ಕೋಸಿ-ಬಿಹಾರದ ಕಣ್ಣೀರು

To prevent automated spam submissions leave this field empty.

ನೇಪಾಳದಲ್ಲಿ ಹುಟ್ಟಿ ಬಿಹಾರದ ಮೂಲಕ ಹರಿದು ಗಂಗೆಯನ್ನು ಸೇರುವ ಕೋಸಿ ನದಿಯು ಗಂಗೆಯ ಉಪನದಿಯಾಗಿದ್ದು, ಬಿಹಾರದ ಕಣ್ಣೀರೆಂದೇ ಪ್ರಸಿದ್ಧ್ವಾಗಿದೆ. ಅಗಸ್ಟ್ ೧೮, ೨೦೦೮ರಂದು ಕೋಸಿ ನದಿಯು ೧೦೦ವರ್ಷಗಳ ಹಿಂದೆ ಹರಿಯುತ್ತಿದ್ದ ಮಾರ್ಗದಲ್ಲಿ ಮತ್ತೊಮ್ಮೆ ಪ್ರವಹಿಸಲು ಪ್ರಾರಂಭಿಸಿದಳು. ಈ ಸ್ಥಳವು ಭಾರತ-ನೇಪಾಳ ಗಡಿಯಲ್ಲಿದೆ. ಈ ಮಾರ್ಗ ಬದಲಾವಣೆಯಿಂದ ನೇಪಾಳದ ಕುಶಾಹ ಎಂಬಲ್ಲಿ ನದಿಯ ದಂಡೆಯು ಕೊಚ್ಚಿಹೋಗಿದೆ, ಇದರಿಂದ ಶೇಕಡ ೯೫ರಷ್ಟು ನದಿಯು ಈ ಹೊಸ ಮಾರ್ಗದ ಮೂಲಕವೇ ಹರಿಯುತ್ತಿದೆ. ಈ ಮಾರ್ಗ ಬದಲಾವಣೆಯು ಬಿಹಾರದ ೯ ಜಿಲ್ಲೆಗಳು ಸಂಪೂರ್ಣವಾಗಿ, ಇಲ್ಲವೇ ಭಾಗಶ:ವಾಗಿ ಪ್ರವಾಹದಿಂದ ಪೀಡಿತವಾಗಿವೆ. ನೇಪಾಳದ ಕೆಲವು ಜಿಲ್ಲೆಗಳು ಕೂಡ ಇದೇ ರೀತಿ ಪ್ರವಾಹಪೀಡಿತವಾಗಿವೆ, ೨ ದಶಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಈ ಪ್ರವಾಹವನ್ನು ಬಿಹಾರದ ಮುಖ್ಯಮಂತ್ರಿ ಮತ್ತು ಭಾರತದ ಪ್ರಧಾನಮಂತ್ರಿಯಿಬ್ಬರೂ ರಾಷ್ಟ್ರೀಯ ವಿಪತ್ತು ಎಂದು ಹೇಳಿದ್ದಾರೆ. ಪ್ರಧಾನಮಂತ್ರಿಗಳು ೧೦೦೦ಕೋಟಿ ಹಣವನ್ನು ಪರೈಹಾರ ಕಾರ್ಯಕ್ಕಾಗಿ ಬಿಡುಗಡೆಗೊಳಿಸಿದ್ದಾರೆ. ಅತೀ ಹೆಚ್ಚಿ ಪ್ರವಾಹವನ್ನು ಎದುರಿಸುತ್ತಿರುವ ಜಿಲ್ಲೆಗಳೆಂದರೆ: ಮಾಧೇಪುರಾ, ಭಾಗಲ್ಪುರ್, ಅರಾರಿಯಾ, ಪಶ್ಚಿಮ ಚಂಪಾರಣ್, ಪೂರ್ಣಿಯಾ, ಸಮಸ್ತಿಪುರ್ ಮತ್ತು ಸುಪೌಲ್.

ದೈನಿಕ್ ಹಿಂದುಸ್ತಾನದ ದರ್ಭಾಂಗಾ ಅವೃತ್ತಿಯ ಪ್ರಕಾರ ಸುಮಾರು ೧೫೦ ಜನರು ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ, ಸರಕಾರೀ ಸೂತ್ರಗಳು ಸತ್ತವರ ಸಂಖ್ಯೆ ೫೦ರ ಸುಮಾರು ಎಂದು ಹೇಳುತ್ತಿವೆ.

ನದಿಯ ನೀರಿನ ನಿರ್ವಹಣೆ ನೇಪಾಳದಲ್ಲಿ ರಾಜಕೀಯ ವಿಷಯವಾಗಿದ್ದು, ಅಲ್ಲಿನ ಸರಕಾರ ತೋರಿದ ನಿರ್ಲಕ್ಷ ಮತ್ತು ಅಲ್ಲಿಯ ದಂಡೆಯ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಬಿಹಾರದ ಇಂಜಿನೀಯರರು ದಂಡೆಯು ಬಲಹೀನವಾಗಿದ್ದನ್ನು ಗಮನಿಸದಿರುವದು ಇಂತಹ ದೊಡ್ಡ ಪ್ರಮಾಣದ ಹಾನಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಮೇಲೆ, ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತು ನೇಪಾಳವು ಕೋಸಿಯ ಆಣೆಕಟ್ಟೆಯಿಂದ ಹೆಚ್ಚಿನ ನೀರನ್ನು ಹರಿಯಬಿಟ್ಟಿದ್ದು ಪರಿಹಾರ ಕಾರ್ಯವನ್ನು ಅಸಾಧ್ಯವನ್ನಾಗಿಸಿದೆ. ಆಣೆಕಟ್ಟೆಯ ನೀರನ್ನು ಹರಿವನ್ನು ನಿಲ್ಲಿಸಿ ಪರಿಹಾರ ಕಾರ್ಯಕ್ಕೆ ಸಹಾಯ ಮಾಡುವದರ ಬದಲು ನೇಪಾಳ ಸರಕಾರ ಭಾರತದ ಮೇಲೆ ಗೂಬೆ ಕೂಡಿಸುವಲ್ಲಿ ನಿರತವಾಗಿದೆ, ಹಿಂದೆ ಕಂಡ ಅನೇಕ ಪ್ರವಾಹಗಳನ್ನು ನೋಡಿಯೂ ಏನು ಕಲಿಯದ ಬಿಹಾರ ಮತ್ತು ಭಾರತ ಸರ್ಕಾರಗಳು ತಾವೇನೂ ಹಿಂದಿಲ್ಲವೆನ್ನುವಂತೆ ನೇಪಾಳದ ಮೇಲೆ ಗೂಬೆ ಕೂಡಿಸುತ್ತಿವೆ.

೧೯೫೪ರ ಭಾರತ-ನೇಪಾಳ ಉಭಯ ಪಕ್ಷಗಳ ಒಪ್ಪಂದದ ಪ್ರಕಾರ ಕೋಸಿ ಬ್ಯಾರೇಜಿನ ನಿರ್ವಹಣೆಯ ಹೊಣೆ ಭಾರತದ ಮೇಲಿದೆ, ಬ್ಯಾರೇಜು ನೇಪಾಳದಲ್ಲಿದೆ. ದಂಡೆಯನ್ನು ಒಡೆಯಲು ೧೫ದಿನಗಳನ್ನು ತೆಗೆದುಕೊಂಡ ಕೋಸಿಯನ್ನು ತಡೆಯಲು ಅಭಿಯಂತರ ಮಹಾಶಯರು ಯಾವದೇ ಕಾರ್ಯಗಳನ್ನು ಮಾಡಿಲ್ಲ. (ಮುಂದುವರೆಯುವದು)

ಲೇಖನ ವರ್ಗ (Category):