ಬರುವದೊಂದು ದಿನ

To prevent automated spam submissions leave this field empty.

ಮುಗಿಲ ಕಡೆ ಮುಖಮಾಡಿ
ಮಳೆ ಮೋಡಗಳ ಎಲ್ಲೆಡೆ ನೋಡಿ
ಇಳೆಗೆ ಇಳಿಯದ ವರುಣನ ಬೇಡಿ

ಮೂಲೆಯಲ್ಲಿದ್ದ ನೇಗಿಲ ಎತ್ತಿ
ಮೂಲೆ ಮೂಲೆಯನ್ನು ಉತ್ತಿ
ಬಿಡದೆ ಕಾಳನು ಭೂಮಿಗೆ ಬಿತ್ತಿ

ಸುರಿವ ರಬಸಕ್ಕೆ ಮುರಿದ ಮಡುವ ಕಟ್ಟು
ಹರಿದ ಹೊಲದಲಿ ಚಿಗುರಿದ ಪೈರ ಇಟ್ಟು
ಬೆಳೆದ ಕಳೆಯ,ಕೊಳೆಯ ಕಿತ್ತಿಟ್ಟು

ಎರಚಿ ಗೊಬ್ಬರ ಪರಚಿ ಕುಂಟೆಯ
ಎತ್ತಿ ಎಂಟೆಯ ಸುತ್ತಿ ಕುಂಟೆಯ
ಕುಯ್ದು ಪೈರನು ಸುತ್ತಿ ಹೊರೆಯ

ಬಡಿದು ಹುಲ್ಲನು ಹಿಡಿದು ತೆನೆಯನು
ಕೊಡವಿ ಚೀಲವ ಸುರಿದು (ದವಸ)ಕಾಳನು
ದವಸ ತರುವ ದಿವಸ ಬರುವದೊಂದು ದಿನ.

 

ಲೇಖನ ವರ್ಗ (Category):