ನಿತ್ಯಸತ್ಯ ನುಡಿದರೆ ಬೇಸರವೇಕೆ?

To prevent automated spam submissions leave this field empty.

ನಿತ್ಯಸತ್ಯ ನುಡಿದರೆ ಬೇಸರವೇಕೆ?

ಈಗಿಲ್ಲ ಯಾವಕೊರೆವ ಹೆದರಿಕೆ
ನಿಮಗೆ ಬೇಸರ ತರುವ ಭಾವ ಮನಕೆ
ನಿತ್ಯಸತ್ಯ ನುಡಿದರೆ ಬೇಸರವೇಕೆ?
ಪ್ರತಿಜೀವಿಯನುಭವವೆ ಸತ್ಯ ಲೋಕಕೆ!

ನಡೆದದ್ದೆಲ್ಲಕೆ ಎಲ್ಲೆಡೆ ನಿಜದಚ್ಚುಂಟು
ಮಡಿದ ಕತೆಗಳಲಿ ದೀರ್ಗ ನಿಘಂಟು
ಹುದುಗಿರುವುದು ಮುಕ್ಕಾಲುಪಾಲು ಗುಟ್ಟು
ಬದುಕೆಲ್ಲ ವಿಷ್ಮಯವಶದ ಬಂಟು.

ಯೋಗ ಜಯಿಸಿ ವಶಮಾಡಿಕೊಂಡು ಸಂಪೂರ್ಣ
ಯೋಗಿ ಆಳುವನೆ ಬಾಳನಡೆಸು ಪರಿಪೂರ್ಣ?
ಆಲೋಚನೆಗಳ ಓಟ ಮುನ್ನೋಡುವ ಚೂಟ
ವಿಲೋಚನ ವೀಕ್ಷಣ ವಿವೇಕದಿಂದ ಪರಿಪಾಟ.

ನಿಶ್ಶಕ್ತ ನಡೆವ ಬಾಳರೀತಿಯನರಿಯಲು
ಅಶಕ್ತಿ ಸದ್ದಿಲ್ಲದೆ ತಡೆಗಳ ಮುರಿಯಲು
ಅಸಹಾಕತೆ ಏಳಿಗೆಯ ಪ್ರಗತಿ ನಟಿಸಲು
ಅಸದೃಶ ಮಾಯೆವಶ ಇರವಿಗೆ ಪಾಟಿಸವಾಲು

ಅರ್ಥವಾಗದ ಸಂಭವಗಳು ಅನಂತ ಅನೇಕ
ಅನರ್ಥ ಘಟನೆಗಳೆ ವೇದಾಂತಿಗಳ ಙ್ಞಾನಲೋಕ!
ಅರ್ಥವಾಗದು ಕೋಟಿಜನಕೆ ಬಾಳನಡವಳಿಕೆ,
ಅರ್ಥವೇನಲ್ಲಿ ಬಾಳಗೋಳಿನ ಕಠಿಣ ಕಳವಳಿಕೆ?

- ವಿಜಯಶೀಲ (೧೭೦೩೦೯)
~*~
[ಭಾವಗೀತೆ]

ಲೇಖನ ವರ್ಗ (Category): 
ಸರಣಿ: