ಆತ್ಮೀಯ ಪತ್ರ

To prevent automated spam submissions leave this field empty.

ಆತ್ಮೀಯ ಪತ್ರ

ಬರೆದು ಸಿದ್ಧವಾಯ್ತು ಆತ್ಮೀಯ ಪತ್ರ
ತೆರೆದ ಹೃದಯದಿಂ ಚಿಮ್ಮಿದ ವಿಷಯಗೀತ,
ಮನದಿ ತುಂಬಿದೆ ಅಂದೋಳನ ವಿಚಿತ್ರ,
ಅನವದ್ಯ ಚಿಂತೆಯನುಮಾನ ನುಸುಳಿ ಹೆದರಿಸುತ!

ಮನಕಸ್ಥಿರತೆ ಸಂಶಯಕೆ ಬಾಗಿ ಪುಳಕಿ ಹೆದರಿಕೆ
ಶುಸ್ಥಿತಿಯ ವಿಷಯ ಬಗ್ಗಿ ತಳುಕಿ ಸಾದರಿಕೆ
ಲೇಖನ ವೈವಿಧ್ಯತೆ ಮನಕಾಗದೆನುವ ಚಿಂತೆ,
ಮೂಕಸಂಶಯವ್ಯಥೆ ಒಮ್ಮೆಲೆ ಕೂಡಿದ ಆತುಂಕತೆ!

ಅತಿ ಪ್ರೀತಿಯೊಳ್ ಬರೆದೆ ಮತಿಯೆಲ್ಲ ಜೊತೆಯಾಗಿ
ರೀತಿನೀತಿಗೊರಗಿ ಅನುರಕ್ತಿ ಮೇಲ್ಮಮತೆಯಾಗಿ
ತೆರೆಬಿಚ್ಚಿ ಹೊರಗಚ್ಚಿ ಶುಚಿವಿವೇಚನೆ ಅಂತರಾಳದಿಂದ
ನೆಚ್ಚಿಕೆಯ ಹೆಚ್ಚೊಲವು ರುಚಿವಿವೇಕ ಮಂಥನದಿಂದ.

ಅರಿತವಗೆ ಜೀವನ ನುರಿತವರಿಗುಂಟು ವಿಶಾಲತೆ
ಅಪರಿಮಿತ ಭಾಳ ವೈವಿಧ್ಯತೆಯ ಪರಿಗಣಿಕೆ
ಜೊಳ್ಳು ಹಕ್ಕಿಯಿಂದ ವಿಭಜಿಸುವ ಪಕ್ವ‍ಅರ್ಹತೆ
ಪೊಳ್ಳು ನುಡಿಗಳ ಗುರುತಿಸಿ ಶೋಧಿಸುವ ಗುಣಕೆ!

ಗುಡಿಯೊಳಗ್ಹೋಗಿ ಪೂಜಿಪ ಯಾತ್ರಿಕ ಪೊಳ್ಳಾಡಿದರೆ
ಕೊಡುವನೆ ಆಶೀರ್ವಾದ ಮಹಾದೇವ ಒಳ್ಳೆ ಭವಿಷ್ಯದ ವರ?
ಭಕ್ತ ಉಪಾಸಕ ಕಾಲ್ತೊಳೆದು ಗುಡಿಯೊಳಗೆ ಕಾಲಿಡುವಂತೆ
ಅನುರಕ್ತ ಅರ್ಪಣೆಯಿದು ಮನಸ್ನಾನಗೈದ ಪ್ರಾರ್ಥನೆಯಂತೆ!

- ವಿಜಯಶೀಲ (೦೧.೦೯.೦೭)
*
[ಪತ್ರಕವನ ಮಾಲಿಕೆ]

ಲೇಖನ ವರ್ಗ (Category):