ನಾನು ನಾಟಕ ಮಾಡ್ತಿದೀನಿ ದಯವಿಟ್ಟು ಬನ್ನಿ.

To prevent automated spam submissions leave this field empty.

ಆಧುನಿಕ ನಾಟಕಕಾರರೆಂದೇ ಪ್ರಸಿದ್ಧರಾದ ದಿ. ಟಿ ಪಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕವನ್ನು ವಟಿಕುಟೀರ ತಂಡ ಪ್ರಸ್ತುತಪಡಿಸುತ್ತಿದೆ. ಇದೇ ಭಾನುವಾರ ದಿನಾಂಕ : ೧೭-೦೫-೨೦೦೯ ರಂದು ಸಂಜೆ ೭.೩೦ಕ್ಕೆ ಶೊ.

ಸ್ಥಳ : ಡಾ. ಎಚ್ ಎನ್ ಕಲಾಕ್ಷೇತ್ರ ಜಯನಗರ. (ಜಯನಗರ ನ್ಯಾಶನಲ್ ಕಾಲೇಜ್).

ಈಗಾಗಲೆ ಈ ನಾಟಕದ ಮೂರು ಯಶಸ್ವಿ ಪ್ರಯೋಗಗಳಾಗಿವೆ. ತುಂಬಾ ಒಳ್ಳೆಯ ಜನಭಿಪ್ರಾಯ ಇದೆ ನಾಟಕದ ಕುರಿತು. ಇದು ನಾಲ್ಕನೆ ಶೊ.ಈ ಬಾರಿ ನಾನು ಮೊದಲ ಸಲ ಈ ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ. ಕಿರಣ್ ವಟಿ ತುಂಬಾ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ದಯವಿಟ್ಟು ಬನ್ನಿ. ನಾಟಕ ನೋಡಿ. ಹೇಗೂ ಸಂಪದದಲ್ಲಿ ಎಲ್ಲರೂ ಭೇಟಿಯಾಗ್ತಾನೇ ಇರ್ತೀವಿ. ನಿಮ್ಮ ಅಭಿಪ್ರಾಯ ತಿಳಿಸಿ. ಬರೋದನ್ನ ಮಾತ್ರ ಮರೀಬೇಡಿ. ಕಾಯ್ತಿರ್ತೀನಿ.(ಸೈಡ್ ವಿಂಗ್‍ನಿಂದ ಯಾರ್ಯಾರು ಬಂದಿದೀರಿ ಅಂತ ಇಣುಕಿ ನೋಡ್ತಿರ್ತೀನಿ :-) )ಬರ್ತೀರಲ್ಲಾ...

 
ಅವತ್ತಿನ ದಿನ ಟಿಕೆಟ್ಸ್ ಅಲ್ಲೇ ಸಿಗುತ್ತವೆ, ಸ್ವಲ್ಪ ಮುಂಚಿತವಾಗಿ ಬಂದ್ರೆ. ಇಲ್ಲದಿದ್ರೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‍ಗಾಗಿ ಈ ಮೊಬೈಲ್ ನಂಬರ್‍ಗ ಕರೆ ಮಾಡಿ.

For tickets contact : 9880695659

 

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ನಾಟಕದ ದಿನ ಅಲ್ಲೇ ಎಚ್ ಎನ್ ಕಲಾಕ್ಷೇತ್ರದಲ್ಲೇ ಸಿಗುತ್ತವೆ ಟಿಕೇಟು. ಅಡ್ವಾನ್ಸ್ ಬುಕ್ಕಿಂಗ್ ಮಾಡ್ಬೇಕು ಅಂದ್ರೆ ಸಂಪದದ ಕಾರ್ಯಕ್ರಮ ವಿಭಾಗದಡಿಯಲ್ಲಿ ನಾಟಕದ ಕುರಿತ ಬರಹವಿದೆಯಲ್ಲ ಅದರಲ್ಲಿ ಫೋನ್ ನಂಬರ್ ಇದೆ. ದಯವಿಟ್ಟು ಅಲ್ಲಿಂದ ನಂಬರ್ ತೊಗೊಳ್ತೀರಾ ಶೇಷಗಿರಿಯವರೆ?

ವಾವ್ !

ಮೇ ಏಳನೇ ತಾರೀಕು ನಾಟಕ. ಮೇ ಹದಿಮೂರನೆಯ ತಾರೀಕು ಆಹ್ವಾನ. !!!
ಟೈಮ್ ಡೊಮೈನ್ ನಲ್ಲಿ ಹಿಂದೆ ಓಡೋದನ್ನ ಇನ್ನು ಕಂಡು ಹಿಡಿದಿಲ್ಲ ಎಲ್ಲೂ.... :)

(ತಮಾಷೆಗೆ ..... ಏಳನ್ನು ಹದಿನೇಳು ಅಂತ ಸರಿಪಡಿಸಿ....)

ಹೌದಂತೆ.ಈಗ ನಿಮ್ಮ ಎರಡನೆ ಪ್ರತಿಕ್ರಿಯೆ ಓದಿ ನಿರಾಳ ಅನಿಸ್ತಿದೆ... ಉಫ್ಫ್ಫ್.. ಕನ್ಫ್ಯೂಸ್ ಮಾಡ್ಕೊಂಡ ಎಲ್ರೂ ನಿಮ್ಮ ಪ್ರತಿಕ್ರಿಯೆ ನೋಡ್ಲಿ ಅಂತ ಬಯಸ್ತೀನಿ. ನನ್ನ ಟೆನ್ಶನ್ ಕಳೆಯುತ್ತೆ. ಥ್ಯಾಂಕ್ಸ್. :-)

ಬರ್ತೀನಿ, ಬಂದೇ ಬರ್ತೀನಿ. ಇನ್ನೇನಕ್ಕಲ್ಲಾಂದ್ರೂ ನಾಟಕ ನಡೆಯುವಾಗ ಸೈಡ್ ವಿಂಗ್ ನಿಂದ ಇಣುಕಿದ್ದಕ್ಕೆ ಆಮೇಲೆ ಡೈರೆಕ್ಟರ್ ಹತ್ರ ಬೈಸಿಕೊಳ್ತೀರಲ್ಲಾ ಅದನ್ನ ನೋಡೋದಕ್ಕಂತೂ ಖಂಡಿತಾ ಬರ್ತೀನಿ.

ಅಯ್ಯೊ ಪಾಪಿ! ಅದೆಷ್ಟು ಆಸೆ ನೋಡು ನಾನು ಬೈಸ್ಕೊಳ್ಳೋದನ್ನ ನೋಡೋಕೆ! ಬನ್ನಿ ಬನ್ನಿ ನಾನು ಇಣುಕೋದನ್ನ ಡೈರೆಕ್ಟರ್ ಸಾಹೇಬ್ರು ನೋಡಿದ್ರೆ ತಾನೆ ಆ ಮಾತು.. ;-)

>>ನಾಟಕದಲ್ಲಿರೊ ಎಲ್ಲ ಪಾತ್ರಗಳೂ ಮುಖ್ಯ ಪಾತ್ರಗಳೆ ಅನ್ನೋದು ಈ ನಾಟಕದ ವಿಶೇಷ.
ಅದು ಸರಿ,
ಈ ನಾಟಕದಲ್ಲಿ ನೀವೇ ಅಮ್ಮಾವ್ರು ಅಂದ್ಕೊಂಡು ನಿಮ್ಮದೇ ಮುಖ್ಯಪಾತ್ರ ಎಂದು ಹೇಳಿದೆ. :)

ಪ್ರವೇಶ ಶುಲ್ಕ ಎಷ್ಟು ಅಂತ ಹೇಳಲೇ ಇಲ್ಲ?

-ಅನಿಲ್

_ರಾಘವ_ನ ಕೈಲಾಸಂ ಟೈಪ್ ಟೈಪಿಂಗ್ ಪೂರಾ ಅರ್ಥ ಮಾಡ್ಕೊಳ್ಲಿಕ್ಕೆ ಒಳ್ಳೇ ಅವಕಾಶ.. ಕೈಲಾಸಂ

ನಾಟಕ ನೋಡ್ಲಿಕ್ಕೆ ಬರ್ತಿರೋ ಎಲ್ಲಾ ಸಂಪದಿಗರೆ, ಇಲ್ಲಿ ಒಂದು ಹಾಜರಾತಿ ಹಾಕ್ಬಿಡಿ ಈಗ್ಲೇ. ಅಲ್ಲಿ ಬಂದಾಗ ನಿಮ್ಮನ್ನೆಲ್ಲ ಜೊತೆಯಾಗಬಹುದು. ಸೈಡ್ವಿಂವ್ ನಿಂದ ಇಣುಕುವವರ ಫೋಟೋ ತೆಗೆದು ಲೈವ್ ಬ್ಲಾಗಿಂಗ್ ಕೂಡ ಮಾಡ್ಬಹುದು ಏನಂತೀರಿ?

>>>ಸೈಡ್ ವಿಂಗ್‍ನಿಂದ ಯಾರ್ಯಾರು ಬಂದಿದೀರಿ ಅಂತ ಇಣುಕಿ ನೋಡ್ತಿರ್ತೀನಿ <<<
ಬರ್ಬೇಕು ಅಂತ ಪ್ಲಾನ್ ಮಾಡ್ತ ಇದೀನಿ. ಹಾಗೇ ನಾಟಕ ನೋಡ್ತಾ ಇರ್ಲಾ ಅತ್ವಾ ಸೈಡ್ ವಿಂಗ್ ಕಡೆ ನೋಡ್ತಾ ಇರ್ಲಾ ಅಂತ ಯೋಚ್ನೆ ಮಾಡ್ತಾ ಇದೀನಿ :) (ಸುಮ್ನೆ)
ನಾಟಕದ ಪ್ರದರ್ಶನ ಯಶಸ್ವಿಯಾಗಲಿ.
ಆಹ್ವಾನ ನೀಡಿದಕ್ಕೆ ಧನ್ಯವಾದಗಳು.

ಕ್ಷಮಿಸಿ ಬರಲಾಗುವದಿಲ್ಲ, ಸಧ್ಯಕ್ಕೆ ತುಂಬಾ ಕೆಲಸ, ಮುಂಬೈಯಿಂದ ಬರಲಾಗುವುದಿಲ್ಲ, ಮುಂದಿನ ಸಲ ಖಂಡಿತವಾಗಿಯೂ ಪ್ರಯತ್ನಿಸುವೆ

ಶಶಿ ಬಿರ್ಗೆ

ಜಯಲಕ್ಷ್ಮೀ...ಜಾಸ್ತಿ ನಾಟಕ ಮಾಡ್ಬೇಡಿ.... :-)
:-)
ನಾಟಕ ಮಾಡುವುದು ಅಂದರೆ ಬೇರೆಯೇ ಅರ್ಥ ಕೊಡುತ್ತದೆಯಲ್ಲವೇ?
ಆತ ತುಂಬಾ ನಾಟಕ ಮಾಡ್ತಾನೆ ಅಂತಾರಲ್ಲಾ...ಹಾಗೆ.

ಬರಬೇಕೆಂಬಾಸೆ ನಿಜಕೂ ಇದೆ ಮನದಲ್ಲಿ.
ಬಂದರೆ ನೋಡುತ್ತೀರಿ ನೀವು ನನ್ನನ್ನಲ್ಲಿ

ಅಭಿನಂದನೆಗಳು ಜಯಲಕ್ಷ್ಮಿಯವರೇ,
ವಾವ್...!!! "ಅಮ್ಮಾವ್ರ ಗಂಡ" ಹೆಸರು ನೋಡಿದೊಡನೆಯೇ ಅದೆಷ್ಟೊಂದು ನೆನಪುಗಳು ಕಣ್ಮುಂದೆ ಬಂದವು :)
ರಂಗ ಶಂಕರದಲ್ಲಿ ಈ ವರ್ಷದ ಶುರುವಿನಲ್ಲಿ "ಅಮ್ಮಾವ್ರ ಗಂಡ" ನಾಟಕವನ್ನ ನಾವು ಮಾಡಿದ್ವಿ. ಆಫೀಸ್ನಲ್ಲಿ ಕೋಡಿಂಗ್..ಟೆಸ್ಟಿಂಗ್...ಕ್ವಾಲಿಟಿ ಕೆಲಸದ ಪಾತ್ರಧಾರಿಗಳೇ..ನಾಟಕದಲ್ಲೂ ಪಾತ್ರಧಾರಿಗಳಾಗಿದ್ವಿ..:D ನನ್ನದು ಕಮಲುವಿನ ಪಾತ್ರ :) ಅಬ್ಬಾ..!!! ಅಷ್ಟುದ್ದುದ್ದ ಡಯಲಾಗ್ಗಳನ್ನ ಹೇಳೋದು ಸಕತ್ ಮಜಾ ಬಂತು. Hats ಆಫ್ ಟು ಕೈಲಾಸಂ :) 80-85 ವರ್ಷಗಳ ಹಿಂದೆ ಬರೆದ "ಅಮ್ಮಾವ್ರ ಗಂಡ" ನಾಟಕ ಈಗಷ್ಟೇ ಅಲ್ಲ...ಮುಂದಿನ generationನ್ನಿಗೂ ಅಪ್ಪ್ಲೇ ಆಗತ್ತೆ ಏನಂತೀರಾ?!! ಆ ಪಾತ್ರಗಳಿಂದ ನಮ್ಮ ನಿಜ ಜೀವನಕ್ಕೆ ಅಡಾಪ್ಟ್ ಮಾಡಿಕೊಳ್ಳೋದು ತುಂಬಾನೇ ಇದೆ ಅಲ್ವಾ. ಲಾಸ್ಟ್ ಟೈಮ್ ದೀಪಾ ರವಿಶಂಕರ್ ಸರೋಜಾ ಆಗಿದ್ರಲ್ವಾ.
ಮತ್ತೊಮ್ಮೆ All ದಿ Best ಸರೋಜಮ್ಮಾವ್ರೇ :)
-ಸವಿತ

ನನ್ನಿ ಕಮ್ಲು ಅಲ್ಲಲ್ಲ ಸವಿತ :) .. ನಿಜ ಪೂರ್ತಿ ಅಲ್ಲದಿದ್ರೂ ಹೆಚ್ಚಿನಾಂಶ ಎಲ್ಲ ಜನಾರೇಶನ್ಸ್‍ಗೂ ಈ ನಾಟಕ ಅಪ್ಲಾಯ್ ಆಗುತ್ತೆ.
ಹೌದು ದೀಪಾ ಅವ್ರು ಸರೋಜ ಪಾತ್ರ ಮಾಡ್ತಿದ್ರು ಮುಂದೇನೂ ಮಾಡ್ತಾರೆ. ಅವ್ರು ಊರಲ್ಲಿ ಇರ್ಲಿಲ್ಲ ಅಂತ ನಾನು ಮಾಡಿದ್ದು, ಈಗ ಆ ಹಿರೋಯಿನ್ ಪ್ರೇಕ್ಷಕರ ಸಾಲಲ್ಲಿ ಕೂತಿರ್ತಾರೆ ಸೊ ಅವರೆದುರು ಅವರದೇ ಪಾತ್ರ ಮಾಡೋಕೆ ಧೈರ್ಯಾನ ಒಟ್ಟುಗೂಡಿಸಿಕೊಳ್ಳೊ ಕೆಲಸದಲ್ಲಿದೀನಿ.ಹೆದರಿಕೆ...
ನೀವು ಇದೇ ಟೀಮಿನಲ್ಲಿ (ವಟಿ ಕುಟೀರ) ಆಕ್ಟ್ ಮಾಡಿದ್ದಾ? ಬರ್ತೀರಲ್ಲ ನಾಟಕಕ್ಕೆ? ಬನ್ನಿ.

:-) ಅವರನ್ನೂ ಕರ್ಕೊಂಡು ಬನ್ನಿ, ಅಲ್ಲಿಗೆ ಪರ್ಮಿಶನ್ ಅಗತ್ಯಾನೇ ಬಿಳೊಲ್ಲ! ನಿಮ್ಮೆಲ್ಲರ ಹಾರೈಕೆ ನಾಳೆಯ ನನ್ನ ಟಾನಿಕ್ಕು.. ನನ್ನಿ ಗಣೇಶ್.

ನಿಮ್ಮ ಈ ಪೋಸ್ಟನ್ನ ಇವತ್ತು ಓದಿದ್ದಕ್ಕೆ ನನ್ನನ್ನೇ ನಾನು ಬೈಕೋತಿದೀನಿ ಜಯಲಕ್ಷ್ಮಿಯವರೇ. ಈ ಸಲ ಭಾನುವಾರ ಬಿಡುವಿದ್ದರೂ ನಿಮ್ಮ ನಾಟಕದ ಮಾಹಿತಿ ಗೊತ್ತಿಲ್ಲದ ಕಾರಣ ಬರಲಿಲ್ಲ, ಮುಂದಿನ ಬಾರಿ ತಿಳಿಸಿ ಖಂಡಿತ ಬರುವೆ. ನಿಮ್ಮ ನಾಟಕ ಯಶಸ್ವೀಯಾಗಿದ್ದಕ್ಕೆ ಅಭಿನಂದನೆಗಳು.

Pages