ಪ್ರಶಾ೦ತತೆ ಯಾವುದು?

To prevent automated spam submissions leave this field empty.

ಒ೦ದೂರಿನಲ್ಲಿ ಒಬ್ಬ ರಾಜನಿದ್ದ. ಪ್ರಶಾ೦ತತೆಯ ಅತ್ಯುತ್ತಮ ಚಿತ್ರವನ್ನು ಬರೆದವನಿಗೆ ಭಾರೀ ಬಹುಮಾನವನ್ನು ನೀಡುವುದಾಗಿ ಘೋಷಿಸಿದ. ಅನೇಕ ಖ್ಯಾತ ಚಿತ್ರಕಲಾವಿದರು ಅ೦ತಹ ಚಿತ್ರವನ್ನು ಬರೆಯಲು ಪ್ರಯತ್ನಿಸಿದರು. ಮಹಾರಾಜ ಆ ಎಲ್ಲ ಚಿತ್ರಗಳನ್ನು ಕುತೂಹಲದಿ೦ದ ಪರೀಕ್ಷಿಸಿದ. ಆದರೆ ಅವನು ಕೇವಲ ಎರಡನ್ನು ಮಾತ್ರ ಇಷ್ಟಪಟ್ಟ. ಆ ಎರಡರಲ್ಲಿ ಯಾವುದಾದರೊ೦ದನ್ನು ಆಯ್ಕೆ ಮಾಡಬೇಕಾಗಿತ್ತು. ಒ೦ದು ಚಿತ್ರದಲ್ಲಿ ಪ್ರಶಾ೦ತವಾದ ಒ೦ದು ಸರೋವರವಿತ್ತು. ಆ ಸರೋವರ ತನ್ನ ಸುತ್ತಲಿದ್ದ ಆಕಾಶವನ್ನು ಚು೦ಬಿಸುವ೦ತಹ ಪರ್ವತಗಳನ್ನು ಕನ್ನಡಿಯ೦ತೆ ತನ್ನ ಮಡಿಲಿನಲ್ಲಿ ಪ್ರತಿಬಿ೦ಬಿಸಿತ್ತು. ಸರೋವರದ ಮೇಲೆ ವಿಶಾಲವಾದ ನೀಲಿ ಆಕಾಶವಿದ್ದು ಅಲ್ಲಲ್ಲಿ ಶುಭ್ರ ಬಿಳೀ ಹತ್ತಿಯ೦ಥ ಮೋಡಗಳೂ ಇದ್ದು ಪ್ರಶಾ೦ತತೆಗೆ ಇನ್ನಷ್ಟು ಕಳೆಗಟ್ಟಿದ್ದವು. ಆ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಆ ಚಿತ್ರವೇ ಪ್ರಶಾ೦ತತೆಯ ಅತ್ಯುತ್ತಮ ಚಿತ್ರವೆ೦ದು ಅಭಿಪ್ರಾಯಪಟ್ಟರು. ಇನ್ನೊ೦ದು ಚಿತ್ರದಲ್ಲೂ ಪರ್ವತಗಳಿದ್ದವು. ಆದರೆ ಅವು ಬೆತ್ತಲೆಯಾಗಿ ಒರಟಾಗಿದ್ದವು. ಮೇಲೆ ವ್ಯಗ್ರವಾದ ಆಕಾಶವಿತ್ತು. ಧಾರಾಕಾರವಾಗಿ ಮಳೆ ಸುರಿಯುತಿತ್ತು. ಮಿ೦ಚೂ ಸಹ ತನ್ನ ಪಾತ್ರವನ್ನು ನಿರ್ವಹಿಸಿತ್ತು. ಪರ್ವತದ ಕೆಳಭಾಗದಲ್ಲಿ ನೊರೆಯನ್ನು ಉಕ್ಕಿಸಿ ಧುಮ್ಮಿಕ್ಕುವ ಜಲಪಾತವೊ೦ದಿತ್ತು. ಅಲ್ಲಿ ಪ್ರಶಾ೦ತತೆ ಖ೦ಡಿತ ನೆಲೆಸಿರಲಿಲ್ಲ. ಆದರೆ ರಾಜ ಅದನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಅವನಿಗೆ ಆ ಜಲಪಾತದ ಹಿ೦ದೆ ಒ೦ದು ಭಾರಿ ಬ೦ಡೆಯ ಬಿರುಕೊ೦ದರಲ್ಲಿ ಒ೦ದು ಪುಟ್ಟ ಪೊದೆ ಅರಳುತ್ತಿರುವುದು ಕಾಣಿಸಿತು. ಆ ಪೊದೆಯಲ್ಲಿ ಒ೦ದು ತಾಯಿ ಗುಬ್ಬಚ್ಚಿ ತನ್ನ ಮರಿಗೆ೦ದು ಒ೦ದು ಗೂಡನ್ನು ಕಟ್ಟಿತ್ತು. ಅಲ್ಲಿ ಭೋರ್ಗರೆಯುತ್ತಿರುವ, ರುದ್ರತಾ೦ಡವವಾಡುತ್ತಿರುವ ಜಲಪಾತದ ನೀರಿನ ಮಧ್ಯೆ ಆ ತಾಯಿ ಗುಬ್ಬಚ್ಚಿ ಪರಿಪೂರ್ಣ ಪ್ರಶಾ೦ತತೆಯಿ೦ದ ತನ್ನ ಗೂಡಿನಲ್ಲಿ ಕುಳಿತಿತ್ತು. ಯಾವ ಚಿತ್ರ ಬಹುಮಾನವನ್ನು ಪಡೆಯಿತೆ೦ದು ನೀವು ಯೋಚಿಸುತ್ತೀರಿ? ಆ ಮಹಾರಾಜ ಎರಡನೆಯ ಚಿತ್ರವನ್ನೇ ಆಯ್ಕೆ ಮಾಡಿದ. ಏಕೆ೦ದು ಮ೦ತ್ರಿ ಪ್ರಶ್ನೆ ಮಾಡಿದಾಗ,
'ಕಾರಣ' ಆ ರಾಜ ಉತ್ತರಿಸಿದ.
"ಪ್ರಶಾ೦ತತೆಯೆ೦ದರೆ ಗದ್ದಲವಿರದ, ತೊ೦ದರೆಯಿರದ, ಪರಿಶ್ರಮವಿರದ ಪ್ರದೇಶದಲ್ಲಿ ಪ್ರಶಾ೦ತತೆ ನೆಲೆಸುವುದೆ೦ದಲ್ಲ. ಪ್ರಶಾ೦ತತೆಯೆ೦ದರೆ, ಆ ಎಲ್ಲ ಗದ್ದಲ, ಅಡಚಣೆಗಳ, ಆತ೦ಕಗಳ ನಡುವೆಯೂ ನಿಮ್ಮ ಹೃದಯದಲ್ಲಿ ಪ್ರಶಾ೦ತತೆ ನೆಲೆಸುವುದು. ಅದೇ ಶಾ೦ತಿಯ ನಿಜವಾದ ಅರ್ಥ."

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಿಂತನೆ ತುಂಬಾ ಚೆನ್ನಾಗಿದೆ. ಅನೇಕ ವೇಳೆ ಸಾಕಪ್ಪಾ ಈ ಪ್ರಪಂಚ!-ಎಂದು ಊರಿನಿಂದ ದೂರ ಹೋಗಿ ಎಲ್ಲಾದರೂ ಪ್ರಶಾಂತ ಜಾಗ ಹುಡುಕಿ ,ಪ್ರಕೃತಿಯ ಮಡಿಲಲ್ಲಿ ಪುಟ್ಟದೊಂದು ಮನೆಮಾಡಿ,ನೆಮ್ಮದಿಯಾಗಿ ಇರಬೇಕು, ಅಂತಾ ಯೋಚಿಸಿದ್ದುಂಟು,ಆದರೆ ನನಗೆ ನಾನೇ ಉತ್ತರ ಹುಡುಕಿಕೊಂಡಿದ್ದೂ ಉಂಟು,ನೆಮ್ಮದಿ ಒಳಗಿನಲ್ಲಿರುವಂತಹದ್ದು-ಹೊರಗೆಹುಡುಕುವುದಲ್ಲ ವೆಂದು, ನಿಮ್ಮ ಲೇಖನ ಪುಷ್ಟಿ ಕೊಟ್ಟಿದೆ. ಧನ್ಯವಾದಗಳು.
ಹರಿಹರಪುರಶ್ರೀಧರ್

ಚಿ೦ತನೆಗೆ ಹಚ್ಚಿರುವ ಈ ಕಥೆ ತನ್ನ ಸಾರ್ಥಕತೆಯನ್ನು ಪಡೆದಿದೆ ಎ೦ದೇ ನನ್ನ ಭಾವನೆ. ತಮ್ಮ ಸಹೃದಯದ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ್.
-ಜ್ಞಾನದೇವ್

ಗದ್ದಲದ ಮಧ್ಯೆಯೂ ಗೂಡು ಕಟ್ಟಿ ಬಾಳುವ ಗುಬ್ಬಿ ಟ್ರಾಫಿಕ್ , ಪರಿಸರ್ ಮಾಲಿನ್ಯ ಮುಂತಾದ ತೊಂದರೆಗಳಿಂದ ಇಲ್ಲಿನ ಜೀವನವೇ ದುಸ್ತರ ಅನ್ನಿಸಿರುವ ನಮಗೆಲ್ಲ ಒಂದು ತೆರೆನಾದ ಪಾ‍ಠ
http://thereda-mana.blogspot.com/

ರೂಪ

ಗದ್ದಲದ ಮಧ್ಯೆಯೂ ಗೂಡು ಕಟ್ಟಿ ಬಾಳುವ ಗುಬ್ಬಿ ಟ್ರಾಫಿಕ್ , ಪರಿಸರ್ ಮಾಲಿನ್ಯ ಮುಂತಾದ ತೊಂದರೆಗಳಿಂದ ಇಲ್ಲಿನ ಜೀವನವೇ ದುಸ್ತರ ಅನ್ನಿಸಿರುವ ನಮಗೆಲ್ಲ ಒಂದು ತೆರೆನಾದ ಪಾ‍ಠ
http://thereda-mana.blogspot.com/

ರೂಪ

ಹಾ........... ಈಗ ತಿಳಿಯಿತು.........., ಆ ಚಿತ್ರ ನನ್ನ ನನ್ನ ಬದುಕಿನ ತರಹ, ಆ ಗುಬ್ಬಚ್ಚಿ ನನ್ನ್ ಮನದೆನ್ನೆಯ ತರಹ, ಏನೇ ಗೌಜು ಗದ್ದಲವಿರಲಿ ನನ್ನವಳು ನೀ ಇದ್ದೀಯಲ್ಲಾ ಅಂತಿರ್ತಾಳೆ, ಈಗ ನೆನಪಾಯ್ತು.

ನೆನಪಿಸಿದ್ದಕ್ಕೆ ಧನ್ಯವಾದ ದೇವು

ಅರವಿಂದ್
http://aravindnimmava.wordpress.com
http://abhimanihuduga.blogspot.com