ನನ್ನೊಳಗೆ ಶಂಕರ

To prevent automated spam submissions leave this field empty.

ಕ್ಷೀರಾಬ್ಧಿಯೊಳಗೆ
ನೆಲೆ ನಿಂತನೆ ಪ್ರಾಣಲಿಂಗ?
ಬೋಧಗೆ ಕಾದಿದೆ ಎನ್ನಾತ್ಮಲಿಂಗ
ಪ್ರ: ಬೋಧೆಗೆನು ಬೇಕು?
ಧರಿಸಲು ಧಿರಿಸೇನೆನಗೆ?
ಜ್ಞಾನದೊಳಗೆ ಜ್ಞಾನ ಗುರು
ಹೃದಯದೊಳಗೆ ಹೃದಯ ಸತ್ಯಲಿಂಗ
ಭಕ್ತರೊಳಗೆ ಭಕ್ತ ಜಂಗಮ
ಶುಚಿಯೊಳಗೆ ಶುಚಿ ಪಾದೋದಕ
ರುಚಿಯೊಳಗೆ ರುಚಿ ಪ್ರಸಾದ
ಮನದೊಳಗೆ ಮನ ವಿಭೂತಿ
ಕಣ್ಣೊಳಗೆ ಕಣ್ಣು ರುದ್ರಾಕ್ಷಿ
ವೇದದೊಳಗೆ ನಾದ ಮಂತ್ರ
ಧರಿಸಲು ಸಾಕೆ ಅಷ್ಟಾವರಣ

ಪ್ರ:ಆತ್ಮಸಿದ್ಧಿಯ ಆಚಾರಗಳೇನು ?
ಶುಧ್ಧ ನಿರ್ಮಲ ಸದಾಚಾರ
ಸತ್ಯಧರ್ಮದ ಗಣಾಚಾರ
ನಿತ್ಯಾತ್ಮ ಪೂಜೆಯ ನಿತ್ಯಾಚಾರ
ಅಂಗ ಲಿಂಗ ಧಾರಣೆಯ ಶಿವಾಚಾರ
ನಿತ್ಯ ಲಿಂಗಾರ್ಚನೆಯ ಲಿಂಗಾಚಾರ
ಆತ್ಮಸಿಧ್ಧಿಗೆ ಇದು ಸತ್ಯ

ಪ್ರ:ಆದ್ಯಾತ್ಮ ಸಿಧ್ದಿಗೆ ನಮಗೇನು ಬೇಕು?
ರುದ್ರಾಕ್ಷನ ಭಕ್ತಿ
ತಾನೊಂದೆನುವ ಪ್ರಾಸಾದ
ಆತ್ಮನಾಗುವ ಪ್ರಾಣ ಲಿಂಗ
ಸತ್ಯ ಸಾಧಕ ಶೋಧಕ ಶರಣ
ಬ್ರಹ್ಮನಲಿ ಲೀನವಾಗೆ ಐಕ್ಯ
ಸಾಕೆಂದುದು ಷಟ್ಸ್ಥಲ

ಗುರು ಶಂಕರನ ಅಭಯವೆನಗೆ
ಆತ್ಮಸಿಧ್ಧಿ ಜ್ಞಾನ ಸಿಧ್ಧಿ ನೀಡೆನಗೆ
ಓಂ ನಮೋ, ಓಂ ನಮೋ, ಬಂದೆ.
ಇಗೋ! ಬಂದೆ , ಬಂದೆ ತಂದೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯ
ರುದ್ರ ನೇತ್ರನ (ಶಿವನ) ಭಕ್ತಿಯೊಂದು ಮೆಟ್ಟಿಲು ಆಧ್ಯಾತ್ಮ ಸಿಧ್ಧಿಗೆ
ಷಟ್ಸ್ಥಲಗಳು (ಭಕ್ತಿ ,ಪ್ರಸಾದ ,ಲಿಂಗ, ಶರಣ,ಮಾಹೇಶ, ಐಕ್ಯ) ಸಾಕು ಬ್ರಹ್ಮಾನಂದ ಹೊಂದಲು ಎಂಬುದನ್ನು ಹೇಳಲು ಪ್ರಯತ್ನ ಪಟ್ಟಿದ್ದೇನೆ
ಹರೀಶ್ ಆತ್ರೇಯ