ಕರ್ನಾಟಕದ ಕೇಸರೀಕರಣ:

To prevent automated spam submissions leave this field empty.

ಕರ್ನಾಟಕದ ಕೇಸರೀಕರಣ:

ಕವಲು ದಾರಿಯಲ್ಲಿ ರಾಜ್ಯ ರಾಜಕಾರಣ

ಮೊನ್ನೆ ’ಔಟ್ ಲುಕ್’ ಪತ್ರಿಕೆಯ ಸುಗತಾ ದೂರವಾಣಿ ಕರೆ ಮಾಡಿ, ’ಕರ್ನಾಟಕದ ಕೇಸರೀಕರಣ’ ಕುರಿತ ತಮ್ಮ ವಿಶೇಷ ವರದಿಗಾಗಿ; ನಿಮ್ಮ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಾರು ಎಂದು ಕೇಳಿದಾಗ, ಅದು ನನ್ನನ್ನು ಪ್ರಶ್ನೆಯಾಗಿ ಮಾತ್ರ ಕಾಡಲಿಲ್ಲ. ಅದು ತನ್ನ ವ್ಯಾಪಕತೆಯಲ್ಲಿ ಕರ್ನಾಟಕದ ಇಂದಿನ ರಾಜಕೀಯ ಸಂದರ್ಭದ ಹತ್ತಿರದ ನೋಟಕ್ಕೂ ಕಾರಣವಾಯಿತು.

ಬಿಜೆಪಿ ಕರ್ನಾಟಕದಲ್ಲಿ ಏಕಾಕಿಯಾಗಿ ಅಧಿಕಾರಕ್ಕೆ ಬಂದು ಈಗಾಗಲೇ ಆರು ತಿಂಗಳುಗಳು ಕಳೆದಿವೆ. ಈ ಅವಧಿಯಲ್ಲಿ ಕರ್ನಾಟಕದ ರಾಜಕಾರಣಕ್ಕೆ ಅದು ನೀಡಿರುವ ಕೊಡುಗೆ ಏನು ಎಂದು ಒಮ್ಮೆ ಹಿಂತಿರುಗಿ ನೋಡಿದರೆ, ಆಘಾತವೇ ಆಗುತ್ತದೆ. ಆಡಳಿತದಲ್ಲಿ ಯಾವ ವೈಶಿಷ್ಟ್ಯವನ್ನಾಗಲೀ, ವಿಶೇಷ ದಕ್ಷತೆಯನ್ನಾಗಲೀ ತೋರದ ಈ ಸರ್ಕಾರ; ಹಾವೇರಿಯಲ್ಲಿ ರೈತರ ಮೇಲಿನ ಗೋಲೀಬಾರ್‌ನಿಂದ ಹಿಡಿದು, ಇತ್ತೀಚಿನ ಸಂಪಂಗಿ ಲಂಚದ ಪ್ರಕರಣದವರೆಗೆ ರಾಜಕೀಯ ಅನಾಚಾರದ ವಿಷಯದಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸಿದೆ. ಅಷ್ಟೇ ಅಲ್ಲ, ಪದ್ಮಪ್ರಿಯ ಸಾವಿನ ಪ್ರಕರಣದಿಂದ ಹಿಡಿದು ಇತ್ತೀಚಿನ ಮಂಗಳೂರು ಪಬ್ ಮೇಲಿನ ಶ್ರೀರಾಮ ಸೇನೆಯ ಗೂಂಡಾಗಿರಿ ಪ್ರಕರಣದವರೆಗೆ, ಅದು ಅಪರಾಧ ಪ್ರಕರಣಗಳ ನಿರ್ವಹಣೆಯಲ್ಲಿ ಸಂಶಯಾಸ್ಪದ ರೀತಿಯಲ್ಲೇ ವರ್ತಿಸಿದೆ. ಗಣಿ ವ್ಯವಹಾರದ ತನಿಖಾ ವರದಿ ಕುರಿತ ನಿಲುವೂ ಸೇರಿದಂತೆ ಲೋಕಾಯುಕ್ತರಿಂದ ಈ ಸರ್ಕಾರ ಇಷ್ಟು ಚಿಕ್ಕ ಅವಧಿಯಲ್ಲಿ ಎದುರಿಸಿದಷ್ಟು ಟೀಕೆ-ಖಂಡನೆ-ಅಸಮಾಧಾನಗಳನ್ನು ಇನ್ನಾವ ಸರ್ಕಾರವೂ ಎದುರಿಸಿಲ್ಲ ಎಂಬುದೂ ಗಮನಾರ್ಹ. ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಇಂದಿನ ಲೋಕಾಯುಕ್ತರ ಧೃತಿಗೆಡಸಲೋ ಎಂಬಂತೆ, ಅದು ತನ್ನ ಪಕ್ಷದ ಶಾಸಕನೊಬ್ಬನನ್ನು ಲಂಚ ಸ್ವೀಕರಿಸುತ್ತಿದ್ದಾಗಲೇ ಹಿಡಿದು ಹಾಕಿದ ಮರುದಿನವೇ, ತರಾತುರಿಯಲ್ಲಿ ’ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಖ್ಯಾತಿಯ ಮಾಜಿ ಲೋಕಾಯುಕ್ತ ವೆಂಕಾಟಾಚಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಭ್ರಷ್ಟಾಚಾರ ಕುರಿತ ತನ್ನ ಬದ್ಧತೆ ಎಂತಹುದೆಂಬುದನ್ನು ಸ್ಪಷ್ಟಪಡಿಸಿದೆ. ಈ ವೆಂಕಟಾಚಲ ಬೇರೆ, ಸಂದರ್ಭದ ವಿಪರ್ಯಾಸದ ಪರಿವೆಯೇ ಇಲ್ಲದಂತೆ, ತಾನು ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಬಿಜೆಪಿ ಸೇರಿದ್ದೇನೆ ಎಂದು ಘೋಷಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ! ಇತರೆಲ್ಲ ರಾಜಕೀಯ ಪಕ್ಷಗಳೂ ಕಳಕಿಂತ; ತಾನು ಈ ಇತರೆಲ್ಲರಿಗಿಂತ ಭಿನ್ನವೆಂದು ಹೇಳಿಕೊಂಡು ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಈ ಪಕ್ಷದ ಸ್ಥಿತಿ ಇಂದು ನೈತಿಕವಾಗಿ ಚಿಂತಾಜನಕವಾಗಿದೆ.

ನಾನು ಈ ಹಿಂದೆ ಇದೇ ಅಂಕಣದಲ್ಲಿ ನನ್ನ ಕೆಲವು ಗೆಳೆಯರು ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದನ್ನೇ ತಮ್ಮ ಒಂದು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿಕೊಂಡಾಗ ಅದನ್ನು ಟೀಕಿಸಿದ್ದೆ. ಅದು ಪ್ರಜಾಪ್ರಭುತ್ವ ಪದ್ಧತಿಯ ಬಗೆಗಿನ ನಮ್ಮ ಬದ್ಧತೆಯನ್ನೇ ಪ್ರಶ್ನಾರ್ಹಗೊಳಿಸುವುದು ಮತ್ತು ಇತರ ರಾಜಕೀಯ ಪಕ್ಷಗಳ ರಾಜಕೀಯ ಕಾರ್ಯಕ್ರಮಗಳ ಪ್ರಸ್ತುತತೆಯನ್ನೇ ಅಲ್ಲಗೆಳೆಯುವುದು ಎಂಬುದು ನನ್ನ ವಾದವಾಗಿತ್ತು. ಅದಕ್ಕಿಂತ ಹೆಚ್ಚಾಗಿ, ಈ ಧೋರಣೆ ರಾಜಕೀಯವಾಗಿ ತಟಸ್ಥರಾಗಿರುವ ಮತದಾರರಲ್ಲಿ ಬಿಜೆಪಿ ಬಗೆಗೆ ಅನಗತ್ಯ ಸಹಾನುಭೂತಿ ಹುಟ್ಟಿಸುವ ಮೂಲಕ ಚುನಾವಣಾ ಸಂದರ್ಭವನ್ನೇ ವಿಕೃತಗೊಳಿಸಬಹುದು ಎಂಬುದೂ ನನ್ನ ಆತಂಕವಾಗಿತ್ತು. ಅಷ್ಟೇ ಅಲ್ಲ, ಈ ಧೋರಣೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅದನ್ನು ಎದುರಿಸಲಾಗದೆಂಬ ಭಯ, ಅಸಹಾಯಕತೆ ಮತ್ತು ಆಂತರಿಕ ರಾಜಕೀಯ ಶಕ್ತಿ ದಾರಿದ್ರ್ಯದ ಪ್ರತೀಕ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಜೊತೆಗೆ ಜಾತ್ಯತೀತ ಪ್ರಜಾಪ್ರಭುತ್ವವಾದಿ ಸಂವಿಧಾನದ ಚೌಕಟ್ಟಿನಲ್ಲಿ ಅದು ತನ್ನ ಕೋಮುವಾದಿ ರಾಜಕಾರಣದ ಬಾಲ ಬಿಚ್ಚುವುದು ಅಷ್ಟು ಸುಲಭವಾಗಲಾರದು ಮತ್ತು ಅಧಿಕಾರ ನಡೆಸುವ ಹಾಗೂ ಉಳಿಸಿಕೊಳ್ಳುವ ಒತ್ತಡ-ಒತ್ತಾಯಗಳಲ್ಲಿ ಅದು ರಾಜಕೀಯವಾಗಿ ’ಮೆದು’ವಾಗುವುದು ಎಂಬುದು ನಮ್ಮಂತಹವರ ನಿರೀಕ್ಷೆಯಾಗಿತ್ತು. ಅದರೆ ಕಳೆದ ಆರು ತಿಂಗಳುಗಳ ಬಿಜೆಪಿ ಸರ್ಕಾರದ ವೈಖರಿ ಈ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಬಿಜೆಪಿ ಕುರಿತ ಉದಾರವಾದಿ ಧೋರಣೆ ಬಗ್ಗೆ ನಮ್ಮಂತಹವರು ಮರುಚಿಂತನೆ ಮಾಡುವಂತೆ ಒತ್ತಾಯಿಸುತ್ತಿದೆ.

ಇದಕ್ಕೆ ಒಂದು ಕಾರಣ, ಬಿಜೆಪಿ ಈ ಅಲ್ಪಾವಧಿಯಲ್ಲೇ ಭ್ರಷ್ಟತೆ, ಜಾತಿವಾದ ಮತ್ತು ಕಾನೂನುಗಳನ್ನೇ ತಲೆಕೆಳಗು ಮಾಡುವ ನಿರ್ಲಜ್ಜ ಮಾರ್ಗಗಳಲ್ಲಿ ಎಲ್ಲ ಪಕ್ಷಗಳನ್ನೂ ಮೀರಿಸುವ ಮೂಲಕ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡು; ಈಗ ನಿಧಾನವಾಗಿ ತನ್ನ ಕೋಮುವಾದಿ ಬಾಲವನ್ನು ಬಿಚ್ಚತೊಡಗಿರುವುದು. ಇದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವೆಂದರೆ, ಇದನ್ನು ಗುರುತಿಸುವಲ್ಲಿ, ಅದರ ದೀರ್ಘಕಾಲಿಕ ಪರಿಣಾಮಗಳನ್ನು ಸ್ವತಃ ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಅವುಗಳನ್ನು ಸಾಮಾನ್ಯ ಜನತೆಗೆ ಮನವರಿಕೆ ಮಾಡಿ ಅದನ್ನು ಎದುರಿಸುವಲ್ಲಿ ನಮ್ಮ ಅಧಿಕೃತ ವಿರೋಧ ಪಕ್ಷವೆನಿಸಿದ ಕಾಂಗ್ರೆಸ್ ಪ್ರದರ್ಶಿಸುತ್ತಿರುವ ಜೋಭದ್ರಗೇಡಿತ!

ವಿಪರ್ಯಾಸವೆಂದರೆ, ಬಿಜೆಪಿ ವಿರುದ್ಧ ಈಗ ಅತಿ ಹೆಚ್ಚು ಶಬ್ದ ಮಾಡುತ್ತಿರುವ ಪಕ್ಷವೆಂದರೆ, ಅದು ಅಧಿಕಾರಕ್ಕೆ ಬರಲು ತನ್ನ ಸಮಯ ಸಾಧಕ ಹಾಗೂ ಅನೈತಿಕ ರಾಜಕಾರಣದ ಮೂಲಕ ಕಾರಣವಾದ ಜಾತ್ಯತೀತ ಜನತಾ ದಳ! ತಾನು ಹುಟ್ಟಿದಾಗಿನಿಂದ ತನ್ನ ಹೆಸರಿನಲ್ಲಿರುವ ’ಜಾತ್ಯತೀತ’ ಎಂಬ ತತ್ವವೂ ಸೇರಿದಂತೆ ಎಲ್ಲ ರಾಜಕೀಯ ತತ್ವಗಳನ್ನೂ(ಇದರ ನಾಯಕ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದಾಗ ವ್ಯಂಗ್ಯವಾಗಿ ಹೇಳಿದ್ದು: ’ನಿಘಂಟಿನಲ್ಲೆಲ್ಲಾ ಹುಡುಕಿದರೂ ಜಾತ್ಯತೀತತೆ ಎಂಬ ಶಬ್ದ ಸಿಗಲಿಲ್ಲ!’) ತನ್ನ ರಾಜಕೀಯ ಉಳಿವಿನ ಹೆಸರಲ್ಲಿ ತಿಲಾಂಜಲಿ ನೀಡುತ್ತಾ ಬಂದಿರುವ ಈ ಪಕ್ಷದ ಯಾವುದೇ ರಾಜಕೀಯ ಹೋರಾಟದ ವಿಶ್ವಾಸಾರ್ಹತೆ ಸಂಶಯಾಸ್ಪದವಾಗಿಯೇ ಉಳಿದಿದೆ. ಅಧಿಕಾರವಿಲ್ಲದಿದ್ದಾಗ ದೊಡ್ಡ ದೊಡ್ಡ ತತ್ವ ಹೇಳಿ ಜನರ ಗಮನ ಸೆಳೆಯುವ ಈ ಪಕ್ಷ, (ಅದೆಷ್ಟು ಬಾರಿ ಕರ್ನಾಟಕದ ’ಪ್ರಗತಿಪರ’ರೆಂಬುವವರು - ಇತ್ತೀಚೆಗೆ ಯು.ಆರ್.ಅನಂತಮೂರ್ತಿಯವರು - ದೇವೇಗೌಡರ ಹೋರಾಟದ ಕೆಚ್ಚಿಗೆ ಮರುಳಾಗಿ, ಆನಂತರ ಅವರ ಅಧಿಕಾರದ ಆಟ ನೋಡಿ ಪೆಚ್ಚಾಗಿಲ್ಲ?) ಅಧಿಕಾರದ ವಾಸನೆ ಹತ್ತಿದೊಡನೆ ಅಷ್ಟೇ ಸುಲಭವಾಗಿ ಈ ತತ್ವಗಳನ್ನೆಲ್ಲ ಕೈ ಬಿಡಬಲ್ಲ ತತ್ವ ನಿರ್ಲಜ್ಜ ಪಕ್ಷವಾಗಿದೆ.

ದೇವೇಗೌಡರ ಕುಟುಂಬ ರಾಜಕಾರಣದ ಸುತ್ತಲೇ ಗಿರಕಿ ಹೊಡೆಯುತ್ತಿರುವ ಈ ಪಕ್ಷ, ರಾಜ್ಯ ರಾಜಕಾರಣದ ಎಲ್ಲ ಬಿಕ್ಕಟ್ಟುಗಳ ಸಮಯದಲ್ಲೂ ಪಕ್ಷಾಂತರದ ಹಾವಳಿಗೆ ಸಿಕ್ಕಿ ತನ್ನ ಅಸ್ತಿತ್ವದ ಆತಂಕವೆನ್ನುದರಿಸುತ್ತದೆ. ಇದಕ್ಕೆ, ಅದು ಮೂಲತಃ ಸಮಯ ಸಾಧಕತ್ವದ ಮೂಲಕ ಅಧಿಕಾರ ಗಳಿಸುವ ತತ್ವವೊಂದನ್ನೇ ನಂಬಿ ಬೆಳೆದು ಉಳಿದಿರುವ ಪಕ್ಷವಾಗಿರುವುದೇ ಕಾರಣವಾಗಿದೆ. ಹಾಗಾಗಿ, ಈ ಪಕ್ಷ ಇದೇ ಸ್ಥಿತಿಯಲ್ಲಿರುವವರೆಗೂ ಕರ್ನಾಟಕದ ರಾಜಕಾರಣ ಸದ್ಯದ ಸಂಕಟದಿಂದ ಪಾರಾಗಲಾರದು. ಆದ್ದರಿಂದ ದೇವೇಗೌಡರು ತಮ್ಮ ರಾಜಕೀಯ ಜೀವಿತದ ಈ ಕೊನೆಯ ಘಟ್ಟದಲ್ಲಾದರೂ ಪಕ್ಷವನ್ನು ಕುಟುಂಬದ ನಿಯಂತ್ರಣದಿಂದ ಮುಕ್ತ ಮಾಡಿ, ಒಂದು ನಿಶ್ಚಿತ ರಾಜಕೀಯ ಸಿದ್ಧಾಂತದ ಮರ್ಯಾದೆಯ ಆಧಾರದ ಮೇಲೆ ಅದನ್ನು ಪುನಾರಚಿಸುವ ಪ್ರಯತ್ನ ಮಾಡಿದರೆ ಮಾತ್ರ ಕರ್ನಾಟಕದ ರಾಜಕಾರಣಕ್ಕೆ ಹೊಸತೊಂದು ತಿರುವು ದೊರೆತೀತು. ಅದನ್ನು ಅವರು ಮತ್ತ ಅವರ ಮಗ ಬಿಜೆಪಿಯೊಂದಿಗೆ ಸಮಯ ಸಾಧಕ ಸಖ್ಯ ಬೆಳೆಸಿ, ಅದೇ ಸಮಯ ಸಾಧಕತನದೊಂದಿಗೆ ಅದಕ್ಕೆ ಅಧಿಕಾರ ಹಸ್ತಾಂತರ ಮಾಡದೆ ಉಂಟು ಮಾಡಿರುವ ಅನಾಹುತಕ್ಕಾಗಿ, ಜನತೆಯ ಬಹಿರಂಗ ಕ್ಷಮೆ ಕೋರುವ ಮೂಲಕ ಆರಂಭಿಸಬಹುದಾಗಿದೆ. ಆಗ ಮಾತ್ರ ತಮ್ಮ ತಂದೆಯಂತಹುದೇ ದೈತ್ಯ ರಾಜಕೀಯ ಪರಿಶ್ರಮವನ್ನು ಪ್ರದರ್ಶಿಸುವ ಮೂಲಕ ಭರವಸೆ ಹುಟ್ಟಿಸಿರುವ ಕುಮಾರಸ್ವಾಮಿಯವರ ನಾಯಕತ್ವ ಒಂದು ನೈತಿಕತೆಯನ್ನೂ ಸ್ಥಾಪಿಸಿಕೊಂಡು, ರಾಜ್ಯಾದ್ಯಂತ ಎಲ್ಲರ ವಿಶ್ವಾಸಾರ್ಹತೆಯನ್ನೂ ಗಳಿಸಿ ಬೆಳೆಯಬಲ್ಲುದು.

ಇನ್ನು ವಿಧಾನಸಭಾ ಚುನಾವಣಾ ಫಲಿತಾಂಶಗಳಿಂದ ಕಂಗಾಲಾದಂತೆ ತೋರುವ ಕಾಂಗ್ರೆಸ್, ಇನ್ನೂ ಆ ಕೋಮಾದಿಂದ ಹೊರಬಂದಂತೆ ಕಾಣುವುದಿಲ್ಲ. ಕೋಮಾದಿಂದ ಹೊರತರಲು ಅದರ ಹೈಕಮಾಂಡ್ ಪ್ರಕಟಿಸಿದ ಹೊಸ ನಾಯಕತ್ವದಲ್ಲೂ ಯಾವುದೇ ಹೊಸತನವಿಲ್ಲದೆ, ಈ ಹೊಸ ನಾಯಕತ್ವದ ಎರಡು ಮುಖಗಳೂ ಸಾರ್ವಜನಿಕರ ಕಣ್ಣುಗಳಲ್ಲಿ ಭ್ರಷ್ಟತೆ ಮತ್ತು ದುಷ್ಟತನಗಳಿಗೆ ಬದಲೀ ಹೆಸರುಗಳಂತಾಗಿಬಿಟ್ಟಿವೆ! ಇದರ ಮಧ್ಯೆ, ತಮ್ಮ ಮಾನಕ್ಕೆ ತಕ್ಕ ಸ್ಥಾನವಿಲ್ಲವೆಂದು ಮುನಿಸಿಕೊಂಡಿರುವ ಸಿದ್ದರಾಮಯ್ಯ ’ಆಪರೇಷನ್ ಕಮಲದ’ ಕಾರಣದಿಂದಾಗಿ ಸಂಭವಿಸಿದ ಉಪ ಚುನಾವಣೆಗಳಲ್ಲಿ ತಮ್ಮ ವೈಯುಕ್ತಿಕ ಅನುಯಾಯಿಗಳನ್ನು ತಮ್ಮದೇ ಪಕ್ಷದ ವಿರುದ್ಧ ಕೆಲಸ ಮಾಡಲು ಬಿಡುವ ಮೂಲಕ ಪ್ರದರ್ಶಿಸಿದ ರಾಜಕಾರಣ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ. ಇದರಿಂದಾಗಿ ರಾಜ್ಯ ರಾಜಕಾರಣಕ್ಕೆ ಮತ್ತು ಪಕ್ಷಕ್ಕೆ ಆಗಿರುವ ಆಘಾತದ ಹೊರತಾಗಿಯೂ, ಅವರು ಆ ಪಕ್ಷದ ಆಯಕಟ್ಟಿನ ಅಧಿಕಾರ ಸ್ಥಾನಕ್ಕಾಗಿ ಪಕ್ಷದ ಹೈಕಮಾಂಡ್‌ನಿಂದ ಇನ್ನೂ ಗಂಭೀರವಾಗಿ ಪರಿಗಣಿಸಲ್ಪಡುತ್ತಿರುವ ಸನ್ನಿವೇಶವಂತೂ, ಆ ಪಕ್ಷ ನಾಯಕತ್ವದ ವಿಷಯದಲ್ಲಿ ಯಾವ ದರಿದ್ರ ಸ್ಥಿತಿಯನ್ನು ತಲುಪಿದೆ ಎಂಬುದನ್ನು ಸೂಚಿಸುತ್ತದಷ್ಟೆ. ಮೊನ್ನೆ ಕನ್ನಡ ಟಿವಿ ವಾಹಿನಿಯೊಂದರಲ್ಲಿ ಶ್ರೀರಾಮ ಸೇನೆಯ ಪಬ್ ದಾಳಿ ಕುರಿತ ಚರ್ಚೆಯಲ್ಲಿ ಬಿಜೆಪಿಯ ಹಿರಿಯ ಸಿದ್ಧಾಂತಿ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಡಿ.ಎಚ್.ಶಂಕರಮೂರ್ತಿಯವರ ಎದುರು ವಾದಿಸಲು ಈ ಪಕ್ಷದ ಮಹಿಳಾ ನಾಯಕ ಮಣಿಯೊಬ್ಬರು ಪಡುತ್ತಿದ್ದ ಫಜೀತಿ, ಈ ಪಕ್ಷ ತಲುಪಿರುವ ಬುದ್ಧಿ ದಾರಿದ್ರ್ಯಕ್ಕೆ ಸಾಕ್ಷಿಯಂತಿತ್ತು. ಅತಿಯಾದ ಆತ್ಮ ವಿಶ್ವಾಸ ಮತ್ತು ಜೋರು ಬಾಯಿಯ ಹೊರತಾಗಿ ಇನ್ನಾವ ಸಂಪನ್ಮೂಲಗಳನ್ನೂ ಹೊಂದದಂತೆ ತೋರಿದ ಈ ನಾಯಕಿ, ವಿಷಯದ ಬಗ್ಗೆ ಯವುದೇ ತಿಳುವಳಿಕೆ ಇಲ್ಲದೆ ಮಹಿಳಾ ಮಂಡಳದ ಸಭೆಗಳಲ್ಲಿನ ತಮ್ಮ ಅಸಂಬದ್ಧ ಭಾಷಣವನ್ನು ಇಲ್ಲಿಯೂ ಮುಂದುವರೆಸಿದಂತಿತ್ತು! ಇದು ಇಂದು ಪ್ರತಿಬಿಂಬಿತವಾಗುತ್ತಿರುವ ರಾಜ್ಯ ಕಾಂಗ್ರೆಸ್ಸಿನ ಸಾರ್ವಜನಿಕ ಮುಖ! ಸದ್ಯಕ್ಕೆ ಕೃಷ್ಣಭೈರೇಗೌಡರ ಹೊರತಾಗಿ ಭರವಸೆ ಹುಟ್ಟಿಸುವಂತಹ ಇನ್ನಾವ ಮುಖವೂ ಅಲ್ಲಿ ಕಾಣುತ್ತಿಲ್ಲ. ಇದು ರಾಜ್ಯ ರಾಜಕಾರಣದ ನಿಜವಾದ ದುರಂತ.

ಪರಿಸ್ಥಿತಿ ಹೀಗಿರುವಾಗ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ತಡೆಯುವವರಾರು? ಮಂಗಳೂರಿನ ಪಬ್‌ವೊಂದರ ಆವರಣದಲ್ಲಿ ಮಹಿಳೆಯರ ಮೇಲೆ ಶ್ರೀರಾಮ ಸೇನೆಯವರು ನಡೆಸಿದ ಗೂಂಡಾಗಿರಿಯ ಬಗ್ಗೆ ದ.ಕ. ಜಿಲ್ಲೆಯ ಉಸ್ತುವಾರಿ ಮಂತ್ರಿ ಕೃಷ್ಣ ಪಾಲೇಮಾರ್‌ರ ಪ್ರತಿಕ್ರಿಯೆ ಕೇಳಿದರೆ, ಅವರು ನಾವು ಪಬ್ ಸಂಸ್ಕೃತಿಯನ್ನು ಸಹಿಸುವುದಿಲ್ಲ ಎಂದಷ್ಟೇ ಉತ್ತರಿಸುತ್ತಾರಲ್ಲಾ ಎಂದು ಡಿ.ಎಚ್.ಶಂಕರಮೂರ್ತಿಯವರನ್ನು ಪ್ರಶ್ನಿಸಿದರೆ, ಸಚಿವರು ಆ ಮೂಲಕ ಮಹಿಳೆಯರ ಮೇಲಿನ ಗೂಂಡಾಗಿರಿಯನ್ನೇನೂ ಸಮರ್ಥಿಸಿಲ್ಲವಲ್ಲ ಎಂಬ ಜಾಣ ಉತ್ತರ ನೀಡುತ್ತಾರೆ! ಇದೇ ಬಿಜೆಪಿಯ ಘಾತುಕ ಜಾಣತನ. ಅದರ ಮೂಲಕವೇ ಅದು ತನ್ನ ಕೋಮುವಾದಿ ರಾಜಕಾರಣವನ್ನು ನಡೆಸಿರುವುದು. ಇಂತಹುದೇ ಘಾತುಕ ಜಾಣತನವೇ ಮುಖ್ಯಮಂತ್ರಿ ಯಡಿಯೂರಪ್ಪನವರ ’ಯಾರೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಆದರೆ ಅದೇ ಹೊತ್ತಿನಲ್ಲಿ ಪಬ್ ಸಂಸ್ಕೃತಿಯನ್ನೂ ಸಹಿಸುವುದಿಲ್ಲ’ ಎಂಬ ಹೇಳಿಕೆಯಲ್ಲಿ ಎದ್ದು ಕಾಣುವುದು. ಈ ಇಡೀ ಸಂಘ ಪರಿವಾರ ’ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಿ ಆಡುತ್ತಿರುವುದು ಇಂತಹ ಎರಡೆಳೆಯ ನಾಲಿಗೆಯ ಮಾತುಗಳನ್ನೇ! ಅಲ್ಲಾ ಯಡಿಯೂರಪ್ಪನವರೇ, ಶ್ರೀರಾಮ ಸೇನೆಯವರು ಅಲ್ಲಿಗೆ ಬಂದಿದ್ದುದು ಯಾವ ಕಾನೂನನ್ನು ಜಾರಿಗೆ ಮಾಡಲು? ಪಬ್‌ಗಳು ನಡೆಯುತ್ತಿರುವುದು ಕಾನೂನಿನ ಅಡಿಯಲ್ಲೇ ಎಂಬುದು ನಿಮಗೆ ಗೊತ್ತಿಲ್ಲವೆ?

ಪಬ್ ಸಂಸ್ಕೃತಿ ನಿಮಗೆ ಸಹಿಸಲಾಗದ್ದು ಎನ್ನಿಸಿರುವುದು, ಭಾರತೀಯ ಸಂಸ್ಕೃತಿಯ ನೆನಪು ಬಂದಿರುವುದು, ಅಲ್ಲಿಗೆ ಹುಡುಗಿಯರು ಮುಕ್ತವಾಗಿ ಹೋಗಲಾರಂಭಿಸಿದ ಮೇಲಷ್ಟೇ? ಹಾಗಿದ್ದಲ್ಲಿ ಕಾನೂನಿನಲ್ಲಿ ಅವಕಾಶವಿದ್ದರೆ, ಅವರ ಪ್ರವೇಶವನ್ನು ಬಹಿಷ್ಕರಿಸಿ ಅಥವಾ ಪಬ್‌ಗಳನ್ನೇ ಮುಚ್ಚಲು ಈ ಕೂಡಲೇ ಆದೇಶಿಸಿರಿ. ಆದರೆ ಯಾವುದೇ ಕಾನೂನು ಮತ್ತು ಶಿಸ್ತಿನ ಸಮಸ್ಯೆ ಸೃಷ್ಟಿಸದೆ, ತಮ್ಮ ಹಣದಲ್ಲಿ ತಾವು ಸರಿ ಕಂಡಂತೆ ಖುಷಿ ಪಡುತ್ತಿದ್ದ ಯುವಕ-ಯುವತಿಯರ ಮೇಲೆ ಸ್ವಯಂಘೋಷಿತ ಸಂಸ್ಕೃತಿ ರಕ್ಷಕರು ನಡೆಸಿದ ಅನಾಗರಿಕ ಹಲ್ಲೆಯನ್ನು ಖಂಡಿಸುವುದರ ಜೊತೆ ಜೊತೆಯಲ್ಲೇ ಸುಮ್ಮನೆ ಸಂಸ್ಕೃತಿ ರಕ್ಷಣೆಯ ಹುಸಿ ಮಾತುಗಳನ್ನೇಕೆ ಆಡುತ್ತೀರಿ? ಈ ಮೂಲಕ ನೀವು ಪರೋಕ್ಷವಾಗಿ ಹಲ್ಲೆಯನ್ನು ಸಮರ್ಥಿಸುತ್ತಿದ್ದೀರಿ ಅಲ್ಲವೇ? ನೀವು ಮೊದಲು ಸಂರಕ್ಷಿಸಬೇಕಾಗಿರುವುದು ನಮ್ಮ ಸಂವಿಧಾನವನ್ನು ಎಂಬುದು ನಿಮಗೆ ನೆನಪಿರಲಿ. ಜೊತೆಗೆ ನಮಗೂ ಶ್ರೀರಾಮ ಸೇನೆಗೂ ಯಾವ ಸಂಬಂಧವೂ ಇಲ್ಲ ಎಂಬ ನಿಮ್ಮ ಆತ್ಮದ್ರೋಹದ ಮಾತು ಬೇರೆ! ಈ ಹಲ್ಲೆ ರಾಷ್ಟ್ರಾದ್ಯಂತ ಸುದ್ದಿಯಾಗಿ ಎಲ್ಲಡೆಯಿಂದ ಖಂಡನೆ ವ್ಯಕ್ತವಾಗುತ್ತಿದ್ದಂತೆ ಈ ಸೇನೆಯ ನಾಯಕ ಪ್ರಮೋದ್ ಮುತಾಲಿಕ್, ’ಈ ಘಟನೆಯನ್ನು ಅತಿಯಾಗಿ ಪ್ರಚಾರ ಮಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪಿತೂರಿ ನಡೆದಿದೆ’ ಎಂದು ನೀಡಿರುವ ಹೇಳಿಕೆ, ನಿಮಗೂ ಅವರಿಗೂ ಇರುವ ಯಾವ ಮತ್ತು ಎಂತಹ ಸಂಬಂಧವನ್ನು ಸೂಚಿಸುತ್ತದೆ?

ನೀವು ಭಾರತೀಯ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಳೆದ ೨೦ ವರ್ಷಗಳಲ್ಲಿ ನಡೆಸಿಕೊಂಡು ಬರುತ್ತಿರುವ ಕೋಮುವಾದಿ ರಾಜಕಾರಣವೇ ಅನೇಕ ಇಂತಹ ತುಂಡರಸರನ್ನು ಸೃಷ್ಟಿಸಿ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗಿರುವುದು. ಇವರು ’ಮನೆ ಮನೆಯಲ್ಲೂ ಬಾಂಬ್ ಹಿಡಿದಿರುವ ಪ್ರಗ್ಯಾ ಸಿಂಗ್ ಸೃಷ್ಟಿಯಾಗಲಿರುವಳು!’ ಎಂದರಚುತ್ತಾ, ಕೋಮು ಹಿಂಸೆಯನ್ನು ಪ್ರಚೋದಿಸುವ ಉಗ್ರ ಭಾಷಣಗಳನ್ನು ಮಾಡುತ್ತಾ ರಾಜ್ಯಾದ್ಯಂತ ನಿರ್ಭಯವಾಗಿ ಓಡಾಡಲು ಸಾಧ್ಯವಾಗಿರುವುದು. ಇಂತಹ ಎರಡೆಳೆ ನಾಲಿಗೆಯ ನೀತಿಯಿಂದಾಗಿಯೇ ಮುತಾಲಿಕ, ಅತ್ತಾವರರಂತಹವರು ಪೋಲೀಸ್ ಬಂಧನದಲ್ಲಿದ್ದುಕೊಂಡೇ ತಾವು ಮಾಡಿದ ಕೆಲಸಕ್ಕೆ ತಾವೇ ಬೆನ್ನು ತಟ್ಟಿಕೊಳ್ಳುತ್ತಾ, ’ನಮ್ಮ ಈ ಕಾರ್ಯಕ್ರಮದ ಮೂಲಕ ಪಬ್ ಸಂಸ್ಕೃತಿಯ ಬಗ್ಗೆ ಜನತೆಯನ್ನು ಎಚ್ಚರಿಸಿದ್ದೇವೆ. ಆದ್ದರಿಂದ ನಮ್ಮ ಕೆಲಸ ಸಾರ್ಥಕವಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ಮುಂದುವರೆಯುತ್ತವೆ’ ಎಂದು ಘೋಷಿಸಿಕೊಳ್ಳುವ ಧೈರ್ಯ ವಹಿಸಿರುವುದು. ನಿಮ್ಮ ಪೋಲೀಸ್ ಕಾರ್ಯಾಚರಣೆ ಇಂತಹದು! ಇದರ ಮೇಲೆ ಭಯೋತ್ಪಾದನೆಯ ವಿರುದ್ಧ ನಿಮ್ಮ ವಿದ್ಯಾರ್ಥಿ ಜಾಗೃತಿ ಆಂದೋಲನ ಬೇರೆ! ಇಂದು ಭಾರತದಲ್ಲಿ ಭಯೋತ್ಪಾದನೆ - ಶ್ರೀರಾಮ ಸೇನೆಯವರದೂ ಸೇರಿದಂತೆ - ವಿವಿಧ ರೂಪಗಳನ್ನು ತಾಳಿದೆಯೆಂದು ನಿಮಗೆ ಗೊತ್ತಿದೆಯಷ್ಟೆ? ಆದುದರಿಂದ, ಇದು ನಿಮ್ಮ ಎರಡೆಳೆ ನಾಲಿಗೆ ನೀತಿಯ ಇನ್ನೊಂದು ಅವತಾರವಷ್ಟೆ. ಇದರಲ್ಲೊಳಗೊಂಡಿರುವ ಜನ, ಈ ಸಂಬಂಧ ಕಾಲೇಜುಗಳಿಗೆ ಒದಗಿಸಿರುವ ಸಾಮಗ್ರಿಯ ವಿವರಗಳನ್ನು ನೋಡಿದರೆ, ಇದೊಂದು ಭಯೋತ್ಪಾದನಾ ವಿರೋಧಿ ಆಂದೋಲನವಲ್ಲ; ಬದಲಿಗೆ, ಸಾರ್ವಜನಿಕರ ಹಣ ಬಳಸಿಕೊಂಡು ಸರ್ಕಾರದಿಂದ ಪ್ರಾಯೋಜಿತವಾದ ವಿದ್ಯಾರ್ಥಿಗಳ ಕೋಮುವಾದೀಕರಣ ಕಾರ್ಯಕ್ರಮ ಎಂಬುದು ಸ್ಪಷ್ಟವಾಗುವಂತಿದೆ. ಈಗಾಗಲೇ, ಇದರ ನೇತೃತ್ವ ವಹಿಸಬೇಕಾದ ಅಧ್ಯಾಪಕ ವೃಂದದಲ್ಲಿ ಈ ಬಗ್ಗೆ ಅಸಮಾಧಾನದ ಹೊಗೆ ಏಳಲಾರಂಭಿಸಿದೆ.

ಇದಕ್ಕೆ ಮುಖ್ಯ ಕಾರಣ, ಸಂಘ ಪರಿವಾರಕ್ಕೆ ಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ಒಂದು ಸಂಕುಚಿತ ಮತ್ತು ಸ್ಥಿರವಾದ ಕಲ್ಪನೆ ಇರುವುದು. ಉದಾಹರಣೆಗೆ ಇವರ ಸಂಸ್ಕೃತಿಯ ವಿವರಣೆಗಾಗಿ, ಪ್ರಮೋದ್ ಮುತಾಲಿಕ್ ಪಬ್ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ ಉಲ್ಲೇಖಿಸಿರುವ ’ಮಾತೃ ದೇವೋ ಭವ’ ಎಂಬ ಮಾತನ್ನೇ ನೋಡಿ. ಏನಿದರ ಅರ್ಥ? ಹೆಣ್ಣು ತಾಯಿಯಾಗಿ ಮಕ್ಕಳನ್ನು ಹೆರುತ್ತಾ, ಸಾಕುತ್ತಾ ಮನೆಯಲ್ಲಿ ದೇವರಂತೆ ಪೂಜೆಗೆ ಒಳಗಾಗಿ ಕೂರಬೇಕೆಂದೆ? ಹಾಗೆ ಕೂತ ಹೆಣ್ಣು ಇಂತಹ ಮಂತ್ರ-ಶ್ಲೋಕ ಹೇಳುವವರ ನಿಯಂತ್ರಣಕ್ಕೆ ಸಿಕ್ಕಿ, ಆಧುನಿಕ ಕಾಲದ ಸಮಾಜ ಸುಧಾರಣಾ ಚಳುವಳಿ ಆರಂಭವಾಗುವ ತನಕ ಯಾವ ಯಾವ ವಿಧಿ-ನಿಷೇಧಗಳನ್ನು ಅನುಭವಿಸುತ್ತಾ, ಎಂತಹ ಸ್ಥಿತಿ ತಲುಪಿದ್ದರು ಎಂಬುದನ್ನು ನಮ್ಮ ಇತಿಹಾಸವೇ ತಿಳಿಸುತ್ತಿದೆ. ಸಂಘ ಪರಿವಾರದವರು ಸ್ವಲ್ಪ ಸಂವೇದನಾಶೀಲರಾಗಿ ಈ ಇತಿಹಾಸವನ್ನು ಓದಿಕೊಂಡರೆ ಒಳ್ಳೆಯದು. ಇಂದು ಮಹಿಳೆ ಸ್ವತಂತ್ರಳಾಗಿ, ಸಂಪ್ರದಾಯವಾದಿ ಸಮಾಜದ ಕಟ್ಟು ಕಟ್ಟಳೆಗಳನ್ನು ದಾಟಿ ಹೋಗಿದ್ದರೆ, ಅದಕ್ಕೆ ನಾವೇ ಪ್ರೀತಿಯಿಂದ ಆಹ್ವಾನಿಸಿ ಸಾಕುತ್ತಾ ಬಂದಿರುವ ಆಧುನಿಕತೆ ನಮ್ಮ ಒಟ್ಟಾರೆ ಸಮಾಜದ ನಿರೀಕ್ಷೆಯನ್ನೂ ಮೀರಿ ಬೆಳೆದಿರುವುದೇ ಕಾರಣವಾಗಿದೆ. ಹಾಗಾಗಿ ಅದನ್ನು ಇಡಿಯಾಗಿ ನಿಯಂತ್ರಿಸದೆ, ಮಹಿಳೆಯರ ಚಲನ-ವಲನಗಳನ್ನು ಮಾತ್ರ ನಿಯಂತ್ರಿಸ ಹೋಗುವುದು ಅವಿವೇಕವಷ್ಟೇ ಅಲ್ಲ, ಅನಾಗರೀಕವೂ ಆಗುತ್ತದೆ. ಇಂತಹ ಅನಾಗರೀಕತೆ, ಅನೇಕ ನೆಲೆಗಳಲ್ಲಿ ವಿಧಿ - ನಿಷೇಧ - ದಂಡನೆಗಳ ವಶಿಷ್ಠ ಸಂಪ್ರದಾಯವಾಗಿ ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿ, ಬಹು ಕಾಲದಿಂದಲೂ ಬೆಳೆದು ಬಂದಿದೆ. ಅನೇಕ ರೀತಿಯ ಸಾಮಾಜಿಕ ಅನಾಹುತಗಳಿಗೆ ಮತ್ತು ಶೋಷಣೆಗಳಿಗೆ ಕಾರಣವಾಗಿದೆ. ಸಂಘ ಪರಿವಾರವು ಭಾರತೀಯ ಸಂಸ್ಕೃತಿಯ ಈ ಧಾರೆಯ ಪ್ರತಿನಿಧಿಯಾಗಿರುವುದರಿಂದಲೇ-ಭಾರತೀಯ ಸಂಸ್ಕೃತಿಯ ಉದಾರವಾದಿ ಬಹುಮುಖಿ ಧಾರೆಯನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ-ಅದನ್ನು ಸದಾ ವಿಮರ್ಶೆಗೊಳಪಡಿಸಬೇಕಾದ, ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡಿದೆ.

ಸಂಘ ಪರಿವಾರಕ್ಕೆ ನಿಜವಾಗಿ ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇದ್ದರೆ, ಅದರ ತಿರುಳು ಅದಕ್ಕೆ ಗೊತ್ತಿದ್ದರೆ, ’ಸರಳ ಜೀವನ, ಉನ್ನತ ಚಿಂತನ’ ಎಂಬುದೇ ಈ ಸಂಸ್ಕೃತಿಯ ಧ್ಯೇಯ ವಾಕ್ಯ ಎಂದು ಅದು ಅರಿತಿರಬೇಕಿತ್ತು. ಆ ಆಧಾರದ ಮೇಲೆ ತನ್ನ ರಾಜಕಾರಣವನ್ನು ಕಟ್ಟಿಕೊಳ್ಳಬೇಕಿತ್ತು. ಆದರೆ ಜಗತ್ತಿಗೇ ಮಾರ್ಗದರ್ಶನ ಮಾಡುವ ಸಂಸ್ಕೃತಿ ಕುರಿತು ಮಾತಾಡುವ ಇವರು, ಜಾಗತೀಕರಣವಾದಿಗಳಂತೆಯೇ ಸ್ಪರ್ಧಾತ್ಮಕ ಜಗತ್ತಿನ ಹಿಂದೆ ಬಿದ್ದು; ’ಬಲಿಷ್ಠ ಭಾರತ’ವನ್ನು ಸೃಷ್ಟಿಸುವ ಧಾವಂತದಲ್ಲಿ ಈ ಧ್ಯೇಯ ವಾಕ್ಯವನ್ನೇ ಮರೆತು, ಕಣ್ಣು ಕುಕ್ಕುವ ’ಪ್ರಕಾಶಮಾನ ಭಾರತ’ವನ್ನು ಸೃಷ್ಟಿಸಿದ್ದಾಗಿ ಬೀಗಿದರು! ಈ ’ಪ್ರಕಾಶಮಾನ ಭಾರತ’ದ ವೈಶಿಷ್ಟ್ಯವೆಂದರೆ, ಕೆಲವು ’ಪುಣ್ಯವಂತ’ರ ಜೊತೆಗೆ ಕೆಲವು ’ಪುಣ್ಯವಂತೆ’ಯರಿಗೂ ಸ್ವತಂತ್ರವಾಗಿ ಸ್ವರ್ಗಸುಖವನ್ನು ಆಹ್ವಾನಿಸುವಂತಹ ಅಪಾರ ಆದಾಯದ ಅವಕಾಶ... ಅದು, ನಮ್ಮ ಸಂಸ್ಕೃತಿಯಾಗಲೀ, ಅದರಲ್ಲಿ ಮೂಡಿದ ವ್ಯಕ್ತಿತ್ವಗಳಾಗಲೀ ಜೀರ್ಣಿಸಿಕೊಳ್ಳಲಾಗದಷ್ಟು ಹಣ! ಅದನ್ನು ಅವರಾದರೂ ಏನು ಮಾಡಿಯಾರು? ಇದರ ಅನೇಕ ಪರಿಣಾಮಗಳ ಒಂದು ಸಣ್ಣ ಕಿಡಿಯಷ್ಟೇ ಪಬ್ ಸಂಸ್ಕೃತಿ!

ನಮ್ಮ ನಾಗರೀಕತೆಯಲ್ಲಿ ’ಹಣ’ ಉತ್ಪತ್ತಿಯಾದದ್ದೇ ಸುಖಕ್ಕಾಗಿ. ಈಗ ಅದು ಅತಿಯಾದ ಆಧುನಿಕತೆಗೆ ಸಿಕ್ಕಿ ’ಮಜಾ’ ಆಗಿ ಪರಿವರ್ತಿತವಾಗಿದೆಯಷ್ಟೇ. ಕೆಲವರು ಈ ಹಡಬೆ ಹಣವನ್ನು ಅಧಿಕಾರ ಮತ್ತು ಪುಣ್ಯ ಸಂಪಾದನೆಗಳಿಗಾಗಿ ವೈಭವೋಪೇತ ಯಜ್ಞ - ಯಾಗ - ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಸಿ ’ಮಜಾ’ ಅನುಭವಿಸುತ್ತಾರೆ. ಇನ್ನು ಕೆಲವರು ಅದನ್ನು ಪಬ್ ಜೀವನ ಶೈಲಿಗಳಲ್ಲ್ಲಿ ಉಡಾಯಿಸಿ ’ಮಜಾ’ ತೆಗೆದುಕೊಳ್ಳುತ್ತಾರಷ್ಟೆ. ಇದು ತಮ್ಮ ಹಣವನ್ನು ರಾಜಕೀಯ ಅನಾಚಾರ ಅಥವಾ ಇತರೆ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸುವುದಕ್ಕಿಂತ ಎಷ್ಟೋ ಉತ್ತಮವಲ್ಲವೆ? ಇದನ್ನು ತಡೆಯಲು ನೀವು ಯಾರು? ಒಮ್ಮೆ ಹಣ ಸಂಸ್ಕೃತಿಗೆ ನೀವು yes ಎಂದರೆಂದರೆ, ಮುಂದೆ ಯಾವುದಕ್ಕೂ no ಎನ್ನಲಾರಿರಿ! no ಹೇಳಿದರೆ ಅದು ನಿಮ್ಮ ಚಿಂತನೆಯ ವಿರೋಧಾಭಾಸವಷ್ಟೆ, ಹಣದ ಸಂಸ್ಕೃತಿಯದಲ್ಲ. ಏಕೆಂದರೆ, ಮನಸ್ಸೆಂಬುದು ನಿಮಗಿರಬಹುದು, ಆದರೆ ಹಣಕ್ಕಿರುವುದಿಲ್ಲ. ಇದು ನಿಮಗೆ ಗೊತ್ತಾಗದಿದ್ದರೆ, ಭಾರತೀಯ ಸಂಸ್ಕೃತಿಯ ಎರಡು ಮುಖ್ಯ ಕಲ್ಪನೆಗಳಾದ ’ಪ್ರೇಯ’ ಮತ್ತು ’ಶ್ರೇಯ’ಗಳನ್ನು ಕುರಿತು ಉಪನಿಷತ್ತುಗಳಲ್ಲಿ ಬರುವ ಚರ್ಚೆಯ ಮೇಲೊಮ್ಮೆ ಕಣ್ಣಾಡಿಸಿ!

ಆದುದರಿಂದ ಸಂಘ ಪರಿವಾರದ ನೈತಿಕ ಪಾರುಪತ್ತೇದಾರರೇ, ನಿಮ್ಮ ಈ ಪುಣ್ಯಭೂಮಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ನೆಲೆಗೊಳಿಸುವ ಪವಿತ್ರ ಕಾರ್ಯಕ್ಕಾಗಿ ನೀವು ಮೊದಲು, ಶ್ರೀರಾಮ ಸೇನೆಯ ನಾಯಕರದೂ ಸೇರಿದಂತೆ ನಿಮ್ಮ ನಾಯಕ ಗಣದ ಆಸ್ತಿ- ಪಾಸ್ತಿ, ಅವರು ಪೋಷಿಸುತ್ತಿರುವ ಹಣ ಸಂಸ್ಕೃತಿಯ ನೈತಿಕ ಪಾರುಪತ್ತೇದಾರಿಕೆ ನಡೆಸಿ. ಅವರ ಬದುಕಿನ ಶೈಲಿಯನ್ನೊಮ್ಮೆ ಹತ್ತಿರದಿಂದ ಅವಲೋಕಿಸಿ. ನಿಮ್ಮ ಮುಖ್ಯಮಂತ್ರಿ, ಮಂತ್ರಿಗಳ ಊರುಗಳಲ್ಲಿ ಆಸ್ತಿ-ಪಾಸ್ತಿಗಳ ಬೆಲೆ ಏಕೆ ಯದ್ವಾ ತದ್ವಾ ಏರಿದೆ ಎಂಬುದನ್ನು ಸ್ವಲ್ಪ ಪರಿಶೀಲಿಸಿ. ಸಾಧ್ಯವಾದರೆ, Simple living high thinking ಎಂಬ ಭಾರತೀಯ ಸಂಸ್ಕೃತಿಯ ಕೇಂದ್ರ ಆಶಯವನ್ನು ನಿಮ್ಮ ಪರಿವಾರದಲ್ಲಿ ಬಿತ್ತಿ, ಇತರರಿಗೆ ಉದಾಹರಣೆಯಾಗಿ. ಆಗ ನೋಡುವಿರಂತೆ, ಭಾರತೀಯ ಬದುಕಿನಲ್ಲಿನ ಸಾಂಸ್ಕೃತಿಕ ಬದಲಾವಣೆಯ ಸ್ವರೂಪವನ್ನು!

ಆದರೆ ಸಂಘ ಪರಿವಾರ ತನ್ನ ಚಿಂತನೆಯ ಅಖಂಡತೆಯನ್ನು ಎಂದೋ ಕಳೆದುಕೊಂಡಿದೆ. ಅಥವಾ ಅದು ಹುಟ್ಟಿದುದೇ ಭಾರತೀಯ ಸಂಸ್ಕೃತಿ-ಅಖಂಡತೆಯ ಸೀಳು ನೋಟದಲ್ಲೇ. ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಸಂಕಿರಣವೊಂದರಲ್ಲಿ ಗೋಲ್ವಾಲ್ಕರ್ ಬಗ್ಗೆ ಮಾತನಾಡುತ್ತಿದ್ದ ಸಂಘ ಪರಿವಾರದ ವಕ್ತಾರರೊಬ್ಬರು ಭಾರತೀಯತೆ ಎಂದರೆ ಏನೆಂಬುದನ್ನು ನಿರೂಪಿಸುತಾ, ಭಾರತದ ಭವ್ಯ ಪರಂಪರೆಯನ್ನು ತಮ್ಮದೆಂದು ಒಪ್ಪಿಕೊಂಡವರೇ ನಿಜವಾದ ಭಾರತೀಯರು ಎಂದು ಹೇಳಿದಾಗ, ನಾನು ಬುದ್ಧನನ್ನು ಈ ಪರಂಪರೆಯ ಭಾಗವೆಂದು ನೀವು ಒಪ್ಪಿಕೊಳ್ಳುತ್ತೀರಾ ಎಂದು ಕೇಳಬೇಕಾಯಿತು. ಅವರೇನೋ ತಕ್ಷಣವೇ ಉದಾರವಾಗಿ ಹೌದು ಎಂದು ಉತ್ತರಿಸಿದರು. ಆದರೆ ಹಾಗಾದರೆ ಗೋಲ್ವಾಲ್ಕರ್ ಸೇರಿದಂತೆ ’ಹಿಂದುತ್ವ’ವನ್ನು ನಿರೂಪಿಸುವ ನಿಮ್ಮ ತಾತ್ವಿಕರಾರೂ ಈ ಭಾರತೀಯ ಪರಂಪರೆಯ ಭಾಗವಾಗಿ ಬುದ್ಧನ ಬಗ್ಗೆ ಒಂದು ಮಾತನ್ನೂ ಆಡಿಲ್ಲವಲ್ಲ ಏಕೆ ಎಂದು ಕೇಳಿದರೆ ಅವರಿಂದ ಉತ್ತರವಿಲ್ಲ! ಅಷ್ಟೇ ಅಲ್ಲ, ಅಂದಿನ ಸಾವರ್ಕರರಿಂದ ಹಿಡಿದು ಇಂದಿನ ಪ್ರತಾಪ ಸಿಂಹನವರೆಗೆ ಇವರ ವಕ್ತಾರರನೇಕರ ಪ್ರಕಾರ; ಜಗತ್ತಿನ ಬೆಳಕು ಎಂದು ಕರೆಯಲ್ಪಡುವ ಬುದ್ಧ, ಇವರ ಭವ್ಯ ಭಾರತದ ಅವನತಿಗೆ ಕಾರಣನಾದನಂತೆ! ಏಕೆಂದರೆ ಬುದ್ಧ ತನ್ನ ವೈಚಾರಿಕ ಅಧ್ಯಾತ್ಮಿಕತೆಯ ಮೂಲಕ ಭಾರತದ ಪುರೋಹಿತಶಾಹಿ ರಾಜಕಾರಣಕ್ಕೆ- ಅದರ ಪಟ್ಟಭದ್ರ ಅಂಧ ಪರಂಪರೆಗೆ - ದೊಡ್ಡ ಆಘಾತವನ್ನುಂಟು ಮಾಡಿದ. ಅದರ ಪ್ರತಿಧ್ವನಿಗಳು ಇಂದೂ ಕೇಳಿಬರುತ್ತಿರುವುದು, ಬುದ್ಧನಿಲ್ಲದ ಭಾರತೀಯ ಪರಂಪರೆಯನ್ನು ಕಟ್ಟ ಹೊರಟಿರುವ ಸಂಘ ಪರಿವಾರದವರಿಗೆ ಸಹಿಸಲಸಾಧ್ಯವಾಗಿದೆ!

ಹೀಗೆ ಇವರು ನಮ್ಮ ಆವೃತ ಮತ್ತು ಪರಸ್ಪರ ಹಾಸುಹೊಕ್ಕಾದ ಧರ್ಮ, ಸಂಸ್ಕೃತಿ, ಪರಂಪರೆಗಳ ಅರ್ಥವನ್ನು ಅದರೆಲ್ಲ ವೈಚಾರಿಕ ಮತ್ತು ಉದಾರವಾದಿ ನೆಲೆಗಳಿಂದ ಮುಕ್ತಗೊಳಿಸಿ ಒಂದು ಕಠೋರ ಮಾದರಿಯ ಆಶಯ - ಆಲೋಚನೆ - ಆಶೋತ್ತರಗಳಿಗೆ ಸಂಕುಚಿತಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದನ್ನು ಇತರೆಲ್ಲರ ಮೇಲೆ ಆದರ್ಶದ ರೂಪದಲ್ಲಿ ಹೇರತೊಡಗಿರುವ ಇವರ ರಾಜಕಾರಣ, ರಾಷ್ಟ್ರದ ಭಾವನಾತ್ಮಕ ಏಕತೆ ಹಾಗೂ ಲೌಕಿಕ ಮತ್ತು ಪಾರಮಾರ್ಥಿಕ ಏಳ್ಗೆಯ ದೃಷ್ಟಿಯಿಂದ ಅಪಾಯಕಾರಿಯೇ ಆಗಿದೆ. ಆದರೆ ಇವರ ಎರಡೆಳೆ ನಾಲಗೆ, ಈ ರಾಜಕಾರಣಕ್ಕೆ ಸಾಂಸ್ಕೃತಿಕ ರಾಷ್ಟ್ರೀಯತೆಯೆಂಬ ಬೆಡಗನ್ನು ನೀಡಿಬಿಟ್ಟಿದೆ. ಇದಕ್ಕೆ ತಕ್ಕುದಾಗಿ ಜಾಗತಿಕ ಮುಸ್ಲಿ ಮೂಲಭೂತವಾದ ಮತ್ತು ಭಯೋತ್ಪಾದನೆ ತಲೆ ಎತ್ತಿ ಇವರ ರಾಜಕಾರಣಕ್ಕೆ ಸಾಂದರ್ಭಿಕ ಪೋಷಣೆಯನ್ನೂ ಒದಗಿಸಿಬಿಟ್ಟಿದೆ. ಇದನ್ನು ವಿವರಿಸುವವರನ್ನೂ, ಈ ಬಗ್ಗೆ ಎಚ್ಚರಿಸುವವರನ್ನೂ ಹಿಂದೂ ವಿರೋಧಿಗಳೆಂದೂ, ಬುದ್ಧಿಜೀವಿಗಳೆಂದೂ ಹೆಸರಿಸಿ ಹೀಗೆಳೆಯುವ ಪ್ರಚಾರಾಂದೋಲನವನ್ನೂ ಇವರು ಆರಂಭಿಸಿದ್ದಾರೆ. ಆದರೆ ಇಂತಹ ಆಂದೋಲನ, ಬುದ್ಧಿಗೇಡಿಗಳ ರಾಷ್ಟವನ್ನು ಮಾತ್ರ ನಿರ್ಮಿಸಬಲ್ಲುದು ಎಂದು ಇವರಿಗೆ ಹೇಳ ಬಲ್ಲವರಾದರೂ ಯಾರು?

ಹೀಗೆ ಭಾರತದ ರಾಜಕಾರಣ, ನಿರ್ದಿಷ್ಟವಾಗಿ ಕರ್ನಾಟಕದ ರಾಜಕಾರಣ ನಿಜವಾಗಿ ಇಂದು ಕವಲು ದಾರಿಯಲ್ಲಿದ್ದಂತಿದೆ. ಭಾಜಪದಲ್ಲಿನ ಉದಾರವಾದಿಗಳೇ, ಕಾಂಗ್ರೆಸ್ಸಿಗರೇ, ದೇವೇಗೌಡರೇ, ಇದು ರಾಷ್ಟ್ರದ ಮತ್ತು ನಿರ್ದಿಷ್ಟವಾಗಿ ರಾಜ್ಯದ ಹಿತ ದೃಷ್ಟಿಯಿಂದ ನೀವೆಲ್ಲರೂ ನಿಜವಾಗಿ ಎಚ್ಚೆತ್ತುಕೊಳ್ಳಬೇಕಾದ ಕಾಲ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[’ಮಾತೃ ದೇವೋ ಭವ’ ಎಂಬ ಮಾತನ್ನೇ ನೋಡಿ. ಏನಿದರ ಅರ್ಥ? ಹೆಣ್ಣು ತಾಯಿಯಾಗಿ ಮಕ್ಕಳನ್ನು ಹೆರುತ್ತಾ, ಸಾಕುತ್ತಾ ಮನೆಯಲ್ಲಿ ದೇವರಂತೆ ಪೂಜೆಗೆ ಒಳಗಾಗಿ ಕೂರಬೇಕೆಂದೆ?]
ನಿಮಗೆ ಆ ಅರ್ಥ ಹೇಗೆ ಹೊಳೆಯಿತೊ ತಿಳಿಯದು.’ಮಾತೃ ದೇವೋ ಭವ’ಎಂದರೆ ತಾಯಿಯನ್ನು ದೇವರಂತೆ ತಿಳಿ ಎಂದು ಗುರು ಶಿಷ್ಯನಿಗೆ ಮಾಡುವ ಉಪದೇಶವಷ್ಟೆ, ಭಾರತಿಯ ಸಂಸ್ಕೃತಿ ಸಾಹಿತ್ಯಗಳಲ್ಲಿ ನಿಮ್ಮ ಹಳದಿ ಕನ್ನಡಕದಿಂದ ಬರೀ ಸಂಕುಚಿತಾರ್ಥಗಳನ್ನು ಮಾತ್ರ ನೋಡಬೇಡಿ, ಅದರಲ್ಲಿ ಉದಾತ್ತತೆ,ಸರ್ವ ಸಮಾನತೆಯೂ ವಿಶಾಲ ಮನೋಭಾವನೆಯೂ ಇದೆ ಎಂದು ಅಧ್ಯಯನ ಮಾಡಿದರೆ ತಿಳಿಯುವುದು. ಮಂತ್ರ ಶ್ಲೋಕಗಳ ಬಗ್ಗೆ ನಿಮಗಿರುವ ಭಾವನೆ ನಿಮ್ಮ ಅಜ್ಞಾನವನ್ನು ತೋರಿಸುತ್ತದೆಯಷ್ಟೆ.

ಅನಂತೇಶ ಅವ್ರೆ ..

ಬಹುಶ ಇದು ಮೂಲ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಅಂತ ಕಾಣುತ್ತೆ. ನಾನು ಈ ಬಗ್ಗೆ ಏನೂ ಹೇಳಲಾರೆ. ಏಕೆಂದರೆ ಮೂಲ ಲೇಖನವನ್ನು ಓದಲಾಗಲಿಲ್ಲ. ಅದು ದೊಡ್ಡ ಲೇಖನ.

ಈ ಅರ್ಥ ಹೊಳೆದಿರುವುದು ನನಗಲ್ಲ, ಸ್ವಯಂ ಘೋಷಿತ ಸಂಸ್ಕ್ರತಿ ರಕ್ಷಕರಿಗೆ ಎಂದು ನಾನು ಲೇಖನದಲ್ಲಿ ಹೇಳುತ್ತಿರುವುದು! ಇನ್ನೊಮ್ಮೆ ಆ ಲೇಖನ ಭಾಗವನ್ನು ಓದಿ ನೋಡಿ. ಇತರರಿಗೆ ಸಂಸ್ಕ್ರತ ಬೋಧಿಸುವ ಭರದಲ್ಲಿ ಪಠ್ಯವೊಂದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನೇ ನೀವು ಕಳೆದುಕೊಂಡಂತೆ ಕಾಣುತ್ತದೆ. ಹಾಗಾಗಿ ನಿಮ್ಮಂಥವರು ಅಧ್ಯಯನ, ಅಜ್ಞಾನವೆಂದೆಲ್ಲಾ ಮಾತನಾಡಿದಾಗ ಅದು ಮರುಕಕ್ಕೆ ಮಾತ್ರ ಅರ್ಹವೆನಿಸುತ್ತದೆ.
ಇದು ಅನಂತೇಶ್ ನೆಂಪು ಅವರಿಗೆ ಪ್ರತಿಕ್ರಿಯೆ.
-ಡಿ.ಎಸ್.ನಾಗಭೂಷಣ

ಭಾಜಪ ಇಂದು ಬೇರೆ ಯಾವ ರಾಜಕೀಯ ಪಕ್ಷಕ್ಕೂ ಹೊರತಾಗಿಲ್ಲ. ಸಂಪಂಗಿಗಳು ಎಲ್ಲ ಪಕ್ಷದಲ್ಲೂ ಇದ್ದಾರೆ. ಗಣಿ ದುಡ್ಡು ಇಂದು ಯಾವ ರಾಜಕೀಯ ಪಕ್ಷವನ್ನೂ ಬಿಟ್ಟಿಲ್ಲ. ಎಂದು ಭಾಜಪ ಅಧಿಕಾರದ ಆಸೆ ಹಿಡಿದು (ದೇವೇಗೌಡರ)ಕುಟುಂಬ ರಾಜಕಾರಣದ ತಂತ್ರಗಳೊಂದಿಗೆ ಆಟವಾಡಿತೋ, ಅಂದೇ ಅದರ ಎಲ್ಲ ನೈತಿಕತೆಗಳ ಅರಿವು ಜನರಿಗೆ ಮೂಡಿತ್ತು ಎಂದು ಭಾವಿಸಿದ್ದೆ.

ಹೆದರಬೇಡಿ. ಆ ಪಕ್ಷದಲ್ಲಿ ಸಂಘ ಪರಿವಾರದ ಆದರ್ಶಗಳಿಗಾಗಲಿ, ಗೋಲ್ವಾಲ್ಕರರಿಗಾಗಲಿ ಇಂದು ಜಾಗವಿಲ್ಲ. ಕರ್ನಾಟಕವನ್ನು ಕೇಸರೀಕರಣಗೊಳಿಸುವಷ್ಟು ಕೇಸರಿ ಆ ಪಕ್ಷದಲ್ಲಿಲ್ಲ. ಅದರಲ್ಲಿರುವುದೆಲ್ಲ ರಿಯಲ್ ಎಸ್ಟೇಟ್ ಹಾಗು ಗಣಿಗಳ ಕೆಸರು.

ಆದರೆ ಶ್ರೀರಾಮ ಸೇನೆಯ ಮಂಗಳೂರು ಘಟನೆಗೆ ಅತಿ ಮಹತ್ವ ಕೊಟ್ಟು ಮುತಾಲಿಕರನ್ನು ಒಂದು ವರ್ಗದ ಜನರಿಗೆ ’ಹೀರೋ’ ಸ್ಥಾನ ದೊರಕಿಸಿಕೊಟ್ಟ ’ಕ್ರೆಡಿಟ್’ ಮಾತ್ರ ಮಾಧ್ಯಮಗಳಿಗೆ ಖಂಡಿತ ದೊರೆಯುತ್ತದೆ. ಮುಂಬೈ ಘಟನೆ, ಸತ್ಯಂ ರಾಜು ಘಟನೆಯಲ್ಲಿ ರಾಜಕಾರಣಿಗಳ ಪಾತ್ರಗಳನ್ನು ಪ್ರಶ್ನಿಸದ ಮಾಧ್ಯಮಗಳು ಒಂದು ವಾರ ಪೂರ್ತಿ ಮಹಿಳೆಯರ ’ಪಬ್ ರೈಟ್ಸ್’ ಕುರಿತು ದೇಶದ ಎಲ್ಲ ಪೇಜ್-೩ ಜನರನ್ನು ಪ್ರಶ್ನಿಸಿದ್ದು ನೋಡಿ ನಮ್ಮ ಮಾಧ್ಯಮಗಳ ಆದ್ಯತೆಗಳ ಅರಿವಾಯಿತಷ್ಟೆ. ನಾಕು ಜನ ನಗರದ ಹುಡುಗಿಯರ ಮೇಲೆ ನಡೆದ ಹಲ್ಲೆ ದೇಶದ ಅತಿ ದೊಡ್ಡ ವಾರ್ತೆಯಾಯಿತೇ? ನಕ್ಸಲರು ಹತ್ತು ಪೋಲೀಸರನ್ನು ಕೊಂದಾಗ ಅದು ಕೇವಲ ಒಂದು ದಿನದ ಮುಖ್ಯವಾರ್ತೆಯಷ್ಟೆ?

ಈ ಹಲ್ಲೆ ಕೇಸರೀಕರಣವಾದಲ್ಲಿ ಪ್ರಜಾಪ್ರಭುತ್ವದ ಅತ್ಯುನ್ನತ ಪ್ರತೀಕವಾದ ಸಂಸತ್ ಭವನದ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಕೇವಲ ಅವನ ಮತೀಯರ ಭಾವನೆಗಳಿಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಗಲ್ಲಿಗೇರಿಸದ ರಾಜಕಾರಣ ದೇಶದ "ಹಸಿರೀಕರಣ"ವೇ? ಕರ್ನಾಟಕದ ಚರ್ಚುಗಳ ಮೇಲಿನ ಹಲ್ಲೆಗೆ ಮಾನವ ಹಕ್ಕು ಆಯೋಗವನ್ನು ಕಳಿಸಿದ ಕೇಂದ್ರ ಒರಿಸ್ಸಾದಲ್ಲಿ ಹಿಂದು ಸನ್ಯಾಸಿಯ ಮೇಲಿನ ಹಲ್ಲೆಗೆ ಸುಮ್ಮನಿದ್ದಿದ್ದು ’ಕ್ರಿಸ್ತಾನೀಕರಣ’ವೆ?

ಇಷ್ಟಕ್ಕೂ ’ಕೇಸರೀಕರಣ’ವನ್ನು ತಡೆಗಟ್ಟುವವರು ಯಾರು? ಜಾತ್ಯತೀತತೆಯ ಹೆಸರಿನಲ್ಲಿ ಜಾತಿ-ಮತ-ಪಂಗಡಗಳ ನಡುವಣ ಕಂದರಗಳನ್ನು ಇನ್ನಷ್ಟು ದೊಡ್ಡದು ಮಾಡುತ್ತಿರುವವರೇ? ಗಾಂಧೀಜಿಯವರ ತತ್ವಗಳ ಮೇಲೆ ಪ್ರಮಾಣ ಮಾಡುವ ಕಾಂಗ್ರೆಸ್ ಪಕ್ಷದ ಕೇಂದ್ರ ಮಂತ್ರಿಣಿಯವರು ’ಪಬ್ ಭರೋ’ ಎಂದು ಅದೇಶ ಹೊರಡಿಸಿದರಲ್ಲ, ಅವರಿಂದಲೋ?

ಶ್ರೀರಾಮ ಸೇನೆಗೆ ನಮ್ಮ ಸಂಸ್ಕ್ರುತಿಯ ಪಾರುಪತ್ಯ ಯಾರೂ ಕೊಟ್ಟಿಲ್ಲ. ಆದರೆ ಅತಿಯಾದ ಪ್ರಚಾರದಿಂದ ಇನ್ನು ಮುಂದೆ ಅದೇ ಒಂದು ರಾಜಕೀಯ ಪಕ್ಷವಾದರೂ ಆಶ್ಚರ್ಯ ಬೇಕಿಲ್ಲ.

ಸರಿಯಾದ ಪ್ರತಿಕ್ರಿಯೆ ಸುದತ್ತ ಅವರೇ.

ಏಕಪಕ್ಷೀಯವಾದ ಟೀಕೆಗಳನ್ನು ಮಾಡುವುದನ್ನೇ ಕೆಲವರು ಸಮಾಜವಾದ, ಜಾತ್ಯತೀತತೆ ಅಂದುಕೊಂಡಿದ್ದಾರೆ. ಅವರಿಗೆ ಇಂಥ ಟೀಕೆಗಳೂ ಅರ್ಥವಾಗುವುದಿಲ್ಲ. ಹೀಗಾಗಿ, ಒಂದು ಅತಿರೇಕಕ್ಕೆ ಇನ್ನೊಂದು ಅತಿರೇಕ ಹುಟ್ಟಿಕೊಂಡು ಸ್ವಾಸ್ಥ್ಯ ಹದಗೆಡುತ್ತದೆ.

ಜಾತ್ಯತೀತತೆ ಹಾಗೂ ಕೋಮುಸೌಹಾರ್ದದ ಹೆಸರಿನಲ್ಲಿ ಪ್ರಚಾರ ಪಡೆಯಲು ಹೆಣಗುತ್ತಿರುವವರಿಗೆ ಮಂಗಳೂರು ಪಬ್‌ ದಾಳಿ ಘಟನೆ ರಸಗವಳದಂತೆ ಸಿಕ್ಕಿದೆ. ಅದರ ಫಲಶೃತಿಯೇ ಸನ್ಮಾನ್ಯರ ಈ ಲೇಖನ.

ನಿಮಗೆ ನನ್ನ ಬರಹ ಏಕಪಕ್ಷೀಯವಾಗಿ ಕಂಡಿತೆ? ಪಕ್ಷೀಯರಿಗೆ ಹಾಗೆ ಕಂಡೀತೇನೋ ಗೊತ್ತಿಲ್ಲ! ಹೋಗಲಿ, ಈ ನನ್ನ ಬರಹದಲ್ಲಿ ಇದನ್ನು ಬಿಟ್ಟು ಬೇರೇನೂ ಕಾಣಲಿಲ್ಲವೆ?
ಮುಂಬೈ ದಾಳಿಯಲ್ಲಿಯಾಗಲೀ, ಸತ್ಯಂ ಪ್ರಕರಣದಲ್ಲಿಯಾಗಲೀ ರಾಜಕಾರಣಿಗಳ ಪಾತ್ರದ ಬಗ್ಗೆ ಮಾಧ್ಯಮಗಳೂ ಸೇರಿದಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲವೆ? ನಕ್ಸಲೈಟರ ಹಿಂಸೆಯನ್ನು ಸಹಿಸಲಾಗುತ್ತಿದೆಯೇ? ಮಾಧ್ಯಮಗಳೂ ಸೇರಿದಂತೆ ಯಾರದನ್ನು ಒಪ್ಪಿಕೊಂಡಿದ್ದಾರೆ? ಪಬ್ ಮೇಲಿನ ದಾಳಿಯ significance ನಿಮ್ಮ ಪ್ರಕಾರ ಬರೀ ೩-ಪೇಜ್ ಜನರ ಪಬ್ ರೈಟ್ಸ್ ಚರ್ಚೆಗಷ್ಟೆ ಸೀಮಿತವೆ? ಅಫ್ಜಲ್ ಗುರುವನ್ನು ಇನ್ನೂ ನೇಣಿಗೇರಿಸದಿರಲು,ರಾಜಕಾರಣ ಕಾರಣವೋ ಅಥವಾ ರಾಷ್ಟ್ರಪತಿಯವರ ಮುಂದಿರುವ -ಕಲಾಂ ಅವರ ಕಾಲದಿಂದ- ದಯಾ ಯಾಚನೆಯ ಅರ್ಜಿ ಇನ್ನೂ ಇತ್ಯರ್ಥವಾಗದಿರುವುದು ಕಾರಣವೋ? ಹಾಗೆ ಇತ್ಯರ್ಥವಾಗದ ಅರ್ಜಿ ಇದೊಂದೇ ಅಲ್ಲ ಎಂಬುದೂ ನಿಮಗೆ ಗೊತ್ತೆ? ಒರಿಸ್ಸಾದ ಹಿಂದೂ ಸನ್ಯಾಸಿಯ ಕೊಲೆ ಸಂಬಂಧ ಸರ್ಕಾರ ಆಪಾದಿತರನ್ನು ಬಂಧಿಸಿ ಮೊಕದ್ದಮೆ ಹೂಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೆ?
ಶ್ರೀರಾಮ ಸೇನೆ ಒಂದು ರೋಗ ಚಿಹ್ನೆ. ಏನೇನೋ ಸಮಾಧಾನ ಹೇಳಿಕೊಳ್ಳುತ್ತಾ, ಅದನ್ನು ನಿರ್ಲಕ್ಷಿಸುವುದು ರೋಗವನ್ನೇ ಆಹ್ವಾನಿಸಿದಂತೆ. ಈ ರೋಗ ಪಬ್ ಸಂಸ್ಕ್ರತಿಗಿಂತ ಭಯಾನಕವಾದುದರಿಂದ ’ಪಬ್ ಭರೋ’ದಂತಹ ಸಾಂಕೇತಿಕ ಚಳುವಳಿಗೆ ಕರೆ!ಇದಕ್ಕಿಂತ ಹೆಚ್ಚಿನ ಅರ್ಥ ಇದಕ್ಕಿರಲಾರದು.
-ಡಿ.ಎಸ್.ನಾಗಭುಷಣ

ಮಹಾತ್ಮ ಗಾಂಧಿಯ ಗ್ರಾಮಸ್ವರಾಜ್ಯದ ಕನಸು ಕಾಣುತ್ತಿರುವ ಸಮಾಜವಾದಿಗಳಿಗೆ ಪಬ್ ಬರೊ ಸಾಂಕೇತಿಕ .. ಇನ್ನದರೂ ಗಾಂಧಿ ಹೆಸರು ಹೇಳೋದು ನಿಲ್ಲಿಸಿ ಬಿಡಿ. ನಿಮ್ಮ ದೃಷ್ಟಿಯಲ್ಲಿ ಗಾಂಧಿಯ "ಚಳುವಳಿ" ಯಾವ ಅರ್ಥ ಪಡೆದುಕೊಂಡಿದೆ ಎಂದು ತಿಳಿದು ಸಂತಸ ಆಯಿತು. ಇಂದು ಪಬ್ ನಲ್ಲಿ ದಾಳಿ ನಡೆಸಿದ್ದಕ್ಕೆ "ಪಬ್ ಬರೊ" ನಾಳೆ ಅನೈತಿಕ ಅಂತ ಪೋಲಿಸರು ಜನರ ಸಹಕಾರದೊಂದಿಗೆ ದಾಳಿ ನಡೆಸಿ,ಅಲ್ಲಿರುವ ಹೆಣ್ಣು ಗಂಡುಗಳನ್ನು ಜೈಲಿಗೆ ತಳ್ಳಿದರೆ ಆ ಜನರ ಗುಂಪಿನಲ್ಲಿ ಯಾರದರೂ ಕೆಸರಿ ಬಣ್ನದ ಅಂಗಿ ತೊಟ್ಟಿದ್ದರೆ ಅಥವಾ ಹಣೆಗೆ ತಿಲಕ ಇಟ್ಟರೆ ನ್ಯೂಸ್ ಚಾನೆಲಗಳಿಗೆ ಹಬ್ಬ.. ಆಮೇಲೆ ನೋಡೋಣ ಸಮಾಜವಾದಿಗಳು ಅದನ್ನ ಖಂಡಿಸಿ ಬರೆಯುತ್ತಾರೋ ಇಲ್ಲಾ ಸಚಿವೆ ಇನ್ನೋಂದು "ಬರೋ" ಕಾರ್ಯಕ್ರಮ ನಡೆಸಿದರೆ ಅದನ್ನೂ ಸಾಂಕೇತಿಕ ಅನ್ನುತ್ತಾರೊ! "ತೆರೆಯ ಮೇಲೇ ನೋಡಿ ಆನಂದಿಸಿ" [Compuer Screen ಮೇಲೆ:)]

ಆ ದಿವ್ಯ ಬೆಳಕಲಿ ನಾ ಕ೦ಡೆ ಕನಸು
ಯುಗವೆಲ್ಲ ಕಾದೆನು ಆಗಲದು ನನಸು

ಪರಿಶುದ್ಧ ಪರಿಶೊಧ ಈ ಜೀವನ ಯಾತ್ರೆ
ನ೦ಬಿದರೆ ಇದೊ೦ದು ದಿನವು ಜಾತ್ರೆ

ಈ ಲೊಕ ಈ ಬಾಳು ಶಾಶ್ವತವಲ್ಲ
ಇದರೊಡೆಯ ರಹಸ್ಯ ಅವನಶ್ಟೆ ಬಲ್ಲ

ಈ ಕೋಪ ಈ ದ್ವೆಶ ಎಲ್ಲಾವು ವ್ಯರ್ಥ
ಭಾವನೆಗಳ ಅ೦ದೊಲನದಲ್ಲಿ ಯೆನಿಲ್ಲ ಅರ್ಥ

ಈ ಬಾಳು ಅಸ್ತಿತ್ವ ಇದೊ೦ದು ಪಾತ್ರ
ಆಡಿಸುವವನು ಏಲ್ಲರನ್ನು ಅವನಶ್ಟೆ ಮಾತ್ರ

ಈ ರಚನೆ ಮಾನವ ಮೀರಿದೆ ಕಲ್ಪನೆ
ಅದರಲ್ಲಿ ಹುಡುಕುವನು ಸ೦ತೊಷ ಸ್ವಲ್ಪನೆ

ನಾ ಮೇಲು, ನೀ ಕೀಳು ಎನ್ನುವವನು ಮೂಢ
ಕೊನೆಯಲ್ಲಿ ಸೇರುವವರು ದೇವರ ಕೂಡ

ಏರಡು ದಿನ ಬಾಳಿನಲಿ ಏಕೆ ಈ ಜಗಳ
ಹಾಡು ನೀ ದಿನವು ಪ್ರೀತಿಯ ತಾಳ

ನಿಮ್ಮ ಆಶಯ ಕೋಮುವಾದಿಗಳಿಗೆ ಹಾಗೂ ಆ ಹೆಸರಲ್ಲಿ ಏಕಪಕ್ಷೀಯ ಟೀಕೆ ಮಾಡುತ್ತ ದಿಕ್ಕು ತಪ್ಪಿಸುತ್ತಿರುವವರಿಗೆ ಅರ್ಥವಾಗುವಂತಾಗಲಿ. ಚೆನ್ನಾಗಿ ಬರೆದಿದ್ದೀರಿ ವಿಧಾತ.

"ನಿಮ್ಮ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಾರು ಎಂದು ಕೇಳಿದಾಗ, ಅದು ನನ್ನನ್ನು ಪ್ರಶ್ನೆಯಾಗಿ ಮಾತ್ರ ಕಾಡಲಿಲ್ಲ"

>>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಯಾವನೂ ಈ ಪ್ರಶ್ನೆಗೆ ನೇರ ಉತ್ತರ ಕೊಡುತ್ತಾನೆ, ,ಇದಕ್ಕೆ ಮತದಾರ ಕಾರಣ ಎಂದು. ಔಟ್ ಲುಕ್ ಅಂತ ಪತ್ರಿಕೆಗಳಿಗೆ ಈ ರೀತಿ ಪ್ರಶ್ನೆ ಯಾಕೆ ಉದ್ಬವಿಸಿತೋ?

"ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಇಂದಿನ ಲೋಕಾಯುಕ್ತರ ಧೃತಿಗೆಡಸಲೋ ಎಂಬಂತೆ, ಅದು ತನ್ನ ಪಕ್ಷದ ಶಾಸಕನೊಬ್ಬನನ್ನು ಲಂಚ ಸ್ವೀಕರಿಸುತ್ತಿದ್ದಾಗಲೇ ಹಿಡಿದು ಹಾಕಿದ ಮರುದಿನವೇ, ತರಾತುರಿಯಲ್ಲಿ ’ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಖ್ಯಾತಿಯ ಮಾಜಿ ಲೋಕಾಯುಕ್ತ ವೆಂಕಾಟಾಚಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಭ್ರಷ್ಟಾಚಾರ ಕುರಿತ ತನ್ನ ಬದ್ಧತೆ ಎಂತಹುದೆಂಬುದನ್ನು ಸ್ಪಷ್ಟಪಡಿಸಿದೆ"

>> ಇದು ಎಂತ ಬಾಲಿಶ ಹೇಳಿಕೆ ಎಂದರೆ,., ವೆಂಕಟಾಚಲಯ್ಯನವರು ಬಿಜೆಪಿ ಗೆ ಸೇರುವ ಇರಾದೆಯನ್ನು ನವೆಂಬರ್ ೧೬ ರಂದು ವ್ಯಕ್ತಪಡಿಸಿದ್ದಾರೆ. ಸಂಪದಕ್ಕೆ ತಾವೌ ಪರಿಚಯಿಸಿದ "google" ನಲ್ಲಿ ಹುಡಿಕಿ ಸಿಕ್ಕ ಎರಡು ಕೊಂಡಿಗಳು ಇಲ್ಲಿವೆ, ತಮ್ಮ ಸಮಾಜವಾದಿ ಕಣ್ಣಿನಿಂದಲ್ಲೇ ಇದನ್ನು ಓದಿ.
http://www.hindu.com/2008/11/16/stories/2008111654400400.htm
http://www.daijiworld.com/news/news_disp.asp?n_id=53689&n_tit=Bangalore%...

ನೀವು ಬರೆದಂತೆ ತೋರುವ ಬದ್ದತೆ ತೋರುವ ದುರ್ಗತಿ ಬಿಜೆಪಿ ಗೆ ಇನ್ನು ಬಂದಿಲ್ಲ .

ಗಣಿ ಪ್ರಕರಣ, ಪದ್ಮಪ್ರಿಯ ಸಾವು, ಇದಕ್ಕೆಲ್ಲ ತನಿಖೆ ಆಗುತ್ತಿದೆಯಲ್ಲ.. ಸಮಾಜವಾದಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿದ್ದರೇ ಬೇಡ, ನ್ಯಾಯಾಂಗದ ಮೇಲೂ ನಂಬಿಕೆ ಇಲ್ಲವೇ? ಗಣಿ ಪ್ರಕರಣದಲ್ಲಿ ಯಾರ ಹೆಸರುಗಳು ಉಲ್ಲೇಖವಾಗಿವೆ? ಆ ತನಿಖೆ ನಡೆಸಿದವರೂ ಲೋಕಾಯುಕ್ತರೆ ಅಲ್ಲವೇ? ಹಗಲಾಗುವಷ್ಟರಲ್ಲಿ ತನಿಖೆ ಮುಗಿದು ಹೊರಬೀಳಲು ಅದೇನು ೨೦-೨೦ ಮ್ಯಾಚೇ? ೮೪ ರ ಸಿಖರ ವಿರುದ್ದದ ದಂಗೆ ಪ್ರಕರಣಗಳೇ ಇನ್ನೂ ತೀರ್ಮಾನ ಆಗಿಲ್ಲ. .ಹಾಗಿರುವಾಗ ೪-೫ ತಿಂಗಳಲ್ಲಿ ಎನು ಸಾಧ್ಯ? ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ ರೂವಾರಿ ಅಫ್ಜಲ್ ಗೆ ಗಲ್ಲು ನೀಡುವ ವಿಷಯವೆ ಇನ್ನು ತೀರ್ಮಾನ ಆಗಿಲ್ಲ.. ನ್ಯಾಯಲಯ ತೀರ್ಪು ಕೊಟ್ಟ ಮೇಲೂ ಕೂಡ,, , ಸರ್ಕಾರಕ್ಕೆ ಇದಕ್ಕಿಂತ "priority" ವಿಷಯಗಳು ಇವೆ, ಹಾಗಂತ ಅಂದಿನ ಗೃಹಮಂತ್ರಿ ಶಿವರಾಜ ಪಾಟೀಲರೆ ಅಮೃತವಾಣಿ ಉದುರಿಸಿದ್ದರು..

"ಕ್ಕೆ ಒಂದು ಕಾರಣ, ಬಿಜೆಪಿ ಈ ಅಲ್ಪಾವಧಿಯಲ್ಲೇ ಭ್ರಷ್ಟತೆ, ಜಾತಿವಾದ ಮತ್ತು ಕಾನೂನುಗಳನ್ನೇ ತಲೆಕೆಳಗು ಮಾಡುವ ನಿರ್ಲಜ್ಜ ಮಾರ್ಗಗಳಲ್ಲಿ ಎಲ್ಲ ಪಕ್ಷಗಳನ್ನೂ ಮೀರಿಸುವ ಮೂಲಕ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡು; ಈಗ ನಿಧಾನವಾಗಿ ತನ್ನ ಕೋಮುವಾದಿ ಬಾಲವನ್ನು ಬಿಚ್ಚತೊಡಗಿರುವುದು."

>>ಎನು ಕೋಮುವಾದಿ ಕಂಡಿದೆ ನಿಮ್ಮ ಸಮಾಜವಾದಿ ಕಣ್ಣಿಗೆ? ಅವರೇನು ಬಲವಂತವಾಗಿ ಮತಾಂತರ ನಡೆಸುತ್ತಿದ್ದರೆಯೆ? ಅಥವಾ ಮತಾಂತರ ನಿಶೇಧ ಕಾನೂನು ಜಾರಿಗೆ ತಂದಿದ್ದಾರೆಯೆ? ಒಂದು ಕೋಮಿನ ಮೇಲೆ ಎನಾದರು ನಿರ್ಬಂಧ ಹೇರಿದ್ದಾರೆಯೆ? ಅಥವಾ ಹಜ್ ಯಾತ್ರೆಗೆ ಸಬ್ಸಿಡಿ ನಿಲ್ಲಿಸಿದ್ದರೆಯೆ? ಉರ್ದು ವಾರ್ತೆ ತಂದು ಕೋಮುವಾದ ಕೆರಳಿಸಿ ದಂಗೆಗೆ ಕಾರಣರಾದವರು ಯಾರು? ಆಗ ಬಿಜೆಪಿ ಅಧಿಕಾರ್ದಲ್ಲಿ ಇತ್ತೆ? ಪಬ್ ಗಲಾಟೆ.. ಅದನ್ನ ಬಿಜೆಪಿ ಸರ್ಕಾರ ನಡೆಸಿತೆ? ದಾಳಿಕೋರರನ್ನು ಸಮಾಜವಾದಿಗಳು ಹೋಗಿ ಪೋಲಿಸ್ ಗೆ ಹಿಡಿದು ಕೊಟ್ಟರೆ? ಒಂದು ಪಬ್ ನಲ್ಲಿ ನಡೆದ ಘಟನೆ ಈ ಮಟ್ತಕ್ಕೆ ಪ್ರಚಾರ ಪಡೆಯುತ್ತಿರುವುದು ಎಂತ ವಿಪರ್ಯಾಸ,, ಹೆಣ್ಣೂ ಮಕ್ಕಳ ಮೇಲೆ ಏನು ಅಕ್ಕರೆ ಇವರಿಗೆಲ್ಲಾ? ಹೊಟ್ತೆ ತುಂಬಿಸಿ ಕೊಳ್ಲಲು ಕೂಲಿ ಮಾಡೀ ದುಡಿಯುತ್ತಿರುವ ಹರಿದ ಬಟ್ಟೆಯ ಅರೆ ನಗ್ನ ಹೆಣ್ಣೂ ಮಕ್ಕಳ ಗೋಳು ಈ ಔಟ್ ಲುಕ್ ಗೆ ಅಥವಾ ಐಬಿಎನ್, ಎನ್ಡಿಟಿವಿ ಗಳಿಗೆ ಕಾಣಿಸುವುದೆ ಇಲ್ಲ , ಪಬ್ ನಲ್ಲಿರುವ ಹೆಣ್ಣು ಮಕ್ಕಳು ಮಾತ್ರ ಕಾಣಿಸುತ್ತಾರೆ, ಕೂಲಿ ಮಾಡೂವ ಹೆಂಗಸರ ಕಥೆ ಇವರಿಗೆ ನಿತ್ಯದ ಗೋಳು, ಅದನ್ನ ಪ್ರಚಾರ ಮಾಡಿದರೆ ಯಾರು ನೋಡುತ್ತರೆ? ಇವರ ಪ್ರಚಾರ ಸಂಖ್ಯೆ ಎಲ್ಲಿ ಹೆಚ್ಚುತ್ತೆ? ಆಂಧ್ರದಲ್ಲಿ ಆಸಿಡ್ ದಾಳಿಗೆ ತುತ್ತದ ಇಬ್ಬರು ಹೆಣ್ಣು ಮಕ್ಕಳಬಗ್ಗೆ ಎಷ್ಟು ಬಾರಿ ಔಟ್ ಲುಕ್ ತಮ್ಮನ್ನ ಸಂಪರ್ಕಿಸಿದೆ? ಜಾತಿವಾದ ಯಾರು ತಾನೆ ಬಿಟ್ಟಿದ್ದಾರೆ? ತಾವೆ ಜಾತಿವಾದ ಇತ್ತು, ಇದೆ, ಇರುತ್ತೆ ಹಾಗು ಅದಕ್ಕೆ ಮೂಲ ಕಾರಣ ಎಣು ಎಂದು ಜಾತಿವಾದವನ್ನು ಜೀವಂತವಾಗಿ ಇಡುವಂತೆ ಪ್ರೊ|| ಬಾಲು ಅವರೋಮ್ದಿಗೆ ಚರ್ಚೆಗೆ ಹೋಗಿ ಅವರ ಸಂಶೋಧನೆ ಬಗ್ಗೆ ಯಾವ ಮಟ್ತದಲ್ಲಿ ಮಾತಡೀದ್ದೀರ ಅನ್ನುವುದನ್ನ ಇಡೀ ಸಂಪದ ಸಮುದಾಯ ಓದಿದೆ.
ಕಾನೂನು ತಲೆಕೆಲಗು ಆಗಿದಲ್ಲಿ ಯಾಕೆ ತಾವು ನ್ಯಾಯಲಯಕ್ಕೆ ಮೊರೆ ಹೋಗಬಾರದು? ಎಲ್ಲರಿಗೂ ಚೆನಾಗಿ ತಿಳಿಯಲಿ ಎಲ್ಲಿ ಈ ಸರ್ಕಾರ ಕಾನೂನು ಮೀರಿದೆ ಅಂತ?

"ಇದರ ನಾಯಕ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದಾಗ ವ್ಯಂಗ್ಯವಾಗಿ ಹೇಳಿದ್ದು: ’ನಿಘಂಟಿನಲ್ಲೆಲ್ಲಾ ಹುಡುಕಿದರೂ ಜಾತ್ಯತೀತತೆ ಎಂಬ ಶಬ್ದ ಸಿಗಲಿಲ್ಲ!’"
>>ಇದು ಕೆಲವರಿಗೆ ವ್ಯಂಗ್ಯವಾಗಿ ಕಂಡಿರಬಹುದು,, ಆದರೆ ನಿಜವಾದ ಜಾತ್ಯತೀಯತೆ ಎಲ್ಲಿದೆ? ಜಾತಿ ಪದ್ದತಿ ವಿರುದ್ದ ಹೊರಾಡುವವರೆಲ್ಲರೂ ಜಾತಿಯ ಮತಗಳ ಲೆಕ್ಕಾಚಾರದ ಹಿಂದೆಯೆ ಕುಣಿಯುತ್ತಿರುತ್ತಾರೆ. ಜಾತೀಯತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ, ಬ್ಲಾಗಗಳಲ್ಲಿ ಬರೆಯುವ ಮಹನೀಯರೂ, ತಮ್ಮ ಮನೆಗೆ ಬೇರೆ ಜಾತಿಯ ಸೊಸೆಯನ್ನು ತಂದ ಅಥವಾ ಮಗಳನ್ನು ಬೇರೆ ಜಾತಿಯವನಿಗೆ ಕೊಟ್ಟು ಮದುವೆ ಮಾಡಿದ ನಿದರ್ಶನಗಳು ಬಹಳ ಕಮ್ಮಿ ಇವೆ.
secularism ಎಂದು ಬಾಯಿ ಬಡಿದು ಕೊಳ್ಳುವ ಜನರು, ಹಜ್ ಗೆ ಕೊಟ್ಟಂತೆ , ಮಾನಸ ಸರೋವರ ಯಾತ್ರೆಗೆ ಸಬ್ಸೀಡಿ ಕೊಡದಿರುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಈಗಲೂ ೬೦೦-೭೦೦ ರೂ ಮಾಸಿಕ ಸಂಬಳದಲ್ಲಿ ದುಡಿಯುತ್ತಿರುವ ಮುಜರಾಯಿ ದೇವಾಲಯಗಳ ಅರ್ಚಕರ ಬಗ್ಗೆ ಯಾಕೆ ದನಿ ಎತ್ತುತಿಲ್ಲ?

"ಇಂತಹುದೇ ಘಾತುಕ ಜಾಣತನವೇ ಮುಖ್ಯಮಂತ್ರಿ ಯಡಿಯೂರಪ್ಪನವರ ’ಯಾರೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಆದರೆ ಅದೇ ಹೊತ್ತಿನಲ್ಲಿ ಪಬ್ ಸಂಸ್ಕೃತಿಯನ್ನೂ ಸಹಿಸುವುದಿಲ್ಲ’ ಎಂಬ ಹೇಳಿಕೆಯಲ್ಲಿ ಎದ್ದು ಕಾಣುವುದು."

ಸಮಾಜವಾದಿಗಳ ಕಣ್ಣಿಗೆ ಈ ರೀತಿ ಕಂಡರೆ ಎನೂ ಮಾಡಲು ಸಾಧ್ಯವಿಲ್ಲ. . ಘಟನೆ ನಡೆದ ಕೂಡಲೆ ರಾಮಸೇನೆಯ ಮುಖ್ಯಸ್ತರೂ ಸೇರಿದಂತೆ ಬಂಧನ ನಡೆದಿಲ್ಲ್ಲವೇ? ಅದು ನಿಮ್ಮ ಕಣ್ಣಿಗೆ ಕಂಡಿಲ್ಲವೇ? ಪಬ್ ಸಂಸ್ಕ್ರುತಿ ಸಹಿಸುವುದಿಲ್ಲ ಎಂದು ರಾಜಾಸ್ಥಾನದ ಮುಖ್ಹ್ಯಮಂತ್ರಿ ಸಹ ಹೇಳಿದ್ದಾರಲ್ಲ.. ಅವರು ಕೇಸರಿಕರಣಕ್ಕೆ ಹೊರಟ್ಟಿದಾರೆಯೆ? ಅಥವಾ ಕೋಮುವಾದವೇ?

ಎರಡೆಳೆಯ ನಾಳಿಗೆ ಯಾರದ್ದು? ಪಬ್ ನಲ್ಲಿ ನಡೆದ ಘಟನೆ ಸಮಯದಲ್ಲೇ ದೆಹಲಿಯಲ್ಲಿ ಕೆಲವು ಸಹಸ್ರ ಜನ ಸೇರಿ ತಮಗೆ ಬೇರೆ ಕಾನೂನು ಬೇಕು, ಭಯೋತ್ಪಾದನೆ ವಿಷಯದಲ್ಲೂ ತಮನ್ನು ಬೇರೆ ಕಾನೂನಿಂದ ನೋಡಬೇಕು ಅಂತ ಪ್ರತಿಭಟಿಸಿದರಲ್ಲ..ಆಗ ಚಕಾರವೆತ್ತದ ಜನರದ್ದಲ್ಲವೇ ಎರಡೆಳೆಯ ನಾಲಿಗೆ? ಸಮಾನತೆ ಬಗ್ಗೆ ಸದಾ ಬೊಗಳೆ ಬಿಡುತ್ತ, ಒಂದು ಕೋಮಿಗೆ ಪ್ರತ್ಯೇಕ ಕಾನೂನು, ಬಹು ಪತ್ನಿತ್ವ ಇದೆಲ್ಲ ಇದ್ದರೂ ಅದರ ಬಗ್ಗೆ ತುಟಿ ಬಿಚ್ಚದ್ದೆ, ಯಾವುದೆ ತೊಂದರೆ ಇಲ್ಲದೆ ಕೇವಲ ೩ ಬಾರಿ ಒಂದು ಪದ ಉಚ್ಚರಿಸಿ ವಿಚ್ಚೇದನ ನೀಡಿ ಹೆಂಡತಿಯನ್ನು ಅತಂತ್ರ ಸ್ಥಿತಿಯಲ್ಲಿ ಇಡುವ ಕಾನೂನಿನ ಬಗ್ಗೆ ಮೂಗಿನ ಮೇಲೆ ಬೆರಳ ಬೆಟ್ಟು ಇಟ್ಟು ಮೌನ ವಹಿಸಿ ಫೋಸ್ ಕೊಡುವ ಚಿಂತಕರದ್ದು ಎಂತಹ ನಾಲಿಗೆ? ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳು ಹಾಗು ಗಂಡೂ ಮಕ್ಕಳು ಒಟ್ಟಿಗೆ ಓದುವ ಹಾಗಿಲ್ಲ ಎಂದು ಕಾನೂನು ರೂಪಿಸಿ ಫತ್ವಾ ಹೊರಡೀಸಿದ್ದಾರೆ. ಅದರ ಬಗ್ಗೆ ಮೂಕ ಪ್ರೇಕ್ಷಕರಂತೆ ವರ್ತಿಸುವ ಬುದ್ದಿಜೀವಿಗಳಿಗೆ ನಾಲಿಗೆಯೆ ಇಲ್ಲವೇ?

"ಅದನ್ನು ಅವರು ಮತ್ತ ಅವರ ಮಗ ಬಿಜೆಪಿಯೊಂದಿಗೆ ಸಮಯ ಸಾಧಕ ಸಖ್ಯ ಬೆಳೆಸಿ, ಅದೇ ಸಮಯ ಸಾಧಕತನದೊಂದಿಗೆ ಅದಕ್ಕೆ ಅಧಿಕಾರ ಹಸ್ತಾಂತರ ಮಾಡದೆ ಉಂಟು ಮಾಡಿರುವ ಅನಾಹುತಕ್ಕಾಗಿ, ಜನತೆಯ ಬಹಿರಂಗ ಕ್ಷಮೆ ಕೋರುವ ಮೂಲಕ ಆರಂಭಿಸಬಹುದಾಗಿದೆ. ಆಗ ಮಾತ್ರ ತಮ್ಮ ತಂದೆಯಂತಹುದೇ ದೈತ್ಯ ರಾಜಕೀಯ ಪರಿಶ್ರಮವನ್ನು ಪ್ರದರ್ಶಿಸುವ ಮೂಲಕ ಭರವಸೆ ಹುಟ್ಟಿಸಿರುವ ಕುಮಾರಸ್ವಾಮಿಯವರ ನಾಯಕತ್ವ ಒಂದು ನೈತಿಕತೆಯನ್ನೂ ಸ್ಥಾಪಿಸಿಕೊಂಡು, ರಾಜ್ಯಾದ್ಯಂತ ಎಲ್ಲರ ವಿಶ್ವಾಸಾರ್ಹತೆಯನ್ನೂ ಗಳಿಸಿ ಬೆಳೆಯಬಲ್ಲುದು. "

>>> ದೇವೇಗೌಡರು ಹಾಕಿ ಕೊಟ್ಟ ಮಾರ್ಗದಲ್ಲೆ ಅವರ "ಕುಮಾರ" ಸಾಗುತ್ತಿದಾರೆ. ಚಿಂತೆ ಮಾಡಬೇಡಿ. ಹೆಗ್ಗಡೆಯವರಿಗೆ ಬಿದ್ದ ಚಪ್ಪಲಿ ಏಟುಗಳು, ಖಾತೆಗೆ ಹಣ ಕೊಡಲಿಲ್ಲ ಎಂದು ಕಾಲು ಎಳೆಸಿಕೊಂಡ ಬೊಮ್ಮಾಯಿ, ಹೀಗೆ ಹಲವಾರು ನಿದರ್ಶನಗಳು ಜೀವಂತವಾಗಿಯೆ ಇವೆ. ಸಿದ್ದರಾಮಯ್ಯ ದಳ ಬಿಡಲು ಕಾರಣ ಚೆನಾಗಿ ಗೊತ್ತಿದೆ ಬಿಡೀ. ದೇವೆಗೌಡರ ಸಮಯಸಾಧಕ ರಾಜಕಾರಣ ಅವರ ಮಗ ಪಾಲಿಸ್ಕೊಂಡು ಮುಂದುವರಿಸಿಕೊಂಡು ಹೋಗುತ್ತಾರೆ. ನೀವು ಹೇಳಿದಂತೆಯೆ ತಂದೆಯ ದೈತ್ಯ ರಾಜಕೀಯ ಪರಿಶ್ರಮವನ್ನು ಇವರು ಅರಗಿಸಿ ಕರತಲಾಮಲಕ ಮಾಡಿ ಕೊಳ್ಳುತ್ತಿದ್ದಾರೆ, ಅದಕ್ಕಾಗಿಯೆ ಮಾಲ್ಡಿವ್ಸ್ ಪ್ರವಾಸ ಕೂಡ ಮಾಡುತ್ತಿರುತಾರೆ ಅನ್ನಿಸುತ್ತೆ, ಏಕಾಂತದಲ್ಲಿ ಕುಳಿತು ಅರ್ಥಮಾಡಿಕೊಂಡು ನೈತಿಕತೆಯನ್ನು ಸ್ಥಾಪಿಸಿಕೊಳ್ಳಲು ಪ್ರವಾಸ ಕೈಗೊಳ್ಳುತ್ತಿದ್ದಾರೆ ಅನ್ನಿಸುತ್ತದೆ, thatskananda ದಲ್ಲಿ ಇವರ ಮಾಲ್ಡಿವ್ಸ್ ಪ್ರವಾಸದ ಬಗೆ ಓದಿದ್ದೆ, ತಾವು ಬರೆದ ನೈತಿಕತೆ ಅನ್ನುವ ಪದದ ಅರ್ಥ ಹುಡುಕಲು ಬಹಳ ಕಷ್ಟ ಪಡಬೇಕಾಯಿತು.

"ನಿಮ್ಮ ಪೋಲೀಸ್ ಕಾರ್ಯಾಚರಣೆ ಇಂತಹದು! ಇದರ ಮೇಲೆ ಭಯೋತ್ಪಾದನೆಯ ವಿರುದ್ಧ ನಿಮ್ಮ ವಿದ್ಯಾರ್ಥಿ ಜಾಗೃತಿ ಆಂದೋಲನ ಬೇರೆ! ಇಂದು ಭಾರತದಲ್ಲಿ ಭಯೋತ್ಪಾದನೆ - ಶ್ರೀರಾಮ ಸೇನೆಯವರದೂ ಸೇರಿದಂತೆ - ವಿವಿಧ ರೂಪಗಳನ್ನು ತಾಳಿದೆಯೆಂದು ನಿಮಗೆ ಗೊತ್ತಿದೆಯಷ್ಟೆ? ಆದುದರಿಂದ, ಇದು ನಿಮ್ಮ ಎರಡೆಳೆ ನಾಲಿಗೆ ನೀತಿಯ ಇನ್ನೊಂದು ಅವತಾರವಷ್ಟೆ. ಇದರಲ್ಲೊಳಗೊಂಡಿರುವ ಜನ, ಈ ಸಂಬಂಧ ಕಾಲೇಜುಗಳಿಗೆ ಒದಗಿಸಿರುವ ಸಾಮಗ್ರಿಯ ವಿವರಗಳನ್ನು ನೋಡಿದರೆ, ಇದೊಂದು ಭಯೋತ್ಪಾದನಾ ವಿರೋಧಿ ಆಂದೋಲನವಲ್ಲ; ಬದಲಿಗೆ, ಸಾರ್ವಜನಿಕರ ಹಣ ಬಳಸಿಕೊಂಡು ಸರ್ಕಾರದಿಂದ ಪ್ರಾಯೋಜಿತವಾದ ವಿದ್ಯಾರ್ಥಿಗಳ ಕೋಮುವಾದೀಕರಣ ಕಾರ್ಯಕ್ರಮ ಎಂಬುದು ಸ್ಪಷ್ಟವಾಗುವಂತಿದೆ. ಈಗಾಗಲೇ, ಇದರ ನೇತೃತ್ವ ವಹಿಸಬೇಕಾದ ಅಧ್ಯಾಪಕ ವೃಂದದಲ್ಲಿ ಈ ಬಗ್ಗೆ ಅಸಮಾಧಾನದ ಹೊಗೆ ಏಳಲಾರಂಭಿಸಿದೆ."

>>>ಪೋಲಿಸರ ಕಾರ್ಯಾಚರಣೆ ಬಗ್ಗೆ ಅನುಮಾನ ಇದ್ದಲ್ಲಿ ತಾವು ಯಾಕೆ ಒಂದು ಒಂದು ದಾವೆ ಹೂಡಬಾರದು? ಆಗ ನಿಮ್ಮ ಹೊರಾಟ ಹಾರಟ ಇನ್ನು ಯಶಸ್ವಿಯಗುವುದಿಲ್ಲವೆ? ಯಾಕೆ ಸುಮ್ಮನೆ ಒಂದು ಬ್ಲಾಗ್ ನಲ್ಲಿ ಬರೆಯುತ್ತೀರ ಪೋಲಿಸರ ಬಗ್ಗೆ? ಸಾರ್ವಜನಿಕರ ಹಣ ಬಳಸಿಕೊಂಡು ಎನೆಲ್ಲಾ ಆಗಿಲ್ಲ? ಒಬ್ಬ ಸನ್ಯಾಸಿನಿಗೆ ಸಂತ ಪದವಿ ನೀಡುತ್ತಿದ್ದಾರೆ ಎಂದು ಸರ್ಕಾರದ ಹಣದಲ್ಲೆ ಒಂದು ದೊಡ್ಡ ದಂಡೆ ವಿದೇಶಕ್ಕೆ ಪ್ರಯಾಣ ಬೆಳೆಸಿತ್ತಲ್ಲಾ? ಅವಾಗ ಎಲ್ಲಿ ಹೋಗಿತ್ತು ನಿಮ್ಮ ಈ concern? ಪ್ರತಿವರ್ಷ ಸಾವಿರಾರು ಕೋಟಿ ಹಣ ಒಂದು ಕೋಮಿನ ಜನರ ಧರ್ಮಿಕ ಪ್ರವಾಸಕ್ಕೆ ಹೋಗುತ್ತಿದೆಯಲ್ಲ.. ಅದು ನಾವೆಲ್ಲ ಕಟ್ಟುತ್ತಿರುವ ತೆರಿಗೆ ಹಣದ ಪಾಲೆ.. ಅದಕ್ಕೆ ಎಲ್ಲೂ ತಾವೂ ಮೂಗಿನ ಮೇಲಿಂದ ಬೆರಳು ಇಳಿಸಿ ಬ್ಲಾಗ್ ಮಾಡಿಲ್ಲ? ಒದಗಿಸಿರುವ ಸಾಮಗ್ರಿಗಳ ಬಗ್ಗೆ ಕೆಸರಿಕರಣ ಇದ್ದಲ್ಲಿ ಖಂಡಿತ ಖಂಡನೀಯ... ಅದನ್ನ ಯಾಕೆ ತಾವು ಈ ಬ್ಲಾಗ್ ನಲ್ಲಿ ಹಾಕಬಾರದು?
ಇನ್ನು ಅಸಮಾಧಾನ ವ್ಯಕ್ತಪಡಿಸಿರುವವರು ಯಾರು? ಆ ಅಧ್ಯಪಕರ ಪಟ್ತಿ ಕೊಡಿ.. ಅಧ್ಯಾಪಕರ ಗುಂಪಿನಲ್ಲಿ ಕಾನೂನು ಮೀರಿ ನಡೆಯುವವರು ಇರುತ್ತರೆ ಅನ್ನುವುದನ್ನು ಮರೆಯದಿರಿ. ಅಂತ ಕಾನೂನು ಪಾಲಿಸದವರ ಪರವಾಗಿ ವಕಾಲತ್ತು ವಹಿಸಿ online petition ಗಳು ಸಿಗುತ್ತವೆ.,, ಸದಾ ಪ್ರಚಾರ ಬಯಸುವ ಅನಂತಮೂರ್ತಿಗಳು ಕೂಡ ಕಾನೂನು ಬಲದವರಂತೆ ವರ್ತಿಸಿ ರಾಜ್ಯಪಾಲರ ಬಳಿ ಹೋಗಿದ್ದಾರೆ.. ಅಷ್ಟು ಕಾನೂನು ಪರವಾಗಿದ್ದಲ್ಲಿ ಸರ್ಕಾರದ ಕ್ರಮದ ವಿರುದ್ದ ಯಾಕೆ ಕಾನೂನಿನ ಮೊರೆ ಹೋಗಬಾರದು?

"ಸಂಘ ಪರಿವಾರಕ್ಕೆ ನಿಜವಾಗಿ ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇದ್ದರೆ, ಅದರ ತಿರುಳು ಅದಕ್ಕೆ ಗೊತ್ತಿದ್ದರೆ, ’ಸರಳ ಜೀವನ, ಉನ್ನತ ಚಿಂತನ’ ಎಂಬುದೇ ಈ ಸಂಸ್ಕೃತಿಯ ಧ್ಯೇಯ ವಾಕ್ಯ ಎಂದು ಅದು ಅರಿತಿರಬೇಕಿತ್ತು. "
>> ಈ ಧ್ಯೇಯ ವಾಕ್ಯದ ಮೇಲೆಯೆ ಸಂಘ ನಡೆಯುತ್ತಿರುವುದು. ಅದನ್ನ ತಮ್ಮಂತವರೀಮ್ದ ಹೇಳಿಸಿಕೊಳ್ಳುವ ದುರ್ಗತಿ ಸಂಘಕ್ಕೆ ಬಾರದಿರಲಿ ಎಂದೆಂದು. ಒಮ್ಮೆ ಹರಿಹರಪುರ ಶ್ರೀಧರ್ ಲೇಖನ ಒಂದಕ್ಕೆ ಬರೆದ ಕಾಮೆಂಟ್ ಓದಿ.
ಸಂಕುಛಿತ ಮನೋಬಾವನೆ ಬಿಟ್ಟು ಸಂಘ ನಡೆಸುತ್ತಿರುವ ಶಾಲೆಗಳು, ಅನಾಥಾಶ್ರಮಗಳು, ವೃದ್ದಶ್ರಮಗಳು, ವನವಾಸಿ ಕಲ್ಯಾಣ, ಇದೆಲ್ಲದರ ಬಗ್ಗೆಯೂ ಬರೆಯಿರಿ. ಮಾತೆದ್ದಿರೆ, ಗೋಳ್ವಲ್ಕರ್, ಸಾವರ್ಕರ್ ಅವರ ಹೆಸರು ತರದೆ ನಿಮ್ಮ ಲೆಖನಗಳಲ್ಲಿ ಸಮಾಜವಾದತೆಯನ್ನು ನಿರೂಪಿಸಿ. ಎಣು ಸಾಧಿಸಲು ಹೊರಟ್ಟಿದ್ದೀರೀ ನಿವು? ಗೋಳ್ವಲ್ಕರ್ ಅಥವಾ ಸಾವರ್ಕರ ಅವರನ್ನು ಎಲ್ಲ ಲೇಖನಗಳಲ್ಲಿ ಎಳೆದು ತಂದು ಮುದಲಿಸಿ? ಓದುಗ ಚೆನಾಗಿ ಅರ್ಥಾ ಮಾಡಿಕೊಂಡೀದ್ದಾನೆ ಇವರ ಬಗ್ಗೆ ಕೂಡ.

"ನಮ್ಮ ನಾಗರೀಕತೆಯಲ್ಲಿ ’ಹಣ’ ಉತ್ಪತ್ತಿಯಾದದ್ದೇ ಸುಖಕ್ಕಾಗಿ. ಈಗ ಅದು ಅತಿಯಾದ ಆಧುನಿಕತೆಗೆ ಸಿಕ್ಕಿ ’ಮಜಾ’ ಆಗಿ ಪರಿವರ್ತಿತವಾಗಿದೆಯಷ್ಟೇ. ಕೆಲವರು ಈ ಹಡಬೆ ಹಣವನ್ನು ಅಧಿಕಾರ ಮತ್ತು ಪುಣ್ಯ ಸಂಪಾದನೆಗಳಿಗಾಗಿ ವೈಭವೋಪೇತ ಯಜ್ಞ - ಯಾಗ - ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಸಿ ’ಮಜಾ’ ಅನುಭವಿಸುತ್ತಾರೆ"

>>ಇದಕ್ಕೆ ಉತಮ ಉದಾಹರಣೆ ಎಂದರೆ ದೈತ್ಯ ರಾಜಕೀಯ ಪರಿಶ್ರಮವನ್ನು ಪಡೆದ ದೇವೆಗೌಡರು ಮತ್ತು ಅವರ ಕುಟುಂಬ, ದಿನ ಬೆಳಗಾದಲ್ಲಿ ಕಂಡ ಕಂಡ ಕಡೆ ಹೋಮ ಹವನ ನಡೆಸಿ "ಪುಣ್ಯ" ಕಟ್ಟಿ ಕೊಳ್ಳುತ್ತಿದ್ದರೆ ಜಾತ್ಯಾತೀತ ದಳದ ಮುಖಂಡರು. ತಮ್ಮ ಪ್ರಕಾರ ಇವರು ನೈತಿಕತೆ ಪ್ರದರ್ಶಿಸಬೇಕು,, ಸಮಾಜವಾದದಲ್ಲಿ ನೈತಿಕತೆ ಎಂದರೇನು ಒಮ್ಮೆ ವಿಸ್ರುತವಾಗಿ ಶ್ರುತಪಡಿಸಿ.. ತಾವು ಇನ್ನು ಒಂದು ಸಾಲು ಸೇರಿಸಿದ್ದರೆ ಚೆನಾಗಿತ್ತು,.ಕೆಲವರು ಇನ್ನೊಬ್ಬರನ್ನು ದೂಷಿಸಿ "ಮಜ" ಪಡೆಯುತ್ತಿರುತ್ತಾರೆ.. ಇವರಲ್ಲಿ ಕೆಲವರು ಹಡಬೆ ಹಣದಲ್ಲಿ ಮಜ ಪಡೆಯಲು ನೋಡುತ್ತಾರೆ, ಇನ್ನು ಕೆಲವರು ದ್ವೇಷ ತೀರಿಸಿ ಕೊಳ್ಳಲು ವಿರೋಧಿಸಿ ಬರೆದು, ಮಾತನಾಡೀ ಮಜ ಪಡುತ್ತಾರೆ,, ಎಲ್ಲರಿಗೂ ಒಟ್ಟಿನಲ್ಲಿ ಬೇಕಾಗಿರುವುದು "ಮಜಾ" ಅಷ್ಟೆ.

"ಉದಾಹರಣೆಗೆ ಇವರ ಸಂಸ್ಕೃತಿಯ ವಿವರಣೆಗಾಗಿ, ಪ್ರಮೋದ್ ಮುತಾಲಿಕ್ ಪಬ್ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ ಉಲ್ಲೇಖಿಸಿರುವ ’ಮಾತೃ ದೇವೋ ಭವ’ ಎಂಬ ಮಾತನ್ನೇ ನೋಡಿ. ಏನಿದರ ಅರ್ಥ?ಹೆಣ್ಣು ತಾಯಿಯಾಗಿ ಮಕ್ಕಳನ್ನು ಹೆರುತ್ತಾ, ಸಾಕುತ್ತಾ ಮನೆಯಲ್ಲಿ ದೇವರಂತೆ ಪೂಜೆಗೆ ಒಳಗಾಗಿ ಕೂರಬೇಕೆಂದೆ?"

>> ಈ ರೀತಿಯ ಅರ್ಥ ನಿಮ್ಮಂತವರಿಗೆ ಮಾತ್ರ ಹೊಳೆಯಲು ಸಾಧ್ಯ. ಮಾತ್ರೊದೇವೋ ಭ್ಹವ , ಅದರ ಮುಂದೆ, ಪಿತೃ, ಆಚಾರ್ಯ, ಅತಿಥಿ ದೇವೊ ಭವಾ ಅನ್ನುವುದೂ ಕೂಡ ಇದೆ,, ಇದರ ಬಗ್ಗೆ ತಮ್ಮ ವಾಖ್ಯಾನ? ಮಾತ್ರುದೇವೊ ಬವ ಇದರ ಬಗ್ಗೆ ತಾವು ಅರ್ಥೈಸಿದಂತೆ ಅರ್ಥೈಸಿದಲ್ಲಿ ಎಲ್ಲರೂ ಮನೆಯಲ್ಲಿ ಪೂಜೆಗೆ ಒಳಪಡಬೇಕಾಗುತ್ತದೆ, ಒಬ್ಬ ವ್ಯಕ್ತಿ, ತಂದೆ, ಗುರು ಅಥವಾ ಕಡೆ ಪಕ್ಷ ಒಮ್ಮೆಯಾದರು ಅತಿಥಿಯಾಗಿಯೆ ಇರುತ್ತಾನೆ..
ತಮ್ಮ ಮಕ್ಕಳು ತಮ್ಮನ್ನು ದೇವರಂತೆ ಗೌರವಿಸಿಲ್ಲವೇ ? ಅಥ್ವಾ ತಾವೆ ತಮ್ಮ ತಂದೆ ತಾಯಿ, ಗುರುಗಳಿಗೆ ಗೌರವ ಕೊಟ್ಟಿಲ್ಲವೆ? ನಿಮ್ಮ ತಾಯಿಯನ್ನು ತಾವು ಬರೆದ ದೃಷ್ಟಿಯಲಿ ಎಂದಾದರೂ ನೋಡಿದ್ದೀರ? ಇಲ್ಲವಾದಲ್ಲಿ ಆ ರೀತಿ ವ್ಯಾಖ್ಯಾನಾ ಹೇಗೆ ಹೊಳೆಯಿತು? ಅಥ್ವಾ ಪ್ರಮೋದ್ ಮುತಾಲಿಕ್ ಯಾವ ಪ್ರೆಸ್ಸ್ ಗೋಷ್ಟಿಯಲ್ಲಿ ಇ ವ್ಯಾಖ್ಯಾನೆ ಕೊಟ್ಟಿದ್ದಾರೆ? ಅಥ್ವಾ ತಮಗೆ ಎನಾದರು ವೈಯಕ್ತಿಕವಾಗಿ ಸಂಪರ್ಕಿಸಿ ಈ ಮಾತುಗಳನ್ನು ಹೇಳಿದ್ದರೆ? ಇಲ್ಲವಾದಲ್ಲೆ ಇದನ್ನು ಹೇಗೆ ಊಹಿಸಿದಿರಿ?

"ಆದುದರಿಂದ ಸಂಘ ಪರಿವಾರದ ನೈತಿಕ ಪಾರುಪತ್ತೇದಾರರೇ, ನಿಮ್ಮ ಈ ಪುಣ್ಯಭೂಮಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ನೆಲೆಗೊಳಿಸುವ ಪವಿತ್ರ ಕಾರ್ಯಕ್ಕಾಗಿ ನೀವು ಮೊದಲು, ಶ್ರೀರಾಮ ಸೇನೆಯ ನಾಯಕರದೂ ಸೇರಿದಂತೆ ನಿಮ್ಮ ನಾಯಕ ಗಣದ ಆಸ್ತಿ- ಪಾಸ್ತಿ, ಅವರು ಪೋಷಿಸುತ್ತಿರುವ ಹಣ ಸಂಸ್ಕೃತಿಯ ನೈತಿಕ ಪಾರುಪತ್ತೇದಾರಿಕೆ ನಡೆಸಿ. ಅವರ ಬದುಕಿನ ಶೈಲಿಯನ್ನೊಮ್ಮೆ ಹತ್ತಿರದಿಂದ ಅವಲೋಕಿಸಿ. ನಿಮ್ಮ ಮುಖ್ಯಮಂತ್ರಿ, ಮಂತ್ರಿಗಳ ಊರುಗಳಲ್ಲಿ ಆಸ್ತಿ-ಪಾಸ್ತಿಗಳ ಬೆಲೆ ಏಕೆ ಯದ್ವಾ ತದ್ವಾ ಏರಿದೆ ಎಂಬುದನ್ನು ಸ್ವಲ್ಪ ಪರಿಶೀಲಿಸಿ."

>>ತಾವು ಬರೆದಿರುವುದು ನೋಡಿದರೆ ಬೇರೇ ರಾಜಕಾರಣಿಗಳು ದುಡ್ಡೇ ಮಾಡಿಲ್ಲ. ಎಲ್ಲಾ ಹೊಟೆ ಬಟ್ಟೆಗೆ ಚಿಂತೆ ಮಾಡುತ್ತಾ ಇದ್ದಾರೆ.. ೧೦-೨೦ ಎಕರೆ ಜಮೀನು ಇಟ್ಟುಕೊಂಡು ರಾಜಕೀಯಕೆ ಬಂದವರು ಇಂದು ಕೋಟಿಗಟ್ಟಲೆ ಆದಯ ಚುನಾವಣಾ ಆಯೋಗಕ್ಕೆ ತೋರಿಸುವ ಮಟ್ಟಕ್ಕೆ ಬಂದಿದ್ದರೂ, ಅವರು ನೈತಿಕತೆ ಪ್ರದರ್ಶಿಸಲು ಅರ್ಹರು ಸಮಾಜವಾದಿಗಳ ಕಣ್ಣಿಗೆ,, ಏನು ಕಳೆದ ೬ ತಿಂಗಳಲ್ಲಿ ಜಮೀನು ಬೆಲೆ ಏರಿದಯೆ? ೨೦೦೪ ರಲ್ಲಿ ೨೦೦-೩೦೦ ಇದ್ದ ಸೈಟ್ಗಳು ೨೦೦೦ , ೨೦೦೭ನೆ ಇಸವಿಯಲ್ಲಿ.ಮುಟ್ಟೀವೆ ಚದುರ ಅಡಿಗೆ., ಇದೆಲ್ಲ ಬಿಜೆಪಿಯವರು ಮಾಡಿಸಿದ್ದೆ? ಯಾವ ಊರಿನಲ್ಲಿ ಜಮೀನು ಬೆಲೆ ಕಮ್ಮಿ ಇದೇ ಹೇಳಿ ಸ್ವಾಮಿ,, ಸಮಾಜವಾದಿಗಳು ಆಳಿದ ಉತರ ಪ್ರದೇಶದಲ್ಲಿ ೧೦೦೦ ರು ಗೆ ೧ ಎಕರೆ ಭೂಮಿ ಸಿಗುತ್ತ? ದೇವೆಗಊಡರು ಬಿಡದಿ ಬಳಿ ವಿಮಾನ ನಿಲ್ದಾಣಕ್ಕೆ ಯಾಕೆ ಒತ್ತಾಯ ಮಾಡುತ್ತ ಇದ್ದರು ಒಂಂಎ ಪ್ರಶ್ನೆ ಮಾಡಿದ್ದೀರ? ನೈಸ್ ಗೆ ಈ ಪಾಟಿ ವಿರೋಧತ್ೋರುವ ಇವರು, ಅದು ಯಾರ ಕಾಲದಲ್ಲಿ "approve" ಆಗಿತ್ತು ಅಂತ ಕೇಳಿದ್ದೀರ? ಗೊಟ್ಟೀಗೆರೆ ಬಳಿ ಪರಿಸರಕ್ಕೆ ಹಾನಿ ಯಗುತ್ತೆ ಅಂತ ಕೇಸ್ ಹಾಕಿರುವ ಗೌಡರು, ತಾವು ಮಡುತ್ತಿರುವ ಹೋಮ ಹವನಗಳಿಂದ ಪರಿಸರಕ್ಕೆ ಯಾವ ಘನ ಕೊಡುಗೆ ನೀಡುತ್ತಿದ್ದಾರೆ? ತಾವು ಈಗಿನ ಮುಖ್ಯಮಂತ್ರಿ ಹಾಗೂ ಮಂತ್ರಿಗಳಂತೆಯೆ ಹಿಂದೆ ಆಳಿದವರ ಬಗ್ಗೆಯೂ ತನಿಖೆ ಮಾಡಿ ಎಂದು ಒತ್ತಯಿಸಬೇಕಿತ್ತು ಸ್ವಾಮಿ.. ಮಾಲ್ಡಿವ್ಸ್ ಪ್ರವಾಸಕ್ಕೆ ದುಡ್ಡು ಎಲ್ಲಿಂದ ಬಂತು ಅಂತ ಕುಮಾರಸ್ವಾಮಿ ನ ಕೇಳಿ., ಕುಮಾರಸ್ವಾಮಿಗೆ ೨೦ ಲಕ್ಷ ರುಪಾಯಿ ವಾಚ್ ಕೊಟ್ತ ಜಮೀರಹಮದ್ ಗೆ ಹಣ ಎಲ್ಲಿಂದ ಬಂತು ಆ ಪಾಟಿ? ಕುಮಾರ ಸ್ವಾಮಿಯವರಬ ಳಿ ಇರುವ ಕಾರಗಳ ಹಣದ ಮೂಲ ಕೇಳಿದ್ದೀರ? ಒಮ್ಮೆ ಪ್ರೊ: ವೆಂಕಟಗಿರಿಗೌಡರ ಪುಸ್ತಕ ಓದಿ, ದೇವೆಗೌಡರ ಕುಟುಂಬ ಮಾಡಿರುವ ಆಸ್ಥಿಯ ವಿವರ ದಾಖಲಿಸಿದ್ದಾರೆ, . ಆಮೇಲೆ ನೈತಿಕತೆ ಅನ್ನುವ ಪದ ಬಳಸಿ.

ಒಂದು ಕೆಲ್ಸ ಮಾಡಿ, ಈ ಬ್ರಷ್ಟ ರಾಜಕಾರಣಿಗಳಿಗೆ ಬುದ್ದಿ ಕಲಿಸಲು ನಿಮ್ಮ ಆಸ್ಥಿಯನ್ನು ೨೦ ವರ್ಷ ಹಿಂದೆ ಇದ್ದ ಬೆಲೆಗೆ ಮಾರಿ , ಪತ್ರಿಕೆಗಳಲ್ಲಿ ಜಾಹಿರಾತು ಕೊಡಿ, ಇದೆ ತತ್ವವನ್ನು ನಿಮ್ಮ ಕುಟುಂಬ, ನೀವು ಹೇಳಿರುವಂತೆ ನೈತಿಕತೆ ಪ್ರದರ್ಶಿಸಬೇಕದ ದೇವೆಗೌಡರ ಕುಟುಂಬ ಹಾಗು ನಿಮ್ಮಂತೆ ಸಮಾಜವಾದ ನಂಬಿರುವ ಕುಟುಂಬಗಳಿಗೆ ಹಾಗು ನಿವು ಬಾಷಣ ಮಾಡುವಲೆಲ್ಲಾ ಹೇಳಿ. ಆಗ ನೋಡಿ "ನಿಜವಾದ ಭಾರತೀಯ ಬದುಕಿನಲ್ಲಿನ ಸಾಂಸ್ಕೃತಿಕ ಬದಲಾವಣೆಯ ಸ್ವರೂಪವನ್ನು" . ನಿಮ್ಮ ಕ್ರಿಯೆಯಿಂದ ಆದರ್ಶವಾದಿಗಳಾಗಿ, ಕೇವಲ ಬ್ಲಾಗ್ ನಲ್ಲಿ ಬರೆಯುವುದರಿಂದ ಅಲ್ಲ..ಅಥವಾ ಸಂಘ ಪರಿಪಾರವನ್ನು ತೆಗಳುವುದರಿಂದ ಅಲ್ಲ.

ರಾಮಸೇನೆಯ ದಾಳಿ ನಿಜವಾಗಿಯೂ ಖಂಡನಾರ್ಹ, ಇದನ್ನು ಮುತಾಲಿಕ್ ಕೂಡ ಕ್ಶಮೆ ಯಾಚಿಸಿದ್ದಾರೆ. ಯರೂ ಕೂಡ ಭಾರತೀಯ ಸಂಸ್ಕ್ರುತಿಯನ್ನು ಗುತ್ತಿಗೆ ತೆಗೆದು ಕೊಂಡಿಲ್ಲ.. ಅವರವರ ದ್ರುಷ್ಟಿ ಕೋನಕ್ಕೆ ತಕ್ಕಂತೆ ಮಾತಡುತ್ತಾರೆ, ನಡೆಯುತ್ತಾರೆ.. ನಿಮಗೆ ಯಾರದಾರು ಸಮಾಜವಾದವನ್ನು ಗುತ್ತಿಗೆ ತೆಗೆದು ಕೊಂಡಿದ್ದೀರ ಅಂತ ಕೇಳಿದ್ದಾರ? ನೀವು ಹೇಗೆ ನಿಮ್ಮ "ಇಸಂ" ಕಣ್ಣಿನಿಂದ ನೋಡುತ್ತೀರೋ, ಅವರೂ ಹಾಗೆಯೆ.. ಅವರು ಒಂದು ಹೆಜ್ಜೆ ಮುಂದೆ ಹೋಗಿ ಹೊಡೆದಿದ್ದಾರೆ ಅಷ್ಟೆ.

ಬಿಜೆಪಿ ಸರ್ಕಾರ ಸಾಚ ಎಂದು ನಾನೇನು ಬರೆಯುತ್ತಿಲ್ಲ.. ಅದು ಅದಿಕಾರಕ್ಕೆ ಯವ ಮಟ್ಟಕ್ಕೆ ಇಳಿಯಲೂ ಸಿದ್ದ ಅನ್ನುವುದನ್ನು ತೋರಿಸಿಕೊಟ್ಟೀದೆ, ರಾಜಕೀಯದಲಿ ತಾವೆ ಚಾಣಾಕ್ಷರು ಎಂದು ತಲೆ ಎತ್ತಿ ತಿರುಗುತ್ತಿದ್ದವರಿಗೆಲ್ಲ ಅದು ಸರಿಯಾದ ಪಟ್ಟು ಕೊಟ್ಟಿದ್ದೆ. ಆದರೆ ಸಂಘದಿಂದ ಅದು ಬಹಳ ದೂರ ಸರಿದಿದೆ,, ಎಷ್ಟು ಅಂದರೆ ಸಂಘದ ಸಿದ್ದಾಂತಗಳನ್ನು ಮತ್ತೆ ಅಪ್ಪಿ ಕೊಳ್ಲಲಾರದಷ್ಟು, ಆದರೆ ಕಾಮಾಲೆ ಕಣ್ಣಿಗೆ ಸದಾ ಹಳದಿಯಗಿ ಕಾಣೂವಂತೆ ಕೆಲವರಿಗೆ ಸಂಘ ಬಿಜೆಪಿ ತತ್ವ ಒಂದೆ ಎಂದು ಕಂಡರೆ ಮೊದಲು ಕಾಮಲೆ ರೋಗಕ್ಕೆ ಮದ್ದ್ದು ಕೊಡಬೇಕಾಗುತ್ತದೆ.. ಈ ದಿಕ್ಕಿನಲ್ಲಿ ಶ್ರೀ ಸುದ್ದತ್ತ ರವರು ಸರಿಯಾಗಿ ಕಾಮೇಂಟ್ ಮಾಡಿದ್ದಾರೆ. ಬಿಜೆಪಿ ಮಾಡುತ್ತಿರುವುದು ಕೇಸರಿಕರಣವಾದಲ್ಲಿ ೫೦ ವರ್ಷ ಕಾಂಗ್ರೆಸ್ಸ್ ಮಾಡಿದ್ದು, "ಸಮಾಜವಾದಿ" ಮುಲಾಯಂಸಿಂಗ್ ಮಾಡುತ್ತಿರುವುದು "ಹಸಿರೀಕರಣ" .

ಭಾಸ್ಕರ್,
ಉತ್ತಮ ಪ್ರತಿಕ್ರಿಯೆ. ಬಹುಶ: ನಿಮ್ಮ ನೇರ ನುಡಿಗಳು, ಸುತ್ತಿಬಳಸಿ ಅದೇ ಹಳೇ ತಬಲ ಬಾರಿಸುವವರಿಗೆ ತಿಳಿಯೊಲ್ಲ ಬಿಡಿ.

ಇವರ ಅ-'ಕೇಸರೀಕರಣ', ಸಾಮಾಜಿಕ ನ್ಯಾಯದ ಆಸೆ-ಭರವಸೆ, ಲಂಚಮುಕ್ತ ಸಮಾಜ ನಿರ್ಮಾಣ, ಜಾತ್ಯತೀತತೆ - ಇವುಗಳು ದೇವೇಗೌಡ, ಕುಮಾರಸ್ವಾಮಿ, ಡಿ.ಕೆ.ಶಿ, ಖರ್ಗೆ, ದೇಶಪಾಂಡೆ ಇವರುಗಳ ಮೇಲೆ ನಿಂತಿದೆ ಎಂದರೆ ಇವರ ವಿಚಾರಧಾರೆಯ ಪ್ರಭಾವ ಎಷ್ಟ್ರ ಮಟ್ಟಿಗೆ ಸಂಘಟಿತವಾಗಿದೆ ಎಂದು ತಿಳಿಯುತ್ತದೆ. ೫೦ ವರ್ಷಗಳ ಕಾಲ ಈ ದೇಶ, ೬೦ ವರ್ಷಗಳ ಕಾಲ ಈ ರಾಜ್ಯ, ಇವರ ಸಮಾಜವಾದಿ (ನೆಹರು, ಲೋಹಿಯ) ಪ್ರೇರಿತ, ಮತ್ತು ಎಡಪಂಥೀಯ ವಿಚಾರಧಾರೆಗಳ 'ಪ್ರಯೋಗಾಲಯ' ವಾಗಿದ್ದರೂ ಸಾಮಾಜಿಕ ನ್ಯಾಯ ಎಲ್ಲಿದೆ?

ಎಲ್ಲದ್ಕ್ಕೂ ಗೋಳ್ವಲ್ಕರ್, ಸಾವರ್ಕರ್ ರನ್ನು ದೂಶಿಸುವ ಇವರಿಗೆ ಅವರ ವಿಚಾರಧಾರೆಗಳ ಜೊತೆಗೆ 'ಇವರುಗಳ' ಸ್ವತ್ತಾದ ಗಾಂಧಿ , ಅಂಬೇಡ್ಕರ್ ತತ್ವಗಳನ್ನು ಬರಿಯ ಮಾತಲ್ಲಲ್ಲದೇ ಆಚರಣೆಯಲ್ಲೂ ತಂದಿರುವ ಸಂಘಟನೆ ಯಾವುದು ಎಂದು ಕಣ್-ತೆರೆದು ನೋಡಲು ಇವರುಗಳಿಗೆ ಭಯ.

ನನಗೆ ತಿಳಿದ ಮಟ್ಟಿಗೆ ಸಂಘ ಪರಿವಾರವು, ಒಳ್ಳೆಯ ಚಿಂತನೆಗಳನ್ನು ಎಲ್ಲ ಕಡೆಗಳಿಂದಲೂ ಪಡೆದುಕೊಂಡಿವೆ. ವಿವೇಕಾನಂದರು ಹೇಳಿರುವ 'ಪಶ್ಚಿಮದ' ಶಿಸ್ತು, ಕಾರ್ಯಪ್ರವ್ರುತ್ತಿ, ಅರವಿಂದರ ದಾರ್ಶನಿಕ ತತ್ವಗಳು, ಗಾಂಧಿಜಿಯವರ ಸರಳ ಜೀವನ, ವಿಚಾರ 'ಮತ್ತು' ಆಚರಣೆಯಲ್ಲಿ ಅಸ್ಪ್ುಶ್ಯತೆಯ ವಿರೋಧ, ಮತ್ತು ಪ್ರಾಮಾಣಿಕತೆ.

ಯಾವುದೋ ಒಂದು ಲೇಖನ, ಅನಿಸಿಕೆ ಯನ್ನು out-of-context quote ಮಾಡಿ, ಇನ್ನೂ 'ಮನುವಾದಿಗಳು' 'ವೈದಿಕಶಾಹಿ' ಎಂದು ದೂರುವುದರಲ್ಲೆ ಕಾಲ ಕಳೆಯುತ್ತಾರೆ ಹೊರತು, ತಾವುಗಳು ಸಮಾಜಕ್ಕೆ ಏನು ಮಾಡಿದ್ದೇವೆ ಎಂದು ನೋಡಿಕೊಳ್ಳಲಿ (ಮಾತಾಡುವುದು ಬಿಟ್ಟು).

ಲೇಖನಕ್ಕೆ ತಕ್ಕ ಪ್ರತ್ಯುತ್ತರನೀಡಿದ್ದೀರಿ ಭಾಸ್ಕರರವರೆ. ನಿಮ್ಮ ವಸ್ತು ನಿಷ್ಟ ವಿವರಣೆಗಳಿಗೆ ಲೇಖಕರು ಉತ್ತರಗಳನ್ನು ನೀಡುವರೇ ಎಂಬುದನ್ನು ಕಾದುನೋಡಬೇಕಾಗಿದೆ. ನೀವು ಪ್ರತಿಯೊಂದು ಅಂಶಕ್ಕೂ(ಪಾಯಿಂಟ್ ಬ್ಯೈ ಪಾಯಿಂಟ್) ಉತ್ತರಿಸಿದಂತೆ ಅವರೂ ಎಲ್ಲದಕ್ಕೂ ವಿವರಣೆಯನ್ನು ತಾತ್ವಿಕವಾಗಿ ನೀಡುತ್ತಾರೋ ಕಾದು ನೋಡುವ.

ಧನ್ಯವಾದಗಳು ಕೇಶವ ಪ್ರಸಾದರಿಗೆ. ನಿಮ್ಮ ಹಾಗೆಯೆ ನಾನು ವಿವರಣೆ, ಉತ್ತರ ಇವುಗಳ ನಿರೀಕ್ಷೆಯಲ್ಲಿ ಇದ್ದೇನೆ.. ನನ್ನ ಅನುಭವದಲ್ಲಿ ಬಹುಶಃ ಅದು ಬರಲ್ಲ ಅನ್ನಿಸುತ್ತೆ.. maximum ನನಗೆ ಕೋಮುವಾದಿ ಪಟ್ತ ಕೊಡಬಹುದು, ಇಲ್ಲ ನಾನು ಬಾವಿಯಲ್ಲಿರುವ ಕಪ್ಪೆ ಎಂದು ಮೂದಲಿಸಬಹುದು ಅಥವಾ ನನ್ನ ಭಾಷೆಯನ್ನು ಮೂದಲಿಸಿ ಜರಿಯಬಹುದು.. :)
ಉತ್ತರ ಕೊಡಲಾಗದೆ ಆಗಲೆ ಸುದತ್ತ ಅವರಿಗೆ ಬಂದ ಪ್ರತಿಕ್ರಿಯೆ ಗಮನಿಸಿದ್ದೀರಲ್ಲ...

ಅಬ್ಬಬ್ಬಾ.... global warming ಯಾಕೆ ಇಷ್ಟೊಂದು ಆಗ್ತಿದೆ ಅಂತ ಈಗ ತಿಳಿಯಿತು. ದೇಶದೆಲ್ಲೆಡೆ, ಅಲ್ಲ, ಭೂಮಂಡಲದೆಲ್ಲೆಡೆ ದೇಶ, ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಇತ್ಯಾದಿ ಇತ್ಯಾದಿಗಳ ಬಗ್ಗೆ ಇಷ್ಟೊಂದು ’ಬಿಸಿ ಬಿಸಿ’ ಚರ್ಚೆ, ವಿವಾದ, ಚಳುವಳಿಗಳು, ಹೊಡೆದಾಟ, ಕೊಲೆ, ಕಡೆಗೆ ಯುದ್ಧಗಳೂ ನಡೆಯುತ್ತಿರುವಾಗ ಭೂಮಿ, ಪಾಪ, ’ಬಿಸಿ’ ಯಾಗದೇ ಹೇಗೆ ಉಳಿದೀತು :)

(ಮನಸ್ಸುಗಳು ಸ್ವಲ್ಪ ತಿಳಿಯಾಗಲಿ ಅಂತ ನನ್ನಾಸೆ)

ಡಿಎಸ್ಸೆನ್ ಅವರೇ
ನಿಮ್ಮ ಲೇಖನ ನನಗೆ ಖಂಡಿತ ಏಕಪಕ್ಷೀಯವಾಗಿ ಕಂಡಿರಲಿಲ್ಲ. ನನ್ನ ಪ್ರತಿಕ್ರಿಯೆಯಲ್ಲಿ ಕೂಡ ನಾನು ಭಾಜಪ ಆಗಲಿ ಅಥವಾ ಕಾಂಗ್ರೆಸ್ ಆಗಲಿ ’ಸಾಚಾ’ ಎಂದು ಪ್ರತಿಪಾದಿಸಿಲ್ಲ. ಆದರೆ, ನಿಮ್ಮ ಉತ್ತರ ಖಂಡಿತ ಏಕಪಕ್ಷೀಯ ಎಂದೆನ್ನಿಸಿತು. ನನ್ನ ಅನಿಸಿಕೆಗೆ ಕಾರಣಗಳಿವು

೧. ಅಫ್ಜಲ್ ಗುರು ಪ್ರಕರಣದಲ್ಲಿ ಅವನಿಗೆ ಶಿಕ್ಷೆ ಆಗದೆ ಇರಲು ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಓಲೈಕೆ ಕಾರಣವಲ್ಲವೇ? ಕೇಂದ್ರ ಸರ್ಕಾರ ಬಯಸಿದಲ್ಲಿ ಅದು ರಾಷ್ಟ್ರಪತಿಗಳ ಗಮನ ಸೆಳೆಯಲು ಅಸಾಧ್ಯವೇ? ಇನ್ನು ಗುರು ಪ್ರಕರಣದಂತೆ ಹಲವು ಬಗೆಯ ಅರ್ಜಿಗಳು ಅಧ್ಯಕ್ಷರ ಮುಂದೆ ಇದೆ ನಿಜ. ಆದರೆ ನಮ್ಮ ಸಂಸತ್ ಭವನದ ಮೇಲೆ ದಾಳಿ ಮಾಡಿದವರು ಇನ್ಯಾರು ಇಲ್ಲ ಅಲ್ಲವೇ?

೨. ’ಪಬ್ ಭರೋ’ ಸಾಂಕೇತಿಕವೇ? ಗಾಂಧೀಜಿಯವರು ಈ ಮಾತನ್ನು ಒಪ್ಪುತ್ತಿದ್ದರೇ? ಮಂಗಳೂರು ಘಟನೆ ತಪ್ಪು. ಅದನ್ನು ಕೂಡ ಎಲ್ಲರೂ ಖಂಡಿಸಿದ್ದೇವೆ. ಆದರೆ ಸ್ವಾತಂತ್ರ ಹೋರಾಟಕ್ಕೆ ನಡೆದ ’ಜೈಲ್ ಭರೋ’ ರೀತಿ ಈಗ ’ಪಬ್ ಭರೋ’ ಮಾಡಬೇಕೆ? ಅದನ್ನು ಕೇಂದ್ರ ಮಂತ್ರಿಯೊಬ್ಬರು ಹೇಳಿಕೆ ಕೊಟ್ಟದ್ದು ಬೇಜವಾಬ್ದಾರಿಯುತವಲ್ಲವೇ?

೩. ಒರಿಸ್ಸಾ ಘಟನೆಯಲ್ಲಿ ಸರ್ಕಾರ ಆಪಾದಿತರನ್ನು ಭಂದಿಸಿ ಮೊಕದ್ದಮೆ ಹೂಡಿದೆ, ನಿಜ. ಅದೇ ರೀತಿ ಭಾಜಪ ಸರ್ಕಾರ ಕೂಡ ಮುತಾಲಿಕರನ್ನು ಭಂಧನಕ್ಕೊಳಪಡಿಸಿದೆಯಲ್ಲ? ಹಾಗಿದ್ದಲ್ಲಿ ಅದು ಕೇಸರೀಕರಣ ಹೇಗಾಯ್ತು?

ಹಾಗು ಇನ್ನು ಕೆಲವು ಪ್ರಶ್ನೆಗಳು

೧. ಮಂಗಳೂರು ಘಟನೆ ನಡೆದ ನಂತರ ಒಂದು ವಾರವಾದರೂ ನಮ್ಮ ಪತ್ರಿಕೆಗಳು ರಾಷ್ಟ್ರ ಮಟ್ಟದಲ್ಲಿ ಅದರ ಬಗ್ಗೆ ಬರೆಯುತ್ತಿದ್ದವು. ಅದೇ ಕಳೆದ ಬಾರಿ ನಕ್ಸಲರ ಹಲ್ಲೆಯ ಕುರಿತು ಈ ಮಟ್ಟದ ಚರ್ಚೆ ಎಲ್ಲಿ ನಡೆದಿತ್ತು? ಇದು ಕೇವಲ ನಕ್ಸಲ್ ಘಟನೆಗೆ ಸಂಭಂದಿಸಿದ ಪ್ರಶ್ನೆಯಲ್ಲ.
೨. ನನ್ನ ಪ್ರತಿಕ್ರಿಯೆಯಲ್ಲಿ ನನ್ನ ಮುಖ್ಯ ವಾದ ’ಈ ಘಟನೆಗೆ ಅತಿ ಮಹತ್ವ ಕೊಟ್ಟು ನಾವು ಮುತಾಲಿಕ್ ರನ್ನು ಅನವಶ್ಯಕ ಹೀರೋ ಮಾಡಿದ್ದೇವೆ’ ಎಂಬುದು. ಅದು ತಪ್ಪೇ? ಶ್ರೀರಾಮ ಸೇನೆಯನ್ನು ನಿರ್ಲಕ್ಷಿಸ ಬೇಡಿ. ಆದರೆ ಅದಕ್ಕೆ ಅತಿ ಮಹತ್ವ ಕೊಟ್ಟಲ್ಲಿ ಮುತಾಲಿಕ್ ಒಂದು ಗುಂಪಿನ ದೊಡ್ಡ ನಾಯಕರಾಗುತ್ತಾರೆ. ಅದಕ್ಕೆ ಹೊಣೆ?

ನಾನು ಭಾಜಪ ಬೆಂಬಲಿಗನಲ್ಲ. ಸಂಘ ಪರಿವಾರದ ಬೆಂಬಲಿಗನೂ ಅಲ್ಲ. ಆದರೆ ಪ್ರಶ್ನೆಗಳನ್ನು ನಿಷ್ಪಕ್ಷಪಾತಿಯಾಗಿ ಉತ್ತರಿಸಲು ಪ್ರಯತ್ನಿಸುತ್ತೇದೆನೆ ಅಷ್ಟೆ.

ಭಾಸ್ಕರ ಅವರ ಪ್ರತಿಕ್ರಿಯ ಅತ್ಯಂತ ತೀಕ್ಷ್ಣವಾಗಿದೆ. ಆದರೂ ಅವರ ಲೇಖನ ಓದಿ ಉಂಟಾದ ಇನ್ನಷ್ಟು ಅನುಮಾನಗಳು
- ಕೇಸರೀಕರಣ ಆಗದಂತೆ ತಡೆಯಲು ಜಾತ್ಯತೀತರ ಅಗತ್ಯ ಇದೆ. ಆದರೆ ’ಜಾತ್ಯತೀತರು’ ಯಾರು? ಹಿಂದುಗಳಿಗೆ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕಾನೂನುಗಳನ್ನು, ಸವಲತ್ತುಗಳನ್ನು ತಂದ ಕಾಂಗ್ರೆಸ್ ಜಾತ್ಯತೀತ ಹೇಗೆ?
- ಪ್ರತಿ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿಯೊಂದು ಪಕ್ಷವೂ ಜಾತಿ ಲೆಕ್ಕದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ’ಸ್ಟಾರ್ ವಾಲ್ಯು’ ಇರುವರನ್ನು ಬಿಟ್ಟು. ಹಾಗಿದ್ದಲ್ಲಿ ’ಅತೀತರು’ ಯಾರು?
- ಸಂಪಂಗಿ ಅಂಥವರು ಆರಿಸಿ ಬಂದದ್ದೇ ದುರಾದ್ರುಷ್ಟಕರ. ಸಂಪಂಗಿ ಅವರನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿರುವ ಭಾಜಪ ನೀತಿ ಖಂಡನೀಯ. ಯಡಿಯೂರಪ್ಪನವರಲ್ಲಿ ನೈತಿಕತೆ ಎನ್ನುವುದು ಇದ್ದಿದ್ದರೆ ಮೊದಲು ಸಂಪಂಗಿಯನ್ನು ಪಕ್ಷದಿಂದ ಹೊರಗೆ ಎಸೆಯಬೇಕಿತ್ತು. ಇದು ಆ ಪಕ್ಷ ಅತಿ ಹೊಲಸಾದುದರ ಸಂಕೇತ.
- ತಾವು ಕಾಂಗ್ರೆಸ್ ಬಗ್ಗೆ ಹೇಳಿದ್ದು ಕೂಡ ನಿಜ. ಒಳಜಗಳ, ಅನಾಯಕತ್ವ (ಅಥವಾ ಅತಿ-ನಾಯಕತ್ವ)ದಿಂದ ಆ ಪಕ್ಷ ಬಳಲುತ್ತಿದೆ. ಆದರೆ ಅದಕ್ಕೆ ಆ ಪಕ್ಷದಲ್ಲಿ ಪ್ರಜಾಪ್ರಭುತ್ವದ ಕೊರತೆ ಇದಕ್ಕೆ ಕಾರಣ ಅಲ್ಲವೇ? ಮತ್ತೆ ಒಂದು ಕುಟುಂಬದ ಕಪಿ ಮುಷ್ಟಿಯಲ್ಲಿ ಒಂದು ಮಂತ್ರಿ ಹುದ್ದೆಗೂ "ಮೇಡಮ್" ಆಶೀರ್ವಾದ ಬೇಕಿರು ಪಕ್ಷ ಪ್ರಾದೇಶಿಕ ಮಟ್ಟದಲ್ಲಿ ಬೆಳೆಯಲು ಹೇಗೆ ಸಾಧ್ಯ? ಮೇಡಮ್ ಆಶೀರ್ವಾದದಿಂದ ಸನ್ಮಾನ್ಯ ಕ್ವಟ್ರೋಕಿ ಒಂದೇ ರಾತ್ರಿಯಲ್ಲಿ ಸ್ವಿಸ್ ಬ್ಯಾಂಕ್ ಅಕೌಂಟು ಖಾಲಿ ಮಾಡಿರುತ್ತಾರೆ. ಅಂಥ ನಾಯಕತ್ವದಿಂದ ನೈತಿಕತೆಯ ನಿರೀಕ್ಷೆಯೆ?

ಸುದತ್ತ ಇಲ್ಲಿ ಬೆಳೆ ಇದೆ ಅಂತ ಸುಟ್ಟುಕೊಂಡು ತಿನ್ನೊರೆ ಜ್ಯಾಸ್ತಿ ಆಗಿಬಿಟ್ಟಿದ್ದಾರೆ ನಮ್ಮಲ್ಲಿ ಅಲ್ಲವಾ , ಮೊದಲು ನಾವುಗಳು ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ನಾವುಗಳು ಮಾಡಿಕೊಂಡಿರುವ ನಾಯಕರುಗಳೆ ನಮ್ಮನ್ನು ಸುಟ್ಟಿಕೊಂಡು ತಿಂದುಬಿಡುತ್ತಾರೆ...

---ಗೌಡ್ರು

ಸುದತ್ತ ಅವರೆ.

ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ.. ಆದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುವುದೆ? ಅಥವಾ ಉತ್ತರ ಕೊಡಲಾಗದೆ ನಿಮ್ಮದು ವಿತ್ತಂಡ ವಾದ ಎಂದು ಮೂದಲಿಸುವರೆ? "ಕಾದು ನೋಡಿ"

ಪ್ರಿಯ ಸುದತ್ತ ಅವರೇ,
ಮೊದಲು ಒಂದಷ್ಟು ಪ್ರಶ್ನೆಗಳನ್ನು ಹಾಕಿದಿರಿ. ಆ ಪ್ರಶ್ನೆಗಳ ಆಧಾರದ ಮೇಲೆ, ನಿಮ್ಮೊಂದಿಗೆ ಸಂವಾದ ಸಾಧ್ಯವೆಂದು ಅವಕ್ಕೆ ನಾನು ಉತ್ತರ ಕೊಡುವ ಪ್ರಯತ್ನ ಮಾಡಿದೆ. ಈಗ ನೋಡಿದರೆ ನಿಮ್ಮ ಆ ಪ್ರಶ್ನೆಗಳನ್ನೇ ಬದಲಾಯಿಸಿಕೊಂಡು/ಪರಿಷ್ಕರಿಸಿ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದೀರಿ! ಈಗ ಅವಕ್ಕೆ ಉತ್ತರ ಕೊಟ್ಟರೆ, ಅವನ್ನು ಮತ್ತೆ ಬದಲಾಯಿಸಿಕೊಂಡು ಮತ್ತಷ್ಟು ಪ್ರಶ್ನೆಗಳನ್ನು ಕೇಳುವುದು ಖಚಿತವೆಂದು ನಿಮ್ಮ ಪರಿಷ್ಕ್ರತ ಪ್ರಶ್ನೆಗಳೇ ಸೂಚಿಸುತ್ತವೆ. ದಯವಿಟ್ಟು ಕ್ಷಮಿಸಿ,ಇದು ಮುಗಿಯದ ’ವಾದ-ವಿವಾದ’ ಮಾತ್ರವಾಗಲಿದೆ. ಅದರಲ್ಲಿ ನನ್ನ ಆಸಕ್ತಿಯಿಲ್ಲ.
ಮೂಲ ಲೇಖನದಲ್ಲಿನ ಭಾರತದ ಇಡೀ ರಾಜಕೀಯ ಅವನತಿಯನ್ನು ಕುರಿತ ನನ್ನ ಆತಂಕದ ಕಡೆಗಾಗಲೀ ಮತ್ತು ಅದಕ್ಕೆ ಕಾರಣವೆಂದು ನಾನು ಸೂಚಿಸಿರುವ ಅಂಶದ ಕಡೆಗಾಗಲೀ ನಿಮ್ಮ ಗಮನ ಹೋಗದಿರುವುದು ಮತ್ತು ಆ ಬಗ್ಗೆ ನಿಮ್ಮಿಂದ ಒಂದು ಮಾತೂ ಹೊರಬರದಿರುವುದು ಈ ನನ್ನ ನಿರಾಸಕ್ತಿಗೆ ಮುಖ್ಯ ಕಾರಣವೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲವೆಂದು ಭಾವಿಸುತ್ತೇನೆ.
-ಡಿ.ಎಸ್.ನಾಗಭೂಷಣ

ಬಹುಶಃ ಪ್ರೊ || ಬಾಲೂ ಅವರಿಗೂ ಇದೇ ರೀತಿಯ ಅನುಭವ ಆಗಿದೆ ಅನ್ನಿಸುತ್ತದೆ ತಮ್ಮ ಪ್ರಶ್ನೆ/ಪ್ರತಿಪ್ರಶ್ನೆಗಳನ್ನು ಕೇಳಿ..
ಅದಕ್ಕೆ ಅವರು ಹಾಗೆ ಉತ್ತರಿಸಿರಬಹುದು ನಿಮಗೆ.

ಆದರೆ ಸುದತ್ತ ಅವರು ನೀವು ಬಾಲೂ ಅವರಿಗೆ ಅಂದಂತೆ ಎನಾದರು ಅನ್ನುತ್ತಾರೆ ಅಂತ ನನಗೆ ಅನ್ನಿಸುವುದಿಲ್ಲ.

ಮಾನ್ಯ ಡಿಎಸ್ಸೆನ್ ಅವರೇ,
ನಾನು ಕೂಡ ನಿಮ್ಮೊಂದಿಗೆ ಸಂವಾದ ಸಾಧ್ಯವೆಂದು ತಿಳಿದು ಈ ಪ್ರಶ್ನೆಗಳನ್ನು ಹಾಕಿದ್ದೆ. ಪ್ರಶ್ನೆಗಳನ್ನು ಬದಲಾಯಿಸಿದ್ದಲ್ಲಿ ಅದರ ಉದ್ದೇಶ ನನ್ನ ವಾದವನ್ನು ಪರಿಷ್ಕರಿಸುವುದಾಗಿತ್ತಷ್ಟೆ.
ನಾನು ನಿಮ್ಮ ಲೇಖನಗಳ ಮೂಲ ಉದ್ದೇಶಗಳ ಅರಿವನ್ನು ಇಟ್ಟುಕೊಂಡೇ ಈ ಮುಂಚಿನ ಲೇಖನಗಳಿಗೆಲ್ಲ ಪ್ರತಿಕ್ರಿಯಿಸಿರುತ್ತೇನೆ. ವಿತಂಡವಾದ ಮಾಡುವ ಉದ್ದೇಶ ನನಗಿಲ್ಲ. ನಾನು ನನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದಂತೆ ನನ್ನ ವಾದ/ಪ್ರಶ್ನೆ ನಿಷ್ಪಕ್ಷಪಾತಿಯಾಗಿ ವಸ್ತುಸ್ಥಿತಿಯನ್ನು ಅರಿಯುವುದಷ್ಟೆ. ಉತ್ತರ ಕೊಡಲು ನೀವು ಹತಾಶರಾದಲ್ಲಿ ಮುಂದೆ ಪ್ರಶ್ನೆ ಕೇಳಲು ನಾವು ಹಿಂದೇಟು ಹಾಕಬೇಕಾಗುತ್ತದೆಯಲ್ಲವೆ?
-ಸುದತ್ತ

ಎರಡು ಪ್ರಶ್ನೆ :
೧> ಕೇಸರಿಕರಣ ಅ೦ದರೆ ಏನು ? ಇದು ಇ೦ಗ್ಲೀಷ್ ಮಾಧ್ಯಮಗಳಿ೦ದ ಬ೦ದ ಪದ. "Saffronize" ಅನುವಾದ ಮಾಡಿದ್ದಾರೆ. ಕೇಸರಿಕರಣ ಅನ್ನುವ ಪದ ನಮ್ಮ ಭಾಷೆಯಲ್ಲಿ ಇದೆಯೆ.

೨> ಅದ್ಯಾಕ್ ನಮ್ಮ ಸ೦ನ್ಯಾಸಿಗಳು ಕೇಸರಿ ಇಟ್ಕೊ೦ಡರೋ ? ನಾ ಈ ಸ೦ನ್ಯಾಸಿಗಳಿಗೆಲ್ಲಾ ಗುರುವಾಗಿದ್ದರೆ - ಕೇವಲ ಹಸಿರು ತೊಡಿಸುತ್ತಿದ್ದೆ. ಈಗಲೂ ಕೆಲವು ಬಿ.ಜೆ.ಪಿ ವಿರುದ್ಧ ನಿ೦ತಿರುವ ಸ೦ನ್ಯಾಸಿಗಳು ತಮ್ಮ ಬಟ್ಟೆಯ ಬಣ್ಣವನ್ನು ಬದಲಾಯಿಸ್ ಬೇಕು ಅನ್ಸತ್ತೆ.

ಹಸಿರು ಬೇಡ, ಸುಮ್ಮನೆ conflict ಆಗತ್ತೆ! ನೀಲಿ ಆದ್ರೆ ಹೆಂಗೆ? (ಅದೇ ನಿಮ್ ಶರ್ಟ್ ಬಣ್ಣ - ಮುರುಳೀ ಅವರೇ) -ನೀಲೀಕರಣ ಆಗಲೀ! ನೀಲಿ ಶಾಂತಿಯ ಸಂಕೇತ ಆಗಲೀ!

ಶಾಮಲ

DSN ಅವರೇ
ಈ ಆರು ತಿಂಗಳಲ್ಲಿ ಬಿ.ಜೆ.ಪಿಯದು ಕಳಪೆ ಪ್ರದರ್ಶನ ಅನ್ನುವುದನ್ನು ಒಪ್ಪೋಣ. ನಿಮಗೆ ಕೆಲವು ಪ್ರಶ್ನೆಗಳಿವೆ ಉತ್ತರಿಸುವಿರಾ?
೧.ಕೇಸರೀಕರಣ ಅಂದರೆ ಏನು?ನನಗೆ ತಿಳಿದಿರುವುದರ ಮಟ್ಟಿಗೆ ಕೇಸರಿ ತ್ಯಾಗ,ಬಲಿದಾನದ ಸಂಕೇತ.ಅಂದರೆ ಬಿ.ಜೆ.ಪಿಯವರು ತ್ಯಾಗ,ಬಲಿದಾನ ಮಾಡುವವರು ಅಂತಾನ?
೨.ನಿಮ್ಮ ಬರಹದುದ್ದಕ್ಕೂ ಕಾಣಿಸಿದ ವಾಕ್ಯ 'ಕೋಮುವಾದ' ಹಾಗೆಂದರೆ ಏನು? ಸರ್ , ತಿಳಿದವರು ನೀವು, ಕಾಂಗ್ರೆಸ್ಸ್ ಹಾಗು ಜಾತ್ಯತೀತರು ಅನಿಸಿಕೊಳ್ಳುವ ಪಕ್ಷಗಳು ಜಾತಿ ರಾಜಕಾರಣ ಮಾಡುವುದಿಲ್ಲವಾ? ಅದ್ಯಾಕೆ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ? ಸತ್ಯ ಹೇಳ ಹೊರಟವರು ಎಲ್ಲರ ತಪ್ಪನ್ನು ಹೇಳಬೇಕಲ್ಲವೇ?
೩.ಈಗ 'ಕರ್ನಾಟಕದ ಕೇಸರೀಕರಣ'ವಾಗಿದೆ ಅಲ್ಲವೇ? ಮೊದಲು ಯಾವ ಕಲರ್ ಇತ್ತು? 'ಹಸಿರೀಕರಣ' ಅಂತ ಏನಾದ್ರೂ ಇತ್ತ?

ರಾಕೇಶ್ ಶೆಟ್ಟಿ :)

ರಾಕೇಶ್,

> 'ಹಸಿರೀಕರಣ' ಅಂತ ಏನಾದ್ರೂ ಇತ್ತ?

ಹಿಂದಿನ ಸರ್ಕಾರ ವಾತಾವರಣಕ್ಕೆ ತಕ್ಕಂತೆ ಬಣ್ಣ ಬದಲಿಸುವ ಗೋಸುಂಬೆ :)

--ಶ್ರೀ

ಪ್ರಿಯ ರಾಕೇಶ್,
೧.ಕೇಸರಿಗೆ ಧೈರ್ಯ ತ್ಯಾಗ ಬಲಿದಾನಗಳ ಅರ್ಥ ನೀಡಲಾಗಿದ್ದು, ಅದು ನಮ್ಮ ತ್ರಿವರ್ಣ ಧ್ವಜದಲ್ಲಿ ಸಂಯೋಜಿತವಾದಾಗ. ಹಾಗಾಗಿ ಹಸಿರು-ಬಿಳಿಗಳೊಂದಿಗೆ ಮಾತ್ರ ಅದಕ್ಕೆ ಅರ್ಥ ಮರ್ಯಾದೆ. ಆದರೆ ಅದನ್ನು ಏಕಾಕಿಯಾಗಿ ಸಂಘ ಪರಿವಾರ ತನ್ನ ಅಧಿಕ್ರತ ಬಣ್ಣವಾಗಿ ಅಳವಡಿಸಿಕೊಂಡಿರುವುದರಿಂದ, ಈಗ ಕೇಸರೀಕರಣವೆಂಬುದನ್ನು ಹಿಂದೂ ಕೋಮುವಾದೀಕರಣ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಈ ಕೋಮುವಾದಿಗಳು ಯಾವುದೇ ಧೈರ್ಯ-ತ್ಯಾಗ- ಬಲಿದಾನಗಳ ವಾರಸುದಾರರಾಗಲಾರರು.ಇವರು ನಮ್ಮ ಸ್ವಾತಂತ್ರ್ಯ ಹೋರಾಟದಿಂದ, ಅದು ಹಿಂದೂ ಧರ್ಮವನ್ನು ಕಲುಷಿತಗೊಳಿಸುತ್ತಿದೆಯೆಂದು, ದೂರ ಉಳಿದವರು. ಅಷ್ಟೇ ಅಲ್ಲ, ಇವರಲ್ಲಿ ಕೆಲವರು ಬ್ರಿಟಿಷರೊಂದಿಗೆ ಶಾಮೀಲಾದವರು ಕೂಡ.ಇದರ ಮುಂದುವ್ರಿಕೆಯಾಗಿಯೇ ಅವರಲ್ಲಿ ಕೆಲವರು ಸೇರಿ ಗಾಂಧಿಯನ್ನು ಕೊಂದದ್ದು.
೨. ಕೋಮುವಾದ ಎಂದರೆ ಯಾವುದೇ ಕೋಮಿನ ಒಂದು ಭಾಗ ತನ್ನ ಮತವೇ ಮತ್ತು ಅದರ ತನ್ನ ಕಲ್ಪನೆಯೇ ಶ್ರೇಷ್ಠವೆಂದು ಭಾವಿಸಿ ಅದನ್ನು ಎಲ್ಲರ ಮೇಲೆ-ತನ್ನ ಕೋಮಿಗೇ ಸೇರಿದವರೂ ಸೇರಿದಂತೆ- ಆ ಮತವನ್ನು ಹೇರತೊಡಗುವುದು. ಇದು ಎಲ್ಲ ಕೋಮುಗಳಿಗೂ ಮತಗಳಿಗೂ ಅನ್ವಯಿಸುತ್ತದೆ. ಜಾತ್ಯತೀತತೆ ಎನ್ನುವುದೇ ತಪ್ಪು ಶಬ್ದ. ಇದು ಎಂಬ ಪಾಶ್ಚಿಮಾತ್ಯ ಕಲ್ಪನೆಯ ಆಮದು ಕಲ್ಪನೆಯಾಗಿರುವುದರಿಂದ ಈ ಎಲ್ಲ ಶಬ್ದ ಮತ್ತು ಅರ್ಥ ಗೊಂದಲ. Secularismನಅರ್ಥ ಮತ್ತು ಉದ್ದೇಶ ಸಾರ್ವಜನಿಕ ಜೀವನದಲ್ಲಿ ಮತಾಚರಣೆ ಮತ್ತು ನಂಬಿಕೆಗಳಿಗೆ ಜಾಗವಿರಬಾರದು ಎನ್ನುವುದಾದರೆ, ಇದಕ್ಕೆ ಮತಾತೀತತೆ ಅಥವಾ ಧರ್ಮನಿರಪೇಕ್ಷತೆ ಎಂಬುದು ಸರಿಯಾದ ಶಬ್ದವಾಗಬಹುದೇನೋ! ನನ್ನ ಪ್ರಕಾರ ಈ ದೇಶದ ಪರಂಪರೆಯ ಹಿನ್ನೆಲೆಯಲ್ಲಿ ನಾವು Secularismನ ಅರ್ಥವನ್ನು ಪುರ್ನನಿರೂಪಿಸಿಕೊಳ್ಳಬೇಕಿದೆ. ಇದಕ್ಕೆ, ’ದೀರ್ಘಕಾಲಿಕ ರಾಜಕಾರ್ಣವೇ ಧರ್ಮ, ಅಲ್ಪಕಾಲಿಕ ಧರ್ಮವೇ ರಾಜಕಾರಣ’ ಎಂಬ ಗಾಂಧೀಜಿಯ ಮಾತು ಕೀಲಿ ಕೈ ಆಗಬಹುದು.ಹಾಗೇ ಧರ್ಮವನ್ನು ಗಾಂಧೀಜಿ ಅರ್ಥೈಸಿದ ರೀತಿಯೂ ನಮ್ಮ ಗಮನದಲ್ಲಿರಬೇಕು.
ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ ಭಾರತದ ಎಲ್ಲ ಪಕ್ಷಗಳೂ ರಾಜಕೀಯ ಲಾಭಕ್ಕಾಗಿ ಸಂದರ್ಭಾನುಸಾರ ಮುಸ್ಲಿಂ ಅಥವಾ ಹಿಂದೂ ಕೋಮುವಾದವನ್ನು ಬಳಸಿವೆ. ಇದನ್ನು ನಾನು ನನ್ನ ಅನೇಕ ಬರಹಗಳಲ್ಲಿ ಹೇಳಿಯೂ ಇದ್ದೇನೆ. ಆದರೆ ಬಿಜೆಪಿಗೆ ಸಂಬಂಧಿಸಿದಂತೆ ಹೇಳಿದಾಗ ಮಾತ್ರ ಎದ್ದು ಕಂಡು, ಸಂಪದದಲ್ಲಿ ಕೆಲವರಿಂದ ಹಾಹಾಕಾರ ಏಳುತ್ತದೆ.ಅದಕ್ಕೆ ಸಂಪದದ ಸದಸ್ಯ ಸ್ವರೂಪವೇ ಹಾಗಿರುವುದು ಕಾರಣವಾಗಿರಬಹುದು. ಆ ಕಾರಣದಿಂದಲೇ ನಾನು ನನ್ನ ಲೇಖನಗಳನ್ನು ಇಚ್ಛಾಪೂರ್ವಕವಾಗಿಯೇ ಸಂಪದಕ್ಕೆ ಹಾಕುತ್ತೇನೆ ಮತ್ತು ಮುಕ್ತ ಎಂದು ಕಂಡ ಪ್ರಶ್ನೆಗಳಿಗೆ ಉತ್ತರ ಕೊಡಲೂ ಯತ್ನಿಸುತ್ತೇನೆ.
ಇತರ ಪಕ್ಷಗಳು ಸಾಂದರ್ಭಿಕವಾಗಿ-ಒಮ್ಮೊಮ್ಮೆ ಸಂಘ ಪರಿವಾರದ ರಾಜಕಾರಣದ ಒತ್ತಡಗಳಿಂದಾಗಿ-ಕೋಮುವಾದಕ್ಕೆ ಕೈ ಹಾಕಿ ನಮ್ಮಂಥವರ ಟೀಕೆ-ಟಿಪ್ಪಣಿಗಳಿಗೆ ಒಳಗಾಗಿ, ಅವು ತಪ್ಪಿತಸ್ದ ಭಾವನೆಗಾದರೂ ಸಿಕ್ಕುತ್ತವೆ. ಆದರೆ, ಸಂಘ ಪರಿವಾರ ಹಿಂದೂ ಕೋಮುವಾದವನ್ನೇ ತನ್ನ ತತ್ವವನ್ನಾಗಿ ಘೋಷಿಸಿಕೊಂಡ ರಾಜಕೀಯ ಪರಿವಾರವಾಗಿರುವುದರಿಂದ ಅದು ತಪ್ಪಿತಸ್ಥ ಭಾವನೆಗೆ ಆಸ್ಪದವನ್ನೇ ಮಾಡಿಕೊಂಡಿಲ್ಲ! ಹಾಗಾಗಿ ಸಹಜವಾಗಿಯೇ ಅದು ನಮ್ಮಂಥವರಿಂದ ಹೆಚ್ಚಿನ ಟೀಕೆಯನ್ನು ಎದುರಿಸಬೇಕಾಗುತ್ತದೆ.
೩. ಕೇಸರೀಕರಣದ ಪ್ರಯತ್ನ ನಡೆಯುತ್ತಿದೆ. ಅದನ್ನು ಪ್ರಜಾಪ್ರಭುತ್ವ, ಸಮಾನತೆ ಮತ್ತು ಶಾಂತಿಯನ್ನು ಬಯಸುವವರೆಲ್ಲರೂ ತಡೆಯಬೇಕಿದೆ. ನಾವು ನಮ್ಮದು ಎಂದು ಸಾಂಕೇತಿಕವಾಗಿ ಒಪ್ಪಿಕೊಂಡಿರುವ, ರಕ್ಷಿಸಬೇಕಾದ ಬಣ್ಣ ತ್ರಿವರ್ಣ.
-ಡಿ.ಎಸ್.ನಾಗಭೂಷಣ

ಸರ್
ನಿಮ್ಮ ತಾಳ್ಮೆಯ ಉತ್ತರ ನೋಡಿ ನಿಜಕ್ಕೂ ಸಂತೋಷವಾಯಿತು.

[quote]ಇವರು ನಮ್ಮ ಸ್ವಾತಂತ್ರ್ಯ ಹೋರಾಟದಿಂದ, ಅದು ಹಿಂದೂ ಧರ್ಮವನ್ನು ಕಲುಷಿತಗೊಳಿಸುತ್ತಿದೆಯೆಂದು, ದೂರ ಉಳಿದವರು. ಅಷ್ಟೇ ಅಲ್ಲ, ಇವರಲ್ಲಿ ಕೆಲವರು ಬ್ರಿಟಿಷರೊಂದಿಗೆ ಶಾಮೀಲಾದವರು ಕೂಡ.ಇದರ ಮುಂದುವ್ರಿಕೆಯಾಗಿಯೇ ಅವರಲ್ಲಿ ಕೆಲವರು ಸೇರಿ ಗಾಂಧಿಯನ್ನು ಕೊಂದದ್ದು.[/quote]

ವಿಷಯಾಂತರ ಅಂತ ಗೊತ್ತಿದ್ರು ತಿಲಿದುಕೊಲ್ಲೋ ಕೂತುಹಲಕ್ಕೆ ಕೇಳ್ತಾ ಇದ್ದೇನೆ. ಸಾದ್ಯವಾದರೆ ಇದರ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ತಿಳಿಸುವಿರಾ?

[quote]ಇತರ ಪಕ್ಷಗಳು ಸಾಂದರ್ಭಿಕವಾಗಿ-ಒಮ್ಮೊಮ್ಮೆ ಸಂಘ ಪರಿವಾರದ ರಾಜಕಾರಣದ ಒತ್ತಡಗಳಿಂದಾಗಿ-ಕೋಮುವಾದಕ್ಕೆ ಕೈ ಹಾಕಿ ನಮ್ಮಂಥವರ ಟೀಕೆ-ಟಿಪ್ಪಣಿಗಳಿಗೆ ಒಳಗಾಗಿ, ಅವು ತಪ್ಪಿತಸ್ದ ಭಾವನೆಗಾದರೂ ಸಿಕ್ಕುತ್ತವೆ.[/quote]

ನನಗನ್ನಿಸುವಂತೆ ಎಲ್ಲ ರಾಜಕೀಯ ಪಕ್ಷಗಳು ವೋಟು ಬ್ಯಾಂಕ್ ರಾಜಕಾರಣ ಮಾಡುತ್ತಿವೆ.ಉದಾಹರಣೆಗೆ 'ಮುಸ್ಲಿಮರಿಗೆ ಮೀಸಲಾತಿ' ಕೊಡ ಹೊರಟ ಕಾಂಗ್ರೆಸ್ಸ್ ಇರಬಹುದು.ಆದರೆ ಇವರನ್ನೆಲ್ಲಾ ಕೋಮುವಾದಿಗಳು ಅನ್ನುವುದಿಲ್ಲ? ಕೇವಲ ಒಂದು ಧರ್ಮದ ಓಲೈಕೆ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಎಲ್ಲ ಪಕ್ಷಗಳು ಮಾಡುತ್ತಿರುವದು ಕೋಮುವಾದಿ ರಾಜಕಾರಣವನ್ನೇ ಅಲ್ಲವೇ?

ಎಲ್ಲಕ್ಕೂ ಕೈ ತುತ್ತು ಸಲ್ಲದು. ಗಾಂಧೀಜಿ ಬದುಕು ಕುರಿತಂತೆ ಅನೇಕ ಪುಸ್ತಕಗಳಿವೆ. ಅವನ್ನು ಓದುವ ಪರಿಶ್ರಮ ಮಾಡಿ. ಲೂಯಿ ಫಿಶರ್ ಅವರ ಅಥವಾ ತೆಂಡೂಲ್ಕ್ರರ್ ಅವರ ಪುಸ್ತಕಗಳನ್ನು ಸೂಚಿಸುವೆ.
ರಾಜಕೀಯ ಒತ್ತಡಗಳಲ್ಲಿ ಆಗಾಗ್ಗೆ ಕೋಮುವಾದಿಯಾಗಿ ಕಾಣುವ ಪಕ್ಷಗಳಿಗೂ(ಆ ಬಗ್ಗೆ ಅವಕ್ಕೆ ನಾಚಿಕೆಯಾದರೂ ಇರುತ್ತದೆ), ಕೋಮುವಾದವನ್ನೇ ತನ್ನ ತತ್ವವನ್ನಾಗಿ ಘೋಷಿಸಿಕೊಂಡಿರುವ ಪಕ್ಷಗಳಿಗೂ ಇರುವ ವ್ಯತ್ಯಾಸಗಳನ್ನು ಗುರುತಿಸಿ ಔಚಿತ್ಯಕ್ಕೆ ತಕ್ಕಂತೆ ನಮ್ಮ ಅಸಮಾಧಾನವನ್ನು ದಾಖಲಿಸದೇ ಹೋದರೆ, ಎಲ್ಲ ಪಕ್ಷಗಳೂ ಕೋಮುವಾದಿಯಾದಾವು! ಮುಸ್ಲಿಮರಿಗೆ, ಸಮಾಜದ ಬೇರೆ ಸಮುದಾಯಗಳಿಗೆ ಒದಗಿಸುವಂತೆ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನನುಸರಿಸಿ ಕೆಲವು ಸೌಲಭ್ಯಗಳನ್ನು ಒದಗಿಸುವುದನ್ನೆಲ್ಲ ಓಲೈಕೆ ಎಂದು ಕರೆಯಲಾಗದು. ಅದು ಯಾವುದೇ ಸರ್ಕಾರದ ಕರ್ತವ್ಯ.ಇದರ ಬಗ್ಗೆ ಸ್ಪಷ್ಟತೆ ಇರುವುದು ಒಳ್ಳೆಯದು.
ಬರೀ ಇಂತಹ ಚರ್ಚೆ ನಮ್ಮನ್ನು ಎಲ್ಲೂ ಕೊಂಡೊಯ್ಯುವುದಿಲ್ಲ. ವ್ಯಾಪಕ ಓದು ಕೂಡ ಅಗತ್ಯ. ನಾನೇ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಾರೆ. ಅದು ಅಸಾಧ್ಯ ಕೂಡ. ಇದೇ ಸಂಪದದಲ್ಲಿ ಸಂಗ್ರಹವಾಗಿರುವ ನನ್ನ ಈವರೆಗಿನ ಲೇಖನಗಳನ್ನಾದರೂ ಒಂದೊಂದಾಗಿ ಓದುತ್ತಾ ಬನ್ನಿ. ನಿಮ್ಮ ಇಂತಹ ಪ್ರಶ್ನೆಗಳಿಗೆ ಉತ್ತರ ದೊರಕಬಹುದು.
-ಡಿ.ಎಸ್.ನಾಗಭೂಷಣ

DSN ಅವರೇ
ನೀವು ಹೇಳಿದಂತೆ ಎಲ್ಲ ತಿಳಿಯಲು ವ್ಯಾಪಕ ಓದು ಖಂಡಿತ ಅಗತ್ಯವಿದೆ.ಆದರೆ ನಾನು ಇದುವರೆಗೂ ಓದಿರುವ ಇತಿಹಾಸದಲ್ಲಿ ನೀವು ಹೇಳಿದಂತೆ ಕೋಮುವಾದಿಗಳು ದೇಶ ದ್ರೋಹ ಮಾಡಿದ ನಿದರ್ಶನ ಇಲ್ಲ.ಅದಕ್ಕೆ ನಾನು ಒಂದು ನಿದರ್ಶನ ಕೊಡಿ ಅಂತ ಕೇಳಿದ್ದು.

[quote]ಮುಸ್ಲಿಮರಿಗೆ, ಸಮಾಜದ ಬೇರೆ ಸಮುದಾಯಗಳಿಗೆ ಒದಗಿಸುವಂತೆ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನನುಸರಿಸಿ ಕೆಲವು ಸೌಲಭ್ಯಗಳನ್ನು ಒದಗಿಸುವುದನ್ನೆಲ್ಲ ಓಲೈಕೆ ಎಂದು ಕರೆಯಲಾಗದು. ಅದು ಯಾವುದೇ ಸರ್ಕಾರದ ಕರ್ತವ್ಯ.ಇದರ ಬಗ್ಗೆ ಸ್ಪಷ್ಟತೆ ಇರುವುದು ಒಳ್ಳೆಯದು.[/quote]

ಸರ್,ಅಲ್ಲೇ ಇರುವುದು ನೋಡಿ ಸಮಸ್ಯೆ, ಅವರಿಗೆ ಈಗಾಗಲೇ ಹಲವಾರು ಮೀಸಲಾತಿಗಳಿಲ್ಲವೇ?
ನೀವು ಜಾತ್ಯಾತೀತ ಅಥವಾ ಧರ್ಮ ನಿರಪೆಕ್ಷಿತ ಅನ್ನುವ ಪಕ್ಷಗಳು ಜಾತಿ- ಧರ್ಮವನ್ನ ಪಕ್ಕಕ್ಕಿಟ್ಟು ವ್ಯಕ್ತಿಯ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನನುಸರಿಸಿ ಕೆಲವು ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಆ ಪಕ್ಷಗಳನ್ನು ಜಾತ್ಯಾತೀತರೆನ್ನಬಹುದು.ನನ್ನ ಪ್ರಕಾರ ಅಂತ ಒಂದೇ ಒಂದು ಪಕ್ಷವು ಈಗ ಭವ್ಯ ಭಾರತದಲ್ಲಿಲ್ಲ. ಈ ವಿಷಯದ ಬಗ್ಗೆ ಏಕೆ double standards ಅನ್ನೋದೇ ಪ್ರಶ್ನೆ.

ಹಾಂ! ಮರೆತಿದ್ದೆ ನಿಮ್ಮ ಹಳೆ ಪ್ರತಿಕ್ರಿಯೆಯಲ್ಲಿ ಸಂಪದಿಗರ ಬಗ್ಗೆ ಬರೆದಿದ್ದೀರಿ.ನನಗನ್ನಿಸುವಂತೆ ಸಂಪದ ಅನ್ನುವ ಸಾಗರದಲ್ಲಿ ಎಲ್ಲ ತರದ ಜನರಿದ್ದಾರೆ, ಆದರೆ ಇಲ್ಲಿ ಯಾವುದನ್ನು ಪ್ರಶ್ನಿಸದೆ,ವಿಮರ್ಶಿಸದೇ ಒಪ್ಪಿಕೊಳ್ಳುವವರು ಬಹಳ ಕಮ್ಮಿ,ಆದ್ದರಿಂದ ನಿಮಗೆ ಹೆಚ್ಚಿನ ಪ್ರತಿಕ್ರಿಯೆಗಳು ಬರಬಹುದು.ನೀವು ತಾಳ್ಮೆ ಕಳೆದುಕೊಳ್ಳದೆ ಅವರ ತಪ್ಪು ಕಲ್ಪನೆಯನ್ನು ದೂರ ಮಾಡಬಹುದು ಅನ್ನುವುದು ನನ್ನ ಅನಿಸಿಕೆ.

ಹಾಗೆ ನಿಮ್ಮ ಉಳಿದ ಬರಹಗಳನ್ನು ಓದಿ ಪ್ರತಿಕ್ರಿಯಿಸುತ್ತೇನೆ.

ರಾಕೇಶ್ ಶೆಟ್ಟಿ :)

ಕೋಮುವಾದವೇ ದೊಡ್ಡ ದೇಶ ದ್ರೋಹ ರಾಕೇಶ್ ಅವರೇ! ಬ್ರಿಟಿಷ್ ಸರ್ಕಾರದ ಬೇಹುಗಾರರಾಗಿ ಕೆಲಸ ಮಾಡಿದ್ದರಿಂದ ಹಿಡಿದು, ಹೋರಾಟ ಸಾಕಾಗಿ ಸರ್ಕಾರಕ್ಕೆ ಕ್ಷಮಾ ಪತ್ರ ಬರೆದುಕೊಟ್ಟು ಅದರೊಂದಿಗೆ ಶಾಮೀಲಾಗಿ ಹಿಂದೂ-ಮುಸ್ಲಿಂ ವಿಭಜನೆಗೆ ಕುಮ್ಮಕ್ಕು ನೀಡಿದವರೆಗೆ ಇವರ ದೇಶದ್ರೋಹ ಹರಡಿದೆ!ಇತಿಹಾಸ ಏನೂ ಗೊತ್ತಿಲ್ಲದೆ ಸುಮ್ಮನೆ ವಾದ ಮಾಡುವುದರಿಂದ ಪ್ರಯೋಜನವಿಲ್ಲ.
ವ್ಯಕ್ತಿಗತವಾಗಿ ಸವಲತ್ತುಗಳನ್ನು ಕೊಡುವ ವ್ಯವಸ್ಥೆ ಕಷ್ಟವಷ್ಟೇ ಅಲ್ಲ, ಅವ್ಯವಾಹಾರಿಕ ಕೂಡ.ಅದನ್ನು ಹೇಗೆ ಮಾಡಬಹುದೆಂದು ನೀವೇ ಯೋಚಿಸಿ.
ಇಲ್ಲಿಗೆ ನಿಮ್ಮೊಂದಿಗೆ ಸಂವಾದವನ್ನು ಮುಕ್ತಾಯಗೊಳಿಸುವೆ, ಕ್ಷಮಿಸಿ!
-ಡಿ.ಎಸ್.ನಾಗಭೂಷಣ

ಕೋಮುವಾದವೇ ದೊಡ್ಡ ದೇಶ ದ್ರೋಹ ರಾಕೇಶ್ ಅವರೇ

ಹಾಗಿದ್ದಲ್ಲಿ, ದೆಶ ಆಳಿದ ಎಲ್ಲರೂ ಕೋಮುವಾದಿಗಳು ಎಂದಾಯಿತು. ಯವುದೋ ಒಂದು ಕೋಮಿಗೆ ವಿಷೇಶ ಸವಲತ್ತು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಅಂದಲ್ಲಿ ಅವರೆಲ್ಲ ದೇಶ ದ್ರೋಹಿಗಳೆ.

ಭಾಸ್ಕರರೆ,

ಅದೆಲ್ಲಾ ಸಾಂಕೇತಿಕ, ಅಷ್ಟೂ ಗೊತ್ತಾಗಲ್ವ. ಗೊತ್ತಿದ್ದರೆ ಕೇಳಿ "ಕಾಂಗ್ರೆಸ್ ಮಾಡುವುದೆಲ್ಲ ಸಾಂಕೇತಿಕ, ಬಿ.ಜೆ.ಪಿಯದ್ದೆಲ್ಲ ದುಃಶ್ಪ್ರೇರಿತ :) :)"

- ಅರವಿಂದ

[quote]ಬ್ರಿಟಿಷ್ ಸರ್ಕಾರದ ಬೇಹುಗಾರರಾಗಿ ಕೆಲಸ ಮಾಡಿದ್ದರಿಂದ ಹಿಡಿದು, ಹೋರಾಟ ಸಾಕಾಗಿ ಸರ್ಕಾರಕ್ಕೆ ಕ್ಷಮಾ ಪತ್ರ ಬರೆದುಕೊಟ್ಟು ಅದರೊಂದಿಗೆ ಶಾಮೀಲಾಗಿ ಹಿಂದೂ-ಮುಸ್ಲಿಂ ವಿಭಜನೆಗೆ ಕುಮ್ಮಕ್ಕು ನೀಡಿದವರೆಗೆ ಇವರ ದೇಶದ್ರೋಹ ಹರಡಿದೆ![/quote]

ಓಹೋ! ನಿಮ್ಮ ಬಾಣ ಯಾರ ಕಡೆ ಹೊರಟಿತ್ತೆಂದು ನನಗೀಗ ತಿಳಿಯಿತು, ಆ ಪುಣ್ಯಾತ್ಮ ದೇಶ ದ್ರೋಹಿಯಾಗಿದ್ದರೆ, ಇಲ್ಲ ಬ್ರಿಟಿಷರ ಬೇಹುಗಾರನಾಗಿದ್ದರೆ ಅಂಡಮಾನಿನ ಜೈಲಿನಲ್ಲಿ 'ಕರಿನೀರಿನ ಶಿಕ್ಷೆ' ಅನುಭವಿಸಬೇಕಿರಲಿಲ್ಲ ಅನ್ನುವುದು ಚಿಕ್ಕ ಮಕ್ಕಳಿಗೂ ಅರ್ಥವಾಗುವಂತ ಸತ್ಯ ಅಲ್ವೇ ಸರ್?
ನೀವು ಹೇಳಿದ ಇದೆ ದೇಶ ದ್ರೋಹಿಯ ಬಿಡುಗಡೆಗೆ ದೇಶ ವ್ಯಾಪಿ ಸಹಿ ಸಂಗ್ರಹ ಚಳುವಳಿ ಮಾಡಿದಾಗ ಅದಕ್ಕೆ ಸಹಿ ಮಾಡುವ ಸೌಜನ್ಯವನ್ನು ತೋರದ ಮಹಾತ್ಮರಿಗೆ, ಪಾಪ ಆ ಬಡಪಾಯಿ ದೇಶ ದ್ರೋಹಿಯಂತೆ ಖಂಡಿರಬೇಕು. 'ಪತಿತ ಪಾವನ ಮಂದಿರ' ಸ್ಥಾಪಿಸಿ , ಸಹ ಭೋಜನ ಇತ್ಯಾದಿ ಅನೇಕ ಕಾರ್ಯಕ್ರಮಗಳಿಂದ ಅಸ್ಪೃಶ್ಯತೆ ನಿವಾರಣೆ ಮಾಡಿದ್ದೆ ಆ ದೇಶ್ ಅದ್ರೋಹಿ ಮಾಡಿದ ದೊಡ್ಡ ತಪ್ಪೇ? ಮತಾಂತರಕ್ಕೆ ಪ್ರತಿಮತಾಂತರದಿಂದ ಉತ್ತರ ಕೊಟ್ಟಿದ್ದು ತಪ್ಪೇ? ಯಾವುದು ತಪ್ಪು ಸರ್?

[quote]ಇತಿಹಾಸ ಏನೂ ಗೊತ್ತಿಲ್ಲದೆ ಸುಮ್ಮನೆ ವಾದ ಮಾಡುವುದರಿಂದ ಪ್ರಯೋಜನವಿಲ್ಲ.[/quote]

ನನಗೆ ಗೊತ್ತಿರುವ ಇತಿಹಾಸವನ್ನು ಮೇಲೆ ತಿಳಿಸಿದ್ದೇನೆ, ಇದರಲ್ಲಿ ತಪ್ಪು ಅನ್ನಿಸಿದ್ದರೆ, ನೀವೇ ಅದನ್ನು ಸರಿ ಮಾಡಿದ್ದರೆ ನಾನು ಅವಶ್ಯ ತಿದ್ದಿಕೊಳ್ಳುತ್ತೇನೆ.

[quote]ವ್ಯಕ್ತಿಗತವಾಗಿ ಸವಲತ್ತುಗಳನ್ನು ಕೊಡುವ ವ್ಯವಸ್ಥೆ ಕಷ್ಟವಷ್ಟೇ ಅಲ್ಲ, ಅವ್ಯವಾಹಾರಿಕ ಕೂಡ.ಅದನ್ನು ಹೇಗೆ ಮಾಡಬಹುದೆಂದು ನೀವೇ ಯೋಚಿಸಿ.[/quote]

ಇದು ಬಹಳ ಕಷ್ಟವಿರಬಹುದು ಆದರೆ ಖಂಡಿತ ಅಸಾಧ್ಯವಲ್ಲ,ಇದಕ್ಕೆ ಜಾತ್ಯಾತೀತ (?) ಹಾಗೂ ಕೋಮುವಾದಿ(?)ಗಳು ದೊಡ್ಡ ಮನಸ್ಸು ಮಾಡಬೇಕು ಅಷ್ಟೆ.

[quote]ಇಲ್ಲಿಗೆ ನಿಮ್ಮೊಂದಿಗೆ ಸಂವಾದವನ್ನು ಮುಕ್ತಾಯಗೊಳಿಸುವೆ, ಕ್ಷಮಿಸಿ![/quote]
ನಾನು ಒಂದು ಆರೋಗ್ಯಕರ ಸಂವಾದ ನಡೆಯುತ್ತದೆಯೆಂಬ ಸಂತಸದಲ್ಲಿದ್ದೆ, ಸರಿ ಬಿಡಿ ನಿಮಗಿಷ್ಟವಿಲ್ಲದಿದ್ದರೆ ಬೇಡ. ಸಂವಾದ ನಡೆಯದಿದ್ದರೆ ನಿಮಗನ್ನಿಸಿದ್ದೆ ನಿಮಗೆ ಸರಿ,ನಾನು ತಿಳಿದಿರುವುದೇ ನನಗೆ ಸರಿ ಎಂಬಾ ಭಾವನೆ ಬರುತ್ತದೆ.

ರಾಕೇಶರೆ..

ನಿಮಗೆ ಹಾಗು ಸುದತ್ತ ಅವರಿಗೆ ಲೇಖಕರು ಕೊಟ್ಟ ಉತ್ತರಗಳನ್ನು ಗಮನಿಸಿ,, ಹಾಗು ಲೇಖಕರು ಹಿಂದಿನ ಒಂದು ಲೇಖನದಲ್ಲಿ ನೀಡಿರುವ ಪ್ರತಿಕ್ರಿಯೆಯನ್ನೂ ಗಮನಿಸಿ [ಲೇಖನ - ಜಾತಿ ಪದತ್ತಿ ಎಲ್ಲಿದೆ, ಸಂಪದದಲ್ಲೆ ಸಿಗುತ್ತೆ ಇದು] , ಅದನ್ನ ಇಲ್ಲಿ ಅಂಟಿಸಿದ್ದೇನೆ.

"ಬಾಲು ಅವರ ಚಿಂತನೆಗಳ ಬಗ್ಗೆ ಗೌರವಪೂರ್ಣ ಕುತೂಹಲದೊಂದಿಗೇ ನಾನು ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಗಂಭೀರ ಪ್ರಯತ್ನ ಮಾಡಿದ್ದು. ಆದರೆ ಪ್ರಶ್ನೆಗಳನ್ನೇ ಕೇಳಬಾರದೆಂದರೆ ಹೇಗೆ? ಅವರ ನಿರೀಕ್ಷೆ, ಅವರ ಪ್ರಮೇಯವನ್ನು ಒಪ್ಪಿಕೊಂಡೇ ಪ್ರಶ್ನೆಗಳನ್ನು ಕೇಳಬೇಕೆಂಬುದು- ಎಂದು ಕಾಣುತ್ತದೆ! ಇದು ನನ್ನೊಬ್ಬನ ಅನುಭವ ಮಾತ್ರವಲ್ಲವಲ್ಲ? ಜಗಳ ಸರಿ. ಹೊಸ ಸತ್ಯದ ಅನ್ವೇಷಣೆಗಾಗಿ ಸಂತೋಷದಿಂದಲೇ ಜಗಳವಾಡೋಣ! ಆದರೆ ಅಹಂಕಾರ, ಅಸಭ್ಯತೆ, ಅವಮಾನಕಾರಿ ವರ್ತನೆ? ಅದನ್ನೇಕೆ ಸಹಿಸಬೇಕು? ನನ್ನ ಪ್ರಕಾರ, ಹೊಸ ಸತ್ಯದ ಅನ್ವೇಷಣೆ ನಡೆಯಬಹುದಾದ ದಾರಿ ಇದಂತೂ ಅಲ್ಲ "

ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವಿರೋ ನಿಮಗೆ ಬಿಟ್ಟೀದ್ದು .

ನನ್ನ ಪ್ರಕಾರ, ಒಂದು ನೀವು, ನಾವು ಗೌರವಪೂರ್ಣ ಕುತೂಹಲದಿಂದ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಇಲ್ಲ, ಲೇಖಕರ ವಿಚಾರ ಒಪ್ಪಿ ಅಪ್ಪಿ ಪ್ರಶ್ನೆ ಕೇಳುತ್ತಿಲ್ಲ,, ಇಲ್ಲ ಹೊಸ ಸತ್ಯದ ಅನ್ವೇಷಣೆ ಮಾಡುತ್ತಿಲ್ಲ.

ನನ್ನ ಅನಿಸಿಕೆಯಂತೆ ನೀವು ನಾವು ಮಾಡುತ್ತಿರುವುದು ಹಳೆ ಮಿಥ್ಯಗಳ ಮಂಥನ ಹಾಗು ಅದನ್ನು ಮಿಥ್ಯ ಅಂತ ಹೇಳುತ್ತಾ ಇರುವುದು ಅಷ್ಟೆ. ಎಲ್ಲಿ ತನಕ ನೀವು ಈ ಗುಂಗಿನಿಂದ ಹೊರಬರುವುದಿಲ್ಲವೋ ಅಲ್ಲಿವರೆಗೂ ಕಷ್ಟ ಕಷ್ಟ ..;)

ಇಲ್ಲ ಭಾಸ್ಕರ್
DSN ಅವರೇ ಹೇಳಿರುವಂತೆ ನಾನು "ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಗಂಭೀರ ಪ್ರಯತ್ನ ಮಾಡಿದ್ದು. ಆದರೆ ಪ್ರಶ್ನೆಗಳನ್ನೇ ಕೇಳಬಾರದೆಂದರೆ ಹೇಗೆ? "
ಅವರು ಉತ್ತರ ನೀಡೆ ನೀದುತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ.

ಭಾಸ್ಕರ್ ಅವರೇ,
ನನ್ನ ಪ್ರಶ್ನೆಗಳಿಗೆ ನಾನು ಉತ್ತರಗಳನ್ನು ನಿರೀಕ್ಷಿಸುತ್ತಿಲ್ಲ. ನಾವು ಪ್ರಾಯಶಃ ಲೇಖಕರ ಮಾತನ್ನು ಒಪ್ಪಿದಲ್ಲಿ ಮಾತ್ರ ನಮ್ಮ ಪ್ರಶ್ನೆಗೆ ಉತ್ತರಗಳು ಎನ್ನಿಸುತ್ತಿದೆ. ಅವರ ಪ್ರಶ್ನೆಗಳಿಗೆ ಬೇರೆಯವರು ಉತ್ತರ ಹೇಳಲಿಲ್ಲ ಎಂದು ಉದ್ದ ಲೇಖನ ಬರೆದರು. ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ ಎಂದು ಹೇಳಿದ್ದರೆ ನಮಗೂ ಅನ್ಯಥಾ ಭಾವನೆ ಬರುತ್ತಿರಲಿಲ್ಲ. ಆದರೆ ಪ್ರಶ್ನೆಯನ್ನು, ಕೇಳುಗರನ್ನು ಮೂದಲಿಸಿ ಬರೆದರೆ ಏನು ಹೇಳಲೂ ತಿಳಿಯುವುದಿಲ್ಲ.
ಒಂದು ಅಪ್ರಸ್ತುತ ಘಟನೆ. ನಮ್ಮ ಹೈಸ್ಕೂಲ್ ಮೇಷ್ಟ್ರು ಒಬ್ಬರಿದ್ದರು.ಪ್ರಶ್ನೆ ಕೇಳಿ ಎಂದರು. ಒಬ್ಬ ಎದ್ದು ನಿಂತು ಪ್ರಶ್ನೆ ಕೇಳೇಬಿಟ್ಟ. ಬಿತ್ತು ನೋಡಿ ಏಟು. ಪಾಟ ಹೇಳಬೇಕಾದ್ರೆ ನಿದ್ದೆ ಮಾಡುತ್ತಾ ಇದ್ದೆಯಾ ಎಂದು :-)
ಇನ್ನೂ ಬಹಳ ವಿಚಾರ/ಪ್ರಶ್ನೆಗಳಿದ್ದವು. ಈಗ ಬೇಡ ಬಿಡಿ.

ಏಟು ಜೋರಾಗಿಯೇ ಬಿದ್ದಿರಬೇಕು ಪಾಪ.

ನಿಮ್ಮ ವಿಚಾರ ಪ್ರಶ್ನೆ, ಎಲ್ಲ ತೆಗೆದಿಡಿ ಸುದತ್ತಾ ಅವರೆ..
ಮುಚ್ಚು ಮರೆ ಇಲ್ಲದೆಯೆ ಪ್ರತಿಕ್ರಿಯೆಯಲ್ಲಿ ಎಲ್ಲವನು ತೆರೆದಿಡಿ..

--ಭಾಸ್ಕರ ಮೈಸೂರು

ಸಾರ್,

>> ಇದೇ ಸಂಪದದಲ್ಲಿ ಸಂಗ್ರಹವಾಗಿರುವ ನನ್ನ ಈವರೆಗಿನ ಲೇಖನಗಳನ್ನಾದರೂ ಒಂದೊಂದಾಗಿ ಓದುತ್ತಾ ಬನ್ನಿ. ನಿಮ್ಮ ಇಂತಹ ಪ್ರಶ್ನೆಗಳಿಗೆ ಉತ್ತರ ದೊರಕಬಹುದು.

ನೀವು ರಾಕೇಶ್‍ಗೆ ಹೇಳಿದ್ದನ್ನ ನನಗೆ indirect ಆಗಿ ಹೇಳಿದೀರಿ ಅಂದುಕೊಂಡು ಸಂಪದದಲ್ಲಿ ಹಾಕಿರುವ ನಿಮ್ಮ ಲೇಖನಗಳನ್ನು ಜಾಲಾಡಿಬಿಟ್ಟೆ.
ನಿಮ್ಮ ಒಂದು ಬರಹ "ಕೋಮುವಾದವಲ್ಲದ" ಪಕ್ಷಗಳ ಬಗ್ಗೆ ಈ ರೀತಿ ಠೀಕಾ ಪ್ರಹಾರ ಮಾಡಿದ್ದು ನನಗೆ ಸಿಗಲಿಲ್ಲ.

ಇಂದು ಬಿ.ಜೆ.ಪಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಒಪ್ಪುತ್ತೇನೆ....ಅದನ್ನ ಸದ್ಯಕ್ಕೆ ಪಕ್ಕ ಇಡೋಣ...
ಧರಂ ಸಿಂಗ್, ಕುಮಾರ ಸ್ವಾಮಿ ಅಥವಾ ಮಿಕ್ಕ ಸರಕಾರ ಏನೇನು ಸಾಧಿಸಿಬಿಟ್ಟರು ಎಂದು ನಿಮಗೂ ಗೊತ್ತು ನಮಗೂ ಗೊತ್ತು.
ನೀವು ಕುಮಾರ ಸ್ವಾಮಿ ಮಗ ಮಾಡಿದ ಪಬ್ ಧಾಂದಲೆ ಬಗ್ಗೆ ಏನಾದರೂ ಬರೆದಿದ್ದಿರೋ?
ಹಾಗೆ, ತಸ್ಮೀಮಾ ಮೇಲೆ ನಡೆದ ಹಲ್ಲೆ, ಮಹಾರಾಷ್ಟ್ರದಲ್ಲಿ ನಡೆದ ಗಲಾಟೆಗಳು ಇತ್ಯಾದಿ ವಿಷಯಗಳ ಬಗ್ಗೆ ನೀವು ಲೇಖನಗಳನ್ನೇನಾದರೂ ಬರೆದಿದ್ದರೆ ದಯವಿಟ್ಟು ತೋರಿಸಿ. ಕುತೂಹಲದಿಂದ ಕೇಳುತ್ತಿದ್ದೇನೆ...ಇದು ನನ್ನ ಕಣ್ತಪ್ಪೇ ಇರಬಹುದು...ಈ ವಿಷಯಗಳ ಬಗ್ಗೆ ಬರೆದ ನಿಮ್ಮ ಹಳೆ ಬರಹಗಳ ಕೊಂಡಿಗಳನ್ನು ಹೆಕ್ಕಿ ಕೊಟ್ಟರೆ ತುಂಬಾ ಅನುಕೂಲ ಆಗತ್ತೆ. ಇದು ಕಳಕಳಿಯ ಮನವಿ...

--ಶ್ರೀ

ತಿಂಗಳುಗಟ್ಟಲೆ ಹುಡುಕಿದೆ ಶ್ರೀಧರ್.. ಹಿಂದೆ ಒಂಮೆ ಇದೇ ಅರ್ಥ ಬರುವ ಪ್ರತಿಕ್ರಿಯೆಯಿಂದ.
ಬಹುಶಃ ಒಮ್ಮೆ ಕಣ್ಣು ಪರೀಕ್ಷೆ ಮಾಡಿಸಿ ಕೊಳ್ಲಬೇಕು ಅನ್ನಿಸುತ್ತೆ...

ಇಂಥವರಿಂದ ಏನು ತಾನೆ ಉತ್ತರ ನಿರೀಕ್ಷಿಸಲು ಸಾಧ್ಯ.. ?

ಹೌದೇ? ಇದೇ ಲೇಖನದಲ್ಲಿ ಬೇಕಾದಷ್ಟು ಇದೆಯಲ್ಲ ಸ್ವಾಮಿ? ಬೇಕಾದದ್ದನ್ನು ಮಾತ್ರ ಓದಿಕೊಂಡು ಪ್ರತಿಕ್ರಿಯಿಸುತ್ತಾ ಹೋದರೆ ಹೇಗೆ? ಸಂವಾದ ಕಷ್ಟವಾಗುತ್ತದೆ.
ನೀವು ಹೇಳಿರುವ ಸುಮಾರು ಎಲ್ಲ ವಿಷಯಗಳ ಬಗ್ಗೆ-ತಸ್ಲಿಮಾ, ಕುಮಾರ ಸ್ವಾಮಿ ಆಡಳಿತ, ಸೆಕ್ಯುಲರ್ ಬುದ್ಧಿಜೀವಿಗಳ ಪೀಕಲಾಟ- ನಾನು ಬರೆದಿರುವೆ.ನಿಮ್ಮ ಜಾಲಾಟದಲ್ಲಿ ಏನೋ ದೋಷವಿರಬೇಕಷ್ಟೆ-ಅದನ್ನು ಬಲ್ಲವರಿಂದ ಕೇಳಿ ಸರಿಪಡಿಸಿಕೊಳ್ಳಿ. ಸಂಪದದಲ್ಲಿ ಪ್ರಕಟವಾದ ನನ್ನ ಮೊದಲ ೫೦ ಲೇಖನಗಳು ’ಇದು ಭಾರತ! ಇದು ಭಾರತ!!’ ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿ ಕೂಡ ಪ್ರಕಟವಾಗಿದೆ.ಸಾಧ್ಯವಾದರೆ, ಅದನ್ನು ಎಲ್ಲಿಂದಾದರೂ ಪಡೆದು ಓದಿ-ನಿಮಗೆ ಬೇಕಾದದ್ದು ಸುಲಭವಾಗಿ ಸಿಕ್ಕಬಹುದು.ವ್ರಥಾ ಸಂದೇಹ ಪಡುತ್ತಾ ಆಯಾಸ ಮಾಡಿಕೊಳ್ಳಬೇಡಿ!
--ಡಿ.ಎಸ್.ನಾಗಭೂಷಣ

ರಾಕೇಶ ಶೆಟ್ಟರೆ.
ನಿಮ್ಮ ಕಡೆ ೫-೬ ನೇ ಕ್ಲಾಸ್ ನಲ್ಲಿ ಒಡುತ್ತಿರುವ ಚಿಕ್ಕ ಹುಡೂಗ ಇದ್ದರೆ, ಈ ಪ್ರತಿಕ್ರಿಯೆಯ ಮೊದಲ ಸಾಲು ಮಾತ್ರ ತೋರಿಸಿ. ಪರೀಕ್ಷೆಯಲ್ಲಿ ಗಾಂಧೀಜಿಯ ಬಗ್ಗೆ ಎನದರು ಪ್ರಶ್ನೆ ಇದ್ದಲ್ಲಿ., ಇದೇ "the Best" ಉತ್ತರ ಅಂತ ಹೇಳಿಕೊಡಿ. ಖಂಡಿತ ಉನ್ನತ ಶ್ರೇಣಿಯಲ್ಲಿ ಪಾಸ್ ಆಗುವುದಲ್ಲಿ ಅನುಮಾನವೇ ಇಲ್ಲ.

ನಮಸ್ತೆ,

>... ಇದರ ಮುಂದುವ್ರಿಕೆಯಾಗಿಯೇ ಅವರಲ್ಲಿ ಕೆಲವರು ಸೇರಿ ಗಾಂಧಿಯನ್ನು ಕೊಂದದ್ದು.

citation ಬೇಕಾಗಿದೆ!

> ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ ಭಾರತದ ಎಲ್ಲ ಪಕ್ಷಗಳೂ ರಾಜಕೀಯ ಲಾಭಕ್ಕಾಗಿ ಸಂದರ್ಭಾನುಸಾರ ಮುಸ್ಲಿಂ ಅಥವಾ ಹಿಂದೂ ಕೋಮುವಾದವನ್ನು ಬಳಸಿವೆ.
> ಇದನ್ನು ನಾನು ನನ್ನ ಅನೇಕ ಬರಹಗಳಲ್ಲಿ ಹೇಳಿಯೂ ಇದ್ದೇನೆ. ಆದರೆ ಬಿಜೆಪಿಗೆ ಸಂಬಂಧಿಸಿದಂತೆ ಹೇಳಿದಾಗ ಮಾತ್ರ ಎದ್ದು ಕಂಡು, ಸಂಪದದಲ್ಲಿ ಕೆಲವರಿಂದ ಹಾಹಾಕಾರ ಏಳುತ್ತದ

ಇದೇ ರೀತಿಯ ತೀಕ್ಷ್ಣ ಬರಹಗಳ ಉದಾಹರಣೆ ಬೇಕಿದೆ!!!

ಧನ್ಯವಾದಗಳು!

--ಶ್ರೀ

ಸಮಾಧಾನದಿಂದ ಉತ್ತರಕ್ಕಾಗಿ ಕಾಯುತ್ತಿರುವೆ ಭಾಸ್ಕರ್...
ಬೇರೆ ಪಕ್ಷಗಳ ಬಗ್ಗೆ ಹೀಗೆ ಬರೆದಿದ್ದೆನೆಂದು ಹೇಳಿದ್ದಾರೆ...
ಹಾಗಾಗಿ ನನ್ನ ಕುತೂಹಲ ತುಸು ಹೆಚ್ಚೇ ಇದೆ.

--ಶ್ರೀ

Pages