ಗೌಡರು ಅಂದರೆ ಯಾರು ?

To prevent automated spam submissions leave this field empty.

ಗೌಡರು ಅಂದರೆ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಚಿತ್ರಿತವಾಗಿರುವಂತೆ ಆತ ಕ್ರೂರಿ ಅಥವ ಮೂರ್ಖನೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವನು ದಬ್ಬಾಳಿಕೆ ಮಾಡುವನೂ ಅಲ್ಲ. ಅವನು ಊರಿನ ಸಮಗ್ರ ಪರಿಪಾಟ ಪರದಾಟಗಳನ್ನು ಸಮನ್ವಯಗೊಳಿಸಿ ಊರಿಗೆ ಶಾಂತಿ ಸಮಾಧಾನ ಒದಗಿಸುವ ಒಂದು ದೈವೀಕ ಶಕ್ತಿ. ಸಕಲ ಜಾತಿಗಳನ್ನೂ ಸಮಾನಾಂತರದಲ್ಲಿ ನೋಡಿ ಸಮನ್ವಯ ತರಲು ಸದಾ ತನ್ನ ಕಾಲವನ್ನು ವ್ಯಯ ಮಾಡುವುದಲ್ಲದೆ ಕೆಲವು ಸನ್ನಿವೇಶಗಳಲ್ಲಿ ಸ್ವಂತ ಹಣವನ್ನೇ ಹೂಡಿ ಬಡವರ ಪರ ವಹಿಸಿ ಬಲ್ಲಿದರ ಹತೋಟಿ ಹದ್ದುಬಸ್ತಿನಲ್ಲಿ ಇಡುವವ. ಧಾರ್ಮಿಕ ಕೆಲಸಗಳ ವಾರಸುದಾರ. ಧರ್ಮ ಸ್ಥಾಪನೆಗೆ ನೆರೆ ಊರಿನ ಸಹಕಾರ ಪಡೆಯುವವ. ಅವನು ಊರಿನ ಗುಡಿಯನ್ನು ಚಪ್ಪಲಿ ಹೊಲಿಯುವವನನ್ನು ತನ್ನ ಸ್ವಂತ ಮಕ್ಕಳನ್ನು ಸಮಾನ ದೃಷ್ಟಿಯಲ್ಲಿ ನೋಡುವವ. ರಾಜಕೀಯ ಮಾಡುವುದೆಂದರೆ ಅವನಿಗೆ ಉಸಿರಾಟವಿದ್ದಂತೆ. ಅವನ ಪ್ರತಿಷ್ಠೆಗೆ ಭಂಗ ತರುವ ಎದುರಾಳಿಯನ್ನು ಸೆದೆಬಡಿಯುವಲ್ಲಿ ಅವ ಪರಾಕ್ರಮಿಯೇ ಸರಿ. ಅನ್ಯರ ಕಷ್ಟವನ್ನು ತನ್ನ ಪ್ರತಿಷ್ಟೆಯ ಕಣವನ್ನಾಗಿಸಿ ಕೆಲವೊಮ್ಮೆ ಗಲಿಬಿಲಿ ಆಗುವವನಿವ. ಶತಮಾನಗಳ ಚರಿತ್ರೆ ಹೇಳುವಂತೆ ಅವನು ತನ್ನ ಹೊಲದಲ್ಲಿ ಬೆಳೆದ ಅನ್ನವನ್ನು ಊರಿನ ಬಡವರಿಗೆ ಹಂಚಿ ಧನ್ಯತೆಯನ್ನು ಕಂಡವನಿವ. ಶ್ಯಾನುಭೋಗರು ಇವನ ಪರಮಾಪ್ತರು ಹಾಗು ಮಂತ್ರಿ. ಅವರೊಡನೆ ಸಕಲ ಏಳಿಗೆಗಳ ಚೆರ್ಚೆ ಮತ್ತು ಊರಿನ ಸಭೆಯಲ್ಲಿ ಅವುಗಳ ಅವಲೋಕನ ಚಿಂತನ ಮಂಥನ. ಶುಭ ಸಮಾರಂಭಗಳಲ್ಲಿ ಎಲ್ಲಾ ವರ್ಗದವರ ಸಮಾನ ಪಾಲುಗೊಳ್ಳುವಿಕೆ. ಅದರಿಂದ ಊರಿನ ಹಿರಿಮೆಗೆ ಪ್ರಯತ್ನ. ಒಟ್ಟಿನಲ್ಲಿ ಅವನು ಊರಿನ ಸಕಲ ಜೀವರಾಶಿಗಳಲ್ಲದೆ ಪ್ರಕ್ರುತಿಯ ಸಕಲಕ್ಕೂ ಆಧಾರ. ಇವನ ತೀರ್ಮಾನಗಳು ಮತ್ತು ಅನುಷ್ಟಾನಗಳು ಊರಿನ ಸರಾಸರಿ ಬುದ್ಧಿಯ ಸೂಚಕ. ಯಾರನ್ನೂ ಹಿಂದೆ ಬಿದ್ದೆವು ಅನ್ನುವ ಮನೋಭಾವಕ್ಕೆ ಈಡುಮಾಡಬಾರದು ಅನ್ನುವ ಮನೋ ಇಂಗಿತ. ಎಲ್ಲರನ್ನು ಸರಿದೂಗಿಸುವ ಯತ್ನದಲ್ಲಿ ಇವನು ಬಿಂಬಿತವಾದದ್ದು ಭಿನ್ನವಾಗಿ ರೂಪಿತವಾಗಿವೆ.

ಎಲ್ಲರಿಗೂ ಒಳ್ಳೆಯದನ್ನು ಬಯಸುವವ ಯಾರಿಂದಲೂ ಒಳ್ಳೆಯವ ಎನ್ನಿಸಿಕೊಳ್ಳಲಾರನೆಂದರೆ ಬಹಶಹ ಆತನೇ ಗೌಡ. ಸರ್ವರಿಗೂ ಸಮಾನತೆ ಎಂದು ಹಂಬಲಿಸಿದ ಮಹಾತ್ಮ ಗಾಂಧೀಜಿಗೆ ಗುಂಡು ಹಾಕಿದ್ದು ಒಂದು ವರ್ಗ. ಅದೇ ವರ್ಗ ಯಾರೇ ಸಮಾನತೆಗೆ ಶ್ರಮಿಸಿದರೂ ಗುಂಡು ಹಾಕುತ್ತಾರೆ ಅಂದರೆ ಹಳ್ಳಿಯಲ್ಲಿ ಅದನ್ನು ಮಾಡೋ ಕೆಲಸಕ್ಕೆ ಕಲ್ಲು ಹಾಕ್ತಾರೆ ಅಂತಾರೆ. ನಿರ್ಮಲ ಮನಸ್ಸಿನವರಿಗೆ ಕುತ್ಸಿತ ಆಲೋಚನೆಗಳು ಹೊಳೆಯುವುದಿಲ್ಲ. ಯಾರನ್ನೂ ಅವರು ಕೆಟ್ಟ ನೋಟದಲ್ಲಿ ನೋಡಬಯಸುವುದಿಲ್ಲ. ಅದೇ ಅವರ ಪರಮ ದುರ್ಬಲತೆ.ಅದೇ ಅವರ ಸರ್ವ ಶ್ರೇಷ್ಟತೆ.
ಅವರನ್ನು ಕವನವೊಂದರಲ್ಲಿ ಸರೆ ಹಿಡಿದರೆ ಹೀಗಿರಬಹುದು. ಓದಿ.....

ಗರಿಕೆ ಗೌಡ್ರು

ಬೇರುಗಳು
ಆಳಕ್ಕೆ ಇಳಿಯುದಿಲ್ಲ
ಕಾಂಡಗಳು
ಆ ಎತ್ತರಕ್ಕೆ ಏರುವುದಿಲ್ಲ
ನೀರು ಸಿಕ್ಕರೆ
ಬುರು ಬುರು ಬೆಳೆಯುವುದಲ್ಲ;
ಬೇಸಿಗೆ ಬಂದಾಗ-
ಒಣಗಿ ಕರಕಲಾಗುತ್ತದಲ್ಲ!
ಅದನ್ನು
ಸಾಯಿಸದೆ ಬಿಟ್ಟವರಿಲ್ಲ
ಇಷ್ಟಾದರೂ
ನೆಲವ ಅಪ್ಪಿಕೊಂಡು
ಕಾಡು,ಮೇಡು,ಮನೆ,ಹಿತ್ತಲು
ಎಲ್ಲಡೆ ಹರಡಿದೆಯಲ್ಲ;
ಏನು ಇದು ನಿನ್ನ ಕತೆ
ಓ ನನ್ನ ಗರಿಕೆ?
ಗೊತ್ತಾಗಲಿಲ್ಲವೆ ?
ನಿಂದೂನೂವೆ
ಗೌಡರ ತರವೇ ಹೋಲಿಕೆ !!.
--------000----------
-ಶಿವಶಶಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ಹೀಡುಮಾಡಬಾರದು"
ಈಡು ಮಾಡಬಾರದು.

ಗೌಡರ ಹಾಸ್ಯ ಮತ್ತು ತಪ್ಪು ಕಲ್ಪನೆಗಳ ಹೋಗಲಾಡಿಸುವ ತಮ್ಮ ಲೇಖನ ಚೆನ್ನಾಗಿದೆ.
"ಸರ್ವರಿಗೂ ಸಮಾನತೆ ಎಂದು ಹಂಬಲಿಸಿದ ಮಹಾತ್ಮ ಗಾಂಧೀಜಿಗೆ ಗುಂಡು ಹಾಕಿದ್ದು ಒಂದು ವರ್ಗ. ಅದೇ ವರ್ಗ ಯಾರೇ ಸಮಾನತೆಗೆ ಶ್ರಮಿಸಿದರೂ ಗುಂಡು ಹಾಕುತ್ತಾರೆ"
ಮೇಲಿನ ವಾಕ್ಯ ಸ್ವಲ್ಪ ಬಿಡಿಸಿ ವಿವರವಾಗಿ ಹೇಳಿದ್ದರೆ ಚೆನ್ನಿತ್ತು.

ಗೌಡ್ರ ತರಹ ಮಾತಾಡ್ತಿಲ್ಲ. ಸದ್ಯ...ಗೌಡ್ರೆ !

ಅದೇನು ಇದ್ದಕ್ಕಿದ್ದಹಾಗೆ ಗೌಡರನ್ನು ಮೇಲಕ್ಕೇರಿಸುತ್ತಿದ್ದೀರಿ ? ಹಿಂದೆ ಗೌಡ್ರು, ಅಂದ್ರೆ, ಮದದಿಂದ ಮೆರ್ಯೋರು, ಹಾಗೂ ಯಾದ್ದನ್ನೂ ತಲೆಗೆಹಾಕಿಕೊಳ್ಳದ ಮಂದ ಬುದ್ದಿಯ ಒರಟು ಮಂದಿಯೆನ್ನುವ ಅಭಿಪ್ರಾಯವನ್ನು ನಾನು ಬಾಲ್ಯದಿಂದ ಓದಿ, ಕೇಳಿ, ನೋಡಿ ಬಲ್ಲೆ. ಅದು ನಿಜವಾಗಿತ್ತು ಸಹಿತ. ಗೌಡರ ಆಳ್ವಿಕೆಯಲ್ಲಿ ಎಲ್ಲಾ ಜನಾಂಗದವರ ಹಾಗೆ ಗೌಡರು, ಓದಿ, ಬರೆದು ಮುಂದೆ ಬಂದಿದಾರೆ. ಸ್ವಲ್ಪದಿನ ಪ್ರಧಾನ ಮಂತ್ರಿಯಾಗಿದ್ದ ಗೌಡರಿಲ್ಲವೇ ? ಹೇಗಾದೃ ಕೇಳ್ಬೇಡಿ.

ನಾನು ಅಮೆರಿಕದಲ್ಲಿದ್ದಾಗ, ಅನೇಕ ಅತಿ ವಿದ್ಯಾವಂತ ಹಾಗೂ ಸಮರ್ಥ ಗೌದರನ್ನು ಕಂಡೆ. ಉದಾಹರಣೆಗೆ, ಅಕ್ಕ ಕನ್ನಡ ಸಮ್ಮೇಳನದಲ್ಲಿ ಅನೇಕ ಮಹ-ಮಹಾಗೌಡರಿದ್ದರು. ಮಂಥನ ಸ್ಮರಣಸಂಚಿಕೆಯ ಸಂಪಾದಕ, ಮತ್ತೆ, ಅಕ್ಕದ ಪ್ರಧಾನ ರುವಾರಿ, ಮತ್ತೆ ಕಾರ್ಯಕಾರಿಸಮಿತಿಯಲ್ಲಿದ್ದ ವಾಸಂತಿಗೌಡ ಮತ್ತಿತರು. ಇತ್ಯಾದಿ.

ಮಹಾಸಾಹಿತಿ, ದೇಜಗೌರಿಲ್ಲವೇ ! ಡಾ. ದೊಡ್ಡರಂಗೇಗೌಡರಿದ್ದಾರೆ, ಅಂಬರೀಶ ಗೌಡರು, ಎಸ್. ಎಮ್. ಕೃಷ್ಣೇ ಗೌಡರು. ಬಿಜೆ ಪಿ ಯ ಸದಾನಂದ ಗೌಡರು, ಅಮೆರಿಕದ ಹೂಸ್ಟನ್ ನಗರದ ಕನ್ನಡ ವೃಂದದ, ವೆಂಕಟೇಶ ಗೌಡರು, ಇವರೆಲ್ಲಾ ತಾವು ಒಳ್ಳೆಯ ಸಹೃದಯದ ಶ್ರೇಷ್ಟಮಟ್ಟದ ಗೌಡರೆಂದು ಸಾಬೀತುಪಡಿಸಿದ್ದಾರೆ.

ಕರ್ನಾಟಕದಲ್ಲಿ ಅನೇಕ ಜಾತಿ, ಧರ್ಮಗಳಲ್ಲಿ ಅನೇಕ ಚೇತನಗಳನ್ನು ನಾವು ಕಾಣಬಹುದು. ’ ಗೌಡ ಗೌಡರೆಂದು ಕಾಣುವಿರೇಕೆ ಕಣ್ಣುಕಾಣದ ಗಾವಿಲರೆ ” .. ಎನ್ನುವ ಮಾತು ಅವರಿಗೂ ಅನ್ವಯಿಸುತ್ತದೆ.

ಹಿಂದೆ ಯೆಲೃ ಆ ಮಾತನ್ನ... ನಾನು ಮೇಲೆಹೇಳಿರೋ ಮಾತ್ನ ಹೇಳ್ತಿದೃ. ಈಗ ಹಾಗಲ್ಲ. ಯಾರಾದೄ ಮೂರ್ಖರನ್ನೂ ಕೂಡಾ ನಾವು ನೋಯಿಸಲು ಇಷ್ಟಪಡೋದಿಲ್ಲ !

ವ್ಯಾಕರಣವನ್ನು ತಿದ್ದಿದ್ದೀರಿ. ವಂದನೆಗಳು. ಇನ್ನಷ್ಟು ವಿವರವಾಗಿ ಬರೆಯ ಬಹುದಾಗಿತ್ತು ಅಂದಿದ್ದೀರಿ.
ಅಕ್ಷರ ಕಲಿತು,ಮಾಹಿತಿ ಕಲೆಹಾಕಿ ಊರಿಗೆ ಹಂಚುತ್ತಿದ್ದ ಒಂದು ವರ್ಗವನ್ನು ಊರು ನೇಮಿಸಿಕೊಂಡು ಅವರನ್ನು ಸೂಕ್ತವಾಗಿ ಸಲಹುತ್ತಿದ್ದರು.ಅವರು ಕಾಲ ಚಕ್ರದಲ್ಲಿ ಊರಿನ ಮುಗ್ಧರನ್ನು ಮರುಳು ಮಾಡಿ ಕಡೆಗೆ ಅವರ ಹಿಡಿತದಲ್ಲಿ ಊರನ್ನೇ ಮಾನಸಿಕವಾಗಿ ಆಳಿದರು.ಮುಗ್ಧರನ್ನು ಮೂರ್ಖರನ್ನಾಗಿಸಿದರು. ವಿಷದಲ್ಲೂ ಔಷಧವಿದ್ದಂತೆ ಅವರಲ್ಲಿ ಆಳುವಿಕೆಯನ್ನು ಮಿತವಾಗಿ ಒತ್ತಿದವರು ಇಂದಿಗೂ ಒಳ್ಳೆಯವರೇ ಆಗಿದ್ದಾರೆ.
ಶತಮಾನಗಳ ಕಾಲ ಒಂದು ತರಹೆ ಮಜಾ ಮಾಡಿದವರು ಸಮಾಜವನ್ನು ನಂಬಿಸಿ ವಂಚಿಸಿ ವಂದನೆಗೆ ಅರ್ಹನೆಸಿಕೊಂಡವರು. ಹೆಚ್ಚು ವಿವರವನ್ನು ಒಂದು ವರ್ಗದವರ ನಾಜೋಕಿನಲ್ಲಿ ತಿಳಿಸಲಾಗದು. ಅದೇ ಮುಗ್ಧರ ಮೂರ್ಖತನವಿರಬಹುದು ಅದೇ ಸಹಜತನ ಸಹ.
ವಮದನೆಗಳು
ಶಿವಶಶಿ

ನಿಮ್ಮ ಪ್ರತಿಕ್ರಿಯೆ ಹಾಗು ಗೌಡರ ಕುರಿತ ಅವಲೋಕನಕ್ಕೆ ವಂದನೆಗಳು. ನಿಮ್ಮ ಮನಸ್ಸಿನಲ್ಲಿ ಒತ್ತಿದ ಭಾವನೆಗಳನ್ನು ತೆರೆದ ಮನಸ್ಸಿನಿಂದ ಸ್ವಾಗತಿಸಿ ನಿಮಗೆ ವಂದಿಸುತ್ತೇನೆ.

ಶಿವಶಶಿ

ಶಿವಣ್ಣನವರೆ,,,,,,,,,,,ನಿಮ್ಮ ಮಾತು ನೂರಕ್ಕೆ ನೂರು ಸತ್ಯ,, ಗೌಡರ ಬಗ್ಗೆ ಗೊತ್ತಿಲ್ಲದವರಿಗೆ ಗೌಡರನ್ನು ಚೆನ್ನಾಗಿ ಪರಿಚಯಿಸುವಂತಿದೆ ನಿಮ್ಮ ಲೇಖನ,, ಏನೆಲ್ಲಾ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಿ ಊರಿಗೆ ಒಳಿತನ್ನು ಮಾಡುವುದಕ್ಕಾಗಿ ತನ್ನ ಮನೆಯವರನ್ನೇ ಬಲಿ ಕೊಟ್ಟು ಊರನ್ನು ಉಳಿಸಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಸಾಕಷ್ಟಿವೆ..ಗೌಡರ ತ್ಯಾಗದ ಬಗ್ಗೆ ಗೊತ್ತಿಲ್ಲದ ಗಾವಿಲರು ಗೌಡರ ಬಗ್ಗೆ ಸಾಕಷ್ಟು ಕೆಟ್ಟದಾಗಿ ಇಂದು ಮಾತಾಡುತ್ತಿದ್ದಾರೆ....ನಿಮಗೆ ನಿಮ್ಮ ಲೇಖನಕ್ಕೆ ವಂದನೆಗಳು ಹಾಗೂ ಇದನ್ನು ಮುಂದುವರೆಸಿ.

ಹೊಳೆನರಸೀಪುರ ಮಂಜುನಾಥ ಗೌಡ
ದುಬೈ