ಲ೦ಡನ್ ಪ್ರವಾಸಕಥನ ಭಾಗ ೧೦: ಬಾಚಿಕೊಳ್ಳಲು ಆಸರೆಗೊ೦ದು ಕೈ ಮತ್ತು ತಲೆ ಇರಬೇಕು

To prevent automated spam submissions leave this field empty.

www.anilkumarha.com

          ಲ೦ಡನ್ನಿಗೆ  ಹೋದ ಒ೦ದೆರೆಡು ವಾರಗಳ ಕಾಲ ಭಾರತದ್ದೇ ಕನಸು. ನೀವು ಅಮೇರಿಕ ಹೋದರೆ ಮಾತ್ರ ಕನಸು ಬೇರೆಯಾಗುತ್ತದೆ. ಅ೦ದರೆ ಲ೦ಡನ್ನಿನಲ್ಲಿ-ಭಾರತದ-ಕನಸು ಬೀಳದೆ, ಅಮೇರಿಕದಲ್ಲಿ-ಭಾರತದ-ಕನಸು ಬೀಳುತ್ತದೆ. ಪರದೇಶದಲ್ಲಿ ನನಸು ಮೊದಲ ಹೆಜ್ಜೆ ಇರಿಸುತ್ತದೆ. ನ೦ರ ಕನಸು! ಅ೦ದರೆ ಹೋಮ್ಸ್ ಹೇಳುವ ನಮ್ಮ ಬದುಕೆ೦ಬುದು ಕನಸುಗಳ ನಡುವಿ ನನಸುಎ೦ಬ ಬದುಕಿನ ಸೂತ್ರವು ಪ್ರವಾಸಕಥನದಲ್ಲಿ ಸುಳ್ಳು ಎ೦ದಾಯ್ತು. ಆದರೇನು, ಸುಳ್ಳು ಸತ್ಯಗಳ ನಡುವೆ ವ್ಯತ್ಯಾಸವಿಲ್ಲವೆ೦ಬ ನನ್ನ ವಾದವೇ ಸತ್ಯ, ಸುಳ್ಳುಗಳಲ್ಲದ ನಿಜಎ೦ದಾನು ಹೋಮ್ಸ್. ಐಪಿಎಲ್ ಮ್ಯಾಚ್‍ನಲ್ಲಿ ಡಕ್‍ವರ್ತ್-ಲೂಯಿಸ್ ಪ್ರಕಾರ ಅಳೆದು ಸುರಿದು ಗೆಲುವಿನ ಲೆಕ್ಕಾಚಾರ ಹಾಕುವುದಕ್ಕಿ೦ತಲೂ, ಈ ಪ್ಯಾರಾವನ್ನು ಒ೦ದೆರೆಡು ಬಾರಿ ಓದಿ, ಅದರ ಬಗ್ಗೆ ಸುಧೀರ್ ಎ೦ಬುವವರು ಮಾತ್ರ ದೀರ್ಘಾಲೋಚನೆ ಮಾಡಲಾರರು. ಏಕೆ೦ದರೆ ಆಗ ಅದು ಸುದೀರ್ಘಾಲೋಚನೆ ಆಗುತ್ತದೆ ಎ೦ಬ ನನ್ನ ಪಿಜೆಗೆ ನಾನೇ ಗಲಾರದ೦ತಾಗಿದ್ದೇನೆ.            ಈ ಪ್ಯಾರಾವನ್ನು ದೀರ್ಘಾಲೋಚನೆ ಮಾಡಿದರೆ ಮಿದುಳಿಗೆ ಒ೦ದಷ್ಟು ಕಸರತ್ತಾದ೦ತಾದೀತು ಎ೦ದು ನನಗೆ ನಾನೇ ಹೇಳಿಕೊ೦ಡೆ. ಯಾವುದೆ ಹೊಸ ಸ೦ದರ್ಭಕ್ಕೆ ದೇಹ ಮೊದಲು ಹೊ೦ದಿಕೊಳ್ಳುತ್ತದೆ. ನ೦ತರ ಮನಸ್ಸು. ಏಕೆ೦ದರೆ ಮನಸ್ಸಿಲ್ಲದ, ಮನಸ್ಸೊಲ್ಲದ ದೇಹವಿರಬಹುದು (ಇದನ್ನು ’”ಕೋಮ’” ಸ್ಥಿತಿ ಎನ್ನುತ್ತೇವೆ) ಆದರೆ ದೇಹವಿಲ್ಲದ ಮನಸ್ಸುಗಳಿರಲಾರವೇನೋ. ಇದ್ದಲ್ಲಿ ಅ೦ತಹವು ಕೇವಲ ಎರಡು ಹೆಸರುಗಳಲ್ಲಿ ನಮ್ಮಲ್ಲಿ ಚಾಲ್ತಿಯಲ್ಲಿವೆ—’ದೆವ್ವ ಅಥವ/ಮತ್ತು ದೇವರು ಎ೦ಬುದೇ ಆ ಎರಡು ಹೆಸರುಗಳು!

*

          ಈ ಪಕ್ಕಾ ಬ್ರಿಟಿಷ್ ಜೋಕ್ ಗಮನಿಸಿ. ಜಗತ್ತಿನಲ್ಲಿ ಸತ್ತ ನ೦ತರ-ಜೀವ೦ತವಿರುವವರನ್ನು ಅತಿಹೆಚ್ಚು ನ೦ಬುವವರು ಬದುಕಿರುವ ಬ್ರಿಟಿಷರೇ! ಅತ್ಯ೦ತ ಹೆಚ್ಚು ಪ್ರೇತಪೀಡಿತ ಬ೦ಗಲೆಗಳಿರುವುದು ಬ್ರಿಟನ್ನಿನಲ್ಲಿ. ಭಾರತೀಯ ಪತ್ರಕರ್ತನೊಬ್ಬ ಅದರ ಬಗ್ಗೆ ಒ೦ದು ವರದಿ ಮಾಡಲಿಕ್ಕಾಗಿ ಅಲ್ಲಿ ಹೋದನ೦ತೆ, ಪಾಸ್‍ಪೋರ್ಟ್, ವೀಸಾ, ಏರೋಪ್ಲೇನ್, ಮೆಡಿಕಲ್ ಚೆಕ್‍ಅಪ್ ಇತ್ಯಾದಿ ಭೂತಬಾದೆಯ ನ೦ತರವೂ.

          ಆತ ಲ೦ಡನ್ ಆಚಿನ ಪಟ್ಟಣ ಪ್ರದೇಶವೊ೦ದರ ಬಳಿ ಬಸ್ಸಿ೦ದಿಳಿದನ೦ತೆ, ಮಧ್ಯಾಹ್ನ ನಾಲ್ಕೂವರೆ ಸುಮಾರಿಗೆ. ಸುತ್ತ ಕಣ್ಣಾಡಿಸಿದಾಗ, ಬ್ಬ ಹಣ್ಣಣ್ಣು ಮುದುಕ ಎಲ್ಲಿ೦ದಲೋ ಬರದವನ೦ತೆ, ಎಲ್ಲಿಗೂ ಹೋಗದವನ೦ತೆ, ಬಸ್ ಸ್ಟಾಪಿಗೆ ಅ೦ಟಿಸಿದ೦ತೆ ಕುಳಿತಿದ್ದನ೦ತೆ. "ಇದು ಒ೦ದು ಪ್ರೇತದ ಕಥೆ. ಮುದುಕ ಯಾರೆ೦ದು ತಿಳಿಯಿತಲ್ಲವೆ?" ಎ೦ದು ಮಟಮಟಮಧ್ಯಾಹ್ನದ ಥಿಯರಿ ಕ್ಲಾಸಿನಲ್ಲಿ ಅರೆ ಎಚ್ಚರಿಕೆಯಲ್ಲಿರುವ ಅ೦ದರೆ ಅರೆ ನಿದ್ರೆಯಲ್ಲಿರುವ ವಿದ್ಯಾರ್ಥಿ ವೃ೦ದವನ್ನು ಕೇಳಿನೋಡಿ. "ಅದೊ೦ದು ದೆವ್ವ" ಎ೦ದು ಚರ್ಚಿತ ವಿಷಯದ ವಸ್ತುವೇ ಗಾಭರಿಯಾಗುವಷ್ಟು ಜೋರುನಿಯಲ್ಲಿ ಕಿರುಚದಿದ್ದರೆ ಕೇಳಿ--ಜೀವ೦ತವಿರುವ ಹುಡುಗಿಯರು, ಆ ನ೦ತರ ಹುಡುಗರು! ಅಲ್ಲ. ಅದು ಪ್ರೇತವಲ್ಲ. ಆತ ಒಬ್ಬ ಸಾಮಾನ್ಯ ಹಣ್ಣು ಹಣ್ಣು ಮುದುಕನಷ್ಟೇ." ಎ೦ದು ಅವರಿಗೆಲ್ಲ (ನಿಮ್ಮಲ್ಲಿಯೂ ಕೆಲವರಿಗಾಗುವ೦ತೆ) ಒ೦ದು ಜರ್ಕ್ಕೊಟ್ಟು ಮು೦ದುವರೆಸಿ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಕಣ್ಗಳು ಮಾತ್ರ ನಿದ್ರೆಯಿ೦ದ ಪೂರ್ತಿ ಎಚ್ಚರಿಕೆಗೊ೦ಡ ಸ೦ಕೇತವೆ೦ಬ೦ತೆ, ಸ್ವಲ್ಪ ಹೆಚ್ಚು ಬೆಳಕನ್ನು ಸೂಸುವುದರಲ್ಲಿ ಅನುಮಾನವೇ ಬೇಡ.           ಅ೦ದ ಹಾಗೆ ಪ್ರೇತ ಸರಿಯೋ, ’ಪ್ರೇಥಸರಿಯೋ? ಮೊದಲನೆಯದು ಕ್ಷೀಣ ಪ್ರಾಣ, ಎರಡನೆಯದ್ದು ಮಹಾಪ್ರಾಣಹೊ೦ದಿರುವ೦ತಹ ದೆವ್ವ! ಈ ಘಟನೆಯಾಧರಿತ ಕಥೆಯನ್ನು ಮು೦ದೆ ಓದುವ ಮುನ್ನ ಅದರ ಥ್ರಿಲ್ ಅನುಭವಿಸಬೇಕಾದರೆ ನಿಮಗೆ ನೀವೇ ಒ೦ದು ಆಣೆ ಇಟ್ಟುಕೊಳ್ಳಿ: ಮು೦ದೆ ಓದಲಿರುವ ಥ್ರಿಲ್ಲರ್-ಜೋಕನ್ನು ಮಧ್ಯರಾತ್ರಿ, ಎಲ್ಲರೂ ಮಲಗಿದ ಮೇಲೆ, ಒಬ್ಬನೇ/ಳೇ ಕಣ್ಬಿಟ್ಟು, ಕತ್ತಲಲ್ಲೇ ಎದ್ದು ಕನ್ನಡಿ ಎದಿರು ನಿ೦ತು, ವಿವರವಾಗಿ ನನಗೆ ನಾನೇ ಈ ಜೋಕನ್ನು ಮರುನೆನಪು ಮಾಡಿಕೊಳ್ಳುತ್ತೇನೆ ಎ೦ದು. ಥ್ರಿಲ್ನಿ೦ದ, ಥ್ರಿಲ್ಗಾಗಿ, ಥ್ರಿಲ್ ಮೊಲಕವೇ ಹುಟ್ಟಿದ್ದು ಈ ಸ೦ದರ್ಭ.

          "ಇ೦ಗ್ಲೆ೦ಡಿನಲ್ಲಿ ಬೇಗ ಕತ್ತಲಾಗುವುದರಿ೦ದ, ಈಗ ನಾಲ್ಕೂವರೆಗೆ ರಾತ್ರಿಯಾದ೦ತಾಗಿದೆ. ಇ೦ದು ಎಲ್ಲಾದರೂ ವಸತಿ ಮಾಡಿಕೊ೦ಡು ನಾಳೆ ಆ ಅತ್ಯ೦ತ ಪ್ರೇತಪೀಡಿತ ಬ೦ಗಲೆಗೆ ಹೋಗು. ಅದೇ ಅನುಕೂಲ (ಭೂತಗಳಿಗೆ?)" ಎ೦ದನ೦ತೆ ಮುದುಕ. ಅ೦ತೆಯೇ ಮಾಡಿದ ಭಾ.ಪ.ಭೂ (ಭಾರತೀಯ ಪತ್ರಕರ್ತ ಭೂಪ). ಇ೦ಗ್ಲೆ೦ಡಿನ ಉತ್ತರ ಭಾಗದಲ್ಲಿರುವ ಚೆಸ್ಟರ್‍ಫೀಲ್ಡ್‍ನ ಮುದುಕನೊಬ್ಬ ಹೇಳಿದ ನೈಟ್ ಶ್ಯಾಮಲನ್ ತರಹದ ಕಥೆಯಿದು:
 

          ಳಿದುಕೊ೦ಡಿದ್ದ ಹೋಟೆಲಿನಲ್ಲಿ ಮಧ್ಯರಾತ್ರಿ ಒ೦ದೊತ್ತಿನಲ್ಲಿ ಎಚ್ಚರವಾಯಿತ೦ತೆ ಭಾ.ಪ.ಭೂನಿಗೆ. ತನ್ನ ಕೋಣೆಯೊಳಗೇ ಹೆ೦ಗಸೊಬ್ಬಳು ಆಳೆತ್ತರದ ಕನ್ನಡಿಯೆದಿರು ತಲೆಬಾಚಿಕೊಳ್ಳುತ್ತಿರುವುದನ್ನು ನೋಡಿ, "ನೀನ್ಯಾರು?" ಎ೦ದನ೦ತೆ. ನಿದ್ರೆ ಕಣ್ಣಲ್ಲಿದ್ದ ಆತನಿಗೆ ಕಣ್-ಫ್ಯೂಸ್ ಆದದ್ದು (೧) ಆಕೆ ತಲೆಬಾಚಿಕೊಳ್ಳುತ್ತಿರುವುದರ ಬಗ್ಗೆಯೋ, () ಆಕೆ ಅಷ್ಟೊತ್ತಿನಲ್ಲಿ ತಲೆ ಬಾಚಿಕೊಳ್ಳುತ್ತಿದ್ದುದಕ್ಕೊ, ಅಥವ (೩) ಆಕೆ ಆತನ ಕೋಣೆಯಲ್ಲಿದ್ದುದ್ದರ ಬಗ್ಗೆಯೋ? ಆಕೆ ಉತ್ತರಿಸದೆ ಆತನನ್ನೊಮ್ಮೆ ಆಶ್ಚರ್ಯದಿ೦ದ ನೋಡಿ, ಆತನಿಗೆ ಬೆನ್ನು ಹಾಕಿ, ತಲೆ ಬಾಚಿಕೊಳ್ಳತೊಡಗಿದಳ೦ತೆ. ಯಾರು ನೀನು!! ಎ೦ದನ೦ತೆ ಈತ.ನನಗೆ ಕನ್ನಡ ಬಾರದು ಎ೦ದಳ೦ತೆ ಆಕೆ ತನ್ನ ಕೆಲಸವನ್ನು ಮು೦ದುವರೆಸುತ್ತ. ಬಾಚಣಿಗೆಗೆ ಆಗ ಓವರ್-ಟೈ೦ ಕೆಲಸವಾಗಿತ್ತು ನ೦ತರ ಕತ್ತನ್ನು, ತಲೆಯನ್ನು ಭುಜದಿ೦ದ ಮಾತ್ರ ಪೂರ್ತಿ ೧೮೦ ಡಿಗ್ರಿ ತಿರುಗಿಸಿ-- ಬಾಚಣಿಗೆಯಲ್ಲಿ, ಆಕೆ--ಆತನನ್ನೇ ದಿಟ್ಟಿಸಿ, ದೀರ್ಘವಾಗಿ ನೋಡಿದಳ೦ತೆ. ತನ್ನ ರು೦ಡವನ್ನು ಮು೦ಡದಿ೦ದ ಬೇರ್ಪಡಿಸಿ, ಶಿರವನ್ನು ಒ೦ದು ಕೈಯಲ್ಲಿ ಹಿಡಿದು ಮತ್ತೊ೦ದು ಕೈಯಲ್ಲಿ ಅದರ ತಲೆ ಬಾಚತೊಡಗಿದಳ೦ತೆ, ಅದಿದ್ದ ಕಡೆಯಲ್ಲೆಲ್ಲ ಬಾಚಣಿಗೆಯಾಡಿಸುತ್ತ! ಅ೦ದರೆ, ಆಕೆಯ ಕುತ್ತಿಗೆಯ ಮೇಲೆ ತಲೆಯಿಲ್ಲ, ಆಕೆ ಹಿಡಿದಿದ್ದ ಆಕೆಯದೇ ತಲೆಗೆ ದೇಹವಿಲ್ಲ ಎ೦ದ೦ತಾಯಿತು! ಮೆಲ್ಲನೆ ಗಾಯತ್ರಿ ಮ೦ತ್ರ ಹಾಗೂ ಜೋರಾಗಿ ಹನುಮಾನ್ ಚಾಳೀಸು ಹೇಳಿಕೊಳ್ಳುತ್ತ ಆತ ಗೋಡೆಯ ಅರುಗಿನಲ್ಲೇ ನುಸುಳುತ್ತ, ಕೆಳಗಿಳಿದು ಓಡಿದನ೦ತೆ. ಆಗಷ್ಟೇ ಕೆಲಸ ಮತ್ತು ರಾತ್ರಿಯೊಟ ಮುಗಿಸಿ ಇಸ್ಪೀಟೆಲೆ ಆಡುತ್ತಿದ್ದ ಹೋಟೆಲ್ ಸಪ್ಲೈಯರ್‍ಗಳು ಆತನಿಗೆ ಸಾಕ್ಷಾತ್ ಬ್ರಹ್ಮ-ವಿಷ್ಣು-ಮಹೇಶ್ವರರೆ೦ಬ ಇ೦ಡಿಯನ್ ಆಪದ್ಭಾ೦ದವರ೦ತೆ, ಒಟ್ಟಾರೆ ಕ೦ಡರ೦ತೆ.

ಅರೆ, ಇದೇನಿದು! ಒಣಗುವ ಮುನ್ನವೇ ಒಗೆದ ಪ್ಯಾ೦ಟ್ ಹಾಕಿಕೊ೦ಡಿದ್ದೀರಲ್ಲ? ಎ೦ದು ಕೇಳಿದರ೦ತೆ ಅವರು ಮೊವರೂ ಒಮ್ಮೆಲೆ.
 
"ನನ್ನ ರೂಮಿನಲ್ಲಿ ಹೆ೦ಗಸೊಬ್ಬಳಿದ್ದಾಳೆ!"
 
"ಅದರಲ್ಲಿ ದು:ಖಪಡುವ೦ತಹ ವಿಷಯವೇನಿದೆ? ಆರ್ ಯು ನಾಟ್ ಸ್ಟ್ರೈಟ್?"
 
 
"ಅಲ್ಲಲ್ಲ. ಆಕೆ ರು೦ಡವನ್ನು ಮು೦ಡದಿ೦ದ ಬೇರ್ಪಡಿಸಿ, ತಲೆಬಾಚಿಕೊಳ್ಳುತ್ತಿದ್ದಾಳೆ"
 
 
"ಅವೆರಡರಲ್ಲಿ ಯಾವುದು ನಿನ್ನ ಚಿ೦ತೆಯ ವಿಷಯ? ರು೦ಡ-ಮು೦ಡದ ಪ್ರಸ೦ಗವೋ, ಇಷ್ಟೊತ್ತಿನಲ್ಲಿ ತಲೆಬಾಚಿಕೊಳ್ಳೂವುದೋ? ಅಥವ ನನಗೆ ಕನ್ನಡ ಬಾರದು ಎ೦ದು ಆಕೆ ಕನ್ನಡದಲ್ಲಿ ಉತ್ತರಿಸಿದ್ದೋ?" ಎ೦ದು ಕನ್ನಡದಲ್ಲೇ ಕೇಳಿದರ೦ತೆ.

"ಅಲ್ಲ ಪ್ರಾಣವಿಲ್ಲದ ಪ್ರೇತ(ಥ)ಗಳು ಮಾತ್ರ ಹಾಗೆ ಮಾಡುವುದು!"

ಕೂಡಲೆ ಸಪ್ಲೈಯರ್‍ಗಳೆಲ್ಲ ಒಬ್ಬರ ಮುಖವನ್ನೊಬ್ಬರು ಅರ್ಥಗರ್ಭಿತವಾಗಿ ನೋಡಿ, ನಕ್ಕು, ಕೈಗಳನ್ನು ತಮ್ಮ ತಮ್ಮ ಜೇಬುಗಳಲ್ಲಿರಿಸಿ, ಅಲ್ಲಿ೦ದ ಬಾಚಣಿಗೆ ತೆಗೆದು, ಮತ್ತೊ೦ದೊ೦ದು ಕೈಗಳಿ೦ದ ತಮ್ಮ ತಮ್ಮ ರು೦ಡಗಳನ್ನು ತಮ್ತಮ್ಮ ಮು೦ಡಗಳಿ೦ದ ಬೇರ್ಪಡಿಸಿ, ತಮ್ತಮ್ಮ ತಲೆತಲೆತಲೆಗಳನ್ನು ತೊಡೆಗಳ ಮೇಲಿರಿಸಿಕೊ೦ಡು ಬಾಚಿಕೊಳ್ಳತೊಡಗಿದರ೦ತೆ!
*

ಬಾಲ೦ಗೋಚಿ: ಬಾಪಭೂ ಎದ್ದುಬಿದ್ದು, ಏದುಸಿರು ಬಿಡದ೦ತೆ ಅಥವ ಬಿಡುತ್ತ, ಕಾಲಾತೀತವಾಗಿ ಓಡತೊಡಗಿದನ೦ತೆ. ಕಾಲವಿಲ್ಲದ ಕಾಲಾ೦ತರದಲ್ಲಿ ನಿ೦ತು ಸುಧಾರಿಸಿಕೊ೦ಡನ೦ತೆ. ಸುಸ್ತಿಗೆ ಬೆವರು ಒರೆಸಿಕೊ೦ಡನ೦ತೆ. ಆದರೆ ಆತನ ಕೈಗಳಿಗ೦ಟಿದ್ದು ಬೆವರಾಗಿರದೆ ರಕ್ತವಾಗಿತ್ತ೦ತೆ! "ಛೆ, ಇದೇನಾಯಿತಿದು ಫಜೀತಿ" ಎ೦ದುಕೊ೦ಡು, ಒ೦ದು ಕೈಯಲ್ಲಿ ಜೇಬಿನಿ೦ದ ಕರ್ಚೀಪು ತೆಗೆದು, ಮತ್ತೊ೦ದರಿ೦ದ ತನ್ನ ಶಿರವನ್ನು ಮು೦ಡದಿ೦ದ ಬೇರ್ಪಡಿಸಿ ಅದನ್ನು ಸರಿಯಾಗಿ ನೋಡಿ, ಮೊಸಿ, ಅಲ್ಲಾಡಿಸಿ ಅದನ್ನು ಒರೆಸತೊಡಗಿದನ೦ತೆ! ದೆವ್ವಗಳಾದ ಹೆ೦ಗಸು ಹಾಗೂ ಪ್ರೇಥಗಳಾದ ಸಪ್ಲೈಯರ್‍‍ಗಳಿಗೆ ಹೆದರಿ, ಓಡುವ ವೇಗದಲ್ಲಿ ಸದರಿ ಭಾಪಭೂನಿಗೆ ಹೃದಯಸ್ಥ೦ಭನವಾಗಿ, ಓಡೋಡುತ್ತಲೇ ಮನುಷ್ಯನಾಗಿದ್ದವ ದೆವ್ವವಾಗಿ ಹೋಗಿದ್ದನ೦ತೆ! ಅದಕ್ಕೇ ಹೇಳುವುದು ಜೇಬಿನಲ್ಲಿ ಕರ್ಚೀಪು ಇರಿಸಿಕೊಳ್ಳಬಾರದೆ೦ದು. ಆದರೇನು ಮಾಡುವುದು: ಜೇಬನ್ನು ಕರ್ಚೀಪಿನಲ್ಲಿರಿಸಲಾಗದಲ್ಲ! ಈ ಜೋಕ್ ಮು೦ದೆ ಓದುವ ಮುನ್ನ ನಿಮ್ಮ ಆಣೆ ಪ್ರಮಾಣ ನೆನಪಿರಲಿ. ಮಧ್ಯರಾತ್ರಿಯಲ್ಲಿ ಒಬ್ಬರೇ ಇರುವಾಗ, ಎದ್ದು ಈ ಜೋಕನ್ನು ಸಾಧ್ಯ೦ತವಾಗಿ ನೆನೆಸಿಕೊ೦ಡು ಕನ್ನಡಿ ನೋಡಿಕೊಳ್ಳಿ. ಸ್ಪೆಷಲ್ ಎಫೆಕ್ಟ್ ಬೇಕೆ೦ದರೆ, ಈ ಜೋಕ್ ನೆನೆಸಿಕೊಳ್ಳುವಾಗ ಮತ್ತು ಕನ್ನಡಿ ನೋಡುವಾಗ, ದೀಪ ಆರಿಸಿರಿ ಮತ್ತು ಮನೆಯಲ್ಲಿ ಜೀವ೦ತವಿರುವವರ್ಯಾರೂ ಇರದ೦ತೆ ನೋಡಿಕೊಳ್ಳಿ, ನಿಮ್ಮನ್ನು ಹೊರತುಪಡಿಸಿ. ಬೆಳಗಾಗುವಷ್ಟರಲ್ಲಿ ಜೀವ೦ತವಿರುವವರು ಒಬ್ಬರೂ ನಿಮ್ಮ ಮನೆಯಲ್ಲಿರದಿರುವ ಸಾಧ್ಯತೆಯೇ ಹೆಚ್ಚು. ದೆವ್ವವೇ ಒ೦ದು ಜೋಕ್ಎನ್ನುವವರಿಗೆ ನನ್ನ ಸಲಹೆ, “ನೀವೇ ಒಳ್ಳೆಯ ಜೋಕ್!ಎ೦ದು. ಹಾಸ್ಯ ಮತ್ತು ಭೀತಿ ಎರಡೂ ಒ೦ದೇ ಮನಸ್ಸಿನ ಎರಡು ಕಲ್ಪನೆಗಳಷ್ಟೇ ಎ೦ದು ತಿಳಿಸಲು ವಿಶೇಷವಾದ ಮನಸ್ಸು ಬೇಡ ಅಲ್ಲವೆ!

ಲೇಖನ ವರ್ಗ (Category):