ಅವತಾರಿ

To prevent automated spam submissions leave this field empty.

ನೊಂದಿಹ ಮನಗಳು ದೇವನು ಹತ್ತನೆಯ ಅವತಾರಿಯಾಗಿ ಬಂದು ತಮ್ಮನ್ನು ಕಾಪಾಡುವನೆಂದು ನಂಬಿದ್ದಾರೆ... ಲೋಕದಲ್ಲಿ ನೆಡೆಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ತಿಳಿಯುತ್ತದೆ, ದೇವ ಬರುವ ಕಾಲ ಈಗ ಬಂದಾಗಿದೆ ಎಂದು... ಬರಲಿರುವ ಅವನು ಯಾರು ? ಅವನ ದೇಶ, ಭಾಷೆ, ವೇಷ ಯಾವುದು ಎಂದಿರಾ ? ನೀವೇ ನೋಡಿ... ಇದು ಕೇವಲ ನನ್ನ ಅನಿಸಿಕೆ ಮಾತ್ರ ....

ಆನೆ, ಕುದುರೆಯೇರಿ ಬಂದರು
ಶಿಲೆಗಳ ಕೆಡವುತ ಸಾಗಿದರು
ಕತ್ತಿ ಇರುದು ಕೊಂದರು
ಕೊಳ್ಳೆ ಹೊಡೆದು ಹೋದರು
ಯಾರಿವರು ಯಾರಿವರು ಯಾರಿವರು ?

ಹಡಗಿನಲ್ಲಿ ಬಂದರು
ಭಾರತದಲಿ ನಿಂದರು
ಗುಂಡಿಕ್ಕಿ ಕೊಂದರು
ಚಿನ್ನ ಕಸಿದು ಹೋದರು
ಯಾರಿವರು ಯಾರಿವರು ಯಾರಿವರು ?

ಮರದ ದೋಣಿಯಲಿ ಬಂದರು
ಬಾಳ ದೋಣಿ ಮುಳುಗಿಸಿಹರು
ಭೇದಭಾವ ತೋರದಿವರು
ಗುಂಡಿಕ್ಕಿ ಕೊಂದರು
ಯಾರಿವರು ಯಾರಿವರು ಯಾರಿವರು ?

ಗಗನದಲಿ ಬಂದರು
ಗಗನಚುಂಬಿಯ ಕೆಡವಿದರು
ಮಣ್ಣ ಸೇರಿಹರು ಸಹಸ್ರಾರು
ತಾವೂ ಅವರೊಂದಿಗೆ ಸೇರಿಹರು
ಯಾರಿವರು ಯಾರಿವರು ಯಾರಿವರು ?

ಮತವ ಗಿಟ್ಟಿಸಿ ಗೆದ್ದಿಹರು
ಮತವ ಕೊಟ್ಟವನ ಮರೆತಿಹರು
ಹಗಲು ದರೋಡೆಯಿಂದ ಮೆರೆದಿಹರು
ಅಧಿಕಾರ ದಾಹದಿ ಕಚ್ಚಾಡಿಹರು
ಯಾರಿವರು ಯಾರಿವರು ಯಾರಿವರು ?

ಪರ ರಾಜ್ಯದಿಂದ ಬಂದಿಹರು
ಭೂ ಸ್ವಾಧೀನ ನೆಡೆಸಿಹರು
ಬಹು ಮಹಡಿ ಮಳಿಗೆ ಏರಿಸಿಹರು
ಇಲ್ಲ ಅವರು ಇವರ ಅಲ್ಲಗೆಳದವರು
ಯಾರಿವರು ಯಾರಿವರು ಯಾರಿವರು ?

ಲೋಕೋದ್ಧಾರಕೆ ಅವ ಬಂದಿಳಿಯಲಾರ
ಭುಗಿಲೆದ್ದ ಮನಗಳೇ ಪಡೆವುದು ಆಕಾರ
ಕೈಗಳು ಕೂಡುವುದು ಹತ್ತಿಕ್ಕಲು ಭ್ರಷ್ಟಾಚಾರ
ಒಮ್ಮನದ ಬಾಳು ಜೀವನಕೆ ಸದಾಧಾರ
ಸಾಂಘಿಕ ಶಕ್ತಿಯೇ ದೇವನ ಹತ್ತನೆಯ ಅವತಾರ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ಕಾರ ಶ್ರೀನಾಥ್ ಅವರೆ,

ನಿಮ್ಮ ಕವನ ಚೆನ್ನಾಗಿ ಬಂದಿದೆ. ಸಮಯೋಚಿತವಾಗಿದೆ. ಸಂಪದ ಕ್ಕೆ ಸ್ವಾಗತ!
ಮೀನಾ ಸುಬ್ಬರಾವ್.

-ರಸಿಕತೆ
ಶ್ರೀನಾಥ್ ಅವರೆ,
ನೀವು ನಿಮ್ಮ ವೈಯಕ್ತಿಕ ಬ್ಲಾಗ್ ನಲ್ಲೂ ನಿಮ್ಮ ಬರಹಗಳನ್ನು ಹಾಕಬಹುದು.

-ಮೀನಾ