ಕಲೆ ಮತ್ತು ಶ್ರೀಸಾಮಾನ್ಯ

To prevent automated spam submissions leave this field empty.

ಗುಣಮಟ್ಟವು ಬಹು ಸಂಖ್ಯೆಗೆ ತಲೆಬಾಗದಿರುವುದೇ... ಗಂಬೀರ ಕಲೆಯ ಲಕ್ಷಣ...... ಶ್ರೀ ಸಾಮಾನ್ಯ ಇಂತಹ ಕಲೆಯಿಂದ ಸದಾ ಅಂತರವನ್ನು ಕಾಯ್ದು ಕೊಳ್ಳುತ್ತಾನೆ.... ಕಾರಣ ಈ ಗಂಬೀರ ಕಲೆಯನ್ನು ಮಾಡುವವರು ತುಂಬಾ ಬುದ್ದಿವಂತರೆಂದು...
ಕಲೆ ಮತ್ತು ಶ್ರೀ ಸಾಮಾನ್ಯ.... ಕಲಾವಿಮರ್ಶಕ ಎಚ್ .ಎ. ಅನಿಲ್ ಕುಮಾರ್ ತಮ್ಮ ’ನೋಟ ಪಲ್ಲಟ’ ಪುಸ್ತಕದ ಒಂದು ಲೇಖನದಲ್ಲಿ ಶ್ರಿ ಸಾಮಾನ್ಯನನ್ನು ವಿಶ್ಲೇಶಿಸುವ ಬಗೆ ಇದು.
ಆದರೆ.. ಇವರು ಉದಾಹರಣೆಗೆ ತೆಗೆದು ಕೊಳ್ಳುವ ಶ್ರೀಸಾಮಾನ್ಯ ವಿದ್ಯಾವಂತ,ಸಾಕಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ’ಉಳ್ಳವನು’. ಸಿನಿಮಾಗಳಿಗೆ ಸಂಬಂದಪಟ್ಟ ಹಾಗೆ ನೋಡುವುದಾದರೆ ಗಂಬೀರ ಸಿನಿಮಾಗಳ ಬಹುತೇಕ ಕಥೆಗಳಿಗೆ ಕಥಾವಸ್ತು ಶ್ರಿ ಸಾಮಾನ್ಯ.. ಆದರಲ್ಲಿ ಬಹುತೇಕರು ಅನಕ್ಷರಸ್ಥರು... ಗಿರೀಶ್ ಕಾಸರವಳ್ಳಿ ಅಂತವರ ಬಹುತೇಕ ಸಿನಿಮಾಗಳಲ್ಲಿ ಅನಕ್ಷರಸ್ಥ ಇವರ ಸಿನಿಮಾಗಳ ಮುಖ್ಯ ಪಾತ್ರವಾಗಿರುತ್ತಾನೆ/ಳೆ.

ಆದರೆ ತಮ್ಮ ಕಲಾಕೃತಿಗಳಿಗೆ ಕಥಾ ವಸ್ತುವನ್ನಾಗಿ ಆಯ್ಕೆ ಗೊಳ್ಳುವ ಶ್ರೀಸಾಮಾನ್ಯ ಅವನು ತೆರೆದುಕೊಳ್ಳುವುದು (expose) ಆಗುವುದು... ಯಾರನ್ನು ತಾನು ಬುದ್ದಿವಂತರೆಂದು ದೂರ ಇಟ್ಟಿರುತ್ತಾನೋ ಅದೇ ಸಮಾಜದ ಬುದ್ದಿವಂತರ ಮುಂದೆಯೇ ಹೊರತು. ತಾನು ಪ್ರತಿನಿದಿಸುತ್ತಿರುವ ಸಮಾಜದಲ್ಲಲ್ಲಾ.
ಇಲ್ಲೊಂದು ಕ್ಲೀಷೆ ಈ ಬುದ್ದಿವಂತ ಸಮಾಜದಲ್ಲಿ ಸದಾ ಚಾಲ್ತಿಯಲ್ಲಿದೆ. ಅದು ಏನೆಂದರೆ ಕಲೆನ ಹುಡುಕ್ಕೊಂಡು ಜನ ಬರಬೇಕೆ ಹೊರತು ಜನರನ್ನು ಹುಡುಕಿಕೊಂಡು ಕಲೆಹೋಗಬಾರದು ಅಂತ. ಎಲ್ಲದಕ್ಕೂ ಸದಾ ಪಾಶ್ಚಿಮಾತ್ಯರನ್ನು ಹಿಂಬಾಲಿಸೋ ನಮ್ಮ ಜನರಿಗೆ ಈ ಶ್ರೀಸಾಮಾನ್ಯನ ವಿಷಯದಲ್ಲಿ ಮಾತ್ರ ಪಾಶ್ಚಿಮಾತ್ಯರು ಗಣನೆಗೆ ಬರುವುದಿಲ್ಲಾ... ಕಾರಣ ನಮ್ಮ ಶಿಷ್ಟಬದ್ದ ಸಮಾಜದ ಬುದ್ದಿವಂತ(ಹಾಗೆಂದು ಶ್ರೀಸಾಮಾನ್ಯ ಹೇಳುತ್ತಾನೆ) ಜನರು ತಮ್ಮ ಕಲೆಗಳಲ್ಲಿನ ಶ್ರೀಸಾಮಾನ್ಯನ್ನು ಸಮಾಜದೊಳಗಿನ ಶ್ರೀಸಾಮಾನ್ಯನಿಂದ ಸದಾ ದೂರವಿಟ್ಟಿದ್ದಾರೆ.

ಇದಕ್ಕೆ ಕಾರಣವನ್ನು ಗಂಭೀರಕಲೆಯ ಕಲಾವಿದರು ಮೊದಲಿನಿಂದಲೂ ಕೊಡುತ್ತಲೇ ಇದ್ದಾರೆ. ಅದೇನೆಂದರೆ ಶ್ರೀಸಾಮಾನ್ಯನಿಗೆ ಸದಾ ತನಗೆ ಗೊತ್ತಿರುವ ಪುರಾಣ, ಕಥೆಗಳ ಬಗ್ಗೆ ರಚಿತವಾದ ಕಲಾಕೃತಿಗಳನ್ನಾದರೆ ಹೆಚ್ಚು ಆಸ್ಥೆಯಿಂದ ನೋಡುತ್ತಾನೆ.. ಅದೇ ರವಿಚಂದ್ರನ್ ನ ’ಏಕಾಂಗಿ’ ಸಿನಿಮಾನ ಒಂದೇ ದಿನಕ್ಕೆ ಥಿಯೇಟರ್ನಿಂದ ಹೊರಗೆ ಓಡಿಸುತ್ತಾನೆ.ಇದಕ್ಕೆ ಕಾರಣ ಅವನು ಬುದ್ದಿವಂತನಲ್ಲ.. ಅವನಿಗೆ ತುಂಬಾ ಬುದ್ದಿವಂತಿಕೆಯಿಂದ ಹೇಳಿದರೆ ಅರ್ಥವಾಗುವುದಿಲ್ಲಾ... ನಮಗೆ ಅವನಿಗಿಷ್ಟವಾಗೋ ರೀತಿಯ ಸರಳತೆಯಲ್ಲಿ ಹೇಳುವುದು ಇಷ್ಟವಿಲ್ಲಾ.
ಹಾಗಾದರೆ ಶ್ರೀಸಾಮಾನ್ಯ ಇನ್ನೂ ಪುರಾಣ ಕಥೆಗಳಲ್ಲಿರುವಂತ ನಾಯಕ, ನಾಯಕಿ ಪ್ರದಾನವಾದಂತ ಕಥಾ ಶೈಲಿಯ ಜನಪ್ರಿಯತೆಯ ಮುಖವಾಡದ ಕಲೆಯನ್ನಷ್ಟೇ ಮೆಚ್ಚುತ್ತಾನೆ ಎನ್ನುವುದಾದರೆ ಈ ಜನಪ್ರಿಯ ನಗರ ಕೇಂದ್ರೀಕೃತ ಸಿನಿಮಾಗಳು ಬರುವ ಮೊದಲು ಹಾಗೂ ಐವತ್ತು ಅರವತ್ತರ ದಶಕದನಂತರ ಬಂದ ಸಿನಿಮಾಗಳಲ್ಲಿ ಮುಖ್ಯ ಕಥಾ ನಾಯಕ ಹಳ್ಳಿಯ ರೈತ.. ಅದರಲ್ಲಿಯ ಪಾತ್ರವನ್ನು ಮೆಚ್ಚಿದ್ದಾದರೂ ಏಕೆ....?

ಕಾರಣ ಸ್ಪಷ್ಟ..
ಅಲ್ಲಿಯವರೆಗೂ ಸಿನಿಮಾ ಎಂದರೆ ಸಾರ್ವಜನಿಕ ಸಮಾಜದಿಂದ ಬೇರೆಯದೇ ಪ್ರಪಂಚ. ಅಲ್ಲಿ ಕಥೆಯಾಗಬೇಕಾದರೆ ನಮ್ಮ ಸಾಮಾನ್ಯ ಜನಜೀವನಕ್ಕಿಂತ ವಿಭಿನ್ನವಾದ ಜನಜೀವನವಾಗಬೇಕು ಎಂಬ ಭ್ರಮೆಯಲ್ಲಿದ್ದವನಿಗೆ ತಮ್ಮ ’ಸಾಮಾನ್ಯ’ ಜೀವನವೂ ಕಥೆಯೆಂಬ ಚೌಕಟ್ಟಿನಲ್ಲಿ ನೋಡಿದರೆ”ಅಸಾಮಾನ್ಯ’ ಕಥೆಯಾಗಬಹುದು, ನಮ್ಮ ನಾಎ ಗುರುತಿಸದ ವಿಬಿನ್ನತೆಯನ್ನು ನಾವು ಕಾಣಬಹುದು ಎಂಬುದನ್ನು ಕಂಡುಕೊಂಡನು. ಆಗಿನ ಸಿನಿಮಾಗಳಲ್ಲಿನ ಸ್ಥಳೀಯತೆ (nativity) ಯು ಅವನನ್ನು ಆಕರ್ಶಿಸಿತು... ಆ ಆಕರ್ಶಣೆಯಲ್ಲೇ ಆ ಕಥೆಯೊಳಗಿನ ವಸ್ತುವಿನ ಬಗ್ಗೆ ಚಿಂತಿಸಲು ತೊಡಗಿದನು.
ಶ್ರೀ ಸಾಮಾನ್ಯ ತನ್ನನ್ನು ಪ್ರತಿನಿದಿಸುವ ಕಲೆಯಲ್ಲಿನ ವಸ್ತುವಿನ ಬಗ್ಗೆ ಎಷ್ಟು ಪ್ರಬುದ್ದ ಆಲೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ’ಬಂಗಾರದ ಮನುಷ್ಯ ’ ಸಿನಿಮಾದಿಂದ ಪ್ರಭಾವಿತರಾಗಿ ಈಗಲೂ ಅದೆಶ್ಟೋ ರೈತರು ಬೇಸಾಯವನ್ನೇ ಇಂದಿಗೂ ನೆಚ್ಚಿಕೊಂಡಿದ್ದಾರೆ.

ಇನ್ನು ನಗರದಲ್ಲಿನ ಸಾಮಾನ್ಯ ಜನರು ಪ್ರತಿದಿನ ವ್ಯಯಿಸುವ ಮೂರು ವಿಬಿನ್ನ ಸ್ಥಳಗಳನ್ನು ಎಚ್.ಎ.ಅನಿಲ್ ಕುಮಾರ ರವರು ಗುರುತಿಸುವುದು ತನ್ನ ಮನೆ, ತನ್ನ ಕಚೇರಿ, ಹಾಗೂ ತಾನು ಪ್ರತಿನಿತ್ಯ ಓಡಾಡುವ ರಸ್ತೆಗಳು.
ಸರಿ. ಇವು ಕಚೇರಿಗಳಲ್ಲಿ ಕೆಲಸಮಾಡುವ ಶ್ರೀಸಾಮಾನ್ಯರು ಈ ಮೂರು ಸ್ಥಳಗಳನ್ನು ನಿತ್ಯ ನೋಡುತ್ತಾರೆ.. ಆದರೆ ಅದೇ ಸಮಾಜದಲ್ಲಿ ಮತ್ತೊಂದು ಗುಂಪಿದೆ ಅವರಿಗೆ ತಮ್ಮ ಮನೆ ಬಿಟ್ಟರೆ ಅವರಿಗೆ ಕಾರ್ಯ ನಿರ್ವಹಿಸುವ ಕಚೇರಿ.. ಅವರೇ ಬೀದಿ ಬದಿಯ ವ್ಯಾಪಾರಿಗಳು, ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳು ಇವರಿಗೆ ನಿತ್ಯ ಚಟುವಟಿಕೆ ಹಾಗೂ ವ್ಯಾಪಾರ ವಹಿವಾಟಿನ ಸ್ಥಳಗಳು....

ವರು ತಮ್ಮ ಮನೆಯನು ಹೊರತು ಪಡಿಸಿ ತಮ್ಮ ದಿನದ ಬಹುತೇಕ ಸಮಯವನ್ನು ಕಳೆಯುವುದು ಇಲ್ಲಿಯೇ. ಇಲಿ ಅವರಿಗೆ ರಿಮೋಟ್ ಕೈಯಲ್ಲಿಲ್ಲದಿದ್ದರೂ ಅವರ ಮುಂದೆ ಚಿತ್ರಗಳು ಸದಾ ಚಲಿಸುತ್ತಲೇ ಇರುತ್ತವೆ.ಇವರು ನಿಂತಲ್ಲಿಯೇ ಬೆಳಕಿನ ದಿನ ನಿತ್ಯದ ಮೂರು ಆಯಾಮಗಳನ್ನು ನೋಡುತ್ತಾರೆ.
ಅನಿಲ್ ಕುಮಾರ್ ರವರು ಗುರುತಿಸುವ ಮತ್ತೊಂದು ಅಂಶ ಈ ಸಾಮಾನ್ಯನಿಗೂ ಒಪ್ಪುತ್ತದೆ ಅದೇನೆಂದರೆ ’ಮನೆಯೊಳಗಿನ ಶ್ರೀಸಾಮಾನ್ಯ ಕಲೆಯನ್ನು ಹುಡುಕಿಕೊಂಡು ಹೋಗುವುದಿಲ್ಲಾ... ಅದೇ ಕಲೆ ಟಿವಿ ಮೂಲಕ ತನ್ನ ಬಳಿಗೇ ಬಂದರೆ ರಿಮೋಟ್ ಮೂಲಕ ಅದನ್ನು ಚಿದ್ರಗೊಳಿಸುತ್ತಾ ತನಗೆ ಬೇಕಾದ ಇನ್ನೇನನ್ನೋ ಹುಡುಕುತ್ತಾ ಹೋಗುತ್ತಾನೆ.’ ಅದೇ ರೀತಿಯಲ್ಲಿ ವ್ಯಾಪಾರಿಯೂ ಸಹ ತನ್ನ ಮುಂದೆ ಓಡಾಡುತ್ತಿರುವವರಿಗೆ ತಾನು ಆಕರ್ಶಣೆಯಾಗಿ ಕಂಡರೂ, ಕಾಣದಿದ್ದರೂ ತಾನು ಮಾತ್ರ ಅವರೊಳಗೆ ಇನ್ನೇನನ್ನೋ ಹುಡುಕುತ್ತಾ ಇರುತ್ತಾನೆ/ಳೆ ಹೊರತು ತನ್ನನ್ನು ತಾನು ವಿಶೇಷ ಎಂದು ಗುರುತಿಸಿಕೊಳ್ಳುವುದೇ ಇಲ್ಲಾ... ಹಾಗು ತಾನು ಸಹ ಒಂದು ವಿಷ್ಯಕ್ಕೆ , ಗಂಭೀರ ಚಿಂತನೆಗೆ ವಸ್ತುವಾಗಬಹುದು ಎಂಬ ವಿಷಯ ಅವನು ಅರಿತಿರುವುದಿಲ್ಲ.

ಹಿಂದಿನ ಸೈನ್ ಬೋರ್ಡ್ ಗಳಲ್ಲಿ ಕಾಣುವ ಕುಶಲತೆಯು ಸೆಳೆದಂತೆ ಇಂದಿನ ಡಿಜಿಟಲ್ ಬೋರ್ಡ್ಗಳು ಸೆಳೆಯಲು ವಿಫಲವಾಗುವುದನ್ನು " ಜೀನ್ ಬ್ರೌದಿಲ್ಲಾರ್ಡ್" ಪೊರ್ನೋಗ್ರಫಿಗೆ ಹೋಲಿಸುತ್ತಾನೆ. ಆಸೆ ಹುಟ್ಟಿಸಿ ಪೂರ್ಣತೆಯಭಾವ ದೊರಕಿಸದಿರುವುದು ಬೃಹತ್ ಡಿಜಿಟಲ್ ಜಾಹೀರಾತು ಹಾಗೂ ಫೋರ್ನೋಗ್ರಪಿಯ ಮೂಲಭೂತ ಲಕ್ಷಣ ಎಂದು ಹೇಳುತ್ತಾನೆ.ಆದರೆ ಸ್ವತಃ ಸೈನ್ ಬೋರ್ಡ್ ಕಲಾವಿದನಾದ ನಾನು ಗ್ರಹಿಸಿರುವುದು ಸಾಮಾನ್ಯನ ದೃಷ್ಟಿಕೋನದಲ್ಲಿ .. ಚಿತ್ರಕಲೆಯಲ್ಲಿ ಶ್ರೀಸಾಮಾನ್ಯ ಎಷ್ಟೇ ನೈಜತೆಯನ್ನು , ಕುಶಲತೆಯನ್ನು ಗ್ರಹಿಸಿದರು, ಅನುಭವಿಸಿದರು. ಅವನಿಗೆ ಡಿಜಿಟಲ್ ಕೃತಿ ಕೊಟ್ಟಷ್ಟು ಪೂರ್ಣತೆ ಬಣ್ಣದಿಂದ ರಚಿತ ಕೃತಿ ನೀಡುವುದಿಲ್ಲಾ.

ಶ್ರೀ ಸಾಮಾನ್ಯ ತನ್ನ ದಿನ ನಿತ್ಯ್ದ ಚಟುವಟಿಕೆ ಸ್ಥಳಗಳಲ್ಲಿ ತನ್ನ ಚಿತ್ರ ಮುಖ್ಯವಾಹಿನಿಯಾಗಿ ದೊಡ್ಡ ಜಾಹಿರಾತಿನಲ್ಲಿ ಕಂಡುಕೊಂಡರೆ ತನ್ನನ್ನು ತಾನು ಅದೇ ಬೋರ್ಡಿನಲ್ಲಿ ಈ ಹಿಂದೆ ಇದ್ದ , ಉಪೇಂದ್ರ ನ ಅಥವ ದರ್ಶನ್ ನ ಸಮಕ್ಕೆ ಊಹಿಸಿಕೊಳ್ಳುತ್ತಾನೆ. ಇದನು ರಚಿತ ಕಲೆ ಅವನಿಗೆ ನೀಡುವುದಿಲ್ಲಾ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನೀವು ಹೇಳ ಹೊರಟಿರೋ ವಿಷಯ ಚೆನ್ನಾಗಿದೆ. ಆದರೆ ಪ್ರಸ್ತಾವನೆ ಎಲ್ಲೋ ಸ್ವಲ್ಪ ಎಡವಿದೆ ಅನಿಸ್ತಿದೆ.
ನನಗೆ ಅರ್ಥವಾದದ್ದಿಷ್ಟು, ಶ್ರೀಸಾಮಾನ್ಯನಿಗೆ ಆತನನ್ನೇ ತು೦ಬಾ ಸರಳಗೊಳಿಸಿ ತೋರಿಸಿದಾಗ ಅದರ ಸ್ಥಳೀಯತೆ ಮತ್ತು ತನ್ನದೇ ಕಥೆ ಆತನನ್ನು ಸೆಳೆಯುತ್ತದೆ. ಗ೦ಭೀರಕಲೆಯಲ್ಲಿ ಪಾತ್ರಧಾರಿ ಶ್ರೀಸಾಮಾನ್ಯನೇ ಆದರೂ ಆತ ತೆರೆದುಕೊಳ್ಳುವುದು 'ಬುದ್ಧಿವ೦ತ' ಎನಿಸಿಕೊಳ್ಳುವ ಸಮಾಜದ ಮು೦ದೆ. ಬುದ್ಧಿವ೦ತಿಕೆಯಿ೦ದ ಹೇಳಿರುವುದರಿ೦ದ ಆತ ಅದನ್ನು ತನ್ನದಾಗಿಸಿಕೊಳ್ಳುವುದಿಲ್ಲ. ಸರಿಯಾ?
ಶ್ರೀಸಾಮಾನ್ಯನ ಕಲೆಯ ವಿಚಾರದಲ್ಲಿ ನಮಗೂ ಪಾಶ್ಚಿಮಾತ್ಯರಿಗೂ ಇರುವ ವ್ಯತ್ಯಾಸವನ್ನು ಸ್ವಲ್ಪ ವಿಷದವಾಗಿ ತಿಳಿಸ್ತೀರಾ?
ಫೋಟೋಗಳು ಚೆನ್ನಾಗಿವೆ. ಹೋರ್ಡಿ೦ಗ್ಗಳನ್ನ ಚೆನ್ನಾಗಿ ರೂಪಿಸಿದ್ದೀರ.

<<<ನೀವು ಹೇಳ ಹೊರಟಿರೋ ವಿಷಯ ಚೆನ್ನಾಗಿದೆ.>>>>
ನನ್ನಿ.. :)

<< ಆದರೆ ಪ್ರಸ್ತಾವನೆ ಎಲ್ಲೋ ಸ್ವಲ್ಪ ಎಡವಿದೆ ಅನಿಸ್ತಿದೆ.>>>
ಅರ್ಥ ಆಗಲಿಲ್ಲಾ.. ನೀವು ಯಾವ ವಿಶಯದ ಬಗ್ಗೆ ಹೇಳುತ್ತೀದ್ದೀರಾ ಎಂದು. :(

<<<ನನಗೆ ಅರ್ಥವಾದದ್ದಿಷ್ಟು, ಶ್ರೀಸಾಮಾನ್ಯನಿಗೆ ಆತನನ್ನೇ ತು೦ಬಾ ಸರಳಗೊಳಿಸಿ ತೋರಿಸಿದಾಗ ಅದರ ಸ್ಥಳೀಯತೆ ಮತ್ತು ತನ್ನದೇ ಕಥೆ ಆತನನ್ನು ಸೆಳೆಯುತ್ತದೆ. ಗ೦ಭೀರಕಲೆಯಲ್ಲಿ ಪಾತ್ರಧಾರಿ ಶ್ರೀಸಾಮಾನ್ಯನೇ ಆದರೂ ಆತ ತೆರೆದುಕೊಳ್ಳುವುದು 'ಬುದ್ಧಿವ೦ತ' ಎನಿಸಿಕೊಳ್ಳುವ ಸಮಾಜದ ಮು೦ದೆ. ಬುದ್ಧಿವ೦ತಿಕೆಯಿ೦ದ ಹೇಳಿರುವುದರಿ೦ದ ಆತ ಅದನ್ನು ತನ್ನದಾಗಿಸಿಕೊಳ್ಳುವುದಿಲ್ಲ. ಸರಿಯಾ?>>>>
ಸರಿ :)

<<<<ಶ್ರೀಸಾಮಾನ್ಯನ ಕಲೆಯ ವಿಚಾರದಲ್ಲಿ ನಮಗೂ ಪಾಶ್ಚಿಮಾತ್ಯರಿಗೂ ಇರುವ ವ್ಯತ್ಯಾಸವನ್ನು ಸ್ವಲ್ಪ ವಿಷದವಾಗಿ ತಿಳಿಸ್ತೀರಾ?>>>
ಇದೂ ಅರ್ಥವಾಗಲಿಲ್ಲಾ.. :(
ನಿಮ್ಮ ಪ್ರಶ್ನೆ
ಶ್ರೀಸಾಮಾನ್ಯನನ್ನು ಕಲೆ ನೋಡುವ ರೀತಿಯಾ....?
ಶ್ರೀಸಾಮಾನ್ಯ ಕಲೆಯನ್ನು ನೋಡುವ ರೀತಿಯಾ....?
ಯಾವುದು ಅಂತ ತಿಳಿಸಿದರೆ ಉತ್ತರಿಸಲು ಪ್ರಯತ್ನಿಸುತ್ತೇನೆ.

<<<ಫೋಟೋಗಳು ಚೆನ್ನಾಗಿವೆ. ಹೋರ್ಡಿ೦ಗ್ಗಳನ್ನ ಚೆನ್ನಾಗಿ ರೂಪಿಸಿದ್ದೀರ>>>
ಧನ್ಯವಾದಗಳು. :)

>>ಎಲ್ಲದಕ್ಕೂ ಸದಾ ಪಾಶ್ಚಿಮಾತ್ಯರನ್ನು ಹಿಂಬಾಲಿಸೋ ನಮ್ಮ ಜನರಿಗೆ ಈ ಶ್ರೀಸಾಮಾನ್ಯನ ವಿಷಯದಲ್ಲಿ ಮಾತ್ರ ಪಾಶ್ಚಿಮಾತ್ಯರು ಗಣನೆಗೆ ಬರುವುದಿಲ್ಲಾ...
ಇದು ಸರಿಯಾಗಿ ತಿಳಿಯಲಿಲ್ಲ.. ಅದಕ್ಕೆ ವಿವರವಾಗಿ ಹೇಳಿ ಅ೦ತ ಕೇಳಿದ್ದು...
>>ಶ್ರೀಸಾಮಾನ್ಯನನ್ನು ಕಲೆ ನೋಡುವ ರೀತಿಯಾ....?
>>ಶ್ರೀಸಾಮಾನ್ಯ ಕಲೆಯನ್ನು ನೋಡುವ ರೀತಿಯಾ....?
ಈ ಎರಡೂ ಪ್ರಶ್ನೆಗಳಿಗೆ ಉತ್ತರಿಸಿದರೆ ಸ೦ತೋಷವೇ :)

ಪಾಶ್ಚಿಮಾತ್ಯರನ್ನು ನಮ್ಮ ಜನರು ಹಿಂಬಾಲಿಸುತ್ತಾರೆ ಎಂದು ಹೇಳಿರುವುದು ಕಲೆಯ ವಿಷಯವಾಗಿ. ಸಮಕಾಲೀನ ಚಿತ್ರಕಲೆಯಲ್ಲಿ ನಡೆಯುತ್ತಿರುವ ಬಹುತೇಕ ಪ್ರಯೋಗಗಳ ಹಿಂದೆ ಪಾಶ್ಚಿಮಾತ್ಯರ ಪ್ರಭಾವವಿದೆ ಅಥವ ಪ್ರಯೋಗದ ಮನಸ್ಥಿತಿಯ ಹಿಂದೆ ಪಾಶ್ಚಿಮಾತ್ಯರ ಛಾಯೆಯಿದೆ.ಸದಾ ಶಾಸ್ತ್ರಗಳ ನೆರಳಲ್ಲೆ ಕಲೆರಚನೆಯಾಗಬೇಕು ಹಾಗೂ ವ್ಯಕ್ತವಾಗಬೇಕೆನ್ನುವುದು ಬ್ರಿಟೀಶರು ಭಾರತಕ್ಕೆ ಕಾಲಿಡುವವರೆಗೂ ಭಾರತೀಯ ಕಲೆಯ ಮನಸ್ಥಿತಿಯಾಗಿತ್ತು. ಪಾಶ್ಚಿಮಾತ್ಯರಲ್ಲಿ ೧೪, ೧೫ ನೇ ಶತಮಾನದಿಂದಲೇ ಈ ನಿಯಮಗಳನ್ನು ಮೀರಿ ಚಿತ್ರಕಲೆಯ ರಚಿಸುವ ಕೆಲಸದಲ್ಲಿ ಕಲಾವಿದರು ತೊಡಗಿದ್ದರು.

ಭಾರತೀಯರಲ್ಲಿ ಬ್ರೀಟೀಷರ ಆಳ್ವಿಕೆಯಲ್ಲಿ ಅವರು ತಮ್ಮ ಶೈಲಿಯನ್ನು ಇಲ್ಲಿ ಬೆಳೆಸೋದಿಕ್ಕೆ ಭಾರತದಲ್ಲಿ ಪ್ರಮುಖವಾಗಿ ಮೂರು ಕಲಾಶಾಲೆಗಳನ್ನು ಆರಂಭಿಸಿದರು.೧) ಮದ್ರಾಸಿನಲ್ಲಿ. ೨) ಕಲ್ಕತ್ತಾದಲ್ಲಿ ೩) ಮುಂಬಯಿಯಲ್ಲಿ. ಆಗ ಕಲೆಯಲ್ಲಿ ಭಾರತೀಯ ಅಂಶಗಳನ್ನು ಉಳಿಸಿಕೊಳ್ಳಲೆಂದೇ ಕಲ್ಕತ್ತಾದಲ್ಲಿ ಅವನೀಂದ್ರನಾಥ ಠಾಗೂರರ ನೇತೃತ್ವದಲ್ಲಿ ಕಲಾ ಚಳುವಳಿ ನಡೆಯಿತು.ಆದರೂ ಭಾರತೀಯ ಕಲೆಗೆ ಪಾಶ್ಚಿಮಾತ್ಯರ ಯೋಚನಾ ಪದ್ದತಿಯಿಂದ ಹೊರಗೆ ಬರಲಾಗಲಿಲ್ಲಾ... ಹಾಗೇ ಮುಂದೆ ತನ್ನದೇ ಆದ ಅಸ್ತಿತ್ವನ್ನು ಪಡೆದುಕೊಂಡಿತಾದರೂ ಸಹ ಹೊಸ ಮಾದ್ಯಮ ಎಂದ ಕೂಡಲೇ ಮೊದಲು ನೋಡುವುದು ಪಾಶ್ಚಿಮಾತ್ಯರ ಕಡೆಗೆ . ಹಾಗೇ ಇಲ್ಲಿನ ಕಲೆಯನ್ನು ಅನುಭವಿಸೋದ ಹಾಗೂ ಅದಕ್ಕೆ ಕಲೆಯ ಮಾನದಂಡಗಳನ್ನು ನಿರ್ಧರಿಸೋದು ಪಾಶ್ಚಿಮಾತ್ಯ ಪ್ರೇರಿತ ಅನುಕರಣೆಗಳೇ..ಅದು ಈಗಿನ ಯಾವುದೇ ಶೈಲಿಯಾಗಬಹುದು.. ಅಥವಾ ಮಾದ್ಯಮವಾಗಬಹುದು.

ಇಶ್ಟೆಲ್ಲಾ ಅನುಕರಣೆ ಇದ್ದರೂ ಸಹ ಕಲೆಯನ್ನು ಪ್ರದರ್ಶಿಸುವಾಗ ಅದರಲ್ಲಿನ ವೀಕ್ಷಕನನ್ನು ಕಲಾಪ್ರೇಮಿ (art lovers) ಹಾಗು ಶ್ರೀಸಾಮಾನ್ಯ (common man) ಎಂಬ ಎರೆಡು ಗುಂಪಿನಲ್ಲಿ ಪ್ರತ್ಯೇಕಿಸುತ್ತಾರೆ. ಇಲ್ಲಿಯವರ ದೃಷ್ಟಿಯಲ್ಲಿ ಕಲೆಯನ್ನು ಆಸಕ್ತಿಯಿಂದ ನೋಡುವವನು ಕಲಾಪ್ರೇಮಿ.. ನೋಡದವನು ಶ್ರೀಸಾಮಾನ್ಯ. ಅದೇ ಇವರ ಶ್ರಿಸಾಮಾನ್ಯ ಕಲೆಯದೇ ಒಂದು ಪ್ರಮುಖ ಮಾದ್ಯಮವಾದ ಪಾಪ್ ಕಲೆ (pop art) ಕಲೆಗೆ ಬೇಗ ಪ್ರತಿಕ್ರಿಯಿಸುತ್ತಾನೆ ಹಾಗು ಅದನ್ನು ಸಾದ್ಯವಾದಮಟ್ಟಿಗೆ ಅರ್ಥೈಸಿಕೊಳ್ಳುತ್ತಾನೆ. ಹಾಗಾದರೆ ಅಲ್ಲಿ ಇವನು ಏನಾಗುತ್ತನೆ..? ಇದರ ಬಗ್ಗೆ ನಮ್ಮ ಬುದ್ದಿವಂತ ಸಮಾಜ ಜಾಣ ಕುರುಡನ್ನು ಪ್ರದರ್ಶಿಸುತ್ತದೆ. ಉದಾ: ಡಿಜಿಟಲ್ ಆರ್ಟ್ಸ್ ಹಾಗೂ ಪಾಪುಲರ್ ಸಿನಿಮಾಗಳು.

ಈ ಎರೆಡನ್ನೂ ಸಹ ಕಲೆಯ ಭಾಗಗಳೆಂದೇ ಪಾಶ್ಚಿಮಾತ್ಯರು ಗುರುತಿಸುತ್ತಾರೆ. ಆದರೆ ಇಲ್ಲಿಯವರು ಅದನ್ನು ಒಪ್ಪಲು ಸಿದ್ದರಿಲ್ಲಾ.. ಯಾಕೆಂದರೆ ಆ ವಿಶ್ಯಗಳಲ್ಲಿ ಮಾತ್ರ ಇಲ್ಲಿಯವರ ಭಾರತೀಯ ಯೋಚನಾ ಪದ್ದತಿ ಜಾಗೃತಾವಸ್ಥೆಯಲ್ಲಿರುತ್ತದೆ. ಆ ಪದ್ದತಿ ತಮ್ಮನ್ನು ಪುರಸ್ಕರಿಸದವರನ್ನು , ಹೊಗಳದವರನ್ನು ಶ್ರೀಸಾಮಾನ್ಯ ಅವನಿಗೆ ಗಂಭೀರವಾಗಿ ಆಲೋಚನೆ ಮಾಡುವ ಶಕ್ತಿಯಿಲ್ಲವೆಂದು ಜರಿಯುವ ಪದ್ದತಿ.

ಆದರೆ ಪಾಶ್ಚಿಮಾತ್ಯರಲ್ಲಿ ಈ ದ್ವಂದ್ವಗಳಿಲ್ಲಾ.. ಅಲ್ಲಿ ಅವರು ಗುರುತಿಸುವುದು ಕಲಾಸಕ್ತರನ್ನು ಮಾತ್ರ. ಅವರ ಕಲೆಗೆ ಪ್ರತಿಕ್ರಿಯಿಸುವವರನ್ನು ಮಾತ್ರ ಗುರುತಿಸುತ್ತಾರೆಯೆ ಹೊರತು ಗುರುತಿಸದವರನ್ನು common man ಎಂದು ಜರಿಯುವ ಪ್ರವೃತ್ತಿಯಿಂದ ಸಾಕಷ್ಟು ವರ್ಷಗಳ ಹಿಂದೆಯೇ ಹೊರಬಂದಿದ್ದಾರೆ. ಹಾಗಾಗಿಯೇ ಅವರು.. ಅವರು ಗುರುತಿಸುವ ಕಲಾಸಕ್ತರಿಂದ ಬರುವ ಪ್ರತಿಕ್ರಿಯೆಗಳನ್ನು ಕುರಿತು ಚರ್ಚಿಸಿ ತಮ್ಮ ಕಲೆಯಲ್ಲಿ ಹೊಸ ಹೊಸ ಆಯಾಮಗಳನ್ನು ಕಂಡುಕೊಂಡು ಕಲಾರಚನೆಯಲ್ಲಿ ತೊಡಗಿದ್ದಾರೆ.

ಪ್ರತಿಕ್ರಿಯೆ ಕಂಡು ತುಂಬಾ ಸಂತೋಷವಾಯಿತು..ಸಮಾನ ಮನಸ್ಕ ಸ್ನೇಹಿತರೊಬ್ಬರು ದೊರೆತ್ತದ್ದಕ್ಕೆ ಕುಶಿಯಿದೆ. ನೀವು ಎತ್ತಿದ ಎಲ್ಲಾ ಪ್ರಶ್ನೆಗಳು ಅಕ್ಷರಶಃ ಸಹಜ ಮತ್ತು ಸತ್ಯ. ಅಬ್ಬಾ.. ಒಂದಾದರೋ ಕಲೆಯ ಬಗೆಗೆ ಸೃಜನಶೀಲವಾಗಿ ಯೋಚಿಸುವ ಮನಸ್ಸಿದೆ ಎಂಬುದು ಖಾತ್ರಿಯಾಯಿತು. ನಿಮ್ಮ ಎಲ್ಲ ಪ್ರಶ್ನೆಗಳನ್ನು ಮುಂದಿನ ನೂಪುರದಲ್ಲಿ ಎತ್ತಿಕೊಳ್ಳಲು ಬಯಸುತ್ತೇನೆ. ಅಷ್ಟರ ವರೆಗೂ ಈ ಕೆಳಗಿನ ಲಿಂಕ್ ನಲ್ಲಿ ಲೇಖನಗಳನ್ನು, ಸಂಪಾದಕೀಯವನ್ನು ಓದಿ ದಯವಿಟ್ಟು ಅಭಿಪ್ರಾಯಿಸಿ.
www. noopurabhramari.com