ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೫

To prevent automated spam submissions leave this field empty.

ಇತ್ತೀಚೆಗೆ ಡಿಸ್ಕವರಿಯಲ್ಲಿ ಬಾಗ್ದಾದ್ ಬ್ಯಾಟೆರಿ ಹಾಗೂ ಈಜಿಪ್ಟಿನ ಬ್ಯಾಟೆರಿ ಬಗ್ಗೆ ತೋರಿಸಿದಾಗ, ಭಾರತೀಯರಿಗೆ ಬ್ಯಾಟೆರಿ ಬಗ್ಗೆ ಏನು ಅರಿವಿದ್ದಿತು ಎಂದು ಹುಡುಕಿದಾಗ ಸಿಕ್ಕಿದು....

ರಾವ್ ಸಾಹೆಬ್ ಕೃಷ್ನಾಜಿ ಅವರು ತಂತ್ರಙ್ಞಾನ ಪರಿಕ್ಷೆಯನ್ನು ೧೮೯೧ ಫುನೆ ಇಂದ ಉತ್ತೀರ್ಣರಾದರು. ವಿಙ್ಞನದ ಬಗ್ಗೆ ಪುರಾಣ ಗ್ರಂಥಗಳನ್ನು ಅವರು ನೋಡುವಾಗ, ಆಗಸ್ತ್ಯ ಸಂಹಿತದ ಕೆಲವು ಪುಟಗಳನ್ನು ಉಜ್ಜೈನಿಯ ದಾಮೋದರ್ ತ್ರ್ಯಂಬಕ್ ಜೋಶಿ ಹತ್ತಿರ ಕಂಡರು. ಇದು ಶಕ ಸಮ್ವತ್ ೧೫೫೦ರ ಸುತ್ತ ಸೇರಿದ್ದು. ತರುವಾಯ ಸಂಹಿತದ ಆ ಪುಟದ ಉಲ್ಲೇಖವನ್ನು ಓದಿದ ಮೇಲೆ, ಡ. ಯಮ್.ಸಿ. ಶಹಸ್ತ್ರಬುದ್ಧೆ (ನಾಗ್ಪುರದ ಸಂಸ್ಕೃತ ವಿಭಾಗದ ಮುಖ್ಯಸ್ತರು) ಅವರು ಈ ವಿವರಣೆಯು ಡಾನಿಎಲ್ ಸೆಲ್ಲ್ ( Daniel Cell) ಬಹುವಾಗಿ ಸರಿಹೋಲುವುದು ಎಂದು ಭಾವಿಸಿದರು. ಆದ್ದರಿಂದ ಅದನ್ನು ಪಿ.ಪಿ. ಹೋಲೆ( ನಾಗ್ಪುರದ ತಾಂತ್ರಿಕ ವಿಭಾಗದ ಪ್ರಾಚಾರ್ಯರಿಗೆ) ನೀಡಿ ಪರಿಶೋಧಿಸಲು ವಿನಂತಿಸಿಕೊಂಡರು.

ಆಗಸ್ತ್ಯರ ಆಧಾರವು ಹೀಗಿದೆ :

ಸಂಸ್ಥಾಪ್ಯ ಮ್ರಿನ್ಮಯ ಪತ್ರೆ
ತಾಮ್ರಪತ್ರಮ್ ಸುಸಂಸ್ಕ್ರಿತಮ್
ಚದ್ಯೆಚ್ಹಿಕಿಗ್ರಿವೆನ್ ಚರ್ದ್ರರ್ಭಿಃ
ಕಶ್ಥ್ಪಂಸುಭಿಃ.
ದಸ್ತಲೊಶ್ತೋ ನಿಧತವ್ಯಃ
ಪರ್ದಚ್ಹದಿತಸ್ತಃ
ಸನ್ಯೋಗಜ್ಜಯ್ತೆ ತೇಜೋ
ಮಿತ್ರವರುನಸಂಗ್ಯಿತಂ.
(ಅಗಸ್ತ್ಯ ಸಂಹಿತ)

"ಮಣ್ಣಿನ ಮಡಿಕೆಯನ್ನು ತೆಗೆದುಕೊಂಡು, ತಾಮ್ರದ ಹಾಳೆಯನ್ನು ಅದರ ಮೇಲೆ ಹಾಕಿ, ಶಿಖಿಗ್ರೀವವನ್ನು ಅದರಲ್ಲಿ ಹಾಕಬೇಕು. ನಂತರ ಒದ್ದೆಯಾದ Saw Dust, ಪಾದರಸ ಮತ್ತು ಸತುವು (Zinc) ನ್ನು ಲೇಪಿಸಬೇಕು. ಈಗ ತಂತಿಯನ್ನು ಜೋಡಿಸಿದರೆ ಮಿತ್ರವರುಣಶಕ್ತಿಯು ಉದ್ಭವಿಸುತ್ತದೆ".

ಮಿ. ಹೋಲೆ ಮತ್ತು ಅವರ ಸ್ನೇಹಿತರು ಸಲಕರಣೆಗಳನ್ನು ಮೇಲಿನ ವಿವರಣೆಯ ಆಧಾರದ ಮೇಲೆ ಸಜ್ಜುಗೊಳಿಸಲು ಹೋದಾಗ, ಅವರಿಗೆ ಶಿಖಿಗ್ರೀವ ಹೊರತುಪಡಿಸಿ ಎಲ್ಲಾ ವಸ್ತುಗಳನ್ನು ಊಹಿಸಿದರು. ಸಂಸ್ಕೃತದ ಕೋಶವನ್ನು ತೆಗೆದು ನೋಡಲು ನವಿಲಿನ ಕಂಠವೆಂದು ಅರ್ಥೈಸಿಕೊಂಡರು. ಆತ ಮತ್ತು ಆತನ ಸ್ನೇಹಿತರು ಮಹಾರಾಜ್ ಭಾಗ್ ಗೆ ಹೋಗಿ ಅಲ್ಲಿಯ ಮುಖ್ಯಸ್ಥನನ್ನು ಮೃಗಾಲಯದಲ್ಲಿರುವ ನವಿಲು ಯಾವಾಗ ಮಡಿಯುವುದು ಎಂದು ಕೇಳಿದರು. ಮುಖ್ಯಸ್ಥನು ಇದನ್ನು ಕೇಳಿ ಕೋಪಗೊಂಡನು. ನಂತರ ಅವರು ತಮ್ಮ ಪ್ರಯೋಗಕ್ಕೆ ನವಿಲಿನ ಕಂಠವು ಬೇಕೆಂದು ತಮ್ಮ ಉದ್ದೇಶವನ್ನು ತಿಳಿಸಲು ಅವನು ಮನವಿಯನ್ನು ಕೊಡಲು ಹೇಳಿದನು.

ಆನಂತರ ಈ ವಿಷಯದ ಚರ್ಚೆಯ ಮತ್ತು ನಿರೂಪಣೆಯ ಸಂದರ್ಭದಲ್ಲಿ ಆಯುರ್ವೇದ ಪ್ರವೀಣನನ್ನು ಕೇಳಲು ಅವನು ನಕ್ಕು ಇದರ ಅರ್ಥ ನವಿಲಿನ ಕಂಠ ಅಲ್ಲ ಆ ರೀತಿಯ ಬಣ್ಣದ ದ್ರವ್ಯ ತಾಮ್ರದ ಸಲ್ಫೇತ್ ( Copper Sulphate) ಎಂದು ಅವರ ತೊಡಕನ್ನು ನಿವಾರಿಸಿದನು.

ಒಂದು ಸೆಲ್ಲ್ (cell) ರಚನೆಯಾಗಿ ಡಿಜಿಟಲ್ ಮಲ್ಟಿಮೀಟರ್ ಇಂದ ಅಳೆಯಬಹುದಾಗ, ಇದಕ್ಕೆ ೧.೩೮ ವೋಲ್ಟಿನ ಒಪೆನ್ ಸರ್ಕ್ಯೂಟ್ ವೋಲ್ಟೇಜು ಮತ್ತು ೨೩ ಮಿಲಿ ಅಮ್ಪೆರೆಸ್ ಶಾರ್ಟ್ ಸರ್ಕ್ಯೂಟ್ ಕರೆಂಟು ಇತ್ತು.

ಮೂಲ:
http://www.organiser.org/dynamic/modules.php?name=Content&pa=showpage&pi...

ಲೇಖನ ವರ್ಗ (Category):