ಅನ್ನವೆಂದರೆ ?

To prevent automated spam submissions leave this field empty.

ಅನ್ನಂ ನ ನಿಂದ್ಯಾತ್ | ತದ್ ವ್ರತಂ | ಪ್ರಾಣೋ ವಾ ಅನ್ನಂ |
ಶರೀರಮನ್ನಾದಂ |ಪ್ರಾಣೆ ಶರೀರಂ ಪ್ರತಿಷ್ಠಿತಮ್ |
ಶರೀರೇ ಪ್ರಾಣಃ ಪ್ರತಿಷ್ಠಿತಃ | ತದೇ ತದನ್ನಮನ್ನೇ ಪ್ರತಿಷ್ಠಿತಮ್ |
ಸ ಯ ಏತದನ್ನಮನ್ನೇ ಪ್ರತಿಷ್ಠಿತಮ್ ವೇದ ಪ್ರತಿಷ್ಠತಿ |

ಅನ್ನವನ್ನು ನಿಂದಿಸದಿರು. ಅದನ್ನು ವ್ರತದಂತೆ ಪಾಲಿಸು.ಅನ್ನವು ಪ್ರಾಣವಿದ್ದಂತೆ.ಈ ಶರೀರವು ಅನ್ನವನ್ನು ತಿನ್ನುತ್ತದೆ ಮತ್ತು ಪ್ರಾಣವನ್ನು ಶರೀರದಲ್ಲಿರುವಂತೆ ನೋಡಿಕೊಳ್ಳುತ್ತದೆ .ಶರೀರದಲ್ಲಿ ಪ್ರಾಣ ಪ್ರತಿಷ್ಟಿತವಾಗುತ್ತದೆ .ಅನ್ನದಲ್ಲಿ ಅನ್ನವು(ಶಕ್ತಿ) ಪ್ರತಿಷ್ಟಿತವಾಗಿದೆ
ನಾವು ಸಾಮಾನ್ಯ ಅಡುಗೆ ಚೆನ್ನಾಗಿಲ್ಲ ಅಂದ್ರೆ ಏನಂತಿವಿ ಥೂ..ಅಡುಗೆ ಚೆನ್ನಾಗಿಲ್ಲ (ಕೆಟ್ಟ ಅಡುಗೆ ಮಾಡಿದ್ದರೆ ದರಿದ್ರವಾಗಿ ಮಾಡಿದ್ದರೆ ಕೆಲವರು ಹೀಗೂ ಅಂತಾರೆ ) . ಇದು ತಪ್ಪು ಅಂತ ಉಪನಿಷತ್ ಹೇಳುತ್ತೆ .(ಮೇಲಿನ ವಾಕ್ಕುಗಳು ತೈತ್ತರಿಯೋಪನಿಷತ್ತಿನ ಭ್ರುಗುವಲ್ಲಿಯಿಂದ ಆಯ್ದದ್ದು ).ಪ್ರಾಣವು ಇರಬೇಕಾದರೆ ಅನ್ನವು ಇರಬೇಕು ಅನ್ನದಿಂದ ಶಕ್ತಿ ಸಂಚಯಗೊಂಡು ಪ್ರಾಣವು ಬದುಕುತ್ತೆ .ಅನ್ನವು ಪ್ರಾಣವಿದ್ದಂತೆ ಅನ್ನವು ಬ್ರಹ್ಮನಿದ್ದಂತೆ ಸೊ ನೀವ್ಯಾರೂ ಹಾಗನ್ನಲ್ಲ ಅಂತ ಗೊತ್ತು ಅಂದವರಿಗೆ ಅದನ್ನು ತಪ್ಪು ಅಂತ ಹೇಳಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>ಶರೀರಮನ್ನಾದಂ
ಇದು ಶರೀರಮನ್ನಾದಃ ಆಗಬೇಕಲ್ಲವೇ?!

ತುಂಬಾ ಹಿಂದೆ "ಜ್ಯೋತಿರ್ ಅನ್ನಾದಹ" ಅನ್ನೋ ಸಕ್ಕದದ ( ಮೂಲ ನೆನೆಪಿಗೆ ಬರ್ತಾ ಇಲ್ಲ) ಮಾತಿನಲ್ಲಿ ವಿಜ್ಞಾನವನ್ನು ಕಾಣುವ ಪ್ರಯತ್ನದ ಬಗ್ಗೆ ಓದಿದ್ದೆ. Energy consumes matter ಅಂತ ಭಾಷಾಂತರ ಮಾಡಿದ್ದರು. ( ನಾನು ಇದನ್ನು ಇಲ್ಲಿ ಬರೆದಿದ್ದೇನೆ ಅಂದ್ರೆ ನಾನು ಇದನ್ನು ಇಲ್ಲಿ ಅನುಮೋದನೆ ಮಾಡ್ತೀನಿ ಅಂತ ಅಲ್ಲ!)

ಆತ್ಮೀಯ
ಪ್ರತಿಕ್ರಿಯೆಗೆ ಧನ್ಯವಾದಗಳು .ಅದು ಶರೀರಮನ್ನಾದಂ ಎಂತಲೇ ಇದೆ .ನೀವ್ಯಾಕೆ ಅನುಮೋದನೆ ಮಾಡುವುದಿಲ್ಲ ಎಂದು ಕೇಳಬಹುದ?
ಹರೀಶ್ ಆತ್ರೇಯ

ಹರೀಶ ಅವ್ರೆ..

ನೀವು ಬೇರೆದಿದ್ದು ಚೆನ್ನಾಗಿದೆ.

ನೀವು ಬರೆದ ಸಾಲುಗಳು ನನಗೆ ಪೂರ್ತಿ ಅರ್ಥವೂ ಆಗಿಲ್ಲ!

ಅನುಮೋದನೆ ಬಗ್ಗೆ ಹೇಳಿದ್ದು ನಾನು ಬರೆದ ಸಾಲಿನ ಬಗ್ಗೆ ! "ನಾನು ಬರೆದೆ ಸಾಲಿನಲ್ಲಿ" "ವಿಜ್ಞಾನ" ಹುಡುಕುವ ಬಗ್ಗೆ ನಾನು ಹೇಳಿದ್ದು!

ಮನುಷ್ಯನ ಹಸಿವು ತಣಿಸುವ ಊಟ ಒಂದು ಯಜ್ಞ.ಒಳ್ಳೆಯ ಆಲೋಚನೆಯಿಂದ ಊಟಮಾಡಿದರೆ ಅನ್ನದ ಜೊತೆ ಜೊತೆಗೇ ಸದ್ವಿಚಾರವೂ ನಮ್ಮಲ್ಲಿ ಸೇರುತ್ತಾ ಹೋಗುತ್ತದೆ. ಅದರಿಂದಲೇ ಅನ್ನವನ್ನು ಅನ್ನಪೂರ್ಣೇಶ್ವರಿಯ ಪ್ರಸಾದವೆಂದು ಸ್ವೀಕರಿಸಿದರೆ ಪ್ರಸಾದದ ಫಲ ಸಿಗುತ್ತದೆ.

ಹೀಗೆಯೇ ಬರೆಯುತ್ತಿರಿ.ಶುಭವಾಗಲಿ.

ಅದಕ್ಕೇ ಇರಬೇಕು, ಹಿರಿಯರು ಹೇಳುವುದು - ಅಡಿಗೆ ಮಾಡುವಾಗ ಮತ್ತು ತಿನ್ನುವಾಗ ಮನಸಿ ನಲ್ಲಿ ಮತ್ತು ಬಾಯಿಯಲ್ಲಿ ಸದ್ವಿಚಾರಗಳು ಇರಬೇಕು ಅಂತ.( T V ಅಳುಮುಂಜಿ ಧಾರಾವಾಹಿಗಳು / horror shows ಕೂಡ ವ್ಯರ್ಜ್ಯ)

ಅನ್ನಂ ಜೀವ ಮಯಕೋಶಂ ಅಂತ ಹೇಳ್ತಾರೆ, ಇದು ಸತ್ಯ ನಾವು ಯಾವ ಯಾವ ರೀತಿ ಆಹಾರ ತೆಗೆದು ಕೊಳ್ತಿವಿ ಆದೆ ರೀತಿ ನಮ್ಮ ನಡವಳಿಕೆ ಮೇಲೆ ಅಷ್ಟೇ ಪ್ರಭಾವ ಬಿರುತ್ತೆ.

ನಮ್ಮ ಉತ್ತರ ಕರ್ನಾಟಕದ ಮಂದ್ಯಾಗ ಒಂದು ಮಾತು ಅಂತಾರರೀ..
ತಂದು ಹಾಕೋರ್‍ಕಿಂತ ಮಾಡಿ ಹಾಕೋರು ಚೊಲೊ ಇರಬೇಕಂತ
ಮಾಡಿ ಹಾಕೋರ್‍ ಕಿಂತ ಅನ್ನ ಬಡಿಸುವವರು ಚೊಲೊ ಇರಬೇಕಂತ..

ಒಲುಮೆಯಿಂದ,

ಗಿರೀಶ ರಾಜನಾಳ.