ನಾನು ಓದಿದ ಪುಸ್ತಕ-ಮತಸಂತೆ-ಕುರಿತು

To prevent automated spam submissions leave this field empty.

ಸಾಮಾನ್ಯವಾಗಿ ರಾಜಕಾರಣಿಯು ಅದೆಷ್ಟೋ ಸಿಹಿ ಕಹಿಗಳನ್ನು ಅನುಭವಿಸಿದ್ದರೂ ಮೂಖನೊಬ್ಬನ ಭಾವನೆಗಳಂತೆ ಸಮಾಜದ ಅರಿವಿಗೆ ವ್ಯಕ್ತವಾಗದೆ ಅಳಿದುಹೊಗುತ್ತದೆ. ಆದರೆ ಸಂಸದರಾದ H.ವಿಶ್ವನಾಥರು ಬರೆದ ಪುಸ್ತಕ ಹಳ್ಳಿ ಹಕ್ಕಿಯ ಹಾಡು ತದನಂತರ ಮತಸಂತೆ. ನನಗೆ ಪ್ರಸ್ತುತವಾಗಿರುವುದು ಚುನಾವಣೆಗಳ ಅವಲೋಕನ ಮಾಡಿರುವ ಮತಸಂತೆ. ಸಾಮಾಜಿಕ ಚಿಂತನೆಗಳಿಗೆ ಸರಳ,ದಿಟ್ಟ ಪದಗಳಿಂದ ಜೀವ ತುಂಬಿರುವ ಲೇಖಕರು ಅವರ ಮಾತುಗಳಿಗೆ ಮಸಾಲೆ ಹಚ್ಚದೆ ಮೂಲ ಉದ್ದೇಶವನ್ನು ಸಹಜವಾಗಿ ತೆರೆದಿಟ್ಟಿದ್ದಾರೆ.ಅದಕ್ಕಾಗಿ ಅವರು ಉತ್ತಮ ಶಿರ್ಷೀಕೆಗಳೊಂದಿಗೆ ನಿರೂಪಣೆ ಮಾಡಿದ್ದಾರೆ. ಇವುಗಳೆಲ್ಲಾ
ಓದುಗನ ಮನಸ್ಸನ್ನು ಸೆಳೆಯುತ್ತವೆ. ಆ ರೀತಿ ಓದಿದ ಓದುಗನಾಗಿ ಅವುಗಳನ್ನು ನನ್ನ ಚುಟುಕಗಳಲ್ಲಿ ಹೊಮ್ಮಿಸಿದ್ದೇನೆ. ಅವರೇ ಹೇಳುವಂತೆ ದಿವಂಗತ ಡಿ.ದೇವರಾಜ ಅರಸ್ ಅವರ ಕಣ್ಣ ಮುಂದಿನ ಯುವಕನೊಬ್ಬ ಇಂದು ಅವರ ಮುಂದಿನ ಯುವಕರಿಗೆ ಹಿಂದಿನ ನೇತಾರರನ್ನು ನೆನೆಪಿಸಿಕೊಡುತ್ತಾ ಮುಂದಿನ ಹಾದಿಯಲ್ಲಿ ಯುವಕರನ್ನು ಚಿಂತನೆಗೆ ಹಚ್ಚಿದ್ದಾರೆ.

ಚಿಂತೆ

ಚುನಾವಣೆಗಳ ಅಂತೆ ಕಂತೆ ಬೊಂತೆ
ಎಲ್ಲವ ಓದಿಸುತ್ತೆ ಪುಸ್ತಕ ಮತಸಂತೆ
ಅಲ್ಲದೆ ಮತದಾರನಿಗೆ ತರಿಸುತ್ತೆ ಚಿಂತೆ
ಯೋಚಿಸಬೇಕು ಅನ್ನಿಸುತ್ತೆ ವಿಶ್ವನಾಥರಂತೆ.

ತಂಗಳನ್ನ.

ಈ ತನಕ ಪ್ರಜಾಪ್ರಭುತ್ವದ ಪಟ್ಟದರಸಿ
ಕಳುಹಿಸವ್ವಳೆ ಅನೇಕರನೇಕರ ಹರಸಿ
ಅನೇಕರು ಪ್ರಭುತ್ವಕ್ಕೆ ಭ್ರಷ್ಟತೆಯ ಬೆರಸಿ
ತಂಗಳನ್ನವ ಮಾಡಿದ್ದಾರೆ ದೇಶವ ಕಲಸಿ.

ಜಾತಿಯ ಬೇರು.

ಚುನಾವಣೆಯಲ್ಲಿ ಗೆಲ್ಲುವ ಕುದುರೆ ಯಾರು?
ಇದ್ದರಾಯಿತು ಆ ಜಾತಿಯ ಮತದಾರರು
ಎಂದು ಆಯ್ಕೆ ಮಾಡಿ ಅಭ್ಯರ್ಥಿಯ ಹೆಸರು
ಬುಡಮೇಲು ಆಗುತ್ತಿದೆ ಪ್ರಜಾಪ್ರಭುತ್ವದ ಬೇರು.

ಸೋಲಿನ ನಗು.

ಪಕ್ಷದವರೇ ಹಿಡಿದು ಎಳೆಯುತ್ತಾರೆ ಮುಕ್ಕಾಲು
ಏನೂ ಮಾಡದು ಹಣ ಹೆಣ್ಣಲ್ಲದೆ ಆಲ್ಕೋಹಾಲು
ನಗುನಗುತ್ತಾ ಅಪ್ಪಿಕೊಳ್ಳಬೇಕು ಅವನು ಸೋಲು
ಅಭ್ಯರ್ಥಿಯಾದವನಿಗೆ ಇರುತ್ತೆ ಇಂತಹ ಸವಾಲು.

ಮದುವೆ ಮುಜುಗರ.

ಚುನಾವಣೆ ಲೋಕದಲ್ಲಿ ಸೋಜಿಗ ಪಕ್ಷಾಂತರ
ಸಾಲಾವಳಿ ಇಲ್ಲದೆ ಮದುವಾಗುತ್ತೆ ಏನಂತೀರ?
ಒಬ್ಬನ ಮಡದಿ ಮತ್ತೊಬ್ಬನ ಸಂಗಾತಿ ಆನಂತರ
ಅವರಿಗೇನಿಲ್ಲ,ನೋಡುವ ಸಮಾಜಕ್ಕೆ ಮುಜುಗರ.

ಚುನಾವಣೆ ಚೆಲುವೆ.

ಚೆಲುವೆಗೆಂದೂ ಇರುತ್ತೆ ಉತ್ತಮವಾದ ಚರಿತ್ರೆ
ಸುರುವಾದ ಮೇಲೆ ಅವಳ ಜೀವನದ ಯಾತ್ರೆ
ಜನ ಹೇಳುತ್ತಾರೆ,ಸಾಕಪ್ಪ ಅಂತ ಅವಳು ಸತ್ರೆ
ಆಗ ಅವಳ ಕೆಡಿಸಿ,ಈಗ ಬಂದದ್ದು ಏನು ಅತ್ರೆ.

ಮುಖಭಂಗ.

ಪಂಚೇಂದ್ರಿಯ ನಂಬದ ಅಭ್ಯರ್ಥಿಗೆ ಪಂಚಾಂಗ
ಇಂತವರಿಗೆ ಊನ ಪ್ರತಿಯೊಂದು ಅಂಗಾಂಗ
ಅವರ ಪಕ್ಷದವರಿಗೆ ಅವನೇ ಸುರ ಸುಂದರಾಂಗ
ಇಂತಹವನಿಗೆ ಮತ್ತೇನು ಕಟ್ಟಿಟ್ಟ ಬುತ್ತಿ ಮುಖಭಂಗ.

ಹೀಗಿರಬೇಕು.

ಸಹಿಸಬೇಕು ಬೇಯಿಸುತ್ತಿದ್ದರೂ ಚುನಾವಣೆ ಹಭೆ
ಹಾಜರಾಗಬೇಕು ಮತೀಯರ,ಕಳ್ಳರ ಸುಳ್ಳರ ಸಭೆ
ಹಲ್ಲು ತೆರೆದಿರಬೇಕು ಸಮಾಜಕ್ಕೆ ಮುತ್ತಿದ್ದರೂ ಕ್ಷೋಭೆ
ಹೀಗಿರಬೇಕು ಕಣದಲ್ಲಿರೋ ಅಭ್ಯರ್ಥಿಯಾದವನ ಪ್ರತಿಭೆ.

ಇಂಕು ಮಂಕು.

ಚುನಾವಣೆಗೆ ಮುನ್ನವೇ ಮತದಾರನ ಬೆರಳಿಗೆ ಇಂಕು
ನೋಡಿದ ಕಣ್ಣುಗಳು ತಮಗೆ ತಾವೇ ಆದಾವು ಮಂಕು
ಪ್ರಜಾಪ್ರಭುತ್ವಕ್ಕೆ ಮಾರಕವಾದ ಈ ನವೀನ ಸೋಂಕು
ನೆನೆಪಿಸುತ್ತಿದೆ ಭಾರತೀಯರ ಬುದ್ಧಿ ಎಂದಿಗೂ ಡೊಂಕು.

ತೂಕ ಸೂತಕ.

ಅಳತೆಯ ತೂಕಕ್ಕೆ ಹಾಕಲು ಮಾತ್ರ ಅಭ್ಯರ್ಥಿಯ ತೂಕ
ಚುನಾವಣೆಗೆ ನಿಲ್ಲುವವನ ಬಳಿ ಇರಬೇಕಾದ್ದು ಧನ ಕನಕ
ಇವುಗಳಿಲ್ಲದೆ ನಿಂತರೆ ಅವನು ಕೇವಲ ದಾರಿ ಹೋಕ
ಮಾತ್ರವಲ್ಲ ಚುನಾವಣೆ ಬಳಿಕ ಅವನ ಮನೆಯಲ್ಲಿ ಸೂತಕ.

ಜಾತಿ ಭೀತಿ.

ಅಭ್ಯರ್ಥಿಯ ನಿಲ್ಲಿಸಿ ಗೆಲ್ಲಿಸಲು ಆಧಾರವೆಂದರೆ ಜಾತಿ
ಜಾತಿ ಇಲ್ಲವೆಂಬುದು ಭಾಷಣಗಳಲ್ಲಿ ಮಾತ್ರವೇ ನೀತಿ
ಜಾತಿ ವಿಷಯ ಎತ್ತಬೇಡಿ ಅಂದ ಅಭ್ಯರ್ಥಿಗೆ ಫಜೀತಿ
ಅಂತೂ ಚುನಾವಣೆಗಳಲ್ಲಿ ಜಾತಿ ಅನ್ನೋದೇ ಭೀತಿ.

ಅಭ್ಯರ್ಥಿಯ ಅಜ್ಙಾನ.

ಚುನಾಣೆಗೆ ನಿಂತವನಿಗೆ ಇವೆ ಹಲವಾರು ಶಕುನ
ಕೆಲವು ಆದಾಗ ಅಭ್ಯರ್ಥಿಯ ಜೀವನವೇ ಪಾವನ
ಕೆಲವು ಮಾಡುತ್ತವೆ ಅವನನ್ನು ಬಾಡಿದ ಹೂವಾನ
ಅನು ದಿನವೂ ಅವನ ಸಂಗಾತಿ ಶಕುನದ ಅಜ್ಙಾನ.

ಸಂಸದರಾಗಿ ಅವರ ಆದ್ಯತಾ ವಿಷಯಗಳಾಗಿ ಎರಡು ನೋಟಗಳು.

ನಾಡಿ ನೋಡಿ.

ಸರಕಾರೀ ಕಛೇರಿಗಳ ಎಲ್ಲಾದರೂ ಸುತ್ತಾಡಿ
ಕುರ್ಚಿಯಲ್ಲಿ ಕುಳುತಿರುವವ ಅವ ಅನ್ನಾಡಿ
ಲಂಚ ಲಂಚಾ ಅನ್ನುತ್ತಿರುತ್ತದೆ ಅವನ ನಾಡಿ
ನಾಡಿಗೆ ನೋಟನ್ನು ಅಂಟಿಸಿ ಆಮೇಲೆ ನೋಡಿ!.

ಕಾವೇರಿ ಯಾರಿಗಾಗಿ?.

ಕೊಡಗಿನಲ್ಲಿ ವರ್ಷಧಾರೆಯು ಸುರಿಯಿತು
ಕನ್ನಂಬಾಡಿ ಕಟ್ಟೆಯು ತುಂಬಿ ಹರಿಯುತು
ನೀರು ನೀರೆಂದು ತಮಿಳುನಾಡು ಕೆಮ್ಮಿತು
ಮರುದಿನವೇ ಕನ್ನಂಬಾಡಿಯ ಒಡಲು ಬತ್ತಿತು.

ರಚನೆ: ಶಿವಶಶಿ.

ಲೇಖನ ವರ್ಗ (Category):