ಟ್ವೆಂಟಿ20: ಪೋಸ್ಟ್ ಮಾರ್ಟಮ್

To prevent automated spam submissions leave this field empty.

ಗಬ್ಬರ್ ಸಿಂಗ್ ಹೇಳ್ತಾನೆ ಷೋಲೆ ಫಿಲಂನಲ್ಲಿ,
’ತೀನೋ ಬಚ್ ಗಯೇ!’
ಆಡಿದ್ದು ಮೂರಾಟ ಸೂಪರ್ ಎಯ್ಟ್‌ನಲ್ಲಿ,
’ತೀನೋ ಹಾರ್ ಗಯೇ!’

ಗಬ್ಬರ್ ಸಿಂಗ್ ಕುದೀತಿದ್ದ,
ಅವನ ಬಂಟರು ಔಟ್!
ಮಹೇಂದ್ರ ಸಿಂಗ್ ಜಾರಿಬಿದ್ದ,
ಅವನ ಟೀಮೇ ಔಟ್!

ಪಾಕ್, ಶ್ರೀಲಂಕಾ ಪಾಸಾದವು,
ಭಾರತ ಮಾತ್ರ ಫೇಲಾಯ್ತು!
ಪುಟಗೋಸಿ ದೇಶಗಳು ಮೆರೆದವು,
ಮಹಾನ್ ಭಾರತ ಸೊರಗಿತು!

ಇದು ಈ ಸಲದ ಟ್ವೆಂಟಿ20 ಯಲ್ಲಿ
ಭವ್ಯ ಭಾರತದ ಕಥೆಯು ಮಗಾ.
ಐಪಿಎಲ್‌ನ ದುಡ್ಡಿನ ಮುಂದೆ
ದೇಶದ ಗೌರವ ಗೌಣ ಮಗಾ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಾಸ್ತ್ರಿ ಸರ್ ನಿಮ್ಮ ಅವಗಾಹನೆ ಹಿತವಾಗಿದೆ ಆದ್ರೂ ಧೋನಿ ಖುಷಿಯಲ್ಲಿದ್ದಾನೆ ನಿನ್ನೆ ಅವನಾಡಿದ "typical indin public reaction"ಬಗ್ಗೆ ಕೇಳಿದ್ರಾ ..ಆತ ಖುಷಿಯಾಗಿರೋದು ತಂಡ ಇಂಗ್ಲೆಂಡ್ ನಿಂದ ನೇರವಾಗಿ ಕೆರಿಬಿಯನ್ ಗೆಹೋಗುತ್ತೆ
ಒದೆ ಬೀಳೋದು ತಡ ಆಗುತ್ತೆ ಎಂದು....!

ತಡ ಅಲ್ಲಾ.... ಕೆರಿಬಿಯನ್’ನಲ್ಲಿ ಒಂದು ಪಂದ್ಯ ಯಾವುದಾದರೂ ಗೆದ್ದು ಬಿಟ್ರೆ ನಮ್ಮ ಜನ ೨೦-೨೦ ಸೋಲನ್ನು ಮರೆತು ಮತ್ತೆ ಜಯಕಾರ ಹಾಡಿ ಇವರನ್ನು ಅಟ್ಟದ ಮೇಲೆ ಕೂರಿಸ್ತಾರೆ...

>>ದೇಶದ ಗೌರವ
ಅಯ್! :D
ಮಾಡೋಕ್ಕೇ ಇನ್ನೂ ಒಳ್ಳೊಳ್ಳೇ ಕೆಲ್ಸಗಳಿವೆ ದೇಶದ್ಗೌರವ/ಪ್ರತಿಷ್ಟೆ ಹೆಚ್ಮಾಡೋಕ್ಕೆ, ಬರೀ (ಈ ಟೀಮ್ಮಾಡೋ ನಾಟ್ಕ) ಆಡೋದ್ಬಿಟ್ಟು.
ನಮ್ಜನ್ವೋ, ಇವ್ರೇನ್ಮಾನವ್ಕುಲದುದ್ಧಾರ ಮಾಡ್ಬಿಡ್ತಾರೇನೋ ಅನ್ನೋಹಾಗೆ ಇವ್ರನ್ನ ತಲೇಮೇಲ್ಹೊತ್ಕೊಳೋದು! ಭಾಳ ತಮಾಷೆ!