ಕ್ರಾಪಿಂಗ್ - ಒಂದು ಉದಾಹರಣೆ

To prevent automated spam submissions leave this field empty.

ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂದು ಉದಾಹರಣೆಯ ಮೂಲಕ ನೋಡೋಣ.


ಈ ಮೇಲಿನ ಚಿತ್ರ ಹಾಲು ಕುಡಿಯುತ್ತಿರುವ ಮರಿಯದ್ದು. ಇಲ್ಲಿ ಫ್ರೇಮಿಂಗಿಗಾಗಿ ಬಿದಿರನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದರೂ, ತಾಯಿಯ ಎಡ ಕಣ್ಣಿನಲ್ಲಿ ಇಲ್ಲವಾದ ಕ್ಯಾಚ್ ಲೈಟ್, ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಚಿತ್ರದ ಅಂದ ಕೆಡಿಸಿದೆ.


ತಾಯಿಯ ಮುಖದಲ್ಲಿನ ಕೊರತೆಯನ್ನು ಹೋಗಲಾಡಿಸಲು, ಈ ಮೇಲಿನಂತೆ ಇನ್ನೊಂದು ರೀತಿಯ ಕ್ರಾಪ್ ಮಾಡಿ ನೋಡಿದಾಗ, ತಾಯಿಯ ರುಂಡ ಇಲ್ಲದಿರುವಿಕೆ ನೊಡುಗರಿಗೆ ಸರಿಕಾಣದಿರಬಹುದು. ಅಲ್ಲದೇ ಇಲ್ಲಿ ಬಿದಿರಿನ ಫ್ರೇಮಿಂಗ್ ಇದ್ದರೂ ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಇನ್ನೂ ಕಾಣಿಸುತ್ತಿದೆ.


ಈ ಮೇಲಿನ ಚಿತ್ರವನ್ನು ಮತ್ತೂ ಕ್ರಾಪ್ ಮಾಡಿ ಈ ಮೇಲಿನಂತೆ ಪ್ರದರ್ಶಿಸಿದಾಗ, ಹಾಲು ಕುಡಿಯುತ್ತಿರುವ ಮಗುವಿನ ನೋಟ ನೋಡುಗರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆಯಲ್ಲದೇ ಮೇಲೆ ತಿಳಿಸಿದ ಕೊರತೆಗಳನ್ನು ಹೆಚ್ಚಿನ ಮಟ್ಟಿಗೆ ಮೀರಿಸುವಲ್ಲಿ ಸಹಾಯಕವಾಗಿದೆ.

ಕೊನೇಯ ಚಿತ್ರ ದೊಡ್ಡ ಪ್ರಿಂಟ್ ತೆಗೆಯುವಲ್ಲಿ ನನಗೆ ಸಹಾಯಕವಾಗದಿದ್ದರೂ ಮುಂದೆ ಇದೇ ರೀತಿಯ ಚಿತ್ರ ತೆಗೆಯಲು ಅವಕಾಶ ಸಿಕ್ಕಿದರೆ, ನಾನು ಈಗ ಕ್ರಾಪಿಂಗಿನಲ್ಲಿ ಮಾಡಿದ ಪ್ರಯೋಗ ನೆರವಿಗೆ ಬರುತ್ತದೆ. ಒಂದು ಒಳ್ಳೆಯ ಚಿತ್ರ ಸಾವಿರ ಪದ ಹೇಳಿದರೆ ಒಂದು ಕೆಟ್ಟ ಚಿತ್ರ ಕನಿಷ್ಟ ಒಂದು ಪಾಠವನ್ನಾದರೂ ಕಲಿಸುತ್ತದೆ.

ಸಾರಾಂಶ:
ಚಿತ್ರದ ಚೌಕಟ್ಟನ್ನು ತುಂಬಿಸುವುದರ (filling the frame) ಮೂಲಕ, ನೀವು ಚಿತ್ರದ ಮೂಲಕ ವ್ಯಕ್ತಪಡಿಸ ಹೊರಟ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಾಲ,
ಚಿತ್ರಗಳ ಸಹಿತ ಹೇಳಿಕೊಟ್ಟ ಕ್ರಾಪಿಂಗ್ ಪಾಠ ತುಂಬಾ ಉಪಯುಕ್ತವಾಗಿದೆ.
ಧನ್ಯವಾದಗಳು.

ಪ್ರಯೋಗ ಮಾಡಿ ಚಿತ್ರಗಳನ್ನು ಅಪ್ಲೋಡ್ ಮಾಡುವೆ.

-ಅನಿಲ್

ಪಾಲರೇ, ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ನನಗೆ ಡಿಜಿಟಲ್ ಕ್ಯಾಮೆರಾದಲ್ಲಿ ತೀರ ಹತ್ತಿರದ ವಸ್ತುಗಳನ್ನು ಹೇಗೆ ಫೋಕಸ್ ಮಾಡಬೇಕೆ೦ದು ಹೇಳುವಿರಾ ?
http://www.sampada.net/image/21653 ಈ ಚಿತ್ರದಲ್ಲಿ ಗೊದ್ದವನ್ನು ಫೋಕಸ್ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವೇ ಆಗಲಿಲ್ಲ.

-amg

amg,
ನಿಮ್ಮ ಆ ಚಿತ್ರದಲ್ಲಿ ಬ್ಯಾಕ್ ಗ್ರೌಂಡ್ ಫೋಕಸ್ ಆಗಿದೆ. ತೀರ ಹತ್ತಿರದಿಂದ ವಿಷಯವನ್ನು ಫೋಕಸ್ ಮಾಡುವುದು ಕ್ಯಾಮರಾದಿಂದ ಕ್ಯಾಮರಾಕ್ಕೆ ವ್ಯತ್ಯಾಸ ಹೊಂದುತ್ತದೆ.

ಉದಾಹರಣೆಗೆ ನನ್ನ ಕ್ಯಾಮರಾದ ಮಿನಿಮಮ್ ಫೋಕಲ್ ಡಿಸ್ಟೆನ್ಸ್ ೧೬ ಸೆ.ಮೀ, ಇದೆ ಎಂದಿಟ್ಟುಕೊಳ್ಳೋಣ. ನಾನು ೧೦ ಸೆ.ಮೀ. ದೂರದಿಂದ ಅದನ್ನು ಫೋಕಸ್ ಮಾಡೋಕೆ ಬರೋದಿಲ್ಲ. ಅದಕ್ಕೆ ೧೫ ಸೆ.ಮೀ. ದೂರದಿಂದನೇ ಚಿತ್ರ ತೆಗೆದು ನಂತರ ಕ್ರಾಪ್ ಮಾಡಬಹುದು. ಇನ್ನೊಂದು ವಿಷಯ ೧೫ ಸೆ.ಮೀ ಇಟ್ಟು ಜೂಮ್ ಮಾಡಿ ತೆಗೆದರೂ ಫೋಕಸ್ ಮಾಡೋಕೆ ಬರೋದಿಲ್ಲ. ೨ ಎಕ್ಸ್ ಜೂಮ್ ಮಾಡಿದರೆ ೨೦ ಸೆ.ಮೀ ದೂರದಿಂದ ತೆಗೆಯಬೇಕಾಗಿ ಬರಬಹುದು.

ಹಾಗಂತ ಅಳತೆ ಮಾಡ್ತಾ ಕೂರ್ಬೇಕು ಅಂತಲ್ಲ.. ಫೋಕಸ್ ಆಗೋವರೆಗೂ (ಕ್ಯಾಮರಾ ಬಟನ್ ಅರ್ಧ ಅಮುಕಿದರೆ ಫೋಕಸ್ ಆಗಿದೆಯೋ ಇಲ್ಲವೋ ತಿಳಿಯುತ್ತೆ) ನಮ್ಮ ಪೊಸಿಶನ್ ಅಡ್ಜಸ್ಟ್ ಮಾಡ್ಕೊಬೇಕು. ಆರಂಭದಲ್ಲಿ ಕ್ಯಾಮರಾದ ಮ್ಯಾಕ್ರೋ ಮೋಡ್ ಬಳಸಿ.

ಉತ್ತಮವಾದ ಸಲಹೆ ನೀಡಿದ್ದೀರಿ ಪಾಲ್, ಧನ್ಯವಾದ. ಕ್ಯಾಮೆರಾದ ಮಾಹಿತಿ ಪುಸ್ತಕ ತೆಗೆದು ನೋಡ್ತೀನಿ ಮಿನಿಮಮ್ ಫೋಕಲ್ ಡಿಸ್ಟೆನ್ಸ್ ಎಷ್ಟಿದೆ ಅ೦ತ.

ಪಾಲಚಂದ್ರರವರೆ, ನಿಮ್ಮ ಕ್ರಾಪಿಂಗ್ ಪಾಠಕ್ಕೆ ತುಂಬಾ ವಂದನೆಗಳು, ನನ್ನ ’ಸೈಬರ್ ಶಾಟ್’ ಮೊಬೈಲ್ ಕ್ಯಾಮರಾದಿಂದ ನೂರಾರು ಚಿತ್ರಗಳನ್ನು ತೆಗೆದಿದ್ದೇನೆ, ತುಂಬಾ ಚೆನ್ನಾಗಿ ಬಂದಿವೆ ಕೂಡಾ, ಆದರೆ ಈ ಕ್ರಾಪಿಂಗ್ ಅಸ್ತ್ರ ಪ್ರಯೋಗಿಸಿದ ಮೇಲೆ ಅವುಗಳ ಅಂದ ಇನ್ನೂ ಹೆಚ್ಚಾಗಿದೆ. ಅಂದ ಹಾಗೆ, ಹವ್ಯಾಸಿ ಛಾಯಾ ಚಿತ್ರಗಾರನಾಗಬೇಕೆಂದಿದ್ದೇನೆ, ಅತ್ಯುತ್ತಮ ಚಿತ್ರಗಳನ್ನು ತೆಗೆಯಲು ಇತ್ತೀಚೆಗೆ ಬಂದಿರುವ ಯಾವ ಕ್ಯಾಮರಾ ಉತ್ತಮ ಎಂದು ಸ್ವಲ್ಪ ತಿಳಿಸುವಿರಾ ??

ನನ್ನಿ ಮಂಜುನಾಥ,, ಸಾಮಾನ್ಯವಾಗಿ ಎಲ್ಲಾ ಕ್ಯಾಮರಾದಲ್ಲೂ ಉತ್ತಮ ಚಿತ್ರ ತೆಗೆಯಬಹುದು. ನೀವು ಸಾಮಾನ್ಯವಾಗಿ ತೆಗೆಯುವ ವಿಷಯ ಮತ್ತು ನಿಮ್ಮ ಬಡ್ಜೆಟ್ ಬಗ್ಗೆ ನನಗೆ ಪ್ರೈವೇಟ್ ಮೆಸೇಜ್ ಕಳಿಸಿದಲ್ಲಿ, ಯಾವ ಕ್ಯಾಮರಾ ಕೊಳ್ಳಬಹುದೆಂದು ಸೂಚಿಸಬಹುದು.