ಸ್ಥಿತಪ್ರಜ್ಞ ಶಿವ

To prevent automated spam submissions leave this field empty.

ಭೀತಿರ್ನಾಸ್ತಿ ಭುಜಂಗ ಪುಂಗವ ವಿಷಾತ್
ಪ್ರೀತಿರ್ನಚಂದ್ರಾಮೃತಾತ್
ನಾಶೌಚಂ ಹಿ ಕಪಾಲದಾಮ ಲುಲನಾತ್
ಶೌಚಂ ನ ಗಂಗಾಜಲಾತ್||
ನೋದ್ವೇಗಶ್ಚಿತಿಭಸ್ಮನಾ ನ ಚ ಸುಖಂ
ಗೌರೀ ಸ್ತನಾಲಿಂಗನಾತ್
ಆತ್ಮಾರಾಮತಯಾ ಹಿತಾಹಿತಸಮಃ
ಸ್ವಸ್ಥೋಹರಃ ಪಾತುಮಾಮ್||

ಹಾವಿನ ಹೆಡೆಯೊಳಿರುವ ವಿಷದಿಂದ ಭಯವಿಲ್ಲ
ಚಂದ್ರನೊಳಿರುವಾಮೃತದೊಳಾಸೆಯಿಲ್ಲ
ರುಂಡಮಾಲೆಯಧರಿಸಿದರೂ ಅಶೌಚವಿಲ್ಲ
ಗಂಗಾಜಲಶಿರದಲ್ಲಿದ್ದರೂಶೌಚವಿಲ್ಲ
ಚಿತೆಯಭಸ್ಮಲೇಪನದಿಂದ ಉದ್ವೇಗವಿಲ್ಲದೆ
ಗೌರೀಸ್ತನಾಲಿಂಗನದಿಂದ ಸುಖವನನುಭವಿಸದೆ
ಆತ್ಮಾನಂದಸಹಿತನಾಗಿಸುಖದುಃಖರಹಿತನಾಗಿರುವ
ಸ್ಥಿತಪ್ರಜ್ಞ ಶಿವ ನಮ್ಮನ್ನು ಕಾಪಾಡಲಿ.
ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆ ಶಿವನು ನಮಗೆಲ್ಲಾ ಸದ್ಬುದ್ಧಿ ಕೊಡಲಿ. ಶಿವನ ಸ್ಮರಣೆ ಮಾಡಿಸಿದ ನಿಮಗೆ ಶಿವರಾತ್ರಿಯ ಶುಭಾಶಯಗಳು.

ಎಲ್ಲರಿಗೂ ಧನ್ಯವಾದಗಳು.
ಒಂದು ತಿದ್ದುಪಡಿ-(ಶುಭಾಷಯಗಳು) ಬದಲಿಗೆ ಶುಭಾಶಯಗಳು.
ಈ ಶ್ಲೋಕ ರುದ್ರಾಧ್ಯಾಯದ ಒಟ್ಟು ತಾತ್ಪರ್ಯವನ್ನು ಸ್ಥೂಲವಾಗಿ ತಿಳಿಸುತ್ತದೆ.

ಅನಂತೇಶ ಅವರೇ,
ನಿಮ್ಮ ಅನುವಾದ ಬಹಳ ಚೆನ್ನಾಗಿದೆ.

ಹೀಗೇ, ಬೆಂಕಿ ಹಾಗೂ ನೀರು; ಸಿಂಹ, ಎತ್ತು; ಇಲಿ, ನವಿಲು, ಹಾವು ಮುಂತಾದುವನ್ನೆಲ್ಲಾ ಹತ್ತಿರ ಇಟ್ಟುಕೊಂಡು, ಶೀತಲ ಮಂಜುಗಡ್ಡೆಯ ಮೇಲೆ ಲಘುವಸ್ತ್ರಧಾರಿಯಾಗಿ ಜೀವಿಸುವ ಶಿವನ ಸಹನಶೀಲತೆ ಹಾಗೂ management skills ಮೇಲೂ ಒಂದು ಸುಂದರ ಪದ್ಯ ಇದ್ದಂತೆ ನೆನಪು. ಬಹುಶಃ ಹಂಸಾನಂದಿಯವರಿಗೆ ಅಥವಾ ಇನ್ಯಾರಾದರೂ ಸಂಸ್ಕೃತ ಭಾಷಾಸಕ್ತರಿಗೆ ತಿಳಿದಿರಬಹುದೇನೋ? ಇಲ್ಲವೇ ಆ ಶ್ಲೋಕವೂ ಇದೇ ಕೃತಿಯ ಭಾಗವಾಗಿರಲೂ ಸಾಧ್ಯ ಅಲ್ಲವೇ?

ಶಾಮಲ

ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.