ಇಂದಿನ ಮಕ್ಕಳು ನಾಳಿನ.....?

To prevent automated spam submissions leave this field empty.

ನನ್ನ ಮಕ್ಕಳಿಬ್ಬರು ಒಬ್ಬರಿಗಿಂತಾ ಒಬ್ಬರು.....?(ಏಕ್ ಸೆ ಬಡ್ಕರ್ ಏಕ್) ಊಹ್, ಏನ್ ಪದ ಬರೀಬೇಕಂತ ಗೊತಾಗ್ತಾ ಇಲ್ಲ! ನನ್ನ ಮಕ್ಕಳು ಮಾತ್ರ ಅಲ್ಲ ಈಗಿನ , ಈ ತಲೆಮಾರಿನ ಮಕ್ಕಳೇ ಹಾಗೆ....
ಮೊನ್ನೆ ನಮ್ಮ ಯಜಮಾನರ ಗೆಳತಿಯೊಬ್ಬಳ ಮದುವೆಗೆ ಹೋಗಿದ್ವಿ...ಮದುವೆ ಮನೆಯಲ್ಲಿ ನಮ್ಮನೆಯವರು ಹುಡುಗಿಯ ತಾಯಿಯನ್ನ ಪರಿಚಯಿಸಿದರು. ಅವರು ನನ್ನನ್ನ ಮಾತಾಡಿಸಿ, ಮನೆಗೆ ಬಾಮ್ಮ ಅಂದ್ರು...ನಾನೂ ಸರಿ ಅಂದೆ. ಅಂದಿನ್ನೂ ಒಂದು ಕ್ಷಣನೂ ಆಗಿಲ್ಲ ಆಗಲೆ ನನ್ನ ಮಗ (ನಾಲ್ಕು ವರೆ ವರ್ಷದ) "ಅಲ್ಲ ಅಮ್ಮ ಅವರು ಕರೆದ ತಕ್ಷಣ ಆಯ್ತು ಅಂದ್ಬಿಟ್ರಲ್ಲ... ನಿಮ್ಗೇನು ಅವರ ಮನೆ ಅಡ್ರೆಸ್ ಅಥವಾ ಫೋನ್ ನಂಬರ್ ಗೊತ್ತಾ?" ಅಂದ. ಹೌದಲ್ವ ಹೇಳಿ ಕೇಳಿ ಇದು ಬೆಂಗಳೂರು ಇಲ್ಲಿ ಅಡ್ರಸ್, ಫೋನ್ ನಂಬರ್ ಎಲ್ಲಾ ಇದ್ರೂ ಮೊದಲಬಾರಿಗೆ ಮನೆ ಹುಡುಕೋದು ಕಷ್ಟಸಾಧ್ಯ.... ಅಂತಾದ್ರಲ್ಲಿ ಯಾರೋ ಕರೆದ ತಕ್ಷಣ ಬರ್ತೀನಿ ಅಂದ್ರೆ ಹೇಗಲ್ವ ಅಂತ ನಂಗೂ ಅನ್ನಿಸಿದ್ರೂ... ಅವರ ಮನೆ ನಿಮ್ಮಪ್ಪಂಗೆ ಗೊತ್ತಂತೆ ಕಣೋ ಅಂತ ಬಾಯಿ ಮುಚ್ಚಿಸಿದೆ.
ಇನ್ನು ನನ್ನ ಮಗಳನ್ನ(ಎರಡು ವರೆ ವರ್ಷ) ಮೊನ್ನೆ ತಾನೆ ಪ್ಲೇ ಹೋಂಗೆ ಹಾಕಿ ಬಂದಿದ್ವಿ.... ಸೇರಿನ್ನು ಒಂದು ವಾರ ಕೂಡ ಆಗಿಲ್ಲ... ನಿನ್ನೆ ಶಾಲೆಯಿಂದ ಕರ್ಕೋಂಡ್ ಬರಕ್ಕೆ ಹೋಗಿದ್ದೆ... ಸಾಮಾನ್ಯವಾಗಿ ನಂಗೆ ಶಾಲೆಲ್ ಏನ್ ಹೇಳ್ಕೊಟ್ರು ಅಂತನೋ, ಇಲ್ಲ ನೀನೇನ್ ಮಾಡ್ದೆ ಅಂತಾನೋ ಕೇಳೋ ಬುದ್ಧಿ.. ಹಾಗೇ ನಿನ್ನೆ ಕೂಡ 'ಪುಟ್ಟಿ ಸ್ಕೂಲಲ್ಲಿ ಇವತ್ತು ಏನ್ ಹೇಳ್ ಕೊಟ್ಟ್ರು ಅಂದೆ (ಆಗ ನಾವಿನ್ನೂ ಸ್ಕೂಲಿನ ಮೆಟ್ಟಿಲಿಳಿತಾ ಇದ್ವಿ....)
ಅಯ್ಯೋ ಅಮ್ಮ ಈ ಮ್ಯಾಮ್ ಪೆದ್ ಪೆದ್ದಾಗಿ ಏನೇನೋ ಹೇಳ್ ಕೊಡ್ತಾರೆ ಅನ್ನೋದೆ ಚಿಲ್ಟು!!!!!!!!!!!!
ನಂಗೊಂದ್ ಕ್ಷಣ ಗಾಬರಿ ಆಯ್ತು.. ಹಿಂತಿರುಗಿ ನೋಡಿದೆ ಸಧ್ಯ ಯಾರೂ ಗಮನಿಸ್ತಾ ಇರಲಿಲ್ಲ.. ತಕ್ಷಣ ನಾನವಳಿಗೆ 'ಏಯ್ ಕತ್ತೆ ಏನೇ ಅದು ಮ್ಯಾಮ್ಗೆಲ್ಲ ಹಾಗ್ ಹೇಳ್ತಾರ? ಯಾಕೆ ಏನಾಯ್ತು?' ಅಂತ ಕೇಳ್ದೆ? ಅದಕ್ಕವಳು 'ಅಲ್ಲ ಅಮ್ಮ ಆಟ ಸಾಮಾನ್ ನಾಯಿಮರಿಗೇನಾದ್ರು ಬಾಯಿದೆಯಾ? ಅದೇನ್ ತಿನ್ನತ್ತಾ? ಅಂದ್ಲು'... ಇಲ್ಲ ಅಂದೆ... ನಮ್ಯಾಮ್ ಒಂದ್ ಆಟ ಸಾಮಾನ್ 'ನಾಯಿಮರಿ ತೋರ್ಸಿ ನಾಯಿಮರಿ ನಾಯಿಮರಿ ತಿಂಡಿಬೇಕೆ? ಅಂತ ರೈಮ್ಸ್ ಹೇಳ್ ಕೊಡ್ತಾರಮ್ಮ' ಅನ್ನಬೇಕೇ? ಅಬ್ಬಾ ಏನ್ ಮಕ್ಕಳು!!!!!!!!!!!!!!
ಬಯ್ಯೋಕ್ಕೂ ಆಗಲ್ಲ ಬಿಡೋಕ್ಕೂ ಆಗಲ್ಲ.

ಪ್ರತಿಕ್ರಿಯೆಗಳು