ನನಗೆ
ತೆಗೆಯಲಾರದ
ರೊಕ್ಕ........
ನಾನು ಅವಳಿಗೆ
ಬಿಡಿಸಲಾಗದ
ಲೆಕ್ಕ.........