ಬೇಡುವಿರಾ, buy ಮಾಡುವಿರಾ?

To prevent automated spam submissions leave this field empty.

ಒಹ್ ೮೦೦ ರೂಪಾಯಿ ಕೊಟ್ ತೊಗೊಂಡ್ಯಾ ಈ ಪುಸ್ತ್ಕಾನ? ನಾನ್ ಅಷ್ಟೊಂದು ಕೊಟ್ಟು ಬುಕ್ಸ್ ತೊಗೊಳಲ್ಲ ಕಣಪ್ಪ. ನನ್ನ ಮಿತ್ರ ಅಚ್ಚರಿ ಅಸೂಯೆ ತುಂಬಿದ ಧ್ವನಿಯಲ್ಲಿ ಹೇಳಿದ. ಇದನ್ನು ಕೇಳಿ ನನಗೇನೂ ಅಚ್ಚರಿ ಆಗಲಿಲ್ಲ ಅನ್ನಿ. ಸಾವಿರ ರೂಪಾಯಿ ಕೊಟ್ಟು ಬೂಟು ಕೊಳ್ಳುತ್ತಾರೆ, ನೂರಾರು ಕೊಟ್ಟು T ಶರ್ಟ್ ಕೊಳ್ತಾರೆ ಓದುವ ದಿನ ಪತ್ರಿಕೆ ಮಾತ್ರ ಎರವಲು ಪಡೆದೇ ಆಗಬೇಕು.
"ನನ್ನಲ್ಲಿ ಅತ್ಯುತ್ತಮವಾದ ಪುಸ್ತಕ ಸಂಗ್ರಹವಿದೆ, ಆದರೆ ಅದನ್ನು ನೋಡಲು ಮಾತ್ರ ನನ್ನ ಮಿತ್ರರ ಮನೆಗೆ ಹೋಗುತ್ತೇನೆ" ಹೀಗೆ ಒಬ್ಬ ದಾರ್ಶನಿಕ ಹೇಳಿದ ಮಾತು. ಅಂದರೆ ಅವನ ಪುಸ್ತಕವನ್ನೆಲ್ಲಾ ಅವನ ಮಿತ್ರರು ಎರವಲು ಪಡೆದುಕೊಂಡು ಹೋಗಿ ಮರೆತೋ ಏನೋ ಹಿಂತಿರುಗಿಸದೇ ಅವನೇ ತಮ್ಮ ಮನೆಗೆ ಬರುವಂತೆ ಮಾಡುತ್ತಾರೆ. ಹೆಚ್ಚು ಕಡಿಮೆ ನನ್ನದೂ ಇದೇ ಅನುಭವ. ಈ ಸಲ ಊರಿಗೆ ಬಂದಾಗ ನನ್ನ ಬುಕ್ ಶೆಲ್ಫ್ ಇಥಿಯೋಪಿಯಾದ ಹೊಟ್ಟೆಗಿಲ್ಲದೆ ಬಡಕಲಾದ ವ್ಯಕ್ತಿಯಂತೆ ಮಾರ್ಪಟ್ಟಿದ್ದು ನೋಡಿ ಅಮ್ಮನಲ್ಲಿ ವಿಚಾರಿಸಿದಾಗ ನನ್ನ ಅಸಂಖ್ಯ cousin ಗಳ ಹಿಂಡು ಆಗಾಗ ಬಂದು ಕೊಂಡೊಯ್ಯುವ ವಿಚಾರ ತಿಳಿಯಿತು. ಅಮ್ಮನಿಗೆ ಹೇಳಿದೆ ಇನ್ನೊಂದು ಸಲ ಯಾರಾದರೂ ಬಂದು ಪುಸ್ತಕ ಕೇಳಿದರೆ ನಾನು ಕೊಡಬಾರದು ಅಂತ ಹೇಳಿದ್ದೇನೆ ಅಂತ ಹೇಳಿ, ೩೦೦೦ ಕೊಟ್ಟು ಜೀನ್ಸ್ ಹಾಕಲು ಅವರಿಗೆ ತೊಂದರೆಯಿಲ್ಲ ಪುಸ್ತಕ ಕೊಳ್ಳಲು ಏನು ಧಾಡಿ ಎಂದು (ಕೊಂಡು ಹೋದವರನ್ನು ದಬಾಯಿಸಲು ದಮ್ಮಿಲ್ಲದೆ) ಕೇಳಿ ಎಂದು ಅಮ್ಮನನ್ನು ದಬಾಯಿಸಿದೆ.
ಬಹುಶಃ "wear the old coat, buy the new ಬುಕ್" ಅನ್ನೋ ಮಾತು ಅವರಿಗೆ ಗೊತ್ತಿಲ್ಲ ಅಂತ ಕಾಣುತ್ತೆ.

ದೀರ್ಘ ಪ್ರಯಾಣದ ಸಮಯ ಸಾಕಷ್ಟು ದಿನಪತ್ರಿಕೆ, ವಾರಪತ್ರಿಕೆಗಳನ್ನು ಕೊಂಡು ಬಸ್ ಏರುವುದು ನನ್ನ ವಾಡಿಕೆ. ನಾನು ಓದುವ ಮೊದಲೇ ಸಹ ಪ್ರಯಾಣಿಕರಿಗೆ ಜ್ಞಾನ ದಾಹ ಶುರು. ತಹ ತಹ, ಹೇಗೆ ಕೇಳೋದು. ಎಕ್ಸ್ಕ್ಯೂಸ್ ಮೀ, ಸ್ವಲ್ಪ ಆ magazine ಕೊಡ್ತೀರಾ ಅಂತ ಕೇಳುತ್ತಾರೆ. ಭಿಕ್ಷೆ ಇಂಗ್ಲೀಷ್ನಲ್ಲಿ, ಹೇಗಿದೆ? ಪ್ರಯಾಣ ಮುಗಿದ ಮೇಲೆ ನನ್ನ ಪುಸ್ತಕಗಳ ಭಾರವನ್ನು ಈ ಜ್ಞಾನ ದಾಹಿಗಳು ಇಲ್ಲೇ ಇಲ್ಲ ಎನ್ನುವಷ್ಟು ಹಗುರ ಮಾಡಿ ಬಿಡುತ್ತಾರೆ. ಇನ್ನು city sojourn ವೇಳೆಯ ತಮಾಷೆ ಕೇಳಿ. ದಿನಪತ್ರಿಕೆ ಹಿಡಿದು ಹತ್ತಿದ ಕೂಡಲೇ ತಿಥಿಯ ಅನ್ನ ತಿನ್ನಲು ಕಾಗೆಗಳ ಜಬರ್ದಸ್ತಿ ಪೈಪೋಟಿಯಂತೆ ಎರಗಿ ಬೀಳುತ್ತಾರೆ. ಸ್ವಲ್ಪ ಫ್ರಂಟ್ ಪೇಜ್ ಕೊಡ್ತೀರಾ, ಆ ಮಧ್ಯದ ಪೇಜ್ ಕೊಡಿ, ಸ್ವಲ್ಪ ಪುರವಣಿ ನೋಡುವ... ಕೆಲವೇ ನಿಮಿಷಗಳಲ್ಲಿ post mortem ಗೆ ಹೋದ ಹೆಣ ನೀವು ಹಣ ಕೊಟ್ಟು ಕೊಂಡ ಪತ್ರಿಕೆ.

ಮುಂದುವರಿದ ರಾಷ್ಟ್ರಗಳಲ್ಲಿ ಒಳ್ಳೆಯ pustaka ಪ್ರಕಟವಾದರೆ ಬರೆದವ ಕೋಟ್ಯಾಧೀಶ. ಲಕ್ಷಗಟ್ಟಲೆ ಪ್ರತಿಗಳು ನಾನ ಭಾಷೆಗಳಲ್ಲಿ ಪ್ರಕಟವಾಗಿ ಬಿಡುತ್ತವೆ. ade ನಮ್ಮ ಲೇಖಕರು ಬರೆದವೋ, ಪಾಪ laundry ಕಾಣದ ಆ ಬಟ್ಟೆಯ ಹೆಗಲು ಚೀಲದಲ್ಲಿ ಒಂದಿಷ್ಟು ಪುಸ್ತಕಗಳನ್ನು ತುಂಬಿಕೊಂಡು, ಬೆವರು ಸುರಿಸುತ್ತಾ ಅಲ್ಲಿ ಇಲ್ಲಿ ಅಲೆದು ಮಾರಾಟ ಮಾಡ ಬೇಕು.

ತುಂಬಾ ಹಳೆಯದಾದ ನನ್ನ ದೊಡ್ಡಪ್ಪ ಕೊಟ್ಟ oxford dictionary ನನ್ನ ಮಿತ್ರನೊಬ್ಬ ಕೊಂಡು ಹೋಗಿ ಹಿಂದಿರುಗಿಸಲೇ ಇಲ್ಲ. ನನಗೂ ಗೊತ್ತಿಲ್ಲ ವ್ಯಕ್ತಿ ಯಾರು ಎಂದು, ಪಾಪ ಅವನಿಗೂ ಗೊತ್ತಿಲ್ಲ ಯಾರ ಪುಸ್ತಕ ಎಂದು. ತಿರುಕನಿಗೆ ಗೊತ್ತಿರುತ್ತಾ ಮೊನ್ನೆ ಯಾರ ಮನೆಯ ತಿಂಡಿ ತಿಂದೆ ಎಂದು ಕೇಳಿದರೆ. ಈಗ ಪುಸ್ತಕಗಳ ಮೇಲೆ ನನ್ನ ಸ್ಟಾಂಪ್. ನನ್ನ ಹೆಸರು, ಮತ್ತು ಇದನ್ನು ಬರೆದ 'pleasae return this book NOW" stamp.
ಆ dictionary ಮಾತ್ರ ಅಲ್ಲ, ಅಂಥದೇ ಕೆಲವು ಅಪರೂಪದ ಪುಸ್ತಕಗಳು ಮಾಯವಾದವು. ಕೆಟ್ಟ ಮೇಲೆ ಬಂದಿದ್ದು ಬುದ್ಧಿ .

ಪುಸ್ತಕಗಳನ್ನು ಹಣ ಕೊಟ್ಟು ಕೊಂಡರೆ ಅದನ್ನು ಬರೆದ ಲೇಖಕರಿಗೆ ಒಂದು ಜೀವನ ಮಾರ್ಗ ಮಾತ್ರವಲ್ಲ, ಸಾಹಿತ್ಯ ಬೆಳೆಯುವುದೂ ಕೂಡ . ಬರವಣಿಗೆಯಲ್ಲಿ ಬಳಲುವ ಬಾಧೆ ಇರುವುದಿಲ್ಲ ಎಂದು ಅರಿತ ಉದಯೋನ್ಮುಖ ಲೇಖಕರು ಒಳ್ಳೆ ಕೃತಿಗಳನ್ನು ರಚಿಸಬಹುದು. ಇಲ್ಲದಿದ್ದರೆ ಬರೆಯುವ ಮುನ್ನವೇ ಪ್ರಕಾಶಕನ ದುಃಸ್ವಪ್ನ ಕಂಡು ಅಂಜಿಕೆ ಮನದಲ್ಲಿ ಮನೆ ಮಾಡುತ್ತದೆ.

ನಾನಿರುವ ಅರಬ್ ನಾಡಿನಲ್ಲಿ ಓದುವ ಹವ್ಯಾಸ ಇಲ್ಲ ಎನ್ನುಸ್ವಷ್ಟು ವಿರಳ. ಇದರಿಂದ ಆದದ್ದಾರೂ ಏನು? ಅರಬ್ಬೀ ಭಾಷೆ ಸೊರಗಿತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ದಿನಪತ್ರಿಕೆ ಹಿಡಿದು ಹತ್ತಿದ ಕೂಡಲೇ ತಿಥಿಯ ಅನ್ನ ತಿನ್ನಲು ಕಾಗೆಗಳ ಜಬರ್ದಸ್ತಿ ಪೈಪೋಟಿಯಂತೆ ಎರಗಿ
>>ಬೀಳುತ್ತಾರೆ. ಸ್ವಲ್ಪ ಫ್ರಂಟ್ ಪೇಜ್ ಕೊಡ್ತೀರಾ, ಆ ಮಧ್ಯದ ಪೇಜ್ ಕೊಡಿ, ಸ್ವಲ್ಪ ಪುರವಣಿ ನೋಡುವ... ಕೆಲವೇ
>> ನಿಮಿಷಗಳಲ್ಲಿ post mortem ಗೆ ಹೋದ ಹೆಣ ನೀವು ಹಣ ಕೊಟ್ಟು ಕೊಂಡ ಪತ್ರಿಕೆ.

ಅದಕ್ಕೇ ಅಲ್ವೇ ಗಾದೆ ಇರೋದು - ಪುಸ್ತಕಂ ವನಿತಾ ವಿತ್ತಂ ...

ಖೇದಕಾರಿ, ಆದರೆ ನಿಜ :(

ಪ್ರಿಯ ಅಬ್ದುಲ್ ಅವರೇ,
ಇದು ನನ್ನ ಅನುಭವವೂ ಆಗಿದೆ. ನನ್ನ ಮನದ ಮಾತು ನಿಮ್ಮ ಬರವಣಿಗೆಯಲ್ಲಿ ಪ್ರತಿಧ್ವನಿಸಿದೆ. ನನ್ನ ಅನೇಕ ಪುಸ್ತಕಗಳನ್ನು ತೆಗೆದುಕೊಂದು ಹೋದವರು ಇನ್ನೂ ಹಿಂದಿರುಗಿಸಿಲ್ಲ. ಹೀಗಾಗಿ ತೀರ ಹತ್ತಿರದವರು, ನನಗೆ ಹಿಂದಕ್ಕೆ ಕೊಟ್ಟೆ ಕೊಡುತ್ತಾರೆ ಎಂಬ ನಂಬಿಕೆ ಯಾರಲ್ಲಿ ಇದೆಯೋ ಅವರನ್ನು ಹೊರತು ಬೇರೆ ಯಾರೇ ಕೇಳಿದರೂ ಪುಸ್ತಕ ನಾನು ಯಾರಿಗೂ ಕೊಡುವುದಿಲ್ಲ ಎಂದು ನಿಷ್ಟೂರವಾಗಿ ಹೇಳುವುದನ್ನು ಕಲಿತಿದ್ದೇನೆ. ಹಾಗೆ ಕೊಟ್ಟವರಿಗೂ ಸಹಾ ನೂರೆಂಟು ಸೂಚನೆಗಳು ಕೊಟ್ಟು ಕಳಿಸುತ್ತೇನೆ. ಇಷ್ಟಾದರೂ ಎಷ್ಟೋ ಸಲ ದಾಕ್ಷಣ್ಯಕ್ಕೆ ಕಟ್ಟುಬಿದ್ದು ಕಳದುಕೊಂಡು ಸಂಕಟಪಟ್ಟ ದಿನಗಳಿಗೇನು ಕಡಿಮೆ ಇಲ್ಲ. ಕೊಂಡು ಓದುವ ತಾಕತ್ತು ಇಲ್ಲದಿದ್ದರೆ ಹೋಗಲಿ, ಬೇರೆಯವರ ಪುಸ್ತಕ ತಂದಾಗ ಅದು ಅವರ ಆಸ್ತಿ ಎಂದು ಪರಿಗಣಿಸಿ ಅದನ್ನು ನಿಷ್ಟೆಯಿಂದ ಹಿಂದಿರುಗಿಸುವ ಬುದ್ಧಿಯಾದರೂ ಈ ಜನ ಕಲಿಯಬಾರದೇ ಎಂಬ ಕೊರಗು ನನ್ನದು.
ಶೈಲಾಸ್ವಾಮಿ

ಚೆನ್ನಾಗಿದೆ ಲೇಖನ. ವಸ್ತುನಿಷ್ಟವಾಗಿದೆ. 'ಕೊಟ್ಟೋನು ಕೋಡ೦ಗಿ ಇಸ್ಕೊ೦ಡೋನು ಈರಭದ್ರ' ಅ೦ತಾರೆ, ಹಾಗೆ ನಮ್ತ೦ದೆ ತುಂಬಾ ಸರಿ ಆಗಿದಾರೆ :) ಹಾಗಾಗಿ ನಾನು ಎಚ್ಚೆತ್ತುಕೊ೦ಡಿದೀನಿ. ಬೇಕಿದ್ರೆ ಕೊ೦ಡುಕೊ೦ಡು ಬ೦ದು ಓದ್ತೀನಿ. ಕೊಡೊ, ತಗೊಳ್ಳೋ ಬಿಸಿನೆಸ್ ಇಲ್ವೇ ಇಲ್ಲ!

ಪುಸ್ತಕದ ವಿಚಾರದಲ್ಲಿ ನನಗಾದ ಕಹಿ ಅನುಭವಗಳು ನೆನಪಿಗೆ ಬಂದುವು. ಚೆನ್ನಾಗಿ ಬರೆದಿದ್ದೀರಾ?
ಪುಸ್ತಕಗಳನ್ನು ಎರವಲು ಪಡಕೊಂಡವರನ್ನು ತುಚ್ಛೀಕರಿಸದಿರಿ. :)

ಅಶೋಕರ ಮಾತೇ ನನ್ನದೂನೂ :) ಯಾಕಂದ್ರೆ ನಾನಂತೂ ಬೇಕಾದಷ್ಟು ಪುಸ್ತಕಗಳನ್ನ ಎರವಲು ಓದಿರೋನೇ.. ಆದ್ರೆ ಮರೀದೇ ವಾಪಸ್ ಕೊಟ್ಟಿದೀನಪ್ಪ :)

ಸೌಮ್ಯ ಗದರಿಕೆ ಅಷ್ಟೇ ಅಶೋಕ್, ತುಚ್ಚೀಕರಿಸಿಲ್ಲ. ವಂದನೆಗಳು. ಹಂಸಾ ಅವರಿಗೂ ಇದೆ ಉತ್ತರ. ನನ್ನ ಅನುಭವ ಅವರಿಗೂ ಆಗಿರಲೇಬೇಕು.

>>.ಕೆಲವೇ ನಿಮಿಷಗಳಲ್ಲಿ post mortem ಗೆ ಹೋದ ಹೆಣ ನೀವು ಹಣ ಕೊಟ್ಟು ಕೊಂಡ ಪತ್ರಿಕೆ<<<

ಬಹಳ ಚೆನ್ನಾಗಿ ಬರೆದಿದ್ದೀರಿ. ವಾಸ್ತವ ದರ್ಶನ. ಬಹಳಷ್ಟು ಜನರು ತೆಗೆದುಕೊಂಡು ಹೋಗುತ್ತಾರೆ ಆದರೆ ತೆಗೆದು ನೋಡುವುದಿಲ್ಲ. ಕೊಟ್ಟವರು ಕೇಳುವಾಗ, ಎಲ್ಲೋ ಇಟ್ಟಿದ್ದೇನೋ, ಯಾರಿಗೆ ಕೊಟ್ಟಿದ್ದೆನೋ ನೋಡುತ್ತೇನೆ. ನೋಡಿ ಕೊಡುತ್ತೇನೆ ಇತ್ಯಾದಿ ಕೆಟ್ಟ ಕೋಪ ತರಿಸುವ ಮಾತುಗಳು. ಇನ್ನೂ ಲೈಬ್ರರಿಯಲ್ಲಂತೂ ದಂಡ ವಿಧಿಸಿ ನಮಗೆ ಬೇಸರವಾಗಬೇಕಷ್ಟೆ.
ನಿಮ್ಮ ಪುಸ್ತಕ ಪ್ರೀತಿಯ ಬಗ್ಗೆ ತಿಳಿದು ಸಂತೋಷವಾಯಿತು.
ಧನ್ಯವಾದಗಳು.

ಒಳ್ಳೆ ಲೇಖನ ಅಬ್ದುಲ್,
ನಾನಂತು ಪುಸ್ತಕಗಳನ್ನ ಲೈಬ್ರರಿಯಲ್ಲಿ ತಂದು ಓದ್ತಾಇದ್ದೆ..
ಆದ್ರೆ ನನ್ನ ಸ್ವಂತ ಪುಸ್ತಕಗಳನ್ನ ಯಾರಾದ್ರು ತಗೊಂಡು ಹೋಗ ವಾಪಸ್ ಕೊಡ್ದೆ ಹೋದ್ರೆ ತುಂಬಾ ಕೋಪ ಬರುತ್ತೆ....ಆದ್ರೆ ಹಿಂದಿಂದ ಬಯ್ಕೊತೀನಿ...(ಕೊಂಡು ಹೋದವರನ್ನು ದಬಾಯಿಸಲು ದಮ್ಮಿಲ್ಲದೆ)
ನಿಮ್ಹಾಗೆ...

ಆದ್ರೆ ಹಿಂದಿಂದ ಬಯ್ಕೊತೀನಿ
ಎಲ್ಲರ ಕಷ್ಟವೂ ಇದೇ ಮಾಲತಿ, ಷೋ ಕೇಸ್ ತುಂಬಾ ಷೋ ಪೀಸ್ ಇಡ್ತಾರೆ, ಪುಸ್ತಕಕ್ಕೆ ಮಾತ್ರ ಇಲ್ಲ ಸ್ಥಾನ ಮಾನ.