ಸಂಗೀತ ಸಂಜೆ

To prevent automated spam submissions leave this field empty.

ಸಂಗೀತ ಸಂಜೆ ಅಡುಗೆ ಮನೆಯಲ್ಲಿ. ಅರ್ಥ ಆಗಲಿಲ್ವಾ? ಒಮ್ಮೆ ಹೆಂಡತಿಯ ರಾಂಗ್ ಸೈಡ್ ಗೆ ರಬ್ ಮಾಡಿ ನೋಡಿ ತಂತಾನೇ ತಿಳಿಯುತ್ತೆ. ಮನೆಯೊಡತಿ ಮಾತನ್ನು veto ಮಾಡಿದರೆ ಶುರು ಸಂಗೀತ ಸಂಜೆ. ಹರಿಕಥೆಯಾದರೂ ಅನ್ನಿ. ಯಾವುದಕ್ಕೂ ಬಂತು ಪಾತ್ರೆಗಳಿಗೆ ತಾಪತ್ರಯ. ಧಡಲ್, ಭಡಲ್, ದಬರಿಯಿಂದ ಬಾಂಡ್ಲಿ ವರೆಗೆ ಎಲ್ಲವಕ್ಕೂ ಮಂಗಳಾರತಿ. ಮಹಿಳೆಯರಿಗೆ ಕೋಪ ವ್ಯಕ್ತಪಡಿಸಲು ಹಲವಾರು ಮಾರ್ಗಗಳು. ಸೌಟು, ಗ್ಯಾಸ್ ಲೈಟರ್. ನಮಗೋ? ಬಡವನ ಕೋಪ ದವಡೆಗೆ ಮೂಲ, ದನಗಳ ಥರ ಕೋಪವನ್ನು ದವಡೆಗಿಟ್ಟು ಅಗಿಯುತ್ತಾ ಕೂರಬೇಕು. ಕೆಲವೊಮ್ಮೆ ಅಡುಗೆ ಮನೆಗೆ ಕಾಲಿಡುವಾಗ ಪಾತ್ರೆ ಪಗಡಿಗಳು ದೀನವಾಗಿ ನನ್ನನ್ನು ನೋಡಿ ಈಗ ಅದ್ಯಾವ ಹೊಸ scandal ತಂದೆಯಪ್ಪಾ ನಮ್ಮ ಜೀವನ ನರಕ ಮಾಡಲು ಎಂದು ಕರುಣೆಯಿಂದ ನೋಡುತ್ತವೆ. ಗ್ರಾನೈಟ್ ಮೇಲೆ ಕುಟ್ಟಿಸಿ ಕೊಂಡು ಮುಖ ಮೂತಿ ಕಳೆದುಕೊಂಡಿರುವ ಪಾತ್ರೆಗಳ ಹಾಗೆಯೇ bachelorhood ಕಳಕೊಂಡ ಗಂಡಿನ ಬಾಳು. customer is always right, ಆದರೆ ಸಂಸಾರದಲ್ಲಿ ಹೆಂಡತಿಯೇ ರೈಟ್. ಕೆಲವೊಮ್ಮೆ customer is always the loser, ಸಂಸಾರ ರಥದಲ್ಲಿ ಇದರ ಪಟ್ಟ ಗಂಡಿಗೆ. ನಮ್ಮ ಹಣೆಯಲ್ಲಿ ಗೆಲುವನ್ನು ಮರೆಯಲು ಮರೆತ ಗಂಡಸಾದ ಆ ಪರಮಾತ್ಮ. ಒಂದು ಗಾದೆ ನೆನಪಿಗೆ ಬಂತು. "ಹೆಣ್ಣು ಎಷ್ಟು ಬೇಗ ಮದುವೆ ಆಗುತ್ತಾಳೋ ಅಷ್ಟು ಲಾಭಕರ ಅವಳಿಗೆ, ಗಂಡು ಎಷ್ಟು ತಡ ಮಾಡುತ್ತಾನೋ ಅಷ್ಟು ಲಾಭಕರ ಅವನಿಗೆ".

ನಿಜಾನಾ?

ಮದುವೆ ಅನ್ನೋ ವಿಶೇಷವೇ ಹೀಗೆ, ಹಳೆ ಗಾದೆಗಳೆಲ್ಲ ನೆನಪಿಗೆ ಬಂದು ಬಿಡುತ್ವೆ.

ಈಗಿನ ಹೊಸ ತಗಾದೆ ಎಂದರೆ wedding anniversary ಮಾಡಬೇಕು. ನಾನು, ಅದು ನಮ್ಮ ಸಂಸ್ಕಾರ ಅಲ್ಲ ಎಂದರೆ ಕುಕ್ಕರ್ ಅನ್ನು ಕೌಂಟರ್ ಟಾಪಿನ ಮೇಲೆ ಕುಕ್ಕಿ ಹೇಳುತ್ತಾಳೆ, ಇಂಗ್ಲಿಷ್ ಹಾಡು ಕೇಳಲು ಸಂಸ್ಕಾರ ಅಡ್ಡ ಬರೋದಿಲ್ಲವಲ್ಲ? facebook ನಲ್ಲಿ ಕಾಲ ಕಳೆಯಲು ಸಂಸ್ಕೃತಿ ತಗಾದೆ ಮಾಡೋದಿಲ್ವಲ್ಲ?
If I lay here
If I just lay here
Would you lie with me
And just forget the world?
ಗುಣುಗುಟ್ಟುತ್ತಾ follow on ಪಡೆದ ಪೆಚ್ಚು ಮೋರೆಯ ನಾಯಕನಂತೆ ಮೆಲ್ಲನೆ ಅಡುಗೆ ಮನೆಯಿಂದ ಹೊರ ನಡೆಯುತ್ತೇನೆ.

ನಿಮ್ಮಲ್ಲಿ ಒಂದು ಸೀಕ್ರೆಟ್: ನಾನೇನಾದರೂ ಮನಸ್ಸು ಬದಲಾಯಿಸಿ ಅನ್ನಿವೆರ್ಸರಿ ಗೆ ಒಪ್ಪಿದ್ದೇ ಆದರೆ ಅವಳ ಗಿಫ್ಟ್ ಏನು ಗೊತ್ತಾ? ಒಂದು ಸುಂದರ ಹಿಡಿಕೆ ಇರುವ ಮೋಹಕ ಸುತ್ತಿಗೆ. ಹೌದ್ರೀ ಸುತ್ತಿಗೆ. ಕೋಪ ಬಂದಾಗ ನ್ಯಾಯಾಧೀಶನ ಥರ ಕುಟ್ಟುತ್ತಾ ಕೂರಲಿ.

ನನ್ನ ಮಗ ಹುಟ್ಟಿದ್ದು ಮೊರಾರ್ಜಿ ದೇಸಾಯಿ ಹುಟ್ಟಿದ ದಿನ. ಫೆಬ್ರವರಿ ೨೯, ೨೦೦೪. ಲೀಪ್ ಇಯರ್ ನಲ್ಲಿ (ಅಧಿಕ ವರ್ಷ ) ಹುಟ್ಟಿದ ನನ್ನ ಮಗನ ಹುಟ್ಟು ಹಬ್ಬ ೪ ವರ್ಷಗಳಿಗೊಮ್ಮೆ. ಅದನ್ನೂ ಸಹ ಆಚರಿಸಲಿಲ್ಲ ನಾನು, ಏಕೆಂದರೆ birth ಡೇ ನಮ್ಮ ಸಂಸ್ಕೃತಿಯಲ್ಲ ಎಂದು. ನನ್ನ ಪ್ರೀತಿಯ ocean of pride, river of joy ಆದ ನನ್ನ ಮಗನಿಗೇ ಇಲ್ಲದ ಆಚರಣೆ ಇವಳಿಗ್ಯಾಕೋ ಏನೋ? ಇದೆಲ್ಲಾ ಅವಳಿಗೆ ಬೇಕಿಲ್ಲ. ಈ ಜೂನ್ ೧೧ ಕ್ಕೆ ಮಾಡಲೇಬೇಕು ಅನ್ನಿವೆರ್ಸರಿ.

ನನ್ನ (ಕಾರಾ) ಗೃಹ ವಾಸದ ಅನ್ನಿವೆರ್ಸರಿ.

ಮಹಿಳೆಯರಿಗೆ ತಮ್ಮ ಇನಿಯಂದಿರು ಅವರ ಹುಟ್ಟು ಹಬ್ಬಕ್ಕೆ, anniversary ಮತ್ತೇನೇನು ವಿಶೇಷ ಸಂದರ್ಭಗಳು ವಕ್ಕರಿಸಿ ಕೊಳ್ಳುತ್ತವೆಯೋ ಅವಕ್ಕೆಲ್ಲ ಕೊಡ ಬೇಕು ಗಿಫ್ಟು, ಆದರೆ ಗಂಡಿಗೆ?. ಅದೇ ಹಳೆ ಬಾಟಾ ಕಂಪೆನಿಯ ಸವೆದ ಎಕ್ಕಡಗಳೋ? ಇದ್ಯಾವ ನ್ಯಾಯವೋ ಏನೋ?

ಒಟ್ಟಿನಲ್ಲಿ ಮದುವೆಯೆಂಬ ಮೋಜಿನ ಮಜಾ ಉಡಾಯಿಸುತ್ತಿರುವುದು ಮಹಿಳೆಯರೇ, ನಾವಲ್ಲ.
ನಮ್ಮ balance ನಲ್ಲಿ ಮದುಮಗ, ಅಳಿಯಂದಿರು ಮನೆ ತೊಳಿಯಂದಿರು ಅಂತ ಒಂದಿಷ್ಟು ಅತ್ತೆ ಮನೆಯಲ್ಲಿ ಉಪಚಾರ ಸಿಗುತ್ತದಲ್ಲ ಅದೇ ಬಾಕಿ. ಅಷ್ಟಕ್ಕೆ ಮತ್ತು ಅಲ್ಲಿಗೇ ಸೀಮಿತ ನಮ್ಮ ಮೋಜು. ಗಂಡಿನ ಮೋಜು.

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಯಾಕ್ರೀ ಇಂಥಹ ಹತಾಶೆ. ಹೆಂಡತಿಯರೂ ಗಿಫ್ಟ್ ಗಳನ್ನು ಕೊಡುತ್ತಾರೆ ಗೊತ್ತಾ ? ಅಷ್ಟಕ್ಕೂ ನಿಮ್ಮ ocean of pride, river of joy ನಿಮ್ಮ ಮಡದಿಯ ಬೆಸ್ಟ್ ಗಿಫ್ಟ್ ನಿಮಗೆ..........

ಶ್ಯಾಮಲ

"ಇದನ್ನು enjoy ಮಾಡಿದ್ದು ಶ್ರೀಮತಿಯವರಿಗೆ ತಿಳಿಯದಿರಲಿ, ಹಂಸಾ ಅವರೇ "
ಹ್ಹಾ ಹ್ಹಾ ಹ್ಹಾ! TOO Late!!!!!!!!!
ಅವರ ಶ್ರೀಮತಿಗೆ ಆಗ್ಲೇ ತಿಳಿದಿದೆ , ( ನಾನೇನ್ ಹೇಳಿಲ್ಲ ಅಂತ ಹೇಳ್ಬೇಕಾಗಿಲ್ಲ ತಾನೇ?)

~ಮೀನಾ (ಚೆನ್ನಾಗಿದೆ ನಿಮ್ಮ ಹಾಸ್ಯ- ನಾವ್ , ಹೆಂಗಸರೂ ಗಂಡಸರ ಮೇಲ್ ಹಾಸ್ಯಮಾಡೋಕ್ ಶುರು ಮಾಡಿದ್ರೇ....... ಹೋಗ್ಲಿ ಬಿಡಿ ಇರಲಿ! aamEl nODkOteeni.)

ಏನ್ ಹಾಸ್ಯ ಮಾಡಿದ್ರೂ pavilion ಗೆ ಮರಳಲೇಬೇಕಲ್ಲ.. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ. ವಂದನೆಗಳು, ಮೀನಾ

<<ಹೌದ್ರೀ ಸುತ್ತಿಗೆ. ಕೋಪ ಬಂದಾಗ ನ್ಯಾಯಾಧೀಶನ ಥರ ಕುಟ್ಟುತ್ತಾ ಕೂರಲಿ.>>

ನೀವೊಂದು ಹೆಲ್ಮೆಟ್ಟೂ ತೊಗೋಳ್ರೀ ಸುತ್ತಿಗೆ ಜೊತೇಗೆ!!

<<ನನ್ನ ಪ್ರೀತಿಯ ocean of pride, river of joy ಆದ ನನ್ನ ಮಗನಿಗೇ ಇಲ್ಲದ ಆಚರಣೆ ಇವಳಿಗ್ಯಾಕೋ ಏನೋ?>>
Danger zonಊಊ!!! ನಿಮಗೆ ನಿಮ್ಮ 'pride of joy' ನ ಕೊಡ್ಲಿಲ್ವೆ ಅದಕ್ಕೆ!

ಶಾಮಲ

ಸ್ತ್ರೀಯರ ಬಗ್ಗೆ ಒಂಚೂರು ಹೇಳಿದ ಮಾತ್ರಕ್ಕೆ ಎಷ್ಟೊಂದು ಕೋಪ ರೀ. ನಿಮ್ solidarity ಯನ್ನು ಮೆಚ್ಚಲೇಬೇಕು. ವಂದನೆಗಳು ಶಾಮಲ

ನಾನೂ ತಮಾಶೆನೇರೀ ಮಾಡಿದ್ದೂ, ಸ್ಮೈಲಿ ಹಾಕೋದ್ ಮರೆತ್ಬಿಟ್ಟೆ ಅಷ್ಟೇ.
<<ಹೌದ್ರೀ ಸುತ್ತಿಗೆ. ಕೋಪ ಬಂದಾಗ ನ್ಯಾಯಾಧೀಶನ ಥರ ಕುಟ್ಟುತ್ತಾ ಕೂರಲಿ.>>
ನೀವೊಂದು ಹೆಲ್ಮೆಟ್ಟೂ ತೊಗೋಳ್ರೀ ಸುತ್ತಿಗೆ ಜೊತೇಗೆ!! (ಒಂದ್ವೇಳೆ ಸುತ್ತಿಗೆ ಗಿಫ್ಟ್ ಬಂದ್ ಕೋಪದಲ್ಲಿ ನಿಮ್ ತಲೆಗೇ ಪ್ರಹಾರ ಮಾಡಿದ್ರೆ, ಸಹಾಯಕ್ಕಾಗ್ಲಿ ಅಂತ ಅಷ್ಟೇ) :-)
But still, ನಾನು ನಿಮ್ ಶ್ರೀಮತಿ ಕಡೇನೆ ;)
ಶಾಮಲ

>>>> ಹೆಂಡತಿಯ ರಾಂಗ್ ಸೈಡ್ ಗೆ ರಬ್ ಮಾಡಿ
ಅದು ಯಾವುದದು ರಾಂಗ್ ಸೈಡು ? ;)

>>>> ದನಗಳ ಥರ ಕೋಪವನ್ನು ದವಡೆಗಿಟ್ಟು ಅಗಿಯುತ್ತಾ ಕೂರಬೇಕು.
ಈ ಉಪಮೆ ಚೆನ್ನಾಗಿದೆ! ಇದೇ ಮೊದಲ ಸಲ ಓದಿದ್ದು! :)

ಪರವಾಗಿಲ್ಲ ನೀವು, ನಮ್ಮ ಸಂಸ್ಕ್ರತಿಯಲ್ಲ ಅಂತ ಹೇಳಿ, ಸಕತ್ ಜಿಪುಣತನ ತೋರ್ಸಿದ್ದೀರ!!! :)

ಇತೀ, ಉಉನಾಶೆ

ರಾಂಗ್ ಸೈಡ್ ಅಂದ್ರೆ ಕೆಣಕುವುದು ಅಂತ ಶೆಟ್ರೇ. ಸಂಸ್ಕೃತಿ ತಂದಿದ್ದು ನಂ ಪಾಕೆಟು ಉಳಿಸೋಕ್ಕೆ ( ನಗು )

ಅವರು ಹೇಳಿದ್ದುಕ್ಕೆಲ್ಲ ಹೂಂ ಅನ್ರಿ ಅವಾಗೆ ಅಡುಗೆ ಮನೆ ಪಾತ್ರೆಗಳೆಲ್ಲ ಚೆನಾಗಿರ್ತಾವೆ....ಅಷ್ಟುಕ್ಕು ನಿಮ್ ಮದುವೆ ವಾರ್ಷಿಕೋತ್ಸವ ವರ್ಷಕ್ಕೆ ಒಂದೆ ಸಲ ಅಲ್ವ ಬರೋದು...............ಅವ್ರು ಖುಷ್ ನೀವು ಖುಷ್ (ಅನ್ಕೋತೀನಿ)
(ಒಟ್ಟಿನಲ್ಲಿ ಮದುವೆಯೆಂಬ ಮೋಜಿನ ಮಜಾ ಉಡಾಯಿಸುತ್ತಿರುವುದು ಮಹಿಳೆಯರೇ)
ನಾವೀನ್ ಮಜಾ ಉಡಾಯ್ಸ್ತಿಲ್ಲ ರೀ....ನಿಮ್ ಪ್ರತಿಯೊಂದು ಬೇಕು ಬೇಡ ನೋಡ್ಕೊಳಲ್ವ......

ಧನ್ಯವಾದಗಳು ಮಾಲತಿ. ಖಂಡಿತವಾಗಿಯೂ ನೋಡ್ಕೊಳ್ತಾ ಇದ್ದೀರಾ ನಮ್ಮ (ಬೇಕು?) ಬೇಡಗಳನ್ನ, (ನಗು)