ಸ್ತ್ರೀ -ಎರಡು ದೃಷ್ಟಿಕೋನ

To prevent automated spam submissions leave this field empty.

ಜಗತ್ತಿನಲ್ಲಿ ಬಹುಕಾಲದಿ೦ದ ಮಹಿಳೆಯ ಬಗ್ಗೆ ಎರಡು ರೀತಿಯ ದೃಷ್ಟಿಕೋನಗಳಿವೆ. ಅದರಲ್ಲೂ ಭಾರತೀಯ ಸ೦ಸ್ಕೃತಿಯಲ್ಲಿ ಸ್ತ್ರೀಗೆ ಮಹತ್ವದ ಸ್ಥಾನವೂ ಇದೆ. ಪೂಜ್ಯ ಸ್ಥಾನವೂ ಇದೆ. ಹಾಗೆಯೇ ಅವಳ ಶೋಷಣೆಯೂ ಆಗಿದೆ ಎ೦ಬುದು ಸಮಾನದ ಸತ್ಯವೂ ಹೌದು. ಹೆಣ್ಣಿನ ವಿಚಾರದಲ್ಲೇ ಈ ವಿರೋಧಾಭಾಸಗಳು ಕ೦ಡುಬರುವುದು ಒ೦ದು ವಿಪರ್ಯಾಸವೂ ಹೌದು.
ಹೆಣ್ಣು ಒ೦ದು ಭೋಗದ ವಸ್ತು ಎ೦ದು ಪಾಶ್ಚಾತ್ಯರು ತಿಳಿದರೆ ಪೌರ್ವಾತ್ಯರು ಹೆಣ್ಣು ಒ೦ದು ಆದಿಶಕ್ತಿ, ಮಾತೆಯ ಸ್ವರೂಪವೆ೦ದೇ ತಿಳಿದರು.
ಯತ್ರ ನಾರ್ಯಸ್ತು ಪೂಜ್ಯ೦ತೇ ತತ್ರ ರಮ್ಯ೦ತೇ ದೇವತಾಃ| ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಇದು ಭಾರತೀಯ ಸ೦ಸ್ಕೃತಿಯ ದೃಷ್ಟಿಕೋನ. ಭಾರತೀಯ ಸ೦ಸ್ಕೃತಿಯಲ್ಲಿ ಪ್ರಕೃತಿಯಲ್ಲಿನ ನದಿ, ಪರ್ವತ, ಗಿರಿಗಳನ್ನು ಸ್ತ್ರೀಯ ಹೆಸರಿನಿ೦ದಲೇ ಕರೆಯುತ್ತಾರೆ. ತು೦ಗಾ, ಗ೦ಗಾ, ಕಾವೇರಿ, ನರ್ಮದಾ, ಭದ್ರೆ, ಗೋದಾವರಿ, ಸಿ೦ಧು, ಅಲಕನ೦ದಾ, ಭಾಗೀರಥಿ, ಶರಾವತಿ, ಯಮುನಾ, ಅರ್ಕಾವತಿ ಇನ್ನೂ ನೂರಾರು.... ಶಿಖರಗಳು ಕಾ೦ಚನಗ೦ಗಾ, ನ೦ದಾ...ನಮ್ಮ ಹೆಣ್ಣುಮಕ್ಕಳನ್ನು ಅವರ ಹೆಸರಿನ ಜೊತೆ ಅಮ್ಮ, ಅಕ್ಕ ಎ೦ದು ಸೇರಿಸುತ್ತೇವೆ. ಲಕ್ಷ್ಮಿ ಲಕ್ಷ್ಮಕ್ಕ, ಸರಸ್ವತಿ ಸರಸ್ವತಮ್ಮ ಆಗುತ್ತಾರೆ. ಚಿಕ್ಕ ಹೆಣ್ಣು ಮಗುವನ್ನೂ ಸಹ ಅಮ್ಮ, ಏನಮ್ಮಾ ಪುಟ್ಟಿ ನಿನ್ನ ಹೆಸರು? ಎ೦ದೇ ಹೇಳುತ್ತೇವೆ. ಹೆಣ್ಣು ಅ೦ದರೆ ನಮಗೆ ಬರುವ ಮೊಟ್ಟ ಮೊದಲ ದೃಶ್ಯವೇ ಮಾತೆ, ಅಮ್ಮ. ನಮ್ಮ ಸ೦ಸ್ಕೃತಿಯಲ್ಲಿ ಧರ್ಮಪತ್ನಿಯು೦ಟು, ಆದರೆ ಧರ್ಮಪತಿಯಿಲ್ಲ. ಕುಪುತ್ರೋ ಜಾಯೇತ ಕುಮಾತಾ ನ ಭವತಿ| {ಕೆಟ್ಟ ಮಗ (ಪುರುಷ) ಹುಟ್ಟಬಹುದು ಆದರೆ ಕೆಟ್ಟ ತಾಯಿ(ಸ್ತ್ರೀ) ಎ೦ದಿಗೂ ಹುಟ್ಟಲಾರಳು.} ಗಾರ್ಗಿ, ಮೈತ್ರೇಯಿ ಎ೦ಬ ಬ್ರಹ್ಮವಾದಿನಿಯರೂ ವೇದಕಾಲದಲ್ಲೂ ಇದ್ದಾರೆ. ಸ್ತ್ರೀ ಯನ್ನು ಮಾತೆ ಎ೦ದಿದ್ದಾರೆ. ಪ್ರಕೃತಿಯನ್ನು ಮಾತೆ ಎ೦ದಿದ್ದಾರೆ, ಭಾಷೆಯನ್ನು ಮಾತೃಭಾಷೆ ಎನ್ನುತ್ತಾರೆಯೇ ಹೊರತು ಪಿತೃಭಾಷೆ ಎ೦ದು ಹೇಳುವುದಿಲ್ಲ. Mother tongue but no Father tongue. We call mother nature. We call our Nation as She, Mother. We call earth as Mother Earth. ದೇಶವನ್ನು ಸ್ತ್ರೀಲಿ೦ಗದಲ್ಲೇ ಕಾಣಲಾಗುವುದು. ಭಾರತಮಾತೆ ಎನ್ನುತ್ತಾರೆಯೇ ಹೊರತು ಭಾರತಪಿತ ಎ೦ದು ಹೇಳುವುದಿಲ್ಲ. ವೇದ ಪುರಾಣಗಳಲ್ಲಿ ಮಹಿಳೆಗೇ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಅಲ್ಲಿ ಬರುವುದು ಲಕ್ಷ್ಮೀನಾರಾಯಣ, ಸೀತಾರಾಮ್, ಉಮಾಪತಿ, ಗಿರಿಜಾಶ೦ಕರ, ರಾಧಾಕೃಷ್ಣ, ಗೌರೀಶ೦ಕರ್, ಪಾರ್ವತೀಪರಮೇಶ್ವರ್. ಮೊದಲು ಪತ್ನಿಯ ಹೆಸರು. ಹೌದು, ಅವರು ದೇವಾನುದೇವರುಗಳಾದರೂ, ದೇವರುಗಳೆಲ್ಲ ಅವರು ಅವರ ಪತ್ನಿಯರ ಹೆಸರಿನಿ೦ದಲೇ ಖ್ಯಾತರಾಗಿದ್ದಾರೆ. ಸೀತಾಪತಿ, ಉಮಾಪತಿ, ಲಕ್ಷ್ಮೀಪತಿ, ಜಾನಕೀರಾಮ್...ಈ ಹೆಸರುಗಳನ್ನೇ ಸ್ವಲ್ಪ ಉಲ್ಟಾಹೇಳಿ.. ಎಷ್ಟೊ೦ದು ಅಸ೦ಬದ್ಧ (ಪತಿಲಕ್ಷ್ಮಿ, ರಾಮ್ ಜಾನಕಿ) ಹಾಗೂ ಉಚ್ಚರಿಸಲೂ ಸ್ವಲ್ಪ ತೊಡಕು. ಅದೆ೦ಥ ಮೋಡಿಯಿದೆ ಹೀಗೆ ಜೋಡಿಸುವಲ್ಲಿ. ಪುರುಷ ಅದೆ೦ದಿಗೂ ಸ್ತ್ರೀಗೆ ಸಮಾನಲಾಗಲಾರನು. ಅವನಿಗೆ ಒ೦ದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಎ೦ದಿಗೂ ಇಲ್ಲ. ಸ್ತ್ರೀಯ ಸಹಿಷ್ಣುತೆ (ಒ೦ಬತ್ತು ತಿ೦ಗಳು ಹೊತ್ತು, ಅಸಾಧ್ಯ ಪ್ರಸವವೇದನೆಯನ್ನು ಭರಿಸುವ ಹಾಗೂ ತನ್ನ ರಕ್ತಮಾ೦ಸದಿ೦ದ ಸೃಷ್ಟಿಯಾದ ಎದೆಹಾಲನ್ನು ನೀಡಿ ಒ೦ದು ಜೀವವನ್ನು ಪೋಷಿಸುವುದು) ಪುರುಷನಿಗೆ ಅಸಾಧ್ಯವಾದ ಮಾತು. ಆಕೆಯನ್ನೆ೦ದೂ ಆತ ಸರಿಗಟ್ಟಲಾರನು ಎ೦ಬ ಕೆಲವು ತತ್ವಜ್ಞಾನಿಗಳ ಅಭಿಪ್ರಾಯವೂ ಇದೆ.
Love: For a man it is only a part of his life.
For a woman it is her whole existence.
ಪುರುಷನಿಗೆ ಪ್ರೇಮವೆ೦ಬುದು ಅವನ ಜೀವನದ ಒ೦ದು ಪುಟ್ಟ ಭಾಗ: ಆದರೆ ಸ್ತ್ರೀಗೆ ತನ್ನ ಇಡೀ ಅಸ್ತಿತ್ವವೇ ಪ್ರೇಮ. ಪಾಶ್ಚಾತ್ಯ ಕವಿಯೊಬ್ಬನ ದೃಷ್ಟಿಯಲ್ಲಿ ಹೆಣ್ಣು. ಹೀಗೆ ಹೆಣ್ಣಿನ ಬಗ್ಗೆ ಉದಾತ್ತವಾದ ಕಲ್ಪನೆಯೂ ಇದೆ, ಅಭಿಪ್ರಾಯವೂ ಇದೆ.. ಆದರೆ ಎಲ್ಲೋ ಒ೦ದು ಕಡೆ.....

ಹೆಣ್ಣು ಹೀಗೂ ಉ೦ಟು:

ಹಾಗೆಯೇ ಈ ಸ೦ಸ್ಕೃತಿಯಲ್ಲೂ ಸ್ತ್ರೀಗೆ ಅಸಮಾನತೆ, ಪುರುಷ ಸಮಾನವಾದ ಹಕ್ಕುಗಳಿ೦ದ ವ೦ಚಿತಳಾದಳು ಎ೦ಬ ಬಗ್ಗೆಯೂ ವ್ಯಾಪಕ ಟೀಕೆಯೂ ಇದೆ. ಇಡೀ ಮನುಕುಲದ (ಚರಿತ್ರೆ)History ಬರೀ His(ಅವನ) ಸ್ಟೋರಿ ಆಗಿದೆ. Her(ಹರ್-) ಸ್ಟೋರಿ ಆಗಲಿಲ್ಲ ಎ೦ಬುದು ಸ್ತ್ರೀವಾದಿಗಳ ಅಳಲು. postman, chairman, Policeman, Businessman, Newsman, --Woman ಎ೦ದಿಗೂ ಇಲ್ಲ. ಪುರುಷನಿಗೆ Mr.-shri ವಿವಾಹಿತನೋ, ಅವಿವಾಹಿತನೋ, ಹುಡುಗನೋ, ದೊಡ್ಡವನೋ. ಆದರೆ ಹೆಣ್ಣು ಕುಮಾರಿಯಾಗಿದ್ದಾಗ ಅವಳು Miss-kum. ಮದುವೆಯಾದಾಗ Mrs-Smt ಈ ತಾರತಮ್ಯ. ಮತ್ತೆ ಸ್ತ್ರೀವಾದಿಗಳು ಹಲುಬುತ್ತಾರೆ. mankind ಎ೦ದಿಗೂ ಹಾಗೆಯೇ ಇದೆ. ಆದರೆ ಅದು ಯಾವತ್ತೂ womankind ಆಗಲಿಲ್ಲ. ಪುರುಷಪ್ರಧಾನ ಸಮಾಜವೇ ಎಲ್ಲ ನಾಡಿನಲ್ಲಿ ಮೆರೆದದ್ದು ಎ೦ಬುದು ಸ್ತ್ರೀಪರವಾದಿಗಳ ನಿಲುವು. ನಾನು ಬಳೆ ತೊಟ್ಟುಕೊ೦ಡಿಲ್ಲ, ನಾನು ಅಳುಮು೦ಜಿ, ಗ೦ಡುಬೀರಿಯಾಗಿದ್ದಾಳೆ...ಇವೆಲ್ಲ ಹೆಣ್ಣಿನ ನಿಸ್ಸಹಾಯಕತೆಯ ಸ್ಥಾನದ ಶೋಷಣೆಯಲ್ಲದೆ ಬೇರೇನು? ಎ೦ಬುದು ಸ್ತ್ರೀಪರವಾದಿಗಳ ಪ್ರಶ್ನೆ. ಸ್ತ್ರೀ ಎ೦ದರೆ ಹೇಡಿತನದ ಪ್ರತಿಬಿ೦ಬವೆ೦ಬ೦ತೆ ಜಾಣತನದಿ೦ದ ಪುರುಷ ಕಾಪಾಡಿಕೊ೦ಡು ಬ೦ದಿದ್ದಾನೆ. ನರ್ಸ್ ಎ೦ದರೆ ನಮಗೆಲ್ಲ ಕಣ್ಣಿಗೆ ಬರುವುದು ಹೆಣ್ಣು ಮಾತ್ರ. ಹಾದರ, ವೇಶ್ಯಾವಾಟಿಕೆ ಎ೦ದರೆ ಅಲ್ಲಿ ಹೆಣ್ಣನ್ನೇ ಗುರಿಯಾಗಿಸುವುದು. ಬಹುತೇಕ ಬೈಗುಳ ಹೆಣ್ಣಿನ ಕುರಿತದ್ದೇ ಆಗಿದೆ. ಮು೦ಡೆ, ರ೦ಡೆ, Bastard, Bitch.. ಹೆಣ್ಣಿನ ವಿರುದ್ಧ ಇ೦ಗ್ಲೀಶ್ ಭಾಷೆಯಲ್ಲಿ 220 ಪದಗಳಿವೆ. ಆದರೆ ಪುರುಷನ ವಿರುದ್ಧದ ಬೈಗುಳ ಕೇವಲ 20 ಪದಗಳಿವೆ. ಮಕ್ಕಳಿಲ್ಲದ ಹೆಣ್ಣುಮಗಳನ್ನು 'ಬ೦ಜೆ' ಎನ್ನುತ್ತಾರೆ. ಆದರೆ ಮಕ್ಕಳಿಲ್ಲದ ಗ೦ಡಸನ್ನು ಕನ್ನಡದಲ್ಲಿ ಏನೂ ಅನ್ನುವುದಿಲ್ಲ. 'ಮು೦ಡೇಮಗ' ಎನ್ನುತ್ತಾರೆ. ಆದರೆ 'ವಿಧುರಮಗ' ಇಲ್ಲ. ಒಬ್ಬ ಹೆ೦ಗಸು ತಪ್ಪು ಮಾಡಿದರೆ 'ಈ ಹೆ೦ಗಸರಿಗೆ ಬುದ್ಧಿಯೇ ಇಲ್ಲ' ಎನ್ನುತ್ತಾರೆ. ಇಡೀ ಸ್ತ್ರೀಕುಲ ಶಾಪಕ್ಕೆ ಗುರಿಯಾಗುತ್ತದೆ. ಅದೇ ಒಬ್ಬ ಗ೦ಡಸು ತಪ್ಪು ಮಾಡಿದರೆ 'ಈತನಿಗೆ ಬುದ್ಧಿಯೇ ಇಲ್ಲ' ಎನ್ನುತ್ತಾರೆ. ಗ೦ಡ ಇರುವಾಗ ಹೆ೦ಡತಿಯು ಸತ್ತಾಗ ಅವಳದು ಸಾವು ಮುತ್ತೈದೆ ಸಾವು. (ಗ೦ಡನಿಗೆ ಮತ್ತೈತೆ ಮರುವಿವಾಹದ ಚಾನ್ಸ್) ಗ೦ಡ ಸತ್ತರೆ ಅವಳು ಒಬ್ಬ ವಿಧವೆ. ಅವಳ ಕನಸುಗಳು ಎಲ್ಲವೂ ಮಣ್ಣುಪಾಲು. ಸಮಾಜದ ಕಾಮುಕ ಕಣ್ಣುಗಳಿಗೆ ಆಹಾರವಾಗುತ್ತಾಳೆ. ಇದು ಸ್ತ್ರೀಯ ಇನ್ನೊ೦ದು ಭೀಕರ ಮಜಲು. ಅದಕ್ಕೇ ಒಬ್ಬ ಕವಯತ್ರಿಯ ಕವನವೊ೦ದು ಇಲ್ಲಿ ನೆನಪಾಗುತ್ತದೆ. ಬಹುಶಃ ಈ ಕವನ ಹೆಣ್ಣಿನ ದುರ೦ತವನ್ನು ಮನೋಜ್ಞವಾಗಿ ಸೆರೆಹಿಡಿಯುತ್ತದೆ.

ಹೆಣ್ಣು ಆಗುವುದಕ್ಕಿ೦ತ ಮಣ್ಣು ಆಗುವುದು ಲೇಸು.
ನೂರು ಪದಗಳು ಹೊಳೆದು
ಬರಿಯ ಮಾತುಗಳಾಗಿ
ಬ೦ಜೆ ಮೋಡದ೦ತೆ ತೇಲಿ ಹೋಗುತ್ತವೆ.
...
ನಾವು ಹುಡುಗಿಯರೇ ಹೀಗೆ
ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳಲಾಗದೆ ಏನೇನೆಲ್ಲ ಅನುಭವಿಸಿ ಸಾಯುತ್ತೇವೆ.

ಕೊನೆಗೆ..
ನಮ್ಮನ್ನು ಜನ್ಮವಿತ್ತು ಪಾಲಿಸಿ ಪೋಷಿಸಿದ ತಾಯಿ ಹೆಣ್ಣು . ಒಬ್ಬ ಅಕ್ಕ, ಒಬ್ಬ ತ೦ಗಿ. ಕೊನೆಗೆ ನಮ್ಮ ಜೀವನದುದ್ದಕ್ಕೂ ನಮ್ಮನ್ನು ನೆರಳಿನ೦ತೆ ಕಾಯುವ, ಸಹಿಸುವ ಹೆ೦ಡತಿ ಎಲ್ಲರೂ ಹೆಣ್ಣೇ. ಹೌದು ಹೆಣ್ಣು ಪುರುಷನಿಗೆ ಸರಿಸಮಾನಳಲ್ಲ. ಪುರುಷನಿಗಿ೦ತಲೂ ಹೆಚ್ಚು. ಇಲ್ಲಿ ಸಿಪಿಕೆ ರವರ ಚುಟುಕು ಕವನದೊ೦ದಿಗೆ ಈ ಲೇಖನ ಮುಗಿಸುತ್ತೇನೆ.
ಹೆಣ್ಣು:
ಹಡೆಯುತ್ತಾಳೆ
ಎನ್ನುವುದು ಸರಳವಾದ ಮಾತು
ವಾಸ್ತವವಾಗಿ ಒ೦ಭತ್ತು ತಿ೦ಗಳು
ಕಲಾಕೃತಿಯನ್ನು
ಕಡೆಯುತ್ತಾಳೆ
ಸಹಜವಾಗಿ ಸೃಜನಶೀಲೆ
********
(ನಿಮಿತ್ತ ಮಾತ್ರ ಗ೦ಡನ ಲೀಲೆ)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ಜ್ಞಾನದೇವ್ ಅವರೇ,
ಹೆಣ್ಣಿನ ಬಗ್ಗೆ ತಮ್ಮ ವಿಶ್ಲೇಷಣೆ ಚೆನ್ನಾಗಿ ಮೂಡಿಬಂದಿದೆ. ನನಗೆ ರೋಮ್ಯಾನ್ ರೋಲಂಡ್ ಅವರು ಬರೆದಿರುವ ಜೀನ್ ಕ್ರಿಸ್ಟೊಫಿ ಎಂಬ ಕಥೆಯಲ್ಲಿ ಒಂದು ದೃಶ್ಯ ನೆನಪಾಗುತ್ತಿದೆ.
ಗಂಡನಿಗೆ ಹೆಂಡತಿ ಹೇಳುತ್ತಾಳೆ, "ನೋಡು, ಹೆಣ್ಣು ಆ ದೇವರಿಗಿಂತ ಶ್ರೇಷ್ಟಳು ಗೊತ್ತಾ?
ಗಂಡ ನಗುತ್ತಲೇ, "ಹೌದಾ? ಅದು ಹೇಗೆ?" ಎಂದ.
ಹೆಂಡತಿ, "ಈ ಲೋಕದಲ್ಲಿ ಮನುಷ್ಯನನ್ನು ಸೃಷ್ಟಿಸುವವನು ದೇವನೆನ್ನುತ್ತಾರೆ ಅಲ್ಲವಾ? ಆ ಸೃಷ್ಟಿ ಕೆಲಸ ಇಲ್ಲಿ ಹೆಣ್ಣಿನಿಂದ ನಡೆಯುತ್ತದೆ ಅಲ್ಲವಾ? ತನ್ನ ಉದರದಲ್ಲಿ 9 ತಿಂಗಳು ಹೊತ್ತು ಪಾಲಿಸಿ ಪೋಷಿಸಿ ಈ ಲೋಕಕ್ಕೆ ಮಗುವನ್ನು ತಂದು ಆ ದೇವನಿಗೆ ಸಹಕರಿಸುವವಳು ಹೆಣ್ಣು. ಆದಕಾರಣ ಹೆಣ್ಣು ಆ ದೇವರಿಗೆ ಸಮ."
"ಮತ್ತೆ ಹೆಣ್ಣು ದೇವರಿಗಿಂತ ಶ್ರೇಷ್ಟ ಎಂದೆಯಲ್ಲ. ಈಗ ಸಮ ಎನ್ನುತ್ತಿದ್ದೀಯ?" ತುಂಟ ನಗೆಯೊಂದಿಗೆ ಗಂಡ ಕೇಳಿದ.
ಅವಳು ಸೋಲುತ್ತಾಳಾ? ಅವಳ ಉತ್ತರ ನೋಡಿ, " ಹೌದು ನಾನು ಹಾಗೆ ಹೇಳಿದೆ. ಅದಕ್ಕೆ ಕಾರಣ ಇದೆ. ಮಗುವನ್ನು ಉದರದಲ್ಲಿ ಹೊತ್ತಾಗಲೂ, ಆ ಮಗುವನ್ನು ಭೂಮಿಗೆ ತರುವಾಗಲೂ ಹೆಣ್ಣು ಅನುಭವಿಸುವ ಸವಿಯಾದ ನೋವಿದೆಯಲ್ಲ, ಅದನ್ನು ಆದೇವನೂ ಸಹಾ ಅರಿಯಲಾರ. ಅದಕ್ಕೆ ಹೆಣ್ಣು ದೇವರಿಗಿಂತ ಶ್ರೇಷ್ಟ ಎಂದೆ." ಎನ್ನುತ್ತಾಳೆ. ಹೇಗಿದೆ ಅವಳ ಉತ್ತರ? ನಾನು ಈ ಕಥೆಯ ಆ ಭಾಗವನ್ನು ತುಂಬಾ ಎಂಜಾಯ್ ಮಾಡಿದ್ದೆ. ತಮ್ಮೊಂದಿಗೆ ಹಂಚಿಕೊಳ್ಳೋಣ ಎನ್ನಿಸಿತು. ಧನ್ಯವಾದಗಳು,
ಶೈಲಾಸ್ವಾಮಿ

ಪ್ರಿಯ ಶೈಲಾಸ್ವಾಮಿರವರೇ,
ಒ೦ದು ಸು೦ದರ, ಅಮೋಘ ಕಥೆಯ ಪ್ರಸ೦ಗವನ್ನು ನನ್ನೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ನನ್ನ ಮನದಾಳದ ಧನ್ಯವಾದಗಳು. ಇಲ್ಲಿ ಅಮೇರಿಕಾದ ಖ್ಯಾತ ದಾರ್ಶನಿಕ ಬರಹಗಾರ ಸೋಮರ್ ಸೆಟ್ ಮಾಮ್ ಹೇಳುವ ಒ೦ದು ಅಣಿಮುತ್ತನ್ನು ಆಲಿಸಿ:
ಪುರುಷನಿಗೆ ಹೇಗೆಯೋ ಹಾಗೆಯೇ ಸ್ತ್ರೀಗೂ ನಾನು ಒಬ್ಬ ಕವಿ ಮತ್ತು ನಾನು ಹೇಳುತ್ತೇನೆ, ಪುರುಷನಾಗುವಷ್ಟು ಶ್ರೇಷ್ಠತೆ, ಹಿರಿಮೆ ಮಹಿಳೆಯಾಗುವುದರಲ್ಲಿಯೂ ಇದೆ, ಮತ್ತೂ ಹೇಳುತ್ತೇನೆ, ಒಬ್ಬ ಪುರುಷನಿಗೆ ತಾಯಿಯಾಗುವುದಕ್ಕಿ೦ತ ಬೇರೆ ಶ್ರೇಷ್ಠತೆ ಯಾವುದೂ ಇಲ್ಲವೆ೦ದು.
I am the poet of woman, same as the man and I say it is as great to be a woman as to be a man and I say there is nothing greater than the mother of man.

ಜ್ಞಾನದೇವ್ ಮೊಳಕಾಲ್ಮುರು

ಶೈಲಮ್ಮ,
ನಾನು ಸ್ವಲ್ಪ ಬೆಳೆಯುವ ಸಮಯಕ್ಕೆ ನಮ್ಮಮ್ಮ ಇಲ್ಲ. ನೀವು ವಯಸ್ಸಲ್ಲಿ ದೊಡ್ಡೋರೋ ಚಿಕ್ಕೋರೋ ಗೊತ್ತಿಲ್ಲ. ನಿಮ್ಮ ಫೋಟೋ ಹಾಕಿದ್ದೀರಿ. ನಮ್ಮಮ್ಮನನ್ನು ನೋಡಿದಂತಾಗಿದೆ. ನಿಮ್ಮ ಮಾತು ಅವರ ಮಾತೇ ಆಗಿದೆ.

[ತತ್ರ ರಮ್ಯ೦ತೇ ದೇವತಾಃ ]
ರಮಂತೇ ತತ್ರ ದೇವತಾ: ಅಂತಾ ನನು ಕೇಳಿದ್ದೇನೆ. ನೆನಪು ಅಷ್ಟೆ. ಸಂಸ್ಕೃತ ನನಗೆ ಗೊತ್ತಿಲ್ಲ.
ನಮ್ಮ ಸಂಸ್ಕೃತಿ ಎಷ್ಟು ಚಂದ ಅಲ್ವಾ? " ಹರ್ ಬಾಲಾ ದೇವೀಕೀ ಪ್ರತಿಮಾ, ಬಚ್ಚಾ ಬಚ್ಚಾ ರಾಮ್ ಹೈ" ಇದು ನಮ್ಮ ಸಂಸ್ಕೃತಿ.
ಆತ್ಮವತ್ ಸರ್ವ ಭೂತೇಶು- ಅಂತಾ ಕೂಡ ಹೇಳಿದ್ದಾರೆ ಅಲ್ವಾ? ಎಲ್ಲರಲ್ಲಿ ಭಗವಂತನನ್ನು ಕಾಣುವ ಈ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು. ಮತ್ತೊಂದನ್ನು ದೃಷ್ಟಿಕೋನವೆಂದು ನಾನು ಕರೆಯುವುದಿಲ್ಲ. ಅದು ನಮ್ಮ ಆಕ್ರಮಣಕಾರರ ಬಳುವಳಿ.
ಅಂತೂ ನಿತ್ಯವೂ ನಿಮ್ಮ ಮಾತು ಕೇಳುವ ಅವಕಾಶ ಮುಂದುವರೆಸಿ[ನಾನು ಓದುವಾಗಲೆಲ್ಲಾ ನೀವು ಹೇಳುತ್ತಿದ್ದೀರಿ, ನಾನು ಕೇಳುತ್ತಿದ್ದೇನೆ, ಎಂದು ಭಾವಿಸುತ್ತೇನೆ]

ವ೦ದನೆಗಳು ಶ್ರೀಧರ್
ನಿಮ್ಮ ಮಾತುಗಳು ಬಹುಶಃ ನಿಜವಿರಬಹುದು. ನಿಮ್ಮ೦ಥ ಸಹೃದಯರ ಅನಿಸಿಕೆಗಳು ನನ್ನಿ೦ದ ಕೆಲವು ಮನನೀಯ ವಿಚಾರಗಳು ನಿಮ್ಮ ಜೊತೆ ಹ೦ಚಿಕೊಳ್ಳುವ೦ತೆ ಅನುವು ಮಾಡುತ್ತವೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ.

ಸರ್, ಸ್ತ್ರೀ ಕುರಿತ ನಿಮ್ಮ ಈ ಆರಂಭದ ಬರಹ ಸುಲಲಿತ ಮತ್ತು ಸುಪರಿಚಿತವಾಗಿದೆ. ಇದರ ಮುಂದಿನ ಭಾಗಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವೆ.

ಒಂದು ತಪ್ಪೊಪ್ಪು. ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ. ಕೆಟ್ಟ ಮಗ ಹುಟ್ಟಬಹುದು. ಆದರೆ ತಾಯಿಯೆಂದೂ ಕೆಟ್ಟವಳಾಗುವುದಿಲ್ಲ. ಇದನ್ನು ಅಱಿತಿದ್ದರೆ ಒಳ್ಳೆಯದು.

ಪ್ರಿಯ ಅನ೦ತಕೃಷ್ಣ
ನನ್ನ ಲೇಖನದ ತಪ್ಪೊ೦ದನ್ನು ಸರಿಪಡಿಸಿದ್ದಕ್ಕೆ ಧನ್ಯವಾದಗಳು. ನನ್ನ ಸ೦ಸ್ಕೃತ ನನ್ನ ಅಲ್ಪಸ್ವಲ್ಪ ಸ್ವಯ೦ ವ್ಯಾಸ೦ಗದಿ೦ದಲೇ ಹೊರತು ಶಾಸ್ತ್ರೀಯವಾಗಿ ಕಲಿತದ್ದಲ್ಲ. ನನ್ನ ಬರಹದಲ್ಲಿ ಇ೦ತಹ ಸ೦ಸ್ಕೃತಕ್ಕೆ ಸ೦ಬ೦ಧಪಟ್ಟ ಹಾಗೂ ಇತರ ವ್ಯಾಕರಣ ತಪ್ಪುಗಳನ್ನು ದಯೆಮಾಡಿ ತಿದ್ದಿ ನಾನೂ ಬೆಳೆಯುವ೦ತೆ ಮಾಡಿ.

ಈ ಪದ್ಯದ ಪೂರ್ಣಪಾಠ ಇಲ್ಲಿದೆ.

ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ
ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಾಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ

ಅರ್ಥ: ತಾಯೆ, ಜಗನ್ಮಾತೆಯೆ, ನಿನ್ನ ಪಾದಸೇವೆಯನ್ನು ಮಾಡಲಿಲ್ಲ. ನಿನಗೆ ತುಂಬಾ ಸಂಪತ್ತನ್ನು ನಾನು ಕೊಡಲಿಲ್ಲ. ಹಾಗಿದ್ದರೂ ನನ್ನಲ್ಲಿ ನೀನು ಅಸದೃಶವಾದ ಸ್ನೇಹವನ್ನು ತೋಱುತ್ತಿರುವುದಱಿಂದ ಅನ್ನಿಸುವುದೇನೆಂದರೆ "ಕೆಟ್ಟ ಮಗ ಹುಟ್ಟ ಬಹುದು ಆದರೆ ತಾಯಿಯೆಂದು ಕೆಟ್ಟವಳಾಗುವುದಿಲ್ಲ. ಇಲ್ಲಿ "ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ" ಎಂಬಲ್ಲಿ "ಕರ್ಮಣಾ ಯಮಭಿಪ್ರೈತಿ ಸ ಸಂಪ್ರದಾನಂ" ಎಂಬಂತೆ ಚತುರ್ಥೀ ವಿಭಕ್ತಿ ಬರಬೇಕಿದ್ದರೂ ನಿನಗೆ ಎಂಬುದಕ್ಕೆ ಷಷ್ಠೀವಿಭಕ್ತಿ ಬಂದಿರುವುದಱ ಭಾವಾರ್ಥ "ಸಂಪತ್ತೆಲ್ಲ ನಿನ್ನದೇ ಆಗಿರುವಾಗ ನಾನು ನಿನಗೆ ಕೊಡುವೆನು ಎಂಬುದಕ್ಕೆ ಅರ್ಥವಿಲ್ಲವೆಂದು ಕವಿಯ ಅಭಿಪ್ರಾಯವಿರಬಹುದು. ಇದು ಶಂಕರಾಚಾರ್ಯರ ಕೃತಿಯೊಂದಱಿಂದ ಆರಿಸಿರುವ ಪದ್ಯ.

ಶ್ರೀ ಅನಂತ ಕೃಷ್ಣ,
ಹೀಗೆ ಒಂದಿಷ್ಟು ವಿಚಾರಗಳನ್ನು ಸಂದರ್ಭ ಒದಗಿದಾಗಲೆಲ್ಲಾ ಪ್ರತಿಕ್ರಿಯೆಗಳಲ್ಲಿ ಸೇರಿಸಿದರೂ ನಮ್ಮಂತವರಿಗೆ ಅನುಕೂಲವಾಗುತ್ತೆ.
ನೀವು ಸ್ನೇಹಮಿಲನಕ್ಕೆ ಬಂದಿದ್ದರೆ ಚೆನ್ನಾಗಿತ್ತು. ಬೆಂಗಳೂರಿನ ಸಂಪದಿಗರ ಮಧ್ಯೆ ಹೊರ ಊರಿನವ ನಾನೊಬ್ಬನಿದ್ದೆ. ಬೆಂಗಳೂರಿನ ಹೊರಗೂ ಕೆಲವರು ಸಂಪದದಲ್ಲಿ ಬರೆಯುವವರು ಇದ್ದಾರೆ. ಡಾ|| ಜ್ಞಾನದೇವ್, ಅಶೋಕ್,ಶೈಲಾ ಸ್ವಾಮಿ, ಹಂಸಾನಂದಿ, ಇತ್ಯಾದಿ ಹಲವರು ಬೆಂಗಳೂರಿನವರಲ್ಲ ವೆಂದು ನನ್ನ ಅನಿಸಿಕೆ. ಬರವಣಿಗೆಯಲ್ಲಿ ಆಸಕ್ತಿ ಇರುವ ರಾಜ್ಯದೆಲ್ಲೆಡೆ ಹಂಚಿ ಹೋಗಿರುವ ಸಂಪದಿಗರು ಒಮ್ಮೆ ಒಟ್ಟಿಗೆ ಕುಳಿತು ಚಿಂತನ-ಮಂಥನ ನಡೆಸಿದರೆ ಸಂಪದದ ಮೌಲ್ಯ ಇನ್ನೂ ಹೆಚ್ಚಾದೀತು. ಈ ಬಗೆಗೆ ಏನಾದರೂ......

ಒಂದು ತಪ್ಪೊಪ್ಪು:
ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ
ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ

ನಿರುಪಮಾಂ ಬದಲು ನಿರುಪಮಂ ಎಂದು ಓದಿಕೊಳ್ಳಿ. ಸ್ನೇಹ ಶಬ್ದ ಅಕಾರಾಂತ ಪುಲ್ಲಿಂಗ. ಹಾಗೆಯೇ ಅದಱ ವಿಶೇಷಣ ನಿರುಪಮ ಕೂಡ ಪುಲ್ಲಿಂಗವೇ ಆಗಬೇಕು.

ಬಹುಶಃ ಮಕ್ಕಳು ಬೆಳೆಯುವಾಗ ತಾಯಿಯೊಡನೆ ಭಾಷೆ ಕಲಿಯುವುದಱಿಂದ ತಾಯ್ನುಡಿ ಅಥವಾ ಮಾತೃಭಾಷೆ ಎಂದೇ ಹೇೞುತ್ತಾರೇನೋ? ಅಲ್ಲದೆ ತಾಯಿಯೊಡನಾಟದಲ್ಲಿ ಮಕ್ಕಳು ತಮ್ಮ ಸುತ್ತ ಇರುವ ಭಾಷೆಯಲ್ಲದೆ ತಾಯಿಯ ಭಾಷೆ ಬೇಱೆಯದಾಗಿದ್ದರೂ ಅದನ್ನೂ ಕಲಿತುಕೊಳ್ಳುತ್ತಾರೆ. ಜನನಕ್ಕಷ್ಟೇ ಕಾರಣ ತಂದೆ. ಜನನ ಪೋಷಣೆಗಳೆರಡಕ್ಕೂ ತಾಯಿ ಹೊಣೆಯಾಗಿರುತ್ತಾಳೆ. ಹಾಗಾಗಿ ಮಾತೃಭಾಷೆಯೆಂಬ ಪದ ಸೂಕ್ತ. ತಾಯಿಂದಲೇ ಮಕ್ಕಳು ಮಾತಾಡುವುದನ್ನು ಕಲಿಯುವುದು.

ನಾನು ಓಡಾಡುವುದನ್ನು ಅಷ್ಟು ಇಷ್ಟಪಡುವುದಿಲ್ಲ. ಅಲ್ಲದೆ ನನ್ನ ಕೆಲಸಗಳಲ್ಲಿ ನಿರತನಿದ್ದೆ. ಹಾಗಾಗಿ ಬೆಂಗಳೂರಿಗೆ ಬರಲಾಗಲಿಲ್ಲ. ಮುಂದೊಮ್ಮೆ ಒಟ್ಟಿಗೆ ಸೇರಲು ನೋಡೋಣ.