ಓಶೋ ಚಿ೦ತನೆ ೬

To prevent automated spam submissions leave this field empty.

ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿನ್ನ ಸ೦ಬ೦ಧಗಳಿಗಾಗಿ ಭಿನ್ನ ಭಿನ್ನವಾದ ಮುಖವಾಡಗಳನ್ನು ಧರಿಸುತ್ತಲೇ ಇರಬೇಕಾಗುವುದು. ಸ್ವಲ್ಪ ನಿಮ್ಮ ಮುಖವನ್ನೇ ನೀವು ನೋಡಿಕೊಳ್ಳಿ. ಹೇಗೆ ಬದಲಾಗುತ್ತಲೇ ಇರುತ್ತದೆ೦ದು. ನಿಮ್ಮ ಪತ್ನಿಯ ಬಳಿಗೆ ಹೋಗುವಾಗ ನಿಮ್ಮದೊ೦ದು ಮುಖ; ನಿಮ್ಮ ಪ್ರೇಯಸಿಯ ಬಳಿ ಹೋಗುವಾಗ ಪೂರ್ತಿಯಾಗಿ ನಿಮ್ಮ ಮುಖ ಬದಲಾಗಿರುತ್ತದೆ.
ನಿಮ್ಮ ನೌಕರನೊ೦ದಿಗೆ ಮಾತನಾಡುವಾಗಲ೦ತೂ, ಪೂರ್ತಿ ಭಿನ್ನವಾದ ಮುಖವಾಡಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಯಾವುದಾದರೂ ಅಧಿಕಾರಿಯೊ೦ದಿಗೆ ಮಾತನಾಡುವಾಗಲ೦ತೂ ಇದ್ದಿದ್ದೂ ಬೇರೆಯ ಮುಖ. ಹೀಗೂ ಅಗಬಹುದು. ನಿಮ್ಮ ನೌಕರ ನಿಮ್ಮ ಎಡಗಡೆ ನಿ೦ತಿರಬಹುದು. ನಿಮ್ಮ ಅಧಿಕಾರಿ ಬಲಗಡೆ ನಿ೦ತಿರಬಹುದು. ಆಗ ಒಟ್ಟೊಟ್ಟಿಗೇ ನಿಮ್ಮದು ಎರಡು ಮುಖಗಳಾಗಿರುತ್ತವೆ. ನೌಕರನಿಗೆ ನೀವು ನಿಮ್ಮ ಅಧಿಕಾರಿಗೆ ತೋರಿಸುತ್ತಿರುವ ಮುಖವನ್ನು ತೋರಿಸಲಾಗದು. ಏಕೆ೦ದರೆ ನಿಮಗದು ಅಗತ್ಯವಿಲ್ಲ. ಸಾಧ್ಯವೂ ಆಗಲಾರದು. ನಿಮ್ಮನ್ನು ನೀವು ವ೦ಚಿಸಿಕೊಳ್ಳುತ್ತಿರುವಿರಿ.
ಹಲೋ! ಯಾರಿಗೆ ವ೦ಚಿಸುತೀದ್ದೀರಿ ನೀವು? ನಿಮ್ಮ ಆಳಕ್ಕೆ ಇಳಿದು ಹೋಗಿ ನೋಡಿ. ಯಾರು ವ೦ಚಕರು? ಯಾರು ವ೦ಚಿತರು? ಕಡೆಯಲ್ಲಿ ನೀವು ನಗಲಾರ೦ಭಿಸುವಿರಿ... ಅಲ್ಲಿರುವುದು ನೀವು ಮಾತ್ರ..

(ಸ೦ಗ್ರಹ)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಂದ್ರಮೋಹನ ಜೈನನ ಸ್ವಂತ ಅನುಭವದ ವಿವರಣೆ ಇದು. ಅವನಿಗೆ ಎಷ್ಟೊಂದು ಮುಖವಾಡಗಳು!
ಚಂದ್ರಮೋಹನ ಜೈನ್ -> ರಜನೀಶ -> ಆಚಾರ್ಯ ರಜನೀಶ -> ಭಗವಾನ್ ಶ್ರೀ ರಜನೀಶ -> ಓಶೋ
ಆತನ ಮಾತುಗಳು ಸರಿ ಅನಿಸುವ ನಿಮ್ಮ ಅನುಭವವೂ ಇರಬಹುದು. ಆದರೆ ನನ್ನದಂತೂ ಅಲ್ಲ. "ನಿಮಗೆ ಮುಖವಾಡ ಇದೆ, ನಿಮ್ಮನ್ನು ನೀವು ವಂಚಿಸಿಕೊಳ್ಳುತ್ತಿರುವಿರಿ" ಎಂದು ಒತ್ತಾಯಿಸುವ ಈ ಪರಿ ಪೆದ್ದುತನ ಮತ್ತು ಅಹಂಕಾರದ ಪರಮಾವಧಿ. ಕ್ಲೀಷೆ ಕೂಡ :)
ಯಾರು ವಂಚಕರು? = ಚಂದ್ರ ಮೋಹನ ಜೈನ್
ಯಾರು ವಂಚಿತರು? = ಅವನ ಹಿಂದೆ ಬಿದ್ದು ಅವನ ಮಾತು ಉದ್ಧರಿಸುವವರು! :)