ದಮ್ಮ-ಪದ (ಬೌದ್ಧ ಧರ್ಮ ಗ್ರಂಥ)

To prevent automated spam submissions leave this field empty.

"ದಮ್ಮ ಪದ" ಅನ್ನೋದು ಖ್ಯಾತ ಬೌದ್ಧ ಧರ್ಮ ಗ್ರಂಥ ಸುಮಾರು 50 B.C.E ರಿಂದ 5 C.E ಅವಧಿಯಲ್ಲಿ ಇದನ್ನು ಪಾಳಿ ನುಡಿಯಲ್ಲಿ ಬರೆಯಲಾಗಿದೆ. ಇದರಲ್ಲಿ 422 ಉಕ್ತಿಗಳಿವೆ, ಇವನ್ನು ಬುದ್ದನ ನುಡಿಗಳು ಅಂತ ನಂಬಲಾಗಿದೆ.
___________________________________________________________________

All that we are is the result of what we have thought, it is founded on our thoughts, it is made up of our thoughts, if one speaks or acts with a corrupt/evil thought, suffering follows one, as the wheel follows the foot of the ox that draws the wagon.

ತಾನೆಲ್ಲಾ ತನ್ನೆದಿರೆಲ್ಲಾ ತನ್ನ ಮನಸ್ಸಿನಂತೆ, ಮನಸ್ಸು ತಿಳಿದಂತೆ, ಮನಸ್ಸು ತಳೆದಂತೆ;
ಕೆಟ್ಟ ಮನಸ್ಸಿನಿಂದ ಏನೇ ಮಾಡಲಿ ಏನೇ ಮಾತಾಡಲಿ ದುಮ್ಮಾನ ಹಿಂಬಾಲಿಸುವುದು,
ಚಕ್ಕಡಿಗಾಡಿ ಗಾಲಿ ಅದನ್ನ ಎಳೆಯೊ ಎತ್ತಿನ ಕಾಲ ಹಿಂಬಾಲಿಸುವಂತೆ.

All that we are is the result of what we have thought, it is founded on our thoughts, it is made up of our thoughts, if one speaks or acts with an pure thought, happiness follows one, like a shadow that never leaves

ತಾನೆಲ್ಲಾ ತನ್ನೆದಿರೆಲ್ಲಾ ತನ್ನ ಮನಸ್ಸಿನಂತೆ, ಮನಸ್ಸು ತಿಳಿದಂತೆ, ಮನಸ್ಸು ತಳೆದಂತೆ;
ಬಿಚ್ಚು ಮನಸ್ಸಿನಿಂದ ಏನೇ ಮಾಡಲಿ ಏನೇ ಮಾತಾಡಲಿ ಸುಮ್ಮಾನ ಹಿಂಬಾಲಿಸುವುದು,
ತನ್ನ ಬಿಡದೆ ಹಿಂಬಾಲಿಸುವ ನೆರಳಿನಂತೆ.

He insulted me, hit me, beat me, robbed me'"for those who brood on this, hostility isn't stilled.

ನನಗೆ ಹೊಡೆದ, ಬಡಿದ, ಟೊಣೆದ, ಅವಮಾನ ಮಾಡಿದ ಅನ್ನೋ ಯೋಚನೆಯಲ್ಲಿ ಮುಳುಗಿದ್ದವರಲ್ಲಿ ಹಗೆ ಎಂದೂ ನೀಗೋದಿಲ್ಲ

He insulted me, hit me, beat me, robbed me'" for those who don't brood on this, hostility is stilled.

ನನಗೆ ಹೊಡೆದ, ಬಡಿದ, ಟೊಣೆದ, ಅವಮಾನ ಮಾಡಿದ ಅನ್ನೋ ಯೋಚನೆಯಿಂದ ಹೊರಬಿದ್ದವರಲ್ಲಿ ಹಗೆ ಎಂದೂ ನೆಲೆಸೋದಿಲ್ಲ

Here he grieves he grieves hereafter;
In both worlds, the wrong-doer grieves;
He grieves, he 's afflicted, seeing the corruption of his deeds.

ಇಲ್ಲು ನೊಂದರು ಅಲ್ಲು ನೊಂದರು
ಇಹಪರದಲ್ಲಿ ಕೇಡಿಗರು ನೊಂದು-ನೊಂದರು
ತನಗೇ ಕೆಡುಕಾದುದ ಕಂಡು ಬೆಂದು-ನೊಂದರು

Here he rejoices, he rejoices hereafter;
In both worlds, the merit-maker rejoices;
He rejoices, is jubilant, seeing the purity of his deeds.

ಇಲ್ಲು ನಲಿದರು ಅಲ್ಲು ನಲಿದರು
ಇಹಪರದಲ್ಲಿ ಒಳ್ಳಿಹರು ನಲಿದು-ನಲಿದರು
ತನ್ನಿಂದ ಒಳ್ಳಿತಾದುದ ಕಂಡು ನಕ್ಕು-ನಲಿದರು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೇ ಹೇ ... ಕಿರಣ್ , ಶಿವಮೊಗ್ಗ!....

ಇಲ್ಲಿ ನಿನ್ನನ್ನ ನೋಡಿ ತುಂಬಾ ಖುಷಿಯಾಯ್ತು...

ನನಗೆ ಈ ದಮ್ಮ ಪದ ಅರ್ಥ ಆಯ್ತಾ ಇಲ್ವಾ ಅನ್ನೋದೇ ಗೊತ್ತಾಗ್ತಾ ಇಲ್ಲ. ಆದರೂ ನಿನ್ನ ದಮ್ಮ ಪದ ಸೂಪರ್.

ಮೂಲ ವನ್ನೂ ಬರೆದರೆ ಇನ್ನೊ ಚೆನ್ನ.

ನೀನೇ ಹೇಳಿದ ಹಾಗೆ ಒಂದು ಅಕೌಂಟ್ ತೆಗೆದು ಸುಮ್ಮನೆ ಏನೊ ಒಂದಿಷ್ಟು ಟ್ರೈ ಮಾಡ್ತಾ ಇದ್ದೆ ಅಷ್ಟೇ!
ನಾ ಬರೆದದ್ದು ಸರಿ ಇದೆಯೊ ಇಲ್ಲೊ ಜನ ಬರಿಯೊ ಪ್ರತಿಕ್ರಿಯೆ ಇಂದ ನೋಡಬೇಕು. ಏನಂತಿಯಾ?

"ದಮ್ಮ ಪದ" ಅನ್ನೋದು ಖ್ಯಾತ ಬೌದ್ಧ ಧರ್ಮ ಗ್ರಂಥ ಸುಮಾರು 50 B.C.E ರಿಂದ 5 C.E ಅವಧಿಯಲ್ಲಿ ಇದನ್ನು ಪಾಳಿ ನುಡಿಯಲ್ಲಿ ಬರೆಯಲಾಗಿದೆ. ಇದರಲ್ಲಿ 422 ಉಕ್ತಿಗಳಿವೆ, ಇವನ್ನು ಬುದ್ದನ ನುಡಿಗಳು ಅಂತ ನಂಬಲಾಗಿದೆ.

ತಿಳುವಳಿ: ಈಗಿನ ಬಿಹಾರ ರಾಜ್ಯದ ಹೆಸರು ಬೌದ್ದ-ವಿಹಾರ ಅನ್ನೊ ಪದದಿಂದ ಬಂದದ್ದು;
ಪಾಳಿ ಬಾಷೆಯಲ್ಲಿ (ಬುದ್ದನ ಸಮಯದಲ್ಲಿ ಈಗಿನ ಬಿಹಾರ ಪ್ರಾಂತ್ಯದಲ್ಲಿ ಇದ್ದ ಬಾಷೆ) "ಧರ್ಮ-ಪಥ" ಅನ್ನೋ ನುಡಿಗಟ್ಟು "ದಮ್ಮ ಪದ" ಅಂತ ಆಗಿದೆ;

ಸಂಪದದಲ್ಲಿ ದಮ್ಮ ಪದ ನೋಡಿ ಬಹಳ ಕುಶಿಯಾಯಿತು ....
ದಮ್ಮಪದವೆಂದ ಕೂಡಲೆ ಮನಸಿಗೆ ಬರುವ ಒಂದು ಸಾಲು ಹಾಕಿದ್ದೇನೆ ...

Bhikkhuvagga - The Monk

He who is controlled in hand, in foot, in speech, and in the highest (i.e. the head); he who delights in meditation, and is composed; he who is alone, and is contented, - him they call a Bhikkhu. Verse 362

ಈ ಪುಸ್ತಕ ಕನ್ನಡದಲ್ಲಿ ನನಗೆ ಒಂದು ಸಲ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಸಂತೆಯಲ್ಲಿ ಸಿಕ್ಕಿತು - ಹತ್ತೇ ರೂಪಾಯಿಗೆ . ನಿಜ ಹೇಳಬೇಕೆಂದರೆ ಅದನ್ನು ಉಚಿತವಾಗಿ ಹಂಚಲು ಬೌದ್ಧ ಸಂಸ್ಥೆಯೊಂದು ಅಚ್ಚು ಹಾಕಿಸಿತ್ತು .