ಹೀಗೊಂದು ಆಲದ ಮರ ಮತ್ತು ಅದರ ’ವಿಚಾರವಾದಿ’ ಕೊಂಬೆಗಳು

To prevent automated spam submissions leave this field empty.

ಒಂದು ದೊಡ್ಡ ಆಲದಮರ. ಲಕ್ಷಾಂತರ ವರ್ಷಗಳಿಂದ ಬೆಳೆದಂತಹ ಮರ ಸುಮಾರು ಕವಲಾಗಿ ಒಡೆದ ಮರ.ಆ ಮರ ಸುಮಾರು ವ್ಯಕ್ತಿಗಳು ತಮ್ಮ ಅನುಭವ ಮೂಸೆಯಿಂದ ವಿಚಾರಗಳನ್ನು ಆಯ್ದು ಅಳವಡಿಸಿದಂತಹ ಮರ.
ಮುಂದೇ ಕವಲಾಗಿ ಒಡೆದರೂ ಮರದ ಬೇರು ಒಂದೇ ಇತ್ತು
ಮರದ ಕೊಂಬೆಗಳೆಲ್ಲಾ ಆ ಮರದ ಬೇರನ್ನೇ ತಮ್ಮ ತಾಯಿ ಬೇರು ಎಂದು ತಿಳಿದಿದ್ದವು
ಕವಲುಗಳು ನೂರಾರು ಮೈಲಿ ಬೆಳೆದವು. ಮರದ ಬೇರು ಗಟ್ಟಿಯಾಗಿಯೇ ಇತ್ತು. ಇನ್ನೂ ಗಟ್ಟಿಯಾಯಿತು
ಜೊತೆಗೆ ಕೆಲವು ಬಿಳಲುಗಳು ಬಂದವು . ಕೆಲವು ಬಿಳಲುಗಳು ನೆಲಕ್ಕೆ ತಾಗಿ ಮತ್ತೊಂದಷ್ಟು ಮರಗಳಾದವು. ಆದರೆ ಅವನ್ನೂ ಆಲದ ಮರವೆಂದೇ ಕರೆಯಲಾಯ್ತು.
ಈ ನಡುವೆ ನೂರಾರು ಮೈಲಿ ಬೆಳೆದ ಕವಲುಗಳು ಹೊರಗಿನ ಬೇರೆ ಮರಗಳನ್ನು ಕಂಡವು . ಕೆಲವು ಈಗ ತಾನೆ ಹುಟ್ಟಿದವು. ಇನ್ನೂ ಕೆಲವು ಆಲದ ಮರದಷ್ಟೇ ಹಳೆಯವು. ಆದರೆ ಆಲದ ಮರದಷ್ಟು ಗಟ್ಟಿ ಬೇರನ್ನು ಹೊಂದಿರಲಿಲ್ಲ .ಏಕೆಂದರೆ ಆ ಮರಗಳು ಕೇವಲ ಒಬ್ಬವ್ಯಕ್ತಿಯಿಂದ ಪೋಷಿಸಲ್ಪಟ್ಟವು.
ಈ ಬೇರೆ ಮರಗಳನ್ನು ಕಂಡಾ ಕವಲುಗಳಿಗೆ ಇದ್ದಕಿದ್ದಂತೆ ತಮ್ಮ ತಾಯಿ ಬೇರಿನ ಬಗ್ಗೆಯೇ ಸಂಶಯ ಹುಟ್ಟ ತೊಡಗಿದವು
ಕೆಲವಕ್ಕೆ ಆಲದ ಮರ ಎಂದರೆ ಯಾರು ತಾನು ಅದರ ಕೊಂಬೆಯಾದ ಮಾತ್ರಕ್ಕೆ ಆಲದ ಮರದ ತುಂಡು ಹೇಗೆ ಕರೆಯಬಹುದು ಎಂಬ ಸಂಶಯ
ಇನ್ನೂ ಕೆಲವು ಆಲದ ಮರ ಎಂಬುದೇ ಇರಲಿಲ್ಲ. ಅದೆಲ್ಲಾ ಸುಳ್ಳು ಎಂದು ವಾದಿಸತೊಡಗಿದವು ತಾವಿನ್ನೂ ಅದರ ಕವಲೇ ಎಂದು ಅವುಗಳು ತಿಳಿಯಲಿಲ್ಲ.
ಕೆಲವಂತೂ ಹೆಜ್ಜೆ ಮುಂದೇ ಹೋಗಿ ಈ ಆಲದ ಮರಕ್ಕೆ ರೋಗಗಳು ಹತ್ತಿವೆ ಅದನ್ನು ಕಡಿಯಬೇಕು ಎಂದು ಹಟ ಹಿಡಿದವು. ಆಲದ ಮರ ಕಡಿದರೆ ತಮಗೂ ಯಾವ ಅಸ್ತಿತ್ವ ಇರುವುದಿಲ್ಲ ಎಂದು ಅವಕ್ಕೆ ತಿಳಿಯಲಿಲ್ಲ.
ಆಲದ ಮರದಲ್ಲಿ ಆಗುತ್ತಿರುವ ಆಂತರಿಕ ಕದನ ಹೊರಗಿನ ಮರಗಳಿಗೆ ತಿಳಿದವು. ಅವಕ್ಕೊ ಇಡಿ ಪ್ರಪಂಚದಲ್ಲಿರುವ ಜಾಗವೆಲ್ಲಾ ತಮ್ಮದೇ ಆಗಬೇಕೆಂಬ ದುರಾಸೆ. ಈ ಆಲದ ಮರವನ್ನು ಕಡಿಸಿದರೆ ಬಹಳ ದೊಡ್ಡ ಜಾಗ ತಮ್ಮದಾಗುತ್ತವೆ ಎಂದು ಅವುಗಳೂ ತುಂಬಾ ದಿನದಿಂದ ಕಣ್ಣಿಟ್ಟಿದ್ದವು
ಅವಕ್ಕೆ ವರದಾನವಾಗಿ ಕಂಡದ್ದು ಸುಮ್ಮನೇ ಅರಚುತಿದ್ದ ಆಲದ ಮರದ ವಿಚಾರವಾದಿ ಕೊಂಬೆಗಳು. ಅವುಗಳ ಅರಚಾಟದ ಲಾಭ ಪಡೆದು ಆಲದ ಮರದ ಒಂದೊಂದೇ ಕವಲುಗಳನ್ನುಒಡೆದವು. ನಿಮಗೆ ನಾವು ಆಶ್ರಯ ಕೊಡುತ್ತೇವೆ. ಒಂದು ಹಗ್ಗದಿಂದ ನಮ್ಮ ಮರಕ್ಕೆ ಕಟ್ಟಿ ಸೇರಿಸಿಕೊಳ್ಳುತ್ತೇವೆ ಎಂದೆಲ್ಲಾ ಅಮಿಷ ಒಡ್ದಿದವು.
ಆದರೂ ಆ ವಿಚಾರಕವಲುಗಳು ಇದೆಲ್ಲಾ ಒಳ್ಳೆಯದಕ್ಕೇ ಆಗುತ್ತಿರುವುದು ಎಂದು ಬೊಬ್ಬೆ ಹೊಡೆದವು.
ಆದರೆ ಆ ಕೊಂಬೆಗಳು ದೂರ ಹೋಗಿದ್ದು ಆಲದ ಮರಕ್ಕೆ ಒಂದು ರೀತಿಯಲ್ಲಿ ಒಳ್ಳೆಯದಾಗುತ್ತಿತ್ತು. ದೊಡ್ದ ಸಂಖ್ಯೆಯಲ್ಲಿದ್ದ ಆ ಮರದ ಬಲಿಷ್ಟ ಕೊಂಬೆಗಳು ಬೇರೆಮರದ ಆಕ್ರಮಣವನ್ನು ತಡೆಯಲು ಶಕ್ತ್ಯವಾಯಿತು.
ಕೊನೆಗೊಮ್ಮೆ ಅರಚಾಡುತ್ತಿದ್ದ ಕೊಂಬೆಗಳೆಲ್ಲಾ ಪರಕೀಯ ಮರದ ಪಕ್ಷಕ್ಕೆ ಸೇರಿದೆವು ಎಂದು ಬೀಗುತ್ತಿದ್ದ ಆ ಕೊಂಬೆಗಳೆಲ್ಲಾ ಒಮ್ಮೆ ಹಗ್ಗ ಕಡಿದು ಕೊಂಡು ದೊಪ್ಪೆಂದು ಬಿದವು.
ಇತ್ತ ತಾಯಿ ಬೇರಿಗೂ ಹೋಗಲಾರದೆ , ಅತ್ತ ಕರೆದ ಮರವೂ ಸೇರಿಸಿಕೊಳ್ಳಲಿಲ್ಲ
ಒಂದು ಅತಂತ್ರ ಸ್ಥಿತಿಯಲ್ಲಿ ನರಳಲಾರಂಭಿಸಿದವು.
ಇತ್ತ ಆಲದ ಮರ ಮಾತ್ರ ತನ್ನ ಪಾಡಿಗೆ ತಾನು ಇನ್ನಷ್ಟು ವಿಶಾಲವಾಗಿ , ಗಟ್ಟಿಯಾಗಿ ಬೇರನ್ನು ಬಿಡುತ್ತಾ , ಮತ್ತಷ್ಟು ಕೊಂಬೆಗಳನ್ನು ಚಾಚುತ್ತಾ ಬೆಳೆಯುತ್ತಿತ್ತು.
ಈಗಲೂ ಬೆಳೆಯುತ್ತಲೇ ಇದೆ. ಎಲ್ಲಾ ಕಾಲದಲ್ಲಿ ಆದಂತೆ ಮತ್ತೆ ಬೆರಳೆಣಿಕೆಯ ವಿಚಾರವಂತಕೊಂಬೆಗಳೂ ಜನಿಸುತ್ತಲೇ ಇವೆ, ತಾಯಿ ಬೇರಿನ ಅಸ್ತಿವನ್ನು ಪ್ರಶ್ನಿಸುತ್ತಲೇ ಬೆಳೆಯುತ್ತಿವೆ.

(ಚಿತ್ರ ವಿಕಿಪಿಡಿಯಾದಿಂದ)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈ ಚಿತ್ರ ಬಸವೇಶ್ವರನಗರದ ಪಾರ್ಕ್ ಚಿತ್ರ ಅಲ್ವೇ ?
ಆ ಪಾರ್ಕ್ ನಲ್ಲಿ ತು೦ಬಾ ಒಳ್ಳೆ ಒಳ್ಳೆ ಮರಗಳಿವೆ...

ರೂಪಾವ್ರೇ,
ಲೇಖನ ಚೆನ್ನಾಗಿದೆ, ಆಲದ ಮರದ ಜೊತೆ..ಬಹಳ ವಿಚಾರಗಳ ಬಿಳಲುಗಳೂ ಇವೆ...:)
-ಸವಿತ

ರೂಪಾ ಅವರೇ,
ನಿಮ್ಮ ವಿಚಾರಾಧಾರೆ ತುಂಬಾ ಚೆನ್ನಾಗಿದೆ.
ಮಾರ್ಮಿಕವಾಗಿ ಬರೆದಿದ್ದೀರಿ.
ಮತ್ತೊಮ್ಮೆ ಓದುವಂತೆ ಮಾಡಿತು, ಯೋಚನೆಗೀಡು ಮಾಡಿತು.
ಧನ್ಯವಾದಗಳು ನಿಮಗೆ.

- ಆಸು ಹೆಗ್ಡೆ

ರೂಪಕ್ಕ

ಚೆನ್ನಾಗಿ ಬರೆದಿದ್ದೀರ :)
ವಿಚಾರವಾದಿ ಕವಲುಗಳಿಗೆ ಇದೆಲ್ಲ ಅರ್ಥವಾದರೆ ಒಳ್ಳೆಯದು ಅಲ್ವಾ...

ರಾಕೇಶ್ ಶೆಟ್ಟಿ :)

>>ವಿಚಾರವಾದಿ ಕವಲುಗಳಿಗೆ ಇದೆಲ್ಲ ಅರ್ಥವಾದರೆ ಒಳ್ಳೆಯದು ಅಲ್ವಾ...?

ಆ ಒಳ್ಳೆಯದು ಆಗೋದೆ ಇಲ್ಲವಲ್ಲ ರಾಕೇಶ್

ರೂಪ

ಚೆನ್ನಾಗಿದೆ..

ಯಾರಿಗೋ ದೊಣ್ಣೆ ಪೆಟ್ಟು, ಇನ್ನಾರಿಗೋ ಮಾತಿನ ಪೆಟ್ಟು ಅನ್ನೋ ಗಾದೆ ಯಾಕೋ ನೆನಪಾಯ್ತು :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

>> ಬರಹದ ಹಿಂದೆ ಹಲವು ಅರ್ಥಗಳು ಗೋಚರಿಸುತ್ತವೆ!

ನಿಮ್ಮ (ಚಿತ್ರದಲ್ಲಿ) ಮೂಗನ್ನೇರಿ ಕೂತಿರುವ ಸುಲೋಚನದ ಮಹಿಮೆಯೇ?

- ಆಸು ಹೆಗ್ಡೆ

ಏನ್ ಆಲದ ಮರಾನೋ ಏನೋ ? ಏನೋ ಸೊಸೊಲ್ಪ ತಿ(ಹೊ)ಳೀತದೆ.. ಸುಂನೆ ದೂರ ನಿಂತು ನೋಡ್ತಿದೀನಿ..

ಸುಂನೆ ಇದ್ರೆ ಸರಿ ಅಲ್ವೇನೋ ಅಂತ ನಾನೂ ಒ೦ದ್ ಕಮೆಂಟ್ ಹಾಕಿದೀನಿ. :)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಚೆನ್ನಾಗಿದೆ ರೂಪಾರವರೆ,

ಅರಳೀ ಮರದಲ್ಲಿ ನೋಡಿ, ದೊಡ್ಡಕ್ಕಿದ್ದೂ ಇಂಥದೇನೂ ಆಗೋದಿಲ್ಲ. ಅದಕ್ಕೇ ಏನೋ ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿರುವುದು. ನಾನು ಮರಗಳಲ್ಲಿ ಅಶ್ವತ್ಥ ಎಂದು. ಕೃಷ್ಣನಿಗೆ ಈ ಆಲದ ಮರದ ರಚನೆಯಲ್ಲೇ ಈ ಗೊಂದಲ ಉಂಟೆಂದು ಗೊತ್ತಿತ್ತೋ ಏನೋ :)

- ಅರವಿಂದ

ಅಶ್ವತ್ ಮರ ಮತ್ತು ಆಲದ ಮರ ಒಂದೇ ಅಲ್ಲವೇ?
ಇದನ್ನು ನೋಡಿ

In Hinduism, the banyan tree is considered sacred and is called "Ashwath Vriksha." God Siva as Dakshinamurthy is nearly always depicted sitting in silence under the banyan with rishis at His feet. It is thought of as perfectly symbolizing eternal life due to its seemingly unending expansion.

ರೂಪ

ಅಶ್ವತ್ಥ ಮತ್ತು ಆಲ ಎರಡೂ ಒಂದೇ ಅಲ್ಲ. ಅಶ್ವತ್ಥ ಅಂದ್ರೆ ಅರಳಿಮರ. ಅದಕ್ಕೆ ಬಿಳಲುಗಳಿರುವುದಿಲ್ಲ.

"ಏರಿದವನು ಚಿಕ್ಕವನಿರಬೇಕು"

ಇದರಲ್ಲಿ "seemingly unending expansion" ಅನ್ನೋದು ಇದರ ಆಯಸ್ಸಿನ ಅಸೀಮತೆಗೆ ಹೋಲಿಸಿರಬಹುದು. ೨೦೦ ವರ್ಷದ ಅರಳೀ ಮರಗಳೂ ಇವೆ. ಮತ್ತು ಅಶ್ವತ್ಥ ಮರವನು ಪುರುಷ ಸಂಕೇತವಾಗಿ ನೋಡುತ್ತಾರೆ. ಆಲದ ಮರ ಅಪಾರ ಸ್ತ್ರೀ ಸಂಕೇತ. ಇವೆರಡ ಶಾಸ್ತ್ರೋಕ್ತ ಮದುವೆಯನ್ನೂ ಮಾಡುತ್ತಾರೆ, ಲೋಕಹಿತಕ್ಕಾಗಿ !

- ಅರವಿಂದ

ಸರಿಯಾಗಿದೆ.
ಬಿಳಲುಗಳು ಮರದದ ಗಟ್ಟಿತನವನ್ನು ತೋರಿಸುತ್ತದೆ ಮತ್ತು ವ್ಯಾಪ್ತಿ ತೋರಿಸುತ್ತದೆ.ವಿಚಾರವೂ ಹಾಗೆ ಆಲ್ವಾ, ಅದನ್ನು ಒರೆಗೆ ಹಚ್ಚಿದಷ್ಟೂ ಹೊಳಪು ಹೆಚ್ಚಾಗುತ್ತೆ.
ತಾಯಿಬೇರಿನ ಮೇಲೆ ಸಂಶಯ ಅನ್ನೋ ಮಾತು ಸತ್ಯಸ್ಯ ಸತ್ಯನಮ್ಮ.ನಮ್ಮ ವಿಚಿತ್ರವಾದಿಗಳು ತಮ್ಮ ವಿಚಾರ ವಾದವನ್ನ ಮಂಡಿಸಿದಾಗ ನಗು ಬರುತ್ತೆ.ಅಷ್ಟೆ ನೋವೂ ಆಗುತ್ತೆ.ನಿಜವನ್ನ ಒಪ್ಪಿಕೊಳ್ಳೋಕೆ ಧೈರ್ಯ ಇಲ್ಲದ ಜನ ಅನ್ನಿಸುತ್ತೆ.ಅನುಭವಗಳನ್ನ ಎರಕಹೊಯ್ದು ವಿಚಾರದಿಂದ ಬೆಳೆಸಿದ ಮರಕ್ಕೆ ಯಾವ ಕೀಟಾಣುವಿನಿಂದ ಯಾವ ರೋಗವೂ ಬಾರದು.
ಇತಿ ನಿಮ್ಮ
ಹರೀಶ್ ಆತ್ರೇಯ

http://www.hariharapurasridhar.blogspot.com

ರೂಪ,
ತುಂಬಾ ಚೆನ್ನಾಗಿದೆ.[ಮುಂಚೇನೇ ಒಂದು ಮಾತು, ನಿಮ್ಮ ಲೇಖನಗಳಿಗೆ ಪ್ರತಿಕ್ರಿಯಿಸುವಾಗ " ಅವರೆ, ತೊಗರಿ, ಸೇರಿಸುವುದಿಲ್ಲ ,ಬೇಸರಿಸಬೇಡಿ]

ಈ ಆಲದ ಮರ ಯಾವಾಗ ಜನ್ಮ ತಾಳಿತೋ ಯಾರಿಗೆ ಗೊತ್ತು, ಒಬ್ಬೊಬ್ಬರು ಒಂದೊಂದು ತರಾ ಹೇಳ್ತಾರೆ. ಅಂತೂ ಸಹಸ್ರಾರು ವರ್ಷಗಳು ಕಳೆದಿದೆ. ವಿಶ್ವದಲ್ಲಿಯೇ ಅತೀ ಹಳೆಯ ಆಲದಮರ. ವಿಶ್ವಕ್ಕೇ ಆದರ್ಶವಾಗಿರುವ ಆಲದ ಮರ. ಇಷ್ಟೊಂದು ದೊಡ್ದದಾದ, ಇಷ್ಟೊಂದು ಹಳೆಯದಾದ ಮರಕ್ಕೆ ಸಣ್ಣ ಪುಟ್ಟ ರೋಗಗಳು ಬಾರದೇ ಇಲ್ಲ. ಶಂಕರ.ಮಧ್ವ ರಾಮಾನುಜ, ಇತ್ತೀಚೆಗೆ ಬಸವಣ್ಣ,ಅಂಬೇಡ್ಕರ್,ಹೆಡಗೆವಾರ್ ಇನ್ನೂ ಅನೇಕ ವೈದ್ಯರು ಹುಟ್ಟಿ ಹಲವು ಚಿಕಿತ್ಸೆಗಳನ್ನು ಕೊಟ್ಟಿರುವ ಪರಿಣಾಮ , ಚೇತರಿಸಿಕೊಂಡಿದೆ. ಆದರೆ ಈಗ ಕೆಲವರು ಆಲದ ಮರಕ್ಕೆ ಗುಣಪಡಿಸಲಾಗದ ರೋಗವಿದೆ ಎಂದು ಬೊಬ್ಬೆ ಹೊಡೆಯುತ್ತಾ ,ಮರವನ್ನು ಕೆಡವಲು ಪ್ರಯತ್ನಿಸುತ್ತಾರೆ, ಆದರೆ ಅದು ಕಡಿದಷ್ಟೂ ಚಿಗುರುತ್ತಲೇ ಇದೆ. ಕಡಿಯುವ ಮುಟ್ಠಾಳತನ ಬಿಟ್ಟು ಏನಾದರೂ ಚಿಕಿತ್ಸೆಯ ಅಗತ್ಯ ವಿದ್ದರೆ ಕೊಟ್ಟು ಸಣ್ಣ ಪುಟ್ಟ ರೋಗವಿದ್ದರೆ ಗುಣಪಡಿಸಿಕೊಂಡು ಅದರ ನೆರಳಲ್ಲಿ ಬದುಕುವುದು ಜಾಣತನ ಅಲ್ಲವೇ?

ಇದ್ದಕಿದ್ದಂತೆಯೇ ಆಲದಮರ ಎಂಬ ಮರ ಪಡೆದುಕೊಂಡ ಪ್ರಸಿದ್ದಿ ನೋಡಿ ಬೆರಗಾಗುತ್ತಿದ್ದೇನೆ
ಟೆಕ್ಕಿಗಳೆಲ್ಲಾ ವಿಜ್ನಾನಿಗಳಾಗುತ್ತಿದ್ದಾರೆ ಸಂತೋಷ.
ಆಲದ ಮರಗಳ ಅವಗುಣಗಳ ಪಟ್ಟಿ ಇನ್ನೂ ಸಿದ್ದವಾಗುತ್ತಿದೆ
ಕಾದು ನೋಡ್ಡೋಣ
ರೂಪ