ಒಬಾಮ ನೊಣ ಹೊಡೆದ

To prevent automated spam submissions leave this field empty.

’ಶತ್ರುಸಂಹಾರನಿಪುಣ’ ಅಮೆರಿಕದ ಅಧ್ಯಕ್ಷರು ತಮ್ಮ ಶ್ವೇತಭವನದೊಳಗೇ ಶತ್ರುಸಂಹಾರಕಾರ್ಯ ಕೈಗೊಂಡಿದ್ದಾರೆ! ತಮ್ಮ ಕೈಮೇಲೆ ಕೂತ ಬಡಪಾಯಿ ನೊಣವೊಂದನ್ನು ಹೊಡೆದುರುಳಿಸಿದ್ದಾರೆ!

ಒಬಾಮ ನೊಣ ಹೊಡೆದರೂ ಅದು ಸುದ್ದಿ!
ಅಮೆರಿಕದ ಗತ್ತೇ ಅಂಥಾದ್ದು, ಬುದ್ಧೀ!
ಆರ್ಥಿಕ ಹಿಂಜರಿತದಿಂದ ಅಲ್ಲೀಗ
ನೊಣಹೊಡೆಯುವರ ಸಂಖ್ಯೆ ಹೆಚ್ಚುತಿದೆ ಬೇಗ!

(ದೇಶಗಳನ್ನೇ ನುಂಗಿ ನೊಣೆಯುವವರಿಗೆ
ನೊಣ ಹೊಡೆಯುವುದು ಯಾವ ಮಹಾ ಕೆಲಸ
ಅಂತೀರಾ?)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಬಾಮಾನೇ
ಹೊಡೆದನಂತೆ
ನೊಣ
ಜೊತೆಗೇ
ಕೊಟ್ಟನಂತೆ
ಎಚ್ಚರಿಕೆ
ಸುಮ್ಮನೇ
ಬೀಳಿಸ್ತೀನಿ
ಇನ್ನಷ್ಟು ಹೆಣ
ಕೊಟ್ಬುಡೀ ನಿಮ್ಮ ಹಣ.