ಹಿಂದ ನೋಡದ ಗೆಳತಿ.....

To prevent automated spam submissions leave this field empty.

ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).

ವರಕವಿ ಬೇಂದ್ರೆ ಯವರ ಒಂದೊಂದು ಕವನವು ವಿಭಿನ್ನ ವಾದ ಕಾವ್ಯ ಶೈಲಿಯನ್ನು ಹೊಂದಿರುತ್ತವೆ. ಮಕ್ಕಳಿಗಾಗಿ "ಪಾತರಗಿತ್ತಿ ಪಕ್ಕ" ಅತ್ಯಂತ ಮಾರ್ಮಿಕ ಅರ್ಥವನ್ನೊಳಗೊಂದ "ನಾಕು ತಂತಿ" ಮತ್ತು ಪುತ್ರ ಶೋಕ ಬಿಂಬಿಸುವ "ನೀ ಹಿಂಗ ನೋಡಬ್ಯಾಡ ನನ್ನ" ಹೀಗೆ ಇನ್ನು ಅನೇಕ ಕವನಗಳು ಬೇಂದ್ರೆಯವರ ಲೇಖನಿಯಿಂದ ಹೊರಬಂದು ಕನ್ನಡಿಗರ ಮನದಲ್ಲಿ ಮನೆ ಮಾಡಿ ಕೂತಿವೆ.

ಒಂದು ಹೆಣ್ಣಿನ ವಿರಹ ವೇದನೆಯ ಬಗ್ಗೆ, ಇನಿಯನ ಬಗ್ಗೆ ಅವಳಲ್ಲಿರುವ ಭಾವನೆಯನ್ನು ಹೊತ್ತು ತಂದ ಕವನವೇ ಈ "ಹಿಂದ ನೋಡದ ಗೆಳತಿ" ಕವನ. ಬೇಂದ್ರೆ ಯವರು ಈ ಕವನ ಬರೆಯಲು ಸ್ಪೂರ್ತಿ ಎನು? ಎಂಬುದರ ಹಿಂದೆ ಒಂದು ಸ್ವಾರಸ್ಯ ವಾದ ಕಥೆ ಇದೆ (ನಾನು ಯೆಲ್ಲೊ ಓದಿದ ನೆನಪು).

ಬೇದ್ರೆಯವರು ಸಮಯ ಸಿಕ್ಕಗಲೆಲ್ಲಾ ತಮ್ಮ ಸ್ನೇಹಿತ ಎನ್ಕೆ ಕುಲಕರ್ಣಿ(ನಾಣಿ) ಯವರ ಮನೆಗೆ ಹೋಗಿ ಹರಟೆ ಹೊಡೆಯುತ್ತಿದ್ದರು ಅವರ ಮನೆಗೆ ಹೊದಾಗಲೆಲ್ಲ ಅವ್ರ ಮೆಚ್ಚಿನ ಚಾ-ಚೂಡಾ ವನ್ನು ನಾಣಿಯವರ ಮನೆಯಲ್ಲಿ ಸವಿಯುತ್ತಿದ್ದರು. ಒಂದು ದಿನ(ಜುಲೈ 7 ಮಂಗಳವಾರ 1947) ಬೇಂದ್ರೆಯರು ನಾಣಿಯವರ ಮನೆಯಲ್ಲಿ ಕುಳಿತಿರುವಾಗ ಅವ್ರಿಗೆ ಗೋಡೆಯ ಮೇಲಿರುವ ಒಂದು ಚಿತ್ರ ಕಣ್ಣಿಗೆ ಬೀಳುತ್ತೆ. ಅದು ಒಬ್ಬಳು ಗೋಪಿಕೆ ಯು ಕೃಷ್ಣನನ್ನೆ ನೋಡುತ್ತ ಕುಳಿತ ಚಿತ್ರಪಟ. ಅಲ್ಲಿಂದ ಮನೆಗೆ ಬಂದ ಬೇಂದ್ರೆಯವರು ಆ ಗೋಪಿಕೆಯ ಮನದಲ್ಲಿಯ ಭಾವನೆಗಳನ್ನು ಶಬ್ಧಗಳ ರೂಪದಲ್ಲಿ ಬಿಡಿಸಿಟ್ಟಾಗ ಮೂಡಿಬಂದ ಕವಾವನವೇ ಈ "ಹಿಂದ ನೋಡದ ಗೆಳತಿ" ಕವನ.

ಕವನದ ಪ್ರತಿಯೊಂದು ಸಾಲಿನಲ್ಲು ಬೇಂದ್ರೆಯವರ ಸರಳ ಪದಗಳ ರಚನೆ ಮತ್ತು ಓದುಗನ ಮನಸ್ಸನ್ನು ಒಂದು ಕಲ್ಪನಾ ಲೋಕಕ್ಕೆ ಒಯ್ಯುವ ಮಾಯಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಪೂರ್ತಿಯಾಗಿ ಕವನವನ್ನು ಓದಿದದ ನಂತರ ನನಗನಿಸಿದ್ದು.....
ಬೇಂದ್ರೆಗೆ ಬೇಂದ್ರೆಯವರೆ ಸಾಟಿ.... ಎನಂತಿರಾ?

ಲೇಖನ ವರ್ಗ (Category):