ಆಸ್ಕರ್‌ಗೆ ಹರ್ಷವೇಕೆ ?

To prevent automated spam submissions leave this field empty.

ದೇಶದೆಲ್ಲಡೆಡೆ ಸ್ಲಂಡಾಗ್‌ನದ್ದೇ ಮಾತು.. ಸ್ಲಂ ಡಾಗ್‌ ಮೇನಿಯಾ.. ಜಯ ಹೋ ಸ್ಲಂ ಡಾಗ್‌.. ಹೀಗೆ ಭಿನ್ನ ಭಿನ್ನ ನಾಮಧೇಯದಿಂದ ದೃಶ್ಯಪತ್ರಿಕೋದ್ಯಮ (ದೃಶ್ಯ ಮಾಧ್ಯಮ) ಗಳು ಬಿಂಬಿಸುತ್ತಿವೆ. ಇದು ನಿಜಕ್ಕೂ ಭಾರತೀಯರು ಹರ್ಷ ವ್ಯಕ್ತಪಡಿಸುವ ವಿಚಾರವೇ ? ಎನ್ನುವ ಮಾತು ಮನಸ್ಸಿನಲ್ಲಿ ಸುಳಿಯದಿರದು.

ಒಟ್ಟು ೧೦ ವಿಭಾಗಗಳಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಸ್ಲಂ ಡಾಗ್‌ ಬರೋಬ್ಬರಿ ೮ ಸ್ಥಾನಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಹೌದು.. ಸಂತೋಷ ಭಾರತೀಯ ಸಂಗೀತ ನಿರ್ದೇಶನಕ್ಕೊಬ್ಬನಿಗೂ ಈ ಗವರವ ಸಂದಿರುವುದು. ಅಂದ ಮಾತ್ರಕ್ಕೆ ಬೇರೇನೂ ಮೆಚ್ಚುವಂಥದ್ದು ಈ ಚಿತ್ರದಲಿಲ್ಲ. ಭಾರತದ ಕೊಳಗೇರಿ ನಿವಾಸಿಗಳ ಕಥಾ ಹಂದರವನ್ನು ತಾಂತ್ರಿಕವಾಗಿ ನಯವಾಗಿ ಚಿತ್ರಿಸಿದ್ದಾರೆ ಡ್ಯಾನಿ ಬೋಯೆಲ್‌. ಇಲ್ಲಿನ ಯಾವುದೇ ವಾಸ್ತವಿಕತೆಯೊಂದಿಗೆ ಮಾನವೀಯ ಅರ್ಥವನ್ನು ಈ ಚಿತ್ರ ಕಲ್ಪಿಸಲು ವಿಫಲವಾಗಿದೆ ಎನ್ನಬಹುದು. ಕೇವಲ ಕಥೆಗಾಗಿ ಈ ಚಿತ್ರವನ್ನು ಹಾಗೂ ರೆಹಮಾನ್‌ ಜೊತೆ ಭಾರತದಲ್ಲಿ ಚಿತ್ರಿಸಿರುವುದು ಬಿಟ್ಟು ಬೇರೇನಕ್ಕೂ ಭಾರತೀಯನು ಹರ್ಷ ಪಡುವ ಅಗತ್ಯವಿಲ್ಲ. ಇನ್ನು ರೆಹಮಾನ್‌, ಈ ಹಿಂದೆ ‘ಲಗಾನ್‌’ ಚಿತ್ರಕ್ಕೂ ಸುಂದರ ಸಂಗೀತ ನೀಡಿದ್ದರು ಅನ್ನೋದು ಮರೆಯುವ ಹಾಗಿಲ್ಲ

ಈ ಹಿಂದೆಯೇ ಪತ್ರಕರ್ತ ಗಂಗಾಧರ ಮೊದಲಿಯಾರ್‍ ಸ್ಲಂ ಡಾಗ್‌ಗೆ ಆಸ್ಕರ್‌ ಕುರಿತು ಸವಿವರವಾದ ಲೇಖನ ಪ್ರಕಟಿಸಿದ್ದರು ಪ್ರಜಾವಾಣಿಯಲ್ಲಿ. ಆಸ್ಕರ್‌ ಬರಲು ಏನು ಕಾರಣ ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ತಮ್ಮ ಲೇಖನದಲ್ಲಿ. ಇವರು ಹೇಳುವುದು ಇಷ್ಟು. ಸ್ಲಂ ಡಾಗ್‌ಗೆ ಆಸ್ಕರ್‌ ಬಂದರೆ, ವಿದೇಶಿ ನಿರ್ದೇಶಕ ಹಾಗೂ ತಂತ್ರಜ್ಞರನ್ನು ಒಳಗೊಂಡಿರುವ ಚಿತ್ರ ಎಂಬುದು ಬಿಟ್ಟರೆ ಮತ್ತೇನಕ್ಕೂ ಅಲ್ಲ ಅಂತಾರೆ ಗಂಗಾಧರ್‍.

ಒಟ್ಟಿನಲ್ಲಿ ಸ್ಲಂ ಡಾಗ್‌ ತಮ್ಮ ಬತ್ತಳಿಕೆಯಲ್ಲಿದ್ದ ಹಲವಾರು ಪ್ರಶಸ್ತಿಗಳ ಜೊತೆಗೆ ಆಸ್ಕರ್‌ ಪ್ರಶಸ್ತಿಯನ್ನು ತುಂಬಿಕೊಂಡಿದೆ. ಈ ಹಿಂದೆ ನಿರ್ಮಾಣಗೊಂಡಿದ್ದ ‘ನಾಯಗರ್‌, ಮದರ್‌ ಹಾಗೂ ಲಗಾನ್‌ ಚಿತ್ರಗಳು ಕೂಡ ಆಸ್ಕರ್‌ ಕದ ತಟ್ಟಿ ಬಂದಿದ್ದವು. ಲಗಾನ್‌ ಅಂಥ ಚಿತ್ರಗಳನ್ನು ಬಿಟ್ಟು ಸ್ಲಂ ಡಾಗ್‌ಗೆ ಆಸ್ಕರ್‌ ನೀಡಿರುವುದಲ್ಲಿ ಪಕ್ಷಪಾತದಿಂದ ಕೂಡಿದೆ. ಕೇವಲ ರಾಜ್ಯಮಟ್ಟದಲ್ಲಿ ಮಾತ್ರ ಚಲನ ಚಿತ್ರಗಳಿಗೆ ಪ್ರಶಸ್ತಿಗಳು ದೊರೆತಾಗ ಎದುರಾಗುವ ತಗಾದೆಗಳು ಅಂತರಾಷ್ಟ್ರೀಯ ಮಟ್ಟಕ್ಕೂ ಬಿಟ್ಟಿಲ್ಲ.

ಏನೇ ಇರಲಿ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸುವಾಗ ಂತರಾಷ್ಟ್ರೀಯ ಮಟ್ಟದಲ್ಲಿ ನಿರ್ದಿಷ್ಟ ಮಾನದಂಡಗಳು ಅತ್ಯಗತ್ಯ.

- ಬಾಲರಾಜ್‌ ಡಿಕೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಖುಷಿ ಪಟ್ರೆ ಅದ್ರಲ್ಲಿ ತಪ್ಪೇನ್ ಇದೆ ? ಅಲ್ದೆ ಲಗಾನ್ etc best foreign film ವಿಭಾಗದಲ್ಲಿ nominate ಆಗಿದ್ವು .... ಚಿತ್ರ ಹೇಗೆ ಇರ್ಲಿ ...ಭಾರತೀಯರಿಗೆ ಸಿಕ್ಕ ಯಶಸ್ಸು (ಅಂತರಾಷ್ಟ್ರೀಯ recognition) ಇದು ... ಜೈ ಹೋ !!!

ಬಾಲರಾಜು, ನಿಮ್ಮ ಅನಿಸಿಕೆಗಳಲ್ಲಿ ಕೆಲವಕ್ಕೆ ನನ್ನದೂ ಬೆಂಬಲವಿದೆ. " ಇದೇನೇ ನಂಜಿ ಓಡಾಟ ಅಂದ್ರೆ ಶಾನುಭೋಗರ ಮನೇಲಿ ಬೀಗರೂಟ " ಅನ್ನುವ ಗಾದೆ ನೆನಪಾಯ್ತು ನನಗೆ