ಸತ್ತು –ಶಾಶ್ವತ ಬದುಕಿರುವವರು; ಬದುಕಿಯೂ-ದಿನಃಪ್ರತಿ ಸಾಯುತ್ತಿರುವವರು

To prevent automated spam submissions leave this field empty.

ಇನ್ನು ಕೆಲವೇ ನಿಮಿಷಗಳಲ್ಲಿ ಸತ್ಯಕ್ಕಾಗಿ ಸಾಯಲು ಹಸನ್ಮುಖಿಯಾಗಿ ನಿಂತಿರುವ ತತ್ವಙಾನಿ ಸಾಕ್ರೆಟಿಸ್ ಒಂದು ಕಡೆ. ರಾಜಪ್ರಭುತ್ವದ ವಿರುದ್ಧ ಸಿದ್ಧಾಂತ ಪ್ರತಿಪಾದಿಸಿದ ಸಾಕ್ರೆಟಿಸ್ ಗೆ ರಾಜದ್ರೋಹದ ಆಪಾದನೆ ಮೇರೆಗೆ ಸಾರ್ವಜನಿಕವಾಗಿ ’ಹೆಮಲಾಕ್” ಎಂಬ ವಿಷಪ್ರಾಸನ ಮಾಡಿಸಿ ಹತ್ಯೆಗೆಯ್ಯುವ ಉದ್ಧೇಶದಿಂದ ಮಂತ್ರಿಮಾಧಿಂಗರು, ಸೈನಿಕರೊಂದಿಗೆ ಸನ್ನಧರಾಗಿರುವ ಗ್ರೀಕ್ ನ ದೊರೆ ಮತ್ತೊಂದು ಕಡೆ. ರಾಜಪರಿವಾರದವರು ಮತ್ತು ಸಾಕ್ರೆಟಿಸನ ಆಪ್ತರು ತನ್ನ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ಪ್ರಾಣ ಉಳಿಸಿಕೊಳ್ಳುವಂತೆ ಸಾಕ್ರೆಟಿಸನಿಗೆ ಒತ್ತಾಯ ಆದರೆ ಸತ್ಯದ ಪ್ರತಿಪಾಧನೆಗಾಗಿ ಸಾಯಲು ಸಿದ್ಧನಿರುವ ಸಾಕ್ರೆಟಿಸನಿಂದ ಬಂದ ಉತ್ತರವೆಂದರೆ:-

“ಸಾಕ್ರೆಟಿಸನ ಪ್ರಾಣ ಸತ್ಯಕ್ಕಿಂತಲೂ ಮಹತ್ವದ್ದಲ್ಲ, ಸತ್ಯಕ್ಕೋಷ್ಕರ ಸಾಕ್ರೆಟಿಸ್ ಸಾಯಲು ಸಿದ್ಧ, ಆದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಅಸತ್ಯವನ್ನೆಂದಿಗೂ ಒಪ್ಪಿಕೊಳ್ಳಲಾರೆ” ಎಂಬುದಾಗಿ ವಿಷಪ್ರಾಸನದಿಂದ ಪ್ರಾಣವನ್ನೇ ಬಲಿಕೊಡಲು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ ಸತ್ಯಕ್ಕಾಗಿ ಸಾಯುತ್ತಾನೆ. ಜೀವನದ ಒಂದೇ ಒಂದು ಸಂಧಭ೯ದಲ್ಲಿಯೂ ಅಸತ್ಯ ನುಡಿಯದೆ ಸತ್ಯಕ್ಕೋಷ್ಕರ ಪ್ರಾಣವನ್ನೇ ಬಲಿಕೊಟ್ಟ ಸಾಕ್ರೆಟಿಸ್ ಎಲ್ಲಿ ! ಸುಳ್ಳಿನಿಂದಲೇ ಬದುಕುತ್ತಿರುವ ಇಂದಿನ ಜನರೆಲ್ಲಿ ಎತ್ತಂದೆತ್ತಣ ಸಂಬಂಧ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಲ್ರೂ ಸಾಕ್ರಟೀಸ್ ಆಗೋಕ್ ಸಾಧ್ಯವಿಲ್ಲ.ಆಗುವ ಅವಶ್ಯಕತೆಯೂ ಇಲ್ಲ ಎಂದು ನನ್ನ ಅನಿಸಿಕೆ.. ಸುಳ್ಳೇ ಹೇಳದವರು ಬಹಳ ಒಳ್ಳೆಯವರು, ಒಂದು ಸುಳ್ಳು ಹೇಳಿದರೆ ಕೆಟ್ಟವರು ಅನ್ನಲಾಗದು..

ಒಂದು ಕತೆಯಲ್ಲಿ ಹೀಗೆ ಇದೆ ಒಬ್ಬ ನಡುರಾತ್ರಿ ದೂರದ ಊರಿನಿಂದ ತನ್ನ ಮನೆಗೆ ಬರುತ್ತಾನೆ ಊಟ ಮಾಡಿರುವುದಿಲ್ಲ..ಹಸಿವೆ ಆಗ್ತಿರುತ್ತೆ ಆದರು ಮನೆ ಯಲ್ಲಿ ತಾಯಿ ಊಟ ಆಯಿತಾ ಅಂತ ಕೇಳುವಾಗ ಹೌದು ಮಾಡಿ ಬಂದೆ ಅನ್ನುತಾನೆ.. ಯಾಕಂದರೆ ತಾಯಿಗೆ ವಯಸ್ಸಾಗಿದೆ ಮನೆಲಿ ಮಾಡಿರೊದು ಏನು ಇಲ್ಲ ಅಂತ ಗೊತಿರುತ್ತದೆ ಅವನಿಗೆ. ಆ ಸುಳ್ಳಿನಿಂದ ತಾಯಿ ಮನಸ್ಸಿಗೆ ಸಮದಾನವಗಲಿ ಅಂತ ಸುಳ್ಳು ಹೇಳ್ತಾನೆ... ಇಂತಾ ಸುಳ್ಳು ಸತ್ಯ ಕಿಂತ ಉತ್ತಮ ಅಂತ ನನ್ನ ಬಾವನೆ.

ವಿನಯ್, ರೋಶನ್,
ಸುಳ್ಳಿನ ವ್ಯಾಖ್ಯಾನ ವಾಗಬೇಕೆ? ಯಾರಿಗೂ ಅನ್ಯಾಯವಾಗದ,ಆದರೆ ಅದೇ ಮಾತಿನಿಂದ ಒಬ್ಬರಿಗೆ ಹಿತವಾಗುವಂತಿದ್ದರೆ ಅದನ್ನು ಸುಳ್ಳು ಎಂದು ಏಕೆ ಕರೆಯಬೇಕು? ಅದು ಸುಳ್ಳಲ್ಲ. ಅಮ್ಮನಿಗೆ ಕಷ್ಟವಾಗುವುದು ಬೇಡವೆಂಬ ಸದಾಶಯದಿಂದ ಊಟವಾಗದಿದ್ದರೂ ಆಯ್ತೆಂದು ಹೇಳಿದ ಮಾತಿನಿಂದ ಬೇರೆ ಯಾರಿಗೂ ನೋವಿಲ್ಲ, ನಷ್ಟವಿಲ್ಲ, ಅನ್ಯಾಯವಾಗಿಲ್ಲ. ಆದ್ದರಿಂದ ಅದು ಸುಳ್ಳೇ ಅಲ್ಲ.

ಒಂದು ಸುಳ್ಳು ಹೇಳಿದವರು ಕೆಟ್ಟವರಲ್ಲ, ಎಂಬ ಹೊಸ ವ್ಯಾಖ್ಯಾನ ಸರಿ ಕಾಣದು, ಒಂದೇ ಮಾತಿನಿಂದ ಅಪಾರ ಹಾನಿಯಾಗಬಹುದು.

ಶ್ರೀಧರ್ ರವರೆ,
>>>ಅಮ್ಮನಿಗೆ ಕಷ್ಟವಾಗುವುದು ಬೇಡವೆಂಬ ಸದಾಶಯದಿಂದ ಊಟವಾಗದಿದ್ದರೂ ಆಯ್ತೆಂದು ಹೇಳಿದ ಮಾತಿನಿಂದ ಬೇರೆ ಯಾರಿಗೂ ನೋವಿಲ್ಲ, ನಷ್ಟವಿಲ್ಲ, ಅನ್ಯಾಯವಾಗಿಲ್ಲ. ಆದ್ದರಿಂದ ಅದು ಸುಳ್ಳೇ ಅಲ್ಲ.
-- ಇದನ್ನು ಒಪ್ಪಲಾರೆ. ಸುಳ್ಳು ಸುಳ್ಳೇ..
>>ಒಂದು ಸುಳ್ಳು ಹೇಳಿದವರು ಕೆಟ್ಟವರಲ್ಲ, ಎಂಬ ಹೊಸ ವ್ಯಾಖ್ಯಾನ ಸರಿ ಕಾಣದು, ಒಂದೇ ಮಾತಿನಿಂದ ಅಪಾರ ಹಾನಿಯಾಗಬಹುದು.
-- "ಸುಳ್ಳು ಹೇಳಿದವರು ಕೆಟ್ಟವರಲ್ಲ" ಅನ್ನೋ ವ್ಯಾಖ್ಯಾನ ಕೊಟ್ಟಿರಲಿಲ್ಲ. ನನ್ನ ನಂಬಿಕೆಯಲ್ಲಿ ಒಬ್ಬ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂಬುದನ್ನು ಅವನು ಹೇಳುವ ಸುಳ್ಳುಗಳ ಸಂಖ್ಯೆಗಳ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ ಎಂದೆ ಅಷ್ಟೆ. ತುಂಬಾ ಕಮ್ಮಿ ಮಾತಾಡುವವರು ಕಮ್ಮಿ ಸುಳ್ಳು ಹೇಳುತ್ತಾರೆ. ಹಾಗಂತ ಅವರೆಲ್ಲ ಒಳ್ಳೆಯೋರಂತೇನಲ್ಲ. "ಸುಳ್ಳು ಹೇಳೋರು ಒಳ್ಳೆಯೋರು" ಅಂತ ನಾನು ಹೇಳ್ತಾ ಇಲ್ಲ ಎಂಬುದನ್ನು ಗಮನಿಸಿ..

ಸುಳ್ಳು ಸುಳ್ಳೆ ...ಸತ್ಯ ಸತ್ಯವೆ ಆದರೆ ಒಂದು ಸತ್ಯವನ್ನು ಹೇಳುವುದರಿಂದ ಯಾವುದೆ ರೀತಿಯ ಅನಾಹುತವಾಗುವಂತಿದ್ದರೆ ಅಂತ ಸತ್ಯವನ್ನು ಹೇಳದಿರುವುದೆ ಒಳಿತು...ಹಾಗೆ ಒಳಿತಾಗುವುದಾದರೆ ಒಂದನ್ನು ಸುಳ್ಳನು ಹೇಳುವುದು ತಪ್ಪಾಗಲಾರದು......