ಮುಂಬೈನ ಕರ್ನಾಟಕ ಸಂಘದ " ಅಮೃತೋತ್ಸವ ಸಮಾರೋಪೋತ್ಸವ ” !

To prevent automated spam submissions leave this field empty.

ಮುಂಬೈ ನಗರದ ಪ್ರತಿಷ್ಹಿತ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾಗಿರುವ, " ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-ಪುರಸ್ಕೃತ ಕರ್ನಾಟಕ ಸಂಘ, " ದ ’ಅಮೃತೋತ್ಸವ ’ ದ ’ವರ್ಷವಿಡೀ ಹಮ್ಮಿಕೊಂಡ, ಸರಣಿ ಕಾರ್ಯಕ್ರಮ ’ ದಲ್ಲಿನ ’ಸಮಾರೋಪ ಸಮಾರಂಭೋತ್ಸವ ,” ಇದೇ, ೨೦೦೯ ರ ಜೂನ್, ೩ ರಂದು, ಸಂಘದ ಭವ್ಯ-ಹವಾನಿಯಂತ್ರಿತ, ಡಾ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಸಾಯಂಕಾಲ, ೭ ಘಂಟೆಗೆ ನೆರೆವೇರಿತು. ಮೊದಲು ವೀಣಾ ಪ್ರಭು, ಮತ್ತು ಸುಶೀಲಾದೇವಾಡಿಗರಿಂದ ದೇವತಾ ಪ್ರಾರ್ಥನೆಯೊಂದಿಗೆ ಶುರುವಾಯಿತು. ನಂತರ, ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದವರು, ನಗರದ ಪ್ರಖ್ಯಾತ ದಿನಪತ್ರಿಕೆ, ’ಕರ್ನಾಟಕ ಮಲ್ಲ ’ ದ ಪ್ರಧಾನ-ಸಂಪಾದಕ, ಶ್ರೀ. ಚಂದ್ರಶೇಖರ ಪಾಲತ್ತಾಡಿಯವರು. ತದನಂತರ, ಸಭೆಯನ್ನುದ್ದೇಶಿಸಿ ಮಾತನಾಡಿದ ಪಾಲತ್ತಾಡಿಯವರು, ಕರ್ನಾಟಕ ಸಂಘ ಹಮ್ಮಿಕೊಂಡಿರುವ ಅನೇಕಾನೇಕ ವೈವಿಧ್ಯಪೂರ್ಣ ಕಾರ್ಯಕ್ರಮಗಳು, ಹಾಗೂ ಅವೆಲ್ಲವನ್ನು ಅಧ್ಯಕ್ಷ, ಶ್ರೀ. ಕೋರಿಯವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಆಡಳಿತವರ್ಗವನ್ನು ಹೊಂದಿರುವುದನ್ನು ಶ್ಲಾಘಿಸಿದರು. ಕರ್ನಾಟಕ ಸಂಘವನ್ನು ಕಟ್ಟಿ-ಬೆಳಸಿದ ಹಿರಿಯರು, ( ವರದರಾಜ್ಯ ಆದ್ಯ, ಎ. ಎಸ್. ಕೆ. ರಾವ್ ಬಲ್ಲಾಲ್, ಸನದಿ ಮುಂತಾದವರು) ಕರ್ನಾಟಕದ, ಜನಸಮೂಹವನ್ನು ಒಂದಾಗಿಸಿ, ಅವರಲ್ಲಿ ಬೇರುಬಿಟ್ಟ ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಯಕ್ಷಗಾನದಸಂಸ್ಕೃತಿಗಳನ್ನು ಬೆಳೆಸುವ ನಿಟ್ಟಿನಲ್ಲಿ ದುಡಿದಿದ್ದರು. ಮುಂಬೈ ನಲ್ಲಿ ಇನ್ನೂ ಹಲವಾರು ಕನ್ನಡಪರ ಚಟುವಟಿಕೆಗಳನ್ನು ರೂಪಿಸಿ-ಬೆಳಸುವಂತಹ ಸಂಘ-ಸಂಸ್ಥೆಗಳಿವೆ. ಕರ್ನಾಟಕ ಸಂಘ, ಅವುಗಳೊಡನೆ ಬೆರೆತು, ಒಟ್ಟಾಗಿ ಒಂದುವೇದಿಕೆಯನ್ನು ನಿರ್ಮಿಸಿ, ಸಶಕ್ತವಾಗಿ ಬೆಳೆಯಬೇಕು. ಅದಕ್ಕಾಗಿ ಸುಮಾರು ೧೫ ಲಕ್ಷ-ಕನ್ನಡಿಗರಿರುವ ಮುಂಬೈನಲ್ಲಿ ಕೊನೆಯಪಕ್ಷ ೨೫ ಸಾವಿರ ಸದಸ್ಯರಾದರೂ ಇರಬೇಕಾಗಿತ್ತು. ಇದು ಕನ್ನಡಿಗರ ಸಾಂಘಿಕ-ಶಕ್ತಿಯ ಸಂಕೇತವಾಗಿ ನಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಲ್ಲಿ ಸಹಕಾರಿಯಾಗುತ್ತವೆ, ಎನ್ನುವ ಮಾತನ್ನು ಒತ್ತಿಹೇಳಿದರು.

ಅರ್ಥಗಂಟೆ ತಡವಾಗಿ ಸಮಾರಂಭ ಶುರುವಾದರೂ, ಬರಬರುತ್ತಾ, ಸಭೆಯಲ್ಲಿ ಕಲಾರಸಿಕರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಿದರು.

ಕಾರ್ಯಕ್ರಮಕ್ಕೆ ಕಳೆಕಟ್ಟುವಂತೆ, ಡಾ. ಸುನಿತಾಶೆಟ್ಟಿಯವರು ಉಪಸ್ತಿತರಿದ್ದು, ತಮ್ಮ ಹೆಸರಿನಲ್ಲಿ ಒಂದು ದತ್ತಿದೇಣಿಗೆಯನ್ನು ನೀಡಿ, ಅದು ಪ್ರಸಕ್ತ ವರ್ಷದ, ಕನ್ನಡದ ಅತ್ಯಂತ ಪ್ರತಿಭಾನ್ವಿತ ಲೇಖಕ, ಅಥವ ಕವಿಗೆ ಪ್ರಶಸ್ತಿಪೂರ್ವಕವಾಗಿ ಸಂದಾಯವಾಗಬೇಕೆಂದು ಕಳಕಳಿಯಿಂದ ಸಭೆಯಲ್ಲಿ ಮನವಿ ಮಾಡಿಕೊಂಡರು. ’ ಸಾಹಿತ್ಯಸಿರಿ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ' ಯ ಹಣವನ್ನು ಹಾಗೆಯೇ ಜೋಪಾನವಾಗಿ ಇರಿಸಿದ್ದು, ಆ ಹಣವನ್ನು ಕರ್ನಾಟಕಸಂಘಕ್ಕೆ ದತ್ತಿನಿಧಿ ರೂಪದಲ್ಲಿ ನೀಡಿದ್ದಾರೆ. ೭೬ ರ ಹರೆಯದ ಡಾ. ಸುನೀತಾಶೆಟ್ಟಿಯವರು, ಮಾಡಿದ ನಿರ್ಣಯ, ಕರ್ನಾಟಕ ಸಂಘದ ೭೫ ನೇ ವರ್ಷದಂದು ! " ಇದೊಂದು ನನ್ನ ಸುಯೋಗ, ಮತ್ತು ಯೋಗಾಯೋಗೆವೇ ಸರಿ," ಯೆಂದು ನಗಾಡಿದರು. ಪ್ರಶಸ್ತಿವಿತರಣೆಯ ರೂಪುರೇಷೆಗಳು ಮತ್ತು ನಿಯಮಗಳನ್ನು, ರೂಪಿಸಬೇಕು. ಒಟ್ಟಿನಲ್ಲಿ ಹಣ ಸದುಪಯೋಗವಾಗುವುದು ತಮ್ಮ ಮುಖ್ಯೋದ್ದೇಶ್ಯಗಳಲ್ಲೊಂದೆಂದು ಡಾ. ಸುನೀತಾಶೆಟ್ಟಿಯವರು ನುಡಿದರು.

ಅಧ್ಯಕ್ಷ ಕೋರಿಯವರು, ಅದಕ್ಕೆ ಸ್ಪಂದಿಸಿ, ಖಂಡಿತವಾಗಿಯೂ ಈ ಕೆಲಸವನ್ನು ತಮ್ಮ ’ಕರ್ನಾಟಕ ಸಂಘದ ಸಲಹಾಮಂಡಲಿ ’ ಯ ಸಹಕಾರದಿಂದ ನೆರೆವೇರಿಸುವ ಭರವಸೆಯನ್ನು ಡಾ. ಸುನಿತಾ ಶೆಟ್ಟಿಯವರಿಗೆ ನೀಡಿದರು. ಮನೋಹರ ಎಂ. ಕೋರಿಯವರು. ಸದಸ್ಯರ ಸಹಕಾರದಿಂದ ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು. ಮುಂದೆಯೂ ಇದೇ ಸಹಕಾರವನ್ನು ಅಪೇಕ್ಷಿಸುವುದಾಗಿ ಆಶಿಸಿ, ಕಾರ್ಯಕ್ರಮಗಳ ಗುಣಮಟ್ಟವನ್ನು ಇನ್ನೂ ಹೆಚ್ಚಿಸುವ ಪ್ರಯತ್ನವಿರುವುದಾಗಿ ನುಡಿದರು.

ಶ್ರೀನಿವಾಸ ಜೋಕಟ್ಟೆ ಮತ್ತು, ಅವಿನಾಷ ಕಾಮತ್, ವೇದಿಕೆಯಮೇಲೆ ಉಪಸ್ತಿತರಿದ್ದ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ನಗರದ ಸುಪ್ರಸಿದ್ಧ ಹಿರಿಯ ಕನ್ನಡ ಚೇತನ, ಶ್ರೀ ಸೀತಾರಾಂ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಶಾಲುಹೊದಿಸಿ ಗೌರವಿಸಲಾಯಿತು. ಕೊನೆಯಲ್ಲಿ ೧ ಗಂಟೆ, ೨೦ ನಿಮಿಷಗಳ ಒಂದು ಉತ್ತಮ ನಾಟಕ, ’ಹೂ,’ ಪ್ರದರ್ಶಿಸಲಾಯಿತು. ಸಮಾಜ ಸೇವಕ 'ನಮ ತುಳುವೆರ್ ಕಲಾಸಂಘಟನೆ,' ಮುದ್ರಾಡಿಯವರಿಂದ, ಗಿರೀಶ್ ಕಾರ್ನಾಡ್ ಬರೆದ ಕಥೆಯ ಆಧಾರದ ಮೇಲೆ, ಶ್ರೀ ಸಿ. ಬಸವಲಿಂಗಯ್ಯ ನಿರ್ದೇಶಿಸಿದ ಈ ನಾಟಕಪ್ರದರ್ಶನ, ಎಲ್ಲರ ಮನಸೆಳೆಯಿತು. ಕರ್ನಾಟಕ ಅಕಾಡಮಿ ಸದಸ್ಯ, ಸುಕುಮಾರ ಮೋಹನ್, ಗೌರವ ಅತಿಧಿಯಾಗಿ ಆಗಮಿಸಿದ್ದರು. 'ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ' ಸುಕುಮಾರ ಮೋಹನ್ ಮುದ್ರಾಡಿ ಸಂಘದ ಕಾರ್ಯ-ಚಟುವಟಿಕೆಗಳನ್ನು ಕೊಂಡಾಡಿ, ನಾಟಕ ಕ್ಷೇತ್ರದಲ್ಲಿ ಮುಂಬೈ ನ ಆದ್ಯತೆಗಳು, ಹಾಗೂ ಆಶೋತ್ತರಗಳನ್ನು ಗುರುತಿಸಿ ಹೇಳಿದರೆ, ತಾವು ಖಂಡಿತವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.

ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದ, ಭರತ್ ಕುಮಾರ್ ಪೊಲಿಪುರವರು ಬರುವ ಹೊತ್ತಿಗೆ ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿತ್ತು. ಆದರೂ ಅವರು ನೇರವಾಗಿ ರೈಲ್ವೆ ಸ್ಟೇಶನ್ ನಿಂದ ಸಂಘಕ್ಕೆ ಆಗಮಿಸಿದರು.

ಗೌ. ಕಾರ್ಯದರ್ಶಿ, ಓಂದಾಸ ಕಣ್ಣಂಗಾರ್ ರವರು ಸಮರ್ಥವಾಗಿ ಸಂಜೆಯ ಎಲ್ಲ ಕಾರ್ಯಕ್ರಮವನ್ನು ಸಂಚಾಲನೆಮಾಡಿ, ಸಂಘದ ಚಟುವಟಿಕೆಗಳನ್ನು ಮತ್ತು ಮುಂದಿನ ರವಿವಾರದವರೆಗಿನ ಎಲ್ಲಾ ಕಾರ್ಯಕ್ರಮಗಳ ವಿವರಣೆಗಳನ್ನು ಸವಿಸ್ತಾರವಾಗಿ ಸಭಿಕರಿಗೆ, ತಿಳಿಸಿದರು. ( ಜೂನ್ ೩ ಬುಧವಾರ ದಿಂದ ಜೂನ್ ೭ ರವಿವಾರದ ತನಕ) ಸಂಘದ ಗೌ. ಕೋಶಾಧಿಕಾರಿ, ಬಿ. ಜಿ. ನಾಯಕ್ ರವರ ವಂದನಾರ್ಪಣೆಯೊಂದಿಗೆ ದಿನದ ಕಾರ್ಯಕ್ರಮ, ಮುಕ್ತಾಯವಾಯಿತು.

-ಚಿತ್ರ-ವೆಂ.

ಲೇಖನ ವರ್ಗ (Category):