ಇಂದು ಎನಗೆ ಗೋವಿಂದ

To prevent automated spam submissions leave this field empty.

ಮಾಹಿತಿ: ಶ್ರೀ ರಾಘವೇಂದ್ರ ತೀರ್ಥರ ಕೃತಿಯ ಪೂರ್ಣ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದರ ಎರಡು ಚರಣಗಳನ್ನು ಮಂತ್ರಾಲಯ ಮಹಾತ್ಮೆ ಮತ್ತು
ಎರಡು ಕನಸು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ - ಸಂ

ಇಂದು ಎನಗೆ ಗೋವಿಂದ ನಿನ್ನ ಪಾದರ
ವಿಂದವ ತೋರೋ ಮುಕುಂದ |ಪ|
ಸುಂದರ ವದನೆನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ|

ನೊಂದೆನೆಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ |೧|

ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ |೨|

ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬಾಲಮುರಳಿಕೃಷ್ಣ ಅವರು ಶ್ರೀನಾಥ್ ನಟಿಸಿದ್ದ 'ರಾಘವೇಂದ್ರ ವೈಭವ' ಅನ್ನುವ ಚಿತ್ರದಲ್ಲಿ ಈ ಹಾಡನ್ನೂ ಮೂರೂ ಚರಣಗಳೊಂದಿಗೆ ಹಾಡಿದ್ದಾರೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನನಗೆ ತಿಳಿದಂತೆ ರಾಘವೇಂದ್ರರದ್ದೆಂದು ದೊರೆತಿರುವುದು ಇದೊಂದೇ ರಚನೆ - ಧೀರವೇಣುಗೋಪಾಲ ಅನ್ನುವುದೇ ಅಂಕಿತವೆಂದು ತೋರುತ್ತದೆ.

ಹಂಸಾನಂದಿ
ಹರಿದಾಸ ಸಂಪದ:- http://haridasa.in/

@ಹಂಸಾನಂದಿ,
ಈ ಹಾಡಿನ ಲಿಂಕ್ ಇದ್ದರೆ ಹಂಚಿಕೊಳ್ಳುವಿರಾ?

’ರಾಘವೇಂದ್ರ ವೈಭವ’ ಚಿತ್ರದ ಹಾಡು ನನಗೆ ಸಿಗಲಿಲ್ಲ... :(

-ಅನಿಲ್.

ತಿದ್ದುಪಡಿ..........

೧. ಮೊದಲ ನುಡಿಯಲ್ಲಿ "ಸು೦ದರ ವದನೆನೆ" ಎ೦ಬುದನ್ನು "ಸು೦ದರ ವದನನೆ" ಎ೦ದು ಓದಿಕೊಳ್ಳಿ.
೨. ಎರಡನೇ ನುಡಿಯಲ್ಲಿ "ನೊ೦ದೆನೆಯ್ಯ" ಎ೦ಬುದನ್ನು "ನೊ೦ದೆನಯ್ಯ" ಎ೦ದು ಓದಿಕೊಳ್ಳಿ.
೩. ಮೂರನೇ ನುಡಿಯಲ್ಲಿ "ಕ೦ದನು ಎ೦ದೆನ್ನ" ಎ೦ಬುದನ್ನು "ಕ೦ದನ೦ತೆ೦ದೆನ್ನ" ಎ೦ದು ಓದಿಕೊಳ್ಳಿ.
೪. ಮೂರನೇ ನುಡಿಯಲ್ಲಿ "ಕು೦ದಗಳೆಣಿಸದೆ" ಎ೦ಬುದನ್ನು "ಕು೦ದುಗಳೆಣಿಸದೆ" ಎ೦ದು ಓದಿಕೊಳ್ಳಿ.

ಹಾಗೇ, ಇತ್ತೀಚಿಗೆ ಶ್ರೀ ರಾಘವೇ೦ದ್ರ ಸ್ವಾಮಿಗಳು ರಚಿಸಿದ "ಮರುತ ನಿನ್ನಯ ಮಹಿಮೆ" ಎ೦ಬ ಸುಳಾದಿ ಸಿಕ್ಕಿದೆ.

<<ಹಾಗೇ, ಇತ್ತೀಚಿಗೆ ಶ್ರೀ ರಾಘವೇ೦ದ್ರ ಸ್ವಾಮಿಗಳು ರಚಿಸಿದ "ಮರುತ ನಿನ್ನಯ ಮಹಿಮೆ" ಎ೦ಬ ಸುಳಾದಿ ಸಿಕ್ಕಿದೆ. >>

ಇವತ್ತು ಇದನ್ನ ಹರಿದಾಸ ಸಂಪದದಲ್ಲಿ ಹಾಕಿದ್ದೆನೆ ... ಸಮಯ ಸಿಕ್ಕಾಗ ನೋಡಿ ..

http://haridasa.in/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B...