ಕತ್ತರಿ ಬಂಧ

To prevent automated spam submissions leave this field empty.

ಮೊನ್ನೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. ಬರುವಾದ ಓವಱ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು. ಸುಮಾರು 3-4 ವಷಱದ ದಷ್ಟಪುಷ್ಟವಾಗಿಯೇ ಬೆಳೆದಿದ್ದ ಮಗು ಚಾಕೀ ಚಾಕೀ ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು. ಸಾಧಾರಣಕ್ಕಿಂತಲೂ ಅಧಿಕವಾಗಿಯೇ ಬಳುಕುವ ದೇಹವಿದ್ದ (ತೆಳ್ಳನೆಯ ದೇಹ) ಆ ತಾಯಿಯ ಸೊಂಟಕ್ಕೆ ತನ್ನೆರಡೂ ಕಾಲುಗಳನ್ನು ಕತ್ತರಿಯಾಗಿ ಬಳಸಿ ಮಗು ಲಾಕ್ ಮಾಡಿಬಿಟ್ಟಿತ್ತು. ಮಗುವನ್ನು ಇಳಿಸಲೂ ಆಗದೇ ಹೊತ್ತುಕೊಂಡು ಹೋಗಲೂ ಆಗದೆ ಪರಿಪಾಟಲು ಪಡುತ್ತಿದ್ದ ಆಕೆಯ ಕಂಗಳಲ್ಲಿ ನೀರು ತುಂಬಿತ್ತು. ಹತ್ತಿರ ಯಾವುದೇ ಅಂಗಡಿಗಳೂ ಇರಲಿಲ್ಲ. ಸುತ್ತ ಮುತ್ತ ತಮಾಷೆ ನೋಡುವವರ ಇರಿಸು-ಮುರಿಸಿನ ನೋಟಗಳು ಬೇರೆ. ಹಾಗೆಯೇ ಕಷ್ಟಪಟ್ಟು ಮಗುವನ್ನೆತ್ತಿಕೊಂಡು ಆಕೆ ಮರೆಯಾದರೂ ನನ್ನ ತಲೆಯಲ್ಲಿ ಆ ಮಗು ತನ್ನೆರಡು ಕಾಲುಗಳಿಂದ ತಾಯಿಯ ಸೊಂಟಕ್ಕೆ ಹಾಕಿದ್ದ ಆ 'ಕತ್ತರಿ-ಬಂಧನ ತಲೆಯಲ್ಲಿ ಸಾಕಷ್ಟು ವಿಚಾರ ಮಂಥನಕ್ಕೆ ಎಡೆಮಾಡಿತ್ತು. ಒಂದು ಕ್ಷಣ ನಕ್ಷತ್ರಿಕ ಹರಿಶ್ಚಂದ್ರನ ಬೆನ್ನೇರಿದ ದ್ಋಶ್ಯ ಕೂಡ ಕಣ್ಮುಂದೆ ಸುಳಿಯಿತು.
'ಬಿಟ್ಟರು ಬಿಡದೀ ಮಾಯೇ....' ಎಂಬಂತೆ ಮಗುವಿನಿಂದ ಬಿಡಿಸಿಕೊಳ್ಳಲೂ ಆಗದೇ, ಚಾಕಲೇಟ್ ಕೊಡಸಲೂ ಆಸ್ಪದವಿಲ್ಲದೇ ಮಗುವನ್ನು ಹೊತ್ತುಕೊಂಡು ಹೋಗಲೂ ಆಗದೇ ಹೆಣಗುತ್ತಿದ್ದ ಆ ತಾಯಿಯ ದ್ಋಶ್ಯ ನಿಜವಾದ ಜೀವನಾಥಱದ ನೋಟವೇ ಆಗಿತ್ತು. ನಾವೂ ಅಷ್ಟೆ. ಇಷ್ಟವಿರಲಿ-ಬಿಡಲಿ, ಅನೇಕ ಅಂತಹ ಸಮಸ್ಯೆಗಳೆಂಬ ಕೂಸುಗಳ ಕತ್ತರಿ-ಬಂಧಕ್ಕೆ ಒಳಗಾಗಿರುತ್ತೇವೆ. ಸಮಸ್ಯೆಗಳು ನಮ್ಮನ್ನು ಬಿಡುವಂತಿಲ್ಲ - ಬಹಳಷ್ಟು ಸಮಸ್ಯೆಗಳ ಪರಿಹಾರ ನಮ್ಮಲ್ಲಿಲ್ಲ! ಒಟ್ಟಿನಲ್ಲಿ ಸಮಸ್ಯೆಗಳ ಭಾರವಾದ ಮೂಟೆಯನ್ನು ಬೆವರಿಳಿಸುತ್ತಾ ಏದುರಿಸು ಬಿಡುತ್ತಾ ಸಾಗಿಸುವಲ್ಲೇ ಜೀವನದ ಅಧಿಕ ಸಮಯದ ಬಳಕೆಯಾಗಿಬಿಟ್ಟಿರುತ್ತದೆ. ಇತ್ತ ಮಗುವಿಗೆ ಚಾಕಲೇಟೂ ಸಿಗಲಿಲ್ಲ. ಅತ್ತ ತಾಯಿಗೆ ಮಗುವನ್ನು ಹೊರುವುದೂ ತಪ್ಪಲಿಲ್ಲ. ಅಥಾಱತ್ ಮಗುವಿಗೂ ಸುಖ ವಿಲ್ಲ ತಾಯಿಯ ಸಂಕಷ್ಟವೂ ನೀಗಲಿಲ್ಲ ಎಂಬಂತೆ.
ಗಂಡ-ಹೆಂಡರಿರಬಹುದು, ತಂದೆ-ತಾಯಿಯರಿರಬಹುದು, ಮಕ್ಕಳಿರಬಹುದು, ಸಹೋದರ-ಸಹೋದರಿಯರಿರಬಹುದು, ಸ್ನೇಹಿತರಿರಬಹುದು. ಒಮ್ಮೆ ಈ ಸಂಸಾರ ಸಾಗರದಲ್ಲಿ ಇಳಿದೊಡನೆ ಈ ಕತ್ತರಿ-ಬಂಧಗಳ ಸುಖ ಶುರು. ಎಲ್ಲ್ಲೆಲ್ಲೂ ನಿರೀಕ್ಷೆಗಳೇ. ಎಲ್ಲರದ್ದೂ ನಿರೀಕ್ಷೆಗಳೇ. ಅದೂ ಮಿತಿಯಿಲ್ಲದಷ್ಟು. ತೀರಿಸಿದಷ್ಟೂ ಮತ್ತಷ್ಟು ಮಗದಷ್ಟು ಪುನ: ಪುನ: ಪುಟಿದೇಳುವ ಹೊಸ ಹೊಸದಾದ ನಿರೀಕ್ಷೆಗಳು. ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ಹಿಂಗಿಸಲಾಗದ ಈ ನಿರೀಕ್ಷೆಗಳು ನಮ್ಮ ಬೆಂಬಿಡದ, ಕಣ್ಣಿಗೆ ಕಾಣದಿಹ ಕತ್ತರಿ-ಬಂಧಗಳು. ಇದು ಪ್ರತಿಯೊಬ್ಬರೂ ಅನುಭವಿಸಿರುವ, ನಿತ್ಯವೂ ಅನುಭವಿಸುತ್ತಿರುವ ಸಾವಱತ್ರಿಕ ನಿತ್ಯ-ಸತ್ಯ. ನೀವು ಇತರರಿಗೆ ಮಾಡಿದ್ದ, ಮಾಡುತ್ತಿರುವ ಮತ್ತು ಮಾಡುವ ಸಹಾಯ/ಸಹಕಾರ/ಉಪಕಾರಗಳ ಪಟ್ಟಿ ಆಂಜನೇಯನ ಬಾಲದಷ್ಟೇ ಉದ್ದವಿರಬಹುದು. ನಿಮ್ಮ ಈ ಪ್ರವ್ಋತ್ತಿಯಿಂದ ನಿಮ್ಮ ಸುತ್ತ-ಮುತ್ತಲಿನವರನ್ನು ನೀವು ಸಾಕಷ್ಟು ತ್ಋಪ್ತಿ ಪಡಿಸಿರಲೂ ಬಹುದು (ಹಾಗೆಂ ದು ನೀವೆಂದುಕೊಂಡಿರಬಹುದು!!); ಸಂತೋಷಿಸಿರಲೂ ಬಹುದು. ಆದರೆ ಮರೆಯದಿರಿ, ಅವರ ಕತ್ತರಿ-ಬಂಧನ ಮಾತ್ರಾ ಕಳಚದು. ಅವರ ನಿರೀಕ್ಷೆಗಳ/ಆಶಯಗಳ ಕೂಗು (ಚಾಕೀ ಚಾಕೀ ಎಂಬ ಕೂಗಿನಂತೆ) ಎಂದಿಗೂ ಮುಗಿಯವು; ನಿಲ್ಲವು. ನೀವು 100 ಮಾಡಿ 1 ನ್ನು ಮಾಡಲಾಗದಿದ್ದರೆ ನಿಮ್ಮ ಪರಿಸ್ಥಿತಿ ನಿಮಗೇ ಪ್ರೀತಿ! ಸಂಪೂಣಱ ನಿರುಪಯುಕ್ತನೆಂಬ, ಹ್ಋದಯಹೀನನೆಂಬ, ನಿಷ್ಕರುಣಿಯೆಂಬ, ಸ್ವಾಥಿಱಯೆಂಬ ಹಣೆಪಟ್ಟಿ ಕೂಡಲೇ ಸಿದ್ಧ. ತಾವೇ ಈ ಕತ್ತರಿ-ಬಂಧಗಳಲ್ಲಿ ಸಿಕ್ಕಿಕೊಂಡಿದ್ದರೂ ಅರಿವಿಲ್ಲದ ಇತರರ ಅಪಹಾಸ್ಯ/ಅವಹೇಳನ ಕೂಡ ಎದುರಿಸಬೇಕಾದೀತು. ಹಾಗಂತ ಈ ಸರಣಿ ಇಲ್ಲಗೇ ಮುಗಿಯಿತೆಂದು ಬೀಗದಿರಿ. ಕಾಲಾಯ ತಸ್ಮ್ಐ ನಮ:. ಕಾಲ ಕಳೆದಂತೆ ಈ ಕತ್ತರಿ-ಬಂಧಗಳ ಸುಖ ಎಂದಿನಂತೆ ಪುನರಾರಂಭ. ಕೊಡವಲೂ ಆಗದೇ ಅನುಭವಿಸುವ - ನಿರಂತರ ಅನುಭವಿಸಲೇ ಬೇಕಾಗಿರುವ ಹಣೆಬರಹ ಮಾತ್ರಾ ಎಲ್ಲರಂತೆ ನಿಮದೂ ಕೂಡಾ! ಈ ಕತ್ತರಿ-ಬಂಧಗಳಿಂದ ಜೀವನದಿಂದ ಮುಕ್ತಿ ಸಿಗುವವರೆಗೆ ಮುಕ್ತಿಯಿಲ್ಲ. ಇರುವವರೆಗೆ ಅದನ್ನು ಸಹಿಸಿಕೊಂಡು, ಹೊತ್ತುಕೊಂಡು ಹೋಗುವ ಶಕ್ತಿ, ಸಹನೆ ಮಾತ್ರಾ ಕೊಡು ಎಂದು ದೇವರನ್ನು ಪ್ರಾಥಿಱಸದೇ ಅನ್ಯಮಾಗಱವಿಲ್ಲ. "ಜ್ಐ ಕತ್ತರಿ-ಬಂಧ!!"

ಲೇಖನ ವರ್ಗ (Category):