ಗುಜರಾತಿನಲ್ಲಿ ಹೆಪಟಿಟಿಸ್ ಹಾವಳಿ

To prevent automated spam submissions leave this field empty.

ಸೋಮವಾರದಿಂದ ನಿನ್ನೆಯವರೆಗೆ ಗುಜರಾತಿನ ಸಬರ್ಕಾಂತಾ ಜಿಲ್ಲೆಯ ಮೊದಾಸಾ ತಾಲೂಕಿನಲ್ಲಿ ಹೆಪಟಿಟಿಸ್ ವೈರಸ್ ಶಂಕೆಯಿಂದ ೨೫ ಸಾವುಗಳು ವರದಿಯಾಗಿವೆ. ಇದು ಹೆಪಟಿಟಿಸ್ ಬಿ ವೈರಸ್ಸೋ ಅಥವಾ ಡಿ ವೈರಸ್ ಎಂಬುದು ಇನ್ನೂ ಖಚಿತವಾಗಿ ನಿರ್ಧಾರವಾಗಿಲ್ಲ. ನ್ಯಾಷನಲಿ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಜಸ್ ನವರು ಇದು 'ಡಿ' ವೈರಸ್ ಇದೆಯೆಂದರೆ ನ್ಯಾಷನಲಿ ಇನಸ್ಟಿಟ್ಯೂಟ್ ಆಫ್ ವೈರಾಲಜಿ ಇಲ್ಲವೆನ್ನುತ್ತಿದೆ. ಈ ಹೆಪಟಿಟಿಸ್ ವೈರಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ಪ್ರಭಾವ ತೋರಿಸುತ್ತಿದೆ. ಹೆಪಟಿಟಿಸ್ ಡಿ ವೈರಸ್ ಅತಿ ವಿರಳವಾಗಿ ಕಂಡುಬರುತ್ತದೆ ಅಷ್ಟೇ ಅಲ್ಲದೇ ಇದಕ್ಕೆ ಯಾವ ಮದ್ದೂ ಇಲ್ಲ.

ಇದರ ಜೊತೆಗೆ ಸೂರತ್ ಜಿಲ್ಲೆಯ ಒಲ್ಪಾಡ್ ತಾಲೂಕಿನ ಮೂರು ಹಳ್ಳಿಗಳಲ್ಲಿ ಹೆಪಟಿಟಿಸ್ ಇ ವೈರಾಣುಗಳಿಂದ ೩೯ ಜನರು ಪೀಡಿತರಾಗಿರುವದು ವರದಿಯಾಗಿದೆ, ಇದು ಕಲುಷಿತ ನೀರಿನಿಂದ ಉಂಟಾಗಿದೆಯೆಂದು ತಿಳಿದು ಬಂದಿದೆ.

ಗುಜರಾತಿನ ಮುಖ್ಯಮಂತ್ರಿ ಮೋದಿ ಈ ವೈರಸ್ ಹಾವಳಿ ತಡೆಗಟ್ಟಲು ಯಾವ ಮೋಡಿ ಮಾಡುತ್ತಾರೋ ಎಂದು ಗುಜರಾತಿನ ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಾಹಿತಿಗೆ ಧನ್ಯವಾದಗಳು ಸಂಜೀವ್ ಅವರೆ,

ಇದು ಹೆಪಟೈಟಿಸ್-ಏ ಅಥವಾ ಹೆಪಟೈಟಿಸ್-ಡಿ ಇರಬೇಕು.
ಹೆಪಟೈಟಿಸ್-ಏ ಗೆ ಇಲ್ಲಿ (ಅಮೇರಿಕಾದಲ್ಲಿ) ನಾವು ಲಸಿಕೆಯನ್ನು ಬಳಸುತ್ತೇವೆ.
ಹೆಪಟೈಟಿಸ್-ಭಿ, ಮತ್ತು ಹೆಪಟೈಟಿಸ್-ಸಿ ಯಿಂದ ಈ ತರಹ ಅಕ್ಯೂಟ್ ಸಿಕ್ನೆಸ್ ಆಗಿ ಸಾಯುವುದಿಲ್ಲ. ೨೫- ಮಂದಿ ಸತ್ತಿರುವುದು ತುಂಬಾ ಚಿಂತಾಜನಕ. ಇದನ್ನು ತಡೆಗಟ್ಟದಿದ್ದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಇದಕ್ಕೆ ಆಹುತಿಯಾಗುವುದು ಖಂಡಿತ.

"ಲಸಿಕೆ ಹಾಕಿಸಬೇಡಿ" ಅಂತ ಹಾಹಾಕರಿಸುತ್ತಿರುವರು ಇದನ್ನು ನೋಡಿಯಾದರೂ ಅರಿತುಕೊಳ್ಳಬೇಕು. ಲಸಿಕೆ ಇರುವ ಸಾಂಕ್ರಾಮಿಕ ರೋಗಗಳಿಗೆ ತಪ್ಪದೇ ಎಲ್ಲರಿಗೂ ಲಸಿಕೆ ಮಾಡುವುದರಿಂದ ಈ ತರಹ ಔಟ್ಬ್ರೇಕ್ ಆಗುವ ಸಂಭವವನ್ನು ನಿಲ್ಲಿಸುತ್ತದೆ.

~ಮೀನಾ.