ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು

To prevent automated spam submissions leave this field empty.

ನಾನೇನು ಮಾಡಿದ್ದೆ ,.,.
ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು , ನೀವಲ್ಲವೇ ಸೃಷ್ಟಿಸಿದ್ದು ಈ ಅಂತರ ,
ನನ್ನದಲ್ಲದ ಯಾಂತ್ರಿಕ ದೋಣಿಯನ್ನು ನೀವಲ್ಲವೇ ತಂದ್ದಿದ್ದು , ನಾನಾದರೋ
ನೀವು ಬರಿ ಪ್ರೀತಿಯಲ್ಲಿ ಜೀಕಿದರೆ ಸಾಕು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯುತ್ತೇನೆ ,.
ಏನು ಮಾಡಲಿ ನೀವೇ ನನ್ನ ದೂರ ಮಾಡಿದಿರಿ,
ನನಗೆ ಇಂದನ ಬೇಕಾಗಿಲ್ಲ - ವಿದ್ಯುತ್ ಬೇಕಾಗಿಲ್ಲ ,.
ಬೇಕಾಗಿರುವುದು ನಿಮ್ಮ ಪ್ರೀತಿಯಾ ಜೀಕು - ಅಷ್ಟೆ ಸಾಕು.
ಬೇಸರಿಸಬೇಡಿ !
ಇಂದನ ಮುಗಿಯಿತೋ , ಯಂತ್ರ ತಡೆಯೋ !
ಬನ್ನಿ ಪ್ರೀತಿಯಿಂದ ಜೀಕಿರಿ ನಿಮ್ಮೆಲ್ಲರನ್ನು ಸುರಕ್ಷಿತ ಸ್ತಳ ಸೇರಿಸುತ್ತೇನೆ
ನನಗೆ ಬೇಕಾಗಿರುದು ನಿಮ್ಮ ಪ್ರೀತಿ , ನಾನು ನಿಮ್ಮೊಂದಿಗಿರಲು ಸಂತೋಷ ಪಡುತ್ತೇನೆ .,
ದೂರ ಮಾಡದಿರಿ ನನ್ನ .,.,.,.,.,.,

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈಗ ಎಲ್ಲವೂ ಯಾಂತ್ರಿಕ - ಈ ಮನುಜನೂ ಯಾಂತ್ರಿಕ - ಮನುಜನ ಜೀವನವೂ ಯಾಂತ್ರಿಕ
ಮನುಜ ಮನುಜನಾಗೇ ಉಳಿದಿಲ್ಲ - ಇನ್ನವನ ಪ್ರೀತಿಯ ಜೀಕುಗಳೆಲ್ಲಿರಬೇಕು ಹೇಳು
ಮುಂಜಾನೆ ಮನೆಯೊಳಗೇ ನಡೆದಂತೆ ನಟಿಸುತ್ತಾನೆ "ವಿದ್ಯುತ್ ವಾಕರ್" ನ ಸಹಾಯದಿಂದ
ಕಛೇರಿಗೆ ಹೋಗಲೂ ವಾಹನ ಮತ್ತೆ ಮರಳಲೂ ವಾಹನವೇ ಗತಿ ಅವನಿಗೆ...
ಮೆಟ್ಟಲೇರಿಳಿಯುವ ತ್ರಾಣವಿಲ್ಲ ಅದಕೂ "ಲಿಫ್ಟ್"ಗಳ ಮೊರೆಹೋಗುತ್ತಾನೆ...
ತಾನು ತಾನಾಗಿ ಏನೂ ಮಾಡಲಾರ - ಇನ್ನು ನಿನಗೆ ಜೀಕುಗಳನೆಲ್ಲಿ ನೀಡಿಯಾನು ಹೇಳು ನೀನು...
ಆತನಲ್ಲಿ ಜೀಕುಗಳಿಲ್ಲ - ಇದ್ದರೆ ನಾಲ್ಕಾರು "ಸೀಕು"ಗಳಿದ್ದಾವು ಕೇಳು ನೀನು...
ಆತ ಆತನಿಂದಲೇ ಇದ್ದಾನೆ ದೂರ - ಇನ್ನು ನಿನ್ನನ್ನೆಲ್ಲಿ ಹತ್ತಿರಕ್ಕೆ ಸೇರಿಸಿಕೊಂಡಾನು ಹೇಳು ನೀನು...
:)

ಆತ್ಮೀಯ ರಾಕೇಶ್
ಯಾರು ಯಾರನ್ನು ದೂರ ಮಾಡದಿರಲಿ,
ಪ್ರೀತಿ ವಿಶ್ವಾಸವನ್ನು ಅಳೆಯದಿರಲಿ,
ನಾನು ನೀನು ಎಂಬುದ ನೋಡದಿರಲಿ,
ದ್ವೇಷ ನಮ್ಮನ್ನ ಆಳದಿರಲಿ,
ಜೀವನದ ನಂದಾ ದೀಪವನ್ನು ಆರಿಸದಿರಲಿ,
ಸಂತೋಷದ ಕಾರಣ ಕೇಳದಿರಲಿ,
ಮೊದಲ ಮಳೆಯ ಮಣ್ಣಿನ ಸುವಾಸನೆಯ ಮರೆಯದಿರಲಿ .,,.,.,.,.,..,.,,.,.,.

ನಿಮ್ಮ ಕಲ್ಪನಾ ಲಹರಿ ಚೆನ್ನಾಗಿದೆ.
ಧನ್ಯವಾದಗಳು.
ಆದರೆ ನಿಮ್ಮ ಎಲ್ಲ ಲೇಖನಗಳಲ್ಲೂ >>,.,.,..,,.,.<< ಬಳಸುತ್ತಿರಲ್ಲಾ ಏನದರ ವಿಶೇಷತೆ ?
ಇತ್ಯಾದಿ ಎಂಬರ್ಥವೇ ?

ಆತ್ಮೀಯ ಅಂಬಿಕ ರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ,
ನೀವು ಹೇಳಿದಂತೆ .,.,.,.,.,.,., ಅರ್ಥ ಸರಿಯಾಗಿದೆ ಕಾರಣ ಯಾವುದೇ ವಿಷಯಗಳಿಗೆ ಅಂತ್ಯವಿಲ್ಲಾ ,
ಇದು ಮನಸ್ಸಿನ ಯೋಚನಾ ಲಹರಿ ಅಲ್ಲವೇ .