ಮಾನವ ನಿರ್ಮಿತ ಅದ್ಭುತಗಳು - ೧

To prevent automated spam submissions leave this field empty.

ಮಾನವ ನಿರ್ಮಿತ ಅದ್ಭುತಗಳು

ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು ಪ್ರತಿಕ್ರಿಯೆ ಸೂಚಿಸಿದರಂತೆ. ಆದರೆ ಇಂದು ಸೂಯೆಜ್ ಕಾಲುವೆಯಲ್ಲಿ ಹಡಗುಗಳು ಸಂಚರಿಸುತ್ತಿವೆ ಎಂದರೆ ಮಾನವ ತನ್ನ ಶ್ರಮದಿಂದ ಕಷ್ಟಸಾಧ್ಯವೆನಿಸುವುದನ್ನೂ ಸಾಧಿಸಬಹುದು ಎಂದು ಸಾಬೀತು ಪಡಿಸಿದ್ದಾನೆ ಎಂದಾಗುತ್ತದೆ ಅಲ್ಲವೇ?

ಹಿಂದಿನದಕ್ಕಿಂತ  ದೊಡ್ಡದಾದ ಮತ್ತೊಂದನ್ನು ತಮ್ಮ ಕಾಲದಲ್ಲಿ ನಿರ್ಮಿಸಬೇಕು ಎಂಬ ಮಹತ್ವಾಕಾಂಕ್ಷೆ ಪ್ರಾಯಶಃ ಎಲ್ಲ ಕಾಲದ ಜನರಲ್ಲೂ ಇತ್ತೆಂದು ಹೇಳಬಹುದು. ಹಲವು ಸಾವಿರ ವರ್ಷಗಳ ನಂತರವೂ ನಮ್ಮ ಮಧ್ಯೆ ಉಳಿದಿರುವ, ನಮ್ಮ ಕುತೂಹಲಕ್ಕೂ,, ಅಚ್ಚರಿಗೂ ಕಾರಣವಾಗಿರುವ ಹಲವು ಅದ್ಭುತ ರಚನೆಗಳು ಇದಕ್ಕೆ ಹೇಳಿ ಮಾಡಿಸಿದಂತಿವೆ.

ಇಂದಿನಷ್ಟು ಸೌಲಭ್ಯ, ಸಮಾಚಾರ ವಿನಿಮಯ ಹಾಗೂ ಅಧುನಿಕ ಉಪಕರಣಗಳಿಲ್ಲದಿದ್ದ ಕಾಲದಲ್ಲಿ, ಆಗ ಬಳಕೆಯಲ್ಲಿದ್ದ ಸಾಧಾರಣ ಉಪಕರಣಗಳ ಸಹಾಯದಿಂದಲೇ ಭವ್ಯ ರಚನೆಗಳನ್ನು ನಿರ್ಮಿಸಿದ ಅಂದಿನ ಜನರ ಬಗ್ಗೆ ನಮಗೆ ಮೆಚ್ಚುಗೆಯಾಗುತ್ತದೆ.

ಪಿರಮಿಡ್ ಅಂತಹ ರಚನೆಗಳಲ್ಲಾಗಲಿ, ಇತ್ತೀಚಿನ ಸೂಯೆಜ್ ಮತ್ತು ಪನಾಮ್ ಕಾಲುವೆಗಳಲ್ಲಾಗಿರಲಿ, ಇಂಗ್ಲೀಷ್ ಕಡಲ್ಗಾಲುವೆಯೊಳಗೆ ನಿರ್ಮಿಸಿದ ಚಾನೆಲ್ ಟನಲ್ಲುಗಳಲ್ಲಾಗಿರಲಿ, ಭವ್ಯ ಭವನಗಳಲ್ಲಾಗಿರಲಿ ಮನುಷ್ಯ ತನ್ನ ಶ್ರಮದ ಜೊತೆಗೆ  ವೈಜ್ಞಾನಿಕ ಶಿಸ್ತನ್ನೂ ಅಳವಡಿಸಿಕೊಂಡಿದ್ದಾನೆ. ಇಂತಹ ಅದ್ಭುತಗಳನ್ನು ನಿರ್ಮಿಸಲು ಅದು ತಳಹದಿಯಾಗಿದೆ.

ಪುರಾತನ ಜನರಿಗೆ ಇಂದಿನವರಿಗಿರುವ ವೈಜ್ಞಾನಿಕ  ಪರಿಕಲ್ಪನೆ  ಇಲ್ಲದಿರಬಹುದು. ಆದರೂ ಅವರು ತಮ್ಮ ಅನುಭವಗಳಿಂದ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಹಿಂದಿನ ಅದ್ಭುತಗಳಿಂದ ಇಂದಿನ ಗಗನ ಚುಂಬಿಗಳವರೆಗೆ ಮಾನವ ನಿರ್ಮಿತ ಅದ್ಭುತ ರಚನೆಗಳ ನಿರ್ಮಾಣ ಮುಂದುವರೆಯುತ್ತಲೇ ಇದೆ. 

(ಸಶೇಷ)

ಲೇಖನ ವರ್ಗ (Category):