ನನ್ನದಾಗಿರಲಿ ನನ್ನ ಬದುಕು -ಭಾಗ ೨

To prevent automated spam submissions leave this field empty.

ಮೊದಲ ಭಾಗ http://www.sampada.net/article/15857

ಕಾರು ಮುಂದೆ ಚಲಿಸುತ್ತಿದ್ದರೂ ಮನಸ್ಸು ಮಾತ್ರ ಸ್ಠಿಮಿತದಲ್ಲಿರಲಿಲ್ಲ
ಕಣ್ಣಿನ ಮುಂದೆ ಏನೂ ಅಪರಾಧ ಮಾಡದೆ ಶಿಕ್ಷೆ ಅನುಭವಿಸುತ್ತಿರುವ ಅಪ್ಸರಾಳ ಮೊಗವೇ ಕಾಣ್ಣುತಿತ್ತು.
ಮನಸ್ಸು ಗೊಂದಲದ ಗೂಡಿನಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿತ್ತು.
ಹೌದು ಅಪ್ಸರಾಳ ಆ ಮೊಗ ಮಂಗಳಾ ಎನ್ನುವ ಹದಿನೆಂಟರ ಹರೆಯದ ಆ ಮುಗ್ದ ಹೆಣ್ಣಿನ ಮೊಗವನ್ನೇ ಹೋಲುತ್ತಿತ್ತು.
ಅದಕ್ಕೆ ಸಾಕ್ಷಿಯೂ ಆ ಹಾಸ್ಪಿಟಲ್‌ನಲ್ಲಿ ಹುಡುಕಿದರೆ ಸಿಗುತ್ತಿತ್ತು.
ಆದರೆ ಆ ಧೈರ್ಯ ಬರಲಿಲ್ಲ ಯಾವುದಕ್ಕೂ ಇವರನ್ನು ಕೇಳಿ ಮುಂದುವರಿಯುವ ಎನ್ನುವ ಆಲೋಚನೆ ಬಂದಿತು
ಕೂಡಲೆ ಮೊಬೈಲ್‌ಗೆ ಕಾಲ್ ಮಾಡಿದೆ
"ಆ ನನಗೂತ್ತಿತ್ತು ನೀನೊಪ್ಕೋತೀಯಾ ಅಂತ , ಹೇಳು ಲಕ್ಷ್ಮಿ ಯಾವಾಗ ಇಟ್ಟುಕೊಳ್ಳೋಣ ಮೀಟಿಂಗ್" ಚಂದ್ರು ಸಂತೋಷವಾಗಿದ್ದರು.
"ರೀ ಅದಲ್ಲ ಅದೂ ..... ಇವತ್ತು ಒಂದು ವಿಷ್ಯ ಮಾತಾಡೋದಿದೆ"
" ಯಾವ ವಿಷ್ಯ?" ಗಡುಸಾಯ್ತು ದ್ವನಿ
ಮುಂದೆ ಮಾತಾಡೂವ ಧೈರ್ಯ ಬರಲಿಲ್ಲ
ಫೋನ್ ಆಫ್ ಮಾಡಿದೆ.
ರಾಜು ಗಮನಿಸುತ್ತಲೇ ಇದ್ದ
"ಮೇಡಮ್ ಯಾಕೆ ಏನಾಯ್ತು? ಡಾಕ್ಟರ್‍ನ್ ಕರೀಲಾ"
"ಬೇಡ ರಾಜು" ಸಂಕಟದಿಂದಲೇ ನುಡಿದೆ
ಕೈನಲ್ಲಿದ್ದ ಫೋನ್ ನನ್ನದೇ ಹಾಡ ಹಾಡಿತು
ಅದು ನನ್ನ ಪಿ.ಎ ಕಾಲ್. ಹೆಸರಿಗೆ ನನ್ನ ಪಿ.ಎ ಆದರೆ ಮಾಡುವುದೆಲ್ಲಾ ಇವರ ಕೆಲಸ
ಫೋನ್ ಎತ್ತಲಿಲ್ಲ ನನಗೆ ಗೊತ್ತು, ಇಂದು ಮೂರು ಹಾಡಿನ ರೆಕಾರ್ಡಿಂಗ್ ಇತ್ತು . ನಾನು ಹೋಗಬೇಕಾಗಿದೆ. ಮೆಸೇಜ್ ಮಾಡಿದೆ . "ಡೋಂಟ್ ಡಿಸ್ಟರ್ಬ್ ಮಿ ಟುಡೇ . ಐ ಡೋಟ್ ವಾಂಟ್ ಟು ಅಟೆಂಡ್ ಅನಿ ರೆಕಾರ್ಡಿಂಗ್ ".
ಅದ್ಯಾವ ಸಮಯ್ದಲ್ಲಿ ಮನೆ ಬಂತೋ, ತಿಳಿಯಲೇ ಇಲ್ಲ .
ಹಾಗೆ ಹಾಸಿಗೆಗೊರಗಿ ಕಣ್ಮುಚ್ಚಿದರೆ ಮಂಗಳಾಳ ದೀನ ಮುಖವೇ ಕಾಣಿಸುತ್ತಿದೆ, ಕಣ್ತೆರೆದರೆ, ಮುಗ್ಧ ಹೆಣ್ಣು ಅಪ್ಸರಾಳ ನೆನಪು,
ಆಗಲೆ ಅಪ್ಸರಾ ಇಲ್ಲವಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ? ಅವಳ ಈ ಬದುಕಿಗೆ ನೀನೆ ಕಾರಣ ಮಂಗಳಾ ಮಾಡಿ ನನ್ನತ್ತ ತೋರುತ್ತಿದ್ದಂತೆ ಭಾಸವಾಗಿ ಬೆಚ್ಚಿ ಬಿದ್ದೆ.

ಮತ್ತೆ ಮೊಬೈಲ್ ಹಾಡ ಹಾಡಿತು . ಅದು ಚಂದ್ರು ಕಾಲ್
" ಲಕ್ಷ್ಮಿ , ಯಾಕೆ ಏನಾಗಿದೆ ನಿಂಗೆ ಇವತ್ತಿನ ಎಲ್ಲಾ ಪ್ರೊಗ್ರಾಮ್ ಕ್ಯಾನ್ಸೆಲ್ ಮಾಡಿದ್ರೆ ಹೇಗೆ. ನಿನ್ನ ನಂಬಿಕೊಂಡು ಅವರು ಎಲ್ಲಾ ಸಿದ್ದತೆ ಮಾಡಿದಾರೆ. ಇದ್ಯಾಕೋ ಬರ್ತಾ ಬರ್ತಾ ಅತಿಯಾಗ್ತಿದೆ. ನನ್ನ ಕೇಳದೆ ಇಂಥಾ ನಿರ್ಧಾರ ಹೇಗೆ ತಗೊಂಡೆ."
"ರೀ ಮನಸ್ಸು ಯಾಕೋ ಸರಿ ಇಲ್ಲಾ , ದಯವಿಟ್ಟು ಸ್ವಲ್ಪ ನಾನು ಹೇಳೋ ಕೇಳಿ, ಈಗಲೇ ಬನ್ನಿ , ನಾನೊಂದು ವಿಷಯ ಹೇಳಬೇಕು" ಅಷ್ಟು ಹೇಳುವಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು
"ಯು ಆರ್ ರಿಯಲ್ಲಿ ಸ್ಪಾಯ್ಲಿಂಗ್ ಮೈ ಮೂಡ್,ಹೇಳೋ ಹಾಗಿದ್ರೆ ಫೋನ್‌ನಲ್ಲೇ ಹೇಳು ಇಲ್ಲಾಂದರೆ ಸಾಯಂಕಾಲ ಬರ್ತೀನಿ . ಆಗ ಮಾತಾಡು." ಉತ್ತರಕ್ಕೂ ಕಾಯದೆ ಕಟ್ ಮಾಡಿದರು.
ಹೊರಗಡೆ ಗಲಾಟೆ ಕೇಳುತ್ತಿತ್ತು.
ಅದು ನವೀನನ ದನಿ
ನನ್ನನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ರಾಜುವಿಗೆ ಛೀಮಾರಿ ಹಾಕುತ್ತಿದ್ದ. ಆಗಲೇ ಅಪ್ಸರಾಳ ಜೊತೆ ಮಾತಾಡಿದ್ದು ಇವನಿಗೆ ಗೊತ್ತಾಗಿ ಹೋಗಿದೆ, ಮಾಡಲು ಇನ್ನೇನು ಕೆಲಸವಿಲ್ಲ, ಊರಲ್ಲೆಲ್ಲಾ ಸ್ಪೈಸ್ ಇಟ್ಟಿದ್ದಾನೆ.
ಹೋಗಿ ತಡೆಯಬೇಕು ಅನ್ನಿಸಿತು. ಆದರೆ ಆಗಲಿಲ್ಲ. ಮಾತಾಡಿದರೆ ನನ್ನನ್ನ ಪ್ರಶ್ನೆ ಮಾಡುತ್ತಾನೆ. ಅವನಿಗೆ ಏನು ಹೇಳುವುದು?
ನಾನು ಸಾಯಂಕಾಲಕ್ಕೆ ಕಾಯುತ್ತಿದ್ದೆ . ಸಾಯಂಕಾಲವಾಯ್ತು, ರಾತ್ರಿಯಾಯ್ತು . ಕೊನೆಗೂ ಚಂದ್ರು ಬಂದರು.
ಎಂದಿನಂತೆ ಇಂದು ನಶಾ ಏರಿರಲಿಲ್ಲ.
ಬಹುಷ ನನ್ನೊಡನೆ ಮಾತಾಡಲು ಕುಡಿದು ಬರಲಿಲ್ಲವೆನಿಸುತ್ತದೆ. ಊಟ ಮುಗಿಸಿ ಬಂದಾಗ ತಲೆಸಿಡಿಯುತ್ತಿತ್ತು. ಆದರೂ ಅವರನ್ನು ಕೇಳಲೇಬೇಕಿತ್ತು. ಹುಡುಗಿಯೊಬ್ಬಳ ಬಾಳಿನ ಪ್ರಶ್ನೆ ಅದಾಗಿತ್ತು.
ಅವರಿಗೆ ವಿವರಿಸಿದೆ
ಅಪ್ಸರಾಳನ್ನುನೋಡಿದ್ದು , ಅವಳ ಮುಖದ ಹೋಲಿಕೆ, ಅವಳ ಹಿಂದಿನ ಬಾಳು, ನನ್ನ ಅನುಮಾನ ಸತ್ಯವಾಗಿದ್ದು.
ಮೊದಲಿಗೆ ಅವರಿಗೂ ನೆನಪಿಗೆ ಬರಲಿಲ್ಲ
ನಂತರ ನೆನಪಿನ ಮೂಟೆಯಲ್ಲಿ ಸಮಾಧಿ ಮಾಡಿ ಹಾಕಿದ್ದ ಘಟನೆಯೊಂದರ ಮೂಟೆಯಿಂದ ಆ ಸತ್ಯದ ಅಸ್ಥಿ ಪಂಜರದ ದರ್ಶನ ಮಾಡಿಸಿದೆ.
"ವಾಟ್ ದಿ ಹೆಲ್ ಯು ಆರ್ ಟಾಕಿಂಗ್. ? ಈಗಾಗಲೆ ಮುಗಿದು ಹೋಗಿರೋ ಕತೇನ ತೆಗೆದು ಮನೆ ಮರ್ಯಾದೆ ತೆಗೀಬೇಕಂತೀದೀಯಾ?" ಗುಡುಗಿದ ರಭಸಕ್ಕೆ ನನ್ನ ಮೈನಲ್ಲಿದ್ದ ಶಕಿಎಲ್ಲಾ ಉಡುಗಿದಂತಾಯ್ತು
"ರೀ ವಿಷ್ಯ ಯಾರಿಗೂ ಹೇಳೋದು ಬೇಡ, ಆದರೆ ಆ ಹುಡುಗಿಗೊಂದು ಬಾಳು ಕೊಟ್ಟು ನಮ್ಮಿಂದಾಗಿರೋ ಅನ್ಯಾಯಾನಾ ಸರಿಮಾಡೋಣ ಅಂತ, ನಮ್ಮ ಚಿರೂಗೆ ವಿಷಯ ಹೇಳೋಣ" ಹಿಂಜರಿಯುತ್ತಲೆ ಹೇಳಿದೆ
"ಸಾಧ್ಯಾನೆ ಇಲ್ಲ, ಏನಾಟ ಆಡ್ತೀದೀಯಾ ? ಈಗ ಚಿರು ನಿನ್ನ ಅಥವ ನನ್ನ ಚಿರು ಅಲ್ಲ ಎಮ್. ಎಲ್. ಎ ಚಿರಂಜೀವಿ ನಾಳೆ ಮಿನಿಸ್ಟರ್ ಆಗೋ ಲಿಸ್ಟ್ನ್‌ನಲ್ಲಿರೋನು. ಅವನ ಹಿಂದೆ ಈ ಬ್ಲಾಕ್ ಮಾರ್ಕ್ ಇದೆ ಅಂತ ಮೀಡಿಯಾಗೇನಾದ್ರೂ ಒಂಚೂರು ಗೊತ್ತಾದ್ರೆ ಅವನ ಕೆರಿಯರ್ ಏನಾಗಬೇಕು " ಕಡ್ದಿ ತುಂಡು ಮಾಡಿದಂತೆ ನುಡಿದರು.
" ಮತ್ತೆ ನೀನು ಆ ಹುಡುಗಿ ಜೊತೆ ಮಾತಾಡೋದು ಮೀಡಿಯಾ ಕಣ್ಣಿಗೆ ಬೀಳೋದು, ಇಲ್ಲ ಸಲ್ಲದ ಪ್ರಚಾರ ಹುಟ್ಟೋದು, ಅದರಿಂದ ನವ್ಯಾ ಮದುವೆಗೂ ತೊಂದರೆ ಆಗೋದು ನಂಗೆ ಇಷ್ಟ ಇಲ್ಲ . ಹಾಗೇನಾದರೂ ಆದರೆ ನಾಳೆ ನಾನು ಯಾವ ಮಟ್ಟಕ್ಕೂ ಬೇಕಾದರೂ ಹೋಗೋಕೆ ರೆಡಿ ಗೊತ್ತಲ್ಲಾ" ಕಣ್ಣಲ್ಲಿ ಕಣ್ನನಿಟ್ಟು ಪ್ರಶ್ನಿಸಿದರು. ಆ ತೀಕ್ಣ ನೋಟಕ್ಕೆ ಬೆದರಿ ಹಿಂದೆ ಸರಿದೆ.
ಮಾತು ಮತ್ತೆ ಬರಲಿಲ್ಲ. ಈ ನೋಟಕ್ಕೆ ನಾನು ಹೆದರಿ ಬೆಚ್ಚಿ ಬೀಳುವುದು . ಆ ನೋಟದಲ್ಲಿ ನನ್ನನ್ನು ಕೊಲ್ಲುವ ಅಥವ ಹಿಂಸಿಸುವ ಅದಾವ ಭಾವವಿತ್ತೋ ನನಗೆ ಗೊತ್ತಿಲ್ಲ. ಆದರೆ ಅವರ ಆ ಒಂದು ನೋಟದ ಸನ್ನೆಗೆ ಮುದುಡಿ ಕೂರುತ್ತಿದ್ದೆ.
ಮುಂದಿನ ಭಾಗ (http://www.sampada.net/article/15921

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರೂಪಕ್ಕ ಈ ಸಂಚಿಕೆಯಲ್ಲೂ ನಾನು ಕೇಳಿದ ಪ್ರೇಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಮತ್ತು ಸಿಕ್ಕದೆ ಮತ್ತಷ್ಟು ಕುತೂಹಲ ಕೆರಳಿಸಿದೆ ಅದರಲ್ಲಿ ಮಂಗಳ ಅನ್ನೊ ಹೊಸ ಪಾತ್ರ ,ಈ ಪಾತ್ರಕ್ಕೂ ಮತ್ತು ಚಿರುವಿಗೆ ಏನೊ ಸಂಬಂದವಿದೆ ಅಂತ ಗೊತ್ತಾಗುತ್ತದೆ ಹಾಗಾದರೆ ಆ ಚಿದು ಯಾರು ? ಮತ್ತು ಮಂಗಳನಿಗೆ ಚಿದುವಿನಿಂದ ಏನಾಯಿತು ,ಈಗ ಅವಳೇನಾದಳು ಮತ್ತು ಚಿದು ಲಕ್ಷ್ಮಿಗೆ ಏನಾಗಬೇಕು ? ನೀವೂ ಬರೆಯುತ್ತಿರುವ ಕಥೆ ತುಂಬ ಚೆನ್ನಾಗಿ ಬರುತಿದೆ ಮತ್ತೆ ಮುಂದಿನ ಸಂಚಿಕೆಗಾಗಿ ಕಾಯುವೆ ,ಬಹುಷಃ ಮುಂದಿನ ಸಂಚಿಕೆಯಲ್ಲಿ ನನ್ನ ಪ್ರೆಶ್ನೆಗಳಿಗೆ ಉತ್ತರ ಸಿಗಬಹುದು ಅಲ್ಲವೆ

ಆ ಮರೆತಿದ್ದೆ ರೂಪಕ್ಕ ಚಿರಂಜೀವಿ ಅಂದರೆ ನಟ ಮೆಗಾಸ್ಟಾರ್ ಚಿರಂಜೀವಿಯೇ
ಹ್ಹಹ್ಹಹ್ಹಹ್ಹ :)

ನಿಮ್ಮವ

ಮಧುಸೂದನ್ ಗೌಡ