ಮುಸ್ಲಿಂ ಬುದ್ಧಿಜೀವಿಗಳೇ ಎಚ್ಚೆತ್ತುಕೊಳ್ಳಿ!

To prevent automated spam submissions leave this field empty.

ಕನ್ನಡದಲ್ಲಿ ಇಸ್ಲಾಂ ಧರ್ಮ ಮತ್ತು ಇತಿಹಾಸ ಕುರಿತ ಪುಸ್ತಕಗಳು ಬಹಳ ಇಲ್ಲ. ಕುರಾನ್ ಕನ್ನಡಕ್ಕೆ ಅನುವಾದವಾಗಿದೆ. ಅದರೆ ಅದನ್ನು ಓದಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅದರ ಭಾಷೆ ಕನ್ನಡದ ಜಾಯಮಾನದಿಂದ ದೂರವಾಗಿದೆ. ಇನ್ನು ಮಂಗಳೂರಿನ ಶಾಂತಿ ಪ್ರಕಾಶನದವರು ಪ್ರಕಟಿಸಿರುವ ಪುಸ್ತಕಗಳು ಸುಲಭ ಮತ್ತು ಸರಳ ಕನ್ನಡದಲ್ಲಿವೆಯಾದರೂ, ಅವು ಮತ ಪ್ರಚಾರದ ದೃಷ್ಟಿಕೋನದಿಂದಲೇ ಬರೆಯಲ್ಪಟ್ಟು ಪ್ರಕಾಶಿತವಾಗುತ್ತಿರುವುದರಿಂದ ಅವುಗಳ ವಿಶ್ವಾಸಾರ್ಹತೆ ಯಾವಾಗಲೂ ಅನುಮಾನಾಸ್ಪದವೇ.

ಈ ದೃಷ್ಟಿಯಿಂದ ಸಾರ್ವತ್ರಿಕ ಓದಿಗೆ ಲಭ್ಯವಿರುವ ಒಂದೇ ಒಂದು ಒಳ್ಳೆಯ ಪುಸ್ತಕವೆಂದರೆ, ಬಿ.ಎಂ.ಶ್ರೀ. ಅವರು ಅನುವಾದಿಸಿ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಮಹಮ್ಮದ್ ಅಬ್ಬಾಸ್ ಷೂಸ್ತ್ರಿ ಅವರ ಇಸ್ಲಾಂ ಸಂಸ್ಕೃತಿ ಎಂದು ಕಾಣುತ್ತದೆ. ಇದಕ್ಕೆ ಕುವೆಂಪು ಅವರ ಒಂದು ಅದ್ಭುತ ಮುನ್ನುಡಿಯೂ ಇದೆ. ಆದರೆ, ಇದರ ಪ್ರತಿ ಇಂದು ದುರ್ಲಭವಾಗಿದೆಯೆಂದೇ ಕೇಳಿದ್ದೇನೆ. ಹಾಗಾಗಿ ಕನ್ನಡಿಗರಾದ ಮುಸ್ಲಿಮೇತರರಿಗೆ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಗಳನ್ನು ಅರಿಯುವ ಅವಕಾಶ ಕಡಿಮೆಯೇ ಎಂದು ಹೇಳಬೇಕು. ದರ್ಗಾ ಮತ್ತು ಮೊಹರಂ ಸಂಸ್ಕೃತಿ ಪ್ರಚಲಿತವಿರುವ ಕೆಲವು ಗ್ರಾಮಾಂತರ ಪ್ರದೇಶಗಳ ಸಾಮಾನ್ಯ ಜನಜೀವನದ ಪಾತಳಿಯಲ್ಲಿ, ಇದು ಒಂದಷ್ಟು ಅರಿವಿಗೆ ತೆರೆದುಕೊಂಡಿರಬಹುದಷ್ಟೆ. ನಗರ ಪ್ರದೇಶಗಳಲ್ಲಂತೂ, ಮುಸ್ಲಿಮೇತರರು ಮುಸ್ಲಿಂ ಹಬ್ಬಗಳಲ್ಲಿ ತಮ್ಮ ಮುಸ್ಲಿಂ ಸ್ನೇಹಿತರ ಮನೆಗಳಲ್ಲಿ ರುಚಿಕಟ್ಟಾದ ದಂ ಬಿರಿಯಾನಿ ತಿಂದು ಬರುವುದರ ಹೊರತಾಗಿ, ಅದನ್ನು ಮೀರಿ ಅವರೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡ ಸುಳಿವುಗಳಿಲ್ಲ! ನಮ್ಮ ರಾಜ್ಯದಲ್ಲಿ ಕೋಮು ಪರಿಸ್ಥಿತಿ ಇಂದು ಒಂದು ಕುದಿ ಬಿಂದುವಿಗೆ ಬರುತ್ತಿರುವುದಕ್ಕೆ ಇಂತಹ ಪರಸ್ಪರ ಧಾರ್ಮಿಕ - ಸಾಂಸ್ಕೃತಿಕ ತಿಳುವಳಿಕೆಯ ಕೊರತೆಯೂ ಒಂದು ಕಾರಣವಾಗಿದ್ದರೆ ಆಶ್ಚರ್ಯವಿಲ್ಲ.

ಇಂತಹ ಸಂದರ್ಭದಲ್ಲಿ ಹಸನ್ ನಯೀಂ ಸುರಕೋಡ ಅವರು ಅನುವಾದಿಸಿರುವ ಇಸ್ಲಾಂ: ಹುಟ್ಟು ಮತ್ತು ವಿಕಾಸ ಪುಸ್ತಕದ (ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ) ಮಹತ್ವ ಮತ್ತು ಪ್ರಸ್ತುತತೆ ಎದ್ದು ಕಾಣುವಂತಿದೆ. ಇಂದು ಭಾರತದಲ್ಲಿ ಅಪರೂಪವಾಗಿರುವ ಮುಸ್ಲಿಂ ವೈಚಾರಿಕರಲ್ಲಿ ಒಬ್ಬರಾದ ಅಸ್ಗರ್ ಅಲಿ ಇಂಜಿನಿಯರ್ ಅವರ ‘The origin and development of Islam’ಎಂಬ ಇಂಗ್ಲಿಷ್ ಪುಸ್ತಕದ ಕನ್ನಡ ಅವತರಣಿಕೆಯಿದು. ಸುರಕೋಡ ಬೆಳಗಾವಿ ಜಿಲ್ಲೆಯ ರಾಮದುರ್ಗವೆಂಬ ಮೂಲೆಯೂರಿನಲ್ಲಿ ತಮ್ಮ ಪಾಡಿಗೆ ತಾವು ಮೌನವಾಗಿ ಸಮಾಜವಾದಿ ಕೆಲಸಗಳಲ್ಲಿ ತೊಡಗಿಕೊಂಡವರು. ಲೋಹಿಯಾ ವ್ಯಕ್ತಿ - ವಿಚಾರಗಳನ್ನು ಕನ್ನಡಕ್ಕೆ ತರುತ್ತಿರುವ ಪ್ರಮುಖರಲ್ಲಿ ಅವರೂ ಒಬ್ಬರು. ಜೊತೆಗೆ ಭಾರತದ ಇಸ್ಲಾಮೀ ಸಂಸ್ಕೃತಿ ಮತ್ತು ಅದರ ರಾಜಕೀಯ ಮುಖಗಳನ್ನು ವಿಶ್ಲೇಷಿಸುವ ಸಾಹಿತ್ಯವನ್ನೂ ಕನ್ನಡಕ್ಕೆ ತರುತ್ತಿರುವವರು. ಇವರ ಅನುವಾದಗಳಾದ ಹಿಂದೂ ಮಂದಿರಗಳು ಮತ್ತು ಔರಂಗಜೇಬನ ಆದೇಶಗಳು ಹಾಗೂ ಅಯೋಧ್ಯೆ: ವಿನಾಶಕಾರಿ ವೋಟ್‌ಬ್ಯಾಂಕ್ ರಾಜಕೀಯ ಈ ದೃಷ್ಟಿಯಿಂದ ಎಲ್ಲರೂ ಗಮನಿಸಬೇಕಾದ ಪುಸ್ತಕಗಳು. ಈಗ ಸುರಕೋಡ ಅವರಿಗೆ ಅಮೃತಾ ಪ್ರೀತಂ ಅವರ ಆತ್ಮಕತೆ ರಸೀದಿ ಟಿಕೆಟ್ ಅನುವಾದಕ್ಕಾಗಿ ೨೦೦೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಅವರಿಗೆ ಅಭಿನಂದನೆಗಳು!

ಇಸ್ಲಾಂ: ಹುಟ್ಟು ಮತ್ತು ವಿಕಾಸ, ಅದರ ಶೀರ್ಷಿಕೆಯೇ ಸೂಚಿಸುವಂತೆ ಅರೇಬಿಯಾದಲ್ಲಿ ಇಸ್ಲಾಂ ಧರ್ಮ ಹುಟ್ಟಲು ಇದ್ದ ಕಾರಣಗಳು, ಅದು ಮಹಮ್ಮದ್ ಪೈಗಂಬರರ ಮೂಲಕ ವ್ಯಕ್ತವಾದ ರೀತಿ-ನೀತಿಗಳು, ಅದು ವಿಕಾಸದ ಹಾದಿಯಲ್ಲಿ ಎದುರಿಸಿದ ಸವಾಲುಗಳು, ಬದಲಾಗುತ್ತಾ ಹೋದ ಅದರ ದೈವಶಾಸ್ತ್ರ ಹಾಗೂ ಆ ಮೂಲಕ ಇತಿಹಾಸದಲ್ಲಿ ಅದು ರೂಪಾಂತರವಾಗುತ್ತಾ ಹೋದ ಬಗೆಗಳನ್ನು ನಿರೂಪಿಸುತ್ತಾ, ಇಂದು ಈ ಧರ್ಮ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯದ ಸೂಚನೆ ನೀಡುತ್ತಾ ಮುಕ್ತಾಯವಾಗುತ್ತದೆ. ಪಾಶ್ಚಿಮಾತ್ಯ ಇತಿಹಾಸಕಾರರ ಹಾಗೂ ಮಾರ್ಕ್ಸ್‌ವಾದಿ ವಿಶ್ಲೇಷಕರ ಸಂಕೀರ್ಣ ಮತ್ತು ಪಾರಿಭಾಷಿಕ ಉಲ್ಲೇಖಗಳಿಂದ ತುಂಬಿ ಹೋಗಿರುವ ಈ ಪುಸ್ತಕ, ಪಶ್ಚಿಮದ ಪ್ರಪಂಚಕ್ಕೆ ಹೋಲಿಸಿದಂತೆ ನಮಗೆ ಸಂಪೂರ್ಣವಾಗಿ ಅಪರಿಚಿತವಾಗಿರುವ ಪ್ರದೇಶವೊಂದರ ಇತಿಹಾಸ - ರಾಜಕಾರಣಗಳ ಹೇಳುತ್ತಿರುವುದರಿಂದಲೋ ಏನೋ, ಮೊದಮೊದಲಿಗೆ ಗ್ರಹಿಕೆಗೆ ಕ್ಲಿಷ್ಟ ಎನಿಸುತ್ತದೆ. ಆದರೆ ನಮ್ಮ ಜೊತೆಯಲ್ಲಿ ಬಾಳುತ್ತಿರುವ ದೊಡ್ಡ ಸಮುದಾಯವೊಂದರ ಆಳದ ಮಾನಸಿಕತೆಯನ್ನು ಅರಿಯುವ ಅಗತ್ಯವನ್ನು ಮನಗಾಣಬಲ್ಲ ಯಾರಾದರೂ ಸ್ವಲ್ಪ ಕಷ್ಟಪಟ್ಟಾದರೂ ಇದನ್ನು ಓದಲೇ ಬೇಕಾಗುತ್ತದೆ. ಹಾಗೆ ಓದಿ ಮುಗಿಸಿದಾಗ, ಪುಸ್ತಕ ಇಂದಿನ ಕೋಮು ಪರಿಸ್ಥಿತಿಯನ್ನು ನಾವು ನೋಡುವ, ಅರ್ಥ ಮಾಡಿಕೊಳ್ಳುವ ಮತ್ತು ವಿಶ್ಲೇಷಿಸುವ ರೀತಿ ನೀತಿಗಳಲ್ಲಿ ಗುಣಾತ್ಮಕ ಬದಲಾವಣೆಯನ್ನು ಒತ್ತಾಯಿಸುತ್ತದೆ. ಇದೇ ಪುಸ್ತಕದ ಹೆಗ್ಗಳಿಕೆಯೂ ಆಗಿದೆ.

ಐದನೇ ಶತಮಾನದಲ್ಲಿ ಮಧ್ಯಪ್ರಾಚ್ಯದ, ನಿರ್ದಿಷ್ಟವಾಗಿ ಅರೇಬಿಯಾದ ಅನೇಕ ಬುಡಕಟ್ಟುಗಳ ನಡುವೆ, ಪಶು ಸಂಗೋಪನಾ ಮತ್ತು ವ್ಯಾಪಾರಿ ಸಮುದಾಯಗಳ ನಡುವೆ, ಅಲೆಮಾರಿ ಮತ್ತು ನಗರವಾಸಿಗಳ ನಡುವೆ - ಹೀಗೆ ಹಲವು ಸ್ತರಗಳಲ್ಲಿ ನಡೆದಿದ್ದ ಕಾಳಗಗಳಿಂದಾಗಿ ಹಿಂಸಾತ್ಮಕವೂ ಮತ್ತು ಅಶಾಂತವೂ ಆಗಿದ್ದ ಒಂದು ಪ್ರದೇಶದ ಜನ ಸಮುದಾಯದ ಮಧ್ಯೆ ಮಹಮ್ಮದ್ ದೇವದೂತರಾಗಿ ಪ್ರಸ್ತುತಗೊಂಡು, ಆ ಸಮುದಾಯದ ನೆಮ್ಮದಿ ಮತ್ತು ಐಕ್ಯತೆಗಾಗಿ ಒಂದು ಸಾಮಾಜಿಕ ಸಂಹಿತೆಯನ್ನು ಜಾರಿಗೊಳಿಸಲು ಹೆಣಗಿದರು. ಆ ಮೂಲಕ, ಅಲ್ಲಿನ ರಣರಂಗದಲ್ಲಿ ಸೃಷ್ಟಿಯಾಗಿದ್ದ ಅಸಂಖ್ಯಾತ ಅನಾಥ ಮಕ್ಕಳ, ವಿಧವೆಯರ ಮತ್ತು ಗುಲಾಮರ ಗೋಳು - ಸಂಕಷ್ಟಗಳನ್ನು ಒಂದು ತಹಬಂದಿಗೆ ತರಲು ಯತ್ನಿಸಿದರು. ಇದಕ್ಕಾಗಿ ಮುಖ್ಯವಾಗಿ ಪ್ರವಾದಿ ಬಳಸಿದ್ದು ಏಕದೇವತೋಪಾಸನೆಯ ತತ್ವ ಮತ್ತು ಮೂರ್ತಿಭಂಜನೆಯ ಕಾರ್ಯಕ್ರಮಗಳನ್ನು. ಏಕೆಂದರೆ ಅಲ್ಲಿನ ಬುಡಕಟ್ಟುಗಳು ಹಲವಾರು ಕಲ್ಲು - ಮರಗಳ ದೇವತೆಗಳನ್ನು ಪೂಜಿಸುತ್ತ, ಮೌಢ್ಯಾಚಾರಗಳಲ್ಲಿ ಮುಳುಗಿ, ಪರಸ್ಪರ ವೈರ ಮತ್ತು ಭೀಕರ ಹಿಂಸಾಚಾರಗಳಿಗೆ ಕಾರಣವಾಗಿದ್ದವು. ಅರೇಬಿಯಾ ಮೂಲತಃ ಮರುಭೂಮಿಯದುದರಿಂದ ಅಲ್ಲಿ ಕೃಷಿ ಸಮಾಜವೆಂಬುದೇ ವಿಕಾಸವಾಗಿರಲಿಲ್ಲ. ಹಾಗಾಗಿ ಅಲ್ಲಿ ಯಾವುದೇ ಸಂಸ್ಕೃತಿ ಎಂಬುದರ ಸುಳಿವಿರಲಿಲ್ಲ. ಒಂಟೆಗಳೇ ಏಕೈಕ ಜೀವನಾಧಾರವಾಗಿದ್ದ ಅಲ್ಲಿ, ಅವನ್ನು ಬಳಸಿಕೊಂಡೇ ಆಹಾರ ಮತ್ತು ಇತರ ಜೀವನಾವಶ್ಯಕತೆಗಳಿಗಾಗಿ ಖಂಡಾಂತರ ವ್ಯಾಪಾರ ಮತ್ತು ಲೂಟಿಗಳಲ್ಲಿ ತೊಡಗಿದ್ದವು. ಹಾಗಾಗಿ, ಅಲ್ಲಿನ ಬುಡಕಟ್ಟುಗಳು ಮೂಲತಃ ಅನಾಗರಿಕವಾಗಿದ್ದವು ಮತ್ತು ಬರ್ಬರತೆಯೇ ಅವರ ಸಹಜ ಧರ್ಮವಾಗಿತ್ತು.

ಇವರಿಗೊಂದು ನಾಗರೀಕತೆಯನ್ನು ರೂಪಿಸುವ ಸಾಹಸ ಮಾಡಿದವರು ಮಹಮ್ಮದ್. ಹಾಗಾಗಿಯೇ ಇಸ್ಲಾಂ ಮೂಲತಃ ಒಂದು ಲೌಕಿಕ ಧರ್ಮವಾಗಿ, ಮನುಷ್ಯನ ಸಾಮಾಜಿಕ ಜೀವನದ ಬಗ್ಗೆ (ಊಟ, ಮದುವೆ, ದೈಹಿಕ ಶುಚಿ, ಉಡುಪಿನ ಶೈಲಿ, ಅತಿಥಿ ಸತ್ಕಾರ, ಆಸ್ತಿ ವಾರಸುದಾರಿಕೆ ಹಾಗೂ ವಿತರಣೆ, ಯುದ್ಧ ತಂತ್ರ, ಶತ್ರು ನಾಶ ಇತ್ಯಾದಿ) ವಿವರವಾದ ನಿರ್ದೇಶನಗಳನ್ನು ನೀಡುತ್ತದೆ. ಇದಕ್ಕೆ ಹಿನ್ನೆಲೆಯಾಗಿ ಮತ್ತು ಸಮರ್ಥನೆಯಾಗಷ್ಟೇ ಅದು ತನ್ನ ದೈವಶಾಸ್ತ್ರವನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಮಹಮ್ಮದರು ತಮ್ಮ ಧರ್ಮ ಪ್ರಸಾರಕ್ಕಾಗಿ ಒಬ್ಬ ಅಧ್ಯಾತ್ಮಿಕ ವ್ಯಕ್ತಿಯಾಗಿ ಮಾತ್ರವಲ್ಲ, ರಾಜಕೀಯ ನಾಯಕರಾಗಿಯೂ ಕೆಲಸ ಮಾಡಬೇಕಾಯಿತು. ಇಸ್ಲಾಂ ಧರ್ಮದೊಂದಿಗೆ ಇಸ್ಲಾಂ ರಾಜ್ಯವೊಂದನ್ನೂ ಸ್ಥಾಪಿಸಬೇಕಾಯಿತು. ಮೂಲತಃ ವ್ಯಾಪಾರಿ ಕಟುಂಬವೊಂದರಲ್ಲಿ ಜನಿಸಿ, ಶ್ರೀಮಂತ ವ್ಯಾಪಾರಿ ಮಹಿಳೆಯೊಬ್ಬರನ್ನು ಮದುವೆಯಾದ ಮಹಮ್ಮದರು ಆಸ್ತಿಕತೆ, ಸಮಾನತೆ ಮತ್ತು ಸೋದರತೆಗಳನ್ನು ಆಧರಿಸಿದ ಸಮಾಜವೊಂದನ್ನು ಕಟ್ಟುವ ತಮ್ಮ ಪ್ರಯತ್ನದಲ್ಲಿ ಪಟ್ಟಭದ್ರ ವ್ಯಾಪಾರಿ ಮತ್ತು ಅಲೆಮಾರಿ ಬುಡಕಟ್ಟು ಈ ಎರಡೂ ಸಮುದಾಯಗಳಿಂದಲೂ ವೈರ ಮತ್ತು ದಾಳಿಗಳನ್ನು ಎದುರಿಸಬೇಕಾಯಿತು. ಹಾಗಾಗಿ ಅವರು ತಮ್ಮ ಮೂಲ ಸ್ಥಳವಾದ ಅರಬ್ಬರ ಮುಖ್ಯ ವ್ಯಾಪಾರಿ ಕೇಂದ್ರವಾಗಿದ್ದ ಮೆಕ್ಕಾದಿಂದ, ಈಗಾಗಲೇ ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳಿಂದ ಪ್ರಭಾವಿತವಾಗಿ ಸ್ವಲ್ಪ ವೈಚಾರಿಕ ಸ್ಪಂದನಶೀಲತೆಯನ್ನು ಬೆಳೆಸಿಕೊಂಡ, ಮಿಶ್ರ ಸಮಾಜವಿದ್ದ ಮದೀನಾಗೆ ಓಡಿ ಹೋಗಬೇಕಾಯಿತು. ಅಲ್ಲಿ ಅವರು ತಮ್ಮ ಅನುಯಾಯಿಗಳ ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ತಮ್ಮ ಎದುರಾಳಿಗಳನ್ನು ಹಲವು ಪ್ರತಿ ದಾಳಿ - ಲೂಟಿ ಮುಂತಾದ ಸುಯೋಜಿತ ಯುದ್ಧೋಪಾಯಗಳ ಮೂಲಕ ನಿರ್ದಯವಾಗಿ ಬಗ್ಗು ಬಡಿದು, ಈ ಲೂಟಿಗಳಲ್ಲಿ ದೋಚಿದ ಸಂಪತ್ತನ್ನು ತಮ್ಮ ಅನುಯಾಯಿಗಳಲ್ಲಿ ಹಂಚುತ್ತಾ ಮುಸ್ಲಿಂ ಸಮಾಜವೆಂಬುದೊಂದರ ಅಸ್ತಿವಾರ ಹಾಕಬೇಕಾಯಿತು.

ಇಸ್ಲಾಂ ಧರ್ಮದ ನೀತಿಶಾಸ್ತ್ರ ಮೂಲತಃ ಈ ಪ್ರಕ್ರಿಯೆಯಲ್ಲಿ ಹುಟ್ಟಿದುದು. ಅಲ್ಲಿ ದಯೆ, ಕರುಣೆ, ಕ್ಷಮೆಗಳೆನ್ನುವುದು ಸಾರ್ವತ್ರಿಕ ಅಥವಾ ನಿರಪೇಕ್ಷ ಮೌಲ್ಯಗಳಲ್ಲ. ಅವೇನಿದ್ದರೂ ವ್ಯಾವಾಹಾರಿಕ ಮತ್ತು ಸಾಂದರ್ಭಿಕ. ಹೀಗಾಗಿ ಇಸ್ಲಾಮನ್ನು ಇತರ ಧರ್ಮಗಳ ಎರಕದಲ್ಲಿಟ್ಟು ವಿಮರ್ಶಿಸುವುದು ಅಸಂಗತವಾದೀತು. ಈಗ ನಾವು ಮಾಡುತ್ತಿರುವ ತಪ್ಪು ಇದೇ ಆಗಿದೆ. ಮಹಮ್ಮದರ ನಂತರದ ದಿನಗಳಲ್ಲಿ, ಏಳು - ಎಂಟನೇ ಶತಮಾನಗಳ ಹೊತ್ತಿಗೆ ಇಸ್ಲಾಂ ರಾಜ್ಯ ಒಂದು ಸಾಮ್ರಾಜ್ಯವಾಗಿ ವಿಸ್ತರಿಸುತ್ತಾ, ಹಲವು ಅನ್ಯ ಸಂಸ್ಕೃತಿಗಳ - ವಿಶೇಷವಾಗಿ ಪರ್ಷಿಯನ್, ಗ್ರೀಕ್ ಮತ್ತು ಭಾರತೀಯ - ಸಂಪರ್ಕಕ್ಕೆ ಬಂದಿತು. ಇದರಿಂದಾಗಿ ಅದು ತನ್ನ ಹುಟ್ಟಿನ ಕಟು ವಾಸ್ತವದ ಸ್ಮೃತಿಗಳಾಚೆ ಬೆಳೆದು, ತನ್ನ ಹಲವಾರು ಉದಾರವಾದಿ ಆವೃತ್ತಿಗಳಲ್ಲಿ ಅನುಭಾವಿಕ ಸ್ತರಗಳನ್ನು ಮುಟ್ಟುವ ಪ್ರಯತ್ನವನ್ನೂ ಮಾಡಿತು. ಇಂತಹ ಸಂದರ್ಭಗಳಲ್ಲೇ ಮುಸ್ಲಿಂ ಸಮುದಾಯ ಸಾಹಿತ್ಯ, ಸಂಗೀತ, ವಾಸ್ತು, ವಿಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಅನುಪಮವೆನ್ನಬಹುದಾದ ಸಾಧನೆಗಳನ್ನು ಮಾಡಲು ಸಾಧ್ಯವಾದದ್ದು ಮತ್ತು ಅದರ ಪರಿಣಾಮವಾಗಿ ಈ ಧರ್ಮ ಕಾಲದ ಕಟ್ಟುಗಳನ್ನು ಕಳಚಿಕೊಂಡು ಸ್ಪಂದನಶೀಲವೂ ಆದದ್ದು.

ಆದರೆ, ನಿರ್ದಯ ಯುದ್ಧಗಳಲ್ಲೇ ಹುಟ್ಟಿ ಬೆಳೆದ ಈ ಧರ್ಮರಾಜ್ಯದಲ್ಲಿಅಂದರೆ ಧರ್ಮ ಮತ್ತು ಪ್ರಭುತ್ವ ಅವಿಭಾಜ್ಯವಾಗಿರುವ ವ್ಯವಸ್ಥೆಯಲ್ಲಿ - ಹಳೆಯ ಸ್ಮೃತಿಗಳನ್ನಾಧರಿಸಿದ ಗುಂಪುಗಳ ಬಂಡಾಯಗಳು ನಿರಂತರವಾಗಿ ಏಳುತ್ತಲೇ ಬಂದುದರಿಂದ ಮತ್ತು ಬರುತ್ತಿರುವುದರಿಂದ (ಉದಾ: ಇಂದಿನ ತಾಲಿಬಾನ್) ಇಸ್ಲಾಂ ತನ್ನೆಲ್ಲಾ ಅನುಭಾವಿಕತೆಯನ್ನು ವಿಸ್ಮೃತಿಗೆ ತಳ್ಳಿಕೊಳ್ಳುತ್ತಲೇ ಬಂದಿದೆ. ಇದರ ಪರಿಣಾಮವಾಗಿ ಅದು ಮುಲ್ಲಾಶಾಹಿ ಎಂದು ಕರೆಯಬಹುದಾದ ಪುರೋಹಿತಶಾಹಿಯೊಂದರ ಪ್ರಬಲ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡಿದೆ. ಹೀಗಾಗಿ ಅದು ಇತರ ಧರ್ಮೀಯರಿಗೆ ಒಂದು ಸಮಸ್ಯಾತ್ಮಕ ಧರ್ಮವೇ ಆಗಿ ಬೆಳೆದು ನಿಂತಿದೆ. ಮುಖ್ಯವಾಗಿ ಪ್ರಜಾಪ್ರಭುತ್ವ ಎಂಬ ಆಧುನಿಕ ತತ್ವ ಅದಕ್ಕೊಂದು ಸಂಪೂರ್ಣವಾಗಿ ಪರಿಹರಿಸಿಕೊಳ್ಳಲಾಗದ ಸಮಸ್ಯೆಯೇ ಆಗಿಬಿಟ್ಟಿದೆ. ಅದು ಪರಿಶುದ್ಧತೆಯ ಹೆಸರಿನಲ್ಲಿ, ಕೆಲವು ಸಂಕ್ಷಿಪ್ತ ಮತ್ತು ಸ್ಪಂದನಶೀಲ ವಿರಾಮಗಳ ಹೊರತಾಗಿ, ತನ್ನ ಮಧ್ಯಯುಗೀನತೆಯನ್ನು ಕಳೆದುಕೊಳ್ಳಲು ಸದಾ ನಿರಾಕರಿಸುತ್ತಲೇ ಬಂದಿದೆ.

ಈ ಪರಿಶುದ್ಧತೆಯ ಮಾದರಿಯಲ್ಲಿ ಸಮಾನತೆ ಹಾಗೂ ಸೋದರತೆಗಳ ಮತ್ತು ಅವುಗಳ ಸ್ಥಾಪನೆಗಾಗಿ ದಯೆ-ದಾನಗಳ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ, ನಿಜ. ಅದರೆ, ಅವುಗಳೆಲ್ಲವೂ ಮಹಮ್ಮದರ ಕಾಲದ  ಧಾರ್ಮಿಕ ಆಡಳಿತದ ಮಾದರಿ ಚೌಕಟ್ಟಿನಲ್ಲಿಯೇ ಜಾರಿಯಾಗಬೇಕೆಂಬ ನಂಬಿಕೆಯೂ ಇದರಲ್ಲಿ ಅಂತರ್ಗತವಾಗಿರುವುದರಿಂದ, ಈ ಮೌಲ್ಯಗಳು ಅವುಗಳ ಮಧ್ಯಯುಗೀನ ಅರ್ಥದಲ್ಲಿಯಷ್ಟೇ ಪ್ರಸ್ತುತಗೊಳ್ಳುತ್ತಿವೆ. ಉದಾಹರಣೆಗೆ, ಗಂಡು ಹೆಣ್ಣುಗಳಿಬ್ಬರಿಗೂ ವಿವಾಹದ ಆಯ್ಕೆಯ ಮತ್ತು ವಿಚ್ಛೇದನದ ಹಕ್ಕು ನೀಡುವ ಇಸ್ಲಾಂ, ಹೆಣ್ಣು ಗಂಡಿಗಿಂತ ಕಡಿಮೆ ದರ್ಜೆಯ ಪ್ರಾಣಿ ಎಂಬ ನಂಬಿಕೆಯನ್ನು ಬಿತ್ತುತ್ತಾ, ಅವಳಿಗೆ ಆಸ್ತಿ, ವಿದ್ಯೆ, ಲೈಂಗಿಕತೆ, ಸಾರ್ವಜನಿಕ ಜೀವನ ಇತ್ಯಾದಿ ವಿಷಯಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತದೆ. ಇದು ಮಹಮ್ಮದರ ಕಾಲದಲ್ಲಿದ್ದ ಸಮಾಜದ ಸಂದರ್ಭದಲ್ಲಿ ಉಚಿತವೆನಿಸಬಹುದಾಗಿದ್ದರೂ, ಈಗ? ಜಗತ್ತಿನಾದ್ಯಂತ ಮುಸ್ಲಿಂ ಜಗತ್ತಿನಲ್ಲಿ ಇದನ್ನು ಪ್ರಶ್ನಿಸುವರನ್ನೆಲ್ಲ ಹೇಗೆ ಹೆದರಿಸಿ ಬಾಯಿ ಮುಚ್ಚಿಸುವ ಅನಾಗರಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ.

ಇದಕ್ಕೆ ಕಾರಣ, ಮಹಮ್ಮದರ ಕಾಲದಲ್ಲೇ ಈ ಸಮಾನತೆ, ಸೋದರತೆ ಮತ್ತು ಆ ಸಂಬಂಧದ ದಯೆ-ದಾನ ಇತ್ಯಾದಿ ಉದಾರವಾದಿ ಮೌಲ್ಯಗಳನ್ನು ಮೂರ್ತ ರೂಪಗಳಲ್ಲಿ ನೆಲೆಗೊಳಿಸುವುದು ಸಾಧ್ಯವಾಗದೇ ಹೋದದ್ದು. ಇದಕ್ಕೆ ಮತ್ತೆ, ಅವರು ಧರ್ಮ ಪ್ರಸಾರಕ್ಕಾಗಿ ಅನುಸರಿಸಿದ ಮಾರ್ಗ ಮತ್ತು ಅದರಿಂದಾಗಿಯೇ ಎದುರಿಸಬೇಕಾಗಿ ಬಂದ ಸಶಸ್ತ್ರ ಬಂಡಾಯಗಳ ವಿಷಮ ಸಂದರ್ಭಗಳೇ ಕಾರಣವೆಂದು ಅಸ್ಗರ್ ಅಲಿ ಅಭಿಪ್ರಾಯ ಪಡುತ್ತಾರೆ. (ವಿವೇಕಾನಂದರು, ಪೈಗಂಬರರ ಅಧ್ಯಾತ್ಮಿಕ ಸಾಧನೆ ಒಂದು ಹಂತದಾಚೆಗೆ ದಾಟದೇ ಇದ್ದುದೇ ಇದಕ್ಕೆ ಕಾರಣವೆಂದು ಹೇಳುತ್ತಾರೆ!) ಅಸ್ಗರ್ ಪ್ರಕಾರ ಇಸ್ಲಾಂನ ಹೆಗ್ಗುರುತುಗಳೆಂದು ಹೇಳಲಾಗುವ ಸೋದರತೆ ಮತ್ತು ಸಮಾನತೆಗಳು ನಮಾಜ್ಗೆ ಎಲ್ಲರೂ ಒಂದೇ ಸಾಲಿನಲ್ಲಿ ಸಮಾನವಾಗಿ ನಿಲ್ಲುವುದಕ್ಕಷ್ಟೇ ಸೀಮಿತವಾಗಿದ್ದರೆ, ದಯೆ-ದಾನಗಳು ಸಾಂದರ್ಭಿಕ ಮತ್ತು ಸಾಂಕೇತಿಕ ವಿಧಿಗಳಾಗಿ ಮಾತ್ರ ಜಾರಿಯಲ್ಲಿವೆ. ಹೀಗಾಗಿ ಮುಸ್ಲಿಂ ಸಮಾಜ ಎಲ್ಲ ಸಮಾಜಗಳಂತೆಯೇ ಐತಿಹಾಸಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಅಸಮತೆಗಳ ಸಮಾಜವಾಗಿ ಉಳಿದುಕೊಂಡು ಬಂದಿದೆ. ಹಾಗಾಗಿಯೇ ಮಹಮ್ಮದರು ಎತ್ತಿ ಹಿಡಿದ ಮೌಲ್ಯಗಳನ್ನು ಈ ಕಾಲಕ್ಕೂ ಪ್ರಸ್ತುತಗೊಳಿಸಿಕೊಳ್ಳಲು, ಅಂದರೆ ಸೋದರತೆ, ಸಮಾನತೆಗಳನ್ನು ಸ್ಥಾಪಿಸಲು ಇಸ್ಲಾಂ ಮೊದಲು ತನ್ನನ್ನು ತಾನು ದೇಶ-ಕಾಲಗಳ ಬಂಧನಗಳಿಂದ ಬಿಡಿಸಿಕೊಳ್ಳಬೇಕೆಂದು ಲೇಖಕರು ಸೂಚಿಸುತ್ತಾರೆ.

ಆದರೆ ಇಂದು ನಮ್ಮ ಕಣ್ಮುಂದೆಯೇ, ಬುರ್ಕಾಗಳ, ಟೋಪಿಗಳ, ವೈಭವೋಪೇತ ಮಸೀದಿಗಳ, ಮದರಸಾಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಇಂದು ಮೂಲೆ ಹಳ್ಳಿಗಳಲ್ಲೂ ತಬ್ಲೀಸ್(?)ಗಳೆಂದು ಹೇಳಲಾಗುವ ಪುಟ್ಟ ಹುಡುಗರಿಂದ ಹಿಡಿದು ವೃದ್ಧರವರೆಗಿನ ವಿವಿಧ ವಯೋಮಾನದವರು ಸೇರಿದ ಮತ ಪ್ರಚಾಕರ ತಂಡ, ಮುಸ್ಲಿಮರ ಮನೆ ಮನೆಗೂ ಭೇಟಿ ನೀಡಿ ಮತೀಯ ಸಂಪ್ರದಾಯಗಳನ್ನೂ, ಭೌತಿಕ ಗುರುತುಗಳನ್ನೂ ಪುನರುಜ್ಜೀವನಗೊಳಿಸಲು; ಮತ್ತೂ ಮುಖ್ಯವಾಗಿ, ಇತರ ಧರ್ಮಗಳ ಸಂಪರ್ಕದಲ್ಲಿ ಇಸ್ಲಾಂ ರೂಢಿಸಿಕೊಂಡ ಅಷ್ಟಿಷ್ಟು ಸ್ಥಳೀಯತೆಯ ಗುಣ-ಸ್ಪರ್ಶಗಳನ್ನೂ ಅಳಿಸಿ ಹಾಕುವ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಇದರಿಂದಾಗಿ, ಭಾರತದ ಸ್ವಾತಂತ್ರ್ಯೋತ್ತರ ನವೋದಯದ ಸಂದರ್ಭದಲ್ಲಿ ಕಾಲ-ದೇಶಬದ್ಧವಾದ ಹೊರ ಚಹರೆಗಳನ್ನು ಕ್ರಮೇಣ ವಿಸರ್ಜಿಸಿಕೊಳ್ಳುತ್ತಾ ಪ್ರಗತಿಪರವಾಗತೊಡಗಿದ್ದ ಭಾರತೀಯ ಮುಸ್ಲಿಂ ಸಮುದಾಯ, ಈಗ ಸಾಮಾನ್ಯ ಜನಜೀವನದ ಮುಖ್ಯವಾಹಿನಿಯ ಮಧ್ಯೆ ತನ್ನ ಮತೀಯ ಗುರುತುಗಳೊಂದಿಗೆ, ತಾನು ಬೇರೆಯೇ ಎಂದು ಸಾರುವಂತೆ ಎದ್ದು ಕಾಣತೊಡಗಿದೆ. ಇದಕ್ಕೆ ಬಾಬ್ರಿ ಮಸೀದಿ ನಾಶದೊಂದಿಗೆ ವ್ಯಾಪಕವಾಗಿ ಸ್ಫೋಟಗೊಂಡ ಹಿಂದೂ ಕೋಮುವಾದದ ಒತ್ತಡಗಳೇ ಕಾರಣವೆಂದು ಹೇಳುವುದು ಒಂದು ಸುಲಭದ ಉತ್ತರವಾದೀತು. ಹೆಚ್ಚೆಂದರೆ, ಅದೊಂದು ನೆಪ ಮಾತ್ರ.

ಜಗತ್ತಿನಾದ್ಯಂತ ತೈಲಾಧಾರಿತ ನಾಗರೀಕತೆ ದಾಪುಗಾಲಿಟ್ಟು ಬೆಳೆಯುತ್ತಿದ್ದಂತೆ, ಮುಸ್ಲಿಂ ಮತೀಯತೆಯೂ ದಾಪುಗಾಲಿಟ್ಟು ಬೆಳೆಯತೊಡಗಿದ್ದನ್ನು ನಾವು ನೋಡುತ್ತಾ ಬಂದಿದ್ದೇವೆ. ಇದರ ಭಾಗವಾಗಿಯೇ ಮಧ್ಯ ಪ್ರಾಚ್ಯದ ಪೆಟ್ರೋ ಡಾಲರುಗಳು ಭಾರತದಾದ್ಯಂತ ಹರಿದಾಡಿ ಸಣ್ಣ ಪುಟ್ಟ ಊರುಗಳಲ್ಲೂ ವೈಭವೋಪೇತ ಮಸೀದಿಗಳು ಎದ್ದುದನ್ನೂ, ಅವುಗಳ ಜೊತೆಗೇ ಗಡ್ಡ, ಟೋಪಿ, ಬುರ್ಕಾಗಳ ಸಂಸ್ಕೃತಿ ದಟ್ಟವಾಗಿ ಬೆಳೆಯತೊಡಗಿದ್ದನ್ನೂ ನಾವು ಗಮನಿಸಿದ್ದೇವೆ. ತೊಂಭತ್ತರ ದಶಕದಲ್ಲಿ ರಾಜಕೀಯ ನೆಲೆಯಲ್ಲಿ ಅವತರಿಸಿದ ಹಿಂದೂ ಕೋಮುವಾದ ಹೆಚ್ಚೆಂದರೆ ಇದರ ವೇಗೋತ್ಕರ್ಷ ಮತ್ತು ತೀವ್ರತೆಯನ್ನು ಹೆಚ್ಚಿಸಿ, ಇದಕ್ಕೆ ಹುಸಿ ಸಮರ್ಥನೆಯೊಂದನ್ನು ಒದಗಿಸಿರಬಹುದಷ್ಟೆ. ಹಾಗೆ ನೋಡಿದರೆ, ಅಸ್ಗರ್ ಅಲಿಯವರು ತಮ್ಮ ಪುಸ್ತಕದಲ್ಲಿ; ಇತಿಹಾಸದಲ್ಲಿ ಮುಸ್ಲಿಂ ಸಾಮ್ರಾಜ್ಯ ವಿಸ್ತರಿಸುತ್ತಾ ಅದರ ಸಂಪತ್ತು ಹೆಚ್ಚಿದ ಸಂದರ್ಭದಲ್ಲೆಲ್ಲಾ ಇಸ್ಲಾಂನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಬೆಳೆದು, ಅದು ಮೂಲಭೂತವಾದಿಯಾಗತೊಡಗಿದ್ದನ್ನು ನಮ್ಮ ಗಮನಕ್ಕೆ ತರುತ್ತಾರೆ. ಬಹುಶಃ ಇದು ಇಸ್ಲಾಂಗೆ ಮಾತ್ರ ಅನ್ವಯಿಸುವ ಮಾತಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ ಐ.ಟಿ.-ಬಿ.ಟಿ. ಉದ್ಯಮಗಳು ವಿಪರೀತ ಗತಿಯಲ್ಲಿ ಬೆಳೆದು, ಅದರ ವೈವಿಧ್ಯಮಯ ಪರಿಣಾಮಗಳಿಂದಾಗಿ ಕೆಲವು ವರ್ಗಗಳಲ್ಲಿ ಅನುಚಿತವೆನಿಸುವಷ್ಟು ವಿಪರೀತ ಸಂಪತ್ತು ಸೃಷ್ಟಿಯಾಗುತ್ತಿದ್ದಂತೆ, ಈ ರಾಜ್ಯ ಹಿಂದೂ ಕೋಮುವಾದದ ದಟ್ಟ ಪ್ರಭಾವಕ್ಕೆ ಸಿಕ್ಕತೊಡಗಿದುದನ್ನು ಇದೇ ನೆಲೆಯಲ್ಲಿ ವಿವರಿಸಬಹುದೇನೋ!

ಆದರೆ ಹಿಂದೂ ಕೋಮುವಾದದ ಬಗ್ಗೆ ಎಚ್ಚರಿಸಲು, ಅದನ್ನು ಖಂಡಿಸಲು, ಎದುರಿಸಲು ಹಿಂದೂಗಳೆನಿಸಿಕೊಂಡ ಸಮುದಾಯದಲ್ಲೇ ಬುದ್ಧಿಜೀವಿ - ಲೇಖಕ - ಕಲಾವಿದರ ವರ್ಗವೊಂದು ಸದಾ ಕ್ರಿಯಾಶೀಲವಾಗಿರುತ್ತದೆ. ಇದು ಹಿಂದೂ ಧರ್ಮದ ಬತ್ತದ ಸೃಜನಶೀಲತೆಗೆ, ಜೀವಂತಿಕೆಗೆ, ವಿಶಿಷ್ಟ ಬಹುಮುಖ ಸೌಂದರ್ಯಕ್ಕೆ ಕಾರಣವೂ ಆಗಿದೆ. ಆದರೆ ಇಸ್ಲಾಂನಲ್ಲಿ? ಭಾರತದಲ್ಲಂತೂ ಈಗ ಅದರ ಸೆಲೆಯೇ ಕಾಣದಾಗಿದೆ. ಕರ್ನಾಟಕದ ಮಟ್ಟಿಗಂತೂ ಸಾರಾ ಅಬೂಬಕರ್ ಎಂಬ ದಿಟ್ಟ ಮತ್ತು ಸಾತ್ವಿಕ ಮಹಿಳೆಯ ಹೊರತಾಗಿ, ಇನ್ನೊಂದು ಪ್ರತಿಭಟನೆಯ ಧ್ವನಿ ಕೇಳದಾಗಿದೆ. ಶಾಬಾನು ಅವರ ಹೋರಾಟದಂತೆಯೇ, ಇವರ ಹೋರಾಟವನ್ನೂ ನಿಷ್ಕ್ರಿಯಗೊಳಿಸುವ ಪ್ರಯತ್ನಗಳು ಈಗಲೂ ನಡೆದೇ ಇವೆ. ಆಶ್ಚರ್ಯವೆಂದರೆ, ಇದರಲ್ಲಿ ಮುಸ್ಲಿಂ ಮೂಲಭೂತವಾದಿಗಳೊಂದಿಗೆ ಹಿಂದೂ ಕೋಮುವಾದಿಗಳೂ ಸೇರಿಕೊಂಡಿರುವುದು! ಯಾವಾಗಲೂ ಹಾಗೇ; ಇವರು ಇಂತಹ ಪರಸ್ಪರ ಅಂತಃಸ್ಫೂರ್ತಿಯ ಮತ್ತು ಪೂರಕ ಚಟುವಟಿಕೆಗಳ ಮೂಲಕವೇ ತಮ್ಮ ಸಾಮಾನ್ಯ ಶತ್ರುವನ್ನು ಗುರುತಿಸಿ ನಾಶ ಮಾಡುತ್ತಾ, ಬೆಳೆಯುತ್ತಾ ಹೋಗುವುದು! ಅದೇನೇ ಇರಲಿ, ಅಸ್ಗರ್ ಅಲಿ ಇಂಜಿನಿಯರ್‌ರ ಹಾಲಿ ಪುಸ್ತಕ, ದೈವಶಾಸ್ತ್ರಜ್ಞರ ಹೊರತಾಗಿ ಇಸ್ಲಾಮನ್ನು ಐತಿಹಾಸಿಕವಾಗಿ ವಿಶ್ಲೇಷಿಸಲು ಮಾಡಿರುವ ಭಾರತೀಯನೊಬ್ಬನ ಮೊದಲ ಪ್ರಯತ್ನವಾಗಿದೆ (ಇದನ್ನು ಲೇಖಕರೇ ಹೇಳಿಕೊಂಡಿದ್ದಾರೆ) ಎಂದ ಮೇಲೆ, ಭಾರತೀಯ ಇಸ್ಲಾಮಿನ ಇಂದಿನ ಸ್ಥಿತಿಗತಿಗಳ ಬಗ್ಗೆ ಹೇಳಲು ಇನ್ನೇನು ಉಳಿದಿದೆ?
ಭಾರತದಲ್ಲಿ ಮುಸ್ಲಿಂ ಬುದ್ಧಿಜೀವಿಗಳು ಇಲ್ಲವೆಂದಲ್ಲ. ಇರ್ಫಾನ್ ಹಬೀಬ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಂದ ಹಿಡಿದು, ಶಬನಾ ಅಜ್ಮಿಯವರೂ ಸೇರಿದಂತೆ ನಮ್ಮ ಅನೇಕ ಮುಸ್ಲಿಂ ಕನ್ನಡ ಲೇಖಕರವರೆಗೆ ಬುದ್ಧಿಜೀವಿ - ಲೇಖಕ - ಕಲಾವಿದರ ಒಂದು ದೊಡ್ಡ ದಂಡೇ ಇದೆ! ಇವರಲ್ಲಿ ಬಹಳಷ್ಟು ಜನ ಮುಸ್ಲಿಂ ಧರ್ಮದಲ್ಲಿಯೇ, ಮುಸ್ಲಿ ಸಂಪ್ರದಾಯದಂತೆಯೇ ಮದುವೆಯಾಗಿ ತಮ್ಮ ಮಕ್ಕಳನ್ನೂ ಮುಸ್ಲಿಂ ಸಂಸ್ಕೃತಿಯಲ್ಲೇ ಬೆಳೆಸುತ್ತಿದ್ದರೂ (ಅದೊಂದು ಅಪರಾಧವೆಂದು ನಾನು ಖಂಡಿತ ಹೇಳುತ್ತಿಲ್ಲ!), ತಮ್ಮನ್ನು ಮುಸ್ಲಿಂ ಬುದ್ಧಿಜೀವಿಗಳೆಂದು ಮಾತ್ರ ಕರೆಯಬಾರದೆಂದು ಆಗ್ರಹಿಸುವ ವಿಶೇಷ ಎಚ್ಚರಿಕೆ ವಹಿಸುತ್ತಾರೆ! ಬಹುಶಃ ಹಾಗೆ ಕರೆದುಬಿಟ್ಟರೆ, ಭಾರತೀಯ ಸಮಾಜದ ವಿಮರ್ಶೆ ಎಂಬ ಸ್ಥೂಲ ಹೆಸರಿನಲ್ಲಿ, ಇತರರೊಂದಿಗೆ ಸೇರಿ ಹಿಂದೂ ಜೀವನ ಪದ್ಧತಿಯ ವಿಮರ್ಶೆ ಮಾಡುವ ತಮ್ಮ ಬೌದ್ಧಿಕ ಕರ್ತವ್ಯಕ್ಕೆ ಅಡ್ಡಿಯಾಗಬಹುದೆಂದು ಇವರು ಭಾವಿಸಿರಬಹುದು! ಅದೇನೇ ಇದ್ದರೂ, ಇವರ ಭಾರತೀಯ ಸಮಾಜದ ವಿಮರ್ಶೆಯ ಭಾಗವಾಗಿ ಮುಸ್ಲಿಂ ಸಮಾಜದ ವಿಮರ್ಶೆಯೂ ಸೇರಿಕೊಂಡಿದ್ದರೆ; ಹಿಂದೂ ಜಾತಿ ಪದ್ಧತಿ, ಅಸ್ಪೃಶ್ಯತೆ, ಮಠ ವ್ಯಸ್ಥೆ, ಮೌಢ್ಯಾಚಾರಗಳನ್ನು ಟೀಕಿಸುವಂತೆಯೇ ಮುಸ್ಲಿಂ ಧರ್ಮದ ಸದ್ಯದ ಜಡತೆ, ಕಂದಾಚಾರ, ಪ್ರತಿಗಾಮಿತನಗಳನ್ನೂ ಟೀಕಿಸತೊಡಗಿದ್ದರೆ ಮುಸ್ಲಿಂ ಮುಲ್ಲಾಶಾಹಿ ಇಷ್ಟೊಂದು ಬೆಳೆಯುತ್ತಿರಲಿಲ್ಲವೇನೋ. ಹಾಗೇ, ನಮ್ಮ ಕೋಮು ಪರಿಸ್ಥಿತಿ ಕೂಡ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲವೇನೋ!

ಇನ್ನು ಕರ್ನಾಟಕದ ಮುಸ್ಲಿಂ ಬುದ್ಧಿಜೀವಿಗಳಲ್ಲ್ಲಿ ಕೆಲವರು ತಮ್ಮ ಹೆಂಡತಿಗೆ ಬುರ್ಕಾ ಹಾಕಿಸಿಕೊಂಡು ಓಡಾಡುತ್ತಾ, ಪ್ರಗತಿಪರ ಚಟುವಟಿಕೆಗಳಲ್ಲೂ ಮಿಂಚಲು ಯತ್ನಿಸಿದರೆ, ಇನ್ನು ಕೆಲವರು ಯಾರಿಗೂ ಕಾಣದಂತೆ ಟೋಪಿ ಏರಿಸಿಕೊಂಡು ಕಳ್ಳ ಮಾರ್ಗದಲ್ಲಿ ಮಸೀದಿಗೆ ಹೋಗಿ ಬಂದರೂ ಬಂಡಾಯದ ಬಡಾಯಿ ಕೊಚ್ಚಲು ಮಾತ್ರ ಹಿಂಜರಿಯುವುದಿಲ್ಲ! ಹೀಗಾಗಿ, ಭಾರತೀಯ ಮುಸ್ಲಿಂ ಮೂಲಭೂತವಾದದ ಅತ್ಯಂತ ನಿರ್ಲಜ್ಜ ಉದಾಹರಣೆಯಂತಿರುವ ಶಾಬಾನು ಪ್ರಕರಣದ ಬಗ್ಗೆ ಒಂದೂ ಸೊಲ್ಲೆತ್ತದ, ಅದರಲ್ಲಿ ಅಂತರ್ಗತವಾಗಿದ್ದ ಅಮಾನವೀಯತೆಯ ವಿರುದ್ಧ ಒಂದು ಕಾರ್ಯಕ್ರಮವನ್ನೂ ಸಂಘಟಿಸಲಾಗದ ನಮ್ಮ ಈ ಮುಸ್ಲಿಂ ಬುದ್ಧಿಜೀವಿ ವರ್ಗದ ಯಾವುದೇ ವಿದ್ವತ್ತು, ಪ್ರತಿಭೆ ಮತ್ತು ಕ್ರಾಂತಿಕಾರತ್ವಗಳು ಪ್ರದರ್ಶನದ, ಮಾರಾಟದ ಸರಕಿಗಿಂತ ಹೆಚ್ಚಿನದೇನಲ್ಲ.

ಈ ದೃಷ್ಟಿಯಿಂದ ಅಸ್ಗರ್ ಅಲಿಯವರ ಪುಸ್ತಕದಲ್ಲಿ ಎದ್ದು ಕಾಣುವ ಒಂದು ಕೊರತೆ ಎಂದರೆ, ಇಸ್ಲಾಂನ ಭಾರತೀಯ ಆವೃತ್ತಿಯ ಐತಿಹಾಸಿಕತೆ ಮತ್ತು ಅದರ ವಿಶ್ಲೇಷಣೆ ಇಲ್ಲದಿರುವುದು. ಏಕೆಂದರೆ, ಭಾರತೀಯ ಇಸ್ಲಾಂಗೆ ಎರಡು ಮುಖಗಳಿವೆ; ಒಂದು ಪಶ್ಚಿಮದ ಕಡಲ ಮೂಲಕ ಬಂದ ನಾಜೂಕಿನ ವ್ಯಾಪಾರಿ ಇಸ್ಲಾಂ, ಮತ್ತೊಂದು ವಾಯುವ್ಯ ಗಡಿ ಮೂಲಕ ಬಂದ ಆಕ್ರಮಣಕಾರಿಯಾದ ಒರಟು ಇಸ್ಲಾಂ ಎಂದು ಹೇಳಲಾಗುತ್ತದೆ. ಆದರೆ ಇಂದು ಈ ಸೂಕ್ಷ್ಮ ವಿಂಗಡಣೆಯೇ ಕಾಣೆಯಾಗಿ, ಇವು ಒಂದು ಅಖಂಡ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಗೊಳ್ಳುತ್ತಿರುವುದರ ಹಿಂದೆ ಇರುವ ರಾಜಕಾರಣವಾದರೂ ಯಾವುದು ಎಂಬುದನ್ನೂ ಲೇಖಕರು ಚರ್ಚಿಸಿದ್ದರೆ ಪುಸ್ತಕ ಇಂದಿಗೆ ಹೆಚ್ಚು ಪ್ರಸ್ತುತವೆನಿಸುತ್ತಿತ್ತು. ಜೊತೆಗೆ ಹಿಂದೂ ಧರ್ಮದೊಡನೆಯ ಸಂಘರ್ಷ - ಸಂವಾದಗಳಲ್ಲಿ; ಜಾತಿ ಪದ್ಧತಿಯಿಂದಾಗಿ ಭ್ರಷ್ಟಗೊಂಡು ಅವನತಿಯ ಸ್ಥಿತಿಯಲ್ಲಿದ್ದ ಅದಕ್ಕೆ ಸಮಾನತೆ ಮತ್ತು ಸೋದರತೆಗಳ ಲೌಕಿಕ ಪಾಠಗಳನ್ನು ಹೇಳಿದ ಇಸ್ಲಾಂ (ಇಸ್ಲಾಂ ಪ್ರವೇಶದ ನಂತರವೇ ಹಿಂದೂ ಧರ್ಮದಲ್ಲಿ ಆತ್ಮಾವಲೋಕನ ಹಾಗೂ ಸುಧಾರಣೆಗಳ ಯುಗ ಆರಂಭವಾದುದೆಂಬುದನ್ನೂ ಇಲ್ಲಿ ಗಮನಿಸಬೇಕು), ಹಿಂದೂ ಧರ್ಮದ ಸುಧಾರಣಾಶೀಲತೆ ಮತ್ತು ಅಧ್ಯಾತ್ಮಿಕ ಸುಭಗತೆಗಳನ್ನು ಕಲಿಯದೇ ಹೋದದ್ದೇಕೆ ಎಂಬುದನ್ನೂ ವಿಶ್ಲೇಷಿಸಿದ್ದರೆ ಪುಸ್ತಕ ಹೆಚ್ಚು ಅರ್ಥಪೂರ್ಣವೆನಿಸುತ್ತಿತ್ತು.

ಅದೇನೇ ಇರಲಿ, ಈ ಪುಸ್ತಕದ ಓದನ್ನು ನೆಪವಾಗಿಸಿಕೊಂಡು ನಾನು ಇಷ್ಟೆಲ್ಲ ವಿಸ್ತೃತವಾಗಿ ಬರೆಯಲು ಎರಡು ತುರ್ತು ಕಾರಣಗಳಿವೆ. ಒಂದು, ಅನಿಯಂತ್ರಿತ ಮತ್ತು ಅವಿಮರ್ಶಿತ ಮುಸ್ಲಿಂ ಮೂಲಭೂತವಾದ ತನ್ನ ಸಮುದಾಯವನ್ನು ಕತ್ತಲ ಕೂಪಕ್ಕೆ (ಮೊದಲು ಮುಖವಾದರೂ ಕಾಣುವಂತಿದ್ದ ಬುರ್ಖಾಗಳಲ್ಲೀಗ ಕಣ್ಣುಗಳ ಕಿಂಡಿಗಳು ಮಾತ್ರ ತೆರೆದಿವೆ!) ತಳ್ಳುತ್ತಿದ್ದರೆ, ಅದರ ಸಾದೃಶ್ಯದಲ್ಲಿ ಹಿಂದೂ ಮೂಲಭೂತವಾದ ತನ್ನಲ್ಲಿ ತಾನೇ ಅಲ್ಲದೆ ಜನಸಾಮಾನ್ಯರ ಮಧ್ಯೆಯೂ ವ್ಯಾಪಕ ಸಮರ್ಥನೆ ಕಂಡುಕೊಳ್ಳುತ್ತಾ, ಹಣೆ ತುಂಬಾ ಕುಂಕುಮ ಬಳಿದುಕೊಂಡು ಭೀಕರ ರಾಜಕೀಯ ರೂಪವನ್ನು ತಾಳುತ್ತಿರುವುದು. ಈ ಬಜೆಟ್‌ನಲ್ಲಿ ನಮ್ಮ ಮುಖ್ಯಮಂತ್ರಿಗಳು ಹತ್ತಾರು ಜಾತಿ ಮಠಗಳಿಗೆ ಮತ್ತು ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿಗಳ ನೆರವು ಘೋಷಿಸಿರುವುದು ಮತ್ತು ಶಿವರಾತ್ರಿ ಸಂದರ್ಭದಲ್ಲಿ ನಮ್ಮ ಮುಜರಾಯಿ ಮಂತ್ರಿಗಳು ಹೃಷಿಕೇಷದಿಂದ ರೈಲಿನಲ್ಲಿ ಸಾವಿರಾರು ಲೀಟರ್‌ಗಟ್ಟಲೇ ಗಂಗಾಜಲ ತರಿಸಿ, ಅದನ್ನು ಶಿವನ ಚಿತ್ರದೊಂದಿಗೆ ಯಡಿಯೂರಪ್ಪನವರ ಚಿತ್ರವೂ ಮುದ್ರಿತವಾಗಿರುವ ಕ್ಯಾಲೆಂಡೆರಿನೊಂದಿಗೆ ಶಿವ ದೇವಾಲಯಗಳಲ್ಲಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕತೆಯ, ಘನತೆ - ಗೌರವಗಳ ಸರ್ವನಾಶದ ಪ್ರಯತ್ನವಲ್ಲದೆ ಮತ್ತೇನಲ್ಲ. ಇನ್ನು ಸಂವಿಧಾನದ ಘನತೆ - ಗೌರವಗಳ ಪ್ರಶ್ನೆಯಂತೂ ಈ ಕೋಮುವಾದಿ ಸರ್ಕಾರಕ್ಕೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಕಲಾವಿದರಿಗೇ ಸಂಬಂಧಪಟ್ಟ ಸಾರ್ವಜನಿಕ ಸಮಾರಂಭವೊಂದರಲ್ಲಿ ವೈದ್ಯಕೀಯ ಶಿಕ್ಷಣ ಮಂತ್ರಿ ರಾಮಚಂದ್ರೇ ಗೌಡರು (ಇವರೇಕೆ ಇಲ್ಲಿಗೆ ಬಂದರೋ ತಿಳಿಯದು!) ತಮ್ಮ ಭಾಷಣದಲ್ಲಿನ ಕಲಾ ವಿಮರ್ಶೆಗೆ ಅಡ್ಡಿ ಬಂದರೆಂದು; ಎಚ್ಚರಿಕೆ! ನಾನು.... ಸರ್ಕಾರ ಮಾತಾಡುತ್ತಿರುವುದು ಎಂದು ಅರಚುತ್ತಾ ನಮ್ಮ ಪ್ರತಿಭಾವಂತ ಕಲಾವಿದರೊಬ್ಬರನ್ನು ಸಮಾರಂಭದಿಂದಲೇ ಹೊರಹಾಕಲು ಆಜ್ಞೆ ಮಾಡಿದ ಪ್ರಸಂಗ, ಕೋಮುವಾದವೂ ಸರ್ವಾಧಿಕಾರವೂ ಜೊತೆ ಜೊತೆಗೇ ಬೆಳೆಯುಂತಹವು ಎಂಬುದನ್ನು ಈವರೆಗೆ ಗೊತ್ತಿಲ್ಲದವರಿಗೆ ಗೊತ್ತು ಮಾಡಿದೆ.

ಇನ್ನೊಂದು, ಪಾಕಿಸ್ತಾನದ ಸರ್ಕಾರ ತನ್ನ ವಾಯುವ್ಯ ಗಡಿ ಪ್ರಾಂತ್ಯದ ಸ್ವಾತ್ ಪ್ರದೇಶದಲ್ಲಿ ತಾಲೀಬಾನ್‌ಗೆ ಮಣಿದು ಅಲ್ಲಿ, ಹೆಣ್ಣು ಮಕ್ಕಳು ಶಾಲೆಗಳಿಗೆ ಹೋಗುವುದನ್ನೂ (ಈ ಹಿಂದೆ ಇಂತಹ ಶಾಲೆಗಳ ಮೇಲೆ ಬಾಂಬ್ ಹಾಕಲಾಗಿದೆ), ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನೂ ಮತ್ತು ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೂ ನಿಷೇಧಿಸುವ ಹಾಗೂ ವಿವಿಧ ಅಪರಾಧಗಳಿಗೆ ತಲೆ ಕಡಿಯುವ, ಕೈ ಕತ್ತರಿಸುವ, ಕಲ್ಲೆಸೆದು ಕೊಲ್ಲುವ ಇತ್ಯಾದಿ ಅನಾಗರಿಕ ರೀತಿಯ ಶಿಕ್ಷೆಗಳನ್ನೊಳಗೊಂಡ ಷರಿಯತ್ ಕಾನೂನುಗಳ ಜಾರಿಗೆ ಅವಕಾಶ ಮಾಡಿಕೊಟ್ಟಿರುವುದು. ಪಾಕಿಸ್ತಾನ ತನ್ನ ಐತಿಹಾಸಿಕ ತಪ್ಪುಗಳಿಂದಾಗಿ ಈಗ ಇಡೀ ದೇಶಾದ್ಯಂತ ತಾಲೀಬಾನಿನ ಆಕ್ರಮಣದ ಆತಂಕವನ್ನು ಎದುರಿಸುವಂತಾಗಿದೆ. ಏಕೆಂದರೆ, ಪಾಕಿಸ್ತಾನ ತನ್ನ ರಾಷ್ಟ್ರ ಜೀವನದಲ್ಲಿ ಅನೇಕ ಆಧುನಿಕತೆಗಳನ್ನು ಅಳವಡಿಸಿಕೊಂಡಿದ್ದರೂ ಸಂವಿಧಾನಾತ್ಮಕವಾಗಿ ಇಸ್ಲಾಮೀ ರಾಷ್ಟ್ರವಾಗಿಯೇ ಉಳಿದಿದೆ. ಆದುದರಿಂದ ತಾಲೀಬಾನ್ ಕಾರ್ಯಾಚರಣೆ ಹೀಗೇ ಮುಂದುವರೆದರೆ, ಅಮೆರಿಕಾದ ಎಷ್ಟೇ ನೆರವು ಬಂದರೂ, ಅದು ತನ್ನ ಆಧುನಿಕತೆಯನ್ನೆಲ್ಲ ಕಳೆದುಕೊಂಡು ಮುಸ್ಲಿಂ ಮೂಲಭೂತವಾದಿ ರಾಷ್ಟ್ರವಾಗುವ ಅಪಾಯವನ್ನು ತನ್ನ ಹತ್ತಿರಕ್ಕೇ ತಂದುಕೊಂಡಿದೆ: ತಾಲಿಬಾನಿಗಳ ಸ್ವಾತ್, ಇಸ್ಲಾಮಾಬಾದ್‌ನಿಂದ ಕೇವಲ ೨೫೦ ಕಿಲೋಮೀಟರ್ ದೂರದಲ್ಲಿದೆ! ಅಲ್ಲಿಂದ ಭಾರತದ ಗಡಿ ಮತ್ತೆ ಕೇವಲ ೨೫೦ ಕಿಲೋಮೀಟರುಗಳಷ್ಟೇ! ಈವರೆಗಿನ ಬೆಳವಣಿಗೆಗಳನ್ನು ನೋಡಿದರೆ, ಭಾರತದಲ್ಲಿ ತಾಲಿಬಾನಿಗಳ ಅಭಿಮಾನಿಗಳಿಗೇನೂ ಕೊರತೆ ಇರಲಾರದು! ಹಾಗಾಗಿ, ಮುಸ್ಲಿಂ ಬುದ್ಧಿಜೀವಿಗಳೇ ಈಗಲಾದರೂ ಎಚ್ಚರಗೊಳ್ಳಿ! ನಿಮಗೆ, ನಮಗೆ ಇಬ್ಬರಿಗೂ ಕಾಲ ಮಿಂಚಿ ಹೋದೀತು!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕನ್ನಡದಲ್ಲಿ ಇಸ್ಲಾಂ ಧರ್ಮ ಮತ್ತು ಇತಿಹಾಸ ಕುರಿತ ಪುಸ್ತಕಗಳು ಬಹಳ ಇಲ್ಲ. ಕುರಾನ್ ಕನ್ನಡಕ್ಕೆ ಅನುವಾದವಾಗಿದೆ. ಅದರೆ ಅದನ್ನು ಓದಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅದರ ಭಾಷೆ ಕನ್ನಡದ ಜಾಯಮಾನದಿಂದ ದೂರವಾಗಿದೆ. ಇನ್ನು ಮಂಗಳೂರಿನ ಶಾಂತಿ ಪ್ರಕಾಶನದವರು ಪ್ರಕಟಿಸಿರುವ ಈ ಕೆಳಗೆ ಚುಟುಕು ಲೇಖನವಿದೆ , ನೋಡಿ
<ಪುಸ್ತಕಗಳು ಸುಲಭ ಮತ್ತು ಸರಳ ಕನ್ನಡದಲ್ಲಿವೆಯಾದರೂ, ಅವು ಮತ ಪ್ರಚಾರದ ದೃಷ್ಟಿಕೋನದಿಂದಲೇ ಬರೆಯಲ್ಪಟ್ಟು ಪ್ರಕಾಶಿತವಾಗುತ್ತಿರುವುದರಿಂದ ಅವುಗಳ ವಿಶ್ವಾಸಾರ್ಹತೆ ಯಾವಾಗಲೂ ಅನುಮಾನಾಸ್ಪದವೇ. ಈ ದೃಷ್ಟಿಯಿಂದ ಸಾರ್ವತ್ರಿಕ ಓದಿಗೆ ಲಭ್ಯವಿರುವ ಒಂದೇ ಒಂದು ಒಳ್ಳೆಯ ಪುಸ್ತಕವೆಂದರೆ, ಬಿ.ಎಂ.ಶ್ರೀ. ಅವರು ಅನುವಾದಿಸಿ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಮಹಮ್ಮದ್ ಅಬ್ಬಾಸ್ ಷೂಸ್ತ್ರಿ ಅವರ ಇಸ್ಲಾಂ ಸಂಸ್ಕೃತಿ ಎಂದು ಕಾಣುತ್ತದೆ. ಇದಕ್ಕೆ ಕುವೆಂಪು ಅವರ ಒಂದು ಅದ್ಭುತ ಮುನ್ನುಡಿಯೂ ಇದೆ. ಆದರೆ, ಇದರ ಪ್ರತಿ ಇಂದು ದುರ್ಲಭವಾಗಿದೆಯೆಂದೇ ಕೇಳಿದ್ದೇನೆ. ಹಾಗಾಗಿ ಕನ್ನಡಿಗರಾದ ಮುಸ್ಲಿಮೇತರರಿಗೆ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಗಳನ್ನು ಅರಿಯುವ ಅವಕಾಶ ಕಡಿಮೆಯೇ ಎಂದು ಹೇಳಬೇಕು>.

ಆಮೇಲೆ ನೋಡಿದ್ರೆ ಪೂರ್ಣ ಲೇಖನ ಪ್ರಕಟವಾಗಿದೆ. ಈಗ ನೋಡಿ.

"ಇನ್ನು ಕೆಲವರು ಯಾರಿಗೂ ಕಾಣದಂತೆ ಟೋಪಿ ಏರಿಸಿಕೊಂಡು ಕಳ್ಳ ಮಾರ್ಗದಲ್ಲಿ ಮಸೀದಿಗೆ ಹೋಗಿ ಬಂದರೂ ಬಂಡಾಯದ ಬಡಾಯಿ ಕೊಚ್ಚಲು ಮಾತ್ರ ಹಿಂಜರಿಯುವುದಿಲ್ಲ!"

ಕ್ಷಮಿಸಿ. ಟೋಪಿ ಹಾಕಿಕೊಂಡು ನಮಾಜು ಮಾಡಿದಲ್ಲಿ ಅವರಲ್ಲಿ ವೈಚಾರಿಕತೆ ಇಲ್ಲ ಎಂದು ಹೇಳಲಾಗುವುದಿಲ್ಲ, ಅಲ್ಲವೇ? ಬಂಡಾಯ ನಮಾಜಿಗೆ ವಿರುದ್ಧವಾಗಿಯಲ್ಲ, ಮಸೀದಿಗಳಲ್ಲಿ ಇಂದು ಹಬ್ಬುತ್ತಿರುವ ಮೂಲಭೂತವಾದದ ವಿರುದ್ಧ ತಾನೆ?

ಇದೇ ನೆಲೆಗಟ್ಟಿನಲ್ಲಿ ನೋಡುತ್ತಿದ್ದಲ್ಲಿ ಕೇವಲ ಭಾಜಪದ ಹಿಂದೂ ಮೂಲಭೂತವಾದದ ನೆನಪು ಮಾಡಿಕೊಟ್ಟಂತೆ, ಮುಸ್ಲಿಂ ಮೂಲಭೂತವಾದಕ್ಕೆ ಪರೋಕ್ಷವಾಗಿ ಅಥವಾ ನೇರವಾಗಿ ಪುರಸ್ಕಾರ ನೀಡುತ್ತಿರುವ ಬೇರೆ ರಾಜಕೀಯ ಪಕ್ಷಗಳ ನಿಲುವುಗಳನ್ನು ಕೂಡ ಪರಿಚಯಿಸಿಕೊಡುವು ಉತ್ತಮ. ತಾವು ಶಾಬಾನೋ ಪ್ರಕರಣದ ನೆನಪು ಮಾಡಿಕೊಟ್ಟ್ಂತೆ ಅದಕ್ಕೆ ಸಂಭಂದಿಸಿದ The Muslim Women (Protection of Rights on Divorce) Act 1986 ಬಗ್ಗೆ, ಹಾಗೂ ಆ ಕಾನೂನಿನ ಹಿಂದಿನ ರಾಜಕೀಯ ಕಾರಣಗಳ ಕುರಿತಂತೆ ಒಮ್ಮೆ ಪರಿಚಯ ಮಾಡಿಕೊಡಬೇಕಾಗಿ ಕೋರಿಕೆ.

ಪ್ರಿಯ ಸುದತ್ತ ಅವರೇ,
ನನ್ನ ಮಾತುಗಳಲ್ಲಿ ಮಸೀದಿಗೆ ಹೋಗುವುದಕ್ಕೂ ವೈಚಾರಿಕತೆಗೂ ಎಲ್ಲಿ ಸಂಬಂಧ ಕಲ್ಪಿಸಿದ್ದೀನಿ? ನಾನು ಪ್ರಸ್ತಾಪಿಸುತ್ತಿರುವುದು, ಯಾರಿಗೂ ಕಾಣದಂತೆ ಕಳ್ಳ ದಾರಿಯಲ್ಲಿ ಮಸೀದಿಗೆ ಹೋಗಿ ಬಂದು, ದೇವಸ್ಥಾನ ಸಂಸ್ಕ್ರತಿ ವಿರುದ್ಧ ಮಾತನಾಡುವ ಮತ್ತು ಪ್ರತಿ ಸಂಸ್ಕ್ರತಿ ನಿರ್ಮಾಣದ ಪ್ರತಿಪಾದನೆ ಮಾಡುವ ’ಬಂಡಾಯ’ದ ಬಗ್ಗೆ.
ಶಾಬಾನು ಪ್ರಕರಣ ಮತ್ತು ಬಾಬ್ರಿ ಮಸೀದಿ ಬೀಗ ತೆಗೆಸಿ ಪೂಜೆಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ರಾಜಕಾರಣದ ಬಗ್ಗೆ ಈಗಾಗಲೇ ನಾನು ಇಲ್ಲೇ ಸಾಕಷ್ಟು ಬರೆದಿದ್ದೇನೆ. ಇಲ್ಲಿ ತಮ್ಮ ರಾಜಕೀಯ ದ್ರಷ್ಟಿಕೋನಗಳಿಗನುಸಾರವಾಗಿಯೇ ಆಯ್ದು ಓದುವವರ, ಪ್ರತಿಕ್ರಿಯಿಸುವವರ ಸಂಖ್ಯೆ ಹೆಚ್ಚಿರುವುದರಿಂದ, ಅವರಿಗಾಗಿಯೇ ನಾನು ಬರೆದದ್ದನ್ನೇ ಮತ್ತೆ ಮತ್ತೆ ಬರೆಯಲಾರೆ, ಕ್ಷಮಿಸಿ.
-ಡಿಎಸ್ಸೆನ್

[quote]"ಅಲ್ಲಿ ಅವರು (ಪ್ರವಾದಿ ಮುಹಮ್ಮದರು) ತಮ್ಮ ಅನುಯಾಯಿಗಳ ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ತಮ್ಮ ಎದುರಾಳಿಗಳನ್ನು ಹಲವು ಪ್ರತಿ ದಾಳಿ - ಲೂಟಿ ಮುಂತಾದ ಸುಯೋಜಿತ ಯುದ್ಧೋಪಾಯಗಳ ಮೂಲಕ ನಿರ್ದಯವಾಗಿ ಬಗ್ಗು ಬಡಿದು, ಈ ಲೂಟಿಗಳಲ್ಲಿ ದೋಚಿದ ಸಂಪತ್ತನ್ನು ತಮ್ಮ ಅನುಯಾಯಿಗಳಲ್ಲಿ ಹಂಚುತ್ತಾ ಮುಸ್ಲಿಂ ಸಮಾಜವೆಂಬುದೊಂದರ ಅಸ್ತಿವಾರ ಹಾಕಬೇಕಾಯಿತು.

ಇಸ್ಲಾಂ ಧರ್ಮದ ನೀತಿಶಾಸ್ತ್ರ ಮೂಲತಃ ಈ ಪ್ರಕ್ರಿಯೆಯಲ್ಲಿ ಹುಟ್ಟಿದುದು. ಅಲ್ಲಿ ದಯೆ, ಕರುಣೆ, ಕ್ಷಮೆಗಳೆನ್ನುವುದು ಸಾರ್ವತ್ರಿಕ ಅಥವಾ ನಿರಪೇಕ್ಷ ಮೌಲ್ಯಗಳಲ್ಲ. ಅವೇನಿದ್ದರೂ ವ್ಯಾವಾಹಾರಿಕ ಮತ್ತು ಸಾಂದರ್ಭಿಕ."[/quote]

ಮುಸ್ಲಿಮರ ದಾಳಿಕೋರತೆ, ಲೂಟಿಗಾರಿಕೆಗಳ ಹಿನ್ನೆಲೆ ಈಗ ಅರ್ಥವಾಯಿತು.

ಮುಸ್ಲಿಂ ಇತಿಹಾಸದ ಒಂದು ಮಾತನ್ನು ಮತೀಯ ರಾಜಕೀಯಕ್ಕೆ ಬಳಸಿಕೊಂಡು,ಇಂದಿನ ಒಂದು ಇಡೀ ಸಮುದಾಯವನ್ನು ಹೀಗೆ ಸಾರಾ ಸಗಟಾಗಿ ಅವಹೇಳನ ಮಾಡಲು ಯತ್ನಿಸುವುದು ಸರಿಯಲ್ಲ. ಇಂದಿನ ಭಾರತೀಯ ಮುಸ್ಲಿಮರಲ್ಲಿ ಬಹುಭಾಗ ಮತಾಂತರವಾದ ಹಿಂದೂಗಳೇ, ಅವರ ಅಂತಃಸ್ಮ್ರತಿಯಲ್ಲಿ ಮಧ್ಯಪ್ರಾಚ್ಯದ ನೆನಪುಗಳಿರಲು ಸಾಧ್ಯವಿಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ.
-ಡಿಎಸ್ಸೆನ್

ಒಳ್ಳೆ ಪಾಯಿ೦ಟು. ಆದರೆ ಅವರಿಗೆ ಮತಾ೦ಧತೆ ಹೆಚ್ಚು ಸ್ವಾಮಿ.
ನಾ ಮೈಸೂರ್ ರೈಲ್ವೇ ನಿಲ್ದಾಣದಲ್ಲಿ ಕ್ಯೂ ನಲ್ಲಿ ನಿ೦ತಿದ್ದೆ. ಒಬ್ಬ ಗಡ್ಡಧಾರಿ ಮತ್ತೊಬ್ಬ
ಗಡ್ಡಧಾರಿಗೆ ಟಿಕೇಟ್ ಕೊಳ್ಳಲು ಹೇಳಿದ. ಆತ ನಿ:ಸ೦ಕೋಚವಾಗಿ ಹಿ೦ದೆಯಿರುವವರನ್ನು
ಲೆಕ್ಕಿಸದೆ ಆತನಿಗೆ ಟಿಕೆಟ್ ಕೊಡಿಸಿದ. ನಾನು ಟಿಕೇಟ್ ಕೊ೦ಡ ನ೦ತರ ಅವನನ್ನು
ಹೋಗಿ ಕೇಳಿದೆ , "ಆ ಮನುಷ್ಯ ನಿನಗೆ ಮೊದಲೆ ತಿಳಿದಿದ್ದನೋ ?"
"ಇಲ್ಲಾ ನನಗೆ ಪರಿಚಯವಿಲ್ಲಾ . ಆದರೆ ಆತ ನಮ್ಮವನು !"
"ನೀ ಮಾಡೀದ್ದು ತಪ್ಪ ಅಲ್ಲವೇ ?"
ಅವನು ಹೇಳಿದ ಉತ್ತರ ಇಲ್ಲಿ ಹೇಳಲು ಇಚ್ಚಿಸುವುದಿಲ್ಲಾ.
ಈ ರೀತಿ ಮತಾ೦ಧತೆ ಮತ್ತು ಧರ್ಮವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಕ್ರಿಯೆಯಿ೦ದ
ಆ ಧರ್ಮ ಹದ ಬಿಟ್ಟಿದೆ. ಇನ್ನೂ ನಮ್ಮ ನೆರೆ ದೇಶದಲ್ಲಿ ಆ ಧರ್ಮವನ್ನು ಮಿಲಿಟರಿ
ನಾಯಕರು ಬಳಸಿಕೊ೦ಡು ಭಯೋತ್ಪಾದನೆಯನ್ನು ಜಗತ್ತಿನಲೆಲ್ಲಾ ಪಸರಿಸಿರುವಲ್ಲವೇ ?

[quote]"ನೀ ಮಾಡೀದ್ದು ತಪ್ಪ ಅಲ್ಲವೇ ?"
ಅವನು ಹೇಳಿದ ಉತ್ತರ ಇಲ್ಲಿ ಹೇಳಲು ಇಚ್ಚಿಸುವುದಿಲ್ಲಾ.[/quote]

ಮುರಳಿಯವರೆ ಹೇಳಿ ಪರ್ವಾಗಿಲ್ಲ. ಕುರಿ ಮುಖವಾಡದ ನರಿಗಳಿಗೆ ಅರ್ಥವಾಗಲಿ.

ಹೀಗೆ ಒಂದು ಉದಾಹರಣೆಯ ಮೂಲಕ ಒಂದು ಸಮುದಾಯದ ಬಗ್ಗೆಯೇ ದುರಭಿಪ್ರಾಯ ಹುಟ್ಟಿಸುವುದು ಸರಿಯಲ್ಲ. ಹೀಗೇ ಹಲವು ಉದಾಹರಣೆಗಳನ್ನು ನೀಡಿ, ಹಿಂದೂಗಳ ಬಗ್ಗೆಯೂ ದುರಭಿಪ್ರಾಯ ಹುಟ್ಟಿಸಬಹುದಾಗಿದೆ.ಇದು ಕುರಿಗಳಿಗಾಗಿ ನರಿಗಳು ನಿರ್ಮಿಸುವ ಹಾದಿ, ಅಪಾಯದ ಹಾದಿ!
-ಡಿಎಸ್ಸೆನ್

ಕುರಿಗಳು ಯಾರು ನರಿಗಳು ಯಾರು ಅನ್ನೊದನ್ನು ಓದುಗರೇ ನಿರ್ಧರಿಸಲಿ ಬಿಡಿ. ಒಂದು ಧರ್ಮದ ಬಗ್ಗೆ ದ್ವೇಷಾಸೂಯೆಯನ್ನೆ ಕಾರುವ ಆಷಾಡಭೂತಿತನದ ಬರಹಗಳು ನರಿಯದ್ದೊ ಕುರಿಯದ್ದೊ ತೀರ್ಮಾನವಾಗಲಿ ;-)

ನಾವೇನೋ ರಾಮನನ್ನು ಬೀದಿಗೆ (ಇರಲಿ ಬಿಡಿ ಅದೆ ನಾನೆ ನಿಮಗೆ ಬೇಕಾದದ್ದು) ತಂದೆವು ಹಾಗೆಯೆ ಮಂದಿರದಲ್ಲೂ ಇರಿಸಿದ್ದೇವೆ. ಸ್ವಧರ್ಮವೆಂಬ ತಾಯಿಯನ್ನು ಬೀದಿಗೆ ತಂದು ಅಧಿಕಾರ ಬಂದಮೇಲೆ ಆ ತಾಯಿಯನ್ನು ನೀನಾರೆಮ್ದು ಕೇಳುವ ಕೀಳು ಮಟ್ಟಕ್ಕಿಳಿದಿಲ್ಲವಲ್ಲ

"ಈ ಬಜೆಟ್‌ನಲ್ಲಿ ನಮ್ಮ ಮುಖ್ಯಮಂತ್ರಿಗಳು ಹತ್ತಾರು ಜಾತಿ ಮಠಗಳಿಗೆ ಮತ್ತು ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿಗಳ ನೆರವು ಘೋಷಿಸಿರುವುದು ಮತ್ತು ಶಿವರಾತ್ರಿ ಸಂದರ್ಭದಲ್ಲಿ ನಮ್ಮ ಮುಜರಾಯಿ ಮಂತ್ರಿಗಳು ಹೃಷಿಕೇಷದಿಂದ ರೈಲಿನಲ್ಲಿ ಸಾವಿರಾರು ಲೀಟರ್‌ಗಟ್ಟಲೇ ಗಂಗಾಜಲ ತರಿಸಿ, ಅದನ್ನು ಶಿವನ ಚಿತ್ರದೊಂದಿಗೆ ಯಡಿಯೂರಪ್ಪನವರ ಚಿತ್ರವೂ ಮುದ್ರಿತವಾಗಿರುವ ಕ್ಯಾಲೆಂಡೆರಿನೊಂದಿಗೆ ಶಿವ ದೇವಾಲಯಗಳಲ್ಲಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕತೆಯ, ಘನತೆ - ಗೌರವಗಳ ಸರ್ವನಾಶದ ಪ್ರಯತ್ನವಲ್ಲದೆ ಮತ್ತೇನಲ್ಲ. ಇನ್ನು ಸಂವಿಧಾನದ ಘನತೆ - ಗೌರವಗಳ ಪ್ರಶ್ನೆಯಂತೂ ಈ ಕೋಮುವಾದಿ ಸರ್ಕಾರಕ್ಕೆ ಲೆಕ್ಕಕ್ಕೇ ಇಲ್ಲದಂತಾಗಿದೆ. "

>> ಶಿವರಾತ್ರಿ ಸಂಧರ್ಬದಲ್ಲಿ ತಮ್ಮ ಹಣದಿಂದ ಗಂಗಾಜಲ ತಂದಿರುವುದಾಗಿ ಸ್ವತ ಮುಜರಾಯಿ ಸಚೀವರೆ ಹೇಳಿದ್ದಾರೆ.. ಇದರಲ್ಲಿ ಯಾಕೆ ಸರ್ಕಾರನ ಕೋಮುವಾದಿ ಅನ್ನುತ್ತಾ ಇದ್ದಾರ? ನಮ್ಮ ತೆರಿಗೆ ಹಣ ಏನು ಅಲ್ಲವಲ್ಲಾ? ಪ್ರತಿವರ್ಷ ಹಜ್ ಯತ್ರೆಗೆ ನೀಡುವ ಸಬ್ಸೀಡೀ ಹಣದ ಲೆಕ್ಕ ನೂರಾರು ಕೋಟಿ ಇರುತ್ತದಲ್ಲಾ.. ಅದು ಸರ್ಕಾರವೇ ನೀಡುತಾ ಇರೋದು.. ಅದರ ಬಗ್ಗೆ ಯಾಕೆ ತಾವು ಉಲ್ಲೇಖ ಮಾಡಿಲ್ಲ.. ಹಜ್ ಯಾತ್ರೆಗೆ ಎಲ್ಲಾ ಧರ್ಮೀಯರೂ ಹೋಗುತ್ತಾರೆಯೆ? ಕೇವಲ ಮುಸ್ಲೀಮರೌ ಮಾತ್ರ. ತಮ್ಮ ಹಿಂದಿನ ಒಂದು ಲೇಖನದಲ್ಲಿ ಎರಡು ನಾಲಿಗೆಯ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ...ಈಗ ಚೆನಾಗಿ ಅರ್ಥ ಆಗುತ್ತಾ ಇದೆ "ಎರಡು ನಾಲಿಗೆಯ ಜೀವಿಗಳು" ಯಾರು ಅಂತ.

ಸಂವಿಧಾನದ ಘನತೆ ಗೌರವ.. ಎಷ್ಟು ಜನ ಅದಕ್ಕೆ ಗೌರವ ಕೊಟ್ಟಿದಾರೆ? ಪಾಠ ಹೇಳಿ ವಿಧ್ಯಾರ್ಥಿಗಳನ್ನ ಸರಿ ದಾರಿಗೆ ತರಬೇಕಾದ ಶಿಕ್ಷಕನೇ ಇಂದು ಕಾನೂನಿಗೆ ವಿರುದ್ದವಾಗಿ ಹೋಗಿ ಸರ್ಕಾರದ ವಿರುದ್ದ ಮಧ್ಯಮಗಳಿಗೆ ಹೇಳಿಕೆ ಕೊಡೂವ ಮಟ್ಟಕ್ಕೆ ಇಳಿದ್ದಿದ್ದಾರೆ, ಅವನ ಪರವಾಗಿ ಜನ online Petitiions ಹಾಕುತ್ತಾರೆ ಹಾಗು ಇತರರಿಗೂ ವಕಾಲತ್ತು ವಹಿಸಲು ಕೇಳಿಕೊಳ್ಳುವ ಕಾಲ ಇದು.. ಇನ್ನು ಕೆಲವರು ತಮ್ಮ "ಬುದ್ದಿ" ತೋರಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಾರೆ ಅಂದರೆ ಸಂವಿಧನಕ್ಕೆ ಎಲ್ಲಿದೆ ಗೌರವ. ಸಂವಿಧಾನದ ಗೌರವದ ಬಗ್ಗೆ ಮಾತಾಡುವ ಜನ,, ಜನರಿಂದ ಚುನಾಯಿಸಲ್ಪಟ್ಟ ಮುಖ್ಹ್ಯಮಂತ್ರಿ ಮಂಡಿಸಿದ ಆಯವ್ಯಯ ಪತ್ರವನ್ನು "ದಾನ ಪತ್ರ" ಅಂತ ಹೀಯಾಳಿಸಿ ಬರೆಯುತ್ತಾರೆ ಅಂದರೆ ಅವರು ಸಂವಿಧಾನಕ್ಕೆ ಇಟ್ಟಿರುವ ಗೌರವ ಯಾವ ಮಟ್ಟದ್ದು ಅಂತ ಗೊತ್ತಾಗುತ್ತೆ ಬಿಡಿ.

ಹಿಂದು ಧರ್ಮದ ಪೂಜ್ಯ ಪುರುಷ ರಾಮನನ್ನು "ಕುಡುಕ" ಅಂತ ಹೇಳಿದರೆ, ರಾಮ ಯವ ಎಂಜಿನಿರಿಂಗ್ ಕಾಲೇಜ ನಲ್ಲಿ ಓದಿದ್ದ ಅಂದಾಗ ತಮ್ಮ ಕೀಬೋರ್ಡ್ ಯಾಕೆ ಮೌನವಾಗಿತ್ತೋ? ಅಥವಾ ನಿಮ್ಮ ಪಾಲಿಗೆಗೆ ಈ ಹೇಳೀಕೆ ಹಿಂದು ಧರ್ಮದ ಆಧ್ಯಾತ್ಮ, ಘನತೆ ಎಲ್ಲವಾನ್ನೂ "ಎತ್ತಿ ಎತ್ತಿ" ಹಿಡಿಯಿತೆ? ೧೦೦ ಪಟ್ಟು ಹೆಚ್ಚು ಮಾಡಿತೆ? ಒಬ್ಬ ಕೇಂದ್ರ ಸಚಿವೆ "ಪಬ್ ಬರೊ" ಚಳುವಳಿಗೆ ಕರೆ ಕೊಟ್ಟರೆ ಕೆಲವು ಮಹನೀಯರಿಗೆ ಇದು ಸಾಂಕೇತಿಕ ಪ್ರತಿಭಟನೆ. ಆಗ ನಮ್ಮ ದೇಶದ ಆಧ್ಯಾತ್ಮ, ಘನತೆ ಇದೆಲ್ಲಾ ನಾಶ ಆಗುತ್ತಾ ಇದೆ ಅಂತ ಅನಿಸಿಲ್ಲ ಜನಕ್ಕೆ.

ಸುಮ್ಮನೆ ಕೋಮುವಾದಿ ಅಂತ ಹಣೆ ಪಟ್ಟಿ ಕಟ್ಟುವ ತಾವು, ಇಲ್ಲಿ ಯಾವ ರೀತಿಯ ಕೋಮುವಾದ ನಡೆಯುತ್ತಿದೆ ಅಂತ ಸ್ವಲ್ಪ ಬಿಡಿಸಿ ಹೇಳಿ.. ಇಲ್ಲ ಸುಮ್ಮನೆ ಬಿಜೆಪಿಯನ್ನು ಅನ್ನಲ್ಲು ಒಂದು ಪದ ಹುಡುಕಿ ಕೊಂಡಿದ್ದೀರಿ ಅಷ್ಟೆ.

ಜೋಕ್ ತಮಗೆ ವಾಸ್ತವದಂತೆ ಗೋಚರವಾಗುತ್ತದೆ. ಆದರೆ ರೈಲ್ವೆ ನಿಲ್ದಾಣದ ವಾಸ್ತವ ತಮ್ಮ ಕೇಸರಿ ಕಾಮಾಲೆ ಕಣ್ಣಿಗೆ ವಾಸ್ತವದಂತೆ ಗೋಚರಿಸುತ್ತದೆ.

ಅದೇನು ಕೋಮುವಾದ ನಡಿತಾ ಇದೆ ಸ್ವಲ್ಪ ಬಿಡೀಸಿ ಹೇಳಿ ಸ್ವಾಮಿ.. ಸುಮ್ಮನೆ ಕೋಮುವಾದ ಅಂದರೆ ಯಾರಿಗೂ ಅರ್ಥ ಆಗಲ್ಲ.. ಆಗ ಗೊತ್ತಾಗುತ್ತೆ ಜನರಿಗೆ ತಮ್ಮ ಪ್ರಕಾರ ಕೋಮುವಾದ ಅಂದರೆ ಏನು ಅಂತ...

ಕೆಲವರಿಗೆ ಇದೊಂದು ಚಟ ಆಗಿ ಬಿಟ್ಟಿದ್ದೆ.. ಎಲ್ಲದ್ದಿಕ್ಕೂ ಕೋಮುವಾದ, ಬಿಜೆಪಿ ಸಂಘ ಪರಿವಾರ ಮಾಡೋದೆಲ್ಲ ಕೇಸರಿಕರಣ ಅಂತ ದೂರುವುದು.. ಯಾವುದಕ್ಕೂ ತಕ್ಕ ಪುರಾವೆ, ಅಥವಾ ಸಾಕ್ಷಿ ಕೊಡಲು ಯೋಗ್ಯತೆ ಇರದಿದ್ದರೂ ಸರಿ.. ಸುಮ್ಮನೆ ಬಾಯಿ ಬಡಿದುಕೊಳ್ಳುವುದೇ ಇವರ ದೈನಂದಿನ ಜೀವನ ಆಗಿದೆ ಅನ್ನಿಸುತ್ತದೆ..

ಇಂಥವರೇ ನಿಜವಾದ ಕೋಮುವಾದಿಗಳು. ಇಂಥ ಕೋಮುವಾದಿ ಲೇಖನಗಳು ಬಂದಷ್ಟೂ ದೇಶಕ್ಕೆ ತೊಂದರೆಯೆ......

ಅವರು ಸದಾ ಎಚ್ಚೆತ್ತು ಕೊಂಡಿರುತ್ತಾರೆ.. ಬಿಜೆಪಿ ನ ಕೋಮುವಾದಿ ಅನ್ನಕ್ಕೆ ಹಾಗು ಸಂಘ ಪರಿವಾರದ ಪ್ರತಿ ನಡೆಯನ್ನು ಕೇಸರಿಕರಣ ಅನ್ನಕ್ಕೆ :)

ಹೌದು, ಒಂದು ಬುದ್ಧಿಗೇಡಿ ರಾಷ್ಟ್ರ ಕಟ್ಟುವ ಆಸೆಯಿಂದ ಕೆಲವು ಬುದ್ಧಿಗೇಡಿಗಳು ಇಂತಹ ಸಾರಾ ಸಗಟು ಘೋಷಣೆಯನ್ನು ಆವಿಷ್ಕರಿಸಿಕೊಂಡು ಪತ್ರಿಕೆ ಹಾಗೂ ಬೀದಿಗಳಲ್ಲಿ ಒಂದು ಬುದ್ಧಿಜೀವಿ ವಿರೋಧಿ ಆಂದೋಲನವನ್ನು ರೂಪಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ನಾನೂ ಬಲ್ಲೆ!ಇದೇನೂ ಹೊಸದಲ್ಲ ಎಂದು ಸೂಚಿಸಲು ಈ ಮಾಹಿತಿ.
--ಡಿಎಸ್ಸೆನ್

ಬುದ್ದಿಗೇಡಿ ಬುದ್ದಿಜೀವಿಗಳು ಮಾಡುತ್ತಿರುವುದು ಇದನ್ನೆ! ತಮಗೆ ಬೇಕಾದ ಪದ , ಘೊಷಣೆಗಳನ್ನ ಹುಡುಕಿಕೊಂಡು... ಸದಾ ಅದರ ಬಗ್ಗೆಯೆ ಚಿಂತೆ ಮಾಡುತ್ತಾ ಹೋಗುತ್ತಿರುವುದು.

ಅಂದ ಹಾಗೆ ಗುಲಾಮ್ ನಬಿ ಆಜಾದ್ ಬೆಂಗಳೂರಿನ ರೆಸಾರ್ಟ್ನ್ ನಲ್ಲಿ ಟಿಕೆಟ್ ಹಂಚುವ ಪ್ರಕ್ರಿಯೆ ಶುರು ಮಾಡಿದ್ದಾರೆ ಅಂತ ಪತ್ರಿಕೆಯಲ್ಲಿ ಓದಿದೆ, .. ಪ್ರಚಾರ ಸಮಿತೆಗೆ ಒಂದೆರಡು "ಬುದ್ದಿ"ಜೀವಿಗಳು ಅರ್ಜಿ ಹಾಕಿದರೆ ಅವರ ನೆಚ್ಚಿನ ಕಾಂಗ್ರೆಸ್ಸನ್ನ ಕಡೆ ಪಕ್ಷ ಠೇವಣಿ ಉಳಿಸಿ ಕೊಳ್ಳುವ ಮಟ್ಟಕ್ಕಾದರು ಕೊಂಡೊಯ್ಯಬಹುದು ಕೆಲವು ಕ್ಷೇತ್ರಗಳಲ್ಲಿ....

ನಿಜವಾಗಲೂ ರಾಷ್ಟ್ರದಲ್ಲಿ ಬುದ್ದಿಜೀವಿ ವಿರೋಧಿ ಆಂಧೋಲನದ ಅಗತ್ಯ ಇದೆ.. ಅದೂ ಸ್ವಘೋಷಿತ ಬುದ್ದಿ ಜೀವಿಗಳ ವಿರುದ್ದ. ತಮಗೆ ಅಗತ್ಯಕ್ಕೆ ತಕ್ಕಂತೆ ಹೇಳಿಕೆ ಕೊಡುವ, ಬದಲಿಸಿ ಕೊಳ್ಳುವ ಈ spin master ಗಳೇ ದೇಶದ ಪ್ರಗತಿಗೆ ನಿಜವಾದ ಅಡೆತಡೆಗಳು.

ಕಾಮಾಲೆ ಕಣ್ಣುಗಳಿಗೆ ಪ್ರಪಂಚವೆಲ್ಲ ಹಳದಿಯಂತೆ. . ಇದು ಹಳೆ ಗಾದೆ

ಇದರ ಹೊಸ ರೂಪ ಹಿಗೆ ಮಾಡಬಹುದು..,

ಕೋಮುವಾದಿ ಕಣ್ಣುಗಳಿಗೆ ಬಿಜೆಪಿ ಮಾಡೊದೆಲ್ಲ ಕೋಮುವಾದವಂತೆ :)
ಕೆಲವರಿಗೆ ಈ ಜೋಕ್ ವಾಸ್ತವ ಅಂದರೆ ಅವರ ಕಣ್ಣು ಯಾವ ಮಟ್ಟಕ್ಕೆ ಕೋಮುವಾದದಿಂದ ಕೂಡಿದೆ ಅಂತ ಗೊತ್ತಾಗುತ್ತೆ.... ಇನ್ನು ಮುಂದೆ ಇವರನ್ನೇ ಕೋಮುವಾದಿಗಳು ಅಂತ ಕರೆಯಬೇಕು. ಈ ರೀತಿ ಅಕ್ಷರದಿಂದ ಇಲ್ಲದ ಕೋಮುವಾದ ಹುಟ್ಟುಹಾಕಲು ಪ್ರಯತ್ನಿಸುತ್ತಿರುವವರೇ ದೇಶಕ್ಕೆ ದೊಡ್ಡ ಅಪಾಯಾಕಾರಿ ಶಕ್ತಿಗಳು.

ರೀ ನಿಮಗೆ ಯಾವ ರೀತಿ ಹೇಳಿದರೆ ಅರ್ಥವಾಗುತ್ತೋ ನಮಗಂತೂ ಗೊತ್ತಿಲ್ಲ. ಎಲ್ಲಾದಕ್ಕೂ ಬುದ್ದಿಜೀವಿಗಳು ಎನ್ನಿಸಿಕೊಂಡಿರೋ ನೀವುಗಳು ಈ ದೇಶದ ಅನ್ನ ತಿಂದು, ನೀರು ಕುಡಿದು ಈ ದೇಶಕ್ಕೆ ಅವಮಾನ ಮಾಡುತ್ತೀರಲ್ಲಾ, ಆಗ ಆ ಮೀರ್ ಸಾದಿಕ್ ನಿಂದ ಆಂಗ್ಲರು ಇಲ್ಲಿ ತಳವೂರಿದರು. ಈಗ ನಿಮ್ಮಂತಹ ಬುದ್ದಿಜೀವಿಗಳಿಂದ ಯಾವ ಅಪಾಯ ಕಾದಿದೆಯೋ ಯಾರಿಗೆ ಗೊತ್ತು? ಮಹಾಸ್ವಾಮಿ.

ನಮ್ಮದು ದೇಶಪ್ರೇಮ ಮಾತ್ರ. ನಿಮ್ಮದು ದೇಶಪ್ರೇಮದ ಅಮಲು. ಅಷ್ಟೇ ವ್ಯತ್ಯಾಸ. ಅದಕ್ಕೇ ನಿಮಗೆ ಹೀಗೆಲ್ಲ ಅನ್ನಿಸುತ್ತಿದೆ. ಮೊದಲು ದೇಶಪ್ರೇಮದ ಗುತ್ತಿಗೆ ತೆಗೆದುಕೊಂಡಿರುವ ಮನೋಭಾವನೆಯಿಂದ ಹೊರ ಬನ್ನಿ. ಆಗ ಇಂತಹ ಅಸಂಬದ್ಧ ಹೋಲಿಕೆ ಮತ್ತು ಮಾತುಗಳು ನಿಮ್ಮಿಂದ ಹೊರಬರಲಾರವು. ನಿಜವಾಗಿ ದೇಶಕ್ಕೆ ಅಪಾಯ ಕಾದಿರುವುದು ಬುದ್ಧಿಜೀವಿಗಳಿಂದಲ್ಲ;ಇಂತಹ ಅಪದ್ಧ ಮಾತುಗಳನ್ನಾಡುವ ಬುದ್ಧಿಗೇಡಿಗಳಿಂದ. ಘಜ್ನಿ ಮಹಮ್ಮದ್ ದಾಳಿಗೆ ಬಂದಾಗ ತಮ್ಮ ಮಂತ್ರಗಳ ಅಷ್ಟ ಬಂಧ ಹಾಕಿ ಅವನನ್ನು ತಡೆಯಲು ಯತ್ನಿಸಿ ಹಾಸ್ಯಾಸ್ಪದರಾಗಿದ್ದು, ದೇಶವನ್ನು ಅವನಿಗೆ ತೆರೆದಿಟ್ಟಿದ್ದು, ಇಂತಹ ಬುದ್ಧಿಗೇಡಿಗಳೇ! ಹಾಗಾಗಿ ಇಂದು ದೇಶಕ್ಕೆ ಏನಾದರೂ ಅಪಾಯವಿದ್ದರೆ ಅಂತಹ ಬುದ್ಧಿಗೇಡಿಗಳ ಪರಂಪರೆಯವರಿಂದಲೇ,ಈಗಲೂ ಅವರ ಗುಲಾಮಗಿರಿ ಮಾಡುತ್ತಿರುವವರಿಂದಲೇ ಹೊರತು, ವಿಚಾರ ಮಾಡಿ ಮಾತಾಡಬಲ್ಲ ಬುದ್ಧಿಜೀವಿಗಳಿಂದಲ್ಲ.ಬುದ್ಧಿಜೀವಿಯೊಬ್ಬ ತಪ್ಪು ಮಾತನಾಡಿದರೆ, ಅದನ್ನು ವಿಮರ್ಶಿಸಿ ಮತ್ತು ಖಂಡಿಸಿ. ಆದರೆ ಹೀಗೆ ಸಾರಾಸಗಟಾಗಿ ಬುದ್ಧಿಜೀವಿಗಳ ಬಗ್ಗೆ ಹಗುರವಾಗಿ ಮಾತಾಡುವುದು ಬುದ್ಧಿಗೇಡಿತನದ ಪ್ರತೀಕ ಮಾತ್ರವೆನಿಸಿಕೊಳ್ಳುವುದು.ಇದು ದೇಶಕ್ಕೆ ಮಾಡುವ ದೊಡ್ಡ ದ್ರೋಹ.
-ಡಿಎಸ್ಸೆನ್

[quote]ಘಜ್ನಿ ಮಹಮ್ಮದ್ ದಾಳಿಗೆ ಬಂದಾಗ ತಮ್ಮ ಮಂತ್ರಗಳ ಅಷ್ಟ ಬಂಧ ಹಾಕಿ [/quote]
ಯಾರು... ಈಗಿನ ಹಿನ್ದುತ್ವವಾದಿಯೋ, ಅನ್ದಿನ ಬ್ರಾಹ್ಮಣನೋ? ಈರ್ವರೊಳದ್ವೈತವ ಕಾಣುವಿರೋ?

ಬೊಳಂಬು ಅವರೇ,
ನಾನು ಪ್ರವ್ರತ್ತಿಗಳ ಬಗ್ಗೆ , ಧಾರ್ಮಿಕ ಪಟ್ಟ ಭದ್ರ ಹಿತಾಸಕ್ತಿಗಳ ರಾಜಕಾರಣದ ಮುಂದುವರಿಕೆಯ ಬಗ್ಗೆ ಮಾತನಾಡುತ್ತಿರುವುದು. ಅವು ಒಂದೊಂದು ಕಾಲದಲ್ಲಿ ಒಂದೊಂದು ವೇಷದಲ್ಲಿ ಪ್ರತ್ಯಕ್ಷವಾಗುವುದರಿಂದ ಇವೇ ಅವು, ಅವೇ ಇವು ಎಂದು ಹೇಳಲಾಗುವುದಿಲ್ಲ.ಧಾರ್ಮಿಕ ರಾಜಕಾರಣವನ್ನು(ಹಿಂದುತ್ವ) ಕುರಿತು ಅಧ್ಯಾತ್ಮಿಕ ಪರಿಭಾಷೆಯಲ್ಲಿ(ದ್ವ್ಯೆತಾದ್ವ್ಯೆತ) ಮಾತನಾಡುವುದರಿಂದ ಇನ್ನಷ್ಟು ಗೊಂದಲಗಳು ಸ್ರಷ್ಟಿಯಾಗುತ್ತವಷ್ಟೆ!
--ಡಿಎಸ್ಸೆನ್

ಯಾರೋ ಕಮ್ಯೂನಿಸ್ಟುಗಳು ಮಾಡಿದರೆನ್ನುತ್ತ ನಿಮ್ಮನ್ನು ತೆಗಳಿದರೆ ಹೇಗಿದ್ದೀತು? ತತ್ವವಾಗಿ ಕಮ್ಯೂನಿಸಮನ್ನು ಒಪ್ಪುವುದಕ್ಕೆ ವಿರುದ್ಧವಾದುದು ಇನ್ದಿನ ಕಮ್ಮಿ ಪಾರ್ಟಿಗಳ ಒಪ್ಪಿಕೊಳ್ಳುವುದು. ಕೇರಳದ ಉದಾಹರಣ ತೆಗೆದುಕೊಣ್ಡರೆ ಎರಡು ಪ್ರಬಲ ವಿರೋಧಿ ಬಣಗಳಲ್ಲೂ ( LDF ಮತ್ತು UDF ) ಕಮ್ಯೂನಿಸ್ಟ್ ತತ್ವಗಳ ಕುರಿತು ಭಾಷಣ ಮಾಡಬಲ್ಲವರಿದ್ದಾರೆ. ನಿಜವಾದ ಕಮ್ಯೂನಿಸ್ಟ್ ಯಾರೆಂಬುದರ ಕುರಿತು ಜನ ಸಾಮಾನ್ಯರುಗಳಿಗೆ ಊಹೆಗೂ ಆಸ್ಪದವಿಲ್ಲ. (ನನ್ದಿ ಗ್ರಾಮದ ಕುರಿತು ಹೇಳದೆ ಮುಗಿಸುವುದಾದರೆ).

ಹೀಗೂ ಪ್ರವೃತ್ತಿಯ ಕುರಿತು ವಾದಿಸುವವರಿದ್ದಾರೆ ಕಾಣ್ರಿ!

ಸಾರಾಸಗಟಾಗಿ ಬುಧ್ಧಿಜೀವಿಗಳನ್ನ ಬಯ್ಯುವ ಮುಂಚೆ, ಕೋಮುವಾದಕ್ಕೆ definition ಕೇಳುವವರಂತೆಯೇ ನಾವು ಈಗ "ಬುಧ್ಧಿಜೀವಿ" ಪದದ definition ಕೇಳಬೇಕಾಗಿದೆ :-)
ಕೋಮುವಾದ ಇಂದು ಸರ್ಕಾರಗಳ ಭ್ರಷ್ಟಾಚಾರ ಹಾಗೂ ಮೂರ್ಖತನಗಳನ್ನು ಮುಚ್ಚುವುದಕ್ಕೆ ರಾಜಕೀಯ ಪಕ್ಷಗಳು ಉಪಯೋಗಿಸುವ ಸಾಧನ. ಇಂದಿನ ಎಲ್ಲ ರಾಜಕೀಯ ಪಕ್ಷಗಳೂ ಕೂಡ ಯಾವುದೇ ನಾಚಿಕೆ ಬಿಟ್ಟು ಕೋಮುವಾದವನ್ನು ಉತ್ತೇಜಿಸುತ್ತಿವೆ. ಇದೇ ರಾಜಕೀಯ ಪಾಕಿಸ್ತಾನದಲ್ಲಿ ಅತಿರೇಕಕ್ಕೆ ಹೋಗಿ ಆ ದೇಶ ಇಂದು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಎಲ್ಲರೂ ತಿಳಿದಿದ್ದೇವೆ. ಸಂಘ ಪರಿವಾರಗಳು ಗಮನಿಸಿಯೂ ಸುಮ್ಮನಿರುವ ವಿಷಯವೆಂದರೆ ಇಂದಿನ ಭಾಜಪಕ್ಕೆ ಹಿಂದುತ್ವ ಕೇವಲ ವೋಟಿಗಾಗಿ ನಂತರ ನೋಟಿಗಾಗಿ. ಆದ್ದರಿಂದ ಅವರು ಕೂಡ ಭಾಜಪ ಮಾಡಿದ್ದೆಲ್ಲ ಸರಿ ಎಂದು ಕೂಡ ಒಪ್ಪಲಾರರು. ಕಾಂಗ್ರೆಸ್ ಆಗಲಿ, ದಳ ಆಗಲಿ ಇಂದು ಕೋಮುವಾದದ ಅಪರಾಧದೊಂದ ಹೊರತಲ್ಲ ಎಂದು ಲೇಖಕರು ಬಹಳ ಬಾರಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ, ಅಥವಾ ಆ ಪಕ್ಷದ ಕೆಲವು ಹಿರಿಯ ನಾಯಕರಿಂದಲೇ ದೇಶ ಇಬ್ಭಾಗವಾದದ್ದಲ್ಲವೇ? ಹಾಗಾಗಿ ನಾವು ಭಾಜಪ ಒಂದರ ಬಗ್ಗೆಯೇ ಈ ಕಾಳಜಿಯನ್ನು ಇಟ್ಟುಕೊಳ್ಳಬಾರದು. ಹಾಗೆಯೇ ಭಯೋತ್ಪಾದನೆಯ ವಿರುದ್ಧ ಎಲ್ಲರೂ ಪಕ್ಷಭೇಧ ಮರೆತು ಆ ಪಿಡುಗನ್ನು ಆದಷ್ಟು ಬೇಗ ತೊಡಗಿ ಹಾಕದಿದ್ದಲ್ಲಿ ದೇಶಕ್ಕೆ ಅತಿ ದೊಡ್ಡ ಅಪಾಯವುಂಟು.

ಬಿಜೆಪಿ ಸಂಘ ಪರಿವಾರ ಮಾಡೋದೆಲ್ಲಾ ಕೋಮುವಾದ ಅನ್ನುವಾಗ ಎಲ್ಲಿ ಹೋಗಿತ್ತೋ ಈ ಭಾವನೆ....
ಮಾತೆತ್ತಿದ್ದರೆ ಸರ್ಕಾರನ ಕೋಮುವಾದ ಅನ್ನುವುದು ಎಲ್ಲಾ ದಿಕ್ಕಿನಿಂದಲೂ ಬುದ್ದಿಗೇಡಿ ಪ್ರತೀಕವೆ. ಇದು ಅವರು ಸಮಾಜಕ್ಕೆ ಹಾಗು ದೇಶಕ್ಕೆ ಮಾಡುತ್ತಿರುವ ದೊಡ್ಡ ದ್ರೋಹ. ಅದನ್ನ ಮೊದಲು ಸರಿ ಪಡಿಸಿಕೊಳ್ಳಬೇಕು.
ಆಮೇಲೆ ಬೇರೆಯವರಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಬೇಕು. ತಮ್ಮ ಹೇಳಿಕೆಗಳು ಮಾತ್ರ ಸತ್ಯ, ತಮನ್ನ ಯಾರೂ ಎನೂ ಅನ್ನ ಬಾರದು.. ತಮಗಿಂತ ಬುದ್ದಿವಂತರೆ ಇಲ್ಲ.. ತಾವು ಹೇಳುವ ಮಾತೆಲ್ಲ ಜನ ನಂಬಲೇಬೇಕು, ಅದರ ವಿರುದ್ದ ಮಾತನಾಡುವವರು ಬುದ್ದಿಗೇಡಿಗಳು .. ಈ ರೀತಿಯಾಗಿ ನಡೆಯುವವರೆ ನಿಜವಾದ ಬುದ್ದಿಗೇಡಿ ಜೀವಿಗಳು.. ತಮ್ಮ ಈ ರೀತಿಯ ನಡೆಯಿಂದ ದೇಶಕ್ಕೆ ದೊಡ್ಡ ದ್ರೋಹ ಎಸಗುತ್ತಿದ್ದಾರೆ.

well said sir!

ಈ ಬುದ್ದಿಜೀವಿಗಳನ್ನ ಸರಿಯಾಗಿ ಹೋಲಿಕೆಗೆ ಇಟ್ಟಿದ್ದೀರ.... ಕೆಲವು ಬುದ್ದಿಜೀವಿಗಳೀಗೆ [ ಯಾರು ಆ ಬಿರುದೊ ಕೊಟ್ಟಾರೋ ಗೊತ್ತಿಲ್ಲ], ಸ"ಮಜಾ"ವಾದಿಗಳಿಗೆ, ಈ ಹೋಲಿಕೆ ಅಸಂಬದ್ದವಾಗಿ ಕಂಡರೆ ಆಶ್ಚರ್ಯಪಡಬೇಡಿ. ಕರ್ನಾಟಕದ ತಾಲೀಬಾನೀಕರಣ ಅಂತ ಬರೆದಾಗ, ಇವರಿಗೆ ಅದು ನಿಜವಾದ ಹೋಲಿಕೆ ಆಗಿತ್ತು., . ಕನ್ನಡದ ಅನ್ನ ತಿಂದು, ಕನ್ನಡನಾಡಿಗೆ ನೀಡಿರುವ ದೊಡ್ಡ ಕೊಡುಗೆ ಇವರದ್ದು ಇದೆ.
ನಿಜ, ನೀವು ಹೇಳಿದಂತೆ ಇಂತಹ ಬುದ್ದಿಜೀವಿಗಳಿಂದ ದೇಶಕ್ಕೆ ಏನು ಅಪಾಯ ಕಾದಿದೆಯೊ.... ಆ ದೇವರೆ ಕಾಪಡಬೇಕು ಅನ್ನೋಣ ಅಂದರೆ.. ದೆವರ ಹೆಸರು ಹೇಳುತ್ತಾ ಇದ್ದಿಯ ನೀನು ಕೋಮುವಾದಿ ಅಂತಾರೆ....

ಈ ಕೊಂಡಿ ಓದಿರಿ - ಹೇಗೆ ನಮ್ಮ ದೇಶದಲ್ಲಿ "ಗಡ್ಡ ಎಳೆದವರಿಗೆ ಮಿಠಾಯಿ" ಕೊಡಲಾಗುವುದು ಎಂದು. Terrorism ಹೋಗಲಾಡಿಸಲ ಶಿಕ್ಷೆ ಅಲ್ಲ, ನಮ್ಮ ಪೋಲೀಸ್, ಮಿಲಿಟರಿಯಲ್ಲಿ ಕೆಲ್ಸ ಕೊಡಿಸುವುದು ಪರಿಹಾರವಂತೆ !!
http://timesofindia.indiatimes.com/Opinion/Columnists/Shashi_Tharoor/Tim...

ನಿಮ್ಮ ಕೆಲ ಹಿಂದಿನ ಬರಹಗಳಲ್ಲಿರುವ ವಿಚಾರಗಳು ನೀವು ಏಕಪಕ್ಷೀಯರಾಗಿದ್ದೀರೇನೋ ಅನಿಸುವಂತೆ ಮಾಡಿತ್ತು.
ಅನುಮಾನ ಪರಿಹಾರವಾಯ್ತು. :-)

ನಾರಾಯಣ ಅವರು ಹೇಳಿದಂತೆ ಈ ದೃಷ್ಟಿಕೋನದ ಲೇಖನ ಯಾವಾಗಲೋ ಬರಬೇಕಾಗಿತ್ತು. ನಿಮ್ಮಿಂದಲೇ ಬಂದಿದ್ದು ಬಹಳ ಸಂತೋಷ.

ಬರಹ ಮತ್ತು ವಿಚಾರ ಎರಡೂ ಚೆನ್ನಾಗಿವೆ.

ನನ್ನಿ

ಒಬ್ಬ ಹಿಂದೂ ಒಳ್ಳೆಯ ಹಿಂದೂ ಆದಾಗ, ಒಬ್ಬ ಮುಸ್ಲಿಂ ಒಳ್ಳೆ ಮುಸ್ಲಿಂ ಆದಾಗ, ಒಬ್ಬ ಕ್ರಿಶ್ಚಿಯನ್ ಒಳ್ಳೆ ಕ್ರಿಶ್ಚಿಯನ್ ಆದಾಗ ಮಾತ್ರ ಬಾರತ ಧರ್ಮಾತಿತ ರಾಷ್ಟ್ರವಾಗುತ್ತೆ, ಆದರೆ ಒಬ್ಬ ಹಿಂದೂ ಮತಾಂತರವಾದಾಗ ಒಬ್ಬ ಶತ್ರು ಜಾಸ್ತಿಯಾಗುತ್ತಾನೆ - ಸ್ವಾಮೀ ವಿವೇಕಾನಂದ.
ಇಂದು ಎಷ್ಟೋ ಬುದ್ದಿಜೀವಿಗಳು ಸುಮ್ಮ ಸುಮ್ಮನೆ ಅವರ ಅವರ opinion ಹೇಳ್ತಾರೆ ಆದ್ರೆ....ಇವೆ ಎಷ್ಟೋ confusionಗಳಿಗೆ ಕಾರಣ ವಾಗುತ್ತೆ. ನಮ್ಮ ದೇಶದ ಎಪಿಕ್s, ಎಥಿಕ್ಸ್, ಫಿಲಾಸಫಿ, advanced intellectualityಯನ್ನು ಮೀರಿದ ಸ್ವಾಮೀ ವಿವೇಕಾನಂದ ವಿವೇಚನೆಯನ್ನು ಅನುಸರಿಸಿದರೆ ಉತ್ತಮ ಎಂದು ನನಗೆ ಅನಿಸುತ್ತದೆ.

ಹರ್ಷವರ್ಧನರೇ,
ನಿಮ್ಮ ಮಾತನ್ನು ಖಂಡಿತ ಒಪ್ಪುವೆ. ವಿವೇಕಾನಂದರ ಜೊತೆಗೇ ’ಮ’ ಅವರ ಶ್ರೀ ರಾಮಕ್ರಷ್ಣ ವಚನವೇದ ಮತ್ತು ರಮಣರೊಡನೆಯ ’ಮಾತುಕತೆ’ಗಳನ್ನು ಕೂಡ ಓದಿದರೆ ಒಳ್ಳೆಯದು. ಆಗ ಧರ್ಮ ಎಂಬುದರ ನಿಜವಾದ ಮತ್ತು ಆಳವಾದ ಅರ್ಥ ಗೊತ್ತಾಗುತ್ತದೆ. ಇತರ ಧರ್ಮಗಳನ್ನು ಕುರಿತ ಮನಸ್ಸಿನ ಕಹಿ ಹೋಗುತ್ತದೆ ಮತ್ತು ಆ ಮೂಲಕ ’ಹಿಂದುತ್ವ’ವೆಂಬುದು(ಬೇರೆ ಧರ್ಮಗಳ ಕೋಮುವಾದಿ ಆವ್ರತ್ತಿಗಳಂತೆಯೇ) ಕೆಲವು ಧಾರ್ಮಿಕ ಪಟ್ಟಭದ್ರರ ಮತೀಯ ರಾಜಕಾರಣ ಎಂಬುದು ಗೊತ್ತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಧರ್ಮದಿಂದ ಮತಾಂತರ ಜಾಸ್ತಿ ಏಕೆ ಎಂಬುದಕ್ಕೆ, ಆಮಿಷಗಳು ಎಂಬ ಸರಳ ಉತ್ತರದಾಚೆ ಕಾರಣಗಳನ್ನು ಕಂಡುಕೊಂಡು, ಅವುಗಳನ್ನು ನಿವಾರಿಸುವ ಕಡೆ ಗಮನ ಹರಿಸಬೇಕಾಗುತ್ತದೆ. ವಿವೇಕಾನಂದರು ಈ ಬಗ್ಗೆ ಆಡಿರುವ ಮಾತುಗಳನ್ನು(ನೋಡಿ:’ಕೊಲೊಂಬೊ ಇಂದ ಆಲ್ಮೋರಾಕೆ’;ವಿಶೇಷವಾಗಿ ಅದರಲ್ಲಿನ ಢಾಕ್ಕಾ ಭಾಷಣ) ನಿರ್ಲಕ್ಷಿಸಿ ಬೇರೆ ಮಾತುಗಳನ್ನಷ್ಟೇ ಗಮನಿಸುತ್ತಿರುವುದೇ ಇಂದಿನ ಹಿಂದೂ ಧರ್ಮದ ದುರಂತವಾಗಿದೆ.
-ಡಿಎಸ್ಸೆನ್

"ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಧರ್ಮದಿಂದ ಮತಾಂತರ ಜಾಸ್ತಿ ಏಕೆ ಎಂಬುದಕ್ಕೆ, ಆಮಿಷಗಳು ಎಂಬ ಸರಳ ಉತ್ತರದಾಚೆ ಕಾರಣಗಳನ್ನು ಕಂಡುಕೊಂಡು, ಅವುಗಳನ್ನು ನಿವಾರಿಸುವ ಕಡೆ ಗಮನ ಹರಿಸಬೇಕಾಗುತ್ತದೆ"
ಕೇವಲ ಅಮಿಷಗಳೇ ಅಲ್ಲ ನಮ್ಮ ಸಮಾಜದ ತಮ್ಮ ಹಿತಾಸಕ್ತಿಗಳು ಕಾಪಾಡಿ ಕೊಳ್ಳು ರೀತಿಯಲ್ಲಿ ಕರುಣಿಸಿರೋ ಈ ಜಾತಿಗಳು ಕೂಡ ಮತಾಂತರಕ್ಕೆ ಕಾರಣವಾಗಿದೆ, ಸಾಮಾಜಿಕವಾಗಿ ತುಚ್ಚರಂತೆ ಕಾಣುವ ರೀತಿ, ಸಮಾನತೆಯ ಹಿಂಜರಿತ, ಅರ್ಥಿಕವಾಗಿ ಮುನ್ನಡೆ ಇಲ್ಲದಿರುವಿಕೆ....ಮತ್ತು ಮತಾಂತರ ಹೊಂದುವವರ ನೈತಿಕತೆ ಕೂಡ ಇಲ್ಲಿ ಪ್ರಸ್ತುತವಾಗುತ್ತೆ.....ಜಸ್ಟ್ ಮಾತಾಡ್ ತಾರೆ, ಅದು ಪ್ರಯೋಜನವಿಲ್ಲ...ಇವುಗಳ್ಳನ್ನು ಬಗೆ ಹರಿಸುವ ಪ್ರಯತ್ನ ಆಗಲಿ....ಯಾರು ಕೂಡ ಮಾಡಲ್ಲಿಕ್ಕೆ ತಯಾರಿಲ್ಲ.