ಹೃತ್ಪೂರ್ವಕ ಧನ್ಯವಾದಗಳು

To prevent automated spam submissions leave this field empty.

ಹೃತ್ಪೂರ್ವಕ ಧನ್ಯವಾದಗಳು

ನಲುಮೆಯ ಶ್ರೀಮತಿ ಸೌಭಾಗ್ಯವತಿ ಸುಸ್ಮಿತ
ದೀರ್ಘ ಧನ್ಯವಾದಗಳ ಅರ್ಪಿಸುವೆ ನಮಿಸುತ
ಸಂತೋಷ ತುಳುಕಿತು ಒಮ್ಮೆಲೆ ನೋಡಿ ತಮ್ಮ ವಿ.ಪತ್ರ
ಉದ್ಗಮ ದುಗುಡ ಕೂಡಲೆ ಕೂಡಿ ಅಳುವಾಕ್ರಮಿಸಿ ನಿಯಂತ್ರ.
*
ಅತುಳ ವಿಶ್ವಾಸದ ನುಡಿಮಾಲೆಯ ಲೇಖನ
ತೋರಿತು ಅಮೋಘ ವೈಯಕ್ತಿಕ ಪ್ರದರ್ಶನ,
ಅನಿರೀಕ್ಷಿತ ವಿಶೇಷ ಸೌಜನ್ಯದ ಪ್ರತ್ಯಕ್ಷ
ತಪ್ಪಿದವನ ಮನ್ನಿಸಿದ ಮಮತೆಯ ದಕ್ಷ!
*
ಹತ್ತು ಸಾವಿರ ಮೈಲಿ ಪರದೇಶದೂರದೂರಿನಲಿ
ಗೊತ್ತು ಸಮಯದಲಿ ಸಂಧಿಸಬಹುದಿತ್ತು ನಲುಮೆಯಲಿ,
ತಪ್ಪಾಯ್ತು ತಪ್ಪು ಸನ್ನಿವೇಷದ ಪ್ರಮೇಯಪ್ರಭಾವದಲಿ
ಒಪ್ಪದ ನಡತೆ ಪ್ರಮಾಧವೆನ್ನದಾಯ್ತು ಅಗೌರವ ರೂಪದಲಿ.
*
ಕ್ಷಮಿಸಲಾಗದ ಆನುಭವ ತಂದಿಟ್ಟ ತೆರದಿ
ಕ್ಷಮೆಕೋರಲನರ್ಹ ಕಳಂಕ ಕುಟ್ಟಿ ನೆಮ್ಮದಿ,
ದೂರದೂರಲಿ ಕೂಡ ಬೇಸರಿಕೆ ಕೊಟ್ಟೆನ್ನ ವಿಧಿ,
ದೂರಬಹುದಿತ್ತು ನಿಂಧಿಸಿ ಎನ್ನ ಕೆಟ್ಟ ಹಾದಿ.
*
ಆದರೂ ಅಮಿತ ವಿಶ್ವಾಸದ ನುಡಿ ಕೂಡಿಸಿ
ಸಹೃದಯದ ಆತ್ಮೀಯ ಮಾತುಗಳ ಮುಡಿಸಿ,
(ವಿದ್ಯುತ್) ಸಂದೇಶ ರವಾನಿಸಿದ ಮಹತ್ವ ಪ್ರದರ್ಶನವದು,
ಸಿರಿಗುಣಕೆ ಶಿರಬಾಗಿ ನಮಿಸುವೆ ಕೃತಙ್ಞತೆಲಿ ಮಿಂದು.
*
ವಿಜಯಶೀಲ (೧೧೧೦೦೭)
*
[ಪತ್ರಕವನ ಮಾಲಿಕೆ]

ಲೇಖನ ವರ್ಗ (Category):