ಪದಬಂಧದಲ್ಲಿ ಕರ್ನಾಟಕ ದರ್ಶನ

To prevent automated spam submissions leave this field empty.

ನಮ್ಮ ಕನ್ನಡ ನಾಡನ್ನು ಪದಬಂಧ ಬಿಡಿಸುತ್ತ ಒಮ್ಮೆ ವಿಹರಿಸಿ ಆ ಸ್ಥಳಗಳಿಗೆ ಭೇಟಿ ನೀಡಿದಾಗ ಆದ ಅನುಭವಗಳನ್ನೂ ನೆನಪಿಸಿಕೊಳ್ಳೋಣ ಬನ್ನಿ !

ಎಡದಿಂದ-ಬಲಕ್ಕೆ

೧. ಕರ್ನಾಟಕವನ್ನು ಕುರಿತು ಹೀಗೆ ಒಂದು ಹಾಡಿದೆ ’ನಾವಿರುವಾ ತಾಣವೇ ..’ (೫)
೩. ಬೇಲೂರಿನಲ್ಲಿದ್ದಂತೆ ಹೊಯ್ಸಳರ ಕಾಲದಲ್ಲಿ ಕಟ್ಟಿದ ಹಲವಾರು ದೇವಸ್ಥಾನಗಳು ಇಲ್ಲಿಯೂ ಇವೆ (೪)
೭. ಸಾವಿರ ಕಂಬದ ಬಸದಿ ಇತ್ಯಾದಿ ಹೊಂದಿರುವ ಇದು ’ಜೈನರ ಕಾಶಿ’ ಎಂದೇ ಪ್ರಸಿದ್ದಿ (೪)
೮. ’ಕನ್ನಡದ ಕಬೀರ್’ ಶರೀಫ಼ರ ಜನ್ಮಸ್ಥಳ (೪)
೧೦. ಈ ಊರಿನ ರಸ್ತೆಯ ಒಂದೆಡೆ ಅರಬ್ಬಿ ಸಮುದ್ರ ಮತ್ತೊಂದೆಡೆ ಸೌಪರ್ಣಿಕಾ ನದಿ (೪)
೧೨. ಅತ್ಯಂತ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ’ಶೋಲೆ’ ಚಿತ್ರೀಕರಿಸಿದ್ದು ಇಲ್ಲಿ (೫)
೧೩. ಮದ್ದೂರಿನ ಬಳಿ ಇರುವ ಈ ಊರು ಕೊಕ್ಕರೆ ಹಾಗೂ ಕಬ್ಬಿನ ಹೊಲಕ್ಕೆ ಹೆಸರುವಾಸಿ (೬)

೧೫. ಚೆಲುವ ನಾರಾಯಣ ಸ್ವಾಮಿ ನೆಲೆಸಿರುವುದಿಲ್ಲಿ (೪)
೧೭. ಮಹಿಷನ ಕೊಂದ ದೇವಿ ಇಲ್ಲಿಯೇ ನೆಲೆಸಿರುವುದು (೫)
೧೯. ನಾಟಕದ ಕಂಪನಿಯ ವೀರಣ್ಣನವರ ಹುಟ್ಟೂರು (೨)
೨೨. ಹಕ್ಕಿಗಳನ್ನು ನೋಡಬೇಕೇ? ಈ ತಿಟ್ಟಿಗೆ ಬನ್ನಿ (೫)
೨೩. ಶ್ರೀಕಂಠೇಶ್ವರನ ದೇವಸ್ಥಾನಕ್ಕಾಗಿ ಈ ಊರು ಬಹಳ ಪ್ರಸಿದ್ದಿ (೫)
೨೪. ಮಲ್ಲಿಗೆ, ವಿಳೆದೆಲೆ, ಅರಮನೆ, ದಸರ ಹೀಗೆ ಎಲ್ಲವೂ ಈ ಊರಿನ ವಿಶೇಷ (೩)
೨೫. ’ನಮ್ಮೂರ ಮಂದಾರ ಹೂವೆ’ ಚಿತ್ರದ ಯಸಸ್ಸಿಗೆ ಈ ತಾಣದ ಪಾಲೂ ಇದೆ (೨)
೨೬. ಜೋಗದಂತೆ ಇದೂ ಒಂದು ’ಅಬ್ಬಾ’ ಎನ್ನುವಂತಹ ಜಲಪಾತ (೪)
೨೮. ಉತ್ತರಕನ್ನಡದ ಈ ಊರು ಮಾರಿಕಾಂಬ ದೇವಸ್ಥಾನ ಹಾಗೂ ಸುಪಾರಿಗೆ ಹೆಸರುವಾಸಿ (೩)
೨೯. ಚಿಕ್ಕಮಗಳೂರ ಬಳಿ ಇರುವ ಈ ಊರಿನಲ್ಲಿ ಮಧ್ವಾಚಾರ್ಯರ ಬಂಡೆ ಇದೆ (೩)
೩೦. ಅರಬ್ಬಿ ಸಮುದ್ರದ ದಡದಲ್ಲಿರುವ ಭಟ್ಕಳದಲ್ಲಿನ ಈ ಊರಿನಲ್ಲಿ ಏಷ್ಯಾದಲ್ಲೇ ಎತ್ತರವಿರುವ ಶಿವ ವಿಗ್ರಹವಿರುವ ದೇವಸ್ಥಾನವಿದೆ (೫)
೩೨. ಹೆಸರಾಂತ ಅಭಯಾರಣ್ಯ. ಇದೇ ಹೆಸರಿನ ಚಲನಚಿತ್ರವೂ ಬಂದಿತ್ತು (೫)
೩೫. ರಂಗಯ್ಯನ ಊರು. ಈ ಹೆಸರಿನಿಂದ ಆರಂಭವಾಗುವ ನೀತಿಯುಕ್ತ ಹಾಡು ’ಶರಪಂಜರ’ದಲ್ಲಿದೆ (೪)
೩೬. ಚಿಕ್ಕಮಗಳೂರು ಬಳಿ ಇರುವ ಈ ಊರಿನಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿದ್ದಾಳೆ (೪)
೩೭. ಕರ್ನಾಟಕದ ಪ್ರಮುಖ ನದಿಯ ಉಗಮ ಸ್ಥಾನ (೫)
೩೯. ಮೂರು ಸಕ್ಕರೆ ಕಾರ್ಖಾನೆ ಇರುವ ಊರು (೨)
೪೦. ಕನ್ನಡ ಕುಲಪುರೋಹಿತರಾದ ವೆಂಕಟರಾಯರು ಈ ಊರಿನವರು (೩)
೪೧. ಒಂದೇ ಕಲ್ಲಿನಲ್ಲಿ ಕೆತ್ತಿರುವ ಎತ್ತರದ ಬಾಹುಬಲಿಯ ವಿಗ್ರಹ ಇರುವು ಊರು (೭)

ಮೇಲಿಂದ-ಕೆಳಕ್ಕೆ

೨. ಅಭಯಾರಣ್ಯಗಳಲ್ಲಿ ಒಂದು (೪)
೪. ಬಹಮನಿ ಸುಲ್ತಾನರ ಕಾಲದಲ್ಲಿ ಹೈದರಾಬಾದಿನಲ್ಲಿದ್ದ ಈ ಜಿಲ್ಲೆ ನಂತರ ಕರ್ನಾಟಕಕ್ಕೆ ಸೇರಿತು (೩)
೫. ಆದಿ ಶಂಕರಾಚಾರ್ಯರು ತಪಸ್ಸು ಮಾಡಿದ ಈ ಬೆಟ್ಟ ಟ್ರೆಕ್ಕಿಂಗಿಗೆ ಬಹಳ ಸೂಕ್ತ (೪)
೬. ಶ್ರೀ ಮಂಜುನಾಥೇಶ್ವರ ನೆಲೆಸಿರುವ ಈ ಊರು ಜಗತ್ ಪ್ರಸಿದ್ದಿ ಹೊಂದಿದೆ (೪)
೯. ಗೋಲಗುಮ್ಮಟ, ಜುಮ್ಮಾ-ಮಸೀದಿ ಎಂದೊಡನೆ ನೆನಪಿಗೆ ಬರುವ ಸ್ಥಳ (೪)
೧೦. ಈ ಊರಿನ ’ವಡೆ’ಗೆ ಬಹಳ ಹೆಸರುವಾಸಿ (೩)
೧೧. ಚಿಕ್ಕಮಗಳೂರಿನಲ್ಲಿರುವ ಈ ಗುಂಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯ ತಂಗುದಾಣವಾಗಿತ್ತು (೫)
೧೩. ಕಿತ್ತಳೆ, ಕಾರಿಯಪ್ಪ, ತಿಮ್ಮಯ್ಯ ಎಂದ ಕೂಡಲೆ ಈ ಜಿಲ್ಲೆ ನೆನಪಿಗೆ ಬರುತ್ತದೆ (೩)
೧೪. ಮಹಾಜನ್ ವರದಿ ಈ ಜಿಲ್ಲೆಯ ಬಗೆಗಿನ ವಿವಾದ ಕುರಿತು (೪)
೧೫. ಆಡಿಗೂ ಇದಕ್ಕು ಏನು ಸಂಬಂಧವೋ ಗೊತ್ತಿಲ್ಲ ಆದರೆ ಇಲ್ಲಿ ಜಲಕ್ರೀಡೆ ಆಡಲು ಬಲು ಮಜ (೪)
೧೬. ಚಿನ್ನದ ಗಣಿ ಇರುವ ಊರು (೩)
೧೮. ಹಾಳು ಕೊಂಪೆಯಾಗಿದ್ದ ಈ ದೇವಸ್ಥಾನ ಸಮುಚ್ಚಯವನ್ನು ಈಚೆಗೆ ಜೀರ್ಣೋದ್ಧಾರ ಮಾಡಲಾಯಿತು (೫)
೨೦. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ದಿ ಹೊಂದಿರುವ ರಾಜಧಾನಿ ನಗರ (೪)
೨೧. ಶ್ರೀ ರಂಗನಾಥನ ದೇವಸ್ಥಾನ, ಟಿಪ್ಪೂ ಸುಲ್ತಾನನ ಕೋಟೆ ಇವುಗಳಿಗೆ ಪ್ರಸಿದ್ದಿಯಾದ ನಗರ (೬)
೨೩. ಲಾರ್ಡ್ ಕಾರ್ನವಾಲಿಸ್ ಹಾಗೊ ಟಿಪ್ಪೂ ನಡುವಿನ ಮೊದಲ ಯುದ್ದಕ್ಕೆ ಹೆಸರುವಾಸಿಯಾದ ಸ್ಥಳ ಹಾಗೆಯೇ ಟಿಪ್ಪೂ ಡ್ರಾಪ್ ಎಂಬ ಸ್ಥಳಕ್ಕೂ. (೪)
೨೭. ಶಿವಮೊಗ್ಗ ಜಿಲ್ಲೆ, ಜೋಗ ಜಲಪಾತ ಇರುವ ಊರು (೩)
೨೮. ಗಗನಚುಕ್ಕಿ ಮತ್ತು ಭರಚುಕ್ಕಿ ಎಂದರೆ ಯಾವ ಸಮುದ್ರ ನೆನಪಾಗುತ್ತೆ? (೬)
೨೯. ತಾಯಿ ದುರ್ಗಾ ಪರಮೇಶ್ವರಿ ನೆಲೆಸಿರುವಳಿಲ್ಲಿ (೩)
೩೧. ಹೊಯ್ಸಳರ ಕಾಲದ ನಕ್ಷತ್ರಾಕಾರದ ದೇವಸ್ಥಾನಗಳಿಗೆ ಒಂದು ಉದಾಹರಣೆ. (೬)
೩೩. ದಾವಣಗೆರೆ ಜಿಲ್ಲೆಯ ಒಂದು ನಗರ. ಇಲ್ಲಿ ಹೊನ್ನು ಸಿಗುವುದೇ? (೩)
೩೪. ಮಲಪ್ರಭ ದಂಡೆಯ ಮೇಲಿರುವ ಈ ಊರಿನಲ್ಲಿ ೧೨೫ಕ್ಕೂ ಹೆಚ್ಚು ದೇವಸ್ಥಾನಗಳಿವೆ (೩)
೩೭. ಎಲ್ಲೆಲ್ಲೂ ಮರಳು.. ಹನ್ನೆರಡು ವರ್ಷಕ್ಕೊಮ್ಮೆ ಪಂಚಲಿಂಗ ದರ್ಶನ ! (೪)
೩೮. ಕರಿಕಲ್ಲು ಎಂಬ ಹೆಸರಿನ ಈ ಊರು ಉಡುಪಿಯ ಬಳಿ ಇದೆ (೩)
೩೯. ಬಂದರು ಹೊಂದಿರುವ ನಗರ (೪)
೪೦. ಸೂರ್ಯಾಸ್ತ ನೋಡ ಬೇಕೇ? ಇಲ್ಲಿ ಬನ್ನಿ (೩)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

೧. ಗಂಧದ ಗುಡಿ ೨. ಬಂಡಿಪಪುರ
೩. ಪಟ್ಟದಕಲ್ಲು ೪. ಬಳ್ಳಾರಿ
೭. ಮೂಡಬಿದ್ರೆ ೫. ಕೊಡಚಾದ್ರಿ
೮. ಶಿಶುನಾಳ ೬. ಧರ್ಮಸ್ಥಳ
೧೦ ೯. ಬಿಜಾಪುರ
೧೨. ರಾಮನಗರ ೧೦, ಮದ್ದೂರು
೧೩ ಕೊಕ್ಕರೆ ಬೆಳ್ಳೂರು ೧೧, ಕೆಮ್ಮಣ್ಣುಗುಂಡಿ
೧೫ ಮೇಲುಕೋಟೆ ೧೩. ಕೊಡಗು
೧೭. ಚಾಮುಂಡಿ ಬೆಟ್ಟ ೧೪. ಬೆಳಗಾವಿ
೧೯. ಗುಬ್ಬಿ ೧೫. ಮೇಕೆದಾಟು
೨೨. ರಂಗನತಿಟ್ಟು ೧೬. ಕೋಲಾರ
೨೩ ನಂಜನಗೂಡು ೧೮.
೨೪. ಮೈಸೂರು ೨೦, ಬೆಂಗಳೂರು
೨೬. ೨೧. ಶ್ರೀರಂಗಪಟ್ಟಣ
೨೮. ಶಿರಸಿ ೨೩. ನಂದಿಬೆಟ್ಟ
೨೯. ೨೭.
೩೦.ಮುರಡೇಶ್ವರ ೨೮. ಶಿವನಸಮುದ್ರ
೩೨. ನಾಗರಹೊಳೆ ೨೯. ಕಟೀಲು
೩೫. ಬಿಳಿಗಿರಿ ೩೧. ತ್ರೀಕೂಟೇಶ್ವರ
೩೬. ಹೊರನಾಡು ೩೩. ಹೊನ್ನವ್ರ
೩೭. ಭಾಗಮಂಡಲ ೩೪. ಐಹೊಳೆ
೩೯. ಮಂಡ್ಯ ೩೭. ತಲಕಾಡು
೪೦. ಆಲೂರು ೩೮. ಮಂಚಾಲ
೪೧. ಶ್ರವಣಬೆಳಗೊಳ ೩೯. ಮಂಗಳೂರು
೪೦. ಆಗುಂಬೆ

೧೦ ಮಂಗಳೂರು ಬಜಿಗೆ ಪ್ರಸಿದ್ದಿ ವಡೆಗೆ ಮದ್ದೂರು ಹೆಸರುವಾಸಿ.
೨೭ ಇನ್ನು ಜೋಗ ಜಲಪಾತ ಇರೋದು ಜೋಗದಲ್ಲಿ ಅದರ ತಾಲೂಕ್ ಮಾತ್ರ ಸಾಗರ.
ಹೊನ್ನಾವರ ಇರೋದು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊನ್ನಳ್ಳಿ ಸೇರೋದು ದಾವಣಗೆರೆಗೆ.

ಎಡದಿಂದ ಬಲಕ್ಕೆ

೧) ಗಂಧದಗುಡಿ
೩) ಹಳೇಬೀಡು
೮) ಶಿಶುನಾಳ
೭) ಮೂಡಬಿದ್ರಿ
೧೨) ರಾಮನಗರ
೧೫) ಮೇಲುಕೋಟೆ
೧೭) ಚಾಮುಂಡಿಬೆಟ್ಟ
೧೯) ಗುಬ್ಬಿ
೨೨) ರಂಗನತಿಟ್ಟು
೨೪) ಮೈಸೂರು
೨೮) ಸಿರಸಿ
೩೦) ಮುರುಡೇಶ್ವರ
೩೫) ಬಿಳಿಗಿರಿ
೩೬) ಹೊರನಾಡು
೩೭) ತಲಕಾವೇರಿ
೩೯) ಮಂಡ್ಯ
೪೧) ಶ್ರವಣ ಬೆಳಗೊಳ
೪೦) ಆಲೂರು
ಮೇಲಿನಿಂದ ಕೆಳಗೆ
೪) ಬೀದರ
೫) ಕೊಡಚಾದ್ರಿ
೯) ಬಿಜಾಪುರ
೧೦) ಕೆಮ್ಮಣ್ಣು ಗುಂಡಿ
೧೩) ಕೊಡಗು
‘೧೫) ಮೇಕೆದಾಟು
೧೬) ಕೋಲಾರ
೧೮) ಪಟ್ಟದಕಲ್ಲು
೨೦) ಬೆಂಗಳೂರು
೨೧) ಶ್ರೀರಂಗಪಟ್ಟಣ
೨೩) ನಂದಿಬೆಟ್ಟ
೨೭) ಸಾಗರ
೨೮) ಶಿವನ ಸಮುದ್ರ
೨೯) ಕಟೀಲು
೩೭೦ ತಲಕಾಡು
೪೦) ಆಗುಂಬೆ
೩೯) ಮಂಗಳೂರು

ಶ್ಯಾಮಲ

ಧನ್ಯವಾದಗಳು ನಟರಾಜ್ ಅವರೇ...ಸರಿಯಾಗಿದೆ ... ಅಬ್ಬೇಫಾಲ್ಸ್’ ನ ಕೊನೇ ಅಕ್ಷರಕ್ಕೆ ಸರಿಹೊಂದಿಸಲು ನಂದಿಬೆಟ್ಟವನ್ನು ’ನಂದಿಹಿಲ್ಸ್’ ಮಾಡಬೇಕಾಯ್ತು !

’ಮೌನ’ ಅವರ ಹಲವಾರು ಉತ್ತರಗಳಿಗೆ ನನ್ನ ಸಮ್ಮತಿ ಇದೆ :-)
ಅವರ ಕೆಲವು ಉತ್ತರಗಳನ್ನು ಶಶಾಂಕ್ ಹಾಗೂ ನಟರಾಜ್ ಅವರುಗಳು ಸರಿಪಡಿಸಿದ್ದಾರೆ
ಶ್ಯಾಮಲ ಅವರು ಬರೆದಿರುವ ಉತ್ತರಗಳು ಸರಿಯಾಗೇ ಇದ್ದರೂ ಕೆಲವನ್ನು ಬಿಟ್ಟಿದ್ದಾರೆ

ಉತ್ತರಗಳನ್ನು ನೀಡಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು ....

ಸರಿ ಉತ್ತರಗಳು ಹೀಗಿವೆ:

ಉತ್ತರಗಳು:

ಎಡದಿಂದ-ಬಲಕ್ಕೆ

೧. ಗಂಧದಗುಡಿ
೩. ಹಳೆಬೀಡು
೭. ಮೂಡಬಿದ್ರಿ
೮. ಶಿಶುನಾಳ
೧೦. ಮರವಂತೆ
೧೨. ರಾಮನಗರ
೧೩. ಕೊಕ್ಕರೆಬೆಳ್ಳೂರು
೧೫. ಮೇಲುಕೋಟೆ
೧೭. ಚಾಮುಂಡಿಬೆಟ್ಟ
೧೯. ಗುಬ್ಬಿ
೨೨. ರಂಗನತಿಟ್ಟು
೨೩. ನಂಜನಗೂಡು
೨೪. ಮೈಸೂರು
೨೫. ಯಾಣ
೨೬. ಅಬ್ಬೆ ಫ಼ಾಲ್ಸ್
೨೮. ಶಿರಸಿ
೨೯. ಕಳಸ
೩೦. ಮುರುಡೇಶ್ವರ
೩೨. ನಾಗರಹೊಳೆ
೩೫. ಬಿಳಿಗಿರಿ
೩೬. ಹೊರನಾಡು
೩೭. ತಲಕಾವೇರಿ
೩೯. ಮಂಡ್ಯ
೪೦. ಆಲೂರು
೪೧. ಶ್ರವಣಬೆಳಗೊಳ

ಮೇಲಿಂದ-ಕೆಳಕ್ಕೆ

೨. ಬಂಡಿಪುರ
೪. ಬೀದರ್
೫. ಕೊಡಚಾದ್ರಿ
೬. ಧರ್ಮಸ್ಥಳ
೯. ಬಿಜಾಪುರ
೧೦. ಮದ್ದೂರು
೧೧. ಕೆಮ್ಮಣ್ಣುಗುಂಡಿ
೧೩. ಕೊಡಗು
೧೪. ಬೆಳಗಾವಿ
೧೫. ಮೇಕೆದಾಟು
೧೬. ಕೋಲಾರ
೧೮. ಪಟ್ಟದಕಲ್ಲು
೨೦. ಬೆಂಗಳೂರು
೨೧. ಶ್ರೀರಂಗಪಟ್ಟಣ
೨೩. ನಂದಿಹಿಲ್ಲ್ಸ್
೨೭. ಸಾಗರ
೨೮. ಶಿವನಸಮುದ್ರ
೨೯. ಕಟೀಲು
೩೧. ಸೋಮನಾಥಪುರ
೩೩. ಹೊನ್ನಾಳಿ
೩೪. ಐಹೊಳೆ
೩೭. ತಲಕಾಡು
೩೮. ಕಾರ್ಕಳ
೩೯. ಮಂಗಳೂರು
೪೦. ಆಗುಂಬೆ

ಶ್ರೀನಾಥ್, "ಪದಬಂಧ ಮೂಲಕ ಕರ್ನಾಟಕ ದರ್ಶನ" ಬಹಳ ಒಳ್ಳೆಯ ಕಾನ್ಸೆಪ್ಟ್. ನಿಮಗೆ ಮೆಚ್ಚುಗೆ+ಧನ್ಯವಾದ+ಅಭಿನಂದನೆ.

ಮುಂದಿನ ಸಲ ಪದಬಂಧ ವಿನ್ಯಾಸ ಮಾಡುವಾಗ ಅದರ ಗ್ರಿಡ್ ಸಮಮಿತಿಯಲ್ಲಿರುವಂತೆ (symmetrical ಆಗಿರುವಂತೆ) ನೋಡಿಕೊಳ್ಳಿ. ಪತ್ರಿಕೆಗಳಲ್ಲಿ ಬರುವ ಪದಬಂಧಗಳ ಗ್ರಿಡ್ ಅನ್ನು ನೀವು ಗಮನಿಸಿದ್ದೇ ಆದರೆ ಅದು symmetrical ಆಗಿರುತ್ತದೆ! ಅದೇನೂ ಜಾಗತಿಕ ನಿಯಮ ಅಂತಲ್ಲ, ಆದರೆ ನಿಮ್ಮ ಚಾಲೆಂಜ್‌ ಇನ್ನಷ್ಟು ’ಹರಿತ’ಗೊಳಿಸುವ ದೃಷ್ಟಿಯಿಂದ ಬರೆದೆ :-)

ಪ್ರೋತ್ಸಾಹಕ್ಕೆ ಹಾಗೂ ಸಲಹೆಗೆ ಅನಂತ ಧನ್ಯವಾದಗಳು ... ಕರ್ನಾಟಕ ದರ್ಶನದಂತೆಯೇ ’ಸಾಹಿತ್ಯ ಲೋಕದ ದಿಗ್ಗಜರ’ ಕುರಿತಾದ ಪದಬಂಧ ತಯಾರಿಸಿಬಿಟ್ಟಿದ್ದೇನೆ ... ಅದರ ನಂತರ ಬರುವ ಪದಬಂಧಗಳಲ್ಲಿ ನಿಮ್ಮ ಸಲಹೆ ಅಳವಡಿಸಿಕೊಳ್ಳುತ್ತೇನೆ ..

ಶ್ರೀನಾಥ್ ಅವರೇ,
ಇವೊಂದು ಪ್ರಯತ್ನಕ್ಕೆ ನಿಮಗೆ ಅಪಾರವಾದ ಅಭಿನಂದನೆಗಳು. ನಿಮ್ಮ ಪದಬಂಧ ಬರೆಯುವ ಹವ್ಯಾಸ ಹೀಗೆ ಸಾಗಲಿ.
ನಿಮ್ಮ ಸುನಿಲ್ ಮಲ್ಲೇನಹಳ್ಳಿ

ನಮಸ್ಕಾರ ಶ್ರೀನಾಥರವರಿಗೆ

ನಿಮ್ಮ ಕರ್ನಾಟಕ ದರ್ಶನದ ಪದಬಂಧ ತುಂಬಾ ಚೆನ್ನಾಗಿತ್ತು. ನನ್ನದೊಂದು ಪುಟ್ಟ ಸಲಹೆ ಇದೆ, ತಪ್ಪು ತಿಳಿಯಬೇಡಿ. ಚಿಕ್ಕ ಚಿಕ್ಕ ಪದಬಂಧಗಳನ್ನು ಕೊಡಿ... ಉದಾ... ೧ ರಿಂದ ೧೦ ಅಥವಾ ೧೫ ರತನಕ ಇರುವಂತೆ... ನಮಗೆ ಬಿಡಿಸಲೂ ಸುಲಭವಾಗತ್ತೆ ಮತ್ತು ಆಸಕ್ತಿಯೂ ಹೆಚ್ಚಾಗತ್ತೆ... ತುಂಬಾ ದೊಡ್ಡದಾಗಿಬಿಟ್ಟರೆ..... ಎಲ್ಲೋ ಕೊಂಡಿ ಕಳಚಿದಂತೆ ಅನ್ನಿಸತ್ತೆ... ಚಿಕ್ಕ ಚಿಕ್ಕದಾದರೆ, ಪದಬಂಧಗಳ ಸಂಖ್ಯೆಯೂ ಹೆಚ್ಚಾಗತ್ತೆ ಆನ್ಸತ್ತೆ....... ನಿವೇನು ಹೇಳುತ್ತೀರಿ ?

ಶ್ಯಾಮಲ

ಧನ್ಯವಾದಗಳು ಶ್ಯಾಮಲ ಅವರೇ ....
ಇಲ್ಲಿ ತಪ್ಪು ತಿಳಿದುಕೊಳ್ಳುವಂತ ಪ್ರಮೇಯವೇ ಇಲ್ಲ ... ನಿಮ್ಮ ಸಲಹೆಯನ್ನು ಪಾಲಿಸುತ್ತೇನೆ...
ಈ ಪದಬಂಧವನ್ನು ’ಕರ್ನಾಟಕ ರಾಜ್ಯೋತ್ಸವದ ಸುವರ್ಣ ಮಹೋತ್ಸವ’ದ ಅಂಗವಾಗಿ ರಚಿಸಿದ್ದು ... ಎಡದಿಂದ ಬಲಕ್ಕೆ, ಮೇಲಿಂದ ಕೆಳಕ್ಕೆ ತಲಾ ಇಪ್ಪತ್ತೈದು ಪ್ರಶ್ನೆಗಳು !!!