ಕೇಳಿದ್ಯೇನಪ, ನಮ್ ಸಿದ್ರಾಮಣ್ಣಾರು, ಅಪೊಜಿಸನ್ ಲೀಡ್ರಾಗ್ತಾರಂತಪೋ, ಒಳ್ಳೆ ಸಮಾಚಾರ ಅಲ್ವಾ ಮತೆ !

To prevent automated spam submissions leave this field empty.

ಎಂಕ್ಟೇಸಪ್ಪ :

ಕೊನ್ಗೂ ನಮ್ ಸಿದ್ರಾಮಣ್ಣಾರ್ ಗೆದ್ರು ಕಣ್ಲಾ ಮಗ. ( ಎಂಗ್ ಕೈ ತೋರ್ಸ್ತವ್ರೆ ನೋಡು ) ಅದೇ ಇಬೃ ಒಂಟೋದ್ರಲ್ಲ ಎಸ್. ಎಮ್. ಕೃಶ್ಣ ಮತೆ, ಕರ್ಗೆ ಸಾಹೇಬೃ. ಐ ಕಮಾಂಡ್ ಏನಾದೃ ಮಾಡ್ಬೇಕಲ್ವ ಮತೆ, ಕರ್ ನಾಟ್ಕದಾಗೆ ಕಾಂಗ್ರೆಸ್ ಬಿಗಿಮಾಡಿ ಮುಂದಿನ್ ಎಲೆಕ್ಸನ್ ಬರೋಒತ್ಗೆ, ಬೇರೆಯಾರೂ ಬರ್ಬಾರ್ದು ಅನ್ನೊಂದೆ ಅವರ್ ಆಸೆ ಅಂತ ಇರ್ಬೊದೇನು ಯಾರ್ಗ್ ಗೊತ್ತೇಳು ಇಂಗಾಗ್ತದೆ, ಅನ್ನೋದು. ಇಂದಿದ್ ನಾಯ್ಕರ್ ಗಳೊಳ್ಗೆ, ಪ್ರಕಾಸಪ್ಪರು, ಮತೆ, ಬ್ಯಾರೆ ಯಾರ್ಯಾರೋ ಎಲ್ಲೊದ್ರೋ ಪತ್ತೆ ಇಲ್ದಂಗಾಗದೆ. ಎಂಗೋ ನಮ್ ಸಿದ್ರಾಮಣ್ಣಾರ್ ಬಂದ್ರಲಪ್ಪ. ಅದು ಅವರ್ಗೆ ಸರ್ಯಾಗೈತೆ ಅವರ ಉದ್ದೆನೂವ; ಎಲ್ಲಾರ್ನೂ ಚೆನ್ನಾಗ್ ಬೈದು ಅಂದು ಸರಿಮಾಡ್ಬೋದ್ ತಗೊ. ಅವಯ್ಯಂಗೂ ಅದೇ ಆಸೆ ಅಲ್ವ. ಅಸಿದ್ ಉಲಿತರ ರೊಚ್ಚಿಗೇಳ್ತಾರ್ ನೋಡ್ ಬ್ಯಾಕಾದ್ರೆ !

ಮಂಕಪ್ಪ : ಅಂದ್ರೆ ನೀನೇಳಾದು, ಈಗ ನಮ್ ಸಿದ್ರಾಮಣ್ಣೋರು, ಅಪೊಜಿಸನ್ ನಾಗೆ ವಿರೋದ್ ಪಕ್ಸದೊರ್ ನಾಯ್ಕೃ ಅಗ್ತವ್ರೆ ಅನ್ನೊ ಮಾತಾ ? ಅದೂ ಸರಿ, ನಾಯ್ಕೄ , ಅಂದ್ರೆ ನಾಯ್ಕೃ ಅಲೇನಪಾ ? ಸುಮ್ಕೆನಾ ! ಆ ಸೋನಿ ಅಮ್ಮಾವೃ ಏಳ್ದೃ ಅಂದ್ರೆ, ಮುಗ್ದೋತು, ಬಿಡು. ಇನ್ನೂ ಕೆಲವೃ ಒಳೋಳ್ಗೆ ತಕರಾರು ಮಾಡ್ಬೋದು. ಅದಕ್ಕು ಡಿಮಾಂಡ್ ಕಣಪ್ಪೊ ಈಗ, ಅಂದ್ರೆ, ಈದಿನದಾಗೆ !

ಎಂಕ್ಟೇಸಪ್ಪ :

ಅಂದಂಗೆ, ದ್ಯಾವೆಗೌಡ್ರು ಇನ್ ೫ ವರ್ಸ ಏನ್ ಮಾಡ್ತಾರಂತೆ. ’ಅವ್ರ್ ಐ ಕಮಾಂಡಿಗೆ ಅವ್ರೇ ದಣಿಯಾಗವ್ರೆ. ” ಅಲ್ವಾ ಅದೇ ಸಾಕಲ್ವ ! ಬಾರಿ ಸ್ರಮಜೀವಿಕಣಪೋ ಈಗ್ಲು ಮಕ್ಳು, ದೇಸ, ವ್ಯವಾರ ಅಂದ್ರೆ, ಸುಮ್ಕೆ ಒದ್ಯಾಡ್ತಾರೆ... ಸುದಾರ್ಸ್ಕಳಿ ಅಂದ್ರೆ, ಕೇಳ್ತಾರೇನಪ ; ಅಳೆ ಜನ. ಕೆಲ್ಸ ಮಾಡಿ ಅಬ್ಯಾಸಾಗೊದೆ. ಎಂಗ್ ತಾನೆ ಸುಮ್ಕಿದ್ದಾರು !

- ದಟ್ಸ್ ಕನ್ನಡ ಪತ್ರಿಕೆ ಓದಿದ್ ಮ್ಯಾಗೆ, ಇಚಾರ, ತಲ್ಯಾಗೆ, ಬಂದಿದ್ದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಕಪ್ಪ : ಅಲ್ಲಿ ಯಿದಾನ್ಸೌದ್ನಾಗೆ ದ್ಯಾವೆಗೋಡ್ರೂ ಇಲ್ಲ, ಕುಮಾರಣ್ನೂ ಇಲ್ಲ..ಯಾರನ್ನ ಅಪೊಜಿಸನ್ ಮಾಡ್ತಾರಂತೆ

ಏ ನೀನೊಳ್ಳೆ... ಸಿದ್ರಾಮಣ್ಣಾರ್ಗೆ, ಕಾಂಗ್ರೆಸ್ನೋರು ಅಪೊಜಿಸನ್ ಉದ್ದೆ ಕೊಡ್ತವ್ರೆ, ಅಂತ ಸುದ್ದಿ ಐತೆ. ಗುಲಾಮ್ ನಬಿ ಆಜಾದ್ ಬರ್ತಾವ್ರಂತೆ. ಒಟ್ನಾಗೆ, ದ್ಯಾವೆಗೌಡ್ರು ಇರ್ಲಿ, ಬಿಡ್ಲಿ ಉದ್ದೆ ಐತಲ್ರಿ. ’ಲೀಡರ್ ಆಫ್ ಅಪೊಜಿಸನ್ ; ! ಸುಮ್ಕೆನಾ ? ಸಿದ್ರಾಮಣ್ಣೋರ್ ಅಂಗ್ ನೋಡಿದ್ರೆ, ಜೀವನನೆಲ್ಲ ಅಪೊಜಿಸನ್ ಪಾಲ್ಟಿಕ್ ನಾಗೆ ಕಳದವ್ರೆ. ಅವೃ ಪವರ್ ನಾಗೆ ಇದ್ದಿದ್ದು ಸರ್ಯಾಗಿ ಗ್ಯೆಪ್ಪಾಗ್ತಿಲ್ಲ.

ಎಂಗೋ ಎಲ್ಲಾರ್ನೂ ಬಯ್ಕಂಡು ಕುಸ್ಯಾಗಿರ್ಲಿ ಬಿಡ್ರಿ. ಪಾಪ, ಬಾಳ ನೊಂದವ್ರೆ. ಗೆದ್ದು, ಗೆದ್ದು, ಯಾಕೊ ಅವ್ರಿಗೆ ನಸೀಬ್ ಇಲ್ಲ. ಸೊನಿಯಾಗಾಂದಮ್ಮಂಗೆ ಎಂಗಾರು ಇಮ್ಪ್ರೆಸನ್ ಮಾಡಿ ಕೇಂದ್ರದಾಗೆ ಎಲ್ಲಾದೃ ಒಬ್ಬ ಮಂತ್ರಿಆಗಿ ಕುಂಡ್ರಬೋದಿತ್ತು. ಕರ್ನಾಟಕದ ಜನರ ಇತ ಅಲ್ವಾ ಮುಕ್ಯ. ಆಮೇಲೆ ನ್ಯಾಸನಲ್ಲೂ ಅಮ್ಯಾಕೆ ಇಂಟರ್ ನ್ಯಾಸನಲ್ ಅಗೊದು !