ಹಾಗೆ ಹೊರಟು ನಿಂತವನ ವಯಸ್ಸು ೧೩! ಮತ್ತು ಹೆಸರು "ನಾರಾಯಣ ಮಹಾದೇವ ಧೋನಿ"

To prevent automated spam submissions leave this field empty.

ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ 'ವಂದೇ ಮಾತರಂ' 'ಭಾರತ ಮಾತಾಕಿ ಜೈ' ಘೋಷಣೆಗಳು ಮೊಳಗುತಿದ್ದವು. ಅಕ್ಕ ಪಕ್ಕದ ಮನೆಯ ಮಕ್ಕಳೆಲ್ಲ ಆಟವಾಡುತಿದ್ದರೆ ಅವನು ಮಾತ್ರ ಬೆಳಿಗ್ಗೆ ಬೇಗ ಎದ್ದು, ಶ್ವೇತವರ್ಣದ ಜುಬ್ಬಾ-ಪೈಜಾಮ ಧರಿಸಿ, ತನಗಿಂತಲೂ ಎತ್ತರವಿದ್ದ ಒಂದು ಬೊಂಬಿಗೆ 'ತ್ರಿವರ್ಣ ಧ್ವಜ' ಕಟ್ಟಿಕೊಂಡವನೇ ಮಲಗಿದ್ದ ತಾಯಿಯ ಬಳಿ ಹೋಗಿ ಅವಳನ್ನು ಎಬ್ಬಿಸಿ ಆಶೀರ್ವದಿಸುವಂತೆ ಕೇಳಿದ. ಶ್ವೇತ ವಸ್ತ್ರಧಾರಿಯಾಗಿ 'ತ್ರಿವರ್ಣ ಧ್ವಜ'ವನ್ನಿಡಿದ ಮಗನನ್ನು ನೋಡಿ,
ಆ ತಾಯಿ ಕೇಳಿದಳು "ಎಲ್ಲಿ ಹೊರಟೆ ಮಗು?"
"ಅಮ್ಮ , ನಾನು ದುರ್ಗದ ಬಯಲಿನಲ್ಲಿ ನಡೆಯುತ್ತಿರುವ 'ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೇನೆ"
"ಆದರೆ ಮಗು, ಅಲ್ಲಿ ಹಿರಿಯರೇ ಇರುತ್ತಾರೆ ಕಣೋ!"
"ಅಮ್ಮ , ತಾಯಿ ಭಾರತಿಯ ಸೇವೆ ಮಾಡಲು ಹಿರಿಯರು ,ಕಿರಿಯರು ಯಾರದರೆನಮ್ಮ?" ಎಂದವನ ಮುಖದಲ್ಲಿನ ದಿವ್ಯ ತೇಜಸ್ಸನ್ನು ಕಂಡು ಆ ತಾಯಿ ಮಗನನ್ನು ಹರಸಿ ಬೀಳ್ಕೊಟ್ಟಳು.

ಹಾಗೆ ಹೊರಟು ನಿಂತವನ ವಯಸ್ಸು ೧೩, ಹೆಸರು "ನಾರಾಯಣ ಮಹಾದೇವ ಧೋನಿ". ಗಂಡು ಮೆಟ್ಟಿದ ನಾಡು ಹುಬ್ಬಳಿಯ ಆ ಧೀರ ಬಾಲಕ ಓದುತಿದ್ದ ಶಾಲೆಯ ಹೆಸರು 'ಲಾಮಿಂಗ್ಟನ್ ಹೈಸ್ಕೂಲ್'.

ದುರ್ಗದ ಬಯಲಿಗೆ ಬಂದು ನಾರಾಯಣ ಸ್ವಾತಂತ್ಯ್ರ ಹೋರಾಟಗಾರರ ಜೊತೆ ಸೇರಿಕೊಂಡ.ಅವನ ಉತ್ಸಾಹ,ತೇಜಸ್ಸು ಕಂಡ ಹಿರಿಯರೆಲ್ಲ ಅವನನ್ನು ಅಪಾರ ಜನಸ್ತೋಮದ ಮುಂಚೂಣಿಯಲ್ಲಿ ಬಿಟ್ಟರು. ಇಡಿ ಜನಸಾಗರಕ್ಕೆ ಪುಟ್ಟ ಬಾಲಕ 'ನಾರಾಯಣ' ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತ ಮಾತೆಯನ್ನು ಬಿಡಿಸಬಂದ ನಾಯಕನಂತೆ ಕಂಗೊಳಿಸುತಿದ್ದ.

'ವಂದೇ ಮಾತರಂ' ,'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಘೋಷಣೆಗಳು ಪ್ರತಿಧ್ವನಿಸುತಿದ್ದವು.ಆ ಹರತಾಳವನ್ನು ನೋಡುತ್ತಾ
ರಸ್ತೆಯ ಬದಿ ತಮ್ಮಷ್ಟಕ್ಕೆ ತಾವಿದ್ದ ಜನ,ಪುಟ್ಟ ವೀರನ ನೋಡಿ ತಮ್ಮ ಬಗ್ಗೆ ಅಸಹ್ಯ ಪಟ್ಟುಕೊಂಡು ಅವರು ಹೋರಾಟದಲ್ಲಿ ಪಾಲ್ಗೊಂಡರು.ನೋಡನೋಡುತಿದ್ದಂತೆ ಅಲ್ಲೊಂದು ಜನಪ್ರವಾಹವೇ ಸೃಷ್ಟಿಯಾಯಿತು.

ಹಾಗೆ ಸಾಗುತ್ತಿದ್ದ ಮೆರವಣಿಗೆಯ ಮೇಲೆ, ಆಂಗ್ಲ ಪೊಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು.ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು, ಆದರೆ ಪುಟ್ಟ ಬಾಲಕ ನಾರಾಯಣ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಘೋಷಣೆ ಕೂಗುತ್ತಲೇ ಇದ್ದ.ಅಷ್ಟರಲ್ಲಿ ನುಗ್ಗಿ ಬಂದ ಗುಂಡಿಗೆ ಎದೆ ಕೊಟ್ಟವನೇ ರಕ್ತದ ಮಡುವಲ್ಲಿ ಕುಸಿದು ಬಿದ್ದ.

ಜೀವನ್ಮರಣ ಹೋರಾಟ ನಡೆಸುತಿದ್ದ ನಾರಾಯಣನನ್ನು ನೋಡಲು ಆಸ್ಪತ್ರೆಗೆ ತೆರಳಿದ ಕೆಲ ಹಿರಿಯ ಅಧಿಕಾರಿಗಳು ಅವನಿಗೆ ಕೇಳಿದರು 'ನಿನಗೇನು ಬೇಕು?'
"ಸ್ವರಾಜ್ಯ" ಎನ್ನುತ್ತಲೇ ನಾರಾಯಣ ಎಂಬ ಧೀರ ಬಾಲಕನ ಪ್ರಾಣ ಪಕ್ಷಿ ಹಾರಿತ್ತು.

ಇಂತ ವೀರರಿಂದಾಗಿಯೇ ಹುಬ್ಬಳ್ಳಿಯನ್ನು "ಗಂಡು ಮೆಟ್ಟಿದ ನಾಡು" ಅಂತ ಕರೆಯುತ್ತಾರೆನೋ?

ಇತಿಹಾಸದ ಪುಟದಲ್ಲಿ ಮರೆತು ಮರೆಯಾದ ಇಂತ ಅದೆಷ್ಟೋ 'unsung hero' ಗಳಿದ್ದಾರೋ ಅವರಿಗೆಲ್ಲ ನನ್ನ ನುಡಿನಮನಗಳು.

(ಮೊನ್ನೆ ಅಣ್ಣನ ಮನೆಗೆ ಹೋದಾಗ ೭ನೆ ತರಗತಿಯ ಪಠ್ಯ ಪುಸ್ತಕದಲ್ಲಿ ಇದನ್ನು ಓದಿದ್ದೆ, ಬಹುಷಃ ನಾವು ಓದುವಾಗ ಈ ಪಠ್ಯವಿರಲಿಲ್ಲ, ಪರಿಷ್ಕರಣೆಯಾದ ನಂತರ ಸೇರಿಸಿದ್ದಿರಬೇಕು.ಅಂತರ್ಜಾಲದಲ್ಲಿ ಹುಡುಕಿದಾಗ http://www.sankalpindia.net/drupal/?q=taxonomy/term/135&page=15 ಸಿಕ್ಕಿತು)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯ
ರಾಕೇಶ ಪಾಠದ ಶೀರ್ಷಿಕೆ ನೀವ್ ಕೊಟ್ಟದ್ದೋ ಇಲ್ಲ ಪಠ್ಯದಲ್ಲಿದ್ದದ್ದೋ ಬೆಳಗೆರೆ ಸ್ಟೈಲಲ್ಲಿದೆ . ಭಾಸ್ಕರ್ ರವರ ಮಾತು ನಿಜ ಅದೆಷ್ಟು ಮ೦ದಿ ಪ್ರಾಣತ್ಯಾಗ ಮಾಡಿರುವರೋ ನಮಗೆ ತಿಳಿದಿರುವುದು ಕೆಲವೇ ಕೆಲವು.
ಹರೀಶ ಆತ್ರೇಯ

ರಾಕೇಶ್ ಶೆಟ್ಟಿ
ನಿಮ್ಗೆ ಎಶ್ಟು ನನ್ನಿ ಏಳಿದರೂ ಸಾಲದು ಕಣ್ರಿ. ಈ ಕತೆ ಓದ್ತಾ ನನ್ನ ಕಣ್ಣು ತ್ಯಾಮ ಆಗೋಯ್ತು. ಅದೆಷ್ಟು ಜನ ಜೀವ ಬಲಿ ಕೊಟ್ಟು ಈ ದೇಸಕ್ಕೆ ಸೊತಂತ್ರ ತಂದು ಕೊಟ್ಟರೆ ನಾವು ಅದನ್ನು ಆಳು ಮಾಡಿಕೊಂಡು ಕೂತೀವಲ್ಲ ಅಂತ.
ಈ ಕತೆ ಬರೆದೋರ್‍ಯಾರು? ನಿಜವಾಗಲೂ ನಡೆದಿದ್ದರೆ ಏಳ್ದೋರು ಯಾರು ಅಂತ ಒಸಿ ಹೇಳ್ತೀರ?
ನನ್ನಿ
=ಚೆಂಗಣ್ಣ ತಿಳಿಗೊಳ

ರಾಕೇಶ್ ಶೆಟ್ಟಿ- ಇದು ನಡೆದಿಲ್ಲ ಅಂತ ನಾನು ಏಳ್ತಿಲ್ಲ. ಅಂಗೇಳಿ ಯಾವ ಪಾಪ ಕಟ್ಕೊಳ್ಳಿ? ಆ ಇನ್ನೊಂದು ಸೈಟ್‌ನಾಗೂ ನಿಮ್ಮಂಗೆ ಆಕಿರೋದು ಅಸ್ಟೆ. ಏಳನೇ ಕ್ಲಾಸು ಪುಸ್ತಕ ಅಂದರಲ್ಲ - ಅದರೊಳಗೆ ಯಾರು ಯೋಳಿದ್ದು ಅಂತ ಇತ್ತ ಅಂತ ಕೇಳಿದೆ. ಕತೆ ಆದರೆ ಕತೆ ಅನ್ಬೇಕು. ಕತೇನ ನಿಜವಾದ್ದು ಅಂತ ಏಳಿದ್ರೆ ನಮಗೆ ಸೋತಂತ್ರ ತಂದು ಕೊಟ್ಟೋರಿಗೆ ಅವ್ಮಾನ ಅಲ್ವ?

ರೀ ಗುರುಗಳೇ,
ಕತೆ ಹಾಗು ಘಟನೆಗೆ ಇರುವ ವ್ಯತ್ಯಾಸ ನಿಮಗೆ ತಿಳಿದಿದೆಯೇ? ತಾವು ಘಟನೆಗಳನ್ನು 'ಕತೆ' ಅಂತಾನೆ ಹೇಳ್ತಿರಾ?

[quote]ಕತೇನ ನಿಜವಾದ್ದು ಅಂತ ಏಳಿದ್ರೆ ನಮಗೆ ಸೋತಂತ್ರ ತಂದು ಕೊಟ್ಟೋರಿಗೆ ಅವ್ಮಾನ ಅಲ್ವ?[/quote]

ಇದು ಅರ್ಥವಾಗಲಿಲ್ಲ , ಇಲ್ಲಿ ಯಾರಿಗೆ ಅವಮಾನವಾಗುವಂತ ವಿಷಯವಿತ್ತು? ತಮ್ಮ ದ್ರುಷ್ಟಿಲಿ 'ಸೋತಂತ್ರ ತಂದು ಕೊಟ್ಟೋರು' ಯಾರು ? ವೋಸಿ ಯೋಳ್ತಿರಾ?

ವ್ಯತ್ತಾಸ ಗೊತ್ತು ಅದಕ್ಕೆ ಕೇಳಿದು. ಇದು ಗಟನೆ ಅಂದ್ರೆ ಯಾರು ಎಳಿದ್ದು ಅಂತ? ಅಯ್ಯೋ ಒಗ್ಲಿ ಬುಡಿ ನಿಮಕೆ ಗೊತ್ತಿಲ್ಲ ಕಾಣ್ತದೆ. ಅಲ್ಲಿಂಡಿ ಇಲ್ಲಿ ಆಕಿದ್ದೀರ. ತ್ಯಾಂಕ್ಸು.
ಗಟನೆನ ಕತೆ ಅನ್ಬಾರ್ದು - ಆವಾಗ ಅಲ್ಲಿದ್ದೊರಿಗೆ ಆಮಾನ ಅಂದೇ... ಅಸ್ತೇಯ..

ರಾಕೇಶ್,

ಗಂಡು ಮೆಟ್ಟಿದ ನಾಡು ನಿಜವೇ. ನನಗಿನ್ನೂ ನೆನಪಿದೆ ನನ್ನೊಬ್ಬ ಹುಬ್ಬಳ್ಳಿ ಮಿತ್ರ ಮೈ ಮುಟ್ಟಿ ಗದರಿದ್ದು "ಇದು ಹುಬ್ಬಳ್ಳಿ, ಬೆಂಗಳೂರಲ್ಲ ತಿಳಿದುಕೋ". ಸದ್ಯ ಗದರಿದ್ದು ನನಗಲ್ಲ (ಬಚಾವು :) ), ಬಸ್ನಲ್ಲಿದ್ದ ಇನ್ನೊಬ್ಬಂಗೆ, ಅವನ ಜೋರಿನ ರೀತಿಯನ್ನ ಆಕ್ಷೇಪಿಸುತ್ತಾ.

ಮಹಾ ಯೋಧನಾಗಿದ್ದ ಧೋನಿ ಪರಿಚಯಕ್ಕೆ ಧನ್ಯವಾದಗಳು

- ಅರವಿಂದ

ರಾಖೇಶ್ ನಿಮ್ಮ ಲೇಖನ ಓದಿ....ಏನೂ ಹೇಳಬೇಕು ಅಂತ ಗೊತ್ತಾಗಲಿಲ್ಲ ಅದೆಷ್ಟು ಜನರು ಈ ಭರತ ಭೂಮಿಗೆ ಪ್ರಾಣ ತ್ಯಾಗ ಮಾಡಿದ್ದಾರೊ....ನೆನೆದರೆ.....

ಕಥೆಯೇನೋ ಓಕೆ....

ಆದ್ರೆ...

ಹುಬ್ಬಳ್ಳಿ ಗಂಡು ಮೆಟ್ಟಿದ ನಾಡಾದರೆ ಉಳಿದಿರೋದೆಲ್ಲಾ...

;) :) :(

>>ಹುಬ್ಬಳ್ಳಿ ಗಂಡು ಮೆಟ್ಟಿದ ನಾಡಾದರೆ ಉಳಿದಿರೋದೆಲ್ಲಾ...<<

"ಗಂಡುಗಳು ಹುಟ್ಟಿದ ನಾಡುಗಳು" ಇರಬಹುದೇ...?

:)

ಕಥೆಯೇನೋ ಓಕೆ.... ಅನ್ನಬ್ಯಾಡಿ ರಾಕೇಶ್ ಸಿಟ್ಟು ಮಾದ್ಕತಾರೆ.. ಗಟನೆ ಅಂತೆ... :)

ಸರಿಯಾಗಿ ಹೇಳಿದ್ರಿ 'ತಿಳಿಗೋಳ' ಅವರೇ , ಇದು 'ಘಟನೆ' .. 'ಕಥೆ' ಅಲ್ಲ :)
ಇರೋದನ್ನ ಇರೋ ಹಾಗೆ ಹೇಳಿದ್ರೆ.... ಬೇಡ ಬಿಡಿ ಹೋಗ್ಲಿ ... ;)

= ಚೆಂಗಣ್ಣ ತಿಳಿಗೊಳ
'ಘಟನೆ' => ಯಾರು ಏಳಿದ್ದು ಅಂತ ಏಳಲ್ಲ ಅಂತೀರಾ!

ಯಾರ್ ಹೇಳಿದ್ದು ಅಂತ ಲೇಖನದ ಕೊನೆಯಲ್ಲಿ ಬರೆದಿದ್ದಿನಲ್ಲ ಸರ್... ಅದು ಸಾಲಲ್ವ?

ಯಾರೂ ಪೂಜಾನ? ಪೂಜಾ ಯಾರು? ನಿಮ್ಮಂಗೆ ಅವರು ಅಲ್ಲಾಕವ್ರೆ ಅಲ್ಲವಾ? ದೊಡ್ಡ ರೈಟರ್ ಯಾರಾದರೂ ಬರಿದಿರಬೌದ? ನೀವು ಪುಸ್ತಕದಲ್ಲಿ ನೋಡಿದೆ ಅಂದ್ರಲ್ಲ - ಅಲ್ಲಿ ಏನು ಏಳವ್ರೆ?
=ಚೆಂಗಣ್ಣ ತಿಳಿಗೊಳ

ಪುಸ್ತಕದಲ್ಲಿ ಯಾರು ಬರೆದವರು ಅಂತ ಹೇಳಿಲ್ಲ. ದೊಡ್ಡ ರೈತರ ಬರೆದರೆ ಮಾತ್ರ ನಂಬೋದಾ??
ಬಿಡಿ ಇದು ಮುಗಿಯೋ ಹಾಗೆ ಕಾಣೋಲ್ಲ

ಗೊತ್ತಿಲ್ದೇ ಓದ್ರೆ ಸರಿ ಬುಡಿ ಅಂಗಾರೆ ಕಟ್ಟುಕತೆ ಅನ್ಕಾಳಣ. ನಾರಯಣ ತರ ಜೀವ ಕೊಟ್ಟೋರ್‍ನ ಕತೆ ಒಳಗಿನ ಉಡುಗ ಮಾಡದು ತುಂಬಾ ಮೋಸ. ಅದೇ ದೇಸಕ್ಕೆ ಮಾಡೋ ಅವ್ಮಾನ ಅಂದಿದ್ದು.
=ಚೆಂಗಣ್ಣ ತಿಳಿಗೊಳ