ಕನ್ನಡ ವಿಕಿಪೀಡಿಯಾ

To prevent automated spam submissions leave this field empty.

ಸಂಪದ ಬಳಗದ ಸದಸ್ಯರಿಗೆ ನಮಸ್ಕಾರ...
ಕನ್ನಡ ವಿಕಿಪೀಡಿಯಾದ ಬಗ್ಗೆ ತಮಗೆಲ್ಲಾ ತಿಳಿದಿರಬಹುದು, ಇದೊಂದು ಮುಕ್ತ ವಿಶ್ವಕೋಶ ಯೋಜನೆಯಾಗಿದ್ದು, ಯಾರೂ ತಮಗೆ ತಿಳಿದಿರುವ ವಿಷಯಗಳ ಮೇಲೆ ಲೇಖನಗಳನ್ನು ಬರೆಯಬಹುದು. ಹೀಗೆ ಬರೆಯುವ ಲೇಖನಗಳು ಯಾವುದೇ ಕೃತಿಸ್ವಾಮ್ಯವನ್ನು ಹೊಂದಿರಬಾರದು ಮತ್ತು ನಿಮ್ಮ ಸಂಪಾದನೆಗಳನ್ನು ಬೇರೆಯವರು ನಿರ್ಧಾಕ್ಷಿಣ್ಯವಾಗಿ ಬದಲಾಯಿಸಿ ಬೇರೆ ಕಡೆಗಳಲ್ಲಿ ಹಂಚಬಹುದು.

ಸಧ್ಯಕ್ಕೆ ಕನ್ನಡ ವಿಕಿಯಲ್ಲಿ ೫೮೫೩ ಲೇಖನಗಳಿದ್ದು ಎಲ್ಲ ವಿಕಿಗಳ ಪಟ್ಟಿಯಲ್ಲಿ ೯೯ನೇಯ ಸ್ಥಾನದಲ್ಲಿದೆ ಮತ್ತು ಒಟ್ಟು ಸದಸ್ಯರ ಸಂಖ್ಯೆ ೧೯೫೫. ಇತ್ತೀಚಿನ ದಿನಗಳಲ್ಲಿ ಹೊಸ ಲೇಖನಗಳ ಸೇರಿಕೆಯಲ್ಲಿ ಗಮನೀಯ ಇಳಿಮುಖ ಕಂಡಿದೆ. ದಿನಕ್ಕೆ ೧ ಹೆಚ್ಚೆಂದರೆ ೨ ಲೇಖನಗಳು ಹೊಸತಾಗಿ ಸೇರ್ಪಡೆಯಾಗುತ್ತಿವೆ. ಕೆಲವೇ ಕೆಲವು ಸದಸ್ಯರು ನಿಯಮಿತವಾಗಿ ಹೊಸ ಲೇಖನಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ, ಸಂಪಾದನೆಯ ಕಾರ್ಯವಂತೂ ಸಂಪೂರ್ಣ ನಿಂತುಹೋದಂತಿದೆ. ಹಾಗೆಯೇ ಹೊಸ ತಂತ್ರಾಂಶಗಳನ್ನು ಅಳವಡಿಸುವವರು ಕೂಡ ಬೇಕಾಗಿದ್ದಾರೆ. ಇನ್ನು ಕೇವಲ ೧೦೦ ಲೇಖನಗಳು ಸೇರ್ಪಡೆಗೊಂಡರೆ ವಿಕಿಯಲ್ಲಿ ೯೮ ಸ್ಥಾನಕ್ಕೆ ಏರಬಹುದು. ಭಾರತದ ಬೇರೆ ಕೆಲವು ಭಾಷೆಗಳು ೧೦,೦೦೦ಕ್ಕೂ ಹೆಚ್ಚು ಲೇಖನಗಳನ್ನು ಹೊಂದಿವೆ.

ಸಂಪದ ಬಳಗದಲ್ಲಿ ಅನೇಕರು ಉತ್ಕೃಷ್ಟ ಲೇಖನಗಳನ್ನು ನಿಯಮಿತವಾಗಿ ಬರೆಯುತ್ತಿರುವಿರಿ, ಇದೇ ರೀತಿಯಲ್ಲಿ ಕನ್ನಡ ವಿಕಿಯಲ್ಲಿ ಕೂಡ ಲೇಖನವನ್ನು ಬರೆಯಿರಿ ಮತ್ತು ಇದರ ಬಗ್ಗೆ ಪ್ರಚುರಪಡಿಸಿರಿ. ಕರ್ನಾಟಕದ ಸ್ಥಳಗಳ ಬಗ್ಗೆ, ಐತಿಹಾಸಿಕ ಸ್ಮಾರಕಗಳ ಬಗ್ಗೆ, ಅಲ್ಲದೇ ಇನ್ನೂ ಅನೇಕ ವಿಷಯಗಳಲ್ಲಿ ಹೊಸ ಲೇಖನಗಳನ್ನು ಸೇರ್ಪಡೆಗೊಳಿಸಬೇಕಾಗಿದೆ. ಅದೇ ರೀತಿ ಅನೇಕ ಲೇಖನಗಳಿಗೆ ಕೃತಿಸ್ವಾಮ್ಯವಿಲ್ಲದ ಚಿತ್ರಗಳೂ ಕೂಡ ಬೇಕಾಗಿವೆ.

ನಾವೆಲ್ಲರೂ ಕೂಡಿ ಹೊಸ ಲೇಖನಗಳನ್ನು ಬರೆದರೆ ಈ ವರ್ಷದ ಕೊನೆಗೆ ಕನಿಷ್ಟ ೮೦೦೦ ಲೇಖನಗಳನ್ನಾದರೂ ಕನ್ನಡ ವಿಕಿ ಹೊಂದಬಹುದೆಂದು ಆಶಿಸುತ್ತೇನೆ. ಬನ್ನಿ ಕನ್ನಡ ವಿಕಿಗೆ ಹೊಸ ಲೇಖನಗಳನ್ನು ಬರೆಯೋಣ...

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಕುಲ್,
ಬರೇ ಆ ಸ್ಥಾನಕ್ಕೆ ಏರಿಸೋಣ ಎಂದು ಅಂಕಿ ಅಂಶಗಳತ್ತ ನೋಡ ಹೊರಟಿ ಪ್ರಯೋಜನವಿಲ್ಲ.

ವಿಕಿಪೀಡಿಯದ ಕನ್ನಡದ ಆವೃತ್ತಿ ಪ್ರಾರಂಭಿಸಿದ ಸಮಯದಿಂದ ನಾನು ಹೇಳುತ್ತ ಬಂದಿರುವೆ - ಅಂಕಿ ಅಂಶಗಳತ್ತ ಗಮನಹರಿಸುತ್ತ ಬರೆಯುವುದು ಕೇವಲ ಅಂಕಿಗಳನ್ನು ಮೇಲೆತ್ತಲು ಮಾಡಿದ ಕೆಲಸದ ಹಾಗೆ ಆಗಿಬಿಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಉತ್ತಮ ಲೇಖನಗಳನ್ನು ಬರೆಯುವವರಿಗಿಂತ ಒಂದು ಉತ್ತಮ ಸಮುದಾಯದ ಅವಶ್ಯಕತೆ ವಿಕಿಪೀಡಿಯಕ್ಕಿದೆ. ಅಲ್ಲದೆ ವಿಕಿಪೀಡಿಯ ಮುಕ್ಕಾಲು ಪಾಲು ಲೇಖಕರು ಅರಸಿ ಹೊರಟಿರುವುದನ್ನು ಅವರಿಗೆ ನೀಡುವುದಿಲ್ಲ. ಹೀಗಾಗಿ ಬರೆಯುವವರಿಗೆ ತಪ್ಪು ಕಲ್ಪನೆ ಬಾರದಂತೆ ಮೊದಲೇ ತಿಳಿಸಿಕೊಡುವ ಜವಾಬ್ದಾರಿ ಮರೆಯಕೂಡದು. ಉತ್ತಮ ಸಮುದಾಯವೊಂದನ್ನು ಕಟ್ಟಲು ಪ್ರಯತ್ನಿಸಿ. ನಾನು ವಿಕಿಪೀಡಿಯದಲ್ಲಿ active ಆಗಿದ್ದಾಗ ಪ್ರಯತ್ನಿಸಿದ್ದು ಇದನ್ನೇ ಹಾಗೂ ಕಾರ್ಯನಿರ್ವಹಿಸಲು ಪ್ರಯತ್ನಿಸಿದ್ದು ಈ ನಿಟ್ಟಿನಲ್ಲಿಯೇ. ಹಲವರಿಗೆ ವಿಕಿಪೀಡಿಯದಲ್ಲಿ ಬರೆಯುವುದು ಹೇಗೆಂಬುದರ ಬಗ್ಗೆ ತಿಳಿಸಿಕೊಟ್ಟೆ. ಹಲವರಿಗೆ ಗಂಟೆಗಟ್ಟಲೆ ಚ್ಯಾಟಿನಲ್ಲಿ ವಿಕಿಪೀಡಿಯ ಏನೆಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಅದರೊಟ್ಟಿಗೆ familiar ಆಗುವಲ್ಲಿ ಸಹಾಯ ಮಾಡಿದೆ (ಅವರಿಗದು ಏನೆಂಬುದು ಅರ್ಥ ಮಾಡಿಸದೆ ಬರೆಸಿದರೆ ಅದರಿಂದಾಗುವ ಬೇಜವಾಬ್ದಾರಿ ಹಾಗೂ ತೊಂದರೆಗಳ ಜವಾಬ್ದಾರಿ ಹಾಗೆ ಬರೆಸಿದವರದ್ದು).

ನೀವೂ ಕೂಡ ಇವುಗಳನ್ನು ಪ್ರಯತ್ನಿಸಿ ನೋಡಬಹುದು. ಲೇಖನ ಅಲ್ಲಿ ಬರೆಯಿರಿ ಇಲ್ಲಿ ಬರೆಯಿರಿ ಎಂದು ಹೇಳುವುದು ಯಾವತ್ತಿಗೂ "won't be well received" ಎಂಬಂತೆ. ಕೆಲವರು ಮಾತ್ರ ಪಾಸಿಟಿವ್ ಆಗಿ ತೆಗೆದುಕೊಳ್ಳುವರು. ಬದಲಿಗೆ ಅಲ್ಲೊಂದು ಸಮುದಾಯ ಕಟ್ಟುವಲ್ಲಿ ಕಾರ್ಯನಿರತರಾಗಿ.

ನಿನ್ನೆ ಸಿ ಎನ್ ಆರ್ ರಾವ್ ರವರೊಂದಿಗೆ ಮಾತನಾಡುತ್ತಿರುವಾಗ ಭಾರತದಲ್ಲಿ ವಿಜ್ಞಾನ ಕುರಿತ ಪ್ರಗತಿಯ ಬಗ್ಗೆ ಪ್ರಶ್ನಿಸಿದಾಗ ಅವರೊಂದು ಮಾತು ಹೇಳಿದರು "ವಿಜ್ಞಾನ ಅನ್ನೋದೊಂದು ಹುಚ್ಚು. ನಮ್ಮಲ್ಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಹುಚ್ಚರು ಹೆಚ್ಚಾಗಬೇಕು" ಎಂದು. ವಿಕಿಪೀಡಿಯ ಕೂಡ ಒಂದು ಹುಚ್ಚು. ನಾನು ಸುಮಾರು ಮೂರು ವರುಷ ಈ ಹುಚ್ಚು ಹಿಡಿಸಿಕೊಂಡು ತುಂಬಾ ತಲೆಕೆಡಿಸಿಕೊಂಡು ದಿನ ಬೆಳಗಾದರೆ ವಿಕಿಪೀಡಿಯದಲ್ಲಿ ಬಿದ್ದಿರುತ್ತಿದ್ದೆ. ನಾನು ಅಲ್ಲಿ ನಿರ್ವಾಹಕ ಹಾಗು ನಿರ್ವಾಹರನ್ನು ನೇಮಿಸಬಲ್ಲ bureaucrat ಕೂಡ. ಈಗೀಗ ಹಲವು ಕಾರಣಗಳಿಂದಾಗಿ ನಾನಲ್ಲಿ active ಆಗಿ ಎಡಿಟ್ ಮಾಡುತ್ತಿಲ್ಲ. ಆದರೆ ನೀವು ಸಮುದಾಯ ಕಟ್ಟಲು ಹುಡುಕಬೇಕಾದದ್ದು ಹೀಗೆ ಕನ್ನಡದಲ್ಲಿರುವ ಮುಕ್ತ ವಿಶ್ವಕೋಶವೊಂದನ್ನು ಕಟ್ಟಲು ನಿಜವಾದ ಆಸಕ್ತಿಯಿರುವ, ಅದರ ಬಗ್ಗೆ ಕಾಳಜಿಯಿಂದ ತಲೆ ಕೆಡಿಸಿಕೊಳ್ಳುವ ಹುಚ್ಚರನ್ನು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಾಡಿಗರ ಹೇಳಿಕೆಯನ್ನು ನಾನು ಸಂಪೂರ್ಣ ಒಪ್ಪಲಾರೆ. ಇರಲಿ.
ಎನ್‌ಕಾರ್ಟಾ ಎನ್ಸೈಕ್ಲೋಪೀಡಿಯಾ, ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಮುಂತಾದವನ್ನು ನೋಡಿದಾಗ ಕನ್ನಡದಲ್ಲೂ ಅಂಥವು ಇರಬೇಕೆಂದು ಬಯಸುವುದು ಸಹಜ. ಅಂದರೆ ಅವುಗಳಷ್ಟು ವಿಸ್ತಾರವಾದ ಹಾಗೂ ಆಳವಾದ ವಿಷಯಗಳನ್ನು ನಾವು ಅಂದರೆ ಕನ್ನಡಿಗರು ತುಂಬಿಸಬೇಕಾಗಿದೆ. ಕನ್ನಡ ಗಣಕ ಪರಿಷತ್ತಿನವರು ಮೈಸೂರು ವಿವಿಯ ಮೂಲಕ ಪ್ರಚುರಿಸಿದ ವಿಶ್ವಕೋಶ (ಬೆಲೆ ರೂ. ೫೦೦) ಸಹ ಪರಿಪೂರ್ಣವಾಗಿಲ್ಲ. http://kn.wikipedia.org/wiki/ಬಸವೇಶ್ವರ ಎಂಬ ಲೇಖನ ನೋಡಿ, ಎಷ್ಟು ಚೆನ್ನಾಗಿದೆ, ಚಿಕ್ಕ ಚೊಕ್ಕದಾಗಿ. ಅಷ್ಟು ಸಾಕು ಎನಿಸುವಂತಿದೆ. ಅದನ್ನೇ ಇಂಗ್ಲಿಷಿನಲ್ಲೂ ಕೊಟ್ಟಿದ್ದಾರೆ.
ನಾನು http://kn.wikipedia.org/wiki/ಬೀದರ್ ಲೇಖನ ಬರೆದ ಮೇಲೆ ಇಂಗ್ಲಿಷಿನಲ್ಲಿರುವ ಪಠ್ಯವನ್ನು ನೋಡಿ ದಂಗಾಗಿ ಹೋದೆ. ಎಷ್ಟೊಂದು ಮಾಹಿತಿಪೂರ್ಣ ಅದು ಎನಿಸಿತು. ವಿಕಿಪೀಡಿಯಾದಲ್ಲಿರುವ ಇಂಗ್ಲಿಷಿನ ಪಠ್ಯವನ್ನೇ ಕನ್ನಡಕ್ಕೆ ತಂದರೆ ಎಷ್ಟೋ ವಿಷಯಗಳು ಸಂಗ್ರಹೀತವಾಗುತ್ತವೆ ಅಲ್ಲವೇ?
ಹಾಗೆ ನೋಡಿದರೆ ನಮ್ಮಲ್ಲಿ ವಿದ್ಯುನ್ಮಾನ ಮಾಹಿತಿಗಿಂತಲೂ ಪುಸ್ತಕದ ಮಾಹಿತಿ ಅಪಾರವಿದೆ. ಅವನ್ನೂ ಸಹ ಒಂದೊಂದಾಗಿ update ಮಾಡುತ್ತಾ ವಿಕಿಪೀಡಿಯಾದಲ್ಲಿ ತುಂಬಿದರೆ ಮಾಹಿತಿಗಳ ಮಹಾ ಸಂಗ್ರಹವನ್ನು ಪ್ರಪಂಚದ ಎಲ್ಲ ಭಾಗದ ಕನ್ನಡಿಗರಿಗೆ ತಲುಪಿಸಿದಂತಾಗುತ್ತದೆ.

ಈ ಬಗ್ಗೆ ಸಿನಿಕ ಚರ್ಚೆಗಿಂತ ಕಾಳಜಿಯುತ ಚರ್ಚೆ ಬಂದಲ್ಲಿ ಚೆನ್ನ.

ಪ್ರೀತಿಯಿಂದ
ಸಿ ಮರಿಜೋಸೆಫ್

[quote]ವಿಕಿಪೀಡಿಯಾದಲ್ಲಿರುವ ಇಂಗ್ಲಿಷಿನ ಪಠ್ಯವನ್ನೇ ಕನ್ನಡಕ್ಕೆ ತಂದರೆ ಎಷ್ಟೋ ವಿಷಯಗಳು ಸಂಗ್ರಹೀತವಾಗುತ್ತವೆ ಅಲ್ಲವೇ?[/quote]
ಸ್ವಂತ ಬರಹ ಸೇರಿಸುವವರಿಲ್ಲದಲ್ಲಿ ಇದೇ ಉಳಿಯುವ ಆಯ್ಕೆ.
*ಅಶೋಕ್

[quote=ಮರಿಜೋಸೆಫ್] ವಿಕಿಪೀಡಿಯಾದಲ್ಲಿರುವ ಇಂಗ್ಲಿಷಿನ ಪಠ್ಯವನ್ನೇ ಕನ್ನಡಕ್ಕೆ ತಂದರೆ ಎಷ್ಟೋ ವಿಷಯಗಳು ಸಂಗ್ರಹೀತವಾಗುತ್ತವೆ ಅಲ್ಲವೇ? [/quote]
ಹೀಗೆ ಮಾಡಬೇಡಿ ಅಂದವರು ಯಾರು? ಯಾವುದೋ ಮಾತಿಗೆ ಉತ್ತರವಾಗಿ ಮತ್ತೇನನ್ನೋ ಬರೀತೀರಲ್ರಿ ಮರೀಜೋಸೆಫರೆ! ಸರಿ ಇಲ್ಲ!

ನೀವು ಬರೆದಿರುವುದು ಕನ್ನಡಕ್ಕೊಂದು ವಿಶ್ವಕೋಶ ನಿರ್ಮಿಸುವ ಹಾಗೂ ವಿಕಿಪೀಡಿಯದ ನಡುವೆ ಜಂಪ್ ಮಾಡುತ್ತಿರುವಂತಿದೆ. ವಿಕಿಪೀಡಿಯ ಉತ್ತಮಪಡಿಸುವುದೇ at least ಮೇಲಿನ ಮಾತಿನ ಅಂಶವಾದರೆ ಕೇಳಿ, ಇಂಗ್ಲೀಷ್ ವಿಕಿಪೀಡಿಯದಿಂದ ಅನುವಾದ ಮಾಡುವ ಕೆಲಸ ಆಗಲೇ ಹಲವರಿಂದ ಮಾಡಲಾಗುತ್ತಿದೆ, ಮಾಡಲ್ಪಟ್ಟಿದೆ. ಎಷ್ಟೋ ಜನ ಆಂಗ್ಲದಿಂದ ಪುಟ ಕಾಪಿ ಪೇಸ್ಟ್ ಮಾಡಿಕೊಂಡು ಅದನ್ನು ಅನುವಾದ ಮಾಡುವುದೇ ಸುಲಭವೆನ್ನುತ್ತ ಮಾಡುತ್ತಾರೆ. ಈ momentನಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದದ್ದು: ವಿಕಿಪೀಡಿಯ ಈಗಿನಂತೆ ಒಂದು ವಿಶ್ವಕೋಶವಲ್ಲ ಮುಕ್ತವಾದ ಒಂದು ಸಮುದಾಯವಷ್ಟೆ ಆದರೆ ವಿಶ್ವಕೋಶದಂತದ್ದು ಒಂದು *ನಿರ್ಮಾಣವಾಗುತ್ತಿರುವ* ಜಾಗ. ಇದು ವಿಶ್ವಕೋಶಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಬಲ್ಲುದು. ಆದರೆ ಸುಮಾರು challenges ಇವೆ, ಕನ್ನಡಕ್ಕೇ specific ಆದದ್ದು ಹಲವು ಅಂಥವು!

ಇಂಗ್ಲೀಷ್ ವಿಕಿಪೀಡಿಯದಿಂದ ಅನುವಾದ ಮಾಡುವಾಗ ಒಂದು ವಿಷಯ ನೆನಪಿಟ್ಟುಕೊಂಡು ಅನುವಾದ ಮಾಡಿದರೆ ಉತ್ತಮ: ನೀವು ಅನುವಾದಕ್ಕೆ ಬಳಸುತ್ತಿರುವ ಇಂಗ್ಲೀಷ್ ಪುಟದಲ್ಲಿರುವ ಮಾಹಿತಿ ಸಂಪೂರ್ಣವಾಗಿ ಸರಿಯಿಲ್ಲದಿರಬಹುದು - ಕೆಲವೊಮ್ಮೆ ಪೂರ್ಣ ಸರಿಯಿಲ್ಲದಿರಬಹುದು! ಅನುವಾದ ಮಾಡಿಟ್ಟು ಮರೆಯುವುದೇ ಹೆಚ್ಚು.

ಇದನ್ನೆಲ್ಲ ನೀವು ಸಿನಿಕ ಎಂದರೆ ಜವಾಬ್ದಾರಿಯರಿತು ಕೆಲಸ ಮಾಡಿ ಗೊತ್ತಿಲ್ಲದವರು ಎಂದೇನು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಮರಿ ಜೋಸೆಫರೆ. ನೀವು ನಾನು ಬರೆದದ್ದನ್ನು ಸರಿಯಾಗಿ ಓದಿದಂತೆಯೇ ಇಲ್ಲ.
ನಾನು ಕನ್ನಡಕ್ಕೊಂದು ವಿಶ್ವಕೋಶವೊಂದನ್ನು ರೆಡಿ ಮಾಡುವುದರ ಬಗ್ಗೆ ಬರೆದಿಲ್ಲ, ಬದಲಿಗೆ ವಿಕಿಪೀಡಿಯ (ಈಗಿರುವ ಸ್ಥಿತಿಯಲ್ಲಿ) ಉತ್ತಮ ಗೊಳಿಸುವ ಬಗ್ಗೆ ಬರೆದಿದ್ದೇನೆ.
ನೀವು ನಿಮ್ಮ ದೃಷ್ಟಿಯಲ್ಲಿ ನೋಡುತ್ತಿದ್ದೀರಿ ನಿಮಗೆ ಕಂಡಂತೆ ಗ್ರಹಿಸಿ ಬರೆದಿದ್ದೀರಿ. ನಾನು ಕನ್ನಡ ವಿಕಿಯಲ್ಲಿ ಬರೆದ ನನ್ನ ಮೂರು ವರ್ಷದ ಅನುಭವದೊಂದಿಗೆ ಸಮುದಾಯ ಕಟ್ಟಿದ್ದನ್ನೂ ಸೇರಿಸಿ ಬರೆದಿರುವೆ. ನಿಮಗೆ ಅಲ್ಲಿ ಕುಳಿತು ನನ್ನ ಮಾತು ಹೇಗೆ ಕಾಣುತ್ತಿರಬಹುದು ಎಂಬುದರ ಒಂದಿಷ್ಟೂ ಐಡಿಯ ನನಗಿಲ್ಲ. ಆದರೆ ವಿಕಿಪೀಡಿಯದಲ್ಲಿ ಸಾಕಷ್ಟು ಕಾಲ ಕೆಲಸ ಮಾಡಿದವರಿಗೆ ನಾನು ಹೇಳಿದ್ದುದರ ಹಿಂದಿರುವ ಆಶಯ ಹಾಗು ಹೇಳಿರುವ ಮಾತು ಗೊತ್ತಾಗದೇ ಇರುವುದಿಲ್ಲ ಎಂದಷ್ಟು ದೃಢವಾಗಿ ಹೇಳಬಲ್ಲೆ. ನಾನು ಬರೆದದ್ದಕ್ಕೂ ನೀವು ಹೇಳುತ್ತಿರುವುದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ ಎಂದು ಕೂಡ ಹೇಳಬಲ್ಲೆ.

ನಾಡಿಗರ ಹೇಳಿಕೆಯನ್ನು ನಾನು ಸಂಪೂರ್ಣ ಒಪ್ಪಲಾರೆ.

ಯಾವ ಹೇಳಿಕೆ ಎಂದು ಸ್ಪಷ್ಟವಾಗಿ ಬರೆದಿದ್ದರೆ ಅರ್ಥ ಮಾಡಿಕೊಳ್ಳುವಲ್ಲಿ ಬಹಳ ಅನುಕೂಲವಾಗುತ್ತಿತ್ತು.

"ಸಿನಿಕ ಚರ್ಚೆ" ಎಂದದ್ದು ಪೂರ್ವಾಗ್ರಹ ಪೀಡಿತ emotional ಪ್ರತಿಕ್ರಿಯೆಯಿದ್ದೀತು. ಶೀರ್ಷಿಕೆಯೇ ಕನ್ನಡ ವಿಕಿಪೀಡಿಯ ಎಂದು ಹೇಳುತ್ತಿರುವಾಗ ಯಾವ ವಿಷಯದ ಬಗ್ಗೆ ಎಂಬುದಾದರೂ ಗಮನಿಸಿ ನೋಡಿ ನಂತರ ಬರೆಯಬಹುದಲ್ವೆ?
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]