ಈ " ಕಬ್ಬಿಣದ ಚಕ್ರದ ಬಂಡಿ" ಯನ್ನು, ನಾವು ಕೊಲಂಬಿಯದ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದ, ಪ್ರೊಫೆಸರ್ ಒಬ್ಬರ ಮನೆಯ ಹಿತ್ತಲಿನಲ್ಲಿ ಕಂಡೆವು !

To prevent automated spam submissions leave this field empty.

ನಾವು ೨೦೦೮ ರಲ್ಲಿ ಅಮೆರಿಕದ ಯಾತ್ರೆಮಾಡಿದ ಸಮಯದಲ್ಲಿ, ಸೇಂಟ್ ಲೂಯಿಸ್ ನಗರದಲ್ಲಿ, ’ಮಿಸ್ಸೂರಿಯ ಗೇಟ್ವೆ ಆರ್ಚ್ ಕಮಾನಿನ ಭವ್ಯ ಕಟ್ಟಡ,’ ವನ್ನು ಕಣ್ಣಾರೆ ವೀಕ್ಷಿಸಿದತರುವಾಯ, ಅಮೆರಿಕದಲ್ಲಿ ಏನು ಹಳೆಯ ಕಲಾವಂತ ಸಾಮಗ್ರಿಗಳು ಸಿಕ್ಕರೂ ಅದು ಬಹುಶಃ ಪಶ್ಚಿಮದಿಕ್ಕಿನೆಡೆಗೆ ನಾಡಿನ ಜನತೆ ಸಾಗಿದಾಗ ಸಂಗ್ರಹಿಸಿದ ವಸ್ತುಗಳ ಭಂಡಾರವೇನೋ ಅನ್ನಿಸುತ್ತಿತ್ತು. ಪ್ರೊಫೆಸರ್ ಸಾಹೇಬರ ಹಿತ್ತಲಿನಲ್ಲಿ ನಾವು ಸುಮಾರು ಸಮಯ ಕಳೆದೆವು. ಕಬ್ಬಿಣದ ಬಂಡಿಯ ತಯಾರಕ ಕಂಪೆನಿಯ ಹೆಸರನು ನಾವು ದಾಖಲಿಸಿದೆವು. ಸಮಯ ಸಹಿತ ! ಆದರೆ, ಅದು ಅಲ್ಲೇ ಇರಲು ಹೇಗೆ ಸಾಧ್ಯ ? ಯಾರೂ ಅದರ ಕಡೆಗೆ ಗಮನ ಹರಿಸಿಲ್ಲವೇಕೆ ? ಇಂತಹ ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತಿದ್ದವು. ಒಟ್ಟಿನಲ್ಲಿ " ೨,೦೦೦ ಕ್ಕೂ ಹೆಚ್ಚಿನ ನನ್ನ ಫೋಟೋ ಆಲ್ಬಮ್, " ತಿರುಗುಹಾಕುತ್ತಿದ್ದಾಗ ಮತ್ತೊಮ್ಮೆ ನನ್ನ ಗಮನ ಭದ್ರವಾಗಿ ನಿರ್ಮಿಸಿದ, ಈ " ಕಬ್ಬಿಣದ ಚಕ್ರಗಳ ಗಾಡಿ " ಯ ಕಡೆಗೆ ಹೋಯಿತು. ಅದರ ಬಗೆಗಿನ ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ ! ನಿಮ್ಮಲ್ಲಿ ಇದರ ಬಗ್ಗೆ ಯಾರಾದರೂ ಬೆಳಕು ಚಿಲ್ಲಬಲ್ಲಿರಾ ? -ಚಿತ್ರ-ವೆಂಕಟೇಶ.

ಲೇಖನ ವರ್ಗ (Category):