ಜೇಡ ಜೇಡ ಎಂದು ಹೀಗಳೆಯಬೇಡ

To prevent automated spam submissions leave this field empty.

ಈ ಕೂಡ ಕೊಟ್ಟಿರುವ ಜೇಡದ ಚಿತ್ರ ನಾನು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯ ಶ್ರೀ ಉದ್ಭವ ಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ತೆಗೆದದ್ದು. ಈ ಜಾತಿಯ ಜೇಡವು ಬಲೆ ನೇಯುವುದಿಲ್ಲ. ಗೋಡೆ ಹಾಗು ಗಿಡ ಮರಗಳ ಬಿರುಕುಗಳಲ್ಲಿ ಮತ್ತು ಗೋಡೆಗೆ ನೇತು ಹಾಕಿದ ಫೋಟೋಗಳ ಹಿಂದೆ ಹೀಗೆ ಕತ್ತಲ ಸ್ಥಳಗಳಲ್ಲಿ ಹುಟ್ಟಿ ಬೆಳೆಯುತ್ತವೆ. ಗೋಡೆಯ ಮೇಲೆ ಕುಳಿತ ಸೊಳ್ಳೆ, ನೊಣ ಮುಂತಾದ ಕ್ರಿಮಿ ಕೀಟಗಳನ್ನು ಮೇಲಿಂದ ಗಬಕ್ಕೆಂದು ಎರಗಿ ಹಿಡಿದು, ಜೊಲ್ಲು ಸುರಿಸಿ, ಹೊಟ್ಟೆಗೆ ಸೇರಿಸಿಕೊಳ್ಳುತ್ತದೆ. ನಾವು ಹತ್ತಿರ ಹೋದರೂ, ಕ್ಯಾಮರಾ ಬೆಳಕು ಮೇಲೆ ಬಿದ್ದರೂ ಅದಕ್ಕೆ ಯಾವುದೇ ರೀತಿಯ ಎಗ್ಗಿಲ್ಲದೆ, ತನ್ನ ಪಾಡಿಗೆ ತಾನು ತನ್ನ ಕಾರ್ಯ ನಿರತವಾಗಿರುತ್ತದೆ. ಈ ಜೇಡದ ಜಾತಿ ಕುಲಗಳ ಬಗ್ಗೆ ನನಗೇನೂ ತಿಳಿದಿಲ್ಲ.
ಧನ್ಯವಾದಗಳು,
ಎ.ವಿ. ನಾಗರಾಜು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ಚಾಮರಾಜ್
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಈ ಜೇಡವನ್ನು ಒಂದು ತಿಂಗಳ ಅಂತರದಲ್ಲಿ ಎರಡು ಸಾರಿ ಅದೇ ದೇವಸ್ಥಾನದ ಅದೇ ಜಾಗದಲ್ಲಿ ನೋಡಿದ್ದೇನೆ. ಮೊದಲ ಸಲ ನೋಡಿದಾಗ ಅದು ಅಲ್ಲಿದ್ದ ದೇವರ ಫೋಟೋ ಹಿಂದಿ ಇದ್ದದ್ದು, ನಾನು ಗೊತ್ತಿಲ್ಲದೆ ಆ ಫೋಟೋವನ್ನು ಅಲುಗಿಸಿದಾಗ ಆಚೆ ಬಂದು ನಿಂತಿತು. ಎರಡನೆ ಸಾರಿ ಹೋದಾಗ ಅದು ಆ ಫೋಟೋದ ಹತ್ತಿರ ಆಚೆ ನಿಂತಿತ್ತು. ಅಲ್ಲೆಲ್ಲೂ ಯಾವುದೇ ಜೇಡರ ಬಲೆಯೂ ಇರಲಿಲ್ಲ. ಅಲ್ಲದೆ ನಾನು ನೋಡು ನೋಡುತ್ತಿರುವಂತೆಯೇ ಅದು ಅಲ್ಲಿ ಬಂದಿದ್ದ ಸಣ್ಣ ಕೀಟಗಳನ್ನು ಕಪ್ಪೆಯಂತೆ ನೆಗೆದು ಹಿಡಿದು ನಿಶ್ಚಲವಾಗಿ ನಿಂತು ತನ್ನ ಕೆಲಸ ಪ್ರಾರಂಭಿಸಿತ್ತು. ನನ್ನ ಎರಡನೆಯ ಬೇಟಿಯ ಸಮಯದಲ್ಲಿ ಸುಮಾರು ೬೦-೭೦ ಜನ ಸೇರಿದ್ದೆವು. ಆದರೂ ಅದರ ನೆಮ್ಮದಿಗೆ ಭಂಗ ಬರಲಿಲ್ಲ. ಅದರ ಗಾತ್ರ ಎಲ್ಲರ ಗಮನ ಸೆಳೆದಿತ್ತು (ಸುಮಾರು ೨ ಇಂಚು ಸುತ್ತಳತೆ).
ಮತ್ತೊಮ್ಮೆ ಧನ್ಯವಾದಗಳು.
ಎ.ವಿ. ನಾಗರಾಜು