ಸುಪ್ರಸಿದ್ಧ ಗಾಯಕ, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರ " ಭಕ್ತಿ ಲಹರಿ, " ಸಂಗೀತ ಕಾರ್ಯಕ್ರಮ, ಮುಂಬೈನಲ್ಲಿ !

To prevent automated spam submissions leave this field empty.

ಮೇ ೧೦ ರಂದು, (ರವಿವಾರ) ಮುಂಬೈನಗರದ ’ಸಾಂತಾಕೃಝ್ (ಪೂ) ಪ್ರಭಾತ್ ಕಾಲೋನಿ ’ ಯಲ್ಲಿರುವ, " ಪೇಜಾವರ ಸ್ವಾಮಿಗಳಮಠ " ದ ವಿಶಾಲ ಸಭಾಗೃಹದಲ್ಲಿ, ಸಾಯಂಕಾಲ ೬-೩೦ ಕ್ಕೆ, ’ ಭಕ್ತಿ ಲಹರಿ ಸಂಗೀತ ಕಾರ್ಯಕ್ರಮ ’ ವನ್ನು ನಡೆಸಿಕೊಟ್ಟವರು, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರು. ನಾಯಕರಿಗೆ, ಸಮರ್ಥ ಪಕ್ಕ-ವಾದ್ಯ ಸಹಾಯವನ್ನು ನೀಡಿದ ಕಲಾವಿದರು :

ಶ್ರೀ ಜಯತೀರ್ಥ- ತಬಲಾ

ಶ್ರೀ. ಎನ್. ಎಸ್. ಪ್ರಸಾದ್-ಮೆಂಡೋಲಿನ್

ಶ್ರೀ. ಶಿವಲಿಂಗಪ್ಪ-ಕೊಳಲು.

ರೋನ್ಸ್ ಬಂಟ್ವಾಳ, ಸಮಾರಂಭಕ್ಕೆ ಎಲ್ಲರನ್ನೂ ಸ್ವಾಗತಮಾಡಿದರು. ಶ್ರೀ. ಶ್ರೀನಿವಾಸ ಜೋಕಟ್ಟೆಯವರು, ಮೊದಲು ಕಾರ್ಯಕ್ರಮ ನಿರೂಪಣೆ ಹಾಗೂ ಸಮಾರಂಭದ ಕೊನೆಯಲ್ಲಿ, ಬಂದ ಸಭಿಕರಿಗೆಲ್ಲಾ ಧನ್ಯವಾದ ಪ್ರಸ್ತಾಪನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಭಕ್ತಿ-ಸಂಗೀತಪ್ರಿಯರು, ಹೆಚ್ಚುಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಂಗೀತ-ಸುಧೆಯನ್ನು ಆನಂದಿಸಿದರು. ಶ್ರೀಯುತರು, ದಾಸಶ್ರೇಷ್ಠರ ಹೊಸ-ಹೊಸ ಕೀರ್ತನೆಗಳನ್ನು ಹಾಡಿ, ಎಲ್ಲರನ್ನೂ ರಂಜಿಸಿದರು. ಸಮಯದ ಅಭಾವದಿಂದಾಗಿ ಇನ್ನೂ ಹೆಚ್ಚು ಹಾಡುಗಳ ಬೇಡಿಕೆ ಇದ್ದಾಗ್ಯೂ, ದೂರದ ಉಪನಗರಗಳಿಂದ ಆಗಮಿಸಿದ ಸಭಿಕರು ರೈಲು ಹಿಡಿಯಬೇಕಾದ್ದರಿಂದ, ಸಮಾರಂಭವನ್ನು ಬೇಗ ಮುಗಿಸಬೇಕಾಯಿತು !

ನಗರದ ಐ. ಐ. ಟಿ. ಸಿ. ಫ್ಯಾಶನ್ ಡಿಸೈನ್ ಸಂಸ್ಥೆಯ ಎಸ್. ಕೆ. ಊರ್ವಾಳ್, ಮತ್ತು, ಪ್ರಫುಲ್ಲಾ ಎಸ್. ಊರ್ವಾಳ್ ಪರಿವಾರದ ಸೌಜನ್ಯದಿಂದ, ಈ ಸ್ವರಲಹರಿ, ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಇದಕ್ಕೆ ಮೊದಲು, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರು, ತಮ್ಮ ಕಾರ್ಯಕ್ರಮವನ್ನು ನಗರದ ಸುಪ್ರಸಿದ್ಧ ಹಿರಿಯ ಕನ್ನಡ ಸಂಸ್ಥೆ, ’ಮೈಸೂರ್ ಅಸೋಸಿಯೇಷನ್ ನ ಹವಾನಿಯಂತ್ರಿತ ಸಭಾಂಗಣ,’ ದಲ್ಲಿ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸುಂದರವಾಗಿ ನಡೆಸಿಕೊಟ್ಟಿದ್ದರು.

ಸಂಗೀತ ಕಾರ್ಯಕ್ರಮದ ತರುವಾಯ, ಎಲ್ಲರಿಗೂ ’ಲಘು ಉಪಹಾರ ಸೇವನೆ ’ ಯ ಪ್ರಬಂಧವಿತ್ತು.

PLEASE CONTACT :

PEJAWARMATH ( Mumbai Branch ),

CONTACT PERSONS :

Ramadasa Upadhyaya
Niarnajan,

Poorna Pragna Vidyapeetha Prastishthana, 137, Madhwa Bhavan,

4th, Road, Prabhat Colony, Behind Yoga Insititute, Santacurz(E) Mumbai-400 055

Tel : 26193648/26126614

-ಚಿತ್ರ- ವೆಂಕಟೇಶ್.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅರೆರೆ! ಚಿತ್ರದ ಬಲಭಾಗದಲ್ಲಿ ನನ್ನ ಸಂಗೀತ ಮೇಷ್ಟ್ರಿದ್ದಾರೆ.
ಚಿಕ್ಕಂದಿನಲ್ಲಿ ಅವರ ಬಳಿ ಮ್ಯಾಂಡೊಲಿನ್ ನುಡಿಸುವುದನ್ನು ಕಲಿಯುತ್ತಿದ್ದೆ. :)

-ಅನಿಲ್

ಅನಿಲ್,

ನಿಮ್ಮ ಮೇಸ್ಟ್ರಾ ಅವ್ರು ?

ಭಾಳ ಅದ್ಭುತವಾಗಿ ನುಡ್ಸಿದ್ರಪ್ಪ. ಈಗ ಅವ್ರು ದೊಡ್ಡ ಜನ. ಟೀವಿ, ಆಕಾಶ್ವಾಣಿ, ಹೀಗೆ ದೊಡ್ದ-ದೊಡ್ಡ ಕಾರ್ಯಕ್ರಮಗಳಲ್ಲಿ ಕಾಣಿಸ್ಕೊಳ್ತಿದಾರೆ. ಬೇಕಾದ್ರೆ, ಫೋನಾಯಿಸಿ, ನಮಸ್ಕಾರ ತಿಳಿಸ್ರಿ. ನನ್ನ ನಮಸ್ತ್ಕಾರಗಳನ್ನೂ ತಿಳಿಸೋದ್ ಮಾತ್ರ ಮರೀಬ್ಯಾಡ್ರಿ ! ಒಂದ್ ಸೋಲೋ ಹಾಡ್ನೂ ನುಡಿಸ್ದೃ !

ನಿಮ್ಮ ಹಿರಿಯ ಗೆಳೆಯ, [ ಹೀಗೆ ಹೇಳ್ಕೊಂಡ್ರೆ ನಿಮ್ಗೆ, ಬೇಸ್ರ ಇಲ್ಲತಾನೇ ?]

ವೆಂ.

ಹೌದು,
ತುಂಬಾ ಚೆನ್ನಾಗಿ ಮ್ಯಾಂಡೊಲಿನ್‌ ನುಡಿಸ್ತಾರೆ.
ಆದರೆ ಅವರ ಬಳಿ ಸಂಗೀತವನ್ನು ಕಲಿಯಲು ಆಗಲಿಲ್ಲ ಎಂಬ ಕೊರಗು ನನ್ನನ್ನು ಈಗಲೂ ಕಾಡುತ್ತದೆ. :(

>>ಹೀಗೆ ಹೇಳ್ಕೊಂಡ್ರೆ ನಿಮ್ಗೆ, ಬೇಸ್ರ ಇಲ್ಲತಾನೇ ?
ಛೇ! ಇಲ್ರಿ. ಬೇಸರ ಯಾಕೆ?

-ಅನಿಲ್